ನವದೆಹಲಿ: ಕ್ರಿಪ್ಟೋ ವಂಚನೆ (Crypto Fraud) ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಕ್ಕೆ (USA) ಬೇಕಾಗಿದ್ದ ಲಿಥುವೇನಿಯಾದ ಪ್ರಜೆಯನ್ನು ಕೇರಳದಲ್ಲಿ ಕೇಂದ್ರೀಯ ತನಿಖಾ ದಳ (CBI) ಬಂಧಿಸಿದೆ.
ಅಮೆರಿಕದ ಸೀಕ್ರೆಟ್ ಸರ್ವೀಸ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ 46 ವರ್ಷದ ಲಿಥುವೇನಿಯಾದ ಅಲೆಕ್ಸೆಜ್ ಬೆಸಿಯೊಕೊವ್ (Aleksej Besciokov) ತನ್ನ ಕುಟುಂಬದೊಂದಿಗೆ ಕೇರಳಕ್ಕೆ ಬಂದಿದ್ದ. ಮಂಗಳವಾರ ಸಂಜೆ ವರ್ಕಲಾ ಪೊಲೀಸರ ಸಹಾಯದಿಂದ ಆತನನ್ನು ಬಂಧನ ಮಾಡಲಾಗಿದೆ.
– Aleksej Besciokov, co-founder of Garantex, arrested in India on March 12 for sanction violations and illicit transactions.
– Accused of money laundering, breaking sanctions, and running an unlicensed exchange.
ಈ ವಾರದ ಆರಂಭದಲ್ಲಿ ಅಮೆರಿಕದ ಅಧಿಕಾರಿಗಳ ಕೋರಿಕೆಯ ಮೇರೆಗೆ ವಿದೇಶಾಂಗ ಸಚಿವಾಲಯವು ತಾತ್ಕಾಲಿಕ ಬಂಧನ ವಾರಂಟ್ ಪಡೆದಿತ್ತು. ನಂತರ ಸಿಬಿಐ ಮತ್ತು ಕೇರಳ ಪೊಲೀಸರ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಅಲೆಕ್ಸೆಜ್ ಬೆಸಿಯೊಕೊವ್, ರಾನ್ಸಮ್‌ವೇರ್, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು ಗ್ಯಾರಂಟೆಕ್ಸ್ (Garantex) ಹೆಸರಿನಲ್ಲಿ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದ್ದ.
ಬೆಸಿಯೊಕೊವ್ ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಸ್ ಸೀಕ್ರೆಟ್ ಸರ್ವಿಸ್ ದಾಖಲೆಗಳ ಪ್ರಕಾರ, ಬೆಸಿಯೊಕೊವ್ ಸುಮಾರು ಆರು ವರ್ಷಗಳ ಅವಧಿಯಲ್ಲಿ ಗ್ಯಾರಂಟೆಕ್ಸ್ ಅನ್ನು ನಿಯಂತ್ರಿಸಿದ್ದಾನೆ. ಭಯೋತ್ಪಾದನೆ ಸೇರಿದಂತೆ ಅಂತರರಾಷ್ಟ್ರೀಯ ಕ್ರಿಮಿನಲ್ ಸಂಘಟನೆಗಳಿಂದ ಕನಿಷ್ಠ 96 ಬಿಲಿಯನ್ ಡಾಲರ್ (8 ಲಕ್ಷ ಕೋಟಿ ರೂ.ಗೂ ಹೆಚ್ಚು) ಕ್ರಿಪ್ಟೋಕರೆನ್ಸಿ ವಹಿವಾಟು ಮೂಲಕ ವರ್ಗಾವಣೆಗೆ ಮಾಡಿರುವ ಆರೋಪ ಬೆಸಿಯೊಕೊವ್ ಮೇಲಿದೆ.
– ರನ್ಯಾ ಕೇಸಲ್ಲಿ ಶಿಷ್ಟಾಚಾರ ದುರ್ಬಳಕೆ ಆರೋಪ – ಐಪಿಎಸ್ ರಾಮಚಂದ್ರರಾವ್ ವಿರುದ್ಧವೂ ತನಿಖೆ
ಬೆಂಗಳೂರು: ರನ್ಯಾ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಏರ್‌ಪೋರ್ಟ್‌ನಲ್ಲಿ ರನ್ಯಾಗೆ ಪ್ರೊಟೋಕಾಲ್ ಒದಗಿಸಿದ್ದ ವಿಚಾರವಾಗಿ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಬೆನ್ನಲ್ಲೇ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿರುವ ಸಿಬಿಐ ನಾಲ್ವರಿಗೆ ನೋಟಿಸ್ ನೀಢಿದೆ.
