Tag: ಸಿಪಿ ಯೋಗೇಶ್ವರ್

  • ಕಣ್ವ ಜಲಾಶಯದಲ್ಲಿ ಪತ್ನಿಯೊಂದಿಗೆ ಸಿಪಿವೈ ವಾಟರ್ ಬೈಕ್ ರೈಡ್

    ಕಣ್ವ ಜಲಾಶಯದಲ್ಲಿ ಪತ್ನಿಯೊಂದಿಗೆ ಸಿಪಿವೈ ವಾಟರ್ ಬೈಕ್ ರೈಡ್

    ರಾಮನಗರ: ಕಣ್ವ ಜಲಾಶಯದಲ್ಲಿ (Kanwa Reservoir) ಜಲಸಾಹಸ ಕ್ರೀಡೆ ಆರಂಭಕ್ಕೆ ಸಿದ್ಧತೆ ನಡೆಸಿರುವ ಹಿನ್ನೆಲೆ ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ (CP Yogeshwar) ಪತ್ನಿಯೊಂದಿಗೆ ವಾಟರ್ ಬೈಕ್ ನಡೆಸುವ ಮೂಲಕ ಕಾಲಕಳೆದಿದ್ದಾರೆ.ಇದನ್ನೂ ಓದಿ: BBK 11: ರಜತ್‌ಗೆ ಟಾರ್ಗೆಟ್‌- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್‌ ಫಿಕ್ಸಿಂಗ್‌

    ಕಣ್ವ ಜಲಾಶಯದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಜಲಸಾಹಸ ಕ್ರೀಡೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದ್ದು, ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.

    ಭಾನುವಾರ (ಜ.12) ಸಂಜೆ ಸಿ.ಪಿ.ಯೋಗೇಶ್ವರ್ ಪತ್ನಿಯೊಂದಿಗೆ ಆಗಮಿಸಿ ವಾಟರ್ ಬೈಕ್ ರೈಡ್ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಸ್ವತಃ ಪತ್ನಿಯೊಂದಿಗೆ ಬೈಕ್ ರೈಡ್ ಮಾಡಿದ ಎಂಜಾಯ್ ಮಾಡಿದ್ದಾರೆ.ಇದನ್ನೂ ಓದಿ: ಆ್ಯಪಲ್ ಸಹ ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ ಲಾರೆನ್ ಇನ್ಮುಂದೆ ʻಕಮಲಾʼ – ಹಿಂದೂ ಹೆಸರು ನಾಮಕರಣ

  • ಕಾಂಗ್ರೆಸ್‌ನವರು ಯೋಗೇಶ್ವರ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಸುರೇಶ್ ಬಾಬು ಸಲಹೆ

    ಕಾಂಗ್ರೆಸ್‌ನವರು ಯೋಗೇಶ್ವರ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಸುರೇಶ್ ಬಾಬು ಸಲಹೆ

    ಬೆಂಗಳೂರು: ಕಾಂಗ್ರೆಸ್‌ನವರು (Congress) ಯೋಗೇಶ್ವರ್ (CP Yogeshwar) ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್ ಪಕ್ಷದಲ್ಲೇ ಒಡಕು ತರುತ್ತಾರೆ ಹುಷಾರ್ ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ಸಲಹೆ ನೀಡಿದ್ದಾರೆ.

    ನನಗೆ ಟಾಸ್ಕ್ ಕೊಟ್ಟರೆ ಜೆಡಿಎಸ್ (JDS) ಪಕ್ಷವನ್ನ ಖಾಲಿ ಮಾಡ್ತೀನಿ ಎಂಬ ಯೋಗೇಶ್ವರ್ ಮಾತಿಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರು ಯಾರು ಮಾರಾಟ ಆಗಲ್ಲ. ಹಿಂದೆ ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಮಾಡುತ್ತೇನೆ ಎಂದು ಹೇಳಿದ್ದು ಯಾರು? 30 ಜನರನ್ನು ಆಪರೇಷನ್ ಮಾಡುತ್ತೇನೆ ಎಂದು ಇದೇ ಯೋಗೇಶ್ವರ್ ಹೇಳಿದ್ದರು. ಕಾಂಗ್ರೆಸ್ ಅಧ್ಯಕ್ಷರಿಗೆ ಯೋಗೇಶ್ವರ್ ಬಗ್ಗೆ ಎಚ್ಚರಿಕೆ ಇರಲಿ. ನಮ್ಮ ಶಾಸಕರು ಯಾರು ಮಾರಾಟಕ್ಕೆ ಇಲ್ಲ. ನಮ್ಮ ಶಾಸಕರು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳು ಅಲ್ಲ. ನಮ್ಮ ಶಾಸಕರು ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಯಾರು ಪಕ್ಷ ಬಿಟ್ಟು ಹೋಗಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಜಿ.ಟಿ.ದೇವೇಗೌಡರಿಗೆ ಪಕ್ಷದ ಮೇಲೆ ಅಸಮಾಧಾನ ಇರೋದು ಸತ್ಯ: ಸುರೇಶ್ ಬಾಬು

    ಅನೇಕರು ಜೆಡಿಎಸ್ ಮುಗಿದೇ ಹೋಯಿತು ಎಂದು ಹೇಳಿದರು. ಮತ್ತೆ ಫಿನಿಕ್ಸ್ನಂತೆ ಎದ್ದು ಬಂತು. ರಾಜ್ಯದಲ್ಲಿ ಜೆಡಿಎಸ್ ಮುಗಿಸೋಕೆ ಎಂದು ಯೋಗೇಶ್ವರ್ ಹೀಗೆ ಹೇಳುತ್ತಿದ್ದಾರೆ. ಜೆಡಿಎಸ್ ಅನ್ನು ತೆಗೆಯೋಕೆ ಯಾರಿಂದಲೂ ಸಾಧ್ಯವಿಲ್ಲ.ಬೊಮ್ಮಾಯಿ, ದೇವೇಗೌಡರು, ಪಟೇಲ್‌ರು ಕಟ್ಟಿದ ಪಕ್ಷ ಇದು. ಇದು ಕಾರ್ಯಕರ್ತರ ಪಕ್ಷ. ಜೆಡಿಎಸ್ ಪಕ್ಷವನ್ನು ಏನು ಮಾಡಲು ಸಾಧ್ಯವಿಲ್ಲ. ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಳೆ ಮಹಾರಾಷ್ಟ್ರ ಬಿಜೆಪಿ, ಶಿವಸೇನೆ, ಎನ್‌ಸಿಪಿ ಮುಖಂಡರಿಂದ ದೆಹಲಿಯಲ್ಲಿ ಅಮಿತ್ ಶಾ ಭೇಟಿ

