Tag: ಸಿನಿಮಾ

  • ಅಭಿನಯಕ್ಕೆ ತಲೈವಾ ರಜನಿಕಾಂತ್ ಗುಡ್‌ಬೈ?

    ಅಭಿನಯಕ್ಕೆ ತಲೈವಾ ರಜನಿಕಾಂತ್ ಗುಡ್‌ಬೈ?

    ಜನಿಕಾಂತ್ (Rajanikanth) ಅಂದರೆ ಕ್ರೇಜ್ ಕಾ ಬಾಪ್. ಅವರ ಚಿತ್ರಗಳು ಮಾಸ್. ಟ್ರೆಂಡ್‌ಗೆ ತಕ್ಕಂತೆ ಸಿನಿಮಾ (Cinema) ಮಾಡಿ ಸೈ ಅನ್ನಿಸಿಕೊಂಡು ಅದನ್ನ ಗೆಲ್ಲಿಸುವ ತಾಕತ್ತು ಹೊಂದಿರೋ ವಿಶ್ವ ಮೆಚ್ಚಿದ ಸೂಪರ್ ಸ್ಟಾರ್. ಇದೀಗ ರಜನಿಕಾಂತ್ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

    ಸದ್ಯಕ್ಕೆ ಇವರ ಕೈಯಲ್ಲಿ ನೂರಾರು ಕೋಟಿಯ ನಾಲ್ಕು ಪ್ರಾಜೆಕ್ಟ್‌ಗಳಿವೆ. `ಜೈಲರ್ 2′ ಸಿನಿಮಾವನ್ನೂ ಪೂರ್ಣಗೊಳಿಸಿದ್ದಾರೆ. ಕಮಲ್ ಹಾಸನ್ ಜೊತೆಗಿನ ಕಾಂಬೋ ಚಿತ್ರ ಘೋಷಣೆಯಾಗಿದೆ. ಡೈರೆಕ್ಟರ್ ನೆಲ್ಸನ್ ಜೊತೆ ಇನ್ನೊಂದು ಚಿತ್ರವೂ ಫಿಕ್ಸ್ ಆಗಿದೆ. ಇಷ್ಟೇ ಅಲ್ಲ ನಿರ್ಮಾಪಕ ಸಿ ಸುಂದರ್ ಜೊತೆಯೂ ರಜನಿಕಾಂತ್ ಡೇಟ್ ಇದೆ. ಹೀಗೆ ಸದ್ಯಕ್ಕೆ ರಜನಿಕಾಂತ್ ಇನ್ನೂ 2027ರವರೆಗೆ ಶೂಟಿಂಗ್ ಮಾಡಿದರೂ ಮುಗಿಯದಷ್ಟು ಪ್ರಾಜೆಕ್ಟ್‌ಗಳನ್ನ ಇಟ್ಟುಕೊಂಡಿದ್ದಾರೆ. ಆದರೆ ಈ ಹೊತ್ತಲ್ಲೇ ರಜನಿಕಾಂತ್ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿರುವುದರ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಸೂಪರ್‌ಸ್ಟಾರ್ ಕುರಿತು ನಿವೃತ್ತಿ ಮಾತು ಕೇಳಿಬರ್ತಿರೋದು ಇದೇ ಮೊದಲಲ್ಲ. ರಜನಿಕಾಂತ್ ರಾಜಕೀಯ ಪ್ರವೇಶ ಮಾಡ್ತಾರೆ ಎಂಬ ವಿಚಾರ ಬಂದಾಗ ಚಿತ್ರರಂಗಕ್ಕೆ ಗುಡ್‌ಬೈ ಹೇಳುವ ನಿರ್ಧಾರ ಮಾಡಿದ್ದರು. ಆದರೆ ಅನಾರೋಗ್ಯ ಕಾರಣಕ್ಕೆ ರಾಜಕೀಯ ಪ್ರವೇಶಿಸದಿರಲು ನಿರ್ಧರಿಸಿ ಮತ್ತೆ ನಟನೆಯನ್ನು ಕಂಟಿನ್ಯೂ ಮಾಡಿದ್ರು. ಹಾಗಂತ ಈ ಬಾರಿ ವಿದಾಯಕ್ಕೆ ತೀರ್ಮಾನಿಸೋಕೆ ಕಾರಣ ರಾಜಕೀಯ ಪ್ರವೇಶವಂತೂ ಅಲ್ಲ. ಅದಕ್ಕೊಂದು ವಿಶೇಷ ಕಾರಣವಿದೆ.

    ರಜನಿಕಾಂತ್ ತಮ್ಮ ಮನೆಗೆ ಕಥೆ ಪಟ್ಟಿ ಹಿಡ್ಕೊಂಡು ಬರುವ ನಿರ್ದೇಶಕ ಹಾಗೂ ಚೆಕ್‌ಬುಕ್ ಹಿಡ್ಕೊಂಡು ಬರುವ ನಿರ್ಮಾಪಕರನ್ನ ವಾಪಸ್ ಕಳುಹಿಸುತ್ತಿದ್ದಾರಂತೆ. ಇದೇ ವಿಚಾರಕ್ಕೆ ರಜನಿಕಾಂತ್ ವಿದಾಯ ಹೇಳುವ ಸುದ್ದಿ ಗುಲ್ಲಾಗಿದೆ. ಆದರೆ ರಜನಿಕಾಂತ್ ಸಿನಿಮಾ ನಿರಾಕರಿಸುತ್ತಿರುದಕ್ಕೆ ಕಾರಣ ಮಾತ್ರ ಬೇರೆಯೇ ಇದೆ. ರಜನಿಕಾಂತ್ ವಯಸ್ಸು ಏರುತ್ತಿದೆ. 70 ವರ್ಷ ವಯಸ್ಸು ದಾಟಿದ ಬಳಿಕ ಸಹಜವಾಗೇ ದೇಹ ಕ್ವೀಣಿಸುತ್ತದೆ, ಸುಸ್ತೂ ಜಾಸ್ತಿ ಆಗುತ್ತದೆ. ಹಾಗಂತ ಇದುವೇ ವಿದಾಯಕ್ಕೆ ರೀಸನ್ ಅಲ್ವೇ ಅಲ್ಲ.

