Tag: ಸಿನಿಮಾ ನಿರ್ಮಾಣ

  • ಆನಂದ್ ಮಹೀಂದ್ರಾ ಥ್ರೋಬ್ಯಾಕ್ ಫೋಟೋ ವೈರಲ್

    ಆನಂದ್ ಮಹೀಂದ್ರಾ ಥ್ರೋಬ್ಯಾಕ್ ಫೋಟೋ ವೈರಲ್

    ಮುಂಬೈ: ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಥ್ರೋಬ್ಯಾಕ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ.

    ಇಂದು ಬಿಸ್ಸನೆಸ್ ಫೀಲ್ಡ್ ನಲ್ಲಿ ಆನಂದ್ ಮಹೀಂದ್ರಾ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಆದರೆ ಹಿಂದೆ ಆನಂದ್ ಅವರು ಸಿನಿಮಾ ನಿರ್ಮಾಪಕರಾಗಲು ಬಯಸಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಈಗ ಆನಂದ್ ಮಹೀಂದ್ರಾ ಅವರಿಗೆ 66 ವರ್ಷವಾಗಿದ್ದು, ಇಂದು ಮಧ್ಯಾಹ್ನ ಟ್ವಿಟ್ಟರ್ ನಲ್ಲಿ ಅಪರೂಪದ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡು ತಮ್ಮ ಹಿಂದಿನ ಕನಸಿನ ಬಗ್ಗೆ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು

    ಆನಂದ್ ಅವರು ಯುವಕರಾಗಿದ್ದಾಗ ತೆಗೆದ ಬ್ಲಾಕ್ ಅಂಡ್ ವೈಟ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ಆ ಫೋಟೋವನ್ನು ನೋಡಿದ ಆನಂದ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ಫೋಟೋ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಆನಂದ್ ಅವರು, ಈ ಫೋಟೋವನ್ನು ಹಲವು ವರ್ಷಗಳ ಹಿಂದೆ ಮಧ್ಯಪ್ರದೇಶದ ಇಂದೋರ್ ಬಳಿಯ ದೂರದ ಹಳ್ಳಿಯಲ್ಲಿ 16 ಎಂಎಂ ಕ್ಯಾಮರಾದಲ್ಲಿ ತೆಗೆಯಾಲಾಗಿತ್ತು. ನಾನು ಆಗ ಕಾಲೇಜಿನಲ್ಲಿ ಸಿನಿಮಾ ನಿರ್ಮಾಣದ ತರಬೇತಿಯನ್ನು ಪಡೆಯುತ್ತಿದ್ದೆ. ಈ ಫೋಟೋವನ್ನು ಇಂಧೋರ್ ಬಳಿಯ ದೂರದ ಹಳ್ಳಿಯಲ್ಲಿ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸುವಾಗ ತೆಗೆಯಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

    ಟ್ವಿಟರ್ ಬಳಕೆದಾರರು ಆನಂದ್ ಅವರಿಗೆ, ‘ಶಾಲೆ/ಕಾಲೇಜು ದಿನಗಳಲ್ಲಿ ನಿಮ್ಮ ಮಹತ್ವಾಕಾಂಕ್ಷೆ’ ಏನೆಂದು ಕೇಳಿದಾಗ ಅವರು ಉತ್ತರಿಸಿದ್ದು, ಇದಕ್ಕೆ ಉತ್ತರಿಸುವುದು ಸುಲಭ. ನಾನು ಚಲನಚಿತ್ರ ನಿರ್ಮಾಪಕನಾಗಲು ಬಯಸಿದ್ದೆ ಮತ್ತು ಕಾಲೇಜಿನಲ್ಲಿ ಸಿನಿಮಾ ಕುರಿತು ಅಧ್ಯಯನವನ್ನು ಸಹ ಮಾಡಿದ್ದೇನೆ. ನಾನು ನನ್ನ ಪ್ರಬಂಧವನ್ನು ’77 ಕುಂಭಮೇಳ’ ಸಿನಿಮಾ ಬಗ್ಗೆ ಮಾಡಿದ್ದೆ ಎಂದು ಉತ್ತರಿಸಿದ್ದಾರೆ.