  • ಕುಮಾರಸ್ವಾಮಿ ರಣಹೇಡಿ, ಮಗನನ್ನೇ ಗೆಲ್ಲಿಸೋಕೆ ಆಗಿಲ್ಲ ಅಂದ್ರೆ ಕೇಂದ್ರ ಸಚಿವನಾಗಿ ಏನು ಪ್ರಯೋಜನ?: ಸಿಪಿವೈ

    ಕುಮಾರಸ್ವಾಮಿ ರಣಹೇಡಿ, ಮಗನನ್ನೇ ಗೆಲ್ಲಿಸೋಕೆ ಆಗಿಲ್ಲ ಅಂದ್ರೆ ಕೇಂದ್ರ ಸಚಿವನಾಗಿ ಏನು ಪ್ರಯೋಜನ?: ಸಿಪಿವೈ

    ರಾಮನಗರ: ಮಗನನ್ನು ಯುದ್ಧ ಭೂಮಿಗೆ ಕಳುಹಿಸಿ ನೀನು ರಣಹೇಡಿ ಆಗಿಬಿಟ್ಟೆ ಎಂದು ಕುರುಕ್ಷೇತ್ರದ ಕಥೆಯಲ್ಲಿ ಬಭ್ರುವಾಹನ ಹೇಳುತ್ತಾನಲ್ಲ. ಇವತ್ತು ಕುಮಾರಸ್ವಾಮಿಯದ್ದು (HD Kumaraswamy) ಕೂಡ ಅದೇ ಪರಿಸ್ಥಿತಿ. ತನ್ನ ಮಗನನ್ನೇ ಗೆಲ್ಲಿಸಿಕೊಂಡು ಬರಲಿಲ್ಲ ಅಂದರೆ ಕೇಂದ್ರ ಸಚಿವ ಆಗಿ ಏನು ಪ್ರಯೋಜನ ಎಂದು ಚನ್ನಪಟ್ಟಣ ನೂತನ ಶಾಸಕ ಸಿಪಿ ಯೋಗೇಶ್ವರ್ (CP Yogeshwar) ಕಿಡಿಕಾರಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ (JDS) ಅವರು ಸೋತು ಸುಣ್ಣ ಆಗಿದ್ದಾರೆ. ಕುಮಾರಸ್ವಾಮಿ ಬಂಡತನ, ಅವರಿಗೆ ಇದ್ರೆ ಈ ಊರು, ಬಿಟ್ಟರೆ ಇನ್ನೊಂದು ಊರು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಮಾಡಿರುವ ಅದ್ವಾನ ಸರಿಪಡಿಸಬೇಕು. ಕುಮಾರಸ್ವಾಮಿ ಏನು ಆಸಕ್ತಿ, ಕ್ರಮ ಕೈಗೊಂಡಿಲ್ಲ. ಚನ್ನಪಟ್ಟಣ ನಗರ ಸ್ವಚ್ಛ ಮಾಡುವ ಉದ್ದೇಶದಿಂದ ಎಲ್ಲಾ ನಗರಸಭಾ ಸದಸ್ಯರ ಸಭೆ ಕರೆದಿದ್ದೇನೆ. ಚನ್ನಪಟ್ಟಣ ನಗರ ಬಹಳ ದುಸ್ಥಿತಿ ಇದೆ. ಬಸ್‌ಸ್ಟ್ಯಾಂಡ್, ಕಸ, ಯುಜಿಡಿ ಸಮಸ್ಯೆ ಇದೆ. ಇವೆಲ್ಲವನ್ನೂ ಮೊದಲು ಬಗೆಹರಿಸಬೇಕು. ಇಂದು ಸಭೆ ನಡೆಸಿ ನಿರಂತರವಾಗಿ ತಾಲೂಕು ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದರು. ಇದನ್ನೂ ಓದಿ: ನಿಖಿಲ್ ಚುನಾವಣೆಯಲ್ಲಿ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ: ಅನಿತಾ ಕುಮಾರಸ್ವಾಮಿ

    ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುವ ವಿಚಾರವಾಗಿ ಪ್ರತಿಕ್ರಿಯಿಸಿ, ದೇವೇಗೌಡರ ನಾಯಕತ್ವ, ದೇವೇಗೌಡರು ಹುಟ್ಟುಹಾಕಿದ ಪಕ್ಷ ಅದು. ದೇವೇಗೌಡರಿಗೆ ವಯೋಸಹಜ ಇರುವುದರಿಂದ ಪಕ್ಷ ಮುನ್ನಡೆಸಲು ಸಾಧ್ಯ ಆಗುತ್ತಿಲ್ಲ. ಅದಕ್ಕೆ ಪರ್ಯಾಯವಾದ ನಾಯಕತ್ವ ಇಲ್ಲ. ಅದೊಂದು ಕುಟುಂಬ ಪಕ್ಷ. ಕುಮಾರಸ್ವಾಮಿ ಅವರು ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸೀಟು ಪಡೆದುಕೊಂಡಿತ್ತು. ಅದೇ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 136 ಸೀಟು ಗೆದ್ದಿದ್ದಾರೆ. ಈ ಎರಡು ಹೋಲಿಕೆ ನೋಡಿದರೆ ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸುತ್ತಿದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದು ಹೇಳಿದರು. ಇದನ್ನೂ ಓದಿ: ನಾವು ಯಾರಿಗೂ ಎಚ್ಚರಿಕೆ ಕೊಡದೇ ಜನಜಾಗೃತಿ ಮಾಡುವ ಕೆಲಸ ಮಾತ್ರ ಮಾಡಲಿದ್ದೇವೆ – ಅರವಿಂದ ಲಿಂಬಾವಳಿ

    ಇಡೀ ಕುಟುಂಬವೇ ಹೋರಾಟ ಮಾಡಿದರೂ ಚನ್ನಪಟ್ಟಣ ಗೆಲ್ಲಲು ಸಾಧ್ಯ ಆಗಲಿಲ್ಲ. ಅವರನ್ನು ನಂಬಿರೋ ಕಾರ್ಯಕರ್ತರು, ಬಹಳ ಜನ ಶಾಸಕರು ನೊಂದಿದ್ದಾರೆ. ಏನಾದರೂ ಮನಸು ಮಾಡಿದರೆ ಅವರಿಗೆ ಬೇರೆ ಅವಕಾಶ ತಪ್ಪಿದರೆ ನೋಡಬಹುದು. ಪಕ್ಷವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದರು. ಒಕ್ಕಲಿಗ ನಾಯಕತ್ವ ಬದಲಾವಣೆ ಆಗಬೇಕು. ಪರ್ಯಾಯವಾಗಿ ನಾಯಕತ್ವ ಹುಡುಕುತ್ತಿದ್ದಾರೆ. ಮುಂದೆ ಯಾರಿಗೆ ಅವಕಾಶ ಸಿಗುತ್ತದೆ ನೋಡೋಣ. ದೇವೆಗೌಡರ ಕುಟುಂಬದಿಂದ ಆಚೆ ಬರಬೇಕು ಅಂತಾ ಸಮುದಾಯ ತೀರ್ಮಾನ ಮಾಡಿದೆ.ಈ ಚುನಾವಣೆ ಫಲಿತಾಂಶದಿಂದಲೇ ಗೊತ್ತಾಗಿದೆ. ಅವರ ಕುಟುಂಬದಲ್ಲಿ ನಡೆದಿರುವ ಹಲವಾರು ಬೆಳವಣಿಗೆಗಳಿಂದ ಸಮುದಾಯ ಬೇಸತ್ತಿದೆ. ಆ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕರಿಗೆ ನೋವಾಗಿದೆ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಅವಕಾಶ ಸಿಕ್ಕಿದರೆ ನೋಡೊಣ ಎಂದು ನುಡಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಈಗ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ, ಮೂವರು ಸಾವು – ಆಸ್ಪತ್ರೆಗೆ 35 ಕೋಟಿ ನಷ್ಟ