    ರಜನಿಕಾಂತ್ ಮನಸ್ಸು ಆಧ್ಯಾತ್ಮದತ್ತ ಹೆಚ್ಚಾಗಿ ವಾಲುತ್ತಿದೆ. ಸರಳವಾಗಿ ಬದುಕೋದನ್ನ ಜೀವನದಲ್ಲಿ ರೂಢಿಸಿಕೊಂಡು ಬಂದವರು ರಜನಿ. ಹೀಗಾಗಿ ವರ್ಷಕ್ಕೊಮ್ಮೆಯಾದ್ರೂ ಆಧ್ಯಾತ್ಮಿಕ ಪ್ರವಾಸ ಮಾಡ್ತಾರೆ. ಮನಸ್ಸಾದಾಗೆಲ್ಲ ಕಾರು ಹತ್ತಿ, ಹುಟ್ಟೂರು ಬೆಂಗಳೂರಿಗೆ ಬಂದು ಯಾರಿಗೂ ಗೊತ್ತಾಗದಂತೆ ಇದ್ದುಬಿಡ್ತಾರೆ. ಇಂಥಹ ರಜನಿಕಾಂತ್ ಎಲ್ಲಾ ಮೋಹಗಳನ್ನೂ ತ್ಯಜಿಸಿ ಜೀವಿಸುತ್ತಿರುವ ವ್ಯಕ್ತಿ. ವಯಸ್ಸು ಮಾಗಿದಂತೆ ಮನಸ್ಸೂ ಮಾಗುತ್ತಿದೆ. ಹೀಗಾಗಿ ಕೈಯಲ್ಲಿದ್ದ ಪ್ರಾಜೆಕ್ಟ್‌ಗಳನ್ನ ಮುಗಿಸಿಕೊಟ್ಟು, ಬಳಿಕ ನೋಡಿದ್ರಾಯ್ತು ಎಂದು ಯಾವುದೇ ಪ್ರಾಜೆಕ್ಟ್‌ಗಳನ್ನ ರಜನಿ ಒಪ್ಪಿಕೊಳ್ತಿಲ್ಲ. ಹೀಗಾಗಿ ರಜನಿಕಾಂತ್ ಚಿತ್ರರಂಗಕ್ಕೆ ವಿದಾಯದ ಸುದ್ದಿ ಚರ್ಚೆಯಾಗುತ್ತಿದೆ.

  • ನಾಲ್ಕೇ ವಾರದಲ್ಲಿ ಒಟಿಟಿಯಲ್ಲಿ ಕಾಂತಾರ ರಿಲೀಸ್ ಯಾಕೆ? – ಒಪ್ಪಂದದ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಪ್ರತಿಕ್ರಿಯೆ

    ನಾಲ್ಕೇ ವಾರದಲ್ಲಿ ಒಟಿಟಿಯಲ್ಲಿ ಕಾಂತಾರ ರಿಲೀಸ್ ಯಾಕೆ? – ಒಪ್ಪಂದದ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಪ್ರತಿಕ್ರಿಯೆ

    ಬಿಡುಗಡೆಯಾದ ನಾಲ್ಕೇ ವಾರದಲ್ಲಿ ಕಾಂತಾರ: ಚಾಪ್ಟರ್‌ 1 (Kantara: Chapter 1) ಸಿನಿಮಾ ಒಟಿಟಿಯಲ್ಲಿ (OTT) ಬಿಡುಗಡೆಯಾಗುತ್ತಿರುವುದು ಹಲವರ ಹುಬ್ಬೇರಿತ್ತು. ಚಿತ್ರ ಮಂದಿರದಲ್ಲಿ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಚಿತ್ರವನ್ನು ಬೇಗ ಬಿಡುಗಡೆ ಮಾಡುತ್ತಿರುವುದು ಯಾಕೆ ಎಂದು ಹಲವು ಸಿನಿ ಪಂಡಿತರು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಈಗ ಹೊಂಬಾಳೆ ಫಿಲ್ಮ್ಸ್‌ (Hombale Films) ಉತ್ತರ ನೀಡಿದೆ.

    ಮಾಧ್ಯಮದ ಜೊತೆ ಮಾತನಾಡಿದ ಬಾಳೆ ಫಿಲ್ಮ್ಸ್‌ನ ಪಾಲುದಾರ ಚಲುವೇಗೌಡ, ಮೂರು ವರ್ಷದ ಹಿಂದೆ ಒಟಿಟಿ ಬಿಡುಗಡೆಗೆ ಸಂಬಂಧಪಟ್ಟಂತೆ ಒಪ್ಪಂದ ನಡೆದಿತ್ತು. ಅದರಂತೆ ನಾಲ್ಕು ವಾರಗಳಲ್ಲಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

    ಚಿತ್ರದ ದಕ್ಷಿಣ ಭಾಷೆಯ (ತಮಿಳು, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ) ಆವೃತ್ತಿಗಳು ಮಾತ್ರ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತವೆ. ಹಿಂದಿ ಆವೃತ್ತಿ ಎಂಟು ವಾರಗಳ ನಂತರ ಬರಲಿದೆ. ಹೆಚ್ಚಿನ ದಕ್ಷಿಣ ಚಲನಚಿತ್ರಗಳು ಈಗ ನಾಲ್ಕು ವಾರಗಳ ಅವಧಿಯನ್ನು ಅನುಸರಿಸುತ್ತವೆ ಎಂದು ವಿವರಿಸಿದರು. ಇದನ್ನೂ ಓದಿ:  ಒಂದು ಭಾಷೆ ಬಿಟ್ಟು 4 ಭಾಷೆಗಳಲ್ಲಿ ಅ.31ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಕಾಂತಾರ ರಿಲೀಸ್‌

     

    ಕೆಲ ಸಿನಿಮಾಗಳು ಹೆಚ್ಚು ಕಾಲ ಓಡುತ್ತವೆ. ಕೆಲವು ಮೂರರಿಂದ ನಾಲ್ಕು ವಾರಗಳಲ್ಲಿ ಕೊನೆಯಾಗುತ್ತವೆ. ಪ್ರತಿಯೊಂದು ಚಿತ್ರಕ್ಕೂ ತನ್ನದೇ ಆದ ಒಪ್ಪಂದ ಮತ್ತು ಸಮಯವಿದೆ. ಕೋವಿಡ್‌ಗೆ ಮೊದಲು ಎಲ್ಲಾ ಚಿತ್ರಗಳಿಗೆ ಎಂಟು ವಾರ ನಿಗದಿಯಾಗಿತ್ತು. ಕೋವಿಡ್ ನಂತರ ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳು ನಾಲ್ಕು ವಾರಗಳ ನಂತರ ಒಟಿಟಿಯಲ್ಲಿ ಬರುತ್ತಿವೆ ಎಂದು ತಿಳಿಸಿದರು.

    ಈಗಲೂ ಚಿತ್ರ ಮಂದಿರಗಳಲ್ಲಿ ಚಿತ್ರ ಉತ್ತಮವಾಗಿ ಓಡುತ್ತಿದೆ. ಒಟಿಟಿಯಲ್ಲಿ ಬಿಡುಗಡೆಯಾದರೂ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಲಿದೆ. ವ್ಯತ್ಯಾಸವು ಹೆಚ್ಚೆಂದರೆ 10–15% ಮಾತ್ರ ಇರಬಹುದು ಎಂದು ಹೇಳಿದರು.

