Tag: ಸಿಬಿಐ

  • ನಾನೇನೂ ತಪ್ಪು ಮಾಡಿಲ್ಲ; ಕಾಪಾಡಲು ದೇವರಿದ್ದಾನೆ, ಜನರಿದ್ದಾರೆ: ಡಿಕೆಶಿ

    ನಾನೇನೂ ತಪ್ಪು ಮಾಡಿಲ್ಲ; ಕಾಪಾಡಲು ದೇವರಿದ್ದಾನೆ, ಜನರಿದ್ದಾರೆ: ಡಿಕೆಶಿ

    – ಸೂಕ್ತ ಕಾಲದಲ್ಲಿ ಎಲ್ಲದಕ್ಕೂ ಉತ್ತರ

    ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ಬಗ್ಗೆ ನನಗೆ ಮಾಹಿತಿ ಇಲ್ಲ. ನ್ಯಾಯಾಲಯದ ವಿಚಾರದಲ್ಲಿ ವಕೀಲರಿಂದ ಸರಿಯಾದ ಮಾಹಿತಿ ಇಲ್ಲದೆ ಈ ವಿಚಾರವಾಗಿ ಮಾತನಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಕೋರ್ಟ್ ತೀರ್ಪಿನ ನಂತರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸದ್ಯಕ್ಕೆ ನಾನು ಟೆಕ್ ಸಮ್ಮಿಟ್‌ನಲ್ಲಿ ಭಾಗವಹಿಸಲು ಬಂದಿದ್ದೇನೆ. ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಎಂಬಿ ಪಾಟೀಲ್ ಅವರು ರಾಜ್ಯದಲ್ಲಿ ಬಂಡವಾಳ ಆಕರ್ಷಿಸಿ ರಾಜ್ಯದ ಯುವಕರಿಗೆ ಉದ್ಯೋಗ ಸೃಷ್ಟಿಸಲು, ರಾಜ್ಯವನ್ನು ಸಮೃದ್ಧಿಗೊಳಿಸಲು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅವರಿಗೆ ಬೆಂಬಲವಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದರು.

    ನಮ್ಮ ಸರ್ಕಾರ ನೂತನ ಬಿಟಿ ನೀತಿ ಹಾಗೂ ಅನ್ವೇಷಣಾ ನೀತಿಗಳನ್ನು ಇಂದು ಪರಿಚಯಿಸಿದೆ. ಇಂದು ಸಾವಿರಾರು ಮಂದಿ ವಿದೇಶಿ ಬಂಡವಾಳ ಹೂಡಿಕೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನ್ಯಾಯಾಲಯದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ತಿಳಿಯದೆ ಮಾತನಾಡುವುದು ಸರಿಯಲ್ಲ. ವಕೀಲರು ನಮಗೆ ಮಾಹಿತಿ ನೀಡದ ಹೊರತಾಗಿ ನಾನು ಮಾತನಾಡುವುದಿಲ್ಲ ಎಂದರು. ಇದನ್ನೂ ಓದಿ: ಸಿದ್ದು, ಡಿಕೆಶಿಯನ್ನ ಪೊಲೀಸ್‌ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಿ: ಪ್ರತಾಪ್‌ ಸಿಂಹ

    ನಾನೇನು ತಪ್ಪು ಮಾಡಿಲ್ಲ. ಎಲ್ಲಾ ಬೆಳವಣಿಗೆಗಳನ್ನು ನೀವು (ಮಾಧ್ಯಮದವರು), ಜನರು ನೋಡಿದ್ದಾರೆ. ನಾನು ಕೇವಲ ಪಕ್ಷದ ಕೆಲಸ ಮಾತ್ರ ಮಾಡಿದ್ದೇನೆ. ಪಕ್ಷದ ಕೆಲಸ ಮಾಡಿದ ಕಾರಣ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಮುಂದಕ್ಕೂ ತೊಂದರೆ ಕೊಟ್ಟರೆ ಕಾಪಾಡಲು ಆ ಭಗವಂತನಿದ್ದಾನೆ, ಈ ನಾಡಿನ ಜನರಿದ್ದಾರೆ. ನನಗೆ ತೊಂದರೆ ಕೊಟ್ಟ ಕಾರಣಕ್ಕೆ ಈ ರಾಜ್ಯದಲ್ಲಿ ಏನಾಯಿತು ಎಂದು ತಿಳಿದಿದೆ. ನನ್ನ ಪರವಾಗಿ ನಿಂತವರು ಹಾಗೂ ಪ್ರಾರ್ಥನೆ ಮಾಡಿದ ಜನರಿಗೆ ಕೋಟಿ ನಮಸ್ಕಾರ ಎಂದರು.

    ಯತ್ನಾಳ್ ಅವರ ಆಚಾರ ವಿಚಾರ, ಭಾವನೆ ಮತ್ತು ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಬಹಳ ನಮ್ರತೆಯಿಂದ ಗಮನಿಸಿದ್ದೇನೆ. ಸೂಕ್ತ ಕಾಲದಲ್ಲಿ ಇದಕ್ಕೆಲ್ಲಾ ಉತ್ತರ ಕೊಡುತ್ತೇನೆ ಎಂದು ಡಿಕೆಶಿ ಉತ್ತರಿಸಿದ್ದಾರೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ

  • ವಕೀಲನಾಗಿದ್ದರಿಂದಲೇ ಕಾನೂನು ಬಾಹಿರ ತನಿಖೆಯ ಆದೇಶ ವಾಪಸ್: ಸಿದ್ದರಾಮಯ್ಯ

    ವಕೀಲನಾಗಿದ್ದರಿಂದಲೇ ಕಾನೂನು ಬಾಹಿರ ತನಿಖೆಯ ಆದೇಶ ವಾಪಸ್: ಸಿದ್ದರಾಮಯ್ಯ

    ಹಾವೇರಿ: ನಾನು ವಕೀಲನಾಗಿರುವುದರಿಂದಲೇ ಹಿಂದಿನ ತನಿಖಾ ಆದೇಶ ಕಾನೂನು ಪ್ರಕಾರ ಇಲ್ಲದಿರುವುದಕ್ಕೆ ವಾಪಸ್ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ.

    ಕುಮಾರಸ್ವಾಮಿಯವರು ವಕೀಲರಾಗಿದ್ದ ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ (DK Shivakumar) ಅವರ ತನಿಖೆಯ ಆದೇಶವನ್ನು ವಾಪಸ್ ಪಡೆದಿರುವುದು ಸರಿಯೇ ಎಂಬ ಪ್ರಶ್ನೆಗೆ ಹಾವೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ವಕೀಲನಾಗಿರುವುದರಿಂದ, ಹಿಂದಿನ ತನಿಖಾ ಆದೇಶ ಕಾನೂನು ಪ್ರಕಾರ ಇಲ್ಲದ್ದಕ್ಕೆ ವಾಪಸ್ ಪಡೆಯಲಾಗಿದೆ. ನನಗೆ ಕಾನೂನಿನ ಅರಿವು ಇಲ್ಲದಿದ್ದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯಂತೆ ನಾನು ಕಾನೂನುಬಾಹಿರವಾಗಿದ್ದರೂ ತನಿಖೆಯ ಬಗ್ಗೆ ಸಮ್ಮತಿ ನೀಡುತ್ತಿದ್ದೆ ಎಂದರು.

    ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿರೋಧಪಕ್ಷದವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.

    ನಿಗಮಮಂಡಳಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ಅಧ್ಯಕ್ಷರ ನೇಮಕಾತಿಗೆ ಮೊದಲ ಹಂತದಲ್ಲಿ ಶಾಸಕರನ್ನು ಪರಿಗಣಿಸಲಾಗುವುದು. ನಾನು ಹಾಗೂ ಉಪಮುಖ್ಯಮಂತ್ರಿಗಳು ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಪಕ್ಷದ ವರಿಷ್ಠರಿಗೆ ನೀಡಲಾಗಿದ್ದು, ಅನುಮತಿಯನ್ನು ನಿರೀಕ್ಷಿಸಲಾಗಿದೆ ಎಂದರು. ಇದನ್ನೂ ಓದಿ: ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ: ಬಿಎಸ್‍ವೈ

    150 ದಿನಗಳ ಉದ್ಯೋಗ ನೀಡಲು ಕೇಂದ್ರವಿನ್ನೂ ಒಪ್ಪಿಲ್ಲ:
    ಬರ ಪರಿಹಾರದಲ್ಲಿ ರೈತರ ಪಾಲಿನ ಮೊತ್ತದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಬೆಳೆಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ನಿಗದಿಯಾಗಿರುವ ಪರಿಹಾರ ಮೊತ್ತವನ್ನು ನೀಡಲಾಗುವುದು. ಹಾವೇರಿ ಜಿಲ್ಲೆಗೆ ಕುಡಿಯುವ ನೀರು, ಮೇವು, ಉದ್ಯೋಗ ಸೇರಿದಂತೆ ವಿವಿಧ ಕಾರ್ಯಗಳಿಗೆ 226 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಜಿಲ್ಲಾ ಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ ಬರಗಾಲದ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವುದಲ್ಲದೇ, ಕುಡಿಯುವ ನೀರಿಗೆ ಕೊರತೆ ಬರದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಎನ್‌ಆರ್‌ಜಿಎಸ್ ಅಡಿ ಬರಗಾಲದ ಪರಿಸ್ಥಿತಿಯಲ್ಲಿ 150 ಮಾನವದಿನಗಳ ಉದ್ಯೋಗ ನೀಡುವ ಕೇಂದ್ರದ ನಿಯಮವಿದೆ. ಈ ಕ್ರಮಕ್ಕೆ ಕೇಂದ್ರ ಸರ್ಕಾರದವರು ಅನುಮತಿ ನೀಡಬೇಕಿದ್ದು, ಇದುವೆರಗೆ ಈ ಅನುಮತಿಯನ್ನು ನೀಡಿಲ್ಲ ಎಂದರು.

    ರಾಜ್ಯದ ದುಡ್ಡು ರಾಜ್ಯಕ್ಕೆ ನೀಡುತ್ತಿಲ್ಲ:
    ಇಡೀ ದೇಶದಲ್ಲಿ 12 ರಾಜ್ಯಗಳಲ್ಲಿ ಬರಗಾಲ ಪರಿಸ್ಥಿತಿಯಿದೆ. ರಾಜ್ಯಕ್ಕೆ ಬರ ಅಧ್ಯಯನಕ್ಕಾಗಿ ಕೇಂದ್ರ ತಂಡ ಪರಿಶೀಲಿಸಿದೆ. ಆದರೂ ಕೇಂದ್ರದಿಂದ ಬರಪರಿಹಾರ ಬಿಡುಗಡೆಯಾಗಿಲ್ಲ. ರಾಜ್ಯದ ದುಡ್ಡನ್ನು ರಾಜ್ಯಕ್ಕೆ ಬಿಡುಗಡೆ ಮಾಡುತ್ತಿಲ್ಲ ಎಂದರು. ಇದನ್ನೂ ಓದಿ: ಬಿಆರ್ ಪಾಟೀಲ್ ಪತ್ರದ ಬಗ್ಗೆ ಸಿಎಂ ನಿರ್ಧರಿಸುತ್ತಾರೆ: ಕೃಷ್ಣ ಬೈರೇಗೌಡ

  • ಡಿ.ಕೆ.ಶಿವಕುಮಾರ್‌ಗೆ ರಿಲೀಫ್;‌ ಮೇಲ್ಮನವಿ ಹಿಂಪಡೆದ ಮನವಿ ಪರಿಗಣಿಸಿದ ಹೈಕೋರ್ಟ್

    ಡಿ.ಕೆ.ಶಿವಕುಮಾರ್‌ಗೆ ರಿಲೀಫ್;‌ ಮೇಲ್ಮನವಿ ಹಿಂಪಡೆದ ಮನವಿ ಪರಿಗಣಿಸಿದ ಹೈಕೋರ್ಟ್

    ಬೆಂಗಳೂರು: ಡಿ.ಕೆ.ಶಿವಕುಮಾರ್‌ ವಿರುದ್ಧದ ಪ್ರಕರಣವನ್ನು ಸಿಬಿಐ (CBI) ತನಿಖೆ ವಹಿಸಿ ಹೊರಡಿಸಿದ್ದ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಆ ಮೂಲಕ ಡಿ.ಕೆ.ಶಿವಕುಮಾರ್‌ಗೆ (D.K.Shivakumar) ಬಿಗ್‌ ರಿಲೀಫ್‌ ಸಿಕ್ಕಿದೆ.

    ಬುಧವಾರ ಹೈಕೋರ್ಟ್‌ನಲ್ಲಿ (Karnataka High Court) ಡಿಸಿಎಂ ಡಿ.ಕೆ.ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ವಿಚಾರಣೆ ನಡೆಯಿತು. ಸಿಜೆ ಪಿ.ಬಿ.ವರಾಲೆ, ಕೃಷ್ಣ ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಾಯಿತು. ಇದನ್ನೂ ಓದಿ: ಮೊದಲ ಬಾರಿಗೆ ಶಾಸಕರಾದವರಿಗೆ ನಿಗಮ-ಮಂಡಳಿ ಸ್ಥಾನ ಇಲ್ಲ: ಡಿಕೆಶಿ

    ವಿಚಾರಣೆ ವೇಳೆ ಸರ್ಕಾರದ ಆದೇಶವನ್ನು ಎಜಿ ಶಶಿಕಿರಣ್‌ ಶೆಟ್ಟಿ ಅವರು ಹೈಕೋರ್ಟ್‌ ಗಮನಕ್ಕೆ ತಂದರು. ಈ ವೇಳೆ ಸಿಬಿಐ ಪರ ಪ್ರಸನ್ನ ಕುಮಾರ್‌ ಹಾಗೂ ಡಿ.ಕೆ.ಶಿವಕುಮಾರ್‌ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹಾಜರಿದ್ದರು.