    ಯೋಗೆಶ್ವರ್ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರಾ ಎಂಬ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ನಾನು ಯಾವಾಗ ಕಾಂಗ್ರೆಸ್ ಬಿಡುತ್ತೇನೆ ಎಂದಿದ್ದೇನೆ? ಬಿಜೆಪಿ ಪಕ್ಷದಿಂದ ಆಚೆ ತಳ್ಳಲ್ಪಟ್ಟವನು ನಾನು. ನಾನೇನು ಬಿಜೆಪಿ ಬಿಟ್ಟು ಬರಲಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಿತೂರಿಯಿಂದ ನಾನು ಆಚೆ ಬಂದಿದ್ದೇನೆ. ನಾನು ಏನು ಅಲ್ಲಿಂದ, ಇಲ್ಲಿಂದ ಹಾರೋನು ಅಲ್ಲ. ಅನಿವಾರ್ಯ, ರಾಜಕೀಯ ಸ್ಥಿತಿ ನನ್ನನ್ನು ಆ ರೀತಿ ಮಾಡಿದೆ. ನಾನು ಕೊನೆ ದಿನದವರೆಗೂ ಕಾದು ರಾಜಕೀಯ ನಿರ್ಣಯ ತೆಗೆದುಕೊಂಡಿದ್ದೇನೆ. ನಾವು ಕಟ್ಟಿದ ಮನೆಯಿಂದ ಆಚೆ ಹಾಕಿದ ಮೇಲೆ ಬೇರೆ ಮನೆ ಹುಡುಕಿಕೊಳ್ಳಬೇಕು. ನಾನು ಪಕ್ಕಾ ಕಾಂಗ್ರೆಸ್ಸಿಗ, ಪಕ್ಷ ಬಿಡಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿಎಂ ಬೇರೆ ಸಮುದಾಯಗಳಿಗೆ ಸ್ಪಂದನೆ ನೀಡುತ್ತಿದ್ದಾರೆ, ನಮ್ಮ ಸಮುದಾಯಕ್ಕೆ ಸ್ಪಂದನೆ ಇಲ್ಲ- ಜಯಮೃತ್ಯುಂಜಯ ಸ್ವಾಮೀಜಿ

  • ಈಗ ಚರ್ಚಿಸಿದ್ರೆ ಪ್ರಯೋಜನ ಇಲ್ಲ – ನಿಖಿಲ್‌ ಸೋಲಿನ ಬಳಿಕ ಹೆಚ್‌ಡಿಕೆ ಫಸ್ಟ್‌ ರಿಯಾಕ್ಷನ್‌

    ಈಗ ಚರ್ಚಿಸಿದ್ರೆ ಪ್ರಯೋಜನ ಇಲ್ಲ – ನಿಖಿಲ್‌ ಸೋಲಿನ ಬಳಿಕ ಹೆಚ್‌ಡಿಕೆ ಫಸ್ಟ್‌ ರಿಯಾಕ್ಷನ್‌

    – ದೆಹಲಿಗೆ ಹೊರಟ ಕುಮಾರಸ್ವಾಮಿ

    ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಗನ ಸೋಲಿನ ಬಳಿಕ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಮೊದಲ ಪ್ರತಿಕ್ರಿಯೆ ನೀಡಿದರು.

    ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫಲಿತಾಂಶ ಬಂದಾಗಿದೆ, ಈಗ ಏನು ಚರ್ಚೆ ಮಾಡಿದರೂ ಪ್ರಯೋಜನ ಇಲ್ಲ. ಫಲಿತಾಂಶ ಒಪ್ಪಿಕೊಳ್ಳಲೇಬೇಕು. ಏನೇ ಇದ್ರೂ ಆಮೇಲೇ ಮಾತಾಡ್ತೇನೆ ಎಂದು ಬೇಸರದಿಂದಲೇ ಹೊರಟರು. ಇದನ್ನೂ ಓದಿ: ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ – ಪರಮೇಶ್ವರ್‌

    ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ ಬಳಿಕ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳದ ಹೆಚ್‌ಡಿಕೆ, ಜೆ.ಪಿ ನಗರದ ನಿವಾಸದಲ್ಲಿಯೇ ಇದ್ದರು, ಪುತ್ರ ನಿಖಿಲ್ ಸಹ ಜೊತೆಗಿದ್ದರು. ಇದನ್ನೂ ಓದಿ: ಉತ್ತರ ಪ್ರದೇಶ | ಜಾಮಾ ಮಸೀದಿ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ

    ಇಂದು ದೆಹಲಿಗೆ ಹೆಚ್‌ಡಿಕೆ:
    ನವೆಂಬರ್‌ 25ರಂದು (ನಾಳೆ) ಸಂಸತ್‌ ಚಳಿಗಾಲದ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆ ಸಚಿವ ಕುಮಾರಸ್ವಾಮಿ ಇಂದೇ ದೆಹಲಿಗೆ ತೆರಳುತ್ತಿದ್ದಾರೆ. ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ಇಂದು ಮಧ್ಯಾಹ್ನ 12.30ರ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಲಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಖಾತೆ ತೆರೆಯದ ʻಜನ್‌ ಸೂರಜ್‌ʼ – ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್‌ಗೆ ಮುಖಭಂಗ

    ಚನ್ನಪಟ್ಟಣ ಫಲಿತಾಂಶ – ಯಾರಿಗೆ ಎಷ್ಟು ಮತ?
    * ಯೋಗೇಶ್ವರ್ – ಕಾಂಗ್ರೆಸ್ – ಗೆಲುವು – 1,12,642 ಮತ
    * ನಿಖಿಲ್ – ಎನ್‌ಡಿಎ – ಸೋಲು – 87,229 ಮತ
    * ಕಾಂಗ್ರೆಸ್ ಗೆಲುವಿನ ಅಂತರ – 25,413 ಮತ

  • ಬೊಂಬೆನಗರಿಯಲ್ಲಿ ಯೋಗೇಶ್ವರ್ ಮ್ಯಾಜಿಕ್‌ ಹೇಗಾಯ್ತು? ಹಿಂದೆ ಯಾವ ಪಕ್ಷದಿಂದ ಯಾವಾಗ ಗೆದ್ದಿದ್ದರು?