  • ನಾವೇ ಒಂದು ಬ್ರ್ಯಾಂಡ್‌, ನಾವ್ಯಾಕೆ ಬ್ರ್ಯಾಂಡ್‌ ಹಿಂದೆ ಹೋಗ್ಬೇಕು – ಶಿವಣ್ಣ ಖಡಕ್ ನುಡಿ

    ನಾವೇ ಒಂದು ಬ್ರ್ಯಾಂಡ್‌, ನಾವ್ಯಾಕೆ ಬ್ರ್ಯಾಂಡ್‌ ಹಿಂದೆ ಹೋಗ್ಬೇಕು – ಶಿವಣ್ಣ ಖಡಕ್ ನುಡಿ

    ನಾವು ಯಾವಾಗಲೂ ಬ್ರ್ಯಾಂಡ್‌ ಹಿಂದೆ ಹೋಗಬಾರದು. ನಾವೇ ಒಂದು ಬ್ರ್ಯಾಂಡ್‌ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಖಡಕ್ ಆಗಿ ನುಡಿದಿದ್ದಾರೆ.

    ಶಿವರಾಜ್‌ಕುಮಾರ್ ಇತ್ತೀಚೆಗೆ `ಗತವೈಭವ’ (Gatha Vaibhava) ಸಿನಿಮಾದ ಹಾಡು ರಿಲೀಸ್ ಇವೆಂಟ್‌ಗೆ ಆಗಮಿಸಿದ್ದರು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಸಿಂಪಲ್ ಸುನಿ ಹಾಗೂ ಅವರ ಕಾಂಬಿನೇಷನ್‌ನ ಸಿನಿಮಾ ನಿಲ್ಲಲು ಕಾರಣವೇನು ಎಂದು ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಾವು ಯಾವಾಗಲೂ ಬ್ರ್ಯಾಂಡ್‌ ಹಿಂದೆ ಹೋಗ್ಬಾರ್ದು, ನಾವೇ ಒಂದು ಬ್ರ್ಯಾಂಡ್‌ ಎಂದಿದ್ದಾರೆ. ಇದನ್ನೂ ಓದಿ: ಉರಿಯುತ್ತಿದ್ದ ಬಸ್‌ನೊಳಗೆ ಪ್ರಯಾಣಿಕರು ಅದೆಷ್ಟು ನೋವು ಅನುಭವಿಸಿರಬೇಕು: ಕರ್ನೂಲ್‌ ದುರಂತಕ್ಕೆ ರಶ್ಮಿಕಾ ಕಂಬನಿ

    ನನಗೆ ಬಂದಿರೋ ಭಾಗ್ಯ ಅಂದ್ರೆ ಹೊಸ ಹೊಸ ಡೈರೆಕ್ಟರ್ ಬರ್ತಾರೆ. ಹೊಸ ಹೊಸ ಕಥೆಗಳನ್ನ ಹೇಳ್ತಾರೆ. ಹೊಸಬರು ಬಂದು ಸಿನಿಮಾ ಮಾಡ್ಬೇಕು ಅಂತಾರೆ ಅದೇನು ಆಗುತ್ತೋ, ಬಿಡುತ್ತೋ ಗೊತ್ತಿಲ್ಲ. ಹೊಸಬರ ಮೇಲೆ ನಂಬಿಕೆ ಇಡ್ಬೇಕು. ನಾವು ಬ್ರ್ಯಾಂಡ್‌ ಹಿಂದೆ ಹೋಗೋದು ಬಿಡ್ಬೇಕು. ನಾವೇ ಒಂದು ಬ್ರ್ಯಾಂಡ್‌. ನಾವ್ಯಾಕೆ ಬ್ರ್ಯಾಂಡ್‌ ಹಿಂದೆ ಹೋಗ್ಬೇಕು? ಬ್ರ್ಯಾಂಡ್‌ ಅದಾಗೇ ಆಗುತ್ತೆ. ನಂಬಿಕೆ ಇಡಬೇಕು ಎಂದಿದ್ದಾರೆ ಶಿವಣ್ಣ.

    ಸಿಂಪಲ್ ಸುನಿ (Simple Suni) ನಿರ್ದೇಶನದ `ಗತವೈಭವ’ ಸಿನಿಮಾದ ಸಾಂಗ್ ಲಾಂಚ್ ಇವೆಂಟ್‌ಗೆ ಅತಿಥಿಯಾಗಿ ಶಿವಣ್ಣ ಬಂದಿದ್ದರು. ಸಿಂಪಲ್ ಸುನಿ ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಷನ್‌ನ ಮನಮೋಹಕ ಸಿನಿಮಾ ಸೆಟ್ಟೇರದಿರಲು ಕಾರಣವನ್ನ ಬಿಚ್ಚಿಟ್ಟಿದ್ದಾರೆ.

  • ಕಾಂತಾರ ಚಾಪ್ಟರ್ 18 ದಿನಕ್ಕೆ 765 ಕೋಟಿ ಕಲೆಕ್ಷನ್

    ಕಾಂತಾರ ಚಾಪ್ಟರ್ 18 ದಿನಕ್ಕೆ 765 ಕೋಟಿ ಕಲೆಕ್ಷನ್

    ಕಾಂತಾರ ಚಾಪ್ಟರ್-1 (Kantara: Chapter 1) ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಕೇವಲ ಪ್ರಾದೇಶಿಕವಾಗಿ ಅಲ್ಲದೇ ಪ್ರಪಂಚದಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದೆ ಅಭಿಮಾನಿ ವರ್ಗ. ಬಹುಭಾಷೆಯಲ್ಲಿ ಏಕಕಾಲಕ್ಕೆ ತೆರೆಕಂಡ ಕಾಂತಾರ ಚಾಪ್ಟರ್-1 ಸಿನಿಮಾಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ.

    ಮೂರನೇ ವಾರದಲ್ಲೂ ಕಾಂತಾರ ಸಿನಿಮಾದ ಗಳಿಕೆ ಕುಗ್ಗಿಲ್ಲ. ಸಾಲು ಸಾಲು ರಜಾ ದಿನಗಳ ಜೊತೆ ಹಬ್ಬ ಇರುವ ಕಾರಣ ಚಿತ್ರ ನೋಡಲು ಥಿಯೇಟರ್‌ಗೆ ಜನ ಬರುತ್ತಿದ್ದಾರೆ. 800 ಕೋಟಿ ರೂ. ಸನಿಹದಲ್ಲಿರುವ ಕಾಂತಾರ 18 ದಿನಗಳಲ್ಲಿ ವಿಶ್ವದಾದ್ಯಂತ 765 ಕೋಟಿ ರೂ. ಗಳಿಕೆ ಮಾಡಿದೆ.

