Tag: ಸಿಬಿಐ

  • ಕೆಲ ತಿಂಗಳು ಜೈಲಲ್ಲಿದ್ರೂ I Don’t Care- ವಿಚಾರಣೆಗೆ ಸಿಬಿಐ ಕಚೇರಿ ತಲುಪಿದ ಸಿಸೋಡಿಯಾ

    ಕೆಲ ತಿಂಗಳು ಜೈಲಲ್ಲಿದ್ರೂ I Don’t Care- ವಿಚಾರಣೆಗೆ ಸಿಬಿಐ ಕಚೇರಿ ತಲುಪಿದ ಸಿಸೋಡಿಯಾ

    ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದ (Delhi excise policy case) ತನಿಖೆಯ ಭಾಗವಾಗಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ಭಾನುವಾರ ಬೆಳಗ್ಗೆ ತಮ್ಮ ನಿವಾಸದಿಂದ ಸಿಬಿಐ ಕಚೇರಿಗೆ ವಿಚಾರಣೆಗೆ ತೆರಳಿದ್ದಾರೆ.

    ಕೇಂದ್ರೀಯ ತನಿಖಾ ಸಂಸ್ಥೆ (CBI) ಅವರ ವಿಚಾರಣೆ ನಡೆಸುವುದಕ್ಕೂ ಮುಂಚಿತವಾಗಿ ಸಿಸೋಡಿಯಾ ಅವರ ನಿವಾಸದಿಂದ ಕಚೇರಿಯುದ್ದಕ್ಕೂ ಆಮ್ ಆದ್ಮಿ ಪಕ್ಷದ (AAP) ಬೆಂಬಲಿಗರು ಫಲಕಗಳನ್ನು ಹಿಡಿದುಕೊಂಡು ಅವರೊಂದಿಗೆ ಮೆರವಣಿಗೆ ತೆರಳಿದ್ದಾರೆ. ಸಿಬಿಐ ಕಚೇರಿ ಆವರಣದ ಸುತ್ತಲೂ ಬೆಂಬಲಿಗರು ಜಮಾಯಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಸಿಬಿಐ ಮನೀಶ್ ಸಿಸೋಡಿಯಾ ಅವರಿಗೆ ಫೆಬ್ರವರಿ 19 ರಂದು ವಿಚಾರಣೆಗೆ ಹಾಜರಾಗುವಂತೆ ಕರೆ ನೀಡಿತ್ತು. ಆದರೆ ಅವರು ರಾಜ್ಯ ಬಜೆಟ್‌ನಲ್ಲಿ ನಿರತರಾಗಿದ್ದರಿಂದ ಅದನ್ನು ಮುಂದೂಡಲಾಗಿತ್ತು. ಭಾನುವಾರ ವಿಚಾರಣೆಗೆ ತೆರಳುವುದಕ್ಕೂ ಮುನ್ನ ಸಿಸೋಡಿಯಾ ತಾವು ಕೆಲ ತಿಂಗಳು ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: PublicTV Explainer: ಕರಗುತ್ತಿವೆ ಹಿಮಸರೋವರಗಳು – ಭಾರತ, ಪಾಕಿಸ್ತಾನದ ಜನರಿಗೆ ಕಾದಿದೆ ಪ್ರವಾಹದ ಅಪಾಯ!

    ಇಂದು ನಾನು ಮತ್ತೊಮ್ಮೆ ಸಿಬಿಐ ವಿಚಾರಣೆಗೆ ತೆರಳುತ್ತಿದ್ದೇನೆ. ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಲಕ್ಷಾಂತರ ಮಕ್ಕಳ ಪ್ರೀತಿ ಹಾಗೂ ಕೋಟ್ಯಂತರ ದೇಶ ವಾಸಿಗಳ ಆಶೀರ್ವಾದ ನನ್ನೊಂದಿಗಿದೆ. ನಾನು ಕೆಲವು ತಿಂಗಳು ಜೈಲಿನಲ್ಲಿ ಇರಬೇಕಾಗಿ ಬಂದರೂ ನನಗೆ ಚಿಂತೆಯಿಲ್ಲ ಎಂದು ಸಿಸೋಡಿಯಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ಸಿಬಿಐ ವಿಚಾರಣೆಯ ಬಳಿಕ ಸಿಸೋಡಿಯಾ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರಿಗೆ ಲಕ್ಷಗಳ ರೂಪದಲ್ಲಿ ನೆರವಿನ ಹಸ್ತಚಾಚಿದ ನಟ ಅನುಪಮ್ ಖೇರ್

  • ಅಕ್ರಮ ಆಸ್ತಿ ಗಳಿಕೆ ಕೇಸ್ – CBIನಿಂದ ಡಿಕೆಶಿಗೆ ಇನ್ನೂ ಒಂದು ವಾರ ರಿಲೀಫ್

    ಅಕ್ರಮ ಆಸ್ತಿ ಗಳಿಕೆ ಕೇಸ್ – CBIನಿಂದ ಡಿಕೆಶಿಗೆ ಇನ್ನೂ ಒಂದು ವಾರ ರಿಲೀಫ್

    ಬೆಂಗಳೂರು: ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಕೋರ್ಟ್ (Karnataka High Court) ತಡೆಯಾಜ್ಞೆ ನೀಡಿದ್ದು, ಇನ್ನೂ ಒಂದು ವಾರ ರಿಲೀಫ್ ಕೊಟ್ಟಿದೆ.

    ಡಿಕೆಶಿ ವಿರುದ್ಧ ಸಿಬಿಐ (CBI) ನಡೆಸುತ್ತಿದ್ದ ತನಿಖೆಗೆ ಈ ಹಿಂದೆ ಕೋರ್ಟ್ ತಡೆ ನೀಡಿತ್ತು. ಅಲ್ಲದೇ ಫೆಬ್ರವರಿ 24ಕ್ಕೆ ಸಿಬಿಐಗೆ ತನಿಖಾ ಪ್ರಗತಿ ವರದಿ ನೀಡುವಂತೆ ಸೂಚಿಸಿತ್ತು. ಈ ಸಂಬಂಧ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಡಿಕೆಶಿಗೆ ಇನ್ನೂ ಒಂದು ವಾರ ಬಿಡುವು ನೀಡಿದೆ. ಇದನ್ನೂ ಓದಿ: ಡಿಕೆಶಿಗೆ ಮತ್ತೆ ಶಾಕ್ – ಸಿಬಿಐ ಬೆನ್ನಲ್ಲೇ ಫೀಲ್ಡಿಗೆ ಇಳಿದ ಇಡಿ

