Tag: ಸಿನಿಮಾ ಶೂಟಿಂಗ್

  • ತಮಿಳುನಾಡಿನಲ್ಲಿ ಸ್ಟಂಟ್‌ಮೆನ್ ಸಾವು – ಚಿತ್ರನಿರ್ದೇಶಕ ಪ.ರಂಜಿತ್ ವಿರುದ್ಧ ಎಫ್‌ಐಆರ್

    ತಮಿಳುನಾಡಿನಲ್ಲಿ ಸ್ಟಂಟ್‌ಮೆನ್ ಸಾವು – ಚಿತ್ರನಿರ್ದೇಶಕ ಪ.ರಂಜಿತ್ ವಿರುದ್ಧ ಎಫ್‌ಐಆರ್

    – ಶೂಟಿಂಗ್ ವೇಳೆ ವಾಹನ ಮಗುಚಿ ಸಾವನ್ನಪ್ಪಿದ್ದ ಸ್ಟಂಟ್‌ಮೆನ್

    ಚೆನ್ನೈ: `ವೆಟ್ಟುವಮ್’ (Vettuvam) ತಮಿಳು ಸಿನಿಮಾ ಶೂಟಿಂಗ್ ವೇಳೆ ಕಾರಿನಲ್ಲಿ ಸ್ಟಂಟ್ ಮಾಡುವಾಗ ಸ್ಟಂಟ್‌ಮೆನ್ (Stuntman) ಒಬ್ಬರು ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿರ್ದೇಶಕ ಪ.ರಂಜಿತ್ (Pa Ranjith) ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

    ಕಾಲಿವುಡ್‌ನ ಸಾಹಸ ಕಲಾವಿದ ಮೋಹನ್ ರಾಜು ಮೃತ ಸ್ಟಂಟ್‌ಮ್ಯಾನ್. ಪ.ರಂಜಿತ್ ನಿರ್ದೇಶನದಲ್ಲಿ ತಮಿಳು ನಟ ಆರ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವೆಟ್ಟುವಂ ಸಿನಿಮಾ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿತ್ತು.ಇದನ್ನೂ ಓದಿ: ಶೂಟಿಂಗ್ ವೇಳೆ ಯಡವಟ್ಟು: SUVಯಲ್ಲಿ ಸ್ಟಂಟ್ ವೇಳೆ ಅವಘಡ – ತಮಿಳುನಾಡಿನ ಸ್ಟಂಟ್‌ಮೆನ್ ಸಾವು

    ಈ ಕುರಿತು ನಿರ್ದೇಶಕ ಪ.ರಂಜಿತ್ ಮಾತನಾಡಿ, ಸಿನಿಮಾ ಶೂಟಿಂಗ್ ವೇಳೆ ಪಾಲೀಸಬೇಕಾದ ಎಲ್ಲಾ ನಿಯಮಗಳನ್ನು ನಾವು ಪಾಲಿಸಿದ್ದೇವೆ. ಕಾರ್ ಸ್ಟಂಟ್ ವೇಳೆ ಯಾವುದೇ ಅಪಘಾತವಾಗದಂತೆ ನಾವು ಎಲ್ಲಾ ರೀತಿ ಮುನ್ನೆಚ್ಚರಿಕೆಗಳನ್ನು ಅನುಸರಿಸಿದ್ದೇವು. ಆದರೆ ಇದೆಲ್ಲದರ ನಡುವೆ ನಾವು ಅನುಭವಿ ಸ್ಟಂಟ್‌ಮೆನ್‌ನ್ನು ಕಳೆದುಕೊಂಡಿದ್ದೇವೆ. ಈ ಸಾವು ಅತೀವ ನೋವನ್ನು ತಂದಿದ್ದು, ಮೋಹನ್ ರಾಜ್ ಅವರ ಅಣ್ಣ, ಪತ್ನಿಗೆ ದೇವರು ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. ನಮ್ಮ ನೆನಪಿನಲ್ಲಿ ಸದಾ ಅಮರರಾಗಿರುತ್ತಾರೆ ಎಂದರು.

    ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಸದ್ಯ ಪೊಲೀಸರು ಸಿನಿಮಾ ನಿರ್ದೇಶಕ ಪ.ರಂಜಿತ್ ಸೇರಿ ನಾಲ್ವರ ವಿರುದ್ಧ ಬಿಎನ್‌ಎಸ್ 289, 125 ಮತ್ತು 106(1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಘಟನೆ ನಡೆದಿದ್ದು ಹೇಗೆ?
    ಕಾರು ಪಲ್ಟಿಯಾಗುವ ಅವಘಡದ ವಿಡಿಯೋ ಅಲ್ಲಿಯೇ ಇದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಎಸ್‌ಯುವಿಯನ್ನು ಓಡಿಸುತ್ತಾ, ರ‍್ಯಾಂಪ್ ಮೇಲೆ ಹೋಗುತ್ತಾರೆ. ಅಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿತ್ತು. ಈ ವೇಳೆ, ಅವರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗೆ ಅಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗಲಾಗಿತ್ತು.

    ವೆಟ್ಟುವಂ ಚಿತ್ರವು 2021ರ ತಮಿಳು ಸಿನಿಮಾ `ಸರ್ಪಟ್ಟ ಪರಂಬರೈ’ ಚಿತ್ರದ ಮುಂದುವರಿದ ಭಾಗ ಎನ್ನಲಾಗಿದ್ದು, 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.ಇದನ್ನೂ ಓದಿ: ನೀವೆಲ್ಲ ಮಠಕ್ಕೆ ಹೋಗೋಣ ಅಂದ್ರೆ ಬರುತ್ತೇನೆ, ಇಲ್ದಿದ್ರೆ ಭಕ್ತರ ಮನೆಯಲ್ಲೇ ಇರುತ್ತೇನೆ: ಭಾವುಕರಾದ ಜಯ ಮೃತ್ಯುಂಜಯ ಶ್ರೀ‌

  • ವಿದೇಶಕ್ಕೆ ಹಾರಲು ರೆಡಿಯಾದ ದರ್ಶನ್

    ವಿದೇಶಕ್ಕೆ ಹಾರಲು ರೆಡಿಯಾದ ದರ್ಶನ್

    ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ ಜೈಲಿನಿಂದ ರಿಲೀಸ್‌ ಆದ ಬಳಿಕವೂ ವಿದೇಶಕ್ಕೆ ತೆರಳದಂತೆ ಕೋರ್ಟ್ ನಟ ದರ್ಶನ್‌ಗೆ (Darshan) ಷರತ್ತು ವಿಧಿಸಿತ್ತು. ಪಾಸ್ ಪೋರ್ಟ್ ಕೂಡ ಮುಟ್ಟುಗೋಲು ಹಾಕಿಕೊಂಡಿತ್ತು. ಜಾಮೀನು ಸಿಕ್ಕು ಜೈಲಿನಿಂದ ಬಂದ ನಂತರ, ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳು ಅನುಮತಿ ಕೇಳಿದ್ದರು ನಟ ದರ್ಶನ್. ಅವರಿಗೆ ಈಗ ಅನುಮತಿ ಸಿಕ್ಕಿದೆ. ಹಾಗಾಗಿ ಸದ್ಯದಲ್ಲೇ ವಿದೇಶ ವಿಮಾನ ಏರಲು ಸಜ್ಜಾಗಿದ್ದಾರೆ ದರ್ಶನ್.

    ದರ್ಶನ್ ನಟನೆಯ ಡೆವಿಲ್ (The Devil) ಸಿನಿಮಾದ ಚಿತ್ರೀಕರಣ ಸದ್ಯ ಬೆಂಗಳೂರಿನಲ್ಲಿ (Bengaluru) ನಡೆಯುತ್ತಿದೆ. ಸಾಹಸ ಸನ್ನಿವೇಶಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದಾರೆ. ಈ ವಾರದಲ್ಲಿ ಬಹುತೇಕ ಸಾಹಸ ಸನ್ನಿವೇಶಗಳ ಶೂಟಿಂಗ್ ಮುಗಿಯಲಿದೆಯಂತೆ. ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಇಡೀ ಟೀಮ್ ವಿದೇಶಕ್ಕೆ ಹಾರಲಿದೆ. ವಿದೇಶದಲ್ಲಿ ಹಾಡಿನ ಶೂಟಿಂಗ್ ಗೆ ಪ್ಲ್ಯಾನ್ ಮಾಡಿದ್ದಾರಂತೆ ನಿರ್ದೇಶಕ ಪ್ರಕಾಶ್.