    ಸಿಬಿಐಗೆ ಅನುಮತಿ ನೀಡಿರುವ ಅನುಮೋದನೆ ಹಿಂಪಡೆಯಲಾಗಿದೆ ಎಂದು ಮನು ಸಿಂಘ್ವಿ ಕೋರ್ಟ್‌ ಗಮನಕ್ಕೆ ತಂದರು. ಸರ್ಕಾರದ ಆದೇಶ ಪ್ರತಿಯನ್ನು ಓದಿದ ಹೈಕೋರ್ಟ್‌, ನೀವು ಈಗ ಹೊಸ ತೀರ್ಮಾನ ತೆಗೆದುಕೊಂಡು ಬಂದಿದ್ದೀರಿ. ಇದು ಕಾನೂನುಬದ್ಧವಾಗಿದ್ಯಾ ಎಂದು ಸಿಜೆ ಪ್ರಶ್ನಿಸಿದರು. ಈ ಹಿಂದೆ ರಾಜ್ಯ ಸರ್ಕಾರದ ಅನುಮತಿ ಇರಲಿಲ್ಲ. ರಾಜ್ಯ ಸರ್ಕಾರ ಕೆಲವೊಂದು ನಿಯಮ ಉಲ್ಲಂಘನೆ ಮಾಡಿದೆ ಎಂದು ಶಶಿಕಿರಣ್‌ ಶೆಟ್ಟಿ ಜೊತೆ ಬಂದಿದ್ದ ಕಪಿಲ್‌ ಸಿಬಲ್‌ ವಾದಿಸಿದರು.

    ಒಂದು ಪಕ್ಷ ಅಧಿಕಾರ ಹೊಂದಿರಬಹುದು. ‘ಬಿ’ ಪಕ್ಷ ಅಧಿಕಾರಕ್ಕೆ ಬರಬಹುದು. ಈ ರೀತಿ ಪದೇ ಪದೆ ಆದರೆ, ಇದು ಆಡಳಿತಕ್ಕೆ ಅಡ್ಡಿ ಉಂಟು ಮಾಡುವುದಿಲ್ಲವೇ? ಪ್ರತಿ ಪಕ್ಷ ಬದಲಾದಾಗ ಈ ರೀತಿ ಆದೇಶ ಮಾಡಿದರೆ ತನಿಖೆ ಮೇಲೆ ಪ್ರಭಾವ ಬೀರುವುದಿಲ್ಲವೇ ಎಂದು ಹೈಕೋರ್ಟ್‌ ಪ್ರಶ್ನಿಸಿತು. ಇದನ್ನೂ ಓದಿ: ಡಿಕೆಶಿ ಕೇಸ್ ವಾಪಸ್; ಹೈಕೋರ್ಟ್ ಮೆಟ್ಟಿಲೇರಿದ ಯತ್ನಾಳ್

    ಸರ್ಕಾರ ಕಾನೂನುಬದ್ಧವಾಗಿ ಈ ಪ್ರಕರಣ ವಾಪಸ್‌ ಪಡೆದುಕೊಂಡಿದೆ ಎಂದು ಕಪಿಲ್‌ ಸಿಬಲ್‌ ವಾದ ಮಂಡಿಸಿದರು. ಆದರೆ ಸಿಬಿಐ ಪರ ವಕೀಲರು ಸರ್ಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಆದೇಶ ಈ ಹಂತದಲ್ಲಿ ಅಸಮಂಜಸ ಎಂದು ಸಿಬಿಐ ಪರ ವಕೀಲರು ಹೇಳಿದರು.

    ಈಗಾಗಲೇ ಸರ್ಕಾರ ಪ್ರಕರಣ ವಾಪಸ್‌ ಪಡೆದಿದೆ. ಈ ಪ್ರಕರಣದಲ್ಲಿ ಹೈಕೋರ್ಟ್‌ ಅರ್ಜಿ ವಿಚಾರಣೆ ಅನೂರ್ಜಿತ. ಈ ಸಂದರ್ಭದಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಬೇಕಿಲ್ಲ ಎಂದು ಡಿಕೆಶಿ ಪರ ವಕೀಲರು ವಾದಿಸಿದರು. ಈ ವೇಳೆ ಹೈಕೋರ್ಟ್‌, ಸಂಪುಟದಲ್ಲಿ ಅಂತಿಮ ತೀರ್ಮಾನ ಆಗಿದೆಯಾ? ಸಂಪುಟದ ತೀರ್ಮಾನ ಸಿಬಿಐ ಪ್ರಶ್ನೆ ಮಾಡುತ್ತಿದೆಯಾ ಎಂದು ಕೇಳಿತು. ಆಗ ಡಿಕೆ ಪರ ವಕೀಲ, ಇಲ್ಲ ಸಿಬಿಐ ಇದುವರೆಗೂ ಸರ್ಕಾರದ ಆದೇಶ ಪ್ರಶ್ನಿಸಿಲ್ಲ. ಸಿಬಿಐ ಪೂರ್ವಾನುಮತಿ ಹಿಂಪಡೆದಿದೆ. ನಾವು ವಾದ ಮಾಡುವ ಅವಶ್ಯಕತೆ ಇಲ್ಲ. ನಾವು ಮೇಲ್ಮನವಿ ಹಿಂಪಡೆಯುತ್ತೇವೆ ಎಂದು ತಿಳಿಸಿದರು.

    ಈಗಾಗಲೇ ತನಿಖೆ ಪೂರ್ಣ ಆಗುವ ಹಂತದಲ್ಲಿ ಇದೆ. ಸಿಬಿಐ ಎಫ್‌ಐಆರ್‌ ದಾಖಲಿಸಿದ ಮೇಲೆ ಅನುಮೋದನೆ ನೀಡಿರುವುದನ್ನು ಹಿಂಪಡೆಯಬಹುದೇ ಎಂಬ ಪ್ರಶ್ನೆಯೂ ಇದೆ. ಈ ಬಗ್ಗೆ ಸಾಕಷ್ಟು ಪ್ರಶ್ನೆಗಳು ಇದ್ದಾವೆ ಎಂದು ಸಿಬಿಐ ಪರ ವಕೀಲರು ಹೇಳಿದರು. ಇದಕ್ಕೆ ಹೈಕೋರ್ಟ್‌, ದಿನಪತ್ರಿಕೆ ಸುದ್ದಿಯ ಮೇಲೆ ವಿಚಾರಣೆ ಮಾಡಲು ಸಾಧ್ಯವಿಲ್ಲ. ಕಾನೂನು ಏನು ಹೇಳುತ್ತೆ ಎಂಬುದರ ಮೇಲೆ ವಿಚಾರಣೆ ನಡೆಯಲಿದೆ ಎಂದು ತಿಳಿಸಿತು. ಇದನ್ನೂ ಓದಿ: ಡಿಕೆಶಿಯಂತೆ ನಾಗೇಂದ್ರ ಮೇಲಿನ ಕೇಸ್‌ ಹಿಂಪಡೆಯಲಿ – ಸರ್ಕಾರಕ್ಕೆ ರೆಡ್ಡಿ ಆಗ್ರಹ

    ಈಗಾಗಲೇ ಬೇರೆ ಪ್ರಕರಣದಲ್ಲಿ ಅನುಮತಿ ವಾಪಸ್‌ ಪಡೆದು ಕೋರ್ಟ್‌ ಮಧ್ಯ ಪ್ರವೇಶ ಮಾಡಿದೆ. ಹಳೆಯ ಆದೇಶದ ಪ್ರಕಾರ ಸಿಬಿಐ ಕೊಟ್ಟ ಅನುಮತಿ ವಾಪಸ್‌ ಪಡೆಯಲು ಸಾಧ್ಯವಿಲ್ಲ ಎಂದು ವಾದಿಸಿದ ಸಿಬಿಐ ಪರ ವಕೀಲರು, 1994 ರಲ್ಲಿ ಸುಪ್ರೀಂ ನೀಡಿದ್ದ ಕಾಜಿ ಡೋರ್ಜಿ ಪ್ರಕರಣ ತೀರ್ಪು ಓದಿದರು. ಈ ಪ್ರಕರಣದಲ್ಲಿ ಒಮ್ಮೆ ನೀಡಿದ ಅನುಮತಿ ವಾಪಸ್‌ ಪಡೆಯಲು ಸಾಧ್ಯವಿಲ್ಲ ಎಂದು ವಾದಿಸಿದರು.