    karnataka highcourt

    ಸಿಬಿಐ ಪರ ವಕೀಲರು ತನಿಖಾ ಪ್ರಗತಿ ವರದಿ ಸಲ್ಲಿಸಿದ ಬಳಿಕ ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿತು. ಈ ವೇಳೆ ಮಧ್ಯಂತರ ತಡೆ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಸಿಬಿಐ ಮನವಿ ಮಾಡಿತು. ಅದಕ್ಕೆ ಅನುಮತಿ ಕೊಡದ ಹೈಕೋರ್ಟ್ (Karnataka High Court) ಮುಂದಿನ ವಿಚಾರಣೆ (ಮಾ.3) ತನಕ ಯಥಾಸ್ಥಿತಿಯಲ್ಲಿ ಮುಂದುವರಿಯುವಂತೆ ಸೂಚಿಸಿತು. ಇದನ್ನೂ ಓದಿ: ಡಿಕೆಶಿ ಮನವಿ ಪುರಸ್ಕಾರ – ಸಿಬಿಐ ವಿಚಾರಣೆಯಿಂದ ವಿನಾಯಿತಿ

    CBI 1

    ಈ ಹಿಂದೆ ಡಿಕೆಶಿ `ತಾನೊಬ್ಬ ಕೃಷಿಕ, ಕೃಷಿಯಿಂದಲೇ ನನಗೆ ಆದಾಯ ಬರುತ್ತಿದೆ’ ಎಂಬ ಹೇಳಿಕೆ ನೀಡಿದ ಬಳಿಕ ಆಸ್ತಿಯನ್ನು ಸಿಬಿಐ ಮೌಲ್ಯಮಾಪನ ಮಾಡಿತ್ತು. ಡಿಕೆಶಿಯ ಆದಾಯದ ಮೂಲವನ್ನು ಬೆನ್ನತ್ತಿದ್ದ ಸಿಬಿಐ, ಯಾವ ಬೆಳೆ ಬೆಳೆಯುತ್ತಾರೆ? ತೋಟದಿಂದ ಎಷ್ಟು ವರ್ಷದಿಂದ ಫಲ ಬರುತ್ತಿದೆ? ಎಷ್ಟು ಲಾಭ ಬರುತ್ತಿದೆ? ಎಷ್ಟು ವರ್ಷದಿಂದ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ? ಜಮೀನು ಖರೀದಿಸಿದ್ದು ಯಾವಾಗ ಎಂಬ ಬಗ್ಗೆ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಅಷ್ಟೇ ಅಲ್ಲದೇ ಕೃಷಿ ಭೂಮಿಗೆ ಸಂಬಂಧಿಸಿದ ಕಳೆದ 10 ವರ್ಷದ ಪಹಣಿಯನ್ನು ಪಡೆಯಲಾಗಿತ್ತು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಶುಕ್ಲಾ ವಿರುದ್ಧ ಭ್ರಷ್ಟಾಚಾರ ಕೇಸ್ ದಾಖಲಿಸಿದ ಸಿಬಿಐ

    ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಶುಕ್ಲಾ ವಿರುದ್ಧ ಭ್ರಷ್ಟಾಚಾರ ಕೇಸ್ ದಾಖಲಿಸಿದ ಸಿಬಿಐ

    ನವದೆಹಲಿ: ಅಲಹಾಬಾದ್ ಹೈಕೋರ್ಟ್‌ನ (Allahabad High Court) ನಿವೃತ್ತ ನ್ಯಾಯಾಧೀಶ (Former High Court Judge) ಎಸ್‌ಎನ್ ಶುಕ್ಲಾ (SN Shukla) ಹಾಗೂ ಅವರ ಪತ್ನಿ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಭ್ರಷ್ಟಾಚಾರ (Corruption) ಪ್ರಕರಣವನ್ನು ದಾಖಲಿಸಿದೆ.

    2014 ಹಾಗೂ 2019ರ ನಡುವೆ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಶುಕ್ಲಾ ಅವರು ತಮ್ಮ ಆದಾಯದ ಮೂಲಕ್ಕೆ ಅನುಗುಣವಾಗಿ 2.45 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿದೆ. ಇದು ಶುಕ್ಲಾ ವಿರುದ್ಧದ 2ನೇ ಭ್ರಷ್ಟಾಚಾರ ಪ್ರಕರಣವಾಗಿದೆ. ಇದನ್ನೂ ಓದಿ: ಇದು ನನ್ನ ಕೊನೆ ಭಾಷಣ.. ಮುಂದಿನ ಅಧಿವೇಶನದಲ್ಲಿ ಸದನಕ್ಕೆ ಬರಲ್ಲ – ಗದ್ಗದಿತರಾದ ಬಿಎಸ್‌ವೈ

    ಈ ಹಿಂದೆ 2029ರ ಡಿಸೆಂಬರ್ 4 ರಂದು ಪ್ರಧಾನ ತನಿಖಾ ಸಂಸ್ಥೆ ಲಕ್ನೋ ಮೂಲದ ವೈದ್ಯಕೀಯ ಕಾಲೇಜಿಗೆ ಅನುಕೂಲವಾಗುವಂತಹ ಆದೇಶವನ್ನು ನೀಡಿದಕ್ಕಾಗಿ ಎಸ್‌ಎನ್ ಶುಕ್ಲಾ ಜೊತೆಗೆ ಛತ್ತೀಸ್‌ಗಢ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಐಎಂ ಖುದ್ದುಸಿ ಹಾಗೂ ಇತರ ನಾಲ್ವರ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿತ್ತು. ಇದನ್ನೂ ಓದಿ: ಹಿಂಸಾತ್ಮಕ ರಾಜನೀತಿಯಿಂದಲೇ ಮಹಾತ್ಮ ಗಾಂಧಿ, ಇಂದಿರಾ, ರಾಜೀವ್ ಗಾಂಧಿ ಹತ್ಯೆಯಾಗಿದ್ದು: ಸುರ್ಜೆವಾಲಾ

    ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಶುಕ್ಲಾ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಕೋರ್ಟ್ ಅನುಮತಿ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಳೆದ 2 ವರ್ಷಗಳಲ್ಲಿ ಲಕ್ನೋ, ಮೀರತ್ ಹಾಗೂ ದೆಹಲಿಯಲ್ಲಿನ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿತ್ತು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಡಿಕೆಶಿಗೆ ಬಿಗ್ ರಿಲೀಫ್

    ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಡಿಕೆಶಿಗೆ ಬಿಗ್ ರಿಲೀಫ್

    ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ (DK Shivakumar‌) ಬಿಗ್ ರಿಲೀಫ್ ಸಿಕ್ಕಿದೆ.

