Tag: ಸಿನಿಮಾ ಸುದ್ದಿ

  • ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ

    ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ

    ತೆಲುಗಿನ ಕ್ರೇಜಿಸ್ಟಾರ್ ಎಂದೇ ಖ್ಯಾತರಾಗಿರುವ ರಾಮ್ ಪೋತಿನೇನಿ ಇದೀಗ ಪ್ಯಾನ್ ಇಂಡಿಯಾ ಸಿನಿಮಾವನ್ನು ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ಅಖಂಡ ಚಿತ್ರ ಖ್ಯಾತಿಯ ನಿರ್ದೇಶಕ ಬೋಯಾಪಟಿ ಶ್ರೀನು ನಿರ್ದೇಶನ ಮಾಡಲಿದ್ದಾರೆ. ಇದನ್ನೂ ಓದಿ : ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು


    ಟಾಲಿವುಡ್ ನ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಹಾಗೂ ಬೋಯಾಪಟಿ ಶ್ರೀನು ಕಾಂಬೋದ ‘ಅಖಂಡ’ ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಗೆ ಸೇರಿದ ಬೆನ್ನಲ್ಲೇ ಈ ಹೊಸ ಸಿನಿಮಾ ಬರುತ್ತಿದ್ದು ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ, ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಚರ್ಚೆ ಕೂಡ ನಡೆದಿದೆ. ಇದನ್ನೂ ಓದಿ : ರಾಜೇಶ್ ನಟನೆಯ ಸೂಪರ್ ಹಿಟ್ ಹಾಡುಗಳಿವು


    ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ಶ್ರೀನಿವಾಸ ತಮ್ಮದೇ ಸಿಲ್ವರ್ ಸ್ಕ್ರೀನ್ ಬ್ಯಾನರ್‌ನ ಅಡಿಯಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಬ್ಲಾಕ್‌ಬಸ್ಟರ್‌ಗಳ ನೀಡಿದ್ದು, ಸದ್ಯ ರಾಮ್ ಪೋತಿನೇನಿ ಅಭಿನಯದ ಮತ್ತು ಎನ್ ಲಿಂಗುಸಾಮಿ ನಿರ್ದೇಶನದ ದಿ ವಾರಿಯರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾ ರಿಲೀಸ್ ಮುನ್ನ ಮತ್ತೊಂದು ಸಿನಿಮಾವನ್ನು ಅನೌನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ : ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?


    ಒಂದು ಮೆಗಾ ಪ್ರಾಜೆಕ್ಟ್ ಸಿನಿಮಾ ಆಗಿದ್ದು, ಸದ್ಯದಲ್ಲಿಯೇ ಸಿನಿಮಾದ ಟೈಟಲ್, ನಾಯಕಿ ಮತ್ತು ಇತರ ಪಾತ್ರವರ್ಗಗಳ‌ ಬಗ್ಗೆ ಮಾಹಿತಿ ನೀಡಲಿದೆಯಂತೆ ಚಿತ್ರತಂಡ.

  • ಮೇಡ್ ಇನ್ ಚೈನಾ ಅಂತಿದ್ದಾರೆ ನಾಗಭೂಷಣ್

    ಮೇಡ್ ಇನ್ ಚೈನಾ ಅಂತಿದ್ದಾರೆ ನಾಗಭೂಷಣ್

    ಕೊರೋನಾ ವೈರಸ್ ಮಾಡಿದ ಆವಾಂತರ ನೂರಾರು. ಸಾವಿರಾರು ಜನ ಪ್ರಾಣ ಕಳೆದುಕೊಂಡರೆ, ಸಾಕಷ್ಟು ಜನರ ಬದುಕನ್ನೇ ಈ ಕೋವಿಡ್ ಕಸಿದುಕೊಂಡಿತು. ಕೊರೋನಾ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆಯೇ ಇಡೀ ಜಗತ್ತೇ ತಲ್ಲಣಗೊಂಡಿತು. ಒಂದು ರೀತಿಯಲ್ಲೇ ಜಗತ್ತಿಗೇ ಬೀಗ ಹಾಕಿದ ರೀತಿಯಲ್ಲಿ ಲಾಕ್ ಡೌನ್ ಘೋಷಣೆಯಾಯಿತು. ಈ ಸಂದರ್ಭದಲ್ಲಿ ಹುಟ್ಟಿದ ಕಥೆಯನ್ನೇ ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ‘ಮೇಡ್ ಇನ್ ಚೈನಾ’ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್

    ಕನ್ನಡದ ಮೊದಲ ವರ್ಚುವಲ್ ಸಿನಿಮಾ ಇದಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಪತಿಯು ವಿದೇಶದಲ್ಲಿ ಲಾಕ್ ಆಗುತ್ತಾನೆ. ಹೆಂಡತಿ ಭಾರತದಲ್ಲಿರುತ್ತಾಳೆ. ಇವರ ನಡುವೆ ನಡೆಯುವ ಕಥೆಯೇ ‘ಮೇಡ್ ಇನ್ ಚೈನಾ’. ಇಕ್ಕಟ್ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿರುವ ನಾಗಭೂಷಣ್ ಈ ಸಿನಿಮಾದ ನಾಯಕ. ಇದನ್ನೂ ಓದಿ : ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್‍ನಲ್ಲಿ ಗಮನ ಸೆಳೆಯಲಿದೆ ಸೈಕಲಾಜಿಕಲ್ ಥ್ರಿಲ್ಲರ್ ‘ರುಗ್ನ’

