Tag: ಸಿನಿಮಾಸುದ್ದಿ

  • ರಾಕಿಂಗ್ ಸ್ಟಾರ್‌ನನ್ನು ಹಾಡಿ ಹೊಗಳಿದ ನಟಿ ಪೂಜಾ ಹೆಗ್ಡೆ

    ರಾಕಿಂಗ್ ಸ್ಟಾರ್‌ನನ್ನು ಹಾಡಿ ಹೊಗಳಿದ ನಟಿ ಪೂಜಾ ಹೆಗ್ಡೆ

    – ಬಚ್ಚನ್ ಜೊತೆ ನಟಿಸಬೇಕು ಎಂದ ನಟಿ

    ಚೆನ್ನೈ: ಟಾಲಿವುಡ್, ಕಾಲಿವುಡ್ ನಟಿ ಪೂಜಾ ಹೆಗ್ಡೆ ಚಂದನವನದ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹಾಡಿ ಹೊಗಳಿದ್ದಾರೆ.

    ‘ಮೋಸ್ಟ್ ಎಲಿಜಿಬುಲ್ ಬ್ಯಾಚುಲರ್’ ಸಿನಿಮಾ ರಿಲೀಸ್ ಆದ ಬಳಿಕ ಪೂಜಾ ಟ್ವಿಟ್ವರ್ ನಲ್ಲಿ ಅಭಿಮಾನಿಗಳಿಗೆ ‘ಏನಾದರೂ ಕೇಳಿ’ ಎಂದು ಟ್ವೀಟ್ ಮಾಡಿದ್ದಾರೆ. ಅದಕ್ಕೆ ಅಭಿಮಾನಿಯೊಬ್ಬರು, ನಿಮಗೆ ಯಾರ ಜೊತೆ ನಟಿಸಬೇಕು ಎಂದು ಕನಸಿದೆ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ಏಕೈಕ ವ್ಯಕ್ತಿ ಅಮಿತಾಬ್ ಬಚ್ಚನ್ ಸರ್ ಜೊತೆ ನಟಿಸಬೇಕು. ಅದು ನಿಜವಾಗಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ತಮ್ಮ ಕನಸಿನ ನಟನ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    ಜ್ಯೂನಿಯರ್ ಎನ್‍ಟಿಆರ್ ಅಭಿಮಾನಿಗಳು ಅವರನ್ನು ಒಂದು ಪದದಲ್ಲಿ ವಿವರಿಸಿ ಎಂದು ಕೇಳಿದ್ದಕ್ಕೆ ಪೂಜಾ, ‘ರಿಯಲ್’ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಅದು ಅಲ್ಲದೇ ಮಂಗಳೂರಿನ ಬೆಡಗಿಯಾದ ಪೂಜಾ ಬಳಿ ಯಶ್ ಬಗ್ಗೆ ಕೇಳಿದ್ದಕ್ಕೆ ‘ಕನ್ನಡ ಸಿನಿಮಾರಂಗ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

    ಅದು ಅಲ್ಲದೇ ಅವರನ್ನು ಅಭಿಮಾನಿಗಳು, ಅವರು ನಟಿಸಿದ ಸ್ಟಾರ್ ಸಹೋದ್ಯೋಗಿಗಳು ಮತ್ತು ಅವರ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಅವರ ಗುರಿಗಳ ಬಗ್ಗೆ ತುಂಬಾ ಪ್ರಶ್ನೆಗಳನ್ನು ಕೇಳಲಾಯಿತು. ಅವರ ಮುಂಬರುವ ‘ಆಚಾರ್ಯ’ ಚಿತ್ರದಲ್ಲಿ ತೆಲುಗು ಸೂಪರ್‌ಸ್ಟಾರ್ ಚಿರಂಜೀವಿ ಜೊತೆ ಕೆಲಸ ಮಾಡಿದ ಅನುಭವವನ್ನು ವಿವರಿಸಲು ಕೇಳಿದಾಗ ಅವರು, ಆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಚಿರಂಜೀವಿ ಅವರು ಇಂದು ‘ಮೋಸ್ಟ್ ಎಲಿಜಿಬುಲ್ ಬ್ಯಾಚುಲರ್’ ಸಿನಿಮಾದಲ್ಲಿ ನನ್ನ ಅಭಿನಯದ ಬಗ್ಗೆ ಸಂದೇಶ ಕಳುಹಿಸಿದರು. ಅದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಅದು ನನಗೆ ಇನ್ನೂ ಹೆಚ್ಚು ಕೆಲಸ ಮಾಡಲು ಸ್ಫೂರ್ತಿಯನ್ನು ನೀಡಿದೆ ಎಂದರು. ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ನನ್ನ ಮೇಲೆ ಲೈಂಗಿಕ ಕಿರುಕುಳವಾಗಿತ್ತು: ನೀನಾ ಗುಪ್ತಾ

    ‘ಮೋಸ್ಟ್ ಎಲಿಜಿಬುಲ್ ಬ್ಯಾಚುಲರ್’ ನಲ್ಲಿ ಅಖಿಲ್ ಅಕ್ಕಿನೇನಿ ಜೊತೆ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದು, ಬೊಮ್ಮರಿಲ್ಲು ಭಾಸ್ಕರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