    ಆನಂದ್ ಅವರು ಆಗಾಗ್ಗೆ ತಮ್ಮ ಸಿನಿಮಾ ಮೇಲಿನ ಪ್ರೀತಿಯ ಬಗ್ಗೆ ಮಾತನಾಡುತ್ತಾರೆ. 2017 ರಲ್ಲಿ, ಟ್ವಿಟ್ಟರ್ ನಲ್ಲಿ ಅವರು, ತಮ್ಮ ಪ್ರಬಂಧದ ಸಿನಿಮಾವಾದ ‘ಕುಂಭಮೇಳ’ ಚಿತ್ರೀಕರಣದ ಬಗ್ಗೆ ಹಂಚಿಕೊಂಡಿದ್ದರು. ಇದನ್ನೂ ಓದಿ: ಜಾರ್ಖಂಡ್ ಮೂಲದ ಮೂವರು ಸೋಂಕಿತರು ಮಡಿಕೇರಿಯಿಂದ ಪರಾರಿ

    2014 ರ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಚಲನಚಿತ್ರ ನಿರ್ಮಾಣವನ್ನು ಏಕೆ ಆರಿಸಿಕೊಂಡೆ ಎಂದು ಜನರು ನನ್ನನ್ನು ಆಗಾಗ್ಗೆ ಕೇಳುತ್ತಾರೆ. ಅದಕ್ಕೆ ಉತ್ತರ ಇಂದು ಕೊಡುತ್ತೇನೆ. ನನ್ನ ಸ್ವಂತ ಜಾಗವನ್ನು ನಾನು ಕೆತ್ತಬಲ್ಲೆ ಎಂದು ಸಾಬೀತುಪಡಿಸಲು ಚಲನಚಿತ್ರವು ನನಗೆ ಒಂದು ಅದ್ಭುತ ವೇದಿಕೆಯಾಗಿದೆ. ಸಿನಿಮಾ ನನ್ನ ಸಾಮಥ್ರ್ಯವನ್ನು ಹೆಚ್ಚಿಸಲು ವಿಶ್ವಾಸವನ್ನು ನೀಡಿದೆ. ನನ್ನ ಜೀವನದುದ್ದಕ್ಕೂ ನನ್ನನ್ನು ಉತ್ತಮ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದರು.

  • ಸಿನಿಮಾ ನಿರ್ಮಾಣ ಮಾಡಬೇಕೆಂಬ ಕನಸು ಇದೆ: ನಟ ದೊಡ್ಡಣ್ಣ

    ಸಿನಿಮಾ ನಿರ್ಮಾಣ ಮಾಡಬೇಕೆಂಬ ಕನಸು ಇದೆ: ನಟ ದೊಡ್ಡಣ್ಣ

    ಶಿವಮೊಗ್ಗ: ಸಿನಿಮಾ ಅನ್ನುವುದು ಒಂದು ಕುಟುಂಬ, ನನಗೂ ಸಹ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ ಇದೆ. ನಾನು ಅಶೋಕ್ ಕಶ್ಯಪ್ ಸೇರಿ ಸಿನಿಮಾ ನಿರ್ಮಾಣ ಮಾಡಬೇಕೆಂದುಕೊಂಡಿದ್ದೇವೆ ಎಂದು ಹಿರಿಯ ನಟ ದೊಡ್ಡಣ್ಣ ತಿಳಿಸಿದರು.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಪ್ರತಿಕ್ರಿಯಿಸಿದ ಅವರು, ಸಿನಿಮಾ ನಿರ್ಮಾಣ ಕುರಿತು ಈಗಾಗಲೇ ಮಾತುಕತೆ ನಡೆಸುತ್ತಿದ್ದೇವೆ. ಸತ್ಯ ಘಟನೆ ಆಧಾರಿತ ಸಿನಿಮಾಗಳು ಯಶಸ್ಸು ಗಳಿಸುತ್ತಿವೆ. ಇದರಿಂದ ನೈಜ ಘಟನೆ ಆಧಾರಿತ ಸಿನಿಮಾ ಹಾಗೂ ಪುರಾಣ ಆಧಾರಿತ ಸಿನಿಮಾಗಳನ್ನು ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ- ಕಾಂಗ್ರೆಸ್ ವಿರುದ್ಧ ಹೆಚ್‍ಡಿಕೆ ಕಿಡಿ