    ಚುನಾವಣಾ ಸಂದರ್ಭದಲ್ಲಿ ಡಿಕೆಶಿಗೆ ಮತ್ತು ಅವರ ಕುಟುಂಬಕ್ಕೆ ಸಿಬಿಐ (CBI) ನೋಟಿಸ್ ಕೊಡುತ್ತಾ ಇದೆ. ಸುಖಾಸುಮ್ಮನೆ ಹಿಂಸೆ ಕೊಡುವ ಕೆಲಸವನ್ನು ಮಾಡುತ್ತಾ ಇದ್ದಾರೆ ಎಂಬ ವಿಚಾರವನ್ನು ಡಿಕೆಶಿ ಪರ ವಕೀಲ ಜಾದವ್ ಕೋರ್ಟ್ ಗಮನಕ್ಕೆ ತಂದಿದ್ದರು.

    ಡಿಕೆ ಶಿವಕುಮಾರ್ ಈ ಪ್ರಕರಣದಲ್ಲಿ ಆರೋಪಿ. ಅವರನ್ನು ಹೊರತುಪಡಿಸಿ ಅವರ ಮಗಳನ್ನು ವಿಚಾರಣೆಗೆ ಕರೆಯುತ್ತಿದ್ದಾರೆ. ಇದರಿಂದ ಅವರ ಕುಟುಂಬಕ್ಕೆ ತೊಂದರೆ ಆಗುತ್ತಿದೆ. ಚುನಾವಣೆಗೆ ಅಡ್ಡಿಪಡಿಸಬೇಕು, ಮಾನಸಿಕ ಹಿಂಸೆ ಕೊಡಬೇಕು ಅಂತಲೇ ಈ ರೀತಿ ಮಾಡಲಾಗುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸರ್ಕಾರಿ ಕಟ್ಟಡದ ಮೇಲಿನ ಗುಮ್ಮಟ ಕೆಡವುತ್ತೇವೆ – ಬಂಡಿ ಸಂಜಯ್

    ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಅವರ ಮಗಳು ಚುನಾವಣೆ ಸ್ಪರ್ಧೆ ಮಾಡುತ್ತಿಲ್ಲ ಅಲ್ವಾ? ವಿಚಾರಣೆಗೆ ಹಾಜರಾಗಲು ತೊಂದರೆ ಏನಿದೆ? ವಿಚಾರಣೆಗೆ ಸಹಕರಿಸಬೇಕು ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ವಾದ ಮಂಡಿಸಿ, ಡಿಕೆಶಿ ಅವರ ಮಗಳ ಹೆಸರಿನಲ್ಲಿ 150 ಕೋಟಿ ರೂ. ಆಸ್ತಿ ಇದೆ. ಅದರ ಮೌಲ್ಯ ಏನು ಅಂತ ತಿಳಿದುಕೊಳ್ಳಬೇಕು. ತನಿಖೆ ಇನ್ನೂ 6 ತಿಂಗಳು ನಡೆಯಲಿದೆ. ಬಳಿಕ ಅಂತಿಮ ವರದಿ ಸಲ್ಲಿಸಬೇಕು ಎಂದಿದ್ದಾರೆ.

    ಮೂಲ ಅರ್ಜಿಯೊಂದು ವಿಚಾರಣೆಗೆ ಬಾಕಿ ಉಳಿದಿದೆ. ಅದು ಇನ್ನೂ ಇತ್ಯರ್ಥ ಆಗದೇ ಇರುವ ಹಿನ್ನೆಲೆ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿತು. ಫೆಬ್ರವರಿ 24ರ ತನಕ ಮಧ್ಯಂತರ ತಡೆ ನೀಡಿದ್ದು, 24ಕ್ಕೆ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಲು ಸೂಚಿಸಿ ನ್ಯಾಯಾಲಯ ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ಕೇಸರಿ ಭದ್ರಕೋಟೆಗೆ ಚಾಣಕ್ಯ: ಮಂಗಳೂರಿನಲ್ಲಿ ಶಾ ಚುನಾವಣಾ ರಣತಂತ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಕೆಶಿ ಪುತ್ರಿ ಐಶ್ವರ್ಯಗೆ CBI ನೋಟಿಸ್; 10 ದಿನದಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ

    ಡಿಕೆಶಿ ಪುತ್ರಿ ಐಶ್ವರ್ಯಗೆ CBI ನೋಟಿಸ್; 10 ದಿನದಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ

    ಬೆಂಗಳೂರು: ಡಿ.ಕೆ.ಶಿವಕುಮಾರ್ (D.K.Shivakumar) ಬಳಿಕ ಅವರ ಪುತ್ರಿ ಐಶ್ವರ್ಯಗೂ (Aishwarya DK Shivakumar) ಸಿಬಿಐ (CBI) ಶಾಕ್ ಕೊಟ್ಟಿದೆ. ಡಿಕೆಶಿ ಪತ್ರಿಗೆ ಸಿಬಿಐ ನೋಟಿಸ್‌ ಕೊಟ್ಟಿದ್ದು, 10 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

    ಡಿಕೆಶಿ ಅಕ್ರಮ ಆಸ್ತಿ ಸಂಪಾದನೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಎರಡು ತಿಂಗಳ ಹಿಂದೆ ಡಿಕೆಶಿ ಒಡೆತನದ ಕಾಲೇಜಿನಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಎರಡು ತಿಂಗಳು ನಿರಂತರವಾಗಿ ದಾಖಲೆಗಳನ್ನು ಪರಿಶೀಲಿಸಿ ಬಳಿಕ ಗ್ಲೋಬಲ್ ಕಾಲೇಜಿನಲ್ಲಿ ನಿರ್ದೇಶಕಿ ಆಗಿರುವ ಐಶ್ವರ್ಯಗೆ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ದಲಿತ ನಾಯಕರ ವಿಚಾರದಲ್ಲಿ ಕಾಂಗ್ರೆಸ್‌ನದ್ದು ಅನುಕೂಲ ಸಿಂಧು ರಾಜಕಾರಣ; ದಲಿತರ‍್ಯಾರೂ ʼಕೈʼ ಪರ ಇಲ್ಲ – ಬಿಜೆಪಿ

    10 ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಈ ಹಿಂದೆ ಡಿಕೆಶಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದಾಗ, ಕಾಲೇಜು ಟ್ರಸ್ಟ್‌ನ ಅಡಿಯಲ್ಲಿ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ತನಿಖೆ ನಡೆಸಿ ಕಾಲೇಜಿನ ಫೀಸ್, ಕಾಲೇಜಿನ ಆಯವ್ಯಯ ಪಟ್ಟಿಯ ಸಮೇತ ವಿಚಾರಣೆಗೆ ಹಾಜರಾಗಲು ಐಶ್ವರ್ಯಗೆ ನೋಟಿಸ್ ನೀಡಿದೆ.