    “ಲಾಕ್ ಡೌನ್ ಟೈಮ್ ನಲ್ಲಿ ವಿದೇಶದಲ್ಲಿ ಲಾಕ್ ಆಗುವ ಪತಿ. ಸ್ವದೇಶಿ ನೆಲದಲ್ಲಿ ಪತ್ನಿ. ಈ ಗಂಡ ಹೆಂಡ್ತಿ‌ ನಡುವಿನ ಪ್ರೀತಿ-ಗೀತಿ-ಇತ್ಯಾದಿ ನಡುವೆ ಒಂದಷ್ಟು ಜಗಳ ಓವರ್ ಆಲ್ ಆಗಿ‌ ಮೇಡ್ ಇನ್ ಚೈನಾ ಫ್ಯಾಮಿಲಿ ಡ್ರಾಮಾ” ಎಂದಿದೆ ಚಿತ್ರತಂಡ. ಇದನ್ನೂ ಓದಿ :ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು

    ಅಯೋಗ್ಯ, ರತ್ನಮಂಜರಿ ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿದ್ದ ಪ್ರೀತಮ್ ತೆಗ್ಗಿನಮನೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದ ಜೊತೆಗೆ ಗ್ರಾಫಿಕ್, ಎಡಿಟಿಂಗ್ ಹಾಗೂ ಸಿನಿಮಾಟೋಗ್ರಾಫಿ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ನಾಗಭೂಷಣ್ ಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

  • ಪುನೀತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅರ್ಜುನ್ ಸರ್ಜಾ

    ಪುನೀತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅರ್ಜುನ್ ಸರ್ಜಾ

    ಪುನೀತ್ ರಾಜ್ ಕುಮಾರ್ ಅಗಲಿ ಮೂರು ತಿಂಗಳು ಗತಿಸಿದರೂ, ಅವರ ಕುಟುಂಬಕ್ಕೆ ನಟ ನಟಿಯರು ಸಾಂತ್ವಾನ ಹೇಳುತ್ತಲೇ ಇದ್ದಾರೆ. ಪುನೀತ್ ನಿಧನದ ದಿನದಂದು ಮಗುವಿನಂತೆ ಕಣ್ಣೀರಿಟ್ಟಿದ್ದ ನಟ ಅರ್ಜುನ್ ಸರ್ಜಾ, ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸಕ್ಕೆ ಭೇಟಿ ನೀಡಿ, ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಸಾಂತ್ವಾನ ಹೇಳಿದರು. ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.  ಇದನ್ನೂ ಓದಿ: ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ ಗುರುಪ್ರಸಾದ್

    ಪುಟಾಣಿ ಪುನೀತ್ ಅವರನ್ನು ಎತ್ತಿ ಆಡಿಸಿದ ದಿನಗಳನ್ನು ನೆನಪಿಸಿಕೊಂಡ ಅರ್ಜುನ್ ಸರ್ಜಾ, ಇಂತಹ ಮಹಾನ್ ಕಲಾವಿದನನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಅಂತ ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಅವರು ಎಲ್ಲಿಯೂ ಹೋಗಿಲ್ಲ, ನಮ್ಮೊಂದಿಗೆ ಸದಾ ಇರುತ್ತಾರೆ ಎಂದರು. ಇದನ್ನು ಓದಿ : ಕನ್ನಡಕ್ಕೆ ಅಮ್ಮಾವ್ರ ಗಂಡ ನಾಯಕಿಯ ಮಗಳು

    ಈ ಹಿಂದೆ ಪುನೀತ್ ಅವರನ್ನು ಎತ್ತಿಕೊಂಡಿದ್ದ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಶಾಂತಿ ಕೋರಿದ್ದರು ಅರ್ಜುನ್ ಸರ್ಜಾ. ಪುನೀತ್ ಅವರನ್ನು ಬಾಲ್ಯದಲ್ಲಿ ಹಾಗೆ ಎತ್ತಿಕೊಳ್ಳುವ ಭಾಗ್ಯ ಹಲವು ಬಾರಿ ಸಿಕ್ಕಿದೆ ಎಂದು ನೆನಪಿಸಿಕೊಂಡಿದ್ದರು.

  • ಪೂಜಾ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕೊಟ್ಟ ಪ್ರಭಾಸ್

    ಪೂಜಾ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕೊಟ್ಟ ಪ್ರಭಾಸ್

    ಚೆನ್ನೈ: ಟಾಲಿವುಡ್ ನಟಿ ಪೂಜಾ ಹೆಗ್ಡೆ ಇಂದು 31ರ ವಂಸತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ಪ್ರಭಾಸ್ ಸ್ಪೆಷಲ್ ಆಗಿ ಉಡುಗೊರೆಯನ್ನು ಕೊಟ್ಟಿದ್ದಾರೆ.