    ಇಂದು ಕನ್ನಡವನ್ನು ಉಳಿಸಬೇಕಿದೆ. ಮಕ್ಕಳು ಯಾವುದೇ ಮಾಧ್ಯಮದಲ್ಲಿ ಕಲಿಯಲಿ ಆದರೆ ಪೋಷಕರು ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಸಬೇಕು. ಕನ್ನಡ ನಮ್ಮ ತಾಯಿ ಭಾಷೆ, ತಾಯಿ ಭಾಷೆ ಮರೆತರೆ ತಾಯಿನ ಮರೆತ ಹಾಗೆ, ತಾಯಿನ ಮರೆತರೆ, ತಾಯಿ ನಾಡನ್ನು ಮರೆತ ಹಾಗೆ, ತಾಯಿ ನಾಡನ್ನು ಮರೆತರೆ ಸಂಸ್ಕೃತಿಯನ್ನು ಮರೆತ ಹಾಗೇ ಎಂದರು. ದನ್ನೂ ಓದಿ: ಮಗನ ತಲೆಯನ್ನು ನೆಲಕ್ಕೆ ಜಜ್ಜಿ ಕೊಂದ ತಂದೆಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

    ಕನ್ನಡ ಶಾಲೆಗಳು ಉಳಿಯಬೇಕು. ಪಂಪ, ರನ್ನ, ಜನ್ನರ ಸಾಹಿತ್ಯ ಓದಿದರೆ ಕನ್ನಡ ಉಳಿದಂತೆ ಆಗುತ್ತದೆ. ಕಾನ್ವೆಂಟ್ ಸಂಸ್ಕೃತಿ ಬಂದ ಮೇಲೆ ಮಕ್ಕಳು ಪೋಷಕರನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಿದ್ದಾರೆ ಎಂಬ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ

    ಕನ್ನಡ ಚಿತ್ರರಂಗದಲ್ಲಿ ಪೋಷಕ ನಟ ಬಳಕೆ ಕಡಿಮೆ ಆಗುತ್ತಿರುವುದರಿಂದಲೇ ಸಿನಿಮಾಗಳು ಹೆಚ್ಚು ದಿನ ಓಡುತ್ತಿಲ್ಲ. ಚಿತ್ರದಲ್ಲಿ ಎಲ್ಲಾ ಸಂಬಂಧಗಳು ಇದ್ದಾಗ ಅದು ಅರ್ಥ ಪೂರ್ಣವಾಗುತ್ತದೆ. ಹರಿಕಥೆ ದಾಸನಿಗೂ ತಾಳಮೇಳ ಇರಬೇಕು. ಹಾಗೆಯೇ ನಾಯಕ ನಟ, ನಟಿಗೆ ಚಿತ್ರದಲ್ಲಿ ಅತ್ತೆ, ಮಾವ, ಚಿಕ್ಕಪ್ಪ ಹೀಗೆ ಎಲ್ಲಾ ಸಂಬಂಧಗಳು ಕಥೆಯಲ್ಲಿದ್ದಾಗ ಆ ಚಿತ್ರ ಯಶಸ್ಸು ಗಳಿಸುತ್ತದೆ ಎಂದರು.