Tag: ಸಿನಿಮಾದ ನಿರ್ದೇಶಕ

  • ಸಿನಿಮಾ ಸ್ಟೈಲ್‍ನಲ್ಲಿ ಡೈರೆಕ್ಟರ್ ಕಿಡ್ನ್ಯಾಪ್

    ಸಿನಿಮಾ ಸ್ಟೈಲ್‍ನಲ್ಲಿ ಡೈರೆಕ್ಟರ್ ಕಿಡ್ನ್ಯಾಪ್

    ಬೆಂಗಳೂರು: ಪತಿಬೇಕು.ಕಾಮ್ ಸಿನಿಮಾದ ನಿರ್ದೇಶಕ ರಾಕೇಶ್ ಮೇಲೆ ಪ್ರಕರಣವೊಂದು ದಾಖಲಾಗಿ ಸುದ್ದಿಯಾಗಿತ್ತು. ಸಹ ನಿರ್ಮಾಪಕರಿಗೆ ರಾಕೇಶ್ ವಂಚನೆ ಮಾಡಿದ್ದಾರೆ ಅಂತ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಆದರೆ ಈ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ.

    ವಿಜಯನಗರದ ಮನೆಯಿಂದ ಅಕ್ಟೋಬರ್ 21ರಂದು ರಾಕೇಶ್ ಅವರನ್ನು ಎಳೆದೊಯ್ದ ನೆಲಮಂಗಲ ಪೊಲೀಸ್ ಕೇಶವ್ ಅಂಡ್ ಟೀಂ ಸೆಟ್ಲ್ ಮೆಂಟ್ ಮಾಡಿಕೊಳ್ಳುವಂತೆ ಧಮ್ಕಿ ಹಾಕಿದ್ದರಂತೆ. ಈ ಹಿಂದೆಯೇ ಚಂದ್ರಾ ಲೇಔಟ್‍ನಲ್ಲಿ ಹಣಕಾಸು ವಿಚಾರವಾಗಿ ನಿರ್ಮಾಪಕ ಮಂಜುನಾಥ್‍ಗೆ ರಾಕೇಶ್ 10 ಲಕ್ಷ ರೂ. ಕೊಟ್ಟಿದ್ದು, ಯಾವುದೇ ಹಣ ಕೊಡಬೇಕಾಗಿಲ್ಲ ಅಂದಿದ್ದರು. ಚಂದ್ರಾ ಲೇಔಟ್ ಕೇಸ್‍ನಲ್ಲಿ ಬೇಲ್ ಪಡೆದಿದ್ದ ಮಂಜುನಾಥ್, ನೆಲಮಂಗಲದಲ್ಲಿ ದೂರು ದಾಖಲಿಸಿದ್ದರು.

    ರಾಕೇಶ್ ಅವರನ್ನ ಕರೆದೊಯ್ದಿದ್ದ ನೆಲಮಂಗಲ ಪೊಲೀಸರು ಮನೆಯವರಿಗೆ ಯಾವುದೇ ವಿಚಾರ ತಿಳಿಸಿರಲಿಲ್ಲ. ಕೊನೆಗೆ ರಾಕೇಶ್ ಸಂಬಂಧಿಕರು ಚಂದ್ರಾ ಲೇಔಟ್ ಠಾಣೆಯ ಪೊಲೀಸರ ಮೊರೆ ಹೋಗಿದ್ದರು. ಆಗ ಚಂದ್ರಾ ಲೇಔಟ್ ಠಾಣೆಯ ಪೊಲೀಸರು ನೆಲಮಂಗಲ ಪೊಲೀಸರಿಗೆ ಕರೆ ಮಾಡಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಇದರಿಂದಾಗಿ ನೆಲಮಂಗಲ ಪೊಲೀಸರು ರಾಕೇಶ್ ಅವರಿಂದ ಚೆಕ್‍ಗೆ ಸೈನ್ ಮಾಡಿಸಿಕೊಂಡು ಬಿಟ್ಟು ಕಳಿಸಿದ್ದರು. ಇದೀಗ ಅಕ್ರಮವಾಗಿ ಕೂಡಿಟ್ಟು, ರೌಡಿ ಶೀಟ್ ಓಪನ್ ಮಾಡುದಾಗಿ ಬೆದರಿಸಿದ್ದ ಎಸ್.ಐ.ಮಂಜುನಾಥ್ ಹಾಗೂ ಪೇದೆ ಕೇಶವ್ ಮೇಲೆ ನಿರ್ದೇಶಕ ರಾಕೇಶ್, ಎಸ್‍ಪಿ, ಐಜಿ, ಡಿಜಿ, ಐಜಿಪಿ ಅವರಿಗೆ ಹಾಗೂ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.