    ಐಶ್ವರ್ಯ ಮಾತ್ರವಲ್ಲದೇ ಕಾಲೇಜಿನ ಎಲ್ಲಾ ನಿರ್ದೇಶಕರಿಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಈ ಮೂಲಕ ಸಿಬಿಐ ತನಿಖೆ ಕೊನೆಯ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಜೆಡಿಎಸ್ ಶಾಸಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೆಹಲಿ ಅಬಕಾರಿ ನೀತಿ ಹಗರಣ- ಕೆಸಿಆರ್ ಪುತ್ರಿಯ ಮಾಜಿ ಆಡಿಟರ್ ಬಂಧನ

    ದೆಹಲಿ ಅಬಕಾರಿ ನೀತಿ ಹಗರಣ- ಕೆಸಿಆರ್ ಪುತ್ರಿಯ ಮಾಜಿ ಆಡಿಟರ್ ಬಂಧನ

    ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ (Delhi excise policy case) ಸಂಬಂಧಿಸಿ ಹೈದರಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿ ಬಾಬು ಗೋರಂಟ್ಲಾ ಅವರನ್ನು ಕೇಂದ್ರ ತನಿಖಾ ದಳ (CBI) ಬಂಧಿಸಿದೆ.

    ಆರೋಪಿ ಬುಚ್ಚಿ ಬಾಬು ಗೋರಂಟ್ಲಾ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ( K Chandrashekar Rao) ಅವರ ಪುತ್ರಿ ಎಂಎಲ್‍ಸಿ ಕವಿತಾ (Kavitha) ಅವರ ಮಾಜಿ ಆಡಿಟರ್ ಆಗಿದ್ದ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಬುಚ್ಚಿ ಬಾಬು ಗೋರಂಟ್ಲಾ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಗೋರಂಟ್ಲಾ ಅವರು ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಗ್ರಾಮದೇವತೆಗಾಗಿ ಊರಿಗೆ ಊರೇ ಖಾಲಿ- ಕಲಘಟಗಿಯಲ್ಲಿ ವಿಶಿಷ್ಟ ಜಾತ್ರೆ

    ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಡಿ. 12ರಂದು ಕೆಸಿಆರ್ ಪುತ್ರಿ ಕವಿತಾ ಅವರನ್ನು ಹೈದರಾಬಾದ್‍ನಲ್ಲಿ ಸಿಬಿಐ ವಿಚಾರಣೆ ನಡೆಸಿತ್ತು. ಇದನ್ನೂ ಓದಿ: ಜಾತಕ ಹೊಂದಿಸಿ ಹಿಂದೂ ಸಂಪ್ರದಾಯದಂತೆ 2 ಗಿಳಿಗಳಿಗೆ ಅದ್ಧೂರಿ ವಿವಾಹ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಸ್ತ್ರಕ್ಕೆ ಪ್ರತ್ಯಾಸ್ತ್ರ – ಡಿಕೆಶಿ ವಿರುದ್ಧ CBI ದೂರಿಗೆ ಪ್ರಯತ್ನಿಸಿದ್ದ ರಮೇಶ್ ಜಾರಕಿಹೊಳಿ ಮೇಲೆ ಕಾಂಗ್ರೆಸ್ ಕಂಪ್ಲೆಂಟ್‌

    ಅಸ್ತ್ರಕ್ಕೆ ಪ್ರತ್ಯಾಸ್ತ್ರ – ಡಿಕೆಶಿ ವಿರುದ್ಧ CBI ದೂರಿಗೆ ಪ್ರಯತ್ನಿಸಿದ್ದ ರಮೇಶ್ ಜಾರಕಿಹೊಳಿ ಮೇಲೆ ಕಾಂಗ್ರೆಸ್ ಕಂಪ್ಲೆಂಟ್‌

    ನವದೆಹಲಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಸೇರಿದಂತೆ ಬಿಜೆಪಿ (BJP) ನಾಯಕರ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ (Congress) ನಾಯಕರ ನಿಯೋಗ ದೂರು ನೀಡಿದೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ವಿರುದ್ಧ ಸಿಬಿಐ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದ ಬಿಜೆಪಿ ಪಾಳಯಕ್ಕೆ ಕೈ ನಾಯಕರು ಶಾಕ್ ನೀಡಿದ್ದಾರೆ.

    ಇಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ (Randeep Surjewala) ನೇತೃತ್ವದಲ್ಲಿ ಸಂಸದರ ತಂಡ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (J.P.Nadda) ವಿರುದ್ಧ ದೂರು ನೀಡಿದೆ. ಇದನ್ನೂ ಓದಿ: Maharashtraː ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಕಾಂಗ್ರೆಸ್‌ಗೆ ಗುಡ್‌ಬೈ

    ಮಾಜಿ ಸಚಿವ ರಮೇಶ ಜಾರಕಿಹೊಳಿ ಆರು ಸಾವಿರಕ್ಕೆ ಒಂದರಂತೆ ಮತ ಖರೀದಿಸುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಿದೆ. ಜನರಿಗೆ ಹಣದ ಆಮಿಷ ಒಡ್ಡಿ ಕೋಟಿ ಕೋಟಿ ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಹೇಳಿಕೆ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದ್ದು, ಈ ಬಗ್ಗೆ ತನಿಖೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಮಾತನಾಡಿದ ರಣದೀಪ್ ಸುರ್ಜೆವಾಲ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಆರು ಸಾವಿರ ರೂಪಾಯಿಗೆ ಒಂದರಂತೆ ಎಲ್ಲ ಮತಗಳನ್ನು ಕೊಳ್ಳುತ್ತಿದೆ. ಇದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ರಮೇಶ ಜಾರಕಿಹೊಳಿ, ಜೆ.ಪಿ.ನಡ್ಡಾ ಹಾಗೂ ನಳಿನ್ ಕುಮಾರ್ ಕಟೀಲ್ ಪಿತೂರಿ ಇದೆ. ಹೀಗಾಗಿ ಈ ಬಗ್ಗೆ ಪೂರ್ತಿ ತನಿಖೆ ಮಾಡಲು ಒತ್ತಾಯ ಮಾಡಿದ್ದೇವೆ ಎಂದರು‌. ಇದನ್ನೂ ಓದಿ: ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ – ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ

    bjp - congress

    ಮತದಾರರ ಪಟ್ಟಿಯಿಂದ ಬಿಜೆಪಿ ವಿರುದ್ಧ ಮತದಾರರ ಹೆಸರು ಡಿಲಿಟ್ ಮಾಡಿರುವ ಚಿಲುಮೆ ಪ್ರಕರಣದ ಬಗ್ಗೆ ಮಾತನಾಡಿ, ಶಿವಾಜಿನಗರದಲ್ಲಿ 9 ಸಾವಿರ ಮತದಾರರ ಹೆಸರು ಡಿಲಿಟ್ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಡಿಲಿಟ್ ಮಾಡಲಾಗಿದೆ. ಅಲ್ಪಸಂಖ್ಯಾತರು, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದವರ ಹೆಸರನ್ನು ಡಿಲಿಟ್ ಮಾಡಲಾಗಿದೆ. ಈ ಬಗ್ಗೆ ಸಹ ದೂರು ನೀಡಿದ್ದು, ತನಿಖೆಗೆ ಮತ್ತೆ ಒತ್ತಾಯಿಸಿದೆ ತಿಳಿಸಿದರು.

    ಬಳಿಕ ಮಾತನಾಡಿದ ಸಂಸದ ಹನುಮಂತಯ್ಯ, ಐದು ಕೋಟಿಗೆ ಮತಗಳನ್ನು ಕೊಳ್ಳುತ್ತೇವೆ ಎನ್ನುವ ಹೇಳಿಕೆ ಬಿಜೆಪಿಯ ನಿರ್ಲಜ್ಜ ಸ್ಥಿತಿ ತಲುಪಿರುವುದನ್ನು ತೋರಿಸುತ್ತದೆ. ಮತ ಕೊಳ್ಳುವ ಹೇಳಿಕೆ ಬಗ್ಗೆ ತನಿಖೆ ಮಾಡಬೇಕು ಅನ್ನೋದು ನಮ್ಮ ಆಗ್ರಹ. ಜೊತೆಗೆ ಶಿವಾಜಿನಗರದಲ್ಲಿ ‌9 ಸಾವಿರ ಮತದಾರರ ಹೆಸರು ತೆಗೆದಿರುವ ಬಗ್ಗೆಯೂ ತನಿಖೆಗೆ ಮನವಿ ಮಾಡಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜನಾರ್ದನ ರೆಡ್ಡಿ ಚಲನವಲನದ ಮೇಲೆ ಗುಪ್ತಚರ ಇಲಾಖೆ ಕಣ್ಣು

    ಜನಾರ್ದನ ರೆಡ್ಡಿ ಚಲನವಲನದ ಮೇಲೆ ಗುಪ್ತಚರ ಇಲಾಖೆ ಕಣ್ಣು

    ಕೊಪ್ಪಳ: ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್‌ಪಿಪಿ ಪಕ್ಷದ್ದೇ ಹವಾ ಸೃಷ್ಟಿಯಾಗಿದ್ದು, ಪಕ್ಷದ ಸಂಸ್ಥಾಪಕರಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhan Reddy) ನಿಂತರೂ ಸುದ್ದಿ, ಕುಳಿತರೂ ಸುದ್ದಿಯಾಗುತ್ತಿದ್ದಾರೆ. ಮತ್ತೊಂದು ಅಚ್ಚರಿ ಸಂಗತಿ ಎಂದರೆ ರೆಡ್ಡಿಯ ಚಲನವಲನದ ಮೇಲೆ ರಾಜ್ಯ ಗುಪ್ತಚರ ಇಲಾಖೆ ಹಾಗೂ ಸಿಬಿಐ ಕಣ್ಣಿಟ್ಟಿದೆ.

    2008ರಲ್ಲಿ ಆಪರೇಷನ್ ಕಮಲ ಎನ್ನುವ ಖ್ಯಾತಿ ಪಡೆದುಕೊಂಡಿದ್ದ ರಾಜ್ಯ ಬಿಜೆಪಿ (BJP) ಪಕ್ಷವು ಅಧಿಕಾರ ಪಡೆದುಕೊಳ್ಳಲು ಜನಾರ್ದನ ರೆಡ್ಡಿಯವರು ಪ್ರಮುಖ ಪಾತ್ರ ವಹಿಸಿದ್ದರು. ಇದಾದ ಬಳಿಕ ರೆಡ್ಡಿ ಅಕ್ರಮ ಗಣಿಗಾರಿಕೆ, ಬೇಲ್ ಡೀಲ್ ಸೇರಿದಂತೆ ಹಲವು ಪ್ರಕರಣಗಳ ಅಡಿಯಲ್ಲಿ ಸುಮಾರು ವರ್ಷಗಳ ಕಾಲ ಜೈಲು ಸೇರಿದ್ದರು. ನಂತರ ಜನಾರ್ದನ ರೆಡ್ಡಿಯವರು ಸುಪ್ರೀಂ ಕೋರ್ಟ್‍ನ ಷರತ್ತು ಬದ್ಧ ಅನುಮತಿಯ ಮೇರೆಗೆ ಜಾಮೀನು ಪಡೆದುಕೊಂಡು ಹೊರಬಂದಿದ್ದಾರೆ.

