Tag: ಸಿನಿಮಾಸುದ್ದಿ

  • ಹಿರಿಯ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್‍ಐಆರ್

    ಹಿರಿಯ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್‍ಐಆರ್

    ಚೆನ್ನೈ: ತಮಿಳಿನ ಖ್ಯಾತ ಹಿರಿಯ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮಣಿರತ್ನಂ ನಿರ್ದೇಶನದ ಐತಿಹಾಸಿಕ ಕಥೆಯನ್ನು ಆಧರಿಸಿದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಶೂಟಿಂಗ್ ಸಮಯದಲ್ಲಿ ಅವಘಡ ನಡೆದಿದೆ. ಈ ಸಿನಿಮಾದ ಶೂಟಿಂಗ್ ಮಾಡುತ್ತಿರಬೇಕಾದರೆ ಕುದುರೆ ಸಾವನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ಕುದುರೆಯ ಮಾಲೀಕರು ಮಣಿರತ್ನಂ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

    ಕುದುರೆಯೂ ಆಗಸ್ಟ್ 11ರಂದು ಸಾವನ್ನಪ್ಪಿದ್ದು, ಇವರ ವಿರುದ್ಧ ಎಫ್‍ಐಆರ್ ಅನ್ನು ಆಗಸ್ಟ್ 18 ರಂದು ದಾಖಲಿಸಲಾಗಿದ್ದು, ಆದರೆ ಪ್ರಕರಣ ತಡವಾಗಿ ಎಲ್ಲರಿಗೂ ತಿಳಿದಿದೆ. ಅನಿಮಲ್ ವೆಲ್‍ಫೇರ್ ಬೋರ್ಡ್ ಆಫ್ ಇಂಡಿಯಾ ಕುದುರೆ ಸಾವಿನ ಕುರಿತು ತನಿಖೆ ನಡೆಸಿದ್ದು, ಈ ಕುರಿತು ಹೈದರಾಬಾದ್ ಜಿಲ್ಲಾಧಿಕಾರಿಗಳಿಗೆ ತಿಳಿಸಿದೆ. ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

    ಏನಿದು ಘಟನೆ?
    ‘ಪೊನ್ನಿಯಿನ್ ಸೆಲ್ವನ್’ ಶೂಟಿಂಗ್ ಸೆಟ್‍ನಲ್ಲಿ ಯುದ್ಧದ ಸನ್ನಿವೇಶವನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಕುದುರೆಯು ನೆಲಕ್ಕೆ ಬಿದ್ದು ಪೆಟ್ಟಾಗಿ ಸಾವನ್ನಪ್ಪಿದೆ. ಆದರೆ ಈ ಕುರಿತು ತನಿಖೆ ನಡೆಯುತ್ತಿದ್ದು, ಶೂಟಿಂಗ್ ಬಿಸಿಲಿನಲ್ಲಿ ನಡೆಯುತ್ತಿದ್ದ ಪರಿಣಾಮ ಕುದುರೆಗೆ ಡಿಹೈಡ್ರೇಷನ್ ಆಗಿ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ತಾಲಿಬಾನ್ ಸರ್ಕಾರ ರಚನೆಗೆ ಸಂತೋಷ ವ್ಯಕ್ತಪಡಿಸೋದು ಅನಾಗರೀಕತೆ: ನಾಸಿರುದ್ದೀನ್ ಶಾ

    ಈ ವಿರುದ್ಧ ಅನಿಮಲ್ ವೆಲ್‍ಫೇರ್ ಅವರು ಸಿನಿಮಾದಲ್ಲಿ ಪ್ರಾಣಿಗಳನ್ನು ಬಳಸುವುದನ್ನು ತಡೆಯಬೇಕು. ನಿಜವಾದ ಪ್ರಾಣಿಗಳ ಬದಲಾಗಿದೆ ಸಿಜಿಐ ಅಥವಾ ಇತರೆ ತಂತ್ರಜ್ಞಾನಗಳನ್ನು ಬಳಸಬೇಕು ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಚಿತ್ರತಂಡ, ಇದು ಐತಿಹಾಸಿಕ ಕಥೆಯಾಗಿರುವುದರಿಂದ ಈ ಸಿನಿಮಾದಲ್ಲಿ ಹೆಚ್ಚು ಯುದ್ಧದ ಸನ್ನಿವೇಶಗಳು ಬರುತ್ತೆ. ಅದಕ್ಕೆ ಕುದುರೆಯನ್ನು ಬಳಸಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ:ಹಾಲಿವುಡ್ ಸಿನ್ಮಾದಲ್ಲಿ ನಟಿಸುವ ಜೊತೆಗೆ ನಿರ್ಮಾಣಕ್ಕೆ ಮುಂದಾದ ಪದ್ಮಾವತಿ