  • ಕಠಿಣ ಸಮಯ ಬರುವುದು ಸಹಜ, ಅದನ್ನು ಶಾಂತಿ, ನಗುವಿನಿಂದ ಎದುರಿಸಬೇಕು: ಸುದೀಪ್

    ಕಠಿಣ ಸಮಯ ಬರುವುದು ಸಹಜ, ಅದನ್ನು ಶಾಂತಿ, ನಗುವಿನಿಂದ ಎದುರಿಸಬೇಕು: ಸುದೀಪ್

    – ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕಿಚ್ಚ

    ಬೆಂಗಳೂರು: ಎಲ್ಲರ ಜೀವನದಲ್ಲಿ ಕಠಿಣ ಸಮಯ ಬರುವುದು ಸಹಜ, ಅದನ್ನು ಶಾಂತಿ, ನಗುವಿನಿಂದ ಎದುರಿಸಬೇಕು ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.

    soorappa babu

    ಕಿಚ್ಚ ಅಭಿನಯದ ‘ಕೋಟಿಗೊಬ್ಬ-03’ ಸಿನಿಮಾ ರಿಲೀಸ್ ವೇಳೆ ಸ್ವಲ್ಪ ಸಮಸ್ಯೆ ಆಗಿತ್ತು. ಈ ವೇಳೆ ಕಿಚ್ಚನ ಅಭಿಮಾನಿಗಳು ಬೇಸರಗೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ದಿನ ತಡವಾಗಿ ಅಂದರೆ ಈ ಶುಕ್ರವಾರ ‘ಕೋಟಿಗೊಬ್ಬ-03’ ಸಿನಿಮಾವನ್ನು ರಿಲೀಸ್ ಮಾಡಲಾಯಿತು. ಈ ಗಲಾಟೆಯ ನಡುವೆಯೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಖುಷ್ ಆದ ಕಿಚ್ಚ ಇನ್‍ಸ್ಟಾಗ್ರಾಮ್ ನಲ್ಲಿ, ನನಗೆ ಬೆಂಬಲ ನೀಡಿದ ಎಲ್ಲ ಸ್ನೇಹಿತರಿಗೂ ಧನ್ಯವಾದಗಳು. ನೀವು ಅದ್ಭುತ ಮತ್ತು ನಿಮ್ಮ ಜೀವನದಲ್ಲಿ ಒಂದು ಸ್ಥಾನವನ್ನು ಗಳಿಸಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ. ಅದನ್ನು ನಾನು ಗೌರವಿಸುತ್ತೇನೆ ಎಂದು ಬರೆದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಂದು ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

     

    View this post on Instagram

     

    A post shared by KicchaSudeepa (@kichchasudeepa)

    ಆ ಫೋಟೋದಲ್ಲಿಯೂ ಸುದೀಪ್, ಎಲ್ಲರೂ ತಮ್ಮ ಜೀವನಲ್ಲಿ ಕಠಿಣ ಸಮಯವನ್ನು ಎದುರಿಸಬೇಕು. ಅದನ್ನು ನಾವು ಶಾಂತಿಯಿಂದ, ನಗುನಗುತ ಎದುರಿಸಬೇಕು ಎಂದು ಬರೆದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

    ‘ಕೋಟಿಗೊಬ್ಬ-03’ ಈ ಗುರುವಾರ ರಿಲೀಸ್ ಆಗಬೇಕಿತ್ತು. ಆದರೆ ವಿತರಕರ ಸಮಸ್ಯೆಯಿಂದ ಒಂದು ದಿನ ತಡವಾಗಿ ಸಿನಿಮಾ ರಿಲೀಸ್ ಮಾಡಲಾಯಿತು. ಏನೇ ತೊಂದರೆಯಾದರೂ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೂ ‘ಕೋಟಿಗೊಬ್ಬ-03’ ಸಿನಿಮಾದ ತೊಂದರೆ ಇನ್ನೂ ಬಗೆಹರಿದಿಲ್ಲ. ಪ್ರಸ್ತುತ ಈ ವಿಚಾರ ಕೋರ್ಟ್ ಮೆಟ್ಟಿಲು ಏರುವ ಸಾಧ್ಯತೆಯಿದೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ FIR

  • ಇಬ್ಬರು ಸ್ಟಾರ್‌ಗಳ ಜೊತೆ ಯಶ್‌ಗೆ ಸ್ಥಾನ – ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್

    ಇಬ್ಬರು ಸ್ಟಾರ್‌ಗಳ ಜೊತೆ ಯಶ್‌ಗೆ ಸ್ಥಾನ – ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್

    ಬೆಂಗಳೂರು: ಚಂದನವನದ ಸೂಪರ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.