    ‘ರಾಧೆ ಶ್ಯಾಮ್’ ಸಿನಿಮಾದ ಪೂಜಾ ಲುಕ್ ಅನ್ನು ಪ್ರಭಾಸ್ ಇನ್‍ಸ್ಟಾಗ್ರಾಮ್ ನಲ್ಲಿ ಹಾಕಿದ್ದು, ‘ಜನ್ಮದಿನದ ಶುಭಾಶಯಗಳು ಪೂಜಾ’ ಎಂದು ಬರೆದು ಪೋಸ್ಟ್  ಮಾಡಿದ್ದಾರೆ. ಈ ಫೋಟೋದಲ್ಲಿ ಪೂಜಾ ಸಂಪೂರ್ಣವಾಗಿ ಬಿಳಿ ಉಡುಪನ್ನು ಧರಿಸಿದ್ದು, ಈ ಪೋಸ್ಟರ್‍ನಲ್ಲಿ ಪೂಜಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ‘ರಾಧೆ ಶ್ಯಾಮ್’ ಪೋಸ್ಟರ್ ಅನ್ನು ರಿಲೀಸ್ ಮಾಡುವ ಮೂಲಕ ಪೂಜಾ ಅವರಿಗೆ ಪ್ರಭಾಸ್ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಸಿನಿಮಾಗೆ ರವಿ ಬಸ್ರೂರ್ ಸಂಗೀತ ಸಂಯೋಜನೆ

     

    View this post on Instagram

     

    A post shared by Prabhas (@actorprabhas)

    ಈ ವರ್ಷದ ಆರಂಭದಲ್ಲಿ, ಚಿತ್ರತಂಡ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಪೋಸ್ಟರ್ ನಲ್ಲಿ ಪ್ರಭಾಸ್ ಮತ್ತು ಪೂಜಾ ಜೊತೆಗಿರುವ ಫೋಟೋವನ್ನು ಶೇರ್ ಮಾಡಲಾಗಿತ್ತು. ಈ ಕುರಿತು ಸಹ ಪ್ರಭಾಸ್ ಇನ್‍ಸ್ಟಾದಲ್ಲಿ, ನಮ್ಮ ಸುಂದರ ಚಿತ್ರವು ಸುಂದರವಾದ ಹೆಸರನ್ನು ಹೊಂದಿದೆ. ನಮ್ಮ ಬಹುನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್ ಎಂದು ಬರೆದು ಪೋಸ್ಟ್ ಮಾಡಿದ್ದರು.

    ‘ರಾಧೆ ಶ್ಯಾಮ್’ ಸಿನಿಮಾದ ಮೂಲಕ ಪೂಜಾ ಮತ್ತು ಪ್ರಭಾಸ್ ಮೊದಲಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಮುರಳಿ ಶರ್ಮಾ, ಸಚಿನ್ ಖೇಡೇಕರ್, ಪ್ರಿಯದರ್ಶಿ, ಸಶಾ ಚೆಟ್ರಿ, ಕುನಾಲ್ ರಾಯ್ ಕಪೂರ್ ಮತ್ತು ಸತ್ಯನ್ ಕೂಡ ನಟಿಸಲಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವಾಗಲೇ ಜಿ.ಪಂ.ಅಧ್ಯಕ್ಷೆಯಾದ ಯುವತಿ

     

    View this post on Instagram

     

    A post shared by Prabhas (@actorprabhas)

    ರಾಧಾಕೃಷ್ಣ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಯುವಿ ಕ್ರಿಯೇಷನ್ಸ್ ನಿರ್ಮಾಣದ ‘ರಾಧೆ ಶ್ಯಾಮ್’ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು 2022ರ ಜನವರಿ 14 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

  • 29ರ ವಸಂತಕ್ಕೆ ಕಾಲಿಟ್ಟ ಚಂದನವನದ ಡಿಂಪಲ್ ಕ್ವೀನ್

    29ರ ವಸಂತಕ್ಕೆ ಕಾಲಿಟ್ಟ ಚಂದನವನದ ಡಿಂಪಲ್ ಕ್ವೀನ್

    ಬೆಂಗಳೂರು: ಚಂದನವನದ ಬುಲ್ ಬುಲ್, ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು 29ರ ವಸಂತಕ್ಕೆ ಕಾಲಿಟ್ಟಿದ್ದಾರೆ.

    ಚಂದನವನದಲ್ಲಿ ರಚ್ಚು ಎಂದೇ ಖ್ಯಾತಿ ಪಡೆದಿರುವ ರಚಿತಾ, ಕನ್ನಡ ಸಿನಿರಸಿಕರಿಗೆ ಅಚ್ಚುಮೆಚ್ಚು. ಸಿಂಪಲ್ ಹುಡುಗಿ, ಮನೆ ಮಗಳು ಎನ್ನುವ ರೀತಿಯಲ್ಲಿ ಪರಿಚಯವಾದ ಈ ನಟಿ ಮೊದಲು ಕ್ಯಾಮೆರಾ ಫೇಸ್ ಮಾಡಿದ್ದು, ಕಿರುತೆರೆಯ ‘ಅರಸಿ’ ಧಾರವಾಹಿಯ ಮೂಲಕ. ನಂತರ ಲಕ್ಕಿ ಎಂಬಂತೆ ಇವರಿಗೆ ಚಂದನವನದಲ್ಲಿ ದರ್ಶನ್ ಜೊತೆಗೆ ‘ಬುಲ್ ಬುಲ್’ ಸಿನಿಮಾ ಮೂಲಕ ತಮ್ಮ ಸಿನಿ ಜರ್ನಿ ಮಾಡಲು ಅವಕಾಶ ಸಿಕ್ಕಿತು. ಆ ಸಿನಿಮಾದಿಂದ ಬುಲ್ ಬುಲ್ ರಚಿತಾ ಎಂದೇ ಖ್ಯಾತಿ ಪಡೆದರು. ಇದನ್ನೂ ಓದಿ:  ಅಣ್ಣಾಥೆ ಚಿತ್ರತಂಡ ಎಸ್‍ಪಿಬಿ ಅಭಿಮಾನಿಗಳಿಗೆ ನೀಡಿತು ಸಿಹಿಸುದ್ದಿ