    ದ್ವಿಪಾತ್ರದಲ್ಲಿ ಅಭಿಮಾನಿಗಳನ್ನು ರಂಜಿಸಲಿರುವ ರೈ!
    ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಆಕ್ಷನ್ ಕಟ್ ಹೇಳುತ್ತಿರುವ ಪೆÇನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ 47 ವರ್ಷದ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಭರ್ಜರಿಯಾಗಿ ಕಮ್‍ಬ್ಯಾಕ್ ಮಾಡುತ್ತಿದ್ದಾರೆ. ಐಶ್ವರ್ಯ 4 ವರ್ಷಗಳ ನಂತರ ಮತ್ತೆ ಬಿಗ್ ಸ್ಕ್ರೀನ್‍ಗೆ ಮರಳಲು ರೆಡಿಯಾಗಿದ್ದು, ಸುಮಾರು 12 ವರ್ಷಗಳ ಬಳಿಕ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ.

  • ಇನ್‍ ಸ್ಟಾ ಫಾಲೋವರ್ಸ್ – ಯಾರಿಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೆ?

    ಇನ್‍ ಸ್ಟಾ ಫಾಲೋವರ್ಸ್ – ಯಾರಿಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೆ?

    ಹೈದರಾಬಾದ್: ದಕ್ಷಿಣ ಭಾರತದ ಟಾಲಿವುಡ್ ಸ್ಟೈಲಿಶ್ ನಟ ಅಲ್ಲು ಅರ್ಜುನ್ 1.3 ಕೋಟಿ ಫಾಲೋವರ್ಸ್‍ಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹೊಂದಿದ್ದು, ಈ ಮೂಲಕ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಸ್ಟೈಲ್ ಮೂಲಕವೇ ಎಲ್ಲರನ್ನು ಸೆಳೆಯುವ ನಟ ಅಲ್ಲು ಅರ್ಜುನ್. ಇವರಿಗೆ ಕೋಟ್ಯಂತರ ಅಭಿಮಾನಿ ಬಳಗವನ್ನೆ ಹೊಂದಿದ್ದಾರೆ. ಈಗ ಇನ್‍ಸ್ಟಾಗ್ರಾಮ್‍ನಲ್ಲಿಯೂ ಅತೀ ಹೆಚ್ಚು ಫಾಲೋವರ್ಸ್‍ಗಳಿಂದ ಇವರ ಗರಿ ಹೆಚ್ಚಿದೆ. ಅದು ಅಲ್ಲದೆ ಇವರು ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ದಕ್ಷಿಣದ ಮೊದಲ ನಟ ಎಂಬ ಖ್ಯಾತಿಗೂ ಒಳಗಾಗಿದ್ದಾರೆ.ಇದನ್ನೂ ಓದಿ :ಚಂದನವನದಲ್ಲಿ ಸುದೀಪ್ ಸಿನಿ ಜರ್ನಿ

    ದಕ್ಷಿಣ ಭಾರತದ ಸಿನಿಮಾ ನಟರ ಪಟ್ಟಿಯಲ್ಲಿ ವಿಜಯ್ ದೇವರಕೊಂಡ 2ನೇ ಸ್ಥಾನವನ್ನು ಹೊಂದಿದ್ದು, 12.9 ಮಿಲಿಯನ್(1.2 ಕೋಟಿ) ಜನರು ಇನ್‍ಸ್ಟಾದಲ್ಲಿ ಫಾಲೋ ಮಾಡುತ್ತಿದ್ದಾರೆ. ಮಹೇಶ್ ಬಾಬು 71 ಲಕ್ಷ, ಪ್ರಭಾಸ್ 69 ಲಕ್ಷ, ವಿಜಯ್ ಸೇತುಪತಿ 43 ಲಕ್ಷ, ರಾಮ್ ಚರಣ್ 41 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.ಇದನ್ನೂ ಓದಿ :ಗಂಡನ ಮನೆ ಬಿಟ್ಟು ಹೋದ್ರಾ ಶಿಲ್ಪಾ ಶೆಟ್ಟಿ?