    ಬೊಂಬೆನಗರಿಯಲ್ಲಿ ಯೋಗೇಶ್ವರ್ ಮ್ಯಾಜಿಕ್‌ ಹೇಗಾಯ್ತು? ಹಿಂದೆ ಯಾವ ಪಕ್ಷದಿಂದ ಯಾವಾಗ ಗೆದ್ದಿದ್ದರು?

    ಬೆಂಗಳೂರು: ಕರ್ನಾಟಕದ ಮೂವರ ರಾಜೀನಾಮೆಯಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೂ ರಾಜ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡಿದ್ದು ಹೈವೋಲ್ಟೇಜ್ ಕಣ ಚನ್ನಪಟ್ಟಣ. ತುರುಸಿನ ಸ್ಪರ್ಧೆಯಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar) ಗೆಲುವಿನ ನಗಾರಿ ಬಾರಿಸಿದ್ದಾರೆ.

    ಕಾಂಗ್ರೆಸ್ ರೂಪಿಸಿದ ಚಕ್ರವ್ಯೂಹ ಬೇಧಿಸುವಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) 3ನೇ ಬಾರಿ ವಿಫಲರಾಗಿದ್ದಾರೆ. ಈ ಪ್ರತಿಷ್ಠೆಯ ರಾಜಕೀಯ ಆಟದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೈ ಮೇಲಾಗಿದೆ. ಸ್ವಂತ ಕ್ಷೇತ್ರದಲ್ಲಿ ಪುತ್ರನನ್ನು ಗೆಲ್ಲಿಸಲಾಗದೇ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮುಜುಗರ ಅನುಭವಿಸಿದ್ದಾರೆ.

    ದೇವೇಗೌಡರು (Devegowda) ನಿರಂತರ 10 ದಿನ ಪ್ರಚಾರ ನಡೆಸಿ ಅಬ್ಬರಿಸಿದರೂ, ಬಿಜೆಪಿ ನಾಯಕರು ಬಂದು ಸಂಘಟಿತವಾಗಿ ಪ್ರಚಾರ ನಡೆಸಿದ್ರೂ, ಅದು ನಿಖಿಲ್‌ಗೆ ಗೆಲುವು ತಂದುಕೊಡಲಿಲ್ಲ. ಮತ ಎಣಿಕೆಯ ಮೊದಲ ಸುತ್ತಲ್ಲಿ ಕಾಂಗ್ರೆಸ್ ಅಲ್ಪಮತಗಳ ಮುನ್ನಡೆ ಸಿಕ್ಕಿತ್ತು. ನಂತರದ 4 ಸುತ್ತುಗಳಲ್ಲಿ ನಿಖಿಲ್ ಮುನ್ನಡೆ ಸಿಕ್ಕಿದರೂ ಹೀಗೆ ಮುಂದುವರೆಯಲಿಲ್ಲ. ಆರನೇ ಸುತ್ತಿನಿಂದ ಆರಂಭವಾದ ಯೋಗೇಶ್ವರ್ ಜೈತ್ರಯಾತ್ರೆ ಕೊನೆವರೆಗೂ ನಿಲ್ಲಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಲ್ಲಿ ಮುಳುಗಿದರೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮೌನಕ್ಕೆ ಶರಣಾದ್ರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ? ಆರ್‌ಎಸ್‌ಎಸ್‌ ಏನೇನು ಕಾರ್ಯತಂತ್ರ ಮಾಡಿತ್ತು?

     

    ಚನ್ನಪಟ್ಟಣ ಫಲಿತಾಂಶ
    * ಯೋಗೇಶ್ವರ್ – 1,12,642 ಮತ
    * ನಿಖಿಲ್ – 87,229 ಮತ
    * ಕಾಂಗ್ರೆಸ್ ಗೆಲುವಿನ ಅಂತರ – 25,413 ಮತ

    ಚನ್ನಪಟ್ಟಣ ರಿಸಲ್ಟ್ ಟ್ರೆಂಡ್ಸ್
    * 1ನೇ ಸುತ್ತು – ಯೋಗೇಶ್ವರ್‌ಗೆ 49 ಮತಗಳ ಮುನ್ನಡೆ (ಗ್ರಾಮೀಣ)
    * 2ನೇ ಸುತ್ತು – ನಿಖಿಲ್‌ಗೆ 135 ಮತಗಳ ಮುನ್ನಡೆ (ಗ್ರಾಮೀಣ)
    * 5ನೇ ಸುತ್ತು – ನಿಖಿಲ್‌ಗೆ 1306 ಮತಗಳ ಮುನ್ನಡೆ (ಗ್ರಾಮೀಣ)
    * 6ನೇ ಸುತ್ತು – ಯೋಗೇಶ್ವರ್‌ಗೆ 783 ಮತಗಳ ಮುನ್ನಡೆ (ನಗರ)
    * 10ನೇ ಸುತ್ತು – ಯೋಗೇಶ್ವರ್‌ಗೆ 19,799 ಮತಗಳ ಮುನ್ನಡೆ (ನಗರ)
    * 20ನೇ ಸುತ್ತು – 25,515 ಮತಗಳ ಅಂತರದಿಂದ ಯೋಗೇಶ್ವರ್ ಗೆಲುವು
    ಇದನ್ನೂ ಓದಿ: ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು

     
    ಗೆದ್ದಿದ್ದು ಹೇಗೆ?
    * ಯೋಗೇಶ್ವರ್ ಕೈ ಹಿಡಿದ ಮುಸ್ಲಿಂ ಮತ
    * ಯೋಗೇಶ್ವರ್ ಕೈ ಹಿಡಿದ `ಪಟ್ಟಣ’ದ ಮತ
    * ಒಕ್ಕಲಿಗ ಮತ ವಿಭಜನೆ- ನಿಖಿಲ್ ಸೋಲು
    * ಯೋಗೇಶ್ವರ್ ಕೈ ಹಿಡಿದ `ಗೃಹಲಕ್ಷ್ಮಿಯರʼ ʼಶಕ್ತಿ’
    * ಸಿಪಿವೈ ವೈಯಕ್ತಿಕ ವರ್ಚಸ್ಸು – 2 ಸೋಲಿನ ಅನುಕಂಪ
    * ಬಿಜೆಪಿಯ `ವಕ್ಫ್’ ವಿರೋಧಿ ನೀತಿ-ನಿಖಿಲ್‌ಗೆ ಹೊಡೆತ
    * ಕಾಂಗ್ರೆಸ್‌ಗೆ ಪ್ಲಸ್ ಆದ ಜಮೀರ್ ವಿವಾದಿತ ಮಾತು
    * ಕೈಗೂಡದ ದೇವೇಗೌಡರು- ಹೆಚ್‌ಡಿಕೆ ರಣತಂತ್ರ