     

    View this post on Instagram

     

    A post shared by Nidhi Subbaiah (@nidhisubbaiah)

    ನಂತರ ಅವರ ಅದೃಷ್ಟ ಎಂಬಂತೆ ಚಂದನವನದ ಸ್ಟಾರ್ ನಟರ ಜೊತೆ ಸಾಲು ಸಾಲು ಚಿತ್ರಗಳ ಅವಕಾಶ ಬಂದವು. ರಚಿತಾ ನಟನೆಯ ಹಲವು ಚಿತ್ರಗಳು ಹೆಸರು ತಂದುಕೊಂಡುವ ಮೂಲಕ ಸ್ಯಾಂಡಲ್‍ವುಡ್ ನ ಬಹುಬೇಡಿಕೆಯ ಮತ್ತು ನಂಬರ್ 1 ನಟಿಯಾಗಿ ಬೆಳೆದರು.

    ದರ್ಶನ್ ಜೊತೆ ಸಿನಿ ಜರ್ನಿ ಪ್ರಾರಂಭಿಸಿದ ರಚಿತಾ, ಸುದೀಪ್, ಪುನೀತ್ ರಾಜ್‍ಕುಮಾರ್, ಶಿವರಾಜ್‍ಕುಮಾರ್, ಕೃಷ್ಣ ಅಜಯ್ ರಾವ್, ಗಣೇಶ್ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಇದನ್ನೂ ಓದಿ: ಶ್ವೇತಾ ಚಂಗಪ್ಪ ಮಗನನ್ನು ನೋಡಲು ಮನೆಗೆ ಬಂದ ಕ್ರೇಜಿಸ್ಟಾರ್

    ಅದು ಅಲ್ಲದೇ ಹಲವು ಖಾಸಗಿ ವಾಹಿನಿಗಳ ತೀರ್ಪುಗಾರರಾಗಿದ್ದರು. ರಚಿತಾ ತಂದೆ ಕೆ.ಎಸ್.ರಾಮ್ ಮೂಲತಃ ಭರತನಾಟ್ಯಂ ಕಲಾವಿದರಾಗಿದ್ದು, ಇವರು ಕೂಡ ಭರತನಾಟ್ಯದಲ್ಲಿ ತರಬೇತಿ ಹೊಂದಿದ್ದಾರೆ.

    ರಚಿತಾ ನಟನೆಯ ವೀರಂ, ಏಕ್ ಲವ್ ಯಾ, ಮ್ಯಾಟ್ನಿ, ಸೂಪರ್ ಮಚ್ಚಿ, ಡಾಲಿ, ಏಪ್ರಿಲ್, ಬ್ಯಾಡ್ ಮ್ಯಾನರ್, ಲವ್ ಯೂ ರಚ್ಚು, ಲವ್ ಮಿ ಆರ್ ಹೇಟ್ ಮಿ, ಶಬರಿ ಮತ್ತು ಮಾನ್ಸೂನ್ ರಾಗ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ರಚಿತಾ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

  • ಸ್ಟೈಲಿಶ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಮೌನಿ ರಾಯ್

    ಸ್ಟೈಲಿಶ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಮೌನಿ ರಾಯ್

    ಮುಂಬೈ: ಬಾಲಿವುಡ್ ಕಿರುತೆರೆಯಲ್ಲಿ ನಾಗಿನ್ ಎಂದೇ ಖ್ಯಾತಿ ಪಡೆದಿರುವ ಮೌನಿ ರಾಯ್ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಫುಲ್ ಸ್ಟೈಲಿಶ್ ಆಗಿ ಆಚರಿಸಿಕೊಂಡಿದ್ದಾರೆ.

    ಮೌನಿ ಬುಧವಾರ 36ನೇ ವರ್ಷಕ್ಕೆ ಕಾಲಿಟ್ಟಿದ್ದು, ಹಾಟ್ ಬ್ಯೂಟಿಯಾಗಿರುವ ಇವರು ತಮ್ಮ ಹುಟ್ಟುಹಬ್ಬವನ್ನು ಇನ್ನಷ್ಟು ಸ್ಟೈಲಿಶ್ ಆಗಿ ಆಚರಿಸಿಕೊಂಡಿದ್ದು ಇನ್‍ಸ್ಟಾಗ್ರಾಮ್ ನಲ್ಲಿ, ಹುಟ್ಟುಹಬ್ಬ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by mon (@imouniroy)

    ಈ ಪೋಸ್ಟ್ ನಲ್ಲಿ ಮೌನಿ ಪೂಲ್ ಬಳಿ ಸ್ಟೈಲಿಶ್ ಆಗಿ ಕುಳಿತ ಫೋಟೋವನ್ನು ಶೇರ್ ಮಾಡಿದ್ದು, ಅದು ಅಲ್ಲದೇ ಅವರ ಹುಟ್ಟುಹಬ್ಬಕ್ಕೆ ತಯಾರಿ ಮಾಡಿದ್ದ ಆಲಂಕಾರವನ್ನು ಬೂಮರಾಂಗ್ ಮಾಡಿ ಪೊಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಮತ್ತು ಬಾಲಿವುಡ್ ತಾರೆಯರು ಇವರಿಗೆ ವಿಶ್ ಮಾಡಿದ್ದಾರೆ.