    ಅಲ್ಲು ಅರ್ಜುನ್ ಅವರ ‘ಪುಷ್ಪ’ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಕೊರೊನಾ ಕಾರಣದಿಂದ ಚಿತ್ರದ ಬಿಡುಗಡೆ ಡಿಸೆಂಬರ್‍ಗೆ ಹೋಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಡಾಲಿ ಧನಂಜಯ್ ನಟಿಸಿರುವುದು ಕನ್ನಡಿಗರಿಗೆ ಇನ್ನೂ ಸಂತೋಷ ತಂದಿದ್ದು, ಈ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

    ನಮ್ಮ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಮೂಲಕ ಇಡೀ ಇಂಡಿಯಾದಲ್ಲೇ ಅಲೆ ಎಬ್ಬಿಸಿದ್ದರು. ಇವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಿಂದೆ ಬಿದ್ದಿಲ್ಲ. ಇವರಿಗೂ 50 ಲಕ್ಷ ಫಾಲೋವರ್ಸ್ ಮತ್ತು ಟ್ಚೀಟರ್‍ನಲ್ಲಿ 7 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.ಇದನ್ನೂ ಓದಿ :ತಂದೆ ಸಮಾಧಿ ಬಳಿ ಹುಟ್ಟುಹಬ್ಬ ಆಚರಿಸಿದ ಬಾಲಕಿ

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 13 ಲಕ್ಷ ಫಾಲೋವರ್ಸ್‍ಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹೊಂದಿದ್ದು, ತಮ್ಮ ಮೂವೀ ಅಪ್ಡೇಟ್ ಕೊಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

  • ಚೊಚ್ಚಲ ಬಾಲಿವುಡ್ ಸಿನಿಮಾ ಶೂಟಿಂಗ್ ಮುಗಿದ ಖುಷಿಯಲ್ಲಿ ಕೂಡಗಿನ ಕುವರಿ

    ಚೊಚ್ಚಲ ಬಾಲಿವುಡ್ ಸಿನಿಮಾ ಶೂಟಿಂಗ್ ಮುಗಿದ ಖುಷಿಯಲ್ಲಿ ಕೂಡಗಿನ ಕುವರಿ

    ಮುಂಬೈ: ಕೂಡಗಿನ ಕುವರಿ ರಶ್ಮಿಕಾ ಮಂದಣ್ಣ ತಮ್ಮ ಚೊಚ್ಚಲ ಬಾಲಿವುಡ್ ಸಿನಿಮಾ ಶೂಟಿಂಗ್ ಮುಗಿದ ಖುಷಿಯಲ್ಲಿದ್ದಾರೆ.

    ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚಿದ್ದ ರಶ್ಮಿಕಾ ಈಗ ಬಾಲಿವುಡ್‍ನಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೋಗಿದ್ದಾರೆ. ಅವರ ಬಾಲಿವುಡ್‍ನ ಚೊಚ್ಚಲ ಸಿನಿಮಾ ‘ಮಿಷನ್ ಮಜ್ನು’ ಯಾವುದೇ ರೀತಿಯ ತೊಂದರೆಗಳಿಲ್ಲದೆ ಶೂಟಿಂಗ್ ಮುಗಿದಿದೆ. ಇದರಿಂದ ರಶ್ಮಿಕಾ ಖುಷ್ ಆಗಿದ್ದಾರೆ.ಇದನ್ನೂ ಓದಿ:ಯುವನಟನಿಗೆ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟ ಜೋಗಿ

    ಈ ಸಿನಿಮಾದಲ್ಲಿ ‘ಶೇರಾಷಾ’ ಖ್ಯಾತಿಯ ‘ಸಿದ್ಧಾರ್ಥ್ ಮಲ್ಹೋತ್ರ’ ರಶ್ಮಿಕಾಗೆ ಜೋಡಿಯಾಗಿದ್ದು, ಇವರ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಶೂಟಿಂಗ್ ಮುಗಿದ ನಂತರ ಸಿದ್ಧಾರ್ಥ್ ಮಲ್ಹೋತ್ರ ಇನ್‍ಸ್ಟಾಗ್ರಾಮ್‍ನಲ್ಲಿ ರಶ್ಮಿಕಾ ಜೊತೆಗಿನ ಫೋಟೋ ಶೇರ್ ಮಾಡಿದ್ದು, ನಿಮ್ಮ ಜೊತೆ ಕೆಲಸ ಮಾಡಿದ್ದು, ಖುಷಿಯಾಗಿದೆ. ಅದಷ್ಟು ಬೇಗ ಮತ್ತೆ ಭೇಟಿಯಾಗೋಣ’  ‘ವಿಶೇಷ ವ್ಯಕ್ತಿ ಜೊತೆ ವಿಶೇಷ ಟೀಮ್ ‘ಎಂದು ಬರೆದು ಪೋಸ್ಟ್ ಮಾಡಿದ್ದರು.ಇದನ್ನೂ ಓದಿ:ವಿಚ್ಛೇದನಕ್ಕೆ ಮುಂದಾದ್ರಾ ಸಮಂತಾ, ನಾಗಚೈತನ್ಯ?