    ಕಾಂತಾರ ಚಾಪ್ಟರ್-1 ಸಿನಿಮಾಗೆ ಪೇಕ್ಷಕರು ನೀಡಿದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ತೀರ್ಥಯಾತ್ರೆ ಕೈಗೊಂಡಿದೆ. ರಿಷಬ್ ಶೆಟ್ಟಿ (Rishab Shetty) ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೂ ಎಲ್ಲಾ ದೇವಾಲಯಗಳಿಗೆ ಭೇಟಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಯಶಸ್ಸಿಗೆ ಕಾರಣವಾದ ದೇವರ ಹರಕೆ ತೀರಿಸುತ್ತಿದ್ದಾರೆ. ಜೊತೆಗೆ ಜನರಿಗೆ ಈ ಮೂಲಕ ಧನ್ಯವಾದಗಳನ್ನ ತಿಳಿಸಿದೆ ಚಿತ್ರತಂಡ.

  • ಕಾಂತಾರ ಚಿತ್ರದ ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ: ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಸ್ಪಷ್ಟನೆ

    ಕಾಂತಾರ ಚಿತ್ರದ ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ: ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಸ್ಪಷ್ಟನೆ

    ಮಂಗಳೂರು: ಕಾಂತಾರ ಚಿತ್ರದ (Kantara Chapter 1) ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಪೆರಾರ ಶ್ರೀ ಬ್ರಹ್ಮ ದೇವರು ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಹೇಳಿದೆ.

    ತುಳುನಾಡಿನಲ್ಲಿ ಕಾಂತಾರ v/s ದೈವರಾಧಕರು ಫೈಟ್ ವಿಚಾರ ಜೋರಾಗುತ್ತಿದ್ದಂತೆ ಈಗ ದೈವದ ನುಡಿ ಕುರಿತು ದೈವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

    “ಹುಚ್ಚು ಕಟ್ಟಿದವರನ್ನ ಹುಚ್ಚು ಕಟ್ಟಿಸುತ್ತೇನೆ.. ಹಣವನ್ನ ಆಸ್ಪತ್ರೆಗೆ ಸುರಿಸುತ್ತೇನೆ” ಎಂದು ದೈವ ನುಡಿದಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ನುಡಿ ಜೋರಾಗುತ್ತಿದ್ದಂತೆ ವಾದ ವಿವಾದ ಆರಂಭವಾಗಿತ್ತು. ಕಾಂತಾರ ಸಿನಿಮಾ ಹಾಗೂ ದೈವದ ಅನುಕರಣೆ ಮಾಡಿದವರಿಗೆ ಎಚ್ಚರಿಕೆ ಎಂದು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ದೈವಸ್ಥಾನದ ಆಡಳಿತ ಮಂಡಳಿಯಿಂದಲೇ ಸ್ಪಷ್ಟನೆ ನೀಡಿ ವಿಷಯಕ್ಕೆ ಇತೀಶ್ರೀ ಹಾಡಲು ಮುಂದಾಗಿದೆ.

    ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
    ಮಂಗಳೂರು ತಾಲೂಕು ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ ಪಿಲಿಚಾಂಡಿ ದೈವಸ್ಥಾನ -ಪಡುಪೆರಾರ ಕ್ಷೇತ್ರದಲ್ಲಿ ನಡೆದ ಬಲವಾಂಡಿ-ಪಿಲಿಚಾಂಡಿ ದೈವಗಳ ಪುದರ್ -ಮೆಚ್ಚಿ ಜಾತ್ರೆ ಸಮಯದ ದೈವಪಾತ್ರಿ ದರ್ಶನ -ದೈವದ ನಡೆ-ನುಡಿಗಳ ಬಗ್ಗೆ ಉಂಟಾದ ಗೊಂದಲ-ಭಿನ್ನಾಭಿಪ್ರಾಯ ವಿಚಾರದಲ್ಲಿ ಆಡಳಿತ ಮಂಡಳಿಯ ಸ್ಪಷ್ಟಿಕರಣ ನೀಡುತ್ತಿದೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಬ್ಲಾಕ್‌ಬಸ್ಟರ್‌ ಹಿಟ್; 2 ವಾರದಲ್ಲಿ 717 ಕೋಟಿ ಕಲೆಕ್ಷನ್‌

     

    ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ -ಪಿಲಿಚಾಂಡಿ ದೈವಸ್ಥಾನ, ಪಡುಪೆರಾರ-ಕ್ಷೇತ್ರದಲ್ಲಿ ಶತಮಾನದ ಕಾಲದ ಕಟ್ಟು ಕಟ್ಟುಳೆಯಂತೆ, ಗುತ್ತು ಬರ್ಕೆ ಮಹನೀಯರು ಹಾಗೂ ಗ್ರಾಮಸ್ಥರು, ಸಾರ್ವಜನಿಕರ ಕೂಡವಿಕೆಯಿಂದ ನಡೆಸಲ್ಪಡುವ ಪುರ್-ಮೆಚ್ಚಿ ಜಾತ್ರೆಯು ಇತ್ತೀಚಿಗೆ ಕ್ಷೇತ್ರದಲ್ಲಿ ನಡೆದಿರುತ್ತದೆ. ಈ ಸಂದರ್ಭದಲ್ಲಿ ದೈವದ ಪಾತ್ರಿ-ದೈವವು ನೀಡಿದ ಅಭಯ -ನಡೆ-ನುಡಿಗಳ ವಿಚಾರದಲ್ಲಿ ಗೊಂದಲ ಭಿನ್ನಾಭಿಪ್ರಾಯ ಏರ್ಪಟ್ಟಿರುವುದು ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ಬಂದಿರುತ್ತದೆ.  ಇದನ್ನೂ ಓದಿ:  100 ಕೋಟಿ ನಾಯಿ ಲಾಂಚ್ ಮಾಡ್ತೀನಿ- ಸವಾಲೆಸೆದ ಬಿಗ್‌ಬಾಸ್ ಸ್ಪರ್ಧಿ ಸತೀಶ್