    ಎಲ್ಲ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್‌ ಕೆಲ ನಿಮಿಷಗಳ ಕಾಲ ವಿಚಾರಣೆಯನ್ನು ಮುಂದೂಡಿತು. ಮತ್ತೆ ವಿಚಾರಣೆ ಆರಂಭಿಸಿ ಹೈಕೋರ್ಟ್‌ ತೀರ್ಪು ಪ್ರಕಟಿಸಿತು. ಮೇಲ್ಮನವಿ ಹಿಂಪಡೆದ ಮನವಿಯನ್ನು ಹೈಕೋರ್ಟ್‌ ಪರಿಗಣಿಸಿತು. ಅಲ್ಲದೇ, ರಾಜ್ಯ ಸರ್ಕಾರದ ಆದೇಶವನ್ನು ಈವರೆಗೂ ಯಾರೂ ಪ್ರಶ್ನಿಸಿಲ್ಲ. ಹೀಗಾಗಿ ಸಿಬಿಐ ಪರ ವಕೀಲರ ವಾದ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ತೀರ್ಪಿನಲ್ಲಿ ತಿಳಿಸಿತು. ಈ ವೇಳೆ, ಕಾಜಿ ಡೋರ್ಜಿ ಪ್ರಕರಣ ಉಲ್ಲೇಖಿಸಿ ಸಿಬಿಐ ಪರ ವಕೀಲರು ವಾದಿಸಿದ್ದನ್ನು ಹೈಕೋರ್ಟ್‌ ಪರಿಗಣಿಸಲಿಲ್ಲ. ಹೈಕೋರ್ಟ್‌ ತೀರ್ಪಿನಿಂದ ಡಿ.ಕೆ.ಶಿವಕುಮಾರ್‌ಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.

    ಹೈಕೋರ್ಟ್‌ನಲ್ಲಿ ಬಾಕಿ ಇದ್ದ ರಿಟ್‌ ಅರ್ಜಿ ಮತ್ತು ಈ ಸಂಬಂಧದ ಮೇಲ್ಮನವಿಯನ್ನು ಡಿಸಿಎಂ ಡಿಕೆಶಿ ಹಿಂಪಡೆದಿದ್ದಾರೆ. ವಿಚಾರಣೆ ವೇಳೆ ಸರ್ಕಾರದ ಪರ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹಾಜರಾಗಿದ್ದರು. ಸರ್ಕಾರದ ಅಧಿಸೂಚನೆಯನ್ನು ನ್ಯಾಯಪೀಠಕ್ಕೆ ಮೆಮೊ ಮೂಲಕ ಸಲ್ಲಿಸಿದರು. ಅಂತೆಯೇ, ರಿಟ್‌ ಅರ್ಜಿ ಮತ್ತು ಮೇಲ್ಮನವಿಯನ್ನು ಹಿಂಪಡೆಯುವುದಾಗಿಯೂ ಶಿವಕುಮಾರ್‌ ಪರ ವಕೀಲರು ನ್ಯಾಯಪೀಠಕ್ಕೆ ಲಿಖಿತ ಮೆಮೊ ಸಲ್ಲಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಮೆಮೊ ಪರಿಗಣಿಸಿ ಅರ್ಜಿ ಹಿಂಪಡೆಯುವ ನಿರ್ಧಾರಕ್ಕೆ ಅಸ್ತು ಎಂದು ಆದೇಶಿಸಿತು.

  • ಕನ್ನಡ ಸಿನಿಮಾ ಸೆನ್ಸಾರ್ ಮಾಡಲು ಲಂಚ ಬೇಡಿಕೆ: ಅಧಿಕಾರಿ ಸಿಬಿಐ ಬಲೆಗೆ

    ಕನ್ನಡ ಸಿನಿಮಾ ಸೆನ್ಸಾರ್ ಮಾಡಲು ಲಂಚ ಬೇಡಿಕೆ: ಅಧಿಕಾರಿ ಸಿಬಿಐ ಬಲೆಗೆ

    ಕೆಲ ತಿಂಗಳ ಹಿಂದೆಯಷ್ಟೇ ಕೇಂದ್ರ ಸೆನ್ಸಾರ್  (Censor) ಮಂಡಳಿಯಲ್ಲಿ ಲಂಚ ತಗೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ತಮಿಳು ನಟ ವಿಶಾಲ್ ತಮ್ಮ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು ಮೂವರು ಅಧಿಕಾರಿಗಳು ಲಕ್ಷ ಲಕ್ಷ ರೂಪಾಯಿ ಲಂಚ ತೆಗೆದುಕೊಂಡಿದ್ದಾರೆ ಎಂದು ಸಾಕ್ಷಿ ಸಮೇತ ಹಿಡಿದುಕೊಟ್ಟಿದ್ದರು. ಸದ್ಯ ಅಧಿಕಾರಿಗಳ ವಿಚಾರಣೆ ನಡೆಯುತ್ತಿದೆ. ಈ ಘಟನೆ ಮಾಸುವ ಮುನ್ನವೇ ಕನ್ನಡದಲ್ಲೂ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ.

    ಸಂವಿಧಾನ ಸಿನಿ ಕಂಬೈನ್ಸ್ ನಿರ್ಮಾಣದ ಅಡವಿ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ (Prashant Kumar) ಎನ್ನುವವರು ಹನ್ನೆರಡು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿನ ಸಬ್ ಟೈಟಲ್ ವಿಚಾರವಾಗಿ ಕ್ಯಾತೆ ತೆಗೆದಿದ್ದ ಅಧಿಕಾರಿ ಸರ್ಟಿಫಿಕೇಟ್ ನೀಡಲು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದ್ದು, ಚಿತ್ರ ನಿರ್ಮಾಪಕ ಟೈಗರ್ ನಾಗ್ (Tiger Naga), ಸಿಬಿಐ (CBI) ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು.

    ಟೈಗರ್ ನಾಗ್ ಕೊಟ್ಟ ದೂರಿನನ್ವಯ ಸಿಬಿಐ ಅಧಿಕಾರಿಗಳು ನವೆಂಬರ್ 28ರ ಸಂಜೆ ಆರು ಗಂಟೆಗೆ ಅಧಿಕಾರಿ ಲಂಚ ಪಡೆಯುವ ಸಂದರ್ಭದಲ್ಲೇ ದಾಳಿ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆಯಷ್ಟೇ ಮಲ್ಲೇಶ್ವರಂ ಥಿಯೇಟರ್ ವೊಂದರಲ್ಲಿ ಅಧಿಕಾರಿ ಅಡವಿ ಸಿನಿಮಾವನ್ನು ವೀಕ್ಷಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

  • ಡಿಕೆಶಿ ಕೇಸ್ ವಾಪಸ್; ಹೈಕೋರ್ಟ್ ಮೆಟ್ಟಿಲೇರಿದ ಯತ್ನಾಳ್

    ಡಿಕೆಶಿ ಕೇಸ್ ವಾಪಸ್; ಹೈಕೋರ್ಟ್ ಮೆಟ್ಟಿಲೇರಿದ ಯತ್ನಾಳ್

    ಬೆಂಗಳೂರು: ಡಿ.ಕೆ.ಶಿವಕುಮಾರ್ (D.K.Shivakumar) ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಯಿಂದ ವಾಪಸ್ ಪಡೆದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