    ʼಸೈನಿಕʼನ ಕಲರ್‌ಫುಲ್‌ ಜರ್ನಿ
    1999 – ಚನ್ನಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು
    2004 – ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯ
    2008 – ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜಯ
    2009 – ಉಪಚುನಾವಣೆಯಲ್ಲಿ ಜೆಡಿಎಸ್‌ ವಿರುದ್ಧ ಯೋಗೇಶ್ವರ್ ಸೋಲು
    2011 – ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು
    2013 – ಸಮಾಜವಾದಿ ಅಭ್ಯರ್ಥಿಯಾಗಿ ಗೆಲುವು
    2018 – ಬಿಜೆಪಿ ಅಭ್ಯರ್ಥಿಯಾಗಿ ಸೋಲು
    2023 – ಬಿಜೆಪಿ ಅಭ್ಯರ್ಥಿಯಾಗಿ ಸೋಲು, ಬಿಜೆಪಿ MLC ಆಗಿ ಆಯ್ಕೆ
    2024 – ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು

  • ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ, ದೇವೇಗೌಡ್ರ ಹೋರಾಟದಲ್ಲಿ ಸ್ವಾರ್ಥವಿತ್ತು: ಯೋಗೇಶ್ವರ್

    ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ, ದೇವೇಗೌಡ್ರ ಹೋರಾಟದಲ್ಲಿ ಸ್ವಾರ್ಥವಿತ್ತು: ಯೋಗೇಶ್ವರ್

    – ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ, ಸಿಎಂ, ಡಿಸಿಎಂ, ನನ್ನ ಆಪ್ತ ಸುರೇಶ್‌ಗೆ ಅರ್ಪಿಸುತ್ತೇನೆ

    ರಾಮನಗರ: ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ, ಸಿಎಂ ಸಿದ್ದರಾಮಯ್ಯ(CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹಾಗೂ ನನ್ನ ಆಪ್ತ ಸುರೇಶ್‌ಗೆ ಅರ್ಪಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar) ಸಂತಸ ವ್ಯಕ್ತಪಡಿಸಿದ್ದರು.

    ಚನ್ನಪಟ್ಟಣ (Channapatna) ಉಪಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ (Congress) ಪಕ್ಷದಿಂದ ಸ್ಪರ್ಧಿಸಿದ್ದ ಯೋಗೇಶ್ವರ್ 25,515 ಮತಗಳ ಅಂತರದಿಂದ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ (Nikhil Kumarswamy) ವಿರುದ್ಧ ಗೆಲುವು ಸಾಧಿಸಿದ್ದಾರೆ.ಇದನ್ನೂ ಓದಿ: ಅಭಿವೃದ್ಧಿಗೆ ಒಲವು, ಗ್ಯಾರಂಟಿಗೆ ಗೆಲುವು – ಬೈಎಲೆಕ್ಷನ್‌ ಫಲಿತಾಂಶಕ್ಕೆ ಕಾಂಗ್ರೆಸ್‌ ಸಂತಸ

    ಗೆಲುವಿನ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ನಾನು ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ನಿರೀಕ್ಷೆ ಮಾಡಿದ್ದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಮಾಹಿತಿ ಕೊಟ್ಟಿದ್ದೆ. ನನ್ನ ನಿರೀಕ್ಷೆಗೆ ಹತ್ತಿರವಾದ ಗೆಲುವು. ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ, ಮುಖ್ಯಮಂತ್ರಿಗೆ, ಉಪಮುಖ್ಯಮಂತ್ರಿಗೆ ಮತ್ತು ನನ್ನ ಜೊತೆ ಇದ್ದ ಸುರೇಶ್‌ಗೆ ಅರ್ಪಿಸುತ್ತೇನೆ ಎಂದು ಹೇಳಿದರು.

    ಜೆಡಿಎಸ್ ಅಂತಿಮ ದಿನಗಳನ್ನ ಎಣಿಸುತ್ತಿದೆ ಎಂದು ಹೇಳಲು ಬಯಸುತ್ತೇನೆ. ದೇವೇಗೌಡರು ಹೋರಾಟದಲ್ಲಿ ಸಾಮಾಜಿಕ ಕಳಕಳಿ ಇರಲಿಲ್ಲ. ಕೇವಲ ಸ್ವಾರ್ಥ ಇತ್ತು. ಕುಟುಂಬದವರನ್ನ ಬೆಳೆಸುವ ಹೋರಾಟ ಇತ್ತು. ಒಕ್ಕಲಿಗರ ನಾಯಕತ್ವವನ್ನ ದೇವೇಗೌಡರ ಕುಟುಂಬದಿಂದ ಜನ ಕಿತ್ತುಕೊಂಡಿದ್ದಾರೆ. ಅವರ ಹಠ, ಛಲ ನೋಡಿ ನಾನು ಆಲೋಚನೆ ಮಾಡಿದ್ದೆ ಆದರೆ ಅದಕ್ಕೆ ಜನ ಸೊಪ್ಪು ಹಾಕಲಿಲ್ಲ. ನಿಖಿಲ್ ಇನ್ನೂ ಯುವಕ. ಆತನಿಗೆ ಒಳ್ಳೆದಾಗಲಿ. ನಿಖಿಲ್ 36 ವರ್ಷದ ಯುವಕ 63 ವರ್ಷದವರ ಥರ ಮಾತನಾಡುತ್ತೇನೆ. ದೇವೇಗೌಡರು ತಮ್ಮ ಸಂಧ್ಯಕಾಲದಲ್ಲಿ ಮೊಮ್ಮಗನ ಪರ ಪ್ರಚಾರ ಮಾಡಿದ್ದರೂ ಕೂಡ ಏನು ಆಗಲಿಲ್ಲ. ಇನ್ನು ಮುಂದೆಯೂ ಆರಾಮಾಗಿ ಇರಲ್ಲ. 100ಕ್ಕೆ 100 ಭಾಗ ಒಕ್ಕಲಿಗರ ಒಲವನ್ನ ದೇವೇಗೌಡರ ಕುಟುಂಬ ಕಳೆದಕೊಳ್ಳುತ್ತಿದೆ ಎಂದು ಹೇಳಿದರು.