    ಕೆಜಿಎಫ್ ಭಾಗ 1 ಚಿತ್ರ ತೆರೆಕಂಡ ನಂತರ ರಾಕಿಂಗ್ ಸ್ಟಾರ್ ಯಶ್ ಹೆಸರು ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಮಾಡಿತ್ತು. ಈಗ ಇವರ ಹೆಸರು ಕನ್ನಡಸಿನಿಮಾರಂಗದಲ್ಲಿ ಮಾತ್ರವಲ್ಲ, ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿಯೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ಯಶ್ ದಕ್ಷಿಣಭಾರತದ ಮೇರು ನಟನಾಗಿದ್ದಾರೆ. ಫೋರ್ಬ್ಸ್ ಮ್ಯಾಗಜಿನ್ ನಲ್ಲಿ ಸೆಲೆಬ್ರಿಟಿ ಸ್ಪೆಷಲ್ ಎಡಿಷನ್‍ನ ರಿಲೀಸ್ ಆಗಿದ್ದು, ಈ ಮುಖಪುಟದಲ್ಲಿ ಯಶ್ ಫೋಟೋ ಕೂಡ ರಾರಾಜಿಸಿದೆ. ಯಶ್ ಅಭಿಮಾನಿಗಳು ಈ ಎಡಿಷನ್ ನೋಡಿ ಫುಲ್ ಖುಷ್ ಆಗಿದ್ದಾರೆ. ಈ ಹಿನ್ನೆಲೆ ಇವರ ಅಭಿಮಾನಿಗಳು ಟ್ವಿಟರ್ ನಲ್ಲಿ #YashBOSS ಎಂದು ಹಾಕಿದ್ದು, ಈಗ ಅದು ಟ್ರೆಂಡ್ ಆಗಿದೆ. ಇದನ್ನೂ ಓದಿ: ತಿರುಗುವ ಮನೆ ನಿರ್ಮಿಸಿ ಪತ್ನಿಗೆ ಗಿಫ್ಟ್ ಕೊಟ್ಟ 72ರ ಪತಿ

    ಫೋರ್ಬ್ಸ್ ಮ್ಯಾಗಜಿನ್ ಇದೇ ಮೊದಲಬಾರಿಗೆ ಫೋರ್ಬ್ಸ್ ದಕ್ಷಿಣ ಭಾರತದ ಸೆಲೆಬ್ರಿಟಿಗಳನ್ನೇ ಇಟ್ಟುಕೊಂಡು ವಿಶೇಷ ಎಡಿಷನ್ ರಿಲೀಸ್ ಮಾಡಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸೆಲೆಬ್ರಿಟಿಗಳನ್ನು ಈ ಎಡಿಷನ್ ನಲ್ಲಿ ಸೇರಿಸಲಾಗಿದೆ. ಕನ್ನಡದಿಂದ ಯಶ್, ತಮಿಳಿನಿಂದ ನಯನತಾರಾ, ಮಲಯಾಳಂನಿಂದ ದುಲ್ಖರ್ ಸಲ್ಮಾನ್ ಫೋಟೋ ಮ್ಯಾಗಜಿನ್ ಮುಖಪುಟದಲ್ಲಿದೆ.

    ಈ ಕುರಿತು ಫೋರ್ಬ್ಸ್ ಟ್ವಿಟ್ಟರ್ ನಲ್ಲಿ ವೀಡಿಯೋ ಹಂಚಿಕೊಂಡಿದ್ದು, ಯಶ್ ಬ್ಲಾಕ್ ಕೋಟ್ ಮತ್ತು ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಅದರಲ್ಲಿಯೂ ಇವರ ಹೇರ್​ಸ್ಟೈಲ್​ ಮಾತ್ರ ಸಖತ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಫೋರ್ಬ್ಸ್ ನಲ್ಲಿ ಯಶ್ ಫೊಟೋ ನೋಡುತ್ತಿದ್ದಂತೆ ಅವರ ಅಭಿಮಾನಿಗಳು ಕೆಜಿಎಫ್ ಚಾಪ್ಟರ್ 2 ಹಾಗೂ #YashBOSS ಹ್ಯಾಶ್‍ಟ್ಯಾಗ್ ಹಾಕುತ್ತಿದ್ದು, ಈಗ ಅದು ಟ್ರೆಂಡ್ ಆಗಿದೆ. ಇದನ್ನೂ ಓದಿ: ಯಶ್ ಹೇರ್ ಸ್ಟೈಲ್‍ಗೆ ಅಭಿಮಾನಿಗಳು ಫಿದಾ