    ಡಿ.ಕೆ.ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿ ನಾಳೆ (ಬುಧವಾರ) ಹೈಕೋರ್ಟ್‌ನಲ್ಲಿ (Karnataka High Court) ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಯತ್ನಾಳ್ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ಆದೇಶ ಪೂರ್ವಾಗ್ರಹ ಪೀಡಿತ ಎಂದು ಅರ್ಜಿಯಲ್ಲಿ ಯತ್ನಾಳ್ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಯಂತೆ ನಾಗೇಂದ್ರ ಮೇಲಿನ ಕೇಸ್‌ ಹಿಂಪಡೆಯಲಿ – ಸರ್ಕಾರಕ್ಕೆ ರೆಡ್ಡಿ ಆಗ್ರಹ

    ಡಿಕೆಶಿ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂಪಡೆಯಿತು. ಕೆಲ ದಿನಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸಿಬಿಐ ತನಿಖೆಗೆ ವಹಿಸಿ ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆಯಲಾಯಿತು.

    ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದವು. ಕಳ್ಳರ ಸರ್ಕಾರ ಕಳ್ಳನನ್ನು ರಕ್ಷಿಸುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು. ಆದರೆ ಕಾಂಗ್ರೆಸ್ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತು. ಹಿಂದಿನ ಸರ್ಕಾರದ ಆದೇಶ ಕಾನೂನುಬಾಹಿರವಾದದ್ದು. ಹೀಗಾಗಿ ಆದೇಶ ವಾಪಸ್ ಪಡೆಯಲಾಗಿದೆ ಎಂದು ತಿಳಿಸಿತ್ತು. ಇದನ್ನೂ ಓದಿ: ಡಿಕೆಶಿ ಕೇಸ್ ಗೊತ್ತಿದ್ದರೂ ತಿರುಚ್ತಿದ್ದಾರಾ ಸಿಎಂ?

  • ತನಿಖೆ ನಡೆದರೆ ಮತ್ತೆ ಜೈಲಿಗೆ ಹೋಗ್ತಾರೆ: ಡಿಕೆಶಿಗೆ ಖೂಬಾ ಟಾಂಗ್

    ತನಿಖೆ ನಡೆದರೆ ಮತ್ತೆ ಜೈಲಿಗೆ ಹೋಗ್ತಾರೆ: ಡಿಕೆಶಿಗೆ ಖೂಬಾ ಟಾಂಗ್

    ಬೀದರ್: ತನಿಖೆ ನಡೆದರೆ ಮತ್ತೆ ಜೈಲಿಗೆ (Jail) ಹೋಗುತ್ತಾರೆ ಅನ್ನೋದು ಡಿಕೆ ಶಿವಕುಮಾರ್‌ಗೆ (DK Shivakumar) ಖಾತ್ರಿ ಇದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಭಗವಂತ ಖೂಬಾ (Bhagwanth Khuba) ಅವರು ಟಾಂಗ್‌ ನೀಡಿದರು.

    ರಾಜ್ಯ ಸರ್ಕಾರ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧದ ಸಿಬಿಐ (CBI) ತನಿಖೆ ವಾಪಸ್‌ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಲೂಟಿ ಹೊಡೆದು ಆಸ್ತಿ ಹೆಚ್ಚಳ ಮಾಡಿಕೊಂಡಿದ್ದಾರೆ. ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಣಯ ಅವರ ವಿರುದ್ದ ಇದೆ ಎಂಬ ಕಾರಣಕ್ಕೆ ಹಿಂದಕ್ಕೆ ಪಡೆದುಕೊಳ್ಳುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆಗೆ ಸರ್ಕಾರ ಉತ್ತರಿಸಬೇಕಾಗುತ್ತದೆ ಎಂದರು.  ಇದನ್ನೂ ಓದಿ: ಸಚಿವ ಶರಣಬಸಪ್ಪ ದರ್ಶನಾಪೂರ ಕ್ಷೇತ್ರದಲ್ಲೇ 6,000 ಕ್ವಿಂಟಲ್‌ ಪಡಿತರ ಅಕ್ಕಿಗೆ ಕನ್ನ!

     

    ಯಾದಗಿರಿಯಲ್ಲಿ ಸಿಕ್ಕಿಬಿದ್ದಿರುವ ಪಡಿತರ ಅಕ್ಕಿ ಒಂದು ಉದಾಹರಣೆ ಮಾತ್ರವಾಗಿದ್ದು, ಪ್ರತಿ ಜಿಲ್ಲೆಯಲ್ಲಿ ಪ್ರತಿ ‌ಇಲಾಖೆಯಲ್ಲಿ ಇಂತಹ ವ್ಯವಹಾರಗಳೆ ನಡೆಯುತ್ತಿವೆ. ಜನಸಾಮಾನ್ಯರಿಗೆ ಸಿಗಬೇಕಾದ ಸವಲತ್ತುಗಳನ್ನು ಲೂಟಿ ‌ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಸಮಾಜದ ಸಮುದಾಯಗಳನ್ನು ಒಡೆದು ರಾಜಕೀಯ ಮಾಡಿ ಕರ್ನಾಟಕದ ಸಂಪೂರ್ಣ ಅರ್ಥವ್ಯವಸ್ಥೆ ಹದಗೆಡಿಸಿರುವುದು ಕಾಂಗ್ರೆಸ್‌ (Congress) ಸಾಧನೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ‌ ತೊಡಗಿ ಲೂಟಿ ಹೊಡೆಯುತ್ತಿದೆ. ಉಡಾಫೆ ಮಾತುಗಳನ್ನು ಆಡುವುದೇ ಕಾಂಗ್ರೆಸ್‌ ಸರ್ಕಾರದ ಆರು ತಿಂಗಳ ಸಾಧನೆ ಎಂದು ಕಿಡಿಕಾರಿದರು.

     

  • ಸಿಬಿಐ ತನಿಖೆಗೆ ಅನುಮತಿ ಕೊಡುವ ವಿಚಾರ ಸ್ಪೀಕರ್ ಅಧಿಕಾರದ ವ್ಯಾಪ್ತಿಗೆ ಬರಲ್ಲ: ಮಾಜಿ ಸ್ಪೀಕರ್‌ ಸ್ಪಷ್ಟನೆ

    ಸಿಬಿಐ ತನಿಖೆಗೆ ಅನುಮತಿ ಕೊಡುವ ವಿಚಾರ ಸ್ಪೀಕರ್ ಅಧಿಕಾರದ ವ್ಯಾಪ್ತಿಗೆ ಬರಲ್ಲ: ಮಾಜಿ ಸ್ಪೀಕರ್‌ ಸ್ಪಷ್ಟನೆ

    ಬೆಂಗಳೂರು: ಮೊನ್ನೆ ನಡೆದ ನಮ್ಮ ರಾಜ್ಯದ ಕ್ಯಾಬಿನೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಡೀ ದೇಶದಲ್ಲೇ ಕರ್ನಾಟಕವು ತಲೆತಗ್ಗಿಸುವಂತೆ ಮಾಡಿರುವ ನಿರ್ಣಯ ಅಂಗೀಕರಿಸಿದ್ದಾರೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegade Kageri) ತಿಳಿಸಿದರು.

    ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ (D.K.Shivakumar) ಅವರು ಗಳಿಸಿದ ಅಕ್ರಮ ಆಸ್ತಿ ಸಂಬಂಧ ಸಿಬಿಐ ತನಿಖೆ ನಡೆಯುತ್ತಿದೆ. ಸಿಬಿಐ (CBI) ಮತ್ತು ಕೋರ್ಟ್‍ಗಳು ಅವರ ಮೇಲೆ ಚಾರ್ಜ್‍ಶೀಟ್ ಹಾಕಲು ಬೇಕಾದ ಪ್ರಕ್ರಿಯೆ ನಡೆಸುತ್ತಿವೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮತ್ತು ಕರ್ನಾಟಕದ ಸಚಿವ ಸಂಪುಟವು ನಮ್ಮ ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಗೇ ಅಗೌರವ ಆಗುವಂಥ ನಿರ್ಣಯವನ್ನು ಕ್ಯಾಬಿನೆಟ್‍ನಲ್ಲಿ ತೆಗೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಸ್ಪೀಕರ್‌ ಅನುಮತಿ ಇಲ್ಲದೇ ಡಿಕೆಶಿ ಕೇಸ್‌ ತನಿಖೆಗೆ ಆದೇಶಿಸಿರುವುದು ಕಾನೂನುಬಾಹಿರ: ಸಿದ್ದರಾಮಯ್ಯ

    ಕ್ಯಾಬಿನೆಟ್‍ನ ಈ ನಿರ್ಣಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಆ ನಿರ್ಣಯ ಮಾಡಲು ಸ್ಪೀಕರ್ ಸ್ಥಾನವನ್ನು ಬಳಸಿಕೊಂಡಿರುವುದು ದುರ್ದೈವದ ಸಂಗತಿ. ಸ್ಪೀಕರ್ ಸ್ಥಾನವು ಸಂವಿಧಾನಬದ್ಧವಾಗಿ ತನ್ನದೇ ಆದ ಘನತೆ, ಗೌರವವನ್ನು ಇಟ್ಟುಕೊಂಡಿದೆ. ಸ್ಪೀಕರ್ ಅವರ ಅನುಮತಿಯ ವ್ಯಾಪ್ತಿಯಲ್ಲೇ ಬರದೆ ಇರುವ ವಿಷಯಕ್ಕೆ ಸ್ಪೀಕರ್ ಅವರು ಅನುಮತಿ ಕೊಟ್ಟಿಲ್ಲವೆಂದು ಕಾರಣವನ್ನು ಹೇಳಿ ಕ್ಯಾಬಿನೆಟ್ ನಿರ್ಣಯ ಮಾಡಿದ್ದು ಕಾಂಗ್ರೆಸ್ ಸರ್ಕಾರದ ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.

    ಸಿದ್ದರಾಮಯ್ಯನವರು ಹಿರಿತನ ಉಳ್ಳವರು. ಅವರು ಯಾವ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ವ್ಯಕ್ತವಾಗುತ್ತದೆ. ಅವರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲಿ. ಅವರ ಹಿರಿತನ, ಅನುಭವಕ್ಕೆ ತಕ್ಕಂತೆ ಕೆಲಸ ಮಾಡಲಿ. ಈ ರೀತಿಯ ಒತ್ತಡಕ್ಕೆ ಮಣಿದು, ಅಸಹಾಯಕರಾಗಿ ಅಥವಾ ಬಿಜೆಪಿ ಮೇಲೆ ಇನ್ನೇನೋ ಸಿಟ್ಟು, ದ್ವೇಷ ಸಾಧನೆಗೆ ಈ ರೀತಿ ರಾಜ್ಯದ ಜನರು ಮತ್ತು ನಮ್ಮ ವ್ಯವಸ್ಥೆಯೇ ತಲೆತಗ್ಗಿಸುವಂಥ ನಿರ್ಣಯವನ್ನು ಸಿದ್ದರಾಮಯ್ಯನವರು ಮಾಡಬಾರದು ಎಂದು ಆಗ್ರಹಿಸಿದರು. ಇದನ್ನೂ ಓದಿ: ಡಿಕೆಶಿಗೆ ಜೈಲಿಗೆ ಹೋಗುವ ಭಯ ಬಂದಿದೆ, ಅದಕ್ಕೆ ಕೇಸ್ ವಾಪಸ್ ಪಡೆದಿದ್ದಾರೆ: ಅಶ್ವಥ್ ನಾರಾಯಣ

    ಇಡೀ ಕ್ಯಾಬಿನೆಟ್ ಮತ್ತು ಮುಖ್ಯಮಂತ್ರಿಗಳು ಈ ನಿರ್ಣಯ ತೆಗೆದುಕೊಂಡಿರುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಸಿಬಿಐ ತನಿಖೆ ಮುಂದುವರಿಯಬೇಕು. ಇದರಲ್ಲಿ ಸ್ಪೀಕರ್ ಪಾತ್ರ ಏನೂ ಇಲ್ಲ. ಸ್ಪೀಕರ್ ಅವರ ವ್ಯಾಪ್ತಿಗೆ ಬರದೇ ಇರುವ ವಿಷಯವಿದು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

  • ಡಿಕೆಶಿ ಕೇಸ್ ವಾಪಸ್ ಪಡೆದು ಕಾಂಗ್ರೆಸ್ ಸಂಪುಟದ ಪಾವಿತ್ರ್ಯತೆ ಹಾಳು ಮಾಡಿದೆ: ಈಶ್ವರಪ್ಪ

    ಡಿಕೆಶಿ ಕೇಸ್ ವಾಪಸ್ ಪಡೆದು ಕಾಂಗ್ರೆಸ್ ಸಂಪುಟದ ಪಾವಿತ್ರ್ಯತೆ ಹಾಳು ಮಾಡಿದೆ: ಈಶ್ವರಪ್ಪ

    ಹಾವೇರಿ: ಯಾವುದೇ ರಾಜ್ಯದಲ್ಲೂ ಸಿಬಿಐ (CBI) ಕೇಸನ್ನು ವಾಪಸ್ ಪಡೆದ ಇತಿಹಾಸ ಇಲ್ಲ. ಕಾಂಗ್ರೆಸ್ (Congress) ಸರ್ಕಾರ ಡಿಕೆಶಿ (D.K Shivakumar) ಕೇಸ್ ವಾಪಸ್ ಪಡೆದು ಸಚಿವ ಸಂಪುಟದ ಪಾವಿತ್ರ್ಯತೆಯನ್ನೇ ಹಾಳು ಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S Eshwarappa) ವಾಗ್ದಾಳಿ ನಡೆಸಿದ್ದಾರೆ.

    ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐನಿಂದ ಕೇಸ್ ವಾಪಸ್ ಪಡೆದು ಕಾಂಗ್ರೆಸ್ ಕರ್ನಾಟಕ ರಾಜ್ಯದ ಮರ್ಯಾದೆ ತೆಗೆದಿದೆ. ದೇಶದ ಇತಿಹಾಸದಲ್ಲಿ ಸಚಿವ ಸಂಪುಟ ಎಂದರೆ ಅದು ದೇವಸ್ಥಾನ. ಆ ದೇವಸ್ಥಾನದ ಪಾವಿತ್ರ್ಯತೆಯನ್ನೇ ಕಾಂಗ್ರೆಸ್ ಸರ್ಕಾರ ಹಾಳು ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 500 ಸಿಸಿಟಿವಿ ಪರಿಶೀಲಿಸಿ ಯುವತಿ ಬಟ್ಟೆ ಎಳೆದವನ ಬಂಧನ!