    ಮೌನಿ ಬೆಸ್ಟ್ ಫ್ರೆಂಡ್ ಮತ್ತು ನಟಿ ಮಂದಿರಾ ಬೇಡಿ ಹುಟ್ಟುಹಬ್ಬಕ್ಕೆ ಇನ್‍ಸ್ಟಾಗ್ರಾಮ್ ನಲ್ಲಿ ಕವಿತೆ ಬರೆದು ಪೋಸ್ಟ್ ಮಾಡುವ ಮೂಲಕ ಶುಭಕೋರಿದ್ದಾರೆ. ಆ ಪೋಸ್ಟ್ ನಲ್ಲಿ, ಜನ್ಮದಿನದ ಶುಭಾಶಯಗಳು ಮೊನ್. ನಿಮ್ಮನ್ನು ತಿಳಿದುಕೊಳ್ಳುವವರು, ನಿಮ್ಮನ್ನು ಪ್ರೀತಿಸುತ್ತಾರೆ ಎಂದು ಬರೆದು ವಿಶೇಷವಾಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ನಾಯಕ ದೇವರಕೊಂಡಗಿಂತಲೂ ದುಬಾರಿ ಸಂಭಾವನೆ ಪಡೆಯಲಿದ್ದಾರೆ ಮೈಕ್ ಟೈಸನ್

     

    View this post on Instagram

     

    A post shared by Mandira Bedi (@mandirabedi)

    ಅದ್ಭುತವಾದ ಡ್ಯಾನ್ಸರ್ ಆಗಿರುವ ಮೌನಿ ಹಿಂದಿ ಕಿರುತೆರೆಯಲ್ಲಿ ಫುಲ್ ಫೇಮಸ್ ಆಗಿದ್ದು, ದೇವೊನ್ ಕೆ ದೇವ್ ಮಹಾದೇವ್, ಕಸ್ತೂರಿ, ಮತ್ತು ನಾಗಿನ್ ಸೀರಿಯಲ್ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದರು. ಅದು ಅಲ್ಲದೇ ಅವರು ರಿಯಾಲಿಟಿ ಶೋ ಗಳಲ್ಲಿಯೂ ಭಾಗವಹಿಸಿದ್ದರು. ಇದನ್ನೂ ಓದಿ:  ಡಿ ಗ್ಲಾಮ್ ಲುಕ್‍ನಲ್ಲಿ ರಶ್ಮಿಕಾ ಮಿಂಚು

    ಸಿನಿಮಾದಲ್ಲಿಯೂ ನಟಿಸಿರುವ ಇವರು, 2018ರ ಕ್ರೀಡೆಗೆ ಸಂಬಂಧಿಸಿದ ಸಿನಿಮಾ ‘ಗೋಲ್ಡ್’ ನಲ್ಲಿ ಅಕ್ಷಯ್ ಕುಮಾರ್ ಗೆ ಜೋಡಿಯಾಗಿ ನಟಿಸಿದ್ದಾರೆ. ‘ಮೇಡ್ ಇನ್ ಚೈನಾ’ ಸಿನಿಮಾದಲ್ಲಿ ರಾಜಕುಮರ್ ರಾವ್ ಜೊತೆ ನಟಿಸಿದ್ದಾರೆ.

  • ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಮುಂಬೈ: ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್ ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತು ಪುರುಷರ ಒಳ ಉಡುಪಿನ ಬಗ್ಗೆಯಾಗಿದ್ದು, ಅದರಲ್ಲಿ ರಶ್ಮಿಕಾ ಯೋಗ ಇನ್‍ಸ್ಟ್ರಾಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ವಿಕ್ಕಿ ಅವರು ಯೋಗ ಕಲಿಯುವ ವಿದ್ಯಾರ್ಥಿಯಾಗಿದ್ದು, ಅವರ ಒಳ ಉಡುಪನ್ನೆ ರಶ್ಮಿಕಾ ನೋಡುವ ಅದರತ್ತ ಆಕರ್ಷಕರಾಗುವ ರೀತಿ ವೀಡಿಯೋವನ್ನು ಚಿತ್ರೀಕರಿಸಲಾಗಿತ್ತು. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಈ ಜಾಹೀರಾತಿಗೆ ರಶ್ಮಿಕಾ ಅಭಿಮಾನಿಗಳಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರೋಲ್ ಪೇಜ್ ಗಳು ಈ ಜಾಹೀರಾತಿನಲ್ಲಿ ರಶ್ಮಿಕಾ ಅಭಿನಯದ ಬಗ್ಗೆ ಫುಲ್ ಟ್ರೋಲ್ ಮಾಡುತ್ತಿದ್ದಾರೆ.

    ಸಖತ್ ಬ್ಯುಸಿಯಾಗಿರುವ ರಶ್ಮಿಕಾ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದಾರೆ. ಅದು ಅಲ್ಲದೇ ಇತ್ತೀಚೆಗೆ ಬಾಲಿವುಡ್ ಗೂ ಹಾರಿರುವ ಇವರು ‘ಮಿಷನ್ ಮಜ್ನು’ ಸಿನಿಮಾ ಮುಗಿಸಿ, ಬಾಲಿವುಡ್ ನ ಮತ್ತೊಂದು ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆಗೂ ನಟಿಸುತ್ತಿದ್ದಾರೆ. ಇದನ್ನೂ ಓದಿ: ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ರಶ್ಮಿಕಾ ಅಭಿಮಾನಿಗಳು ಮಾತ್ರ ಇವರ ನಟನೆಯ ‘ಪುಷ್ಪ’ ನೋಡಲು ಕಾಯುತ್ತಿದ್ದು, ಕೊರೊನಾ ಮತ್ತು ಚಿತ್ರಮಂದಿರಗಳ ಸಮಸ್ಯೆಯಿಂದ ಚಿತ್ರದ ರಿಲೀಸ್ ಡೇಟ್ ಮುಂದೆ ಹೋಗುತ್ತಿದೆ.