  • ನೀನಾಸಂ ಮಂಜು ‘ಕನ್ನೇರಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್

    ನೀನಾಸಂ ಮಂಜು ‘ಕನ್ನೇರಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್

    ‘ಮೂಕಹಕ್ಕಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ಮತ್ತೊಂದು ಚಿತ್ರ ಕೈಗೆತ್ತಿಕೊಂಡು ಚಿತ್ರೀಕರಣವನ್ನೂ ಕಂಪ್ಲೀಟ್ ಮಾಡಿದ್ದಾರೆ. ಆ ಚಿತ್ರದ ಹೆಸರೇ ‘ಕನ್ನೇರಿ’. ನೈಜ ಘಟನೆ ಆಧಾರಿತ ಈ ಚಿತ್ರ ಫಸ್ಟ್ ಲುಕ್ ಮೂಲಕ ಪ್ರೇಕ್ಷಕರೆದುರು ಬಂದಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ‘ಕನ್ನೇರಿ’ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ‘ಕನ್ನೇರಿ’ ಮಹಿಳಾ ಪ್ರಧಾನ ಚಿತ್ರ. ಚಿತ್ರಕ್ಕೆ ನೈಜ ಘಟನೆಯೇ ಪ್ರೇರಣೆ ಎನ್ನುತ್ತಾರೆ ನಿರ್ದೇಶಕ ನೀಸಾಸಂ ಮಂಜು. ಅದು ಬೇರಾವ ಘಟನೆ ಅಲ್ಲ ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ. ಈ ಹೋರಾಟದ ಜೊತೆ ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆ. ಚಿತ್ರಕ್ಕೆ ಕಥೆಯ ಜವಾಬ್ದಾರಿಯನ್ನು ಕೋಟಿಗಾನಹಳ್ಳಿ ರಾಮಯ್ಯ ವಹಿಸಿಕೊಂಡಿದ್ರೆ, ಚಿತ್ರಕಥೆ ಹಾಗೂ ನಿರ್ದೇಶನದ ನೊಗವನ್ನು ನೀನಾಸಂ ಮಂಜು ಹೊತ್ತಿದ್ದಾರೆ. ಇದನ್ನೂ ಓದಿ: ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ

    ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದ ನಂತರ ಏನಾಯಿತು? ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ, ಅವರ ಬದುಕು ಯಾವೆಲ್ಲ ತಿರುವು ಪಡೆಯುತ್ತೆ ಎಂಬ ಹೋರಾಟದ ಕಥೆ ಹೊಂದಿರುವ ಈ ಚಿತ್ರಕ್ಕೆ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ಜೀವ ತುಂಬಿದ್ದಾರೆ. ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತ ಕಲಾವಿದರು ಜೊತೆಯಾಗಿದ್ದಾರೆ.

    ನೈಜತೆಗೆ ಹೆಚ್ಚು ಒತ್ತು ನೀಡಿರುವ ಚಿತ್ರತಂಡ ಬುಡಕಟ್ಟು ಜನರನ್ನೂ ಕೂಡ ಚಿತ್ರದಲ್ಲಿ ತೊಡಗಿಸಿಕೊಂಡಿದೆ. ಬೆಂಗಳೂರು, ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಚಿತ್ರಕ್ಕಿದೆ. ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ‘ಕನ್ನೇರಿ’ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯ ಆರಂಭಿಸಿದೆ. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಮೊದಲೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಪ್ರಭಾಸ್

  • ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ

    ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ತನ್ನ ವಿರುದ್ಧ ಟೀಕೆ ಮಾಡುತ್ತಿರುವವ ವಿರುದ್ಧ ಸ್ಟ್ರಾಂಗ್ ಆಗಿ ಉತ್ತರ ಕೊಟ್ಟಿದ್ದಾರೆ.

    ಸಮಂತಾ ಮತ್ತು ನಾಗಚೈತನ್ಯ ಇತ್ತೀಚೆಗೆ ತಮ್ಮ ವಿಚ್ಛೇದನದ ವಿಚಾರವನ್ನು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಸಿದ್ದರು. ಈ ಹಿನ್ನೆಲೆ ಇವರ ಸಂಸಾರದ ಒಡೆಯಲು ಸಮಂತಾನೇ ಕಾರಣ ಎಂಬ ಮಾತು ಕೇಳಿಬರುತ್ತಿತ್ತು. ಈ ಪರಿಣಾಮ ಬೇಸರಗೊಂಡ ಸಮಂತಾ ಇನ್‍ಸ್ಟಾ ಸ್ಟೋರಿಯಲ್ಲಿ, ಮಹಿಳೆಯರು ಮಾತ್ರ ನಿರಂತರವಾಗಿ ನೈತಿಕವಾಗಿ ಪ್ರಶ್ನಾರ್ಹವಾಗಿದ್ದರೆ, ಅದೇ ಪುರುಷ ಮಾಡಿದಾಗ ನೈತಿಕವಾಗಿ ಅವರನ್ನು ಪ್ರಶ್ನಿಸುವುದಿಲ್ಲ. ಹಾಗಿದ್ದರೆ ನಾವು ಸಮಾಜದಲ್ಲಿ ಮೂಲಭೂತ ನೈತಿಕತೆಯನ್ನು ಹೊಂದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.  ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

    ಅ.2 ರಂದು ಸಮಂತಾ ತಮ್ಮ ದಾಂಪತ್ಯದ ಬಗ್ಗೆ, ಹೆಚ್ಚು ಆಲೋಚನೆಯ ನಂತರ ಚಾಯ್ ಮತ್ತು ನಾನು ನಮ್ಮ ಸ್ವಂತ ದಾರಿಗಳನ್ನು ಅನುಸರಿಸಲಿದ್ದೇವೆ. ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ನಮ್ಮ ಸಂಬಂಧ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ ಎಂದು ಬರೆದು ಪೋಸ್ಟ್ ಮಾಡಿದ್ದರು.