    ವಿಜಯೇಂದ್ರ ಅವರು ನನ್ನ ಬ್ಯಾಟರಿ ವೀಕ್ ಆಗಿದೆ ಎಂದು ಹೇಳಿದ್ದರು ಆದರೆ ಅವರ ಬ್ಯಾಟರಿ ವೀಕ್ ಆದಾಗ ನಾನು ಚಾರ್ಜ್ ಮಾಡಿದ್ದೆ. ವಿಜಯೇಂದ್ರ, ಯಡಿಯೂರಪ್ಪ ಷಡ್ಯಂತ್ರದಿಂದ ನಾನು ಎನ್‌ಡಿಎ ಬಿಟ್ಟೆ. ಇವತ್ತು ಹಳೇ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ನಾಯಕತ್ವವನ್ನು ನಮ್ಮ ಜನ ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿಗೆ ಅಧಿಕಾರ ದಾಹವಿದೆ. ಹಾಗಾಗಿ ಯಾರನ್ನು ಸಹಿಸಲ್ಲ, ಅಪ್ಪನ್ನು ಸಹಿಸಲ್ಲ, ಮಗನನ್ನು ಸಹಿಸಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ ನಿಖಿಲ್ ಅವರನ್ನು ನಿಲ್ಲಿಸಿದ್ದರೆ ಈ ಬಾರಿ ಗೆಲ್ಲುತ್ತಿದ್ದರೇನೋ? ರಾಜೀನಾಮೆ ಕೊಟ್ಟು ಮಂಡ್ಯಕ್ಕೆ ಹೋಗುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಸಂಡೂರು ಸೋಲನ್ನ ಒಪ್ಪಿಕೊಳ್ತೇವೆ, 2028ಕ್ಕೆ ಬಂಗಾರು ಗೆಲ್ತಾರೆ: ಜನಾರ್ದನ ರೆಡ್ಡಿ

  • ಚನ್ನಪಟ್ಟಣದಲ್ಲಿ ಗೆದ್ದ ಸೈನಿಕ, ಸೋತ ಅಭಿಮನ್ಯು

    ಚನ್ನಪಟ್ಟಣದಲ್ಲಿ ಗೆದ್ದ ಸೈನಿಕ, ಸೋತ ಅಭಿಮನ್ಯು

    ರಾಮನಗರ: ಚನ್ನಪಟ್ಟಣದಲ್ಲಿ (Channapatna By Election) ಸಿಪಿ ಯೋಗೇಶ್ವರ್‌ (CP yogeshwar) ಗೆದ್ದು ಬೀಗಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿಯಿಂದ (BJP) ಕಾಂಗ್ರೆಸ್‌ಗೆ (Congress) ಜಂಪ್‌ ಆದರೂ ಜನತೆ ಯೋಗೇಶ್ವರ್‌ ಕೈಹಿಡಿದಿದ್ದಾರೆ.

    ಮೊದಲ 6 ಸುತ್ತಿನಲ್ಲಿ ನಿಖಿಲ್‌ ಮುನ್ನಡೆಯಲ್ಲಿದ್ದರು. ಆದರೆ ಚನ್ನಪಟ್ಟಣ ನಗರದ ಇವಿಎಂ (EVM) ಓಪನ್‌ ಆಗುತ್ತಿದ್ದಂತೆ ಯೋಗೇಶ್ವರ್‌ ಅವರಿಗೆ ಭರ್ಜರಿ ಮುನ್ನಡೆ ಸಿಕ್ಕಿತ್ತು. ಈ ಮುನ್ನಡೆಯನ್ನು ಯೋಗೇಶ್ವರ್‌ ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರು.

    ಯೋಗೇಶ್ವರ್‌ 25,357 ಮತಗಳಿಂದ ಗೆಲುವು ದಾಖಲಿಸಿದ್ದಾರೆ. 20 ಸುತ್ತುಗಳ ಮತ ಎಣಿಕೆಯ ನಂತರ ಯೋಗೇಶ್ವರ್‌ 1,12,388 ಮತಗಳನ್ನು ಪಡೆದರೆ ನಿಖಿಲ್‌ ಕುಮಾರಸ್ವಾಮಿ 87,031 ಮತಗಳನ್ನು ಪಡೆದರು.


    ಗೆಲ್ಲಲು ಕಾರಣ ಏನು?
    ಯೋಗೇಶ್ವರ್‌ಗೆ 2 ಬಾರಿ ಸೋಲಿನ ಅನುಕಂಪ ಕೈ ಹಿಡಿದಿದೆ. ಎರಡು ಬಾರಿ ಶಾಸಕರಾಗಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಬರಲಿಲ್ಲ ಎಂಬ ಬೇಸರ ಇತ್ತು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸೋಲಿನ ನಂತರ ಡಿಕೆ ಬ್ರದರ್ಸ್ ಚನ್ನಪಟ್ಟಣವನ್ನು ಪ್ರತಿಷ್ಟೆಯಾಗಿ ತಗೆದುಕೊಂಡಿದ್ದರು.

    ಚುನಾವಣೆಗೆ 4 ತಿಂಗಳು ಮೊದಲೇ ಡಿಸಿಎಂ ಡಿಕೆ ಶಿವಕುಮಾರ್‌ ಜನತಾ ದರ್ಶನ ಆರಂಭಿಸಿದ್ದರು. ಕಳೆದ ಬಾರಿ ಯೋಗೇಶ್ವರ್‌ಗೆ ಮಿಸ್ ಆಗಿದ್ದ ಅಲ್ಪ ಸಂಖ್ಯಾತ ಮತಗಳು ಈ ಬಾರಿ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಕೈ ಹಿಡಿದಿದೆ.

    ಸಚಿವ ಜಮೀರ್ ಹೇಳಿಕೆ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್‌ಗೆ ಡ್ಯಾಮೇಜ್ ಆಗಿಲ್ಲ. ಆಧುನಿಕ ಭಗೀರಥ ಫೈಟ್‌ನಲ್ಲಿ ಚನ್ನಪಟ್ಟಣ ಕೆರೆಗೆ ನೀರು ತುಂಬಿಸಿದ ಇಮೇಜ್‌ನಲ್ಲಿ ಜನರು ಯೋಗೇಶ್ವರ್‌ ಕೈ ಹಿಡಿದಿದ್ದಾರೆ.

     

  • ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌ಗೆ ಭಾರೀ  ಮುನ್ನಡೆ

    ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌ಗೆ ಭಾರೀ ಮುನ್ನಡೆ

    ರಾಮನಗರ: ಚನ್ನಪಟ್ಟಣದಲ್ಲಿ (Channapatna) ಹಾವು ಏಣಿ ಆಟ ಆರಂಭವಾಗಿದೆ. 6 ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆಯಲ್ಲಿದ್ದ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) 7ನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

    ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್‌ (CP Yogeshwar) ಅವರಿಗೆ 11,178 ಮತಗಳ ಮುನ್ನಡೆ ಸಿಕ್ಕಿದೆ. ನಗರದ ಪ್ರದೇಶದ ಎಣಿಕಾ ಕಾರ್ಯದಲ್ಲಿ ಸಿಪಿವೈ ಮುನ್ನಡೆ ಸಾಧಿಸಿದ್ದಾರೆ.