  • 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಮುಂಬೈ: ಪ್ರೇಮಿಗಳ ದಿನದಂದು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ರಿಲೀಸ್ ಮಾಡುವುದಾಗಿ ಎಂದು ಅಮೀರ್ ಖಾನ್ ಪ್ರೊಡಕ್ಷನ್ಸ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.

    ಅಮೀರ್ ಖಾನ್ ಪ್ರೊಡಕ್ಷನ್ಸ್ ಇನ್‍ಸ್ಟಾಗ್ರಾಮ್ ನಲ್ಲಿ, ಅಕ್ಟೋಬರ್ 22 ರಿಂದ ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಆಡಳಿತವು ಅವಕಾಶ ನೀಡಿದೆ. ಈ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ನಮ್ಮ ಸಿನಿಮಾ ರಿಲೀಸ್ ಮಾಡಲು ವಿಳಂಬವಾಗಿದೆ. ನಮ್ಮ ‘ಲಾಲ್ ಸಿಂಗ್ ಚಡ್ಡಾ’ ಈ ಕ್ರಿಸ್‍ಮಸ್‍ನಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ. 2022ರ ಫೆ.14 ರಂದು ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತೆ ಎಂದು ಬರೆದು ಪೋಸ್ಟ್ ಮಾಡಿದೆ. ಇದನ್ನೂ ಓದಿ: ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

    ಅಮೀರ್ ಖಾನ್ ಪ್ರೊಡಕ್ಷನ್ಸ್ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ರಣವೀರ್ ಸಿಂಗ್ ಇನ್‍ಸ್ಟಾಗ್ರಾಮ್ ನಲ್ಲಿ, ’83’ ಸಿನಿಮಾ ಈ ಕ್ರಿಸ್‍ಮಸ್‍ನಲ್ಲಿ ಚಿತ್ರಮಂದಿರಕ್ಕೆ ಬರಲಿದೆ. ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಇವರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

    ರಣವೀರ್ ನಟನೆಯ ’83’ ಸಿನಿಮಾ ಈ ಜೂನ್‍ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ತಡವಾಗಿತ್ತು. ಅದು ಅಲ್ಲದೇ ದೊಡ್ಡ ಬಾಲಿವುಡ್ ಎಷ್ಟೋ ಸಿನಿಮಾಗಳು ಓಟಿಟಿ ಪ್ಲಾಟ್‍ಫಾರ್ಮ್‍ಗಳಲ್ಲಿ ಬಿಡುಗಡೆಯಾಯಿತು. ಅದರಲ್ಲಿ ’83’ ಸಿನಿಮಾ ಸಹ ಒಂದಾಗಬೇಕಿತ್ತು. ಆದರೆ ಚಿತ್ರತಂಡ ಲಾಕ್‍ಡೌನ್ ನಂತರ ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಮಾಡುವುದಾಗಿ ತಯಾರಕರು ಅಧಿಕೃತವಾಗಿ ಘೋಷಿಸಿದ್ದರು. ಇಂದು ಆ ಮಾತಿನಂತೆ ಬಿಡುಗಡೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಹೆಬ್ಬುಲಿ ಬೆಡಗಿ

     

    View this post on Instagram

     

    A post shared by Ranveer Singh (@ranveersingh)

    ’83’ ಸಿನಿಮಾಗೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳುತ್ತಿದ್ದು, ಕ್ರಿಕೆಟರ್ ಕಪಿಲ್ ದೇವ್ ದಂತ ಕಥೆಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದು, ಇದು 1983 ರ ಭಾರತದ ಐತಿಹಾಸಿಕ ವಿಶ್ವಕಪ್ ಗೆಲುವಿನ ಕಥೆಯನ್ನು ಆಧರಿಸಿದೆ. ಕಪಿಲ್ ದೇವ್ ಅವರ ಪತ್ನಿ ರೋಮಿ ಪಾತ್ರದಲ್ಲಿ ರಣವೀರ್ ಪತ್ನಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ.

  • ದುಬೈನಲ್ಲಿ ಫ್ಯಾಮಿಲಿ ಜೊತೆ ಮಾಧವನ್ ಎಂಜಾಯ್

    ದುಬೈನಲ್ಲಿ ಫ್ಯಾಮಿಲಿ ಜೊತೆ ಮಾಧವನ್ ಎಂಜಾಯ್

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಮಾಧವನ್ ಕುಟುಂಬದ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದು, ಫೊಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮಾಧವನ್, ಭಾಗ್ಯಶ್ರೀ ಮತ್ತು ರೋಹಿತ್ ರಾಯ್ ದುಬೈಗೆ ಹೋಗಿದ್ದಾರೆ. ದುಬೈಗೆ ಭಾಗ್ಯಶ್ರೀ ತನ್ನ ಪತಿ ಹಿಮಾಲಯ ದಾಸನಿಯೊಂದಿಗೆ ಬಂದಿದ್ದು, ಮಾಧವನ್ ಅವರ ಪತ್ನಿ ಸರಿತಾ ಬಿರ್ಜೆ ಜೊತೆಗೆ ಬಂದಿದ್ದರು. ಎಲ್ಲರೂ ಸೇರಿ ದುಬೈನಲ್ಲಿ ‘ನೈಟ್ ಔಟ್’ ಮಾಡಿದ್ದು, ಆ ಚಿತ್ರಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಭಾಗ್ಯ ಬಿಳಿ ಟಪ್ ಮತ್ತು ಕಪ್ಪು ಶಾರ್ಟ್ಸ್ ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಇದನ್ನೂ ಓದಿ: ರಾಯನ್‍ಗೆ 11 ತಿಂಗಳು- ಕ್ಯೂಟ್ ವೀಡಿಯೋ ಹಂಚಿಕೊಂಡ ಮೇಘನಾ