    ಅಕ್ಕಿನೇನಿ ಕುಟುಂಬ ಸಮಂತಾಗೆ ಜೀವನಾಂಶವಾಗಿ 200 ಕೋಟಿ ರೂ.ವನ್ನು ನೀಡಲು ಮುಂದಾಗಿತ್ತು. ಆದರೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗ ಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    ಈ ಹಿನ್ನೆಲೆ ಹಲವು ನಟ- ನಟಿಯರು ಬೇಸರವನ್ನು ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಇದಕ್ಕೆ ಸಮಂತಾ ಅವರ ಬಾಲಿವುಡ್ ಎಂಟ್ರಿಯೇ ಕಾರಣ ಎಂದು ಹೇಳಿದ್ದರು.

  • ಅಣ್ಣಾಥೆ ಚಿತ್ರತಂಡದಿಂದ ಎಸ್‍ಪಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ

    ಅಣ್ಣಾಥೆ ಚಿತ್ರತಂಡದಿಂದ ಎಸ್‍ಪಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ

    ಚೆನ್ನೈ: ದಿವಂಗತ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಅಭಿಮಾನಿಗಳಿಗೆ ‘ಅಣ್ಣಾಥೆ’ ಸಿನಿಮಾ ತಂಡ ಸಿಹಿಸುದ್ದಿ ನೀಡಿದ್ದು, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

    ಸನ್ ಪಿಕ್ಚರ್ಸ್ ಈ ಕುರಿತು ಟ್ಚಿಟರ್ ನಲ್ಲಿ, ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿದ ರಜನಿಕಾಂತ್ ಅಭಿನಯದ ‘ಅಣ್ಣಾಥೆ’ ಚಿತ್ರದ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೇ ಅ.4 ರಂದು ಸಂಜೆ 6 ಗಂಟೆಗೆ ಎಸ್‍ಪಿಬಿ ಹಾಡನ್ನು ಬಿಡುಗಡೆ ಮಾಡಲಾಗುವುದು ಎಂದು ಟ್ಚೀಟ್ ಮಾಡುವ ಮೂಲಕ ಖಚಿತಪಡಿಸಿದೆ.  ಇದನ್ನೂ ಓದಿ: ಬೀದಿ ಹುಡುಗನ ಡ್ಯಾನ್ಸ್ ಗೆ ವಿಸ್ಮಯಗೊಂಡ ನೆಟ್ಟಿಗರು – ವೀಡಿಯೋ ವೈರಲ್

    ಈ ಹಾಡು ನಿಜಕ್ಕೂ ವಿಶೇಷವಾಗಿದೆ ಏಕೆಂದರೆ ಇದು ರಜನಿಕಾಂತ್ ಅಭಿನಯದ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಕೊನೆಯ ಹಾಡು ಆಗಿದೆ. ಈ ಹಾಡನ್ನು ಡಿ ಇಮ್ಮಾನ್ ಸಂಯೋಜಿಸಿದ್ದಾರೆ. ಇದನ್ನು ಕಳೆದ ವಾರ ಎಸ್‍ಪಿಬಿಯ ಮೊದಲ ವರ್ಷದ ಪುಣ್ಯಸ್ಮರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಬೇಕಿತ್ತು, ಆದರೆ ತಯಾರಕರು ಅದನ್ನು ಬಿಡುಗಡೆ ಮಾಡಿರಲಿಲ್ಲ.

    ಈ ಚಿತ್ರಕ್ಕೆ ಸಿರುತೈ ಶಿವ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರೀಕರಣವು ಅಂತಿಮ ಹಂತದಲ್ಲಿದೆ. ಈ ಚಿತ್ರವನ್ನು ದೀಪಾವಳಿಯಲ್ಲಿ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ. ಬಹಳ ದಿನಗಳ ಬಳಿಕ ಸೂಪರ್ ಸ್ಟಾರ್ ರಜನಿ ಗ್ರಾಮೀಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಈ ಚಿತ್ರದಲ್ಲಿ ಹಳ್ಳಿಯ ಮುಖ್ಯಸ್ಥರಾಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ಕೊಪ್ಪಳದಲ್ಲಿ ಮಧುಗಿರಿ ಮೋದಿ ಹುಚ್ಚಾಟ, ಎಫ್‍ಐಆರ್ ದಾಖಲು

    ಈ ಚಿತ್ರದಲ್ಲಿ ನಯನತಾರಾ, ಕೀರ್ತಿ ಸುರೇಶ್, ಖುಷ್ಬು, ಮೀನಾ, ಪ್ರಕಾಶ್ ರಾಜ್, ಸತೀಶ್ ಮತ್ತು ಸೂರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ.

  • ಡಿ ಗ್ಲಾಮ್ ಲುಕ್‍ನಲ್ಲಿ ಮಿಂಚು-‘ಶ್ರೀವಲ್ಲಿ’ಯಾದ ರಶ್ಮಿಕಾ

    ಡಿ ಗ್ಲಾಮ್ ಲುಕ್‍ನಲ್ಲಿ ಮಿಂಚು-‘ಶ್ರೀವಲ್ಲಿ’ಯಾದ ರಶ್ಮಿಕಾ

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ‘ಪುಷ್ಪ’ ಸಿನಿಮಾದ ತಮ್ಮ ಲುಕ್ ನ ಪೋಸ್ಟ್ ನ್ನು ಸೋಶಿಯಲ್ ಮೀಡಿಯಾಗೆ ಹಂಚಿಕೊಂಡಿದ್ದಾರೆ.

