Tag: ಸಿನಿಮಾ ಬಿಡುಗಡೆ

  • ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ವಿರುದ್ಧ ರಿಷಭ್ ಶೆಟ್ಟಿ ‘ಕಾಂತಾರ’ ರಿಲೀಸ್

    ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ವಿರುದ್ಧ ರಿಷಭ್ ಶೆಟ್ಟಿ ‘ಕಾಂತಾರ’ ರಿಲೀಸ್

    ಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸೆಪ್ಟಂಬರ್ 30ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ದೇಶಕ ಎ.ಪಿ. ಅರ್ಜುನ್ ಏಪ್ರಿಲ್ 10 ರಂದೇ ಟೀಸರ್ ಮೂಲಕ ಹೇಳಿದ್ದರು. ಇದೀಗ ಅದೇ ದಿನದಂದೇ ಕನ್ನಡದ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಅದು ಕೂಡ ನಿರೀಕ್ಷಿತ ಸಿನಿಮಾವಾಗಿರುವುದರಿಂದ ಒಂದು ರೀತಿ ಪೈಪೋಟಿ ನಡೆಯಲಿದೆ.  ಇದನ್ನೂ ಓದಿ : ಹಾಸ್ಯನಟ ನರಸಿಂಹರಾಜು ಹಿರಿಯ ಪುತ್ರಿ, ನಿರ್ದೇಶಕ ಅರವಿಂದ್ ತಾಯಿ ಧರ್ಮವತಿ ನಿಧನ

    ಹೊಂಬಾಳೆ ಫಿಲ್ಮಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಸಿನಿಮಾದ ದಿನಾಂಕವನ್ನು ನಿನ್ನೆ ಘೋಷಣೆ ಮಾಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಈ ಸಿನಿಮಾ ಕೂಡ ಸೆಪ್ಟಂಬರ್ 30 ರಂದೇ ದೇಶದಾದ್ಯಂತ ತೆರೆ ಕಾಣುತ್ತಿದೆ. ಹೀಗಾಗಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ಮಾರ್ಟಿನ್ ಎ.ಪಿ ಅರ್ಜುನ್ ಮತ್ತು ಧ್ರುವ ಕಾಂಬಿನೇಷನ್ ನ ಎರಡನೇ ಸಿನಿಮಾ. ಈಗಾಗಲೇ ಈ ಜೋಡಿ ಗೆದ್ದಿದೆ. ಅಲ್ಲದೇ, ಧ್ರುವ ಸರ್ಜಾ ಅವರು ಸಿನಿಮಾ ಮಾಡುವುದೇ ಕಡಿಮೆ. ಹಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಈ ಸಿನಿಮಾದಲ್ಲಿ ಅದ್ಭುತ ಆಕ್ಷನ್ ಸನ್ನಿವೇಶಗಳು ಇವೆಯಂತೆ. ಈ ಚಿತ್ರಕ್ಕಾಗಿ ಧ್ರುವ ಭರ್ಜರಿ ತಯಾರಿಯನ್ನೂ ಮಾಡಿಕೊಂಡಿದ್ದಾರಂತೆ. ಹೀಗಾಗಿ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

    ಕನ್ನಡ ಸಿನಿಮಾ ರಂಗದ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ರಿಷಭ್ ಶೆಟ್ಟಿ ಅವರದ್ದು. ವಿಭಿನ್ನ ಸಿನಿಮಾಗಳನ್ನು ಮಾಡುವುದರಿಂದ, ಇವರದ್ದೇ ಆದ ನೋಡುಗ ಬಳಗವಿದೆ. ಅಲ್ಲದೇ, ಕಾಂತಾರ ಸಿನಿಮಾದ ಟ್ರೈಲರ್ ಕೆಜಿಎಫ್ 2 ಸಿನಿಮಾ ರಿಲೀಸ್ ವೇಳೆ ಬಿಡುಗಡೆ ಆಗುತ್ತು. ಅದಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಕೂಡ ಚೆನ್ನಾಗಿಯೇ ಮೂಡಿ ಬಂದಿದೆ ಎನ್ನಲಾಗುತ್ತಿದೆ. ಎರಡೂ ಸಿನಿಮಾಗಳಲ್ಲಿ ಪ್ರೇಕ್ಷಕ ಅತೀ ಹೆಚ್ಚು ಯಾವ ಚಿತ್ರಕ್ಕೆ ಕೈ ಹಿಡಿಯಲಿದ್ದಾನೆ ನೋಡಬೇಕು.

  • ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?

    ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?

    ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆ ಆಗದೇ ಉಳಿದಿದ್ದವು. ಸರಕಾರದ ನಿಯಮ, ದೊಡ್ಡ ಚಿತ್ರಗಳ ಹಾವಳಿ, ಪರಭಾಷಾ ಚಿತ್ರಗಳ ಬಿಡುಗಡೆಯಿಂದಾಗಿ ಸಣ್ಣ ಬಜೆಟ್ ಚಿತ್ರಗಳು ಥಿಯೇಟರ್ ಸಿಕ್ಕಿರಲಿಲ್ಲ. ಈಗ ಕೋವಿಡ್ ನಿಯಮಗಳು ಸಡಿಲವಾಗಿವೆ. ಭಾರೀ ಬಜೆಟ್ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿರುವ ಕಾರಣದಿಂದಾಗಿ ಈ ವಾರ ಸ್ಯಾಂಡಲ್ ವುಡ್ ನಲ್ಲಿ ಬರೋಬ್ಬರಿ 11 ಚಿತ್ರಗಳು ಬಿಡುಗಡೆ ಆಗುತ್ತಿವೆ. ಇದನ್ನೂ ಓದಿ : ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?


    ಕೋವಿಡ್ ನಂತರ ಸಾಕಷ್ಟು ಚಿತ್ರಮಂದಿರಗಳು ಮುಚ್ಚಿವೆ. ಪ್ರೇಕ್ಷಕರ ಕೊರತೆಯ ಕಾರಣದಿಂದಾಗಿ ಅನೇಕ ಚಿತ್ರಮಂದಿರಗಳನ್ನೂ ಈಗಲ ಮಾಲೀಕರ ತೆರೆದಿಲ್ಲ. 11 ಚಿತ್ರಗಳಿಗೆ ಥಿಯೇಟರ್ ಸಿಗುತ್ತಾ ಎನ್ನುವ ಗೊಂದಲ ಕೂಡ ಮೂಡಿದೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ


    ‘ಭಾವಚಿತ್ರ’, ‘ಬಹುಕೃತ ವೇಷಂ’, ‘ಬೈ ಟು ಲವ್’, ‘ಧೋಖಾ ದೋಸ್ತಿ’, ‘ಫ್ಯಾಮಿಲಿ ಪ್ಯಾಕ್’, ‘ಗರುಡಾಕ್ಷ’, ‘ಗಿಲ್ಕಿ’, ‘ಮಹಾ ರುದ್ರಂ’, ‘ವರದ’ ಹಾಗೂ ತುಳುವಿನ ‘ಭೋಜರಾಜ ಎಂಬಿಬಿಎಸ್’ ಈ ವಾರ ಬಿಡುಗಡೆ ಆಗುತ್ತಿರುವ ಚಿತ್ರಗಳು. ಇಷ್ಟು ಸಿನಿಮಾಗಳಲ್ಲಿ ‘ಫ್ಯಾಮಿಲಿ ಪ್ಯಾಕ್’ ಓಟಿಟಿ ವೇದಿಕೆಯಲ್ಲಿ ರಿಲೀಸ್ ಆದರೆ, ಉಳಿದವುಗಳು ನೇರವಾಗಿ ಚಿತ್ರಮಂದಿರಗಳಲ್ಲೇ ತೆರೆ ಕಾಣುತ್ತಿವೆ.  ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ


    ಈ ಸಿನಿಮಾಗಳಲ್ಲಿ ಸ್ಟಾರ್ ಸಿನಿಮಾಗಳು ಇರದೇ ಹೋದರು, ನಿರೀಕ್ಷಿತ ಚಿತ್ರಗಳಂತೂ ಇವೆ. ಅವುಗಳನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.


