Tag: ಸಿಮೆಂಟ್ ಟ್ರಕ್

  • ವಿಡಿಯೋ: ನೋಡನೋಡ್ತಿದ್ದಂತೆ ಗುಂಡಿಯೊಳಗೆ ಬಿತ್ತು ಸಿಮೆಂಟ್ ಟ್ರಕ್- ಚಾಲಕ ಸೇಫ್

    ವಿಡಿಯೋ: ನೋಡನೋಡ್ತಿದ್ದಂತೆ ಗುಂಡಿಯೊಳಗೆ ಬಿತ್ತು ಸಿಮೆಂಟ್ ಟ್ರಕ್- ಚಾಲಕ ಸೇಫ್

    ಬೀಜಿಂಗ್: ಸಿಮೆಂಟ್ ಟ್ರಕ್‍ವೊಂದು ನೋಡನೋಡ್ತಿದ್ದಂತೆ ದೊಡ್ಡ ಗುಂಡಿಯೊಳಗೆ ಬೀಳೋ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಈ ಘಟನೆ ನಡೆದಾಗ ಚಾಲಕ ಟ್ರಕ್ ಒಳಗೆಯೇ ಇದ್ದರು. ಆದ್ರೂ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ದಕ್ಷಿಣ ಚೀನಾದ ಫೋಶಾನ್ ನಗರದಲ್ಲಿ ನವೆಂಬರ್20 ರಂದು ಈ ಘಟನೆ ನಡೆದಿದೆ. ಚಾಲಕ ಟ್ರಕ್ ರಿವರ್ಸ್ ತೆಗೆದುಕೊಳ್ಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಗುಂಡಿಯೊಳಗೆ ಬಿದ್ದಿದೆ.

    ಟ್ರಕ್ ಪಕ್ಕಕ್ಕೆ ಉರುಳುತ್ತಿದ್ದಂತೆ ಅದರ ಬಾಗಿಲು ತೆರೆದುಕೊಂಡಿತ್ತು. ಆದ್ರೆ ಚಾಲಕ ಹೊರಗೆ ಜಿಗಿಯುವಷ್ಟರಲ್ಲಿ ಟ್ರಕ್ ಕೆಳಗೆ ಬಿದ್ದಿತ್ತು. ತಕ್ಷಣ ಅಲ್ಲಿದ್ದ ಇತರೆ ಕಾರ್ಮಿಕರು ಗಾಬರಿಯಿಂದ ಓಡಿಬಂದು ನೋಡೋದನ್ನ ವಿಡಿಯೋದಲ್ಲಿ ಕಾಣಬಹುದು.

    67 ಮೀಟರ್‍ನಷ್ಟು ಆಳಕ್ಕೆ ಟ್ರಕ್ ಬಿದ್ದಿದೆ. ಘಟನೆಯಲ್ಲಿ ಚಾಲಕನ ಕಾಲು ಮುರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಅವಘಡದಿಂದ ಬೇರೆ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.