     

    View this post on Instagram

     

    A post shared by Sidharth Malhotra (@sidmalhotra)

    ರಶ್ಮಿಕಾ ‘ಗುಡ್‍ಬೈ’ ಸಿನಿಮಾದಲ್ಲಿ ಬಿಗ್‍ಬಿ ಅಮಿತಾಭ್ ಬಚ್ಚನ್ ಜೊತೆಗೂ ನಟಿಸುತ್ತಿದ್ದಾರೆ. ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಜೋಡಿಯಾಗಿ ನಟಿಸಿರುವ ‘ಪುಷ್ಟ’ ಸಿನಿಮಾ ಕೊರೊನಾ ಕಾರಣದಿಂದ ಚಿತ್ರದ ಬಿಡುಗಡೆ ಡಿಸೆಂಬರ್‍ಗೆ ಹೋಗಿದೆ. ಇವರ ಅಭಿಮಾನಿಗಳು ಇವರ ನಟನೆಯ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.ಇದನ್ನೂ ಓದಿ:ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

    ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ತಮ್ಮ ದಿನನಿತ್ಯದ ವರ್ಕೌಟ್ ವೀಡಿಯೋ, ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

  • ವಿಚ್ಛೇದನಕ್ಕೆ ಮುಂದಾದ್ರಾ ಸಮಂತಾ, ನಾಗಚೈತನ್ಯ?

    ವಿಚ್ಛೇದನಕ್ಕೆ ಮುಂದಾದ್ರಾ ಸಮಂತಾ, ನಾಗಚೈತನ್ಯ?

    ಹೈದರಾಬಾದ್: ದಕ್ಷಿಣ ಭಾರತ ಸಿನಿ ಅಂಗಳದ ಸೂಪರ್ ಹಿಟ್ ಜೋಡಿ ಸಮಂತಾ ಮತ್ತು ನಾಗಚೈತನ್ಯ. ಪ್ರೇಮಪಕ್ಷಿಗಳ ಹಾಗೆ ಹಾರಡುತ್ತಿದ್ದ ಈ ಜೋಡಿ ನಡುವೆ ಬಿರುಕು ಮೂಡಿದ್ದು, ಈಗ ವಿಚ್ಛೇದನದವರೆಗೂ ಹೋಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    2010ರಲ್ಲಿ ತೆರೆಕಂಡ ‘ಯೇ ಮಾಯಾ ಚೆಸಾವಾ’ ಸಿನಿಮಾದಲ್ಲಿ ತೆರೆ ಮೇಲೆ ಜೋಡಿಯಾಗಿದ್ದ ಇವರು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ದಾಂಪತ್ಯ ಜೀವನ ಪ್ರಾರಂಭವಾಗಿ ಕೇವಲ ನಾಲ್ಕು ವರ್ಷಗಳವಷ್ಟೇ ಆಗಿದೆ. ಈಗ ಇವರ ನಡುವೆ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ.ಇದನ್ನೂ ಓದಿ:ಯುವನಟನಿಗೆ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟ ಜೋಗಿ