    ಒಂದು ಅಂದಾಜಿನ ಪ್ರಕಾರ ಈಗಾಗಲೇ ಸೆನ್ಸಾರ್ ಆಗಿ ಬಿಡುಗಡೆಗೆ ಕಾದಿರುವ ಚಿತ್ರಗಳ ಸಂಖ್ಯೆ 400ಕ್ಕೂ ಹೆಚ್ಚು. ಕಳೆದ ವರ್ಷ ರೆಡಿಯಾದ ಚಿತ್ರಗಳ ಪಟ್ಟಿಯೂ ಮತ್ತೊಂದಿದೆ. ಈ ನಡುವೆ ಪುನೀತ್ ನಟನೆಯ ‘ಜೇಮ್ಸ್’, ಸುದೀಪ್ ನಟನೆಯ ‘ವಿಕ್ರಾಂತ್ ರೋಣ, ಯಶ್ ನಟನೆಯ ‘ಕೆಜಿಎಫ್ 2’, ತೆಲುಗಿನ ‘ಆರ್.ಆರ್.ಆರ್’ ಸೇರಿದಂತೆ ಭಾರೀ ಬಜೆಟ್ ಚಿತ್ರಗಳು ಮುಂದಿನ ದಿನಗಳಲ್ಲಿ ರಿಲೀಸ್ ಆಗಲಿವೆ. ಹಾಗಾಗಿ ಸಿಕ್ಕಿರುವ ಸಮಯದಲ್ಲೇ ಸಾಕಷ್ಟು ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.

  • ಮೇ 21ಕ್ಕೆ ಯುವರತ್ನ ಬಿಡುಗಡೆ- ನಿರ್ದೇಶಕ ಆನಂದರಾಮ್ ಸ್ಪಷ್ಟನೆ

    ಮೇ 21ಕ್ಕೆ ಯುವರತ್ನ ಬಿಡುಗಡೆ- ನಿರ್ದೇಶಕ ಆನಂದರಾಮ್ ಸ್ಪಷ್ಟನೆ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಯುವರತ್ನ ಸಿನಿಮಾ ಬಿಡುಗಡೆ ಕುರಿತು ಭಾರೀ ಕುತೂಹಲ ಮೂಡಿದ್ದು, ಅಭಿಮಾನಿಗಳು ಬಿಡುಗಡೆ ದಿನಾಂಕದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೊರೊನಾ ಭೀತಿ ಎದುರಾಗದಿದ್ದಲ್ಲಿ ಏಪ್ರಿಲ್ 3ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿತ್ತು. ಆದರೆ ಸಿನಿಮಾ ಬಿಡುಗಡೆ ಕುರಿತು ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಸ್ಪಷ್ಟನೆ ನೀಡಿದ್ದಾರೆ.

    ಹಲವು ದಿನಗಳಿಂದ ಯುವರತ್ನ ಸಿನಿಮಾದ ಬಿಡುಗಡೆ ದಿನಾಂಕದ ಕುರಿತು ಹೆಚ್ಚು ಚರ್ಚೆ ನಡೆಯುತ್ತಿದೆ. ಇದರ ಮಧ್ಯೆಯೇ ಸಿನಿಮಾದ ನಿರ್ದೇಶಕ ಸಂತೋಶ್ ಆನಂದರಾಮ್ ಟ್ವೀಟ್ ಮೂಲಕ ಮಾಹಿತಿ ನೀಡಿ ಬಿಡುಗಡೆ ದಿನಾಂಕದ ಕುರಿತು ಸುಳಿವು ನೀಡಿದ್ದರು. ಆದರೆ ಈ ಕೆಲಸವನ್ನು ಕಿಡಿಗೇಡಿಗಳು ಮಾಡಿದ್ದಾರೆ ಎಂಬುದು ನಂತರ ತಿಳಿದಿದೆ. ನಂತರ ಸಂತೋಷ್ ಅವರು ಇದಕ್ಕೆ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ. ಹೀಗಾಗಿ ಯುವರತ್ನ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