ಇನ್ನೂ ಶಿಷ್ಟಾಚಾರ ದುರ್ಬಳಕೆ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಪಾತ್ರ ಇದ್ಯಾ…? ಇಲ್ಲವೇ ಎಂಬ ಬಗ್ಗೆ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ಹಿರಿಯ ಐಪಿಎಸ್ ಗೌರವ್ ಗುಪ್ತಾಗೆ ವಾರದಲ್ಲಿ ವರದಿ ನೀಡಲು ಸೂಚಿಸಿದೆ. ಇದೇ ವೇಳೆ, ರನ್ಯಾ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಕರ್ತವ್ಯಲೋಪ ಎಸಗಿದ ಆರೋಪ ಸಂಬಂಧ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದೆ. ಇದನ್ನೂ ಓದಿ: ಇನ್ಮುಂದೆ `ಇಂಡಿಯಾ’ ಅನ್ನಬೇಡಿ, `ಭಾರತ’ ಎಂದೇ ಕರೆಯಿರಿ – ಆರ್‌ಎಸ್‌ಎಸ್ ನಾಯಕ ಹೊಸಬಾಳೆ ಕರೆ
ಶೀಘ್ರವೇ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಪರಿಣಾಮ ಐಪಿಎಸ್ ಅಧಿಕಾರಿ ರಾಮಚಂದ್ರರಾವ್, ರನ್ಯಾ ಏರ್‌ಪೋರ್ಟ್‌ಗೆ ಬಂದಾಗ ಪ್ರೋಟೋಕಾಲ್ ನೀಡಲು ಬಂದಿದ್ದ ಹೆಡ್ ಕಾನ್‌ಸ್ಟೇಬಲ್, ಗುಪ್ತಚರ ಇಲಾಖೆ ಕಾನ್‌ಸ್ಟೇಬಲ್‌ಗೆ ವಿಚಾರಣೆ ಬಿಸಿ ತಾಕುವುದು ಖಚಿತವಾಗಿದೆ. ಈ ಬೆಳವಣಿಗೆ ನಡುವೆ ಡಿಸಿಎಂ ಜೊತೆ, ಗೃಹ ಸಚಿವರ ಜೊತೆ ಸಿಎಂ ಪ್ರತ್ಯೇಕವಾಗಿ ಸಭೆ ನಡೆಸಿದ್ರು. ಗೌರವ್ ಗುಪ್ತಾ ಸಹ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ರು. ಈ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಸಹ ಜೋರಾಗಿದೆ.
ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣ ಎದುರಿಸುತ್ತಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್‌ಗೆ (Ranya Rao) ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಸಿಬಿಐ ಎಂಟ್ರಿ ಕೊಟ್ಟಿದೆ.
ದುಬೈನಿಂದ 14 ಕೆಜಿಗೂ ಹೆಚ್ಚು ತೂಕದ ಚಿನ್ನವನ್ನು ತೊಡೆಯ ಭಾಗದಲ್ಲಿ ಅಂಟಿಸಿಕೊಂಡು ನಟಿ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ನಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿರುವುದು ಗೊತ್ತಾಗಿದೆ.
ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ ಹಗರಣ ಸಂಬಂಧ ಹಲವೆಡೆ ಎಫ್‌ಐಆರ್ ದಾಖಲಾಗಿತ್ತು. ದೇಶದ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ದೊಡ್ಡ ಮಟ್ಟದ ವಂಚನೆ ಹಾಗೂ ಮನಿ ಲಾಂಡರಿಂಗ್ ಹಿನ್ನೆಲೆ ಹಗರಣ ಸಂಬಂಧ ಸಿಬಿಐ ತನಿಖೆ ಕೈಗೊಂಡಿತ್ತು. ಈ ಸಂಬಂಧ ಮಂಗಳವಾರ ಬೆಂಗಳೂರು ಸೇರಿ 60 ಕಡೆಗಳಲ್ಲಿ ದಾಳಿ ನಡೆಸಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಹಾ ಶಿವರಾತ್ರಿ ಸಂಭ್ರಮ – ಮಧ್ಯರಾತ್ರಿಯಿಂದಲೇ ಸಾಲುಗಟ್ಟಿ ನಿಂತ ಶಿವಭಕ್ತರು
ನವದೆಹಲಿ: ಸಿಬಿಐ ನಿರ್ದೇಶಕರಂತಹ ಕಾರ್ಯನಿರ್ವಾಹಕ ನೇಮಕಾತಿಗಳಲ್ಲಿ (Executive Appointments) ಭಾರತದ ಮುಖ್ಯ ನ್ಯಾಯಮೂರ್ತಿ ಯಾಕೆ ಭಾಗಿಯಾಗಬೇಕು ಎಂದು ಅಚ್ಚರಿ ವ್ಯಕ್ತಪಡಿಸಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar), ಅಂತಹ ನಿಯಮಗಳನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ನಮ್ಮಂತಹ ದೇಶದಲ್ಲಿ ಅಥವಾ ಯಾವುದೇ ಪ್ರಜಾಪ್ರಭುತ್ವದಲ್ಲಿ, ಶಾಸನಬದ್ಧ ಕಾನೂನಿನ ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿಗಳು ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಯಾಕೆ ಭಾಗವಹಿಸಬೇಕು? ಇದಕ್ಕೆ ಯಾವುದಾದರೂ ಕಾನೂನು ತಾರ್ಕಿಕತೆ ಇದೆಯೇ? ಅಂದಿನ ಕಾರ್ಯನಿರ್ವಾಹಕರು ನ್ಯಾಯಾಂಗ ತೀರ್ಪಿಗೆ ಮಣಿದ ಕಾರಣ ಶಾಸನಬದ್ಧ ಕಾನೂನು ರೂಪುಗೊಂಡಿದೆ ಎಂದು ನಾನು ಪ್ರಶಂಸಿಸಬಲ್ಲೆ. ಆದರೀಗ ಇದನ್ನು ಮರುಪರಿಶೀಲಿಸುವ ಸಮಯ ಬಂದಿದೆ. ಏಕೆಂದರೆ ಇದು ಪ್ರಜಾಪ್ರಭುತ್ವವಲ್ಲ, ಯಾವುದೇ ಕಾರ್ಯನಿರ್ವಾಹಕ ನೇಮಕಾತಿಯಲ್ಲಿ ನಾವು ಸಿಜೆಐ ಅನ್ನು ಹೇಗೆ ಒಳಗೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಂಗ ತೀರ್ಪಿನ ಮೂಲಕ ಕಾರ್ಯಾಂಗ ಆಡಳಿತ ನಡೆಸುವುದು ಈ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ. ಇನ್ನು ಮುಂದೆ ಭರಿಸಲಾಗದ ಸಾಂವಿಧಾನಿಕ ವಿರೋಧಾಭಾಸವಾಗಿದೆ ಎಂದು ಅವರು ಹೇಳಿದ್ದಾರೆ. ಎಲ್ಲಾ ಸಂಸ್ಥೆಗಳು ತಮ್ಮ ಸಾಂವಿಧಾನಿಕ ಮಿತಿಯೊಳಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ. ಶಾಸಕಾಂಗ ಅಥವಾ ನ್ಯಾಯಾಂಗದಿಂದ ಆಡಳಿತದಲ್ಲಿನ ಯಾವುದೇ ಹಸ್ತಕ್ಷೇಪವು ಸಾಂವಿಧಾನಿಕತೆಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಯುಪಿ ಆಯ್ತು.. ಲವ್ ಜಿಹಾದ್, ಬಲವಂತದ ಮತಾಂತರದ ವಿರುದ್ಧ ಸಮರ ಸಾರಿದ ಮಹಾರಾಷ್ಟ್ರ
– ನೈತಿಕತೆಯಿಂದ ಕೊಡಲ್ಲ, ಹೈಕಮಾಂಡ್ ರಾಜೀನಾಮೆ ಪಡೆಯುವ ಸಮಯ ಬಂದಿದೆ ಎಂದ ದೂರುದಾರ
ಮೈಸೂರು: ಮುಡಾ ಹಗರಣ (MUDA Scam) ತನಿಖೆಯನ್ನು ನ್ಯಾಯಾಲಯ ಸಿಬಿಐಗೆ ಕೊಟ್ಟೇ ಕೊಡುತ್ತದೆ. ಸಿಎಂ ಸಿದ್ದರಾಮಯ್ಯ ನೈತಿಕತೆ ಕಳೆದು ಕೊಂಡಿದ್ದಾರೆ. ಹೀಗಾಗಿ ಅವರಿಗೆ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲ್ಲ. ಬದಲಾಗಿ ಹೈಕಮಾಂಡ್ ಅವರ ರಾಜೀನಾಮೆ ಪಡೆಯುವ ಕ್ಷಣ ಹತ್ತಿರ ಬಂದಿದೆ ಎಂದು ದೂರುದಾರ ಸ್ನೇಹಮಹಿ ಕೃಷ್ಣ (Snehamayi Krishna) ʻಪಬ್ಲಿಕ್ ಟಿವಿʼಗೆ ಹೇಳಿದ್ದಾರೆ.