    ಡಿಕೆಶಿ ಅಕ್ರಮ ಹಣ ಸಂಪಾದನೆ ಮಾಡಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ. 150 ಕೋಟಿ ರೂ.ಗೂ ಹೆಚ್ಚು ಹಣ 5 ವರ್ಷದಲ್ಲಿ ಸಂಪಾದನೆ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ತನಿಖೆ ನಡೆದಿದೆ. ಡಿಕೆಶಿ ತಿಹಾರ್ ಜೈಲಿಗೂ ಹೋಗಿ ಬಂದಿದ್ದಾರೆ. ಅನೇಕ ಬಾರಿ ಕೋರ್ಟ್‍ಗೂ ಹೋಗಿದ್ದಾರೆ. ಕೋರ್ಟ್‍ನಲ್ಲಿ ಇವರ ಅರ್ಜಿ ವಜಾ ಆಗಿದೆ. ಸ್ಪೀಕರ್ ಅನುಮತಿ ಪಡೆದಿಲ್ಲ ಎನ್ನುವುದನ್ನು ಇಷ್ಟು ದಿನ ಕೋರ್ಟ್ ಗಮನಿಸಿಲ್ಲವೇ? ಸಿಬಿಐ ಗಮನಿಸಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

    ಸುಪ್ರೀಂ ಕೋರ್ಟ್‍ನ ತಜ್ಞ ನ್ಯಾಯಾಧೀಶರ ಅಭಿಪ್ರಾಯ ಏನಿದೆ ಎಂದರೆ, ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡೋದಕ್ಕೆ ಸರ್ಕಾರಕ್ಕೆ ಅಧಿಕಾರ ಇದೆ. ಆದರೆ ಸಿಬಿಐಗೆ ಕೊಟ್ಟ ಕೇಸ್ ವಾಪಸ್ ಪಡೆಯೋ ಅಧಿಕಾರ ಸರ್ಕಾರಕ್ಕೆ ಇಲ್ಲ. ಮಾತೆತ್ತಿದರೆ ಇವರೆಲ್ಲಾ ಸಂವಿಧಾನದ ಬಗ್ಗೆ ಮಾತಾಡ್ತಾರೆ. ಸಂವಿಧಾನ ಗಾಳಿಗೆ ತೂರಿ ಡಿಕೆಶಿ ಕೇಸ್ ವಿತ್ ಡ್ರಾ ಮಾಡಿದ್ದಾರೆ. ಸಿದ್ದರಾಮಯ್ಯ ಆಸಕ್ತಿ ತೆಗೆದುಕೊಂಡು ಡಿಕೆಶಿ ಸಿಬಿಐ ಕೇಸ್ ವಿತ್ ಡ್ರಾ ಮಾಡಿದ್ದಲ್ಲ, ಅದು ನನಗೆ ಗೊತ್ತಿದೆ. ಸೋನಿಯಾ ಹಾಗೂ ರಾಹುಲ್ ಒತ್ತಡಕ್ಕೆ ಕೇಸ್ ವಾಪಸ್ ತೆಗೆಸಿದ್ದಾರೆ. ತಮ್ಮ ನೇತೃತ್ವದ ಸರ್ಕಾರ ಇರೋ ಸಂದರ್ಭದಲ್ಲಿ ಕೇಸ್ ವಾಪಸ್ ತಗೊಂಡಿದ್ದು ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ. ಸಿಎಂ ಸ್ಥಾನ ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಸಿಬಿಐ ಕೇಸ್ ವಾಪಸ್ ತೆಗೆದುಕೊಂಡಿದ್ದಾರೆ. ಇದು ಖಂಡನೀಯ, ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

    ಡಿಕೆಶಿ ಈವರೆಗೂ ರಾಜೀನಾಮೆ ಕೊಟ್ಟಿಲ್ಲ, ಮೊದಲು ಡಿಕೆಶಿ ರಾಜೀನಾಮೆ ಕೊಡಬೇಕು. ಎಷ್ಟು ದಾಖಲೆಗಳನ್ನು ಇವರು ತಿದ್ದಬಹುದು? ಕೇಸ್ ವಾಪಾಸ್ ಪಡೆಯುವ ನಿರ್ಧಾರ ಮಾಡಿ ಮುಠ್ಠಾಳ ಕೆಲಸ ಮಾಡಿದ್ದಾರೆ. ಈಗಲಾದರೂ ಡಿಕೆಶಿ ರಾಜೀನಾಮೆ ಕೊಡಲಿ. ಇದಕ್ಕಾಗಿ ಸಚಿವ ಸಂಪುಟ ಸೇರಿ ನಿರ್ಧಾರ ಮಾಡಲಿ. ರಾಜ್ಯದ ಜನರ ಕ್ಷಮೆ ಕೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಎದುರೇ ಸುನಿಲ್ ಕುಮಾರ್, ಎಸ್‍ಪಿ ಅರುಣ್ ನಡುವೆ ಮಾತಿನ ಜಟಾಪಟಿ

  • ಸ್ಪೀಕರ್‌ ಅನುಮತಿ ಇಲ್ಲದೇ ಡಿಕೆಶಿ ಕೇಸ್‌ ತನಿಖೆಗೆ ಆದೇಶಿಸಿರುವುದು ಕಾನೂನುಬಾಹಿರ: ಸಿದ್ದರಾಮಯ್ಯ

    ಸ್ಪೀಕರ್‌ ಅನುಮತಿ ಇಲ್ಲದೇ ಡಿಕೆಶಿ ಕೇಸ್‌ ತನಿಖೆಗೆ ಆದೇಶಿಸಿರುವುದು ಕಾನೂನುಬಾಹಿರ: ಸಿದ್ದರಾಮಯ್ಯ

    ಬೆಂಗಳೂರು: ಡಿ.ಕೆ.ಶಿವಕುಮಾರ್‌ (D.K.Shivakumar) ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸಮರ್ಥಿಸಿಕೊಂಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಪ್ರಕರಣ ಸ್ಯಾಂಕ್ಷನ್‌ ಕೊಟ್ಟಿರುವುದು ಕಾನೂನುಬಾಹಿರ. ಎಂಎಲ್‌ಎ ಮೇಲೆ ಸ್ಪೀಕರ್ ಅನುಮತಿ ಪಡೆದು ತನಿಖೆಗೆ ಆದೇಶ ಕೊಡಬೇಕಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಲೂಟಿ‌ ಮಾಡೋರಿಗೆ ನಮ್ಮ ಸರ್ಕಾರ ಅಂತ ಪ್ರೂವ್‌ ಮಾಡಿದ್ದಾರೆ – ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತೆ ಎಂದ HDK

    ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇಲೆ ತನಿಖೆಗೆ ಶಿಫಾರಸು ಮಾಡಿದ್ದಾರೆ. ಕೋರ್ಟ್‌ನಲ್ಲಿರುವುದನ್ನು ನಾನು ತೀರ್ಮಾನ ಮಾಡಲ್ಲ. ಸರ್ಕಾರ ಏನು ತೀರ್ಮಾನ ಮಾಡಬೇಕೊ ಮಾಡಿದೆ. ಕೋರ್ಟ್‌ನವರು ಏನು ತೀರ್ಮಾನ ಮಾಡ್ತಾರೊ ಅದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