    ಸಿನಿಮಾ ಬಿಡುಗಡೆ ಕುರಿತು ಸಂತೋಷ್ ಆನಂದರಾಮ್ ಹೆಸರಿನಲ್ಲಿ ಟ್ವೀಟ್ ಮಾಡಲಾಗಿತ್ತು. ಯುವರತ್ನನಿಗಾಗಿ ಕಾಯುತ್ತಿರುವ ಎಲ್ಲ ಪವರ್ ಸ್ಟಾರ್ ಅಭಿಮಾನಿಗಳಿಗೆ ಬಿಗ್ ಸರ್‍ಪ್ರೈಸ್. ಬಹುನಿರೀಕ್ಷಿತ ಯುವರತ್ನ ಸಿನಿಮಾ ಮೇ 21ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಪವರ್ ಸ್ಟಾರ್ ಸ್ವಾಗತಿಸಲು ಸಜ್ಜಾಗಿ ಎಂದು ಟ್ವೀಟ್ ಮಾಡಿದ್ದರು. ಇದರಿಂದಾಗಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಆದರೆ ಈ ಸುದ್ದಿ ಸುಳ್ಳು ಎಂಬುದು ನಂತರ ತಿಳಿದಿದೆ. ಸ್ವತಃ ಸಂತೋಷ್ ಆನಂದರಾಮ್ ಅವರೇ ಸರಣಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ಇದು ತಪ್ಪು ಮಾಹಿತಿ ಇನ್ನೂ 2 ಹಾಡುಗಳ ಚಿತ್ರೀಕರಣವಿದೆ. ಅಲ್ಲದೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪಕ್ಕಾ ಮುಗಿದ ಮೇಲೆ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲಂಸ್ ತಿಳಿಸುತ್ತದೆ. ಯುವರತ್ನ ಬಿಗ್ಗೆಸ್ಟ್ ರಿಲೀಸ್ ಆಗಿದ್ದು, ಪಬ್ಲಿಸಿಟಿ, ಆಡಿಯೋ-ಟ್ರೈಲರ್ ರಿಲೀಸ್ ಎಲ್ಲದಕ್ಕೂ ಪ್ಲಾನ್ ಇದೆ. ಹೀಗಾಗಿ ದಿನಾಂಕ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಮತ್ತೆ ಟ್ವೀಟ್ ಮಾಡಿದ್ದು, ಯುವರತ್ನ ಬಳಸಿಕೊಂಡು ಕೆಲವರು ಫೂಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾನು ಪ್ರತಿಕ್ರಿಯಿಸಿದೆ. ಯುವರತ್ನ ನಮ್ಮೆಲ್ಲರಿಗೂ ದೊಡ್ಡಮಟ್ಟದ್ದಾಗಿದೆ ಎಂದು ಮೂರನೇ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಈ ಕುರಿತು ಹೊಂಬಾಳೆ ಫಿಲಂಸ್ ಆಗಲಿ ಅಥವಾ ಪುನೀತ್ ರಾಜ್‍ಕುಮಾರ್ ಆಗಲಿ ಮಾಹಿತಿ ಖಚಿತಪಡಿಸಿಲ್ಲ. ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ ಪುನೀತ್ ರಾಜ್‍ಕುಮಾರ್ ಸಹಾಯ ಹಸ್ತ ಚಾಚಿದ್ದು, ಇತ್ತೀಚೆಗಷ್ಟೇ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ.ಗಳ ಚೆಕ್ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದ್ದರು.

    ಇತ್ತೀಚೆಗೆ ಪುನೀತ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಚಿತ್ರ ತಂಡ ಡೈಲಾಗ್ ಟೀಸರ್‍ನ್ನು ಉಡುಗೊರೆಯಾಗಿ ನೀಡಿತ್ತು. ಯುವರತ್ನ ಚಿತ್ರತಂಡ ಡೈಲಾಗ್ ಟೀಸರ್ ಬಿಡುಗಡೆ ಮಾಡಿದರೆ, ಜೇಮ್ಸ್ ಚಿತ್ರತಂಡ ಸಹ ಮೋಷನ್ ಪೋಸ್ಟರ್ ರಿಲೀಸ್ ಮಾಡಿತ್ತು. ಯುವರತ್ನದ ಡೈಲಾಗ್ ಟೀಸರ್ ಯುವ ಸಮೂಹವನ್ನು ಸೆಳೆದಿತ್ತು. ಹೀಗಾಗಿ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಕೊಂಡಿದೆ.

  • ಬೆಂಗ್ಳೂರಲ್ಲಿ ಮನೆ ಮಾಡಿದ್ಮೇಲೆ ಮದ್ವೆ ಮಾತು: ರಕ್ಷಿತ್ ಶೆಟ್ಟಿ

    ಬೆಂಗ್ಳೂರಲ್ಲಿ ಮನೆ ಮಾಡಿದ್ಮೇಲೆ ಮದ್ವೆ ಮಾತು: ರಕ್ಷಿತ್ ಶೆಟ್ಟಿ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಅವನೇ ಶ್ರೀಮನ್ನಾಯಾರಣ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಇದರ ನಡುವೆಯೇ ರಕ್ಷಿತ್ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಾರಿದಾಡುತ್ತಿದ್ದು, ಈ ಕುರಿತು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.

    ಮದುವೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಿತ್ ಶೆಟ್ಟಿ, ನನಗೆ ಒಪ್ಪಿಗೆಯಾಗುವ ಹುಡುಗಿ ಸಿಕ್ಕರೆ ಖಂಡಿತಾ ಆಗುತ್ತೇನೆ. ಆದರೆ ಈಗ ನನ್ನ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ನಾನ್ಸೆನ್ಸ್. ಸಿನಿಮಾ ಬಿಡುಗಡೆಯಾದ ಬಳಿಕ ನನ್ನ ಆಸೆ ಮೊದಲು ಬೆಂಗಳೂರಿನಲ್ಲಿ ಮನೆ ಮಾಡಬೇಕು. ಅದು ಆಗುವ ಹೊತ್ತಿಗೆ ಅಮ್ಮ ಯಾವುದಾದರೂ ಹುಡುಗಿ, ಹುಡುಕಿ ಇಟ್ಟಿದ್ದರೆ ಆಮೇಲೆ ಮದುವೆ ಮಾತು ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಸಿನಿಮಾ ಬಗ್ಗೆ ಕೇಳಿ ಬಂದ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿದ ರಕ್ಷಿತ್, ಮೊದಲು ಇಂತಹ ಟೀಕೆಗಳು ಬೇಸರ ಉಂಟುಮಾಡುತ್ತಿತ್ತು, ಆದರೆ ಈಗ ಪರಿಣಾಮ ಬೀರಲ್ಲ ಎಂದರು. ಅಲ್ಲದೇ ‘ದಿ ಬಲ್ಲರ್ ಆಫ್ ಬಸ್ಟರ್ ಕ್ರಗ್ಸ್’ ಸಿನಿಮಾದಂತಹ ಜಾನರ್ ನಲ್ಲಿ ಸಾಕಷ್ಟು ಚಿತ್ರಗಳು ಬಂದಿದೆ. ಆದ್ದರಿಂದ ಸಿನಿಮಾ ನೋಡಿದ ಮೇಲೆ ವಿಮರ್ಶೆಗಳು ಮಾಡಿದರೆ ಚೆನ್ನ ಎಂದರು.

    ಇತ್ತ ನಟಿ ಶಾನ್ವಿ ಶ್ರೀವಾತ್ಸವ್ ಜೊತೆ ರಕ್ಷಿತ್ ಲವ್ ಎಂಬ ಗಾಸಿಪ್ ಹೆಚ್ಚಾಗಿತ್ತು. ಈ ಮಧ್ಯೆ ಅಭಿಮಾನಿಯೊಬ್ಬರು ಬೇಗ ಮದುವೆ ಮಾಡಿಕೊಳ್ಳಿ ಸರ್ ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಕ್ಷಿತ್, ಇಂತಹ ವಿಚಾರಗಳನ್ನು ಸುಮ್ಮನೆ ನಿರ್ಲಕ್ಷಿಸಿ ಮುಂದೆ ಸಾಗಿ ಎಂದಿದ್ದಾರೆ.