    ಕ್ಷೇತ್ರದ ಬಲವಾಂಡಿ -ಪಿಲಿಚಾಂಡಿ ದೈವದ ನರ್ತನದ ಬಳಿಕ ನಡೆಯುವ ನಡೆ-ನುಡಗಳ ಸಂದರ್ಭದಲ್ಲಿ ಕೆಲವೊಂದು ಯುವಕರುಗಳು ದೈವ-ದೇವರ, ಆಚಾರ-ವಿಚಾರದಲ್ಲಿ ಆಗುತ್ತಿರುವ ಅಪಪ್ರಚಾರ ವಿಚಾರದಲ್ಲಿ ದೈವದ ಸಮಕ್ಷಮ ನಿವೇದನೆ ಮಾಡಿ ಕೊಂಡಿರುತ್ತಾರೆ. ಈ ಬಗ್ಗೆ ದೈವವು ಸೂಕ್ತ ಅಭಯವನ್ನು ನೀಡಿರುತ್ತದೆ ವಿನಾ: ಯಾವುದೇ ಚಲನಚಿತ್ರ, ಅದರಲೂ ಮುಖ್ಯವಾಗಿ ಪ್ರಕೃತ ಪ್ರಚಾರದಲ್ಲಿರುವ ಕಾಂತರ-1 ಬಗ್ಗೆ ಯಾವುದೇ ಅಭಯ ನುಡಿಯನ್ನು ದೈವವು ನೀಡಿರುವುದಿಲ್ಲ. ಆದರೆ ದೈವವು ನಿವೇದನೆಗೆ ಸಂಬಂಧಿಸಿ ನೀಡಿದ ಅಭಯ-ನುಡಿಯನ್ನು ನಿವೇದಿಸಿಕೊಂಡ ಯುವಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವುದಕ್ಕೆ ಶ್ರೀಕ್ಷೇತ್ರದ ಭಕ್ತರು ಗ್ರಾಮಸ್ಥರು, ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿರುವುದರಿಂದ ಈ ಸ್ಪಷ್ಟಿಕರಣವನ್ನು ಆಡಳಿತ ಮಂಡಳಿ ನೀಡುತ್ತಿದೆ.

    ಮೇಲಿನಂತೆ ಶ್ರೀ ಕ್ಷೇತ್ರ ಪೆರಾರದದಲ್ಲಿ ನಡೆದ ಜಾತ್ರ ಸಂದರ್ಭದಲ್ಲಿನ ದೈವ ನಡೆ-ನುಡಿಯಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಗಳು /ಚಲನಚಿತ್ರದ ಬಗ್ಗೆ ಯಾವುದೇ ಅಭಯ-ನುಡಿ ನೀಡುವ ಸಂದರ್ಭ ಬಂದಿರುವ ಕಾರಣ, ಪ್ರಕೃತ ಈ ವಿಚಾರದಲ್ಲಿನ ಗೊಂದಲ-ಭಿನ್ನಾಭಿಪ್ರಾಯಗಳಿಗೆ ಅಲ್ಲದೇ ಈ ಗೊಂದಲ ಶ್ರೀ ಕ್ಷೇತ್ರದ ದೈವ-ದೇವರು-ಆಡಳಿತ ಮಂಡಳಿಯು ಹೊಣೆಗಾರರಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.

  • ಆಸ್ಪತ್ರೆಗೆ ದಾಖಲಾಗಿ ಮಹಿಳೆಯರಿಗೆ ಆರೋಗ್ಯ ಸಂದೇಶ ನೀಡಿದ ಸಂಗೀತಾ ಭಟ್

    ಆಸ್ಪತ್ರೆಗೆ ದಾಖಲಾಗಿ ಮಹಿಳೆಯರಿಗೆ ಆರೋಗ್ಯ ಸಂದೇಶ ನೀಡಿದ ಸಂಗೀತಾ ಭಟ್

    ಸ್ಯಾಂಡಲ್‌ವುಡ್ ನಟಿ ಸಂಗೀತಾ ಭಟ್ (Sangeetha Bhat) ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗೆ ಅವರು ಮಕ್ಕಳು ಬೇಡ ಎಂದು ಹೇಳಿದ ಮಾತು ಸಾಕಷ್ಟು ವೈರಲ್ ಆಗಿತ್ತು. ಒಂದು ರೀತಿಯಲ್ಲಿ ವಿವಾದವನ್ನೇ ಸೃಷ್ಟಿ ಮಾಡಿತ್ತು. ಆದರೆ ಅದಕ್ಕೆ ಅಸಲಿ ಕಾರಣ ಈಗ ಆಸ್ಪತ್ರೆಗೆ ದಾಖಲಾಗಿರೋದು ಇರಬಹುದಾ ಎನ್ನುವಂತಿದೆ. ಆಸ್ಪತ್ರೆಗೆ ದಾಖಲಾದ ಸಂಗೀತಾ ಭಟ್ ಮಹಿಳೆಯರಿಗೆ ಆರೋಗ್ಯ ಸಂದೇಶ ಕೊಟ್ಟಿದ್ದಾರೆ.

    ಸಂಗೀತಾ ಭಟ್ ‘ಹೈಸ್ಟರೊಸ್ಕೋಪಿಕ್ ಪೊಲಿಫೆಕ್ಟಮಿ’ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಗರ್ಭಾಶಯದೊಳಗೆ 1.75ಸೆಂ.ಮೀ.ಗಳಷ್ಟು ಬೆಳವಣಿಗೆಯಾದ ಗರ್ಭಾಶಯದ ಪಾಲಿಪ್ ಇರುವುದು ಪತ್ತೆಯಾಗಿದೆ. ಇದನ್ನ ಗರ್ಭಾಶಯದ ಗೆಡ್ಡೆ ಎಂದು ಎಂದು ಸಂಗೀತಾ ಸಾಮಾಜಿಕ ಜಾಳತಾಣದಲ್ಲಿ ಬರೆದುಕೊಂಡಿದ್ದಾರೆ.

    ಈ ಕಾಯಿಲೆಯಿಂದ ರಕ್ತಸ್ರಾವ, ಮಾರಣಾಂತಿಕ ನೋವು, ಅನಿಯಮಿತ ಚಕ್ರಗಳು, ಹಾರ್ಮೋನುಗಳ ಅಡಚಣೆಗಳು, ಮೊಡವೆಗಳು, ತೂಕ ಹೆಚ್ಚಾಗುವುದು, ಕೂದಲು ಉದುರುವಿಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ:  ವಧುವಾದ ಗಾಯಕಿ ಸುಹಾನಾ ಸಯ್ಯದ್ – ʻಭಲೇ ಜೋಡಿʼ ಎಂದ ಫ್ಯಾನ್ಸ್‌

    ಈ ರೀತಿ ಗೆಡ್ಡೆ ಕಾಣಿಸಿಕೊಂಡ ಬಳಿಕ ಶಸ್ತ್ರ ಚಿಕಿತ್ಸೆಯ ಬಗ್ಗೆ ಅಂತಿಮವಾಗಿ ನಿರ್ಧರಿಸಲು ನನಗೆ ಒಂದು ತಿಂಗಳು ಬೇಕಾಯಿತು ಎಂದಿದ್ದಾರೆ ಸಂಗೀತಾ. ಕೆಲಸದ ಕಮಿಟ್ಮೆಂಟ್ ನಡುವೆ, ಅದನ್ನು ವಿಳಂಬ ಮಾಡುತ್ತಲೇ ಬಂದಿದ್ದ ಸಂಗೀತಾ ಭಟ್, ಪ್ರತಿ ಮಹಿಳೆಯರು ಅನಿಯಮಿತ ರಕ್ತಸ್ರಾವ, ಮುಟ್ಟಿನ ಸಮಯ, ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಿದ್ದರೆ ನಿರ್ಲಕ್ಷಿಸಬೇಡಿ ಎಂದು ಬರೆದುಕೊಂಡಿದ್ದಾರೆ.