    ಸಚಿವರಾಗಿದ್ದರೆ ರಾಜ್ಯಪಾಲರು ತನಿಖೆಗೆ ಅನುಮತಿ ಕೊಡಬೇಕು. ಶಾಸಕರಾದವರಿಗೆ ಸ್ಪೀಕರ್ ಅನುಮತಿ ಕೊಡಬೇಕು. ಡಿಕೆಶಿ 2019 ರಲ್ಲಿ ಎಂಎಲ್‌ಎ ಆಗಿದ್ದರು. ಹೀಗಾಗಿ ಸ್ಪೀಕರ್ ಅನುಮತಿ ಪಡೆದು ಮುಖ್ಯಮಂತ್ರಿಗಳು ತನಿಖೆಗೆ ಸೂಚನೆ ನೀಡಬೇಕಿತ್ತು. ಸ್ಪೀಕರ್ ಅನುಮತಿ ಪಡೆಯದೆ ಮುಖ್ಯಮಂತ್ರಿಗಳು ಮೌಖಿಕವಾಗಿ ಸಿಬಿಐ ತನಿಖೆಗೆ ಕೊಟ್ಟಿರುವುದು ಕಾನೂನುಬಾಹೀರ ಅಂತ ನಿರ್ಣಯ ಮಾಡಲಾಗಿದೆ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಜೈಲಿಗೆ ಹೋಗುವ ಭಯ ಬಂದಿದೆ, ಅದಕ್ಕೆ ಕೇಸ್ ವಾಪಸ್ ಪಡೆದಿದ್ದಾರೆ: ಅಶ್ವಥ್ ನಾರಾಯಣ

    ನಾವು ಅಡ್ವೊಕೇಟ್‌ ಜನರಲ್‌ (ಎಜಿ) ಅವರ ಅಭಿಪ್ರಾಯ ಕೇಳಿದೆವು. ಅವರು ಆದೇಶ ಹಿಂಪಡೆಯಬಹುದು ಅಂತ ಹೇಳಿದರು. ಅದರಂತೆ ಸಂಪುಟ ಸಭೆಯಲ್ಲಿ ಹಿಂಪಡೆದಿದ್ದೇವೆ. ಕುಮಾರಸ್ವಾಮಿ ಆರೋಪಕ್ಕೆ ನಾವು ತಲೆ ಕೆಡಿಸಿಕೊಂಡಿಲ್ಲ. ಕುಮಾರಸ್ವಾಮಿ ಏನು ಅಡ್ವೊಕೇಟ್ ಜನರಲ್‌? ರಾಜಕೀಯ ಪ್ರೇರಿತ ಆರೋಪ ಮಾಡ್ತಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಡಿಕೆಶಿಗೆ ಜೈಲಿಗೆ ಹೋಗುವ ಭಯ ಬಂದಿದೆ, ಅದಕ್ಕೆ ಕೇಸ್ ವಾಪಸ್ ಪಡೆದಿದ್ದಾರೆ: ಅಶ್ವಥ್ ನಾರಾಯಣ

    ಡಿಕೆಶಿಗೆ ಜೈಲಿಗೆ ಹೋಗುವ ಭಯ ಬಂದಿದೆ, ಅದಕ್ಕೆ ಕೇಸ್ ವಾಪಸ್ ಪಡೆದಿದ್ದಾರೆ: ಅಶ್ವಥ್ ನಾರಾಯಣ

    ಬೆಂಗಳೂರು: ಡಿ.ಕೆ.ಶಿವಕುಮಾರ್‌ಗೆ (D.K.Shivakumar) ಜೈಲಿಗೆ ಹೋಗುವ ಭಯ ಬಂದಿದೆ. ಹೀಗಾಗಿ ಸರ್ಕಾರವು ಸಿಬಿಐ (CBI) ಕೇಸ್ ವಾಪಸ್ ಪಡೆದಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayan) ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ಗೆ ಜೈಲಿಗೆ ಹೋಗೋ ಭಯ ಬಂದಿದೆ. ಅದಕ್ಕೆ ಕೇಸ್ ವಾಪಸ್ ಪಡೆದ್ದಾರೆ. ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳೋಕೆ ಕೇಸ್ ವಾಪಸ್ ಪಡೆಯಲಾಗಿದೆ. ಈಗಾಗಲೇ ಸಿಬಿಐ ವಿಚಾರಣೆ ಬಹುತೇಕ ‌ಮುಗಿಸಿದೆ. ಈ ಸಮಯದಲ್ಲಿ ಕೇಸ್ ಯಾಕೆ ವಾಪಸ್ ತೆಗೆದುಕೊಂಡರು. ಇದನ್ನ‌ ಬಿಜೆಪಿ ಖಂಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನು ಮುಂದುವರಿಸಲು ಆಗಲ್ಲ: ಪರಮೇಶ್ವರ್

    ಸದನದ ಒಳಗೆ- ಹೊರಗೆ ಬಿಜೆಪಿ ಹೋರಾಟ‌ ಮಾಡುತ್ತದೆ. ಜನರು 135 ಸೀಟು ಕೊಟ್ಟಿದ್ದಾರೆ ಅಂತ ಇವರು ಅಧಿಕಾರ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ತಪ್ಪು ನಿರ್ಣಯ ಮಾಡಿದ್ದರೆ, ಇವರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕಿತ್ತು. ಆದರೆ ಯಾಕೆ ಅವರು ಅದನ್ನ ಮಾಡಿಲ್ಲ. ಡಿ.ಕೆ.ಶಿವಕುಮಾರ್ ತಮ್ಮ ಸ್ವಾರ್ಥಕ್ಕಾಗಿ ಕಾನೂನು, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

    ಡಿ.ಕೆ.ಶಿವಕುಮಾರ್ ಸಿಕ್ಕಿ ಹಾಕಿಕೊಳ್ಳುವ ಕಾಲ ಬಂದಿದೆ. ಇದರಿಂದ ಬಚಾವ್ ಆಗುವುದಕ್ಕೆ ಈಗ ಕೇಸ್ ವಾಪಸ್ ಪಡೆದಿದ್ದಾರೆ. ಈ ಸರ್ಕಾರದಲ್ಲಿ ಇರುವವರೆಲ್ಲ ಸ್ಕ್ಯಾಂಡಲ್‌ನಲ್ಲಿ ‌ಇರೋರೆ. ಒಂದಿಲ್ಲೊಂದು ಹಗರಣದಲ್ಲಿ ಇದ್ದಾರೆ. ಶಿಕ್ಷೆ ಆಗುತ್ತೆ ಅಂತ ಡಿಕೆಶಿಗೆ ಭಯ ಆಗಿದೆ. ನ್ಯಾಯಾಲಯವೇ ಇವರಿಗೆ ತಕ್ಕ ಉತ್ತರ ಕೊಡುವ ಭರವಸೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಮೇಲಿನ CBI ಕೇಸ್‌ ಅನುಮತಿ ವಾಪಸಿಗೆ ನಿರ್ಧಾರ – ವಿಜಯೇಂದ್ರ ಕಿಡಿ