    ಜುಲೈ 1 ರಿಂದ ಜುಲೈ 28ರ ವರೆಗೂ ದರ್ಶನ್ ಅವರಿಗೆ ಕೋರ್ಟ್ ನಿಂದ ವಿದೇಶಕ್ಕೆ ಹೋಗಲು ಅನುಮತಿ ಸಿಕ್ಕಿದೆ. ಹಾಗಾಗಿ ಜುಲೈ ಮೊದಲ ವಾರದಲ್ಲೇ ಅವರು ವಿದೇಶಕ್ಕೆ ಹಾರಲಿದ್ದಾರೆ ಎನ್ನುವ ಮಾಹಿತಿ ಇದೆ. ಹಾಡಿನ ಚಿತ್ರೀಕರಣಕ್ಕೆ ಪ್ಲ್ಯಾನ್ ಆಗಿದ್ದು, ಟಿಕೆಟ್ ಕೂಡ ಬುಕ್ ಆಗಿದೆ ಅಂತಾರೆ ಸಿನಿಮಾ ಟೀಮ್‌ನ ಸದಸ್ಯರು.

  • ಬೆಂಗಳೂರಿಗೆ ಬಂದಿಳಿದ ಸಂಜಯ್‌ ದತ್

    ಬೆಂಗಳೂರಿಗೆ ಬಂದಿಳಿದ ಸಂಜಯ್‌ ದತ್

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಂದೊಂದು, ಹಿಂದೊಂದು ನಂಬರ್ – ನಕಲಿ ಪೊಲೀಸ್ ವ್ಯಾನ್ ಕಂಡು ತಬ್ಬಿಬ್ಬಾದ ಜನ

    ಮುಂದೊಂದು, ಹಿಂದೊಂದು ನಂಬರ್ – ನಕಲಿ ಪೊಲೀಸ್ ವ್ಯಾನ್ ಕಂಡು ತಬ್ಬಿಬ್ಬಾದ ಜನ

    ಗದಗ: ನಗರದಲ್ಲಿ ನಕಲಿ ಪೊಲೀಸ್ ವಾಹನ ಓಡಾಟ ಕಂಡು ಗದಗ-ಬೆಟಗೇರಿ ಅವಳಿ ನಗರದ ಜನರು ಗೊಂದಲಕ್ಕೀಡಾದ ಘಟನೆ ನಡೆದಿದೆ. ನಗರದ ಪಂಡಿತ್ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ರಸ್ತೆಯಲ್ಲಿ ನಕಲಿ ಪೊಲೀಸ್ ವಾಹನ ನಿಂತಿದೆ.

    ಈ ಬೊಲೆರೊ ವಾಹನಕ್ಕೆ ಮುಂದೊಂದು ನಂಬರ್, ಹಿಂದೊಂದು ಎರಡೆರಡು ನಂಬರ್ ಪ್ಲೇಟ್ ಇರುವುದನ್ನು ಅನೇಕರು ಗಮನಿಸಿದ್ದಾರೆ. ನೋಡಿದ ಜನರಿಗೆ ಕೆಲಕಾಲ ಗೊಂದಲ ಸೃಷ್ಟಿಯಾಗಿದೆ. ವಾಹನಕ್ಕೆ ಎರಡು ನಂಬರ್ ಇರಲ್ವಲ್ಲಾ, ಏನಿದು ಅಂತ ತಲೆಕೆಡಿಸಿಕೊಂಡಿದ್ದಾರೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದನ್ನೂ ಓದಿ:ಬೆಕ್ಕಿಗಾಗಿಯೇ ಎಸಿ ರೂಮ್, ಮಿನಿ ಥಿಯೇಟರ್ ನಿರ್ಮಾಣ – ಗುಜರಾತಿನಲ್ಲೊಬ್ಬ ಕ್ಯಾಟ್ ಪ್ರಿಯ

    ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು. ಆಗ ಪೊಲೀಸ್ ಸಿಬ್ಬಂದಿ ಒಂದು ಕ್ಷಣ ಕಂಗಾಲಾಗಿದ್ದರು. ಪರಿಶೀಲಿಸಿದಾಗ ವಾಸ್ತವಿಕತೆ ಬಯಲಾಗಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ “ಕ್ಷೇತ್ರಪತಿ” ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಈ ಬೊಲೆರೋ ವಾಹನ ಬಳಸಲಾಗಿತ್ತು ಎಂದು ತಿಳಿದು ಬಂದಿದೆ. ಪರವಾನಿಗೆ ಪತ್ರ ನೋಡಿ ನಂತರ ಶೂಟಿಂಗ್ ಸ್ಥಳ ಬಿಟ್ಟು ಎಲ್ಲಂದರಲ್ಲಿ ಓಡಾಡದಂತೆ ವಾಹನ ಚಾಲಕನಿಗೆ ವಾರ್ನ್ ಮಾಡಿ ಬಿಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿ:ವಿಕೇಂಡ್ ಕರ್ಫ್ಯೂ – ಕೊಡಗಿನಲ್ಲಿ ಉತ್ತಮ ಸ್ಪಂದನೆ, ಬೀದರ್ ನಲ್ಲಿ ಡೋಂಟ್ ಕೇರ್

  • ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR

    ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ದೊಡ್ಡ ಅವಘಡ ಸಂಭವಿಸಿದೆ. 2016ರಲ್ಲಿ ‘ಮಾಸ್ತಿ ಗುಡಿ’ ಸಿನಿಮಾದ ವೇಳೆ ಫೈಟರ್ ಅನಿಲ್, ಉದಯ್ ಸಾವನ್ನಪ್ಪಿದ್ದರು. ಇದೀಗ ಅಂತದ್ದೇ ಇನ್ನೊಂದು ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಇದೀಗ ಐವರ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ.

    ನಿರ್ದೇಶಕ ಶಂಕರ್ ರಾಜ್, ಫೈಟ್ ಮಾಸ್ಟರ್ ವಿನೋದ್ ಹಾಗೂ ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಹೈ ಟೆನ್ಷನ್ ವೈಯರ್ ತಗುಲಿ ಮೃತಪಟ್ಟಿದ್ದರು. ಈ ಸಂಬಂಧ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿರುವ ಪೊಲೀಸರು ಇದೀಗ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಫೈಟ್ ಮಾಸ್ಟರ್ ದು ಯಾವುದೇ ತಪ್ಪಿಲ್ಲ: ಗಾಯಾಳು ರಂಜಿತ್

    ಘಟನೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ವಿನೋದ್, ಸಹ ನಿರ್ದೇಶಕ ಶಂಕರ್‍ರಾಜ್, ಜಮೀನು ಮಾಲೀಕ ಪುಟ್ಟರಾಜು, ಕ್ರೇನ್ ಚಾಲಕ ಮುನಿಯಪ್ಪ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿರ್ಮಾಪಕ ಗುರುದೇಶಪಾಂಡೆಗಾಗಿ ಶೋಧ ಮುಂದುವರಿದಿದೆ. ಈ ಮಧ್ಯೆ ಚಿತ್ರೀಕರಣ ನಡೆಸಲು ಪೊಲೀಸರ ಅನುಮತಿ ಪಡೆದಿರಲಿಲ್ಲ ಅಂತ ರಾಮನಗರ ಎಸ್‍ಪಿ ಗಿರೀಶ್ ಹೇಳಿದ್ದಾರೆ. ಇದನ್ನೂ ಓದಿ: ಲವ್ ಯು ರಚ್ಚು ಶೂಟಿಂಗ್ ದುರಂತ – ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ

    ಅವಘಡದಲ್ಲಿ ಇನ್ನೊಬ್ಬ ಫೈಟರ್ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ ಫೈಟರ್ ವಿವೇಕ್ ಧರಿಸಿದ್ದ ಲೋಹದ ಹಗ್ಗ, ಹೈಟೆನ್ಶನ್ ವೈರ್ ತಗುಲಿ ಈ ದುರಂತ ಸಂಭವಿಸಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾಗೆ ಫೈಟ್ ಮಾಸ್ಟರ್ ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ರಾಜರಾಜೇಶ್ವರಿ ಆಸ್ಪತ್ರೆ ಬಳಿ ಮೃತ ವಿವೇಕ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.  ಇದನ್ನೂ ಓದಿ: ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು: ನಟ ಅಜಯ್ ರಾವ್

  • ಸಿನಿಮಾ ಶೂಟಿಂಗ್‍ನಿಂದ ಮೇಲುಕೋಟೆಯಲ್ಲಿ ದೇವರ ಪೂಜೆಗೆ ತೊಂದರೆ, ಸ್ಥಳ ಮಹಿಮೆಗೆ ಅಪಚಾರ!