    ಯಾಕೆ ಈ ಗುಸುಗುಸು?
    ‘ಅಕ್ಕಿನೇನಿ’ ಸೊಸೆಯಾದ ಸಮಂತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಅಕ್ಕಿನೇನಿ ಎಂದು ಮದುವೆ ನಂತರ ಹಾಕಿಕೊಂಡಿದ್ದರು. ಈ ಹೆಸರಿನಿಂದಲ್ಲೇ ಇವರನ್ನು ಕರೆಯಲಾಗುತ್ತಿತ್ತು. ಆದರೆ ದಿಢೀರ್ ಎಂದು ಸಮಂತಾ ತಮ್ಮ ಫೇಸ್‍ಬುಕ್, ಇನ್‍ಸ್ಟಾಗ್ರಾಮ್ ಹಾಗೂ ಟ್ವೀಟರ್‍ನಲ್ಲಿ ‘ಅಕ್ಕಿನೇನಿ’ ಹೆಸರನ್ನು ತೆಗೆದುಹಾಕಿದ್ದಾರೆ. ಇದು ಸಂದೇಹಕ್ಕೆ ಕಾರಣವಾಗಿದೆ.ಇದನ್ನೂ ಓದಿ:ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

  • ಯುವನಟನಿಗೆ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟ ಜೋಗಿ

    ಯುವನಟನಿಗೆ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟ ಜೋಗಿ

    ಬೆಂಗಳೂರು: ಚಂದನವನದಲ್ಲಿ ಲಾಂಗ್ ಎಂದರೆ ನಮಗೆ ತಕ್ಷಣ ನೆನೆಪಿಗೆ ಬರುವುದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್. ಈಗ ಅವರು ಯುವನಟ ಶ್ರೇಯಸ್ ಖುಷ್‍ಗೆ ಲಾಂಗ್ ಹಿಡಿಯುವುದನ್ನು ಹೇಳಿಕೊಡುತ್ತಿದ್ದಾರೆ.

    ಚಂದನವನಕ್ಕೆ ಸ್ಟೈಲಿಶ್ ಆಗಿ ಲಾಂಗ್ ಹೇಗೆ ಹಿಡಿಯಬೇಕು ಎಂದು ತೋರಿಸಿದವರು ಶಿವಣ್ಣ. ಅವರು ಲಾಂಗ್ ಹಿಡಿಯುವ ಸ್ಟೈಲ್‍ನ ಇಷ್ಟಪಡದ ಜನರಿಲ್ಲ. ಈಗ ಯುವನಟ ಶ್ರೇಯಸ್ ಖುಷ್‍ಗೆ ಲಾಂಗ್ ಹಿಡಿಯುವುದನ್ನು ಹೇಳಿಕೊಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.ಇದನ್ನೂ ಓದಿ:ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು: ಪೂಜಾಗಾಂಧಿ

    ಯಾರಿದು ನಟ?
    ‘ರಾಣ’ ಚಿತ್ರದ ಮೂಲಕ ಹೊಸದಾಗಿ ಕನ್ನಡಿಗರಿಗೆ ಶ್ರೇಯಸ್ ಖುಷ್ ಪರಿಚಯವಾಗುತ್ತಿದ್ದು, ಈ ಸಿನಿಮಾದ ಶೂಟಿಂಗ್ ಸೆಟ್‍ಗೆ ಶಿವಣ್ಣ ಹೋಗಿದ್ದಾರೆ. ಆ ಸಮಯದಲ್ಲಿ ಖುಷ್ ಅವರ ಆಸೆಯಂತೆ ಶಿವಣ್ಣ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟಿದ್ದಾರೆ. ಇದಕ್ಕೆ ಖುಷ್ ಫುಲ್ ಖುಷ್ ಆಗಿದ್ದಾರೆ.ಇದನ್ನೂ ಓದಿ:ಚಂದನವನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಎಂಟ್ರಿ

    ಸದ್ಯಕ್ಕೆ ಶಿವಣ್ಣ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಲಾಂಗ್ ಹಿಡಿಯುವ ಸಿನಿಮಾಗಳನ್ನು ಸ್ವಲ್ಪ ದೂರವಿಟ್ಟಿದ್ದಾರೆ. ಅವರ 125ನೇ ಸಿನಿಮಾ ಗೀತಾ ಬ್ಯಾನರ್‍ನಲ್ಲಿ ಸಿದ್ಧವಾಗುತ್ತಿದೆ. ಈಗ ಆ ಸಿನಿಮಾದ ಪ್ರಿ ಪ್ರೊಡಕ್ಷನ್ ನಡೆಯುತ್ತಿದ್ದು, ಅರ್ಜುನ್ ಜನ್ಯಾ ಅವರ ಸ್ಟುಡಿಯೋದಲ್ಲಿ ಹಾಡುಗಳ ರೆಕಾರ್ಡಿಂಗ್ ನಡೆಯುತ್ತಿದೆ. ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ಹರ್ಷ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಇದನ್ನೂ ಓದಿ:ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