    ರಶ್ಮಿಕಾ ಮತ್ತು ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇದೆ. ಈ ನಡುವೆ ರಶ್ಮಿಕಾ ಇನ್‍ಸ್ಟಾಗ್ರಾಮ್ ನಲ್ಲಿ ‘ಪುಷ್ಪ’ ಸಿನಿಮಾದ ತಮ್ಮ ಫಸ್ಟ್ ಲುಕ್ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು, ಶ್ರೀವಲ್ಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಪೋಸ್ಟರ್ ನೋಡಿದರೆ ಗ್ರಾಮೀಣ ಭಾಗದ ಮನೆಯ ಯುವತಿ ಪಾತ್ರದಲ್ಲಿ ಅಭಿನಯಿಸುವಂತೆ ಕಾಣುತ್ತಿದೆ. ಮುಂದುಗಡೆ ಸೀರೆ ಇಡಲಾಗಿದ್ದು ಕಿವಿಯೋಲೆ ಚುಚ್ಚುತ್ತಿದ್ದಾರೆ. ಮಲ್ಲಿಗೆ ಹೂಗಳು ಇದ್ದು ಯಾವುದೋ ಶುಭ ಕಾರ್ಯಕ್ರಮಕ್ಕೆ ಸಿದ್ಧಗೊಳ್ಳುವಂತೆ ರಶ್ಮಿಕಾ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

    ನಟಿ ಶೃತಿ ಹರಿಹರನ್, ಅದ್ಭುತ, ಈ ರೀತಿ ಬೆಳೆಯುತ್ತಿರುವುದನ್ನು ಪ್ರೀತಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ಸಂಯುಕ್ತ ಹೊರ್ನಾಡ್ ಕೂಡ ಶುಭಕೋರಿದ್ದಾರೆ.

    ರಶ್ಮಿಕಾ ಮತ್ತು ಅಲ್ಲು ಅರ್ಜುನ್ ನಟಿಸುತ್ತಿರುವ ಈ ಚಿತ್ರಕ್ಕಾಗಿ ಸುಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತು ಪುರುಷರ ಒಳ ಉಡುಪಿನ ಬಗ್ಗೆಯಾಗಿದ್ದು, ರಶ್ಮಿಕಾ ಅದನ್ನೆ ನೋಡುವ ಅದರತ್ತ ಆಕರ್ಷಕರಾಗುವ ರೀತಿ ವೀಡಿಯೋವನ್ನು ಚಿತ್ರೀಕರಿಸಲಾಗಿತ್ತು. ಈ ಜಾಹೀರಾತಿಗೆ ರಶ್ಮಿಕಾ ಅಭಿಮಾನಿಗಳಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಟ್ರೋಲ್ ಪೇಜ್ ಗಳು ಈ ಜಾಹೀರಾತಿನಲ್ಲಿ ರಶ್ಮಿಕಾ ಅಭಿನಯದ ಬಗ್ಗೆ ಫುಲ್ ಟ್ರೋಲ್ ಮಾಡಿದ್ದರು. ಇದನ್ನೂ ಓದಿ: ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

  • ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

    ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

    ಚೆನ್ನೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಸಿನಿಮಾಗೆ ಅಮೆರಿಕನ್ ಮಾಜಿ ಬಾಕ್ಸರ್ ಮೈಕ್ ಟೈಸನ್ ಅಭಿನಯಿಸುವುದರ ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

    ಐರನ್ ಮೈಕ್ ಅಥವಾ ಕಿಡ್ ಡೈನಮೈಟ್ ಎಂದೇ ಪ್ರಸಿದ್ಧಿ ಹೊಂದಿರುವ ಮೈಕ್ ಟೈಸನ್ ಟಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರಲ್ಲಿಯೂ ವಿಜಯ್ ದೇವರಕೊಂಡ ಅವರ ‘ಲೈಗರ್’ ಸಿನಿಮಾದಲ್ಲಿ ಎಂಬುದು ವಿಶೇಷವಾಗಿದೆ.

    ಈ ಕುರಿತು ವಿಜಯ್ ತಮ್ಮ ಟ್ವಿಟ್ಟರ್ ನಲ್ಲಿ, ನಿಮಗೆ ಭರವಸೆಯನ್ನು ನೀಡಿದ್ದೆವು. ಅದರಂತೆ ಇಂದು ನಾವು ಪ್ರಾರಂಭಿಸಿದ್ದೇವೆ. ಭಾರತೀಯ ಪರದೆಯಲ್ಲಿ ಮೊದಲ ‘ಲೈಗರ್’ ಸಿನಿಮಾದಲ್ಲಿ ಗಾಡ್ ಆಫ್ ಬಾಕ್ಸಿಂಗ್, ದಿ ಲೆಜೆಂಡ್, ದಿ ಬೀಸ್ಟ್, ದಿ ಗ್ರೇಟೆಸ್ಟ್ ಆಲ್ ಟೈಮ್ ಐರನ್ ಮೈಕ್ ಟೈಸನ್’ ಎಂದು ಬರೆದು ಟ್ವೀಟ್ ಮಾಡುವ ಮೂಲಕ ಗಾಡ್ ಆಫ್ ಬಾಕ್ಸಿಂಗ್ ನನ್ನು ಭಾರತೀಯ ಪರದೆಯ ಮೇಲೆ ತರುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮದುವೆಗೆ ಸ್ಥಳ ಹುಡುಕುತ್ತ ಜೈಪುರಗೆ ಬಂದ್ರು ಲವ್ ಬರ್ಡ್ಸ್

    ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅದು ಅಲ್ಲದೇ ವಿಜಯ್ ಈ ಸಿನಿಮಾದಲ್ಲಿ ಎಂಎಂಎ ಫೈಟರ್ ಆಗಿ ಕಾಣಿಸಿಕೊಳ್ಳುತ್ತಿದ್ದು., ಇದರಲ್ಲಿ ಮೈಕ್ ಯಾವ ರೀತಿಯ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

    ಪ್ರಸ್ತುತ ‘ಲೈಗರ್’ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಈ ಸಿನಿಮಾದ 65% ಚಿತ್ರೀಕರಣ ಮುಗಿದಿದೆ ಎಂದು ತಂಡ ತಿಳಿಸಿದೆ. ಈ ಚಿತ್ರವನ್ನು ಓಟಿಟಿಯಲ್ಲಿ ಬಿಡುತ್ತಾರೆ ಎಂದು ಕೆಲವರು ಊಹೆಗಳನ್ನು ಮಾಡಿದ್ದರು. ಅದಕ್ಕೆ ಚಿತ್ರತಂಡ ನಮ್ಮ ಸಿನಿಮಾ ಚಿತ್ರಮಂದಿರದಲ್ಲೇ ಬಿಡುಗಡೆಯಾಗುತ್ತೆ ಎಂದು ಹೇಳುವ ಮೂಲಕ ಎಲ್ಲದಕ್ಕೂ ತೆರೆ ಎಳೆದಿದ್ದರು. ಇದನ್ನೂ ಓದಿ:   ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಈ ಚಿತ್ರ ಹಿಂದಿ ಮತ್ತು ತೆಲುಗು ಸೇರಿದಂತೆ 5 ಭಾಷೆಗಳಲ್ಲಿ ತೆರೆ ಕಾಣಲಿದೆ. ರಮ್ಯಾ ಕೃಷ್ಣನ್, ಮಕರಂದ್ ದೇಶಪಾಂಡೆ ಮತ್ತು ರೋನಿತ್ ರಾಯ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದು, ತೆಲುಗಿನ ನಟಿ ಚಾರ್ಮಿ, ಕರಣ್ ಜೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  • ಮದುವೆಗೆ ಸ್ಥಳ ಹುಡುಕುತ್ತ ಜೈಪುರಗೆ ಬಂದ್ರು ಲವ್ ಬರ್ಡ್ಸ್

    ಮದುವೆಗೆ ಸ್ಥಳ ಹುಡುಕುತ್ತ ಜೈಪುರಗೆ ಬಂದ್ರು ಲವ್ ಬರ್ಡ್ಸ್

    ಮುಂಬೈ: ಬಾಲಿವುಡ್ ಪ್ರಣಯ ಪಕ್ಷಿಗಳು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಗೆ ಸ್ಥಳ ಹುಡುಕಲು ಜೈಪುರಕ್ಕೆ ಬಂದಿದ್ದಾರೆ.

    ಆಲಿಯಾ ಮತ್ತು ರಣಬೀರ್ ಈ ವಾರಾಂತ್ಯದಲ್ಲಿ ಜೈಪುರದ ಏರ್‌ರ್ಪೋಟ್ ನಲ್ಲಿ ಕಾಣಿಸಿಕೊಂಡಿದ್ದು, ಅವರ ಫ್ಯಾನ್ ಕ್ಲಬ್ ನಲ್ಲಿ ಈ ಪ್ರಣಯ ಪಕ್ಷಿಗಳ ಫೊಟೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಇವರಿಬ್ಬರು ಜೈಪುರದ ಜವಾಯ್ ಬಂದ್ ಗೆ ತಮ್ಮ ಮದುವೆಯ ಸ್ಥಳವನ್ನು ಹುಡುಕಿಕೊಂಡು ಬಂದಿದ್ದರು ಎಂದು ಅಭಿಮಾನಿಗಳು ಬರೆದು ಪೋಸ್ಟ್ ಮಾಡಿದ್ದಾರೆ. ಆದರೆ ಈ ಕುರಿತು ಪ್ರಣಯ ಪಕ್ಷಿಗಳು ಮಾತ್ರ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಇದನ್ನೂ ಓದಿ:  ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

     

    View this post on Instagram

     

    A post shared by ©pmd (@padharo_mahre_desh)

    ಆಲಿಯಾ ಮತ್ತು ರಣಬೀರ್ ಕ್ಯಾಶುಯಲ್ ಆಗಿ ಡ್ರೆಸ್ ಮಾಡಿಕೊಂಡಿದ್ದರು. ಆಲಿಯಾ ಕ್ಲಾಸಿಕ್ ಡೆನಿಮ್ ಮತ್ತು ವೈಟ್ ಟೀ ಶರ್ಟ್ ಹಾಕಿಕೊಂಡಿದ್ದು, ರಣಬೀರ್ ಲೌಂಜ್ ಸೆಟ್ ಧರಿಸಿದ್ದರು.