    ಸುಮಾರು ವರ್ಷಗಳಿಂದ ಸಕ್ರೀಯ ರಾಜಕೀಯದಿಂದ ದೂರವಾಗಿದ್ದ ಜನಾರ್ದನ ರೆಡ್ಡಿ ಗಂಗಾವತಿಯಿಂದ (Gangavati) ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸ್ವಂತ ಪಕ್ಷವನ್ನು ಕಟ್ಟಿಕೊಂಡು ರಾಜ್ಯದಲ್ಲಿ ಸಂಚಲನವನ್ನು ಮೂಡಿಸಲು ರೆಡ್ಡಿ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರಗಳವಾರು ಓಡಾಟವನ್ನು ನಡೆಸುತ್ತಿದ್ದಾರೆ. ಅವರ ಮೇಲಿರುವ ಆರೋಪಗಳೂ ಇನ್ನೂ ಮುಕ್ತವಾಗದೇ ಇರುವ ಹಿನ್ನೆಲೆಯಲ್ಲಿ ಸಿಬಿಐ (CBI) ಹಾಗೂ ರಾಜ್ಯ ಗುಪ್ತದಳ ಇಲಾಖೆಯವರು ಜನಾರ್ದನ ರೆಡ್ಡಿ ಕಾಲಿಟ್ಟ ಕಡೆಯಲ್ಲ ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗಕ್ಕೆ ಸಿಗದ ಅನುಮತಿ

    ಮುಂಚಿತವಾಗಿಯೇ ಮಾಹಿತಿ ಸಂಗ್ರಹ : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಸ್ವಂತ ಪಕ್ಷವನ್ನು ಕಟ್ಟಿದ ಮೇಲೆ ರಾಜ್ಯದ ನಾನಾ ಕಡೆಗಳಲ್ಲಿ ಹಗಲು – ಇರುಳು ಎನ್ನದೆ ತಿರುಗಾಟ ನಡೆಸಿದ್ದಾರೆ. ಪಕ್ಷವನ್ನು ಬಲಿಷ್ಠಗೊಳಿಸಬೇಕು. ಚುನಾವಣೆಯಲ್ಲಿ ಜಯ ಸಾಧಿಸಬೇಕು ಎನ್ನುವ ಛಲದೊಂದಿಗೆ ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಆದರೆ ಅವರ ಸಂಪೂರ್ಣ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಜನಾರ್ದನ್ ರೆಡ್ಡಿ ಎಲ್ಲಿ ವಾಸ್ತವ್ಯ ಹುಡುತ್ತಾರೆ? ಎಲ್ಲೆಲ್ಲಿ ಪ್ರಯಾಣ ಮಾಡುತ್ತಾರೆ? ಗಂಗಾವತಿಯಲ್ಲಿ ವಾಸ್ತವ್ಯ ಹುಡುವುದು, ಬೆಂಗಳೂರಿಗೆ (Bengaluru) ಹೋಗುವುದು, ನೆರೆಯ ಜಿಲ್ಲೆ, ಕ್ಷೇತ್ರ ಸಂಚಾರ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಮುಂಚಿತವಾಗಿಯೇ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ, ಬೆಂಗಳೂರು ಭಾಗದಲ್ಲಿ ರೆಡ್ಡಿ ರಾಜಕೀಯವಾಗಿ ಯಾರನ್ನೇ ಸಂಪರ್ಕ ಮಾಡಿದರೂ ಮಫ್ತಿ ಪೊಲೀಸರು ಅದರ ಆಳ ಅಗಲ ಕೆದಕುತ್ತಿದ್ದಾರೆ. ಸಾರ್ವಜನಿಕ ಸಭೆ, ಸಮಾರಂಭ, ಬಹಿರಂಗ ಸಮಾವೇಶ, ಜನಾರ್ದನ ರೆಡ್ಡಿ ನಡೆಸುವ ಗೌಪ್ಯ ಸಭೆಗಳಿಗೆ ಕುದ್ದು ಗುಪ್ತಚರ ಇಲಾಖೆಯ ಡಿವೈಎಸ್ಪಿ, ಪಿಎಸ್‍ಐ ಹಂತದ ಅಧಿಕಾರಿಗಳೇ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

    ಅಭ್ಯರ್ಥಿಗಳಲ್ಲಿ ಆತಂಕದ ಛಾಯೆ: ಗಾಲಿ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆಯನ್ನು ಮಾಡುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೆ ರಾಜ್ಯದ ನಾನಾ ಕ್ಷೇತ್ರಗಳಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಸುಮಾರು 35 ರಿಂದ 40 ಅಭ್ಯರ್ಥಿಗಳನ್ನು ಸ್ಪರ್ಧಿಸಲಿದ್ದಾರೆ ಎಂದು ರೆಡ್ಡಿಯವರು ಘೋಷಣೆ ಮಾಡಿದ್ದಾರೆ. ಗುಪ್ತಚರ ಇಲಾಖೆಯವರು ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿಗಳು ಯಾರಾಗಲಿದ್ದಾರೆ. ಅವರ ಹಿನ್ನೆಲೆ ಏನು, ಅವರ ಆದಾಯದ ಮೂಲ ಯಾವುದು ಎನ್ನುವುದನ್ನು ಗುಪ್ತವಾಗಿ ಮಾಹಿತಿ ಕಲೆ ನೀಡಲು ಮುಂದಾಗಿದೆ. ಇದನ್ನೂ ಓದಿ: ಗೋರಖನಾಥ ದೇವಸ್ಥಾನದ ಮೇಲೆ ದಾಳಿ : ಐಐಟಿಯಲ್ಲಿ ಓದಿದ ಉಗ್ರನಿಗೆ ಗಲ್ಲು ಶಿಕ್ಷೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗುರುರಾಘವೇಂದ್ರ, ವಶಿಷ್ಠ ಸೌಹಾರ್ದ ಬ್ಯಾಂಕ್ ಹಗರಣ ಸಿಬಿಐಗೆ: ಎಸ್.ಟಿ.ಸೋಮಶೇಖರ್

    ಗುರುರಾಘವೇಂದ್ರ, ವಶಿಷ್ಠ ಸೌಹಾರ್ದ ಬ್ಯಾಂಕ್ ಹಗರಣ ಸಿಬಿಐಗೆ: ಎಸ್.ಟಿ.ಸೋಮಶೇಖರ್

    ಬೆಂಗಳೂರು : ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್, ವಶಿಷ್ಠ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ (CBI) ವಹಿಸಲು ಶಿಫಾರಸು ಮಾಡಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ (ST Somashekar) ಹೇಳಿದರು.

    ವಿಕಾಸಸೌಧದಲ್ಲಿ ನಡೆದ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನ ಅವ್ಯವಹಾರಗಳು ಮತ್ತು ಪುನಃಶ್ಚೇತನ ಹಾಗೂ ವಶಿಷ್ಠ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಅವ್ಯವಹಾರಗಳ ಕುರಿತ ಪರಾಮರ್ಶೆ ಸಭೆಯಲ್ಲಿ ಮಾತನಾಡಿದ ಸಚಿವರು ಸರ್ಕಾರದ ನಿಲುವು ಘೋಷಣೆ ಮಾಡಿದರು.