    ಸಿನಿಮಾ ಶೂಟಿಂಗ್‍ನಿಂದ ಮೇಲುಕೋಟೆಯಲ್ಲಿ ದೇವರ ಪೂಜೆಗೆ ತೊಂದರೆ, ಸ್ಥಳ ಮಹಿಮೆಗೆ ಅಪಚಾರ!

    – ಭರಾಟೆ ಚಿತ್ರಕ್ಕಾಗಿ ತಾತ್ಕಾಲಿಕವಾಗಿ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ
    – ಒಂದು ಶಕ್ತಿಕೇಂದ್ರದಲ್ಲಿ ಮತ್ತೊಂದು ದೇವರನ್ನು ಸ್ಥಾಪಿಸುವುದು ಎಷ್ಟು ಸರಿ?

    ಮಂಡ್ಯ: ಪುರಾಣ ಪ್ರಸಿದ್ಧ ಮೇಲುಕೋಟೆಗೂ ಸಿನಿಮಾಗಳಿಗೂ ಅವಿನಾಭಾವ ಸಂಬಂಧ. ಇಲ್ಲಿರುವ ದೇವಾಲಯಗಳು, ಆಕರ್ಷಕವಾದ ಲೊಕೇಷನ್ ಗಳು ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಕನ್ನಡ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಮೇಲುಕೋಟೆಯಲ್ಲಿ ಚಿತ್ರೀಕರಣಗೊಂಡು ಭರ್ಜರಿ ಯಶಸ್ಸು ಸಾಧಿಸಿವೆ. ಆದರೆ ಇದೀಗ ಸಿನಿಮಾ ಚಿತ್ರೀಕರಣದಿಂದಾಗಿ ಮೇಲುಕೋಟೆಯಲ್ಲಿ ನಡೆಯುವ ಪೂಜೆಗಳಿಗೆ ತೊಂದರೆಯಾಗುತ್ತಿದ್ದು, ಸ್ಥಳ ಮಹಿಮೆಗೆ ಅಪಚಾರವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆ ಧಾರ್ಮಿಕವಾಗಿ, ಐತಿಹಾಸಿಕವಾಗಿ ಬಹಳ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರ ಸಿನಿಮಾ ನಿರ್ಮಾಣ ಮಾಡುವವರಿಗೂ ಅಚ್ಚುಮೆಚ್ಚಾಗಿದ್ದು ಇಲ್ಲಿ ಸಾಕಷ್ಟು ಚಿತ್ರಗಳು ಶೂಟಿಂಗ್ ನಡೆಯುತ್ತಿರುತ್ತವೆ. ಆಗೆಲ್ಲಾ ಇರದ ಪಾವಿತ್ರ್ಯತೆಯ ಪ್ರಶ್ನೆ ಈಗ ಕಾಡಲಾರಂಭಿಸಿದೆ.

    ಕಳೆದ ಕೆಲವು ದಿನಗಳಿಂದ ನಟ ಶ್ರೀ ಮುರುಳಿ ನಟಿಸುತ್ತಿರುವ `ಭರಾಟೆ’ ಚಿತ್ರ ಶೂಟಿಂಗ್ ಮೇಲುಕೋಟೆಯ ಕಲ್ಯಾಣಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿದೆ. ಇದಕ್ಕಾಗಿ ಚಿತ್ರತಂಡ ಸರ್ಕಾರದಿಂದ ಅನುಮತಿಯನ್ನು ಪಡೆದುಕೊಂಡಿದ್ದು ನವೆಂಬರ್ 11 ರಿಂದ 14ರವರೆಗೆ ಶೂಟಿಂಗ್ ಮಾಡಲು ಸರ್ಕಾರಕ್ಕೆ 96 ಸಾವಿರ ರೂ. ಬಿಲ್ ಪಾವತಿಸಲಾಗಿದೆ.