     

    View this post on Instagram

     

    A post shared by Bhagyashree (@bhagyashree.online)

    ಮಾಧವನ್ ಕಪ್ಪು ಟೀ ಶರ್ಟ್ ಮತ್ತು ಬ್ರೌನ್ ಪ್ಯಾಂಟ್ ನಲ್ಲಿ ಮತ್ತು ನಟ ರೋಹಿತ್ ರಾಯ್ ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದು, ಇಬ್ಬರು ಹ್ಯಾಂಡ್ಸಮ್ ಆಗಿ ಕಾಣಿಸುತ್ತಿದ್ದಾರೆ.

    ಈ ಫೊಟೋಗಳನ್ನು ಭಾಗ್ಯ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ‘ದುಬೈ ಡೈರೀಸ್’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Rohit Bose Roy (@rohitboseroy)

    ನಟ ರೋಹಿತ್ ರಾಯ್ ಅವರು ಕೂಡ ಇನ್‍ಸ್ಟಾದಲ್ಲಿ, ಸಹೋದರರು ಮರಳಿದ್ದಾರೆ. ಒಂದು ವರ್ಷದ ನಂತರ ಅದೇ ಸ್ಥಳದಲ್ಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:   ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿಗೆ ಸಹಾಯ ಕೋರಿದ ಮಂಜು

    ಮಾಧವನ್ ಹಿಂದಿ, ತಮಿಳು, ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಾಲಿವುಡ್ ಚಿತ್ರಗಳಲ್ಲಿ 3 ಈಡಿಯಟ್ಸ್, ರಂಗ್ ದೇ ಬಸಂತಿ, 13 ಬಿ, ತನು ವೆಡ್ಸ್ ಮನು, ಗುರು, ರೆಹನಾ ಹೈ ಟೆರ್ರೆ ದಿಲ್ ಮೇ ಮತ್ತು ಜೀರೋ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳು. ಪ್ರಸ್ತುತ ಮಾಧವನ್ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ.

  • ಗೋಡ್ಸೆಯ ದೇಶಪ್ರೇಮಕ್ಕೆ ಜೈ, ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ: ಅನಿತಾ ಭಟ್

    ಗೋಡ್ಸೆಯ ದೇಶಪ್ರೇಮಕ್ಕೆ ಜೈ, ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ: ಅನಿತಾ ಭಟ್

    ಬೆಂಗಳೂರು: ನಾಥೂರಾಮ್ ಗೋಡ್ಸೆ ಮತ್ತು ಬ್ರಾಹ್ಮಣರ ಬಗ್ಗೆ ಚಂದನವನದ ನಟಿ ಅನಿತಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ್ದು, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಬಿಗ್‍ಬಾಸ್ ಕನ್ನಡ ಸ್ಪರ್ಧಿ ಅನಿತಾ ಭಟ್ ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಬ್ರಾಹ್ಮಣ್ಯ ಮತ್ತು ಗಾಂಧೀಜಿಯನ್ನು ಕೊಂದ ಗೋಡ್ಸೆಗೆ ಜೈ ಎಂದು ಟ್ವೀಟ್ ಮಾಡಿದ್ದಾರೆ. ಈಗ ಈ ವಿಚಾರ ಪರ, ವಿರೋಧ ಚರ್ಚೆ ಆಗುತ್ತಿದೆ.

    ಟ್ವೀಟ್‍ನಲ್ಲಿ ಏನಿದೆ?
    ಅನಿತಾ ಭಟ್ ಟ್ವೀಟ್‍ನಲ್ಲಿ, ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಗೊತ್ತಿದ್ರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ ಎಂದು ಪೋಸ್ಟ್ ಮಾಡಿದ್ದು, ಅದಕ್ಕೆ ವೀಕ್ಷಕರು ಗೋಡ್ಸೆ ಜಿಂದಾಬಾದ್ ಎಂದು ಕಾಮೆಂಟ್ ಮಾಡಿದ್ದಾರೆ.

    ನಟಿ ಮುಂದುವರೆದು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಅವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರೆಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು ಎಂದು ಅನಿತಾ ಭಟ್ ಹೇಳಿದ್ದಾರೆ. ಇದನ್ನೂ ಓದಿ: ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು? 