    ಗುರುರಾಘವೇಂದ್ರ, ವಶಿಷ್ಠ ಸೌಹಾರ್ದ ಸೇರಿದಂತೆ ಇತರೆ ಯಾವುದೇ ಬ್ಯಾಂಕ್‌ಗಳಲ್ಲಿ ನಡೆದಿರುವ ಅವ್ಯವಹಾರಗಳಿದ್ದರೆ ಆ ಪ್ರಕರಣಗಳನ್ನು ಸಹ ಸಿಬಿಐಗೆ ವಹಿಸಲು ಶಿಫಾರಸು ಮಾಡಲಾಗುತ್ತದೆ. ಈ ಕುರಿತು ನಿರ್ಣಯ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಹಗರಣದ ತನಿಖೆ ಆರಂಭವಾಗಿ 3 ವರ್ಷವಾದರೂ ಸಾಲ ವಸೂಲಾತಿ ಆಗುತ್ತಿಲ್ಲ. ಸಭೆಗಳು ಮಾತ್ರ ನಡೆಯುತ್ತಿವೆಯೇ ಹೊರತು ಯಾವುದೇ ಫಲಿತಾಂಶ ಬರುತ್ತಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸಮಸ್ಯೆ ಏನು ಎಂದು ಗುರುರಾಘವೇಂದ್ರ ಬ್ಯಾಂಕ್‌ನ ಆಡಳಿತಾಧಿಕಾರಿಯನ್ನು ಪ್ರಶ್ನಿಸಿದರು.

    ಸರ್ಕಾರದ ಮೇಲೆ ಠೇವಣಿದಾರರು ವಿನಾಃಕಾರಣ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಠೇವಣಿದಾರರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಪ್ರಕರಣವನ್ನು ಸಿಬಿಐಗೆ ವಹಿಸಲಾಗುವುದು. ಸಂಪುಟದಲ್ಲಿ ಈ ಕುರಿತು ಪ್ರಸ್ತಾವನೆ ಮಂಡಿಸಲಾಗುವುದು ಎಂದರು. ಇದನ್ನೂ ಓದಿ: ಮತ್ತಷ್ಟು ಉಚಿತ ಭಾಗ್ಯಗಳಿಗೆ ಮೊರೆ ಹೋದ ಕಾಂಗ್ರೆಸ್‌ – ದುಡ್ಡು ಹೊಂದಿಸಲು ಸಾಧ್ಯವಾಗುತ್ತಾ?

    ಈ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ಸಮರ್ಥರಿದ್ದು ತನಿಖೆ ನಡೆಸುತ್ತಿದ್ದಾರೆ. ಆದರೆ ಸಾಲ ವಸೂಲಾತಿಯಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಸಿಬಿಐಗೆ ವಹಿಸಿದರೆ ಠೇವಣಿದಾರರಲ್ಲೂ ವಿಶ್ವಾಸ ಮೂಡಲಿದೆ ಎಂದು ಹೇಳಿದರು.

    ಸಚಿವರ ಈ ಮಾತಿಗೆ ಶಾಸಕರಾದ ರವಿಸುಬ್ರಮಣ್ಯ, ಸೌಮ್ಯರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್ ಅವರು ಸಹಮತ ವ್ಯಕ್ತಪಡಿಸಿದರು. ಸಭೆಯಲ್ಲಿ ಬ್ಯಾಂಕ್‌ನ ಪುನಶ್ಚೇತನ, ಸಾಲ ವಸೂಲಾತಿಯಲ್ಲಿ ಆಗಿರುವ ಪ್ರಗತಿ ಕುರಿತು ಪರಾಮರ್ಶಿಸಲಾಯಿತು. ಈ ರೀತಿ ವಂಚನೆ ತಡೆಗೆ ಕಾನೂನಿನಲ್ಲಿ ತಿದ್ದುಪಡಿ ತರುವ ಕುರಿತಂತೆ ಚರ್ಚಿಸಲಾಯಿತು. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆ ವರೆಗೆ BJP ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಮುಂದುವರಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ವಪಕ್ಷದವರ ವಿರುದ್ಧ ಯತ್ನಾಳ್ ಗದಾಪ್ರಹಾರ- ನಿರಾಣಿ, ಯತ್ನಾಳ್ ಕಚ್ಚಾಟಕ್ಕೆ ಡ್ರೈವರ್ ಕೊಲೆ ಥಳುಕು

    ಸ್ವಪಕ್ಷದವರ ವಿರುದ್ಧ ಯತ್ನಾಳ್ ಗದಾಪ್ರಹಾರ- ನಿರಾಣಿ, ಯತ್ನಾಳ್ ಕಚ್ಚಾಟಕ್ಕೆ ಡ್ರೈವರ್ ಕೊಲೆ ಥಳುಕು

    ವಿಜಯಪುರ: ನಗರ ಮತಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BasanaGauda Patil Yatnal) ಕೇವಲ ರಾಜ್ಯದಲದಲೇ ಅಲ್ಲಾ ದೇಶದಲ್ಲಿಯೇ ಬಿಜೆಪಿ ರೆಬಲ್ ಶಾಸಕ ಅಂತಾ ಪ್ರಸಿದ್ಧಿ ಪಡೆದಿದ್ದಾರೆ. ಯತ್ನಾಳ್ ರನ್ನ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿತ್ತು. ತದನಂತರ ಕಳೆದ ಬಾರಿ ವಿಧಾನಸಭೆ ಚುನಾವಣೆ (Vidhanasabha Elections) ಯಲ್ಲಿ ಯಡಿಯೂರಪ್ಪನವರೇ ಬಿಜೆಪಿ ಹೈಕಮಾಂಡ್‍ (BJP Highcommand) ನ ಸೂಚನೆಯಂತೆ ಯತ್ನಾಳ್‍ರನ್ನ ಬಿಜೆಪಿಗೆ ಮರಳಿ ಕರೆತಂದಿದ್ದರು. ನಂತರ ಕೆಲ ದಿನಗಳು ಇಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ ಯಡಿಯೂರಪ್ಪ ಸಿಎಂ ಆದ 6 ತಿಂಗಳಲ್ಲಿ ಯತ್ನಾಳ್-ಯಡಿಯೂರಪ್ಪ ಸಂಬಂಧ ಹಳಸಿ ಹೋಯ್ತು. ಮುಂದೆ ಯಡಿಯೂರಪ್ಪ-ಯತ್ನಾಳ್ ಹಾವು ಮುಂಗುಸಿಯಂತಾದ್ರು.