    ಮಕ್ಕಳು ಬೇಡ ಅಂತಾ ಈ ಹಿಂದೆ ಸಂಗೀತಾ ಭಟ್ ಹಾಗೂ ಪತಿ ಸುದರ್ಶನ್ ಆಡಿದ ಮಾತುಗಳಿಗೆ ಸಾಕಷ್ಟು ಪರ ವಿರೋಧ ಮಾತುಗಳು ಕೇಳಿ ಬಂದಿದ್ದವು. ಇದೀಗ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಇದೂ ಕೂಡಾ ಇರಬಹುದಾ ಎನ್ನುವ ಮಾತಿಗಳು ಕೇಳಿಬರುತ್ತಿದೆ.

  • ಬೀಟ್ ಪೊಲೀಸ್ ಚಿತ್ರದಲ್ಲಿ ಡಿಸಿಪಿಯಾದ ಭೀಮಾ ಖ್ಯಾತಿಯ ನಟಿ ಪ್ರಿಯಾ

    ಬೀಟ್ ಪೊಲೀಸ್ ಚಿತ್ರದಲ್ಲಿ ಡಿಸಿಪಿಯಾದ ಭೀಮಾ ಖ್ಯಾತಿಯ ನಟಿ ಪ್ರಿಯಾ

    ರ್.ಲಕ್ಷ್ಮಿ ನಾರಾಯಣಗೌಡ್ರು ನಿರ್ಮಿಸುತ್ತಿರುವ, ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ಅವರ ನಿರ್ದೇಶನದ ಚಿತ್ರ ‘ಬೀಟ್ ಪೊಲೀಸ್’. ನೆಲಮಂಗಲ ಪೊಲೀಸ್ ಠಾಣೆಯ ಬಳಿ ಈ ಬೀಟ್ ಪೊಲೀಸ್ (Beat Police) ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದು, ಭೀಮ ಚಿತ್ರದ ಜನಪ್ರಿಯ ನಟಿ ಪ್ರಿಯಾ (Priya) ಅವರು ಚಿತ್ರದಲ್ಲಿ ಪೊಲೀಸ್ (Police) ಅಧಿಕಾರಿಯಾಗಿ ನಟಿಸುತ್ತಿದ್ದಾರೆ, ನಟ ಡ್ರ್ಯಾಗನ್ ಮಂಜು ಕೂಡ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಆರ್. ಲಕ್ಷ್ಮಿನಾರಾಯಣ ಗೌಡ್ರು, ನಮ್ಮ ಆರ್ಯ ಫಿಲ್ಮ್‌ನ 4ನೇ ಚಿತ್ರವಿದು, ನೈಜ ಘಟನೆಯ ಸುತ್ತ ನಡೆವ ಕಥಾಹಂದರ ಚಿತ್ರದಲ್ಲಿದ್ದು, ಪ್ರಿಯಾ, ಡ್ರ್ಯಾಗನ್ ಮಂಜು, ಸುಚೇಂದ್ರ ಪ್ರಸಾದ್, ಪಾಪ ಪಾಂಡು ಚಿದಾನಂದ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿದ್ದಾರೆ. 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ನಾಲ್ಕು ಹಾಡು, ನಾಲ್ಕು ಫೈಟ್ಸ್ ನಮ್ಮ ಚಿತ್ರದಲ್ಲಿದೆ. ಈಗಿನ ಕಾಲದ ಎಜುಕೇಶನ್ ಬಗ್ಗೆ ಒಂದು ಗಟ್ಟಿ ಕಥೆಯನ್ನ ಈ ಚಿತ್ರದ ಮೂಲಕ ಹೇಳಲಾಗುತ್ತಿದ್ದು, ಜನರಿಗೆ ಎಚ್ಚರಿಕೆ ಕೊಡುವ ಪ್ರಯತ್ನ ಮಾಡಿದ್ದೇವೆ. ಸಮಾಜದಲ್ಲಿ ನಾವು ಹೇಗೆ ಎಚ್ಚರಿಕೆಯಿಂದ ಇರಬೇಕು, ಅಂತ ಹೇಳೋ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.

    ನಾಯಕನಟ ಕೌರವ ವೆಂಕಟೇಶ್ ಮಾತನಾಡಿ, ನಾನು ಗೂರ್ಖಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದ ಕಥೆ ನಿರ್ಮಾಪಕರದ್ದು. ಅದಕ್ಕೆ ಚಿತ್ರರೂಪ ಕೊಟ್ಟಿದ್ದೇವೆ. ನಿರ್ಮಾಪಕರೂ ಸಹ ಖಳನಾಯನಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಮುಂಜಾನೆ ಮಂಜು ಅವರ ಛಾಯಾಗ್ರಹಣ, ರಾಜೇಶ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ ಎಂದರು. ಇದನ್ನೂ ಓದಿ:  ಒಂದು ತಿಂಗಳಿಗೆ ನಿವೇದಿತಾ ಖರ್ಚು ಕೇಳಿದ್ರೆ ಶಾಕ್ ಆಗ್ತೀರಿ!

    ಬೀಟ್ ಪೋಲೀಸ್ ನೈಜ ಘಟನೆಗಳ ಸುತ್ತ ನಡೆಯುವ ಕಥೆ. ಈಗಿನ ಶಿಕ್ಷಣ ಸ್ಕ್ಯಾಮ್ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ. ಪ್ರತಿಭಾವಂತ ವಿದ್ಯಾರ್ಥಿಗಳಗೆ ಹೇಗೆ ವಂಚನೆಯಾಗುತ್ತಿದೆ. ಅದರ ಪರಿಣಾಮಗಳೇನು ಎಂಬುದು ನಮ್ಮ ಚಿತ್ರದ ಕಥಾವಸ್ತು. ಇಂದಿನಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿ, 25 ದಿನದಲ್ಲಿ ಶೂಟಿಂಗ್ ಮುಗಿಸುತ್ತೇವೆ ಎಂದರು ನಿರ್ದೇಶಕ ಕಪಿಲ್.