    ಮುಂದೆ ನೆಗೆಟಿವ್ ಕಾಮೆಂಟ್ ಬರುತ್ತಿರುವುದನ್ನು ಗಮನಿಸಿದ ಅವರು, ನನ್ನ ಟ್ವಿಟ್ಟರ್, ಪೋಸ್ಟ್ ಮಾಡುವುದು ನನ್ನ ಆಯ್ಕೆ. ನನ್ನ ಅಭಿಪ್ರಾಯವನ್ನು ನಿಮ್ಮ ಕೆಟ್ಟ ಕಾಮೆಂಟ್‍ಗಳು ಬದಲಾಯಿಸುವುದಿಲ್ಲ. ಇಷ್ಟಕ್ಕೆಲ್ಲ ಹೆದರೋ ಹಾಗಿದ್ರೆ ಭೂಮಿಯಿಂದಾನೆ ಹೋಗಿ ಬಿಡ್ತಿದ್ದೆ ಇಷ್ಟೊತ್ತಿಗೆ. ಎಷ್ಟು ಬೇಕಾದ್ರೂ ಗಂಟಲು ಹರ್ಕೊಳಿ ಹೋಗಿ ಎಂದು ಗರಂ ಆಗಿ ಉತ್ತರಿಸಿದ್ದಾರೆ.

    ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ
    ಸೋಶಿಯಲ್ ಮೀಡಿಯಾದಲ್ಲಿ ಬ್ರಾಹ್ಮಣ್ಯದ ಕುರಿತು ಮಾತನಾಡಿದ ಅವರು, ಇವರುಗಳು ತಮ್ಮ ಪದವಿ ಮುಂದೆ ಜಾತಿ ಹೆಸರು ಹಾಕಿದ ಹಾಗೆ ನಾನೇನಾದ್ರೂ ಬ್ರಾಹ್ಮಣ ನಟಿ ಅಂತ ಹಾಕಿದ್ದೇನಾ? ಜಾತಿ ಹೆಸರು ಹೇಳಿ ಕೆಲಸ ಗಿಟ್ಟಿಸೋ ಗತಿ ಇನ್ನು ನನಗೆ ಬಂದಿಲ್ಲ. ದೇವಸ್ಥಾನದ ಪ್ರಸಾದ ತಿಂದು ಬದುಕಿದ್ರೂ ಸರಿ. ಅದಕ್ಕೆ ಬ್ರಾಹ್ಮಣ್ಯ ಅನ್ನೋ ಹೆಸರು ಯಾಕ್ರೀ? ಬೇರೆ ಜಾತಿಯವರೂ ಮಾಡ್ತಾರೆ ಅಂದ್ರೆ ಅವರವರ ಜಾತಿ ಹೆಸರು ಹಾಕಿ. ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಕೊಂಡು ಕೂತಿದ್ದಾರೆ, ಅದಕ್ಕೆ ಬೇಕಾಬಿಟ್ಟಿ ಮಾತಾಡ್ತಾರೆ. ಅಷ್ಟೇ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

    ಅದಕ್ಕೆ ಒಬ್ಬ ನೆಟ್ಟಿಗ, ತಾವೇ ಸರ್ವಶ್ರೇಷ್ಠರು ಅನ್ನೋ ವಾದ, ಮಡಿವಂತಿಕೆ ಆಚರಣೆಗಳು ಇದೆಯಲ್ಲ ಅದೇ ಬ್ರಾಹ್ಮಣ್ಯ. ಅದಕ್ಕೆ ಎಲ್ಲರ ವಿರೋಧ ಅಷ್ಟೇ. ಅದು ಬಿಟ್ಟರೆ ಎಲ್ಲರೂ ಒಂದೇ ಯಾರು ಸಹ ಮೇಲಿಲ್ಲ ಕೀಳಿಲ್ಲ. ಎಂದು ಕಾಮೆಂಟ್ ಮಾಡಿದ್ದಾರೆ.

    ನನ್ನ ಅಮ್ಮ ಎಷ್ಟೋ ವರ್ಷಗಳ ಹಿಂದೇನೆ ಜಾತಿ ಪದ್ದತಿಯನ್ನ ದೂರ ಇಟ್ಟಿದ್ದಾರೆ. ಒಂದು ಲಂಬಾಣಿ ಹುಡುಗಿ ನಮ್ಮ ಮನೆಯಲ್ಲಿ ಓದೋಕೆ ಅಂತ 4 ವರ್ಷ ಇದ್ದಳು. ನಮ್ಮನೇ ದೇವರ ಪೂಜೆ ಕೂಡ ಮಾಡಿದ್ದಾಳೆ. ನನಗೆ ಇದರಲ್ಲಿ ವಿಶೇಷತೆ ಏನು ಕಂಡಿಲ್ಲ. ಸಂದರ್ಭ ಬಂದಿದ್ದರಿಂದ ಹೇಳಿದೆ ಅಷ್ಟೇ ಎಂದು ಅದಕ್ಕೆ ಉತ್ತರಿಸಿದ್ದಾರೆ.

    ಅನಿತಾ ಭಟ್, 2008ರಲ್ಲಿ ಬಿಡುಗಡೆ ಆದ ‘ಸೈಕೊ’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟದ್ದಾರೆ. ನಂತರ ‘ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಹಾಟ್ ಮಗಾ’, ‘ದೊಡ್ಮನೆ ಹುಡ್ಗಾ’, ‘ಟಗರು'(ಡಾಲಿ ಗರ್ಲ್‍ಫ್ರೆಂಡ್ ಪಾತ್ರ), ‘ಹೊಸ ಕ್ಲೈಮ್ಯಾಕ್ಸ್’, ‘ಡಿಎನ್‍ಎ’, ‘ಕನ್ನೇರಿ’, ‘ಕಲಿವೀರ’, ‘ಬೆಂಗಳೂರು-69’, ‘ಬಳೆಪೇಟೆ’, ‘ಜೂಟಾಟ’, ತೆಲುಗಿನ ‘ಕೃಷ್ಣ ಲಂಕಾ’ ಸಿನಿಮಾ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.