    ಅನುಮತಿ ಪಡೆದುಕೊಂಡಿರುವ ಚಿತ್ರತಂಡಕ್ಕೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಚಿತ್ರೀಕರಣ ಮಾಡಿ ಎಂದೂ ಹೇಳಲಾಗಿದ್ದರೂ ಚಿತ್ರತಂಡ ಕಲ್ಯಾಣಿಯ ತುಂಬಾ ಕೇಸರಿ ಬಣ್ಣದ ಬಟ್ಟೆಗಳನ್ನ ಕಟ್ಟಿ ಕೇಸರಿಕರಣ ಮಾಡಿದೆ. ಜೊತೆಗೆ ಕಲ್ಯಾಣಿಯಲ್ಲೇ ವಿಶೇಷವಾದ ಸೆಟ್ ಹಾಕಿದ್ದು ಚೌಡೇಶ್ವರಿ ದೇವಿ ವಿಗ್ರಹವನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಒಂದು ಶಕ್ತಿ ಕೇಂದ್ರವಾಗಿರುವ ಮೇಲುಕೋಟೆಯಲ್ಲಿ, ತಾತ್ಕಾಲಿಕವಾಗಿಯಾದರೂ ಬೇರೊಂದು ಶಕ್ತಿ ದೇವರನ್ನ ಪ್ರತಿಷ್ಠಾಪಿಸಿದರೆ ಮೂಲ ದೇವರ ಶಕ್ತಿ ಕುಂದುಂಟಾಗುತ್ತದೆ. ಅದು ತಕ್ಷಣ ಪರಿಣಾಮ ಬೀರದೇ ಇದ್ದರೂ ಭವಿಷ್ಯದಲ್ಲಿ ಪರಿಣಾಮ ಬೀರುತ್ತದೆ ಎಂದು ದೇವಾಲಯದ ಅರ್ಚಕ ಸಂಪತ್ ಕುಮಾರ್ ಹೇಳಿದ್ದಾರೆ.

    ಮೇಲುಕೋಟೆಯ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ವರ್ಷದ ಪ್ರತೀ ದಿನವೂ ಒಂದಲ್ಲಾ ಒಂದು ವಿಶೇಷವಾದ ಪೂಜೆಗಳು ನಡೆಯುತ್ತಿರುತ್ತವೆ. ಹೀಗೆ ನಡೆಯುವ ಪೂಜೆಗಳಿಗೆ ಪವಿತ್ರ ಕಲ್ಯಾಣಿಯಿಂದಲೇ ನೀರನ್ನು ತೆಗೆದುಕೊಂಡು ಹೋಗಿ ಅಭಿಷೇಕ ಮಾಡಲಾಗುತ್ತದೆ. ದೇವಾಲಯ ಮಾತ್ರವಲ್ಲದೆ ಕಲ್ಯಾಣಿಯಲ್ಲೂ ಹಲವು ದೇವರುಗಳಿದ್ದು ಎಲ್ಲಾ ದೇವರಿಗೂ ಪೂಜೆ ಅಭಿಷೇಕ ಮಾಡಬೇಕಾಗುತ್ತದೆ. ಹಾಗೆಯೇ ಕಳೆದ ಭಾನುವಾರ ಮೇಲುಕೋಟೆ ದೇವಾಲಯಕ್ಕೆ ಸಂಬಂಧ ಪಟ್ಟಂತಹ, ಮಹಾಮುನಿ ಜೀಯರ್ ಸ್ವಾಮೀಜಿ ಅವರ ಜಯಂತಿ ಅಂಗವಾಗಿ ಅಭಿಷೇಕ ನಡೆಯಬೇಕಾಗಿತ್ತು. ಕಲ್ಯಾಣಿಯಿಂದ ನೀರನ್ನು ತಂದು ಅಭಿಷೇಕ ನೆರವೇರಿಸಬೇಕಿತ್ತು. ಆದರೆ ಕಲ್ಯಾಣಿಯ ಬಳಿ ಚಿತ್ರ ತಂಡ ಸೆಟ್ ಹಾಕಿದ್ದರಿಂದ, ಕಳೆದ 600 ವರ್ಷಗಳಿಂದಲೂ ನಡೆದುಕೊಂಡು ಬಂದಿದ್ದ ಅಭಿಷೇಕಕ್ಕೆ ತೊಂದರೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಮೇಲುಕೋಟೆಯಲ್ಲಿ ವರ್ಷದ ಹಲವು ದಿನ ಬೇರೆ ಬೇರೆ ಸಿನಿಮಾಗಳ ಶೂಟಿಂಗ್ ನಡೆಯುತ್ತಿರುತ್ತದೆ. ಈ ವೇಳೆ ದೇವಾಲಯದ ಮೂಲ ಸ್ವರೂಪಕ್ಕೆ ಹಾನಿಯುಂಟಾಗುತ್ತದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಚಿತ್ರದ ಶೂಟಿಂಗ್ ಮಾಡುವುದಕ್ಕೆ ಅನುಮತಿ ನೀಡುವ ಅಧಿಕಾರಿಗಳು, ದೇವಾಲಯದ ಉತ್ಸವಗಳಿಗೆ, ಪೂಜಾ ಕೈಂಕರ್ಯಗಳಿಗೆ ಮತ್ತು ಸ್ಥಳ ಮಹಿಮೆಗೆ ತೊಂದರೆಯಾಗದಂತೆ ಚಿತ್ರೀಕರಣ ನಡೆಯುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಧಾರ್ಮಿಕ ಚಿಂತಕ ಆನಂದ್ ಆಳ್ವರ್ ಅಭಿಪ್ರಾಯಪಟ್ಟಿದ್ದಾರೆ.

    ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ವಿವಾದಕ್ಕೆ ಸಿಲುಕಿ ಸುದ್ದಿಯಾಗುತ್ತಿರುವ ಮೇಲುಕೋಟೆಯ ಶ್ರೀ ಚಲುವ ನಾರಾಯಣಸ್ವಾಮಿ ದೇವಾಲಯ ಇದೀಗ ಸಿನಿಮಾ ಚಿತ್ರೀಕರಣದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಗಮನಹರಿಸಿ ಇನ್ನು ಮುಂದೆ ಚಿತ್ರೀಕರಣದಿಂದ ದೇವಾಲಯದ ಆಚರಣೆಗಳಿಗೆ ಮತ್ತು ಭಕ್ತರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಿಜವಾದ ದರೋಡೆಕೋರ ಅಂದ್ಕೊಂಡು ಶೂಟಿಂಗ್ ಮಾಡ್ತಿದ್ದ ನಟನ ಮೇಲೆ ಫೈರಿಂಗ್ ಮಾಡಿದ ಪೊಲೀಸ್

    ನಿಜವಾದ ದರೋಡೆಕೋರ ಅಂದ್ಕೊಂಡು ಶೂಟಿಂಗ್ ಮಾಡ್ತಿದ್ದ ನಟನ ಮೇಲೆ ಫೈರಿಂಗ್ ಮಾಡಿದ ಪೊಲೀಸ್

    ವಾಷಿಂಗ್ಟನ್: ಸಿನಿಮಾಗಾಗಿ ದರೋಡೆಕೋರನಂತೆ ನಟಿಸುತ್ತಿದ್ದ ನಟನನ್ನು ನಿಜವಾದ ದರೋಡೆಕೋರ ಎಂದು ತಿಳಿದು ಪೊಲೀಸರು ಅವರ ಮೇಲೆ ಫೈರಿಂಗ್ ಮಾಡಿರೋ ಘಟನೆ ಅಮೆರಿಕದಲ್ಲಿ ನಡೆದಿದೆ.

    ಇಂಡಿಯಾನಾದ ಕ್ರಾವ್‍ಫರ್ಡ್ಸ್ ವಿಲ್ಲೆ ಪೊಲೀಸರು ಬಾಡಿಕ್ಯಾಮ್ ವಿಡಿಯೋವನ್ನ ಬಿಡುಗಡೆ ಮಾಡಿದ್ದು, ಪೊಲೀಸ್ ಅಧಿಕಾರಿಯೊಬ್ಬರು ನಟನ ಮೇಲೆ ಗುಂಡು ಹಾರಿಸೋ ದೃಶ್ಯ ಸೆರೆಯಾಗಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮುಸುಕುಧಾರಿ ವ್ಯಕ್ತಿ ಗನ್ ಹಿಡಿದು ಉಪಹಾರ ಗೃಹದೊಳಗೆ ಹೋಗುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದಿದ್ರು ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