ಸಿದ್ದರಾಮಯ್ಯಗೆ (Siddaramaiah) ಮಾತ್ರವಲ್ಲ ಮುಡಾ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ. ಎಲ್ಲರಿಗೂ ಶಿಕ್ಷೆ ಕೊಡಿಸಿಯೇ ಕೊಡಿಸುತ್ತಿನಿ. ಮುಡಾಕ್ಕೆ ಎಲ್ಲಾ ಸೈಟ್ ವಾಪಸ್ ಬರಬೇಕು. ಎಲ್ಲರಿಗೂ ಶಿಕ್ಷೆ ಕೊಡಿಸುವವರೆಗೂ ನಾನು ಈ ಹೋರಾಟ ನಿಲ್ಲಿಸಲ್ಲ ಎಂದು ಶಪಥ ಮಾಡಿದ್ದಾರೆ. ಇದನ್ನೂ ಓದಿ: 2027ಕ್ಕೆ ಚಂದ್ರಯಾನ-4, 2026ಕ್ಕೆ ಗಗನಯಾನ: ಜಿತೇಂದ್ರ ಸಿಂಗ್
ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಧೀರ್ಘವಾಗಿ ವಾದ- ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಧಾರವಾಡ ಪೀಠ ಆದೇಶವನ್ನು ಕಾಯ್ದಿರಿಸಿತ್ತು. ಪ್ರತಿಹಂತದಲ್ಲೂ ಲೋಕಾಯುಕ್ತದ ತನಿಖಾ ವರದಿಯನ್ನು ಪಡೆದಿರೋ ಹೈಕೋರ್ಟ್, ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲಿಸಿದೆ. ಹೀಗಾಗಿ ಇಂದು ಹೈಕೋರ್ಟ್ ನೀಡಲಿರುವ ಆದೇಶ ಸಾಕಷ್ಟು ಕುತೂಹಲ ಕೆರಳಿಸಿದೆ. ಒಂದೊಮ್ಮೆ ಸ್ನೇಹಮಯಿ ಕೃಷ್ಣ ಅರ್ಜಿ ಊರ್ಜಿತವಾಗಿ ಪ್ರಕರಣ ಸಿಬಿಐಗೆ ವರ್ಗಾವಣೆ ಆದ್ರೆ ಸಿಎಂ ಸಿದ್ದರಾಮಯ್ಯಗೆ ಬಹುದೊಡ್ಡ ಸಂಕಷ್ಟ ಎದುರಾಗಲಿದೆ.
ಬೆಂಗಳೂರು: ವಾಲ್ಮೀಕಿ ಬಹುಕೋಟಿ ಹಗರಣ (Valmiki Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ತನಿಖೆಯನ್ನು ಚುರುಕುಗೊಳಿಸಿದೆ. ಪ್ರಕರಣದ ಮೂವರು ಆರೋಪಿಗಳಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಚಿವ ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೋಟಿ ಕೋಟಿ ಹಣವನ್ನು ಶೇಕಡಾವಾರು ಲೆಕ್ಕದಲ್ಲಿ ವಹಿವಾಟು ಮಾಡಿದ್ದ ಚಂದ್ರಮೋಹನ್ 100ಕ್ಕೂ ಹೆಚ್ಚು ನಕಲಿ ಅಕೌಂಟ್‌ಗಳ ಸೃಷ್ಟಿ ಮಾಡಿ ಚಂದ್ರಮೋಹನ್ ಹಾಗೂ ಕುಟುಂಬಸ್ಥರು ಸೇರಿ ಹಣ ಗಳಿಸಿದ್ದರು.
ದಾವಣಗೆರೆ: ಲಂಚ ಪಡೆದು ಎ++ ಗ್ರೇಡ್ ನೀಡುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಸೇರಿದಂತೆ 10 ಜನರನ್ನು ಸಿಬಿಐ ಬಂಧಿಸಿದೆ.