    ನಟ ಡ್ರಾಗನ್ ಮಂಜು ಮಾತನಾಡಿ, ಇದು ನನ್ನ ಹತ್ತನೇ ಚಿತ್ರ. ಎಂದಿನಂತೆ ಖಳನ ಪಾತ್ರವಾದರೂ, ಒಂದು ಹಂತದಲ್ಲಿ ಆತ ಚೇಂಜ್ ಆಗಬಹುದು ಎಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ. ನಾಯಕಿ ಪ್ರಿಯಾ ಮಾತನಾಡುತ್ತ ಚಿತ್ರದಲ್ಲಿ ನನ್ನದು ಭಾರ್ಗವಿ ಎಂಬ ಡಿಸಿಪಿ ಪಾತ್ರ. ನಿರ್ಮಾಪಕರು ಈ ಹಿಂದೆಯೇ ನನಗೆ ಕೇಳಿದ್ದರು ಆಗಿರಲಿಲ್ಲ. ಅಲ್ಲದೆ ಈ ಹಿಂದೆ ಕೌರವ ವೆಂಕಟೇಶ್ ಅವರ ಜತೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

  • ಮುತ್ತಿನಿಂದಲೇ ರವಿಕೆ ಮಾಡಿಸಿಕೊಂಡ ಬ್ಯೂಟಿ ಪ್ರಣೀತಾ

    ಮುತ್ತಿನಿಂದಲೇ ರವಿಕೆ ಮಾಡಿಸಿಕೊಂಡ ಬ್ಯೂಟಿ ಪ್ರಣೀತಾ

    ಸಿನಿಮಾದಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ನಟಿ ಪ್ರಣೀತಾ ಸುಭಾಷ್ (Pranitha Subhash) ಇದೀಗ ಎರಡು ಮಕ್ಕಳ ತಾಯಿ. ಮಕ್ಕಳ ಲಾಲನೆ ಪಾಲನೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟೀವ್ ಇರುವ ನಟಿ. ಇಬ್ಬರು ಮಕ್ಕಳ ತಾಯಿಯಾದ ಬಳಿಕವೂ ಗ್ಲ್ಯಾಮರ್‌ ಕಾಪಾಡಿಕೊಂಡಿರುವ ನಟಿ ಪ್ರಣೀತಾ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಹಲ್‌ಚಲ್ ಸೃಷ್ಟಿಸುವ ಫೋಟೋ ಪೋಸ್ಟ್ ಮಾಡಿದ್ದಾರೆ.

    ವಿನೂತನ ಡಿಸೈನ್ ಫೋಟೋ ಪೋಸ್ಟ್ ಮಾಡಿರುವ ಪ್ರಣೀತಾ ಮುತ್ತಿನಿಂದಲೇ (Pearls) ಪೋಣಿಸಿರುವ ರವಿಕೆ ಧರಿಸಿದ್ದಾರೆ. ಮುತ್ತಿನ ರವಿಕೆ ಡಿಸೈನ್ ಆಕರ್ಷಕವಾಗಿ ಕಾಣುತ್ತಿದ್ದು ಅತ್ಯಂತ ಮೋಹಕವಾಗಿದೆ. ಇದೇ ಉಡುಗೆಯಲ್ಲಿ ಪ್ರಣೀತಾ ವಿಧವಿಧದ ಪೋಸ್ ಕೊಟ್ಟಿದ್ದಾರೆ.  ಇದನ್ನೂ ಓದಿ: ‘ನನಗೆ ಫಾರಿನ್ ಟ್ರಿಪ್ ಮಾಡೋಕೆ ದುಡ್ಡು ಯಾರ್ ಕೊಡ್ತಾರೆ ಗೊತ್ತಾ?’ – ನಿವಿ ಸೀಕ್ರೆಟ್ ರಿವೀಲ್

     

    View this post on Instagram

     

    A post shared by Pranita Subhash (@pranitha.insta)


    ಫ್ಯಾಶನ್ ಮಾಡೆಲ್ ಆಗಿರುವ ಪ್ರಣೀತಾ ಇತ್ತೀಚೆಗೆ ಸಿನಿಮಾಗಳಿಂದ ದೂರ ಉಳಿದಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಫುಲ್ ಆ್ಯಕ್ಟೀವ್. ಇತ್ತೀಚೆಗೆ ಕೇನ್ ಫಿಲ್ಮ್ ಫೆಸ್ಟಿವಲ್‌ನಲ್ಲೂ ಭಾಗವಹಿಸಿದ್ದರು. ಅಂದಹಾಗೆ ಇನ್‌ಸ್ಟಾದಲ್ಲಿ ಸುಮಾರು 60 ಲಕ್ಷದಷ್ಟು ಫಾಲೋವರ್ಸ್ ಹೊಂದಿದ್ದಾರೆ. ಹೀಗೆ ಚೆಂದದ ಫೋಟೋಗಳನ್ನ ಪೋಸ್ಟ್ ಮಾಡುವ ಮೂಲಕ ತೆಲುಗು ಹಾಗೂ ಕನ್ನಡ ಅಭಿಮಾನಿಗಳ ಜೊತೆ ಎಂಗೇಜ್ ಆಗಿರುತ್ತಾರೆ. ಇದನ್ನೂ ಓದಿ: ಎರಡನೇ ಮದುವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ

  • ಐಷಾರಾಮಿ ಕಾರು ಖರೀದಿಸಿದ ದಿಯಾ ಸ್ಟಾರ್ ದೀಕ್ಷಿತ್ ಶೆಟ್ಟಿ

    ಐಷಾರಾಮಿ ಕಾರು ಖರೀದಿಸಿದ ದಿಯಾ ಸ್ಟಾರ್ ದೀಕ್ಷಿತ್ ಶೆಟ್ಟಿ

    ದಿಯಾ (Dia) ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ದೀಕ್ಷಿತ್ ಶೆಟ್ಟಿ ಐಷಾರಾಮಿ ಕಾರು (Car) ಖರೀದಿ ಮಾಡಿದ್ದಾರೆ. ದೀಕ್ಷಿತ್ ಶೆಟ್ಟಿ (Dheekshith Shetty) ಕನ್ನಡವಷ್ಟೇ ಅಲ್ಲದೇ ಪರಭಾಷಾ ಸಿನಿಮಾದಲ್ಲೂ ನಟಿಸಿದ್ದಾರೆ. ಕನ್ನಡದ ಜೊತೆ ಜೊತೆಗೆ ಪರಭಾಷಾ ಚಿತ್ರಗಳಲ್ಲೂ ಬ್ಯುಸಿಯಾಗಿರುವ ದೀಕ್ಷಿತ್ ಶೆಟ್ಟಿ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿರುವ ರೋಚಕ ಕಥೆಯನ್ನ ಹಂಚಿಕೊಂಡಿದ್ದಾರೆ. ಮೊದ ಮೊದಲಿಗೆ ಸಿನಿಮಾ ಜರ್ನಿಯನ್ನ ಬಿಎಂಟಿಸಿಯಿಂದ ಶುರು ಮಾಡಿದ ದೀಕ್ಷಿತ್‌ ಶೆಟ್ಟಿ ಈಗ ರೇಂಜ್ ರೋವರ್‌ವರೆಗೂ ಬಂದಿರುವ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ನಟ ದೀಕ್ಷಿತ್ ಶೆಟ್ಟಿ ಸಾಮಾನ್ಯನಿಂದ ಶುರುಮಾಡಿದ ಜರ್ನಿ ಇವತ್ತು ರೇಂಜ್ ರೋವರ್ ರೇಂಜ್‌ಗೆ ತಂದು ನಿಲ್ಲಿಸಿದೆ. ದೀಕ್ಷಿತ್ ಶೆಟ್ಟಿ ಸದ್ಯ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಸಿನಿಮಾದಲ್ಲಿ ನಟಿಸಿದ್ದಾರೆ. ಅಭಿಷೇಕ್ ನಿರ್ದೇಶನದ ಈ ಸಿನಿಮಾದಲ್ಲಿ ದೀಕ್ಷಿತ್ ಜೊತೆಗೆ ಬೃಂದಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ತೆಲುಗಿನಲ್ಲಿ ನಾನಿ ನಟನೆಯ ದಸರಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ದಿ ಗರ್ಲ್‌ಫ್ರೆಂಡ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ ಶೀಘ್ರದಲ್ಲೇ ಡಿಂಪಲ್ ಕ್ವೀನ್‌ ಮದುವೆ – ಸುಳಿವು ಕೊಟ್ಟ ರಚಿತಾ ರಾಮ್‌

    ಸದ್ಯ ದಿಯಾ ಸ್ಟಾರ್ ದೀಕ್ಷಿತ್ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಈ ವೇಳೆ ಅವರು ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದ್ದಾರೆ. ಅವರ ಈ ಸಾಲುಗಳಿಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  • ಕಾಂತಾರ ಚಾಪ್ಟರ್-1 ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ – 11 ದಿನಕ್ಕೆ ಗಳಿಸಿದ್ದೆಷ್ಟು ಕೋಟಿ?

    ಕಾಂತಾರ ಚಾಪ್ಟರ್-1 ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ – 11 ದಿನಕ್ಕೆ ಗಳಿಸಿದ್ದೆಷ್ಟು ಕೋಟಿ?

    ರುನಾಡಿನ ಹೆಮ್ಮೆಯ ಚಲನಚಿತ್ರ `ಕಾಂತಾರ ಚಾಪ್ಟರ್ 1′ (Kantara Chapter 1) ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ವಿಶ್ವದಾದ್ಯಂತ ಅಪಾರ ಮೆಚ್ಚುಗೆಯನ್ನ ಪಡೆದುಕೊಳ್ಳುತ್ತಿದೆ. ಕಾಂತಾರ ಸಿನಿಮಾ ತೆರೆಕಂಡು ಅಭೂತಪೂರ್ವ ಯಶಸ್ಸು ಪಡೆದುಕೊಳ್ಳುತ್ತಿದೆ. ಜೊತೆಗೆ ಬಾಕ್ಸಾಫೀಸ್‌ನಲ್ಲೂ ಕಮಾಲ್ ಮಾಡುತ್ತಿದೆ. ಅಂದಹಾಗೆ ಕಾಂತಾರ ಚಾಪ್ಟರ್-1 ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಕರ್ನಾಟಕದಲ್ಲಿ 191 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಅಂದಹಾಗೆ ಕಾಂತಾರ ಚಾಪ್ಟರ್-1 ಸಿನಿಮಾವನ್ನ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಮುಂಬರುವ ಹಬ್ಬದ ವಾರದಲ್ಲಿ, ಚಿತ್ರಮಂದಿರಕ್ಕೆ ಬರುವ ಜನರ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ವಿಶ್ವದಾದ್ಯಂತ ಕಾಂತಾರ ಸಿನಿಮಾ 11 ದಿನಗಳಲ್ಲಿ 655 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದೆ. ಇನ್ನೇನು ದೀಪಾವಳಿ ಹಬ್ಬದ ರಜಾದಿನಗಳು ಬಂದರೆ ಕಾಂತಾರ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡಲಿದೆ. ಅಲ್ಲಿಗೆ 1,000 ಕೋಟಿ ಟಾರ್ಗೆಟ್ ಮುಟ್ಟುವ ನಿರೀಕ್ಷೆಗಳು ಸನಿಹದಲ್ಲಿವೆ. ಇದನ್ನೂ ಓದಿ: ಅ.18, 19ಕ್ಕೆ ಬಿಗ್ ಬಾಸ್ ಕನ್ನಡ ಮಿಡ್ ಸೀಸನ್ ಫಿನಾಲೆ

    ಸಂಸ್ಕೃತಿ ಮತ್ತು ಆಚಾರ-ವಿಚಾರಗಳ ಬೇರುಗಳನ್ನು ಗಟ್ಟಿಯಾಗಿ ಹಿಡಿದಿರುವ ಈ ಸಿನಿಮಾ, ಶಿವಗಣಗಳ ಮಹತ್ವವನ್ನು ಎತ್ತಿಹಿಡಿದಿರುವ ಕಾಂತಾರ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಕಾಂತಾರ ದೃಶ್ಯಕಾವ್ಯ ಕಟ್ಟಿಕೊಟ್ಟ ರಿಷಬ್ ಶೆಟ್ಟಿಗೆ ಹೋದ ಕಡೆಗೆಲ್ಲ ಅದ್ಧೂರಿಯಾದ ಸ್ವಾಗತ ಸಿಗುತ್ತಿದೆ. ಸದ್ಯ ಭರ್ಜರಿ ಗೆಲುವಿನಲ್ಲಿರುವ ಕಾಂತಾರ ದಿನದಿಂದ ದಿನಕ್ಕೆ ಕೋಟಿ-ಕೋಟಿಯನ್ನ ತನ್ನ ಕಬಂದ ಬಾಹುವಿನಿಂದ ಬಾಚಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೆಷ್ಟು ಕೋಟಿಯನ್ನ ಕಬಳಿಸಲಿದೆ ಕಾಂತಾರ ಎನ್ನೋ ಕುತೂಹಲ ಶುರುವಾಗಿದೆ.