    ನಗರ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮತಗಳು ಜಾಸ್ತಿ ಇರುವ ಕಾರಣ ಕಾಂಗ್ರೆಸ್‌ಗೆ ಬಿದ್ದಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಚನ್ನಪಟ್ಟಣದಲ್ಲಿ ಒಟ್ಟು 20 ಸುತ್ತುಗಳಿವೆ. ಚನ್ನಪಟ್ಟಣದಲ್ಲಿ ಯಾರೇ ಗೆದ್ದರೂ 3-5 ಸಾವಿರ ಅಂತರಗಳಿಂದ ಗೆಲವು ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಉಳಿದ 13 ಸುತ್ತುಗಳಲ್ಲಿ ಯಾರಿಗೆ ಮುನ್ನಡೆ ಸಿಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

  • ಉಪಚುನಾವಣಾ ಕಣದಲ್ಲಿ ಬೆಟ್ಟಿಂಗ್ ಭರಾಟೆ – ಕುತೂಹಲ ಹೆಚ್ಚಿಸಿದ ಚನ್ನಪಟ್ಟಣ ಫಲಿತಾಂಶ

    ಉಪಚುನಾವಣಾ ಕಣದಲ್ಲಿ ಬೆಟ್ಟಿಂಗ್ ಭರಾಟೆ – ಕುತೂಹಲ ಹೆಚ್ಚಿಸಿದ ಚನ್ನಪಟ್ಟಣ ಫಲಿತಾಂಶ

    ರಾಮನಗರ: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಭರಾಟೆ ಮುಗಿದಿದೆ. ಇನ್ನೇನಿದ್ದರೂ ಫಲಿತಾಂಶ ಬರಬೇಕು. ಈ ನಡುವೆ ಗೆಲ್ಲುವ ಕುದುರೆ ಯಾರೆಂಬ ಲೆಕ್ಕಾಚಾರ ತೀವ್ರಗೊಂಡಿದೆ. ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಶಿಗ್ಗಾಂವಿ, ಸಂಡೂರು ಕ್ಷೇತ್ರಕ್ಕಿಂತ ಚನ್ನಪಟ್ಟಣವೇ (Channapatna) ಎಲ್ಲರ ಫೇವರೆಟ್ ಆಗಿದೆ. ದೊಡ್ಡ ಮಟ್ಟದಲ್ಲೇ ಇಲ್ಲಿ ಬಾಜಿ ನಡೆಯುತ್ತಿದೆ.

    ಇಡೀ ರಾಜ್ಯದ ಗಮನ ಸೆಳೆದಿದ್ದ ಚನ್ನಪಟ್ಟಣ ಉಪಚುನಾವಣೆಯ (By Election) ಮತದಾನ ಮುಗಿದಿದ್ದು, ಇದೀಗ ಕ್ಷೇತ್ರದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಜೊತೆಗೆ ಬೆಟ್ಟಿಂಗ್ ಭರಾಟೆ ಕೂಡಾ ಹೆಚ್ಚಾಗಿದೆ. ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹಾಗೂ ಸಿ.ಪಿ ಯೋಗೇಶ್ವರ್ (CP Yogeshwar) ತುರುಸಿನ ಫೈಟ್ ನಡೆದಿದೆ. ಈ ಚುನಾವಣೆ ತೀವ್ರ ಹಣಾಹಣಿಗೆ ಕಾರಣವಾಗಿದೆ. ಹೀಗಾಗಿ ಚನ್ನಪಟ್ಟಣದತ್ತ ಬೆಟ್ಟಿಂಗ್‌ದಾರರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ವರ್ಣ ನಿಂದನೆ – ಜಮೀರ್ ವಿರುದ್ಧ ದೂರು

    ಸೋಲು, ಗೆಲುವು ಹಾಗೂ ಗೆಲುವಿನ ಅಂತರಕ್ಕೆ ಲಕ್ಷ ಲಕ್ಷ ಹಣ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಚನ್ನಪಟ್ಟಣ ತಾಲೂಕು ಮಾತ್ರವಲ್ಲದೇ ಅಕ್ಕಪಕ್ಕದ ತಾಲೂಕುಗಳು, ಜಿಲ್ಲೆಗಳಲ್ಲೂ ಸಹ ಫಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಅಲ್ಲದೇ ಗುರುವಾರ ಸಿ.ಪಿ.ಯೋಗೇಶ್ವರ್ ಹೇಳಿಕೆ ಬಳಿಕವೂ ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ಕೂಡಾ ಹೆಚ್ಚಾಗಿದೆ. ಯಾವ ಭಾಗದಲ್ಲಿ ಯಾರಿಗೆ ಲೀಡ್, ಎಷ್ಟು ಮತಗಳು ಲೀಡ್ ಸೇರಿದಂತೆ ಇನ್ನಿತರ ವಿಚಾರಗಳ ಮೇಲೂ ಒನ್ ಟು ಡಬಲ್ ಎಂಬತೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 10 ಮಕ್ಕಳು ಸಜೀವ ದಹನ

    ಚುನಾವಣೆಯ ಕೊನೆಯ ಹಂತದಲ್ಲಿ ಸಚಿವ ಜಮೀರ್ ಅಹ್ಮದ್ (Zameer Ahmed) ನೀಡಿದ್ದ ‘ಕರಿಯ’ ಹೇಳಿಕೆ ಚುನಾವಣೆಯಲ್ಲಿ ಪ್ರಭಾವ ಬೀರಿದೆ. ಇದನ್ನು ಸ್ವತಃ ಸಿಪಿವೈ ಒಪ್ಪಿಕೊಂಡಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಗೆಲ್ಲುವ ಬಗ್ಗೆ ಪೂರ್ತಿ ವಿಶ್ವಾಸವನ್ನು ಅವರು ವ್ಯಕ್ತಪಡಿಸಿಲ್ಲ. ಸಿಪಿವೈ ಈ ಹೇಳಿಕೆ ಬೆಟ್ಟಿಂಗ್ ಮೇಲೂ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಆಫ್ರಿಕಾ ವಿರುದ್ಧ ದಾಖಲೆಯ ಜಯದೊಂದಿಗೆ ಸರಣಿ ಗೆದ್ದ ಟೀಂ ಇಂಡಿಯಾ