ಆಂಧ್ರಪ್ರದೇಶದ ಗುಂಟೂರಿನಲ್ಲಿ ಕೆಎಲ್‌ಇಎಫ್ ವಿವಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಸ್ವೀಕರಿಸಿದ್ದರು. ಗಾಯತ್ರಿ ದೇವರಾಜ್ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸದ್ಯ ಮೈಕ್ರೋ ಬಯೋಲಜಿ ಪ್ರಾಧ್ಯಾಪಕಿಯಾಗಿದ್ದರು. ಅಲ್ಲದೇ ಭ್ರಷ್ಟಾಚಾರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರಿದಿದೆ. ಇದನ್ನೂ ಓದಿ: Ramanagara | ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಟೈಯರ್ ಫ್ಯಾಕ್ಟರಿಗೆ ಬೆಂಕಿ – ತಪ್ಪಿದ ಭಾರೀ ಅನಾಹುತ
ಪ್ರಕರಣದ ತನಿಖೆ ನಡೆಸುತ್ತಿರುವಾಗ, ಚೆನ್ನೈ, ಬೆಂಗಳೂರು, ವಿಜಯವಾಡ, ಪಲಮು, ಸಂಬಲ್‌ಪುರ, ಭೋಪಾಲ್, ಬಿಲಾಸ್‌ಪುರ, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ದೇಶಾದ್ಯಂತ 20 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತು. ಈ ವೇಳೆ 37 ಲಕ್ಷ ರೂಪಾಯಿ ನಗದು, 6 ಲ್ಯಾಪ್‌ಟಾಪ್‌ಗಳು, ಐಫೋನ್ 16 ಪ್ರೊ, ಚಿನ್ನದ ನಾಣ್ಯ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ISRO | ಯಶಸ್ವಿಯಾಗಿ ಉಡಾವಣೆಯಾಗಿದ್ದ ಇಸ್ರೋದ 100ನೇ ರಾಕೆಟ್‌ನಲ್ಲಿ ತಾಂತ್ರಿಕ ದೋಷ
ಕಲಬುರಗಿ: ನಕಾರಾತ್ಮಕ ಸುದ್ದಿಗಳಿಂದಲೇ ಗುರುತಿಸಿಕೊಳ್ಳುತ್ತಿದ್ದ ಕಲಬುರಗಿ ಜಿಲ್ಲೆಯ ಅಫಜಲಪುರ (Afzalpur) ತಾಲೂಕಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ರಾಷ್ಟ್ರದ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.
ಐಪಿಎಸ್ 2011ನೇ ಬ್ಯಾಚ್ ಅಧಿಕಾರಿ ಮಂಜುನಾಥ ಸಿಂಗೆ (Manjunath Singe) ಅವರು ಸಿಬಿಐ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (CBI DIG) ಹುದ್ದೆಗೇರುವ ಮೂಲಕ ದೇಶದ ಉದ್ದಗಲಕ್ಕೂ ಕಲಬುರಗಿ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇದೇ ಜ.13ರಂದು ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ಸತ್ಯಂ ಶ್ರೀವಾಸ್ತವ ಈ ಕುರಿತಾಗಿ ಆದೇಶ ಹೊರಡಿಸಿದ್ದು, ಸಿಂಗೆ ಅವರು 2028ರ ಫೆ.28ರ ವರೆಗೆ (5 ವರ್ಷ) ಸಿಬಿಐ ಡಿಐಜಿ ಹುದ್ದೆಯನ್ನು ನಿಭಾಯಿಸಲಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ & ಕೊಲೆ ಕೇಸ್ – ಅಪರಾಧಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ
ಹಳ್ಳಿಯಿಂದ ದಿಲ್ಲಿವರೆಗಿನ ಪಯಣ ಹೇಗಿತ್ತು?
ಅಫಜಲಪುರ ತಾಲೂಕಿನ ಗೌರ್(ಬಿ) ಗ್ರಾಮದ ಮಂಜುನಾಥ ಅವರು ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಹುಚ್ಚಪ್ಪ ಸಿಂಗೆ ಅವರ ಏಕೈಕ ಪುತ್ರ. 3ನೇ ತರಗತಿವರೆಗೆ ಹುಟ್ಟೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತು, ಅಪ್ಪನ ವರ್ಗಾವಣೆಗೆ ಅನುಗುಣವಾಗಿ ಚಿತ್ತಾಪುರದ ಶಿಶು ವಿಹಾರ ಶಾಲೆಯಲ್ಲಿ 4ರಿಂದ 7ನೇ ತರಗತಿ ಮುಗಿಸಿದ್ದಾರೆ. ಇದಾದ ಬಳಿಕ ಯಾದಗಿರಿಯ ನ್ಯೂ ಕನ್ನಡ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲು ಮುಗಿಸಿದ್ದಲ್ಲದೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದರು ಎಂದು ಮಂಜುನಾಥ ಅವರ ಚಿಕ್ಕಪ್ಪ ಮಲ್ಲಿಕಾರ್ಜುನ ಸಿಂಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡರು.