    ಪೊಲೀಸರು ಸ್ಥಳಕ್ಕೆ ಬಂದ ವೇಳೆ ಶೂಟಿಂಗನ್ನು ನಿಜವಾದ ದರೋಡೆ ಎಂದು ತಿಳಿದು ಗನ್ ಕಳೆಗಿಡುವಂತೆ ಹೇಳಿದ್ದಾರೆ. ಬಳಿಕ ಅದೊಂದು ಶೂಟಿಂಗ್ ಪ್ರಾಪರ್ಟಿ ಅಷ್ಟೇ ಎಂಬುದು ಗೊತ್ತಾಗಿದೆ.

    ಡ್ರಾಪ್ ದಿ ಗನ್ ಎಂದು ಹೇಳುತ್ತಾ ಪೊಲೀಸ್ ಅಧಿಕಾರಿ ಫೈರ್ ಮಾಡೋದನ್ನ ವಿಡಿಯೋದಲ್ಲಿ ಕಾಣಬಹುದು. ಆಗ ನಟ ಜೆಫ್ ಡಫ್ ನಾವು ಸಿನಿಮಾ ಶೂಟಿಂಗ್ ಮಾಡ್ತಿದ್ದೀವಿ ಎಂದು ಕಿರುಚುತ್ತಾ ಗನ್ ಕೆಳಗಿಟ್ಟು ಮುಸುಕು ತೆಗೆದಿದ್ದಾರೆ. ಅದೃಷ್ಟವಶಾತ್ ಪೊಲೀಸರು ಹಾರಿಸಿದ ಗುಂಡು ಡಫ್‍ಗೆ ತಗುಲಲಿಲ್ಲ. ಬದಲಿಗೆ ಹತ್ತಿರದ ಕಟ್ಟಡಕ್ಕೆ ಬಿದ್ದಿದೆ. ಪೊಲೀಸ್ ಇಲಾಖೆ ಈ ವಿಡಿಯೋವನ್ನ ತನ್ನ ವೆಬ್‍ಸೈಟ್‍ನಲ್ಲಿ ಬಿಡುಗಡೆ ಮಾಡಿದೆ.

    ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರೋ ಮತ್ತೊಬ್ಬ ನಟ ಫಿಲಿಪ್ ಡೆಮೊರೆಟ್, ಬುಲೆಟ್ ಆತನ ತಲೆಯ ಪಕ್ಕದಲ್ಲೇ ಹೋಯ್ತು. ಅದರ ಬಗ್ಗೆ ನಾನು ಯೋಚಿಸಲಾರೆ. ಒಂದು ವೇಳೆ ಗುಂಡು ತಾಗಿದ್ದರೆ ದೊಡ್ಡ ಅನಾಹುತವಾಗ್ತಿತ್ತು. ದೇವರ ದಯದಿಂದ ಹಾಗಾಗಲಿಲ್ಲ ಎಂದಿದ್ದಾರೆ.

    ಮಾಂಟ್ಗೊಮೆರಿ ಕೌಂಟಿ ಪ್ರೊಡಕ್ಷನ್‍ನವರು ಸಿನಿಮಾ ಶೂಟಿಂಗ್ ಮಾಡುತ್ತಿದ್ದರೆಂದು ಬಳಿಕ ಇಂಡಿಯಾನಾ ಪೊಲೀಸರಿಗೆ ಗೊತ್ತಾಗಿದೆ. ಆದ್ರೆ ಉಪಹಾರ ಗೃಹದವರಾಗಲಿ, ಪ್ರೊಡಕ್ಷನ್ ಕಂಪನಿಯವರಗಲೀ ಪೊಲೀಸರಿಗೆ ಹಾಗೂ ಅಕ್ಕಪಕ್ಕದವರಿಗೆ ಶೂಟಿಂಗ್ ನಡೆಯುವ ಬಗ್ಗೆ ತಿಳಿಸಿರಲಿಲ್ಲ ಎಂದು ವರದಿಯಾಗಿದೆ.