    ಚನ್ನಪಟ್ಟಣದ ಜೊತೆಗೆ ಮಂಡ್ಯದವರೂ (Mandya) ಕೂಡ ಹೆಚ್ಚಿನ ಪ್ರಮಾಣದಲ್ಲಿ ಬೆಟ್ಟಿಂಗ್‌ಗೆ ಇಳಿದಿದ್ದಾರೆ. ಮಂಡ್ಯ ಜಿಲ್ಲೆಯದ್ದಾಗಲಿ, ಪಕ್ಕದ ಜಿಲ್ಲೆಯದ್ದಾಗಲಿ ಒಂದು ಕೈ ನೋಡೇ ಬಿಡೋಣಾ ಎಂದು ಬೆಟ್ಟಿಂಗ್ ಕಟ್ಟುತ್ತಾರೆ. ಇದೀಗ ಮಂಡ್ಯ ಜಿಲ್ಲೆಯ ಜನರ ಕಣ್ಣು ಬಿದ್ದಿರೋದು ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಮೇಲೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡಿದ್ದು ಸಹ ಮಂಡ್ಯ ಜಿಲ್ಲೆಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು. ಮತದಾನದ ಬಳಿಕ ಕಾರ್ಯಕರ್ತರು ಮಾತ್ರವಲ್ಲ ಸಾಮಾನ್ಯ ಜನರು ಸಹ ಈ ಫಲಿತಾಂಶದ ಮೇಲೆ ಬಾಜಿ ಕಟ್ಟುತ್ತಿದ್ದಾರೆ. ಇದೀಗ ಯೋಗೇಶ್ವರ್ ಯಾರೇ ಗೆದ್ದರೂ ಕೂದಳೆಯ ಅಂತರದಲ್ಲಿ ಗೆಲ್ಲುತ್ತಾರೆ ಎಂಬ ಹೇಳಿಕೆ ಬಳಿಕ ಬೆಟ್ಟಿಂಗ್ ಲೆಕ್ಕಾಚಾರ ಬದಲಾಗಿದೆ. ಇದನ್ನೂ ಓದಿ: ಹಾಸನ| 1.49 ಕೋಟಿ ಹಣ ದುರುಪಯೋಗ ಆರೋಪ – ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಅಮಾನತು

    50:50 ಅನುಪಾತದಲ್ಲಿ ಬೆಟ್ಟಿಂಗ್ ನಡೆದಿದೆ. ಈಗ ಸದ್ಯ ಒಂದು ಲಕ್ಷಕ್ಕೆ ಒಂದು ಲಕ್ಷ ಎಂಬಂತೆ ಸ್ಟ್ರೈಟ್ ಫೈಟ್ ಬೆಟ್ಟಿಂಗ್ ಮಾಡಲಾಗುತ್ತಿದೆ. ಸಕ್ಕರೆ ನಾಡಲ್ಲಿ ಬೊಂಬೆ ನಗರಿಯ ಅಧಿಪತಿ ಯಾರು ಎಂದು ಬೆಟ್ಟಿಂಗ್ ನಡೆಯುತ್ತಿದೆ. ಮೂಲಗಳ ಪ್ರಕಾರ ಚನ್ನಪಟ್ಟಣ ಹಾಗೂ ರಾಮನಗರ ಜಿಲ್ಲೆಗಿಂತ ಮಂಡ್ಯ ಜಿಲ್ಲೆಯಲ್ಲಿಯೇ ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಬೆಟ್ಟಿಂಗ್ ಕಾನೂನು ಬಾಹಿರವಾದರೂ ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವಾ ಅನ್ನೋ ಹಾಡು ಇದೀಗ ಚನ್ನಪಟ್ಟಣ ಚುನಾವಣೆಗೆ ಅನ್ವಯಿಸುತ್ತಿದೆ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಸಚಿವ ಜಮೀರ್‌ ಅಹ್ಮದ್‌ಗೆ ಲೋಕಾಯುಕ್ತ ನೋಟಿಸ್‌

  • ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಯೋಗೇಶ್ವರ್ ಗೆಲುವಿಗೆ ಪತ್ನಿಯಿಂದ ಹೋಮ

    ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಯೋಗೇಶ್ವರ್ ಗೆಲುವಿಗೆ ಪತ್ನಿಯಿಂದ ಹೋಮ

    ಮಂಡ್ಯ: ಚನ್ನಪಟ್ಟಣ ಉಪಚುನಾವಣೆಯಲ್ಲಿ (Channapatna By Election) ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ (CP Yogeshwar) ಗೆಲವು ಸಾಧಿಸಬೇಕೆಂದು ಯೋಗೇಶ್ವರ್ ಪತ್ನಿ ಶೀಲಾ ಮಂಡ್ಯ (Mandya) ಜಿಲ್ಲೆಯ ಮದ್ದೂರಿನ (Maddur) ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹೋಮ ಮಾಡಿಸಿದ್ದಾರೆ.

    ಶ್ರೀಪಾದ್ ಆಚಾರ್ಯ ಎಂಬವರ ನೇತೃತ್ವದಲ್ಲಿ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ (Hole Anjaneya Swamy Temple) ವಾಯುಸ್ಥಿತಿ ಪುನಃ ಚರಣ ವಿಶೇಷ ಹೋಮವನ್ನು ಶೀಲಾ ಯೋಗೇಶ್ವರ್ ನಡೆಸಿದ್ದಾರೆ. ಇತ್ತಿಚಿಗಷ್ಟೇ ಯೋಗೇಶ್ವರ್ ಸಹ ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹೊಳೆ ಆಂಜನೇಯಸ್ವಾಮಿಗೆ ಒಂದುಕಾಲು ರೂ. ಹರಕೆ ಕಟ್ಟಿದ್ದರು. ಇದನ್ನೂ ಓದಿ: ಹಿಂದೂಗಳ ಮೇಲೆ ದಾಳಿ – ಕೆನಡಾ ರಾಯಭಾರ ಕಚೇರಿ ಎದುರು ಹಿಂದೂ ಸಿಖ್ ಗ್ಲೋಬಲ್ ಫೋರಂ ಪ್ರತಿಭಟನೆ

    ಇದೀಗ ಯೋಗೇಶ್ವರ್ ಪತ್ನಿ ಶೀಲಾ ಸಹ ಬೆಳಗ್ಗೆಯೇ ದೇವಸ್ಥಾನಕ್ಕೆ ಬಂದು ಆರಂಭದಲ್ಲಿ ಹೊಳೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಹೋಮದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಉಪಚುನಾವಣೆಯಲ್ಲಿ ಪತಿ ಯೋಗೇಶ್ವರ್ ಗೆಲವು ಸಾಧಿಸಲಿ ಎಂದು ಎಂದು ಶೀಲಾ ಯೋಗೇಶ್ವರ್ ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಎನ್‌ಕೌಂಟರ್: ಇಬ್ಬರು ಯೋಧರಿಗೆ ಗಾಯ