ಧಾರವಾಡದ ಕರ್ನಾಟಕ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಮುಗಿಸಿದರು. ಬಳಿಕ ಸಿಇಟಿ ಬರೆದು ಪ್ರತಿಷ್ಠಿತ ಸುರತ್ಕಲ್‍ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸೋದಕ್ಕೆ ಆರೇ ತಿಂಗಳು ಬಾಕಿ ಇತ್ತು. ಆಗ ಅಮೆರಿಕ ಮೂಲದ ಪ್ರತಿಷ್ಠಿತ ಐಬಿಎಂ ಕಂಪನಿಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಮಂಜುನಾಥ ಸಿಂಗೆ ಅವರು ಆಯ್ಕೆಯಾದರು. ಪಿಯುಸಿ ಹಂತದಿಂದಲೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಿದ್ದ ಇವರು, ಐಬಿಎಂ ಸೇರ್ಪಡೆಗೊಂಡ ಬೆನ್ನಲ್ಲೇ ಯುಪಿಎಸ್ಸಿ ಪರೀಕ್ಷೆ ಎದುರಿಸಲು ಅಗತ್ಯವಿರುವ ಅಧ್ಯಯನವನ್ನು ಮತ್ತಷ್ಟು ಪ್ರಖರಗೊಳಿಸಿದ್ದರು. 2009-10ರಲ್ಲಿ ಐಆರ್‍ಎಸ್ ಉತ್ತೀರ್ಣರಾಗಿ ಗೋವಾದ ಆದಾಯ ತೆರಿಗೆ ಇಲಾಖೆಯಲ್ಲಿ 1 ವರ್ಷ ಸೇವೆ ಸಲ್ಲಿಸುತ್ತಲೇ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಿ 2010-11ರಲ್ಲಿ ಐಪಿಎಸ್ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು.
ಆರಂಭಿಕ ತರಬೇತಿಯ ಬಳಿಕ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಎಎಸ್ಪಿ ಆಗಿ 1 ವರ್ಷ ಸೇವೆ ಸಲ್ಲಿಸಿದರು. ಇದಾದ ನಂತರ ಗಡಚಿರೋಲಿ ವಿಭಾಗದ ನಕ್ಸಲ್ ನಿಗ್ರಹ ಪಡೆಯಲ್ಲೂ ಎಎಸ್ಪಿ ಆಗಿ 2 ವರ್ಷ ಸೇವೆ ಸಲ್ಲಿಸಿದರು. ಆಮೇಲೆ ಪಾಲ್ಗಾರ್ ಎಸ್ಪಿಯಾಗಿ, ನಂತರ ಮುಂಬೈ ವಸಾಯಿ ಪ್ರಾಂತ್ಯದ ಡಿಸಿಪಿ, ನಂತರ ಬಾಂದ್ರಾ ಡಿಸಿಪಿಯಾಗಿ ಕಾರ್ಯನಿರ್ವಹಿಸಿದರು. ಈ ಬೆನ್ನಲ್ಲೇ ಕೋವಿಡ್ ಅವಧಿ ಮುಗಿಯುತ್ತಿದ್ದಂತೆಯೇ ಸಿಬಿಐ ಅಧಿಕಾರಿಯಾಗಿ ಸೇವೆ ಆರಂಭಿಸಿದ ಕೂಡಲೇ ಮಣಿಪುರ ಗಲಭೆಗಳ ಕುರಿತು ತನಿಖೆ ಕೈಗೊಳ್ಳುವ ಅಧಿಕಾರಿಗಳ ತಂಡದಲ್ಲಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡರು.
ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಸಿಬಿಐ ಎಸ್ಪಿಯಾಗಿ ಬೆಂಗಳೂರಿನಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮಂಜುನಾಥ ಸಿಂಗೆ ಅವರಿಗೆ ಇದೀಗ ಸಿಬಿಐ ಡಿಐಜಿ ಹುದ್ದೆ ಒಲಿದು ಬಂದಿದೆ. ಇದು ತವರೂರು ಅಫಜಲಪುರ ಹಾಗೂ ತವರು ಜಿಲ್ಲೆ ಕಲಬುರಗಿ ಸೇರಿದಂತೆ ಇಡೀ ರಾಜ್ಯದ ಯುವಪೀಳಿಗೆಗೆ ಹೆಮ್ಮೆಯಾಗಿದೆ. ಇದನ್ನೂ ಓದಿ: ನನ್ನನ್ನು ಟಾರ್ಗೆಟ್ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಯತ್ನಾಳ್‌ಗೆ ವಿಜಯೇಂದ್ರ ತಿರುಗೇಟು
ಮಣಿಪುರ ಗಲಭೆ, ನೀಟ್ ರಗಳೆ ತನಿಖೆ
ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ, ಮಣಿಪುರ ಗಲಭೆಗಳ ಕುರಿತು ತನಿಖೆ ಕೈಗೊಳ್ಳುವ ಜವಾಬ್ದಾರಿ ಐಪಿಎಸ್ ಅಧಿಕಾರಿ ಮಂಜುನಾಥ ಸಿಂಗೆ ಅವರ ಹೆಗಲಿಗೇರಿತ್ತು. ಈ ಕುರಿತು ಸಮಗ್ರ ತನಿಖೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದ್ದ ತಂಡದ ಭಾಗವಾಗಿದ್ದ ಸಿಂಗೆ ಅವರಿಗೆ ನೀಟ್ ಪರೀಕ್ಷಾ ರಾದ್ಧಾಂತದ ತನಿಖೆಯ ಹೊಣೆಯನ್ನೂ ಕೇಂದ್ರ ಸರ್ಕಾರ ವಹಿಸಿತ್ತು. ಈ ಎರಡೂ ಜವಾಬ್ದಾರಿಗಳನ್ನು ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸಿದ ಅವರಿಗೆ ಈಗ ಸಿಬಿಐ ಡಿಐಜಿ ಹುದ್ದೆ ಅರಸಿ ಬಂದಿದೆ. ಇದನ್ನೂ ಓದಿ: ಮೊದಲು ಕಾಂಗ್ರೆಸ್ ಶಾಸಕರನ್ನ ಉಳಿಸಿಕೊಳ್ಳಲಿ: ಎಂ.ಬಿ ಪಾಟೀಲ್‌ಗೆ ವಿಜಯೇಂದ್ರ ಟಕ್ಕರ್
ಬೆಂಗಳೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 300 ಕೋಟಿ ಮೌಲ್ಯ ಆಸ್ತಿ ಜಪ್ತಿ ಮಾಡಿದೆ. ಕೂಡಲೇ ಈ ಪ್ರಕರಣವನ್ನ ಸಿಬಿಐಗೆ (CBI) ವಹಿಸಬೇಕು ಎಂದು ವಿಪಕ್ಷ ನಾಯಕ ಅಶೋಕ್ (Ashok) ಆಗ್ರಹಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು , ಮುಡಾ ಹಗರಣ ಬಗೆದಷ್ಟು ಹೊರಗೆ ಬರುತ್ತಿದೆ. ನಾನು ಅರ್ಜಿ ಹಾಕಿ ಎರಡು ತಿಂಗಳು ಆದರೂ 50:50 ಅಡಿ ಎಷ್ಟು ಸೈಟ್ ಕೊಟ್ಟಿದ್ದೀರಾ ಅಂತ ಮುಡಾ ಇನ್ನು ಮಾಹಿತಿ ಕೊಟ್ಟಿಲ್ಲ.ಇದೆಲ್ಲವನ್ನು ನೋಡಿದರೆ ಲೋಕಾಯುಕ್ತಗೆ ಈ ಕೇಸ್ ತನಿಖೆ ಮಾಡೋಕೆ ಆಸಕ್ತಿ ಇದ್ದಂತೆ ಕಾಣ್ತಿಲ್ಲ. ಲೋಕಾಯುಕ್ತದವರು ಮುಡಾ ಕೇಸ್ ನಲ್ಲಿ ಕ್ಲೀನ್ ಚಿಟ್ ಕೊಡೋ ಪ್ರಯತ್ನ ಮಾಡ್ತಿದ್ದಾರೆ ಅನ್ನಿಸುತ್ತೆ ಅಂತ ಆರೋಪ ಮಾಡಿದರು. ಇದನ್ನೂ ಓದಿ: MUDA ಅಕ್ರಮದಲ್ಲಿ ʼಕೋಕನಟ್ʼ ಡೀಲ್ – 50, 100 ಕೋಕನಟ್ ಕಳುಹಿಸಿ ಸಿಕ್ಕಿಬಿದ್ದ ಬಿಲ್ಡರ್