    2018ರಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ 2019ರ ಫಿಲ್ಮ್‍ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ಆಲಿಯಾ ವೇದಿಕೆಯಲ್ಲಿ ರಣಬೀರ್ ಮೇಲಿನ ಪ್ರೀತಿಯನ್ನು ಹೇಳಿಕೊಳ್ಳುವುದರ ಮೂಲಕ ಅವರಿಬ್ಬರ ಪ್ರೀತಿಯ ವಿಷಯವನ್ನು ದೃಢಪಡಿಸಿದ್ದರು. ಅದು ಅಲ್ಲದೇ ರಣಬೀರ್ ಅವರ ತಾಯಿ ನೀತು ಕಪೂರ್ ಸಹ ಈ ಕುರಿತು ದೃಢಪಡಿಸಿದ್ದರು. ಅಂದಿನಿಂದ ಈ ಜೋಡಿಗಳ ಮದುವೆ ಯಾವಾಗ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

     

    View this post on Instagram

     

    A post shared by neetu Kapoor. Fightingfyt (@neetu54)

    ಆಲಿಯಾ ಮತ್ತು ರಣಬೀರ್ ನಟನೆಯ ಬಹುನಿರೀಕ್ಷಿತ ‘ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆಯ ನಂತರ ಮದುವೆಯಾಗಲು ಈ ಜೋಡಿ ನಿರ್ಧರಿಸಿದ್ದರೆ ಎಂದು ಕೆಲವು ಮೂಲಗಳ ಪ್ರಕಾರ ತಿಳಿದುಬರುತ್ತಿದೆ.

  • ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ಚೆನ್ನೈ: ಟಾಲಿವುಡ್ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾ ಪೈರಸಿಯಾಗಿದೆ.

    ಫುಲ್ ಎಚ್‍ಡಿ ಕ್ವಾಲಿಟಿ ಸಿನಿಮಾವನ್ನು ತಮಿಳುರಾಕರ್ಸ್ ತಂಡ ಲೀಕ್ ಮಾಡಿದ್ದು ಟೆಲಿಗ್ರಾಂನಲ್ಲಿ ಸಿಗುತ್ತಿರುವ ಚಿತ್ರ ತಂಡಕ್ಕೆ ಶಾಕ್ ನೀಡಿದೆ.

    ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾ 24ರಂದು ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರ ರಿಲೀಸ್‍ಗೂ ಮುನ್ನ ತೆಲುಗು ಚಿತ್ರ ಟ್ವಿಟರ್ ನಲ್ಲಿ ಟ್ರೆಂಡ್ ಆಗಿತ್ತು. ಇದನ್ನೂ ಓದಿ: ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ

     

    View this post on Instagram

     

    A post shared by Sai Pallavi (@saipallavi.senthamarai)

    ಸಾಯಿ ಪಲ್ಲವಿ ಮತ್ತು ನಾಗಚೈತನ್ಯ ನಟಿಸಿರುವ ಈ ಚಿತ್ರ ರೋಮ್ಯಾಂಟಿಕ್ ಆಗಿದ್ದು, ಜಾತಿ, ವರ್ಗ ವಿಭಜನೆಯಂತಹ ಕೆಲವು ಪ್ರಬುದ್ಧ ವಿಷಯಗಳನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ನಾಯಕ – ನಾಯಕಿ ಪ್ರೀತಿಯಲ್ಲಿ ಬೀಳುವ, ಅದನ್ನು ಕುಟುಂಬ ವಿರೋಧಿಸುವ ಹಲವು ಅಂಶಗಳನ್ನು ಒಳಗೊಂಡಿದ್ದು, ಫುಲ್ ಪ್ಯಾಕ್ ಮೂವಿ.

    ಈ ಸಿನಿಮಾ ರಿಲೀಸ್ ಆಗಿ 2 ದಿನಗಳಷ್ಟೇ ಕಳೆದಿದೆ. ಈ ನಡುವೆಯೇ 10 ಕೋಟಿ ರೂ. ಗಳಿಸಿತ್ತು. ಆದರೆ ಈಗ ಈ ಚಿತ್ರವನ್ನು ಆನ್ ಲೈನ್ ನಲ್ಲಿ ಬಿಡಲಾಗಿದ್ದು, ಚಿತ್ರತಂಡಕ್ಕೆ ಹೊಡೆತ ಬಿದ್ದಿದೆ. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಈ ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶಿಸುತ್ತಿದ್ದು, ಕೊರೊನಾ ನಡುವೆಯೂ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಈಗ ‘ಲವ್ ಸ್ಟೋರಿ’ ಸಿನಿಮಾ ಪೈರಸಿಯಾಗಿದ್ದು, ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿತ್ರತಂಡ ನಿರ್ಧರಿಸಿದೆ.