    ಇದರ ಮಧ್ಯೆ ಶುರುವಾಗಿದ್ದು, ಲಿಂಗಾಯತ ಪಂಚಮಸಾಲಿ ಮೀಸಲಾತಿ (Lingayat Panchamasali Reservation) ಹೋರಾಟ. ಇದನ್ನ ಮೊದಲು ಮುರಗೇಶ್ ನಿರಾಣಿ ಪ್ರಾರಂಭಿಸಿದಾದರೂ, ನಂತರ ಈ ಹೋರಾಟವನ್ನ ಕೈಗೆತ್ತಿಕೊಂಡಿದ್ದು ಯತ್ನಾಳ್. ಯತ್ನಾಳ್ ಇದರ ಮುಂದಾಳತ್ವ ವಹಿಸುತ್ತಿದಂತೆ ಯಡಿಯೂರಪ್ಪ, ವಿಜಯೇಂದ್ರ (B Y Vijayedra) ಮತ್ತು ಮುರುಗೇಶ್ ನಿರಾಣಿ ಹೋರಾಟದ ದಿಕ್ಕು ಬದಲಿಸಲು ನಾನಾ ಕಸರತ್ತುಗಳನ್ನು ನಡೆಸಿದರು. ಅಲ್ಲದೆ ಹೋರಾಟ ಕ್ರೆಡಿಟ್ ಯತ್ನಾಳ್‍ಗೆ ಸಿಗದಂತೆ ಇದುವರೆಗೂ ಕಾದುಕೊಂಡು ಹೊರಟಿದ್ದಾರೆ. ಇದರಿಂದ ಯಡಿಯೂರಪ್ಪ ಶಿಷ್ಯ ಮುರುಗೇಶ್ ನಿರಾಣಿ (Murugesh Nirani) ಮತ್ತು ಯತ್ನಾಳ್ ಟಾಕ್‍ವಾರ್ ಹೆಚ್ಚಾಗಿದ್ದು, ಮುಂಬರುವ ಚುನಾವಣೆಯಲ್ಲಿ ಯತ್ನಾಳ್‍ಗೆ ಟಿಕೆಟ್ ಸಿಕ್ಕರೆ ತಾನೇ ಬಿಜೆಪಿಯಲ್ಲೆ ಇರೊಲ್ಲ ಎಂದು ಹೇಳುವ ಮೂಲಕ ನಿರಾಣಿ ಬೆಂಬಲಿಗರ ತಲೆ ಕೆಡೆಸಿದ್ರು.

    ನಿರಾಣಿಯ ಈ ಟಿಕೆಟ್ ತಪ್ಪಿಸುವ ಮತ್ತು ಪಕ್ಷದಿಂದಲೇ ಉಚ್ಛಾಟನೆಯ ವಿಷಯ ಹೊರಬರಲು ನಿರಾಣಿ ಹಿಂದೆ ಯಾವ ಕೈಗಳು ಇವೆ ಎಂಬುದು ಮುಖ್ಯವಾಗುತ್ತೆ. ಮೂಲಗಳ ಪ್ರಕಾರ ಯಡಿಯೂರಪ್ಪ ಆದೇಶದ ಮೇಲೆ ನಿರಾಣಿ ಫೀಲ್ಡಿಗೆ ಇಳಿದಿದ್ದು, ಯತ್ನಾಳ್ ಬಗ್ಗೆ ಮಾತನಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದನ್ನೂ ಓದಿ: ಯತ್ನಾಳ್ ವಿರುದ್ಧ ಸಿಎಂ, ನಿರಾಣಿ ಗರಂ; ಯತ್ನಾಳ್‌ಗೆ ಮೂಗುದಾರ ಹಾಕುವ ಬಗ್ಗೆ ನಡ್ಡಾ ಎದುರು ಪ್ರಸ್ತಾಪಕ್ಕೆ ನಿರ್ಧಾರ

    ವಿಜಯಪುರ ಶಾಸಕನ ಕಾರ್ ಡ್ರೈವರ್ ಕೊಲೆಯಾಗಿದೆ ಅನ್ನೋ ನಿರಾಣಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಸಿಎಂಗೆ ಪತ್ರ ಬರೆದಿರೋ ಯತ್ನಾಳ್, 24 ಗಂಟೆ ಒಳಗಾಗಿ ನಿರಾಣಿ ಹೇಳಿಕೆ, ಕೊಲೆ ಆರೋಪದ ಸಿಬಿಐ ತನಿಖೆಗೆ ಆದೇಶ ಕೊಡಬೇಕು ಅಂತ ಆಗ್ರಹಿಸಿದ್ದಾರೆ. ಆರೋಪ ಸುಳ್ಳಾದರೆ ಸಚಿವರನ್ನ ಸಂಪುಟದಿಂದ ತೆಗೆದು ಹಾಕಬೇಕು ಎಂದು ಯತ್ನಾಳ್ ಒತ್ತಾಯಿಸಿದ್ದಾರೆ. ಆದರೆ ನಿರಾಣಿ ಪರವಾಗಿ ಸಹೋದರ ಸಂಗಮೇಶ್ (Sangamesh) ಟ್ವೀಟ್ ಮಾಡಿದ್ದು, ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ. ಬಾಯಿ ಹರುಕನಂತೆ ಮಾತನಾಡುವ ನಾಮರ್ಧ, ನಿನ್ನದೇ ಭಾಷೆಯಲ್ಲಿಯೇ ಉತ್ತರ ನೀಡುತ್ತೇನೆ. ನೇರ ಕಾದಾಟಕ್ಕೆ ಬಂದರೆ ನಿನ್ನ ತಾಕತ್ತು ತಿಳಿಯುತ್ತದೆ. ರಾಜಕೀಯ ಮರುಜನ್ಮ ಕೊಟ್ಟವರಿಗೆ ರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ ಅಂದಿದ್ದಾರೆ.

    ಯತ್ನಾಳ್ ಮತ್ತು ನಿರಾಣಿಯ ವಾಕ್ಸಮರದ ಹಿಂದೆ ಕಾಣದ ಕೈಗಳು ಭಾರೀ ಕೆಲಸ ಮಾಡುತ್ತಿವೆ. ಇದರಲ್ಲಿ ಯತ್ನಾಳ್ ಮತ್ತು ಟೀಂ ಮೇಲುಗೈ ಸಾಧಿಸುತ್ತಾ ಅಥವಾ ನಿರಾಣಿ ಮತ್ತು ಟೀಂ ಮೇಲುಗೈ ಸಾಧಿಸುತ್ತಾ ಎಂಬುದು ಭಾರಿ ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k