ಇಡಿ ಲೋಕಾಯುಕ್ತಗೆ ದಾಖಲೆಗಳನ್ನು ಕೊಟ್ಟರೂ ಅದನ್ನ ಬಳಸಿಕೊಳ್ಳಲಿಲ್ಲ. ಲೋಕಾಯುಕ್ತ ಕೂಡಾ ಇಡಿ ರೀತಿ ಸೀಜ್ ಮಾಡಿಲ್ಲ ಯಾಕೆ? ಇದೆಲ್ಲವನ್ನೂ ನೋಡಿದರೆ ಲೋಕಾಯುಕ್ತ ಪೊಲೀಸರು ಪ್ರಮೋಷನ್ ಪಡೆಯೋಕೆ ಹೀಗೆಲ್ಲ ಮಾಡ್ತಿದ್ದಾರೆ ಅಂತ ಅನ್ನಿಸುತ್ತೆ. ಲೋಕಾಯುಕ್ತಗೆ ಯಾರ ಒತ್ತಡ ಇದೆ. ಯಾರ ಕೈವಾಡ ಇದೆ ಗೊತ್ತಿಲ್ಲ.ಮೊದಲ ದಿನದಿಂದಲೂ ನಾವು ಇದನ್ನೇ ಹೇಳ್ತಿದ್ದೇವೆ.ಹೀಗಾಗಿ ನಾವು ಮುಡಾ ಕೇಸ್ ಅನ್ನ ಸಿಬಿಐ ತನಿಖೆಗೆ ಕೊಡಿ ಅಂತ ಹೇಳ್ತಿದ್ದೇವೆ. ಈಗಲೂ ಮುಡಾ ಕೇಸ್ ಅನ್ನ ಸಿಬಿಐಗೆ ಕೊಡಬೇಕು ಅಂತ ಅಶೋಕ್ ಅಗ್ರಹ ಮಾಡಿದ್ರು. ಇದನ್ನೂ ಓದಿ: MUDA Scam | ಅಕ್ರಮವಾಗಿ ಮಾರಾಟ, ಸಹಕಾರಿ ಸಂಘ ಬಳಸಿ ದುರ್ಬಳಕೆ, 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?
ವಿಧಾನಸೌಧದಲ್ಲಿ ಯತ್ನಾಳ್ ಟೀಂ ಮತ್ತು ರೇಣುಕಾಚಾರ್ಯ ಟೀಂಗಳಿಂದ ಪದೇ ಪದೇ ಸಭೆ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯ ಆಂತರಿಕ ಕಿತ್ತಾಟ ಎಲ್ಲವನ್ನು ಪಾರ್ಟಿ ನೋಡಿಕೊಳ್ಳುತ್ತೆ.ನಾನು ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತ. ಯಡಿಯೂರಪ್ಪ, ಅನಂತ್ ಕುಮಾರ್, ನಾವೆಲ್ಲ ಪಾರ್ಟಿ ಕಟ್ಟಿ ಬೆಳೆಸಿದ್ದೇವೆ. ಪಾರ್ಟಿಗೆ ಸಂಬಂಧಿಸಿದ ವಿಷಯ ಇದ್ದರೆ ನಾಲ್ಕು ಗೋಡೆ ಮಧ್ಯೆ ಮಾತಾಡ್ತೀವಿ. ನಮ್ಮದು ಕೇಡರ್ ಪಾರ್ಟ್. ಭಿನ್ನಮತದ ವಿಚಾರಗಳನ್ನು ಹೈಕಮಾಂಡ್ ನೋಡಿಕೊಳ್ಳುತ್ತೆ ಅಂತ ತಿಳಿಸಿದರು.
ಇನ್ನು ರಾಜ್ಯಾಧ್ಯಕ್ಷ ಸ್ಥಾನ ಚುನಾವಣೆಗೆ ಯತ್ನಾಳ್ ಟೀಂನಿಂದ ಸ್ಪರ್ಧೆ ಮಾಡೋ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಪ್ರತಿಕ್ರಿಯೆ ಇನ್ನು ಶುರುವಾಗಿಲ್ಲ. ಚುನಾವಣೆ ಘೋಷಣೆ ಆಗಿಲ್ಲ ಅಂದ ಮೇಲೆ ಏನು ಪ್ರತಿಕ್ರಿಯೆ ಕೊಡಲಿ. ಇನ್ನು ತಾಲೂಕು ಮಟ್ಟದಲ್ಲಿ ಚುನಾವಣೆ ಪ್ರಕ್ರಿಯೆಗಳು ನಡೆಯುತ್ತಿವೆ. ರಾಜ್ಯಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಬಂದಾಗ ಅದರ ಬಗ್ಗೆ ಮಾತಾಡ್ತೀನಿ ಅಂತ ಜಾರಿಕೊಂಡರು.