Tag: ಸಿನಿಮಾ ಕೊರೊನಾ

  • ಒಂದೊಳ್ಳೆ ಕಾರಣಕ್ಕೆ ಬೀದಿಗಿಳಿದಿದ್ದೇನೆ: ಸತೀಶ್ ನೀನಾಸಂ

    ಒಂದೊಳ್ಳೆ ಕಾರಣಕ್ಕೆ ಬೀದಿಗಿಳಿದಿದ್ದೇನೆ: ಸತೀಶ್ ನೀನಾಸಂ

    ಬೆಂಗಳೂರು: ಕೊರೊನಾ ಸೋಂಕಿನಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸಾಕಷ್ಟು ಮಂದಿ ನೆರವಿಗೆ ಬಂದಿದ್ದಾರೆ. ಈಗ ಸ್ಯಾಂಡಲ್‍ವುಡ್ ನಟ ಸತೀಶ್ ನೀನಾಸಂ ಬೀದಿಗಿಳಿದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.

    ಕೆಲಸ ಹಾಗೂ ಹೊಟ್ಟೆ ಊಟ ಇಲ್ಲದೆ ಕಷ್ಟಪಡುತ್ತಿರುವವರ ಸಹಾಯಕ್ಕೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಬಂದಿದ್ದಾರೆ. ರಾಗಿಣಿ, ಭುವನ್, ಹರ್ಷಿಕಾ, ದರ್ಶನ್, ಉಪೇಂದ್ರ, ಸುದೀಪ್ ಹೀಗೆ ಹಲವಾರು ಮಂದಿ ಸಿನಿ ಸ್ಟಾರ್‍ಗಳು ಕಷ್ಟದಲ್ಲಿರುವವ ನೆರವಿಗೆ ನಿಂತಿದ್ದಾರೆ. ಈಗ ಇದೆ ಸಾಲಿಗೆ ನಟ ಸತೀಶ್ ನೀನಾಸಂ ಅವರು ಸಹ ಒಂದೊಳ್ಳೆ ಕೆಲಸ ಮಾಡಲು ಬೀದಿಗೆ ಇಳಿದಿದ್ದಾರೆ.

    ದಿನಕ್ಕೆ ಸಾವಿರಾರು ಮಂದಿಗೆ ಆಹಾರ ವಿತರಣೆ ಮಾಡುವ ಮೂಲಕವಾಗಿ ನೆರವಾಗುತ್ತಿದ್ದಾರೆ. ಪ್ರತಿನಿತ್ಯ ಗಾಂಧಿ ಬಜಾರ್ ಸುತ್ತಮುತ್ತಲ ಪ್ರದೇಶದಲ್ಲಿರುವ ಸಾವಿರ ಜನರಿಗೆ ಆಹಾರ ವಿತರಿಸುತ್ತಿದ್ದಾರೆ. ತಳ್ಳುವ ಗಾಡಿಯ ವ್ಯಾಪಾರಿಗಳು, ಬಡವರು ಹಾಗೂ ನಿರ್ಗತಿಕರಿಗೆ ಊಟ ವಿತರಣೆ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ಸತೀಶ್ ಅವರಿಗೆ ಸ್ನೇಹಿತರು ಕೈ ಜೋಡಿಸಿದ್ದಾರೆ.