Tag: ಸಿನಿಅಡ್ಡ

  • ನೀನಿಲ್ಲದೆ ಇರಲು ಸಾಧ್ಯವಿಲ್ಲ ಎಂದು ಅಣ್ಣನನ್ನ ನೆನೆದ ಧ್ರುವ

    ನೀನಿಲ್ಲದೆ ಇರಲು ಸಾಧ್ಯವಿಲ್ಲ ಎಂದು ಅಣ್ಣನನ್ನ ನೆನೆದ ಧ್ರುವ

    ಬೆಂಗಳೂರು: ನೀನಿಲ್ಲದೆ ಇರಲು ಸಾಧ್ಯವಿಲ್ಲ ಎಂದು ಚಂದನವನದ ನಟ ಧ್ರುವ ಸರ್ಜಾ ಅಣ್ಣ ಚಿರಂಜೀವಿ ಸರ್ಜಾನನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಮನಮಿಡಿಯುವಂತೆ ಪೋಸ್ಟ್ ಮಾಡಿದ್ದಾರೆ.

    ಚಿರು ಅಗಲಿ 1 ವರ್ಷವಾದರೂ ಅಣ್ಣನನ್ನು ಮರೆಯಲು ಧ್ರುವನಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಚಿರುವನ್ನು ನೆನೆದು ಇನ್‍ಸ್ಟಾಗ್ರಾಮ್ ನಲ್ಲಿ, ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನಿಲ್ಲದೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಬರೆದು ಚಿರು ಜೊತೆ ಕಳೆದ ಕ್ಷಣಗಳನ್ನು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಇವರ ಅಭಿಮಾನಿಗಳು ಧ್ರುವಗೆ ಧೈರ್ಯ ತುಂಬುವ ರೀತಿ ಕಮೆಂಟ್ ಮಾಡುತ್ತಿದ್ದು, ಅವರು ನಿಮ್ಮ ಜೊತೆಯಲ್ಲೇ ಇರುತ್ತಾರೆ, ಧೈರ್ಯವಾಗಿರಿ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ:  ಅಕ್ಷಯ್ ತಾಯಿಯ ಸಾವಿಗೆ ಮಿಡಿದ ಮೋದಿ ಹೃದಯ

     

    View this post on Instagram

     

    A post shared by Dhruva Sarja (@dhruva_sarjaa)

    ಈ ವೀಡಿಯೋದಲ್ಲಿ ಧ್ರುವ ಚಿರುಗೆ ಊಟ ಮಾಡಿಸುತ್ತಿವುದು, ಇಬ್ಬರು ಚೆಸ್ ಆಡುತ್ತಿರುವುದು ಮತ್ತು ಚಿರು ಧ್ರುವ ತಲೆಗೆ ಎಣ್ಣೆ ಹಚ್ಚುತ್ತಿರುವ ವೀಡಿಯೋ ಇದೆ. ಈಗೇ ಚಿಕ್ಕವಯಸ್ಸಿನಿಂದ ಚಿರು ಬದುಕಿರುವವರೆಗೂ ಕಳೆದ ಸಂತೋಷದ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗಣಪತಿಯ ಕುತ್ತಿಗೆಗೆ ಸುತ್ತಿಕೊಂಡ ನಾಗರ 

    ಇತ್ತೀಚೆಗಷ್ಟೇ ಚಿರು ಮತ್ತು ಮೇಘನಾ ರಾಜ್ ಮಗನ ನಾಮಕರಣ ನಡೆದಿದ್ದು, ಈ ವೇಳೆಯು ಧ್ರುವ ಸುದ್ದಿಗೋಷ್ಠಿಯಲ್ಲಿ ಅಣ್ಣನನ್ನು ನೆನೆದು ಭಾವುಕರಾಗಿದ್ದರು. ಈ ವೇಳೆ, ನಮ್ಮ ಅಣ್ಣನ ಮಗನ ಹೆಸರು ರಾಯನ್ ರಾಜ್ ಸರ್ಜಾ. ಆ ಒಂದು ಹೆಸರಿನಲ್ಲಿಯೇ ಸುಂದರ್ ರಾಜ್ ಅವರ ಫ್ಯಾಮಿಲಿ ಹಾಗೂ ಸರ್ಜಾ ಕುಟುಂಬ ಯಾವಾಗಲೂ ಒಂದಾಗಿಯೇ ಇರುತ್ತದೆ. ಕೆಲವು ಯೂಟ್ಯೂಬ್ ಅಥವಾ ಬೇರೆ ಯಾವುದಾದರ ಮೂಲಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ದಯವಿಟ್ಟು ಮಾಡಬೇಡಿ. ನಾವು ಯಾವತ್ತಿಗೂ ಭಿನ್ನಾಭಿಪ್ರಾಯಗಳನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ:  ನೀಟ್ ಪರೀಕ್ಷೆ – ಲಾಠಿ ಹಿಡಿದು ಪೋಷಕರನ್ನು ಚದುರಿಸಿದ ಪೊಲೀಸರು

  • ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ

    ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಸ್ಪರ್ಧಿ ನಿಧಿ ಸುಬ್ಬಯ್ಯ ಹಿಮಾಚಲ ಪ್ರದೇಶಕ್ಕೆ ಹಾರಿದ್ದು, ಬೆಂಗಳೂರಿಗೆ ಬಂದು ಮಂಜು ಪಾವಗಡ ಅವರನ್ನು  ಭೇಟಿಯಾಗಿದ್ದಾರೆ.

    nidhi

    ಬಿಗ್‍ಬಾಸ್ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಿಧಿ ತಮ್ಮ ದಿನನಿತ್ಯದ ಅಪ್ಡೇಟ್ ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇಂದು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ನಾನು ಮತ್ತೆ ಬೆಂಗಳೂರಿಗೆ ಬಿಗ್‍ಬಾಸ್ ವಿನ್ನರ್ ಮಂಜು ಪಾವಗಡ ಜೊತೆ ಬಂದಿದ್ದು, ನಮ್ಮನ್ನು ಬಿಟ್ಟ ಶುಭಾಗೆ ಧನ್ಯವಾದ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಶುಭಾ ಇದಕ್ಕೆ ಪ್ರತಿಕ್ರಿಯಿಸಿದ್ದು, ಮುಂದಿನ ಬಾರಿ ಬಿಡುವುದು ಮಾತ್ರವಲ್ಲ, ಬೇಗ ಸಿಗೋಣ ನಾನು ಕಾಯುತ್ತಿದ್ದೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ:  ಫರಾ ಖಾನ್‍ಗೆ ಕೊರೊನಾ – ದೀಪಿಕಾ, ಅಮಿತಾಭ್ ಬಗ್ಗೆ ಅಭಿಮಾನಿಗಳ ಪ್ರಶ್ನೆ

     

    View this post on Instagram

     

    A post shared by Nidhi Subbaiah (@nidhisubbaiah)

    ಬಿಗ್‍ಬಾಸ್ ನಂತರ ನಿಧಿ ಸುಮಾರು 22 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿದ್ದು, ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದನ್ನು ನೋಡಿದ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ: 22 ದಿನ ಹಿಮಾಚಲ ಪ್ರದೇಶದಲ್ಲಿ ನಿಧಿ ಸುಬ್ಬಯ್ಯ ಮಾಡಿದ್ದೇನು?

    nidhi

    ಮದುವೆಯ ನಂತರ ನಿಧಿ ಸಿನಿಮಾಗಳಿಗೆ ಬ್ರೇಕ್ ತೆಗೆದುಕೊಂಡಿದ್ದರು. ಬಿಗ್‍ಬಾಸ್ ನಂತರ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಯಾವ ರೀತಿಯ ಪಾತ್ರಗಳನ್ನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.

  • ಫರಾ ಖಾನ್‍ಗೆ ಕೊರೊನಾ – ದೀಪಿಕಾ, ಅಮಿತಾಭ್ ಬಗ್ಗೆ ಅಭಿಮಾನಿಗಳ ಪ್ರಶ್ನೆ

    ಫರಾ ಖಾನ್‍ಗೆ ಕೊರೊನಾ – ದೀಪಿಕಾ, ಅಮಿತಾಭ್ ಬಗ್ಗೆ ಅಭಿಮಾನಿಗಳ ಪ್ರಶ್ನೆ

    ಮುಂಬೈ: ಬಾಲಿವುಡ್ ನಿರ್ದೇಶಕಿ, ನಿರ್ಮಾಪಕಿ ಫರಾ ಖಾನ್‍ಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರ ಜೊತೆಗಿದ್ದ ನಟಿ ದೀಪಿಕಾ ಪಡುಕೋಣೆ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೂ ಬಂದಿದೆಯಾ ಎಂಬ ಸಂದೇಹ ಅಭಿಮಾನಿಗಳಲ್ಲಿದೆ.

    ‘ಕೌನ್ ಬನೇಗಾ ಕರೋಡ್‍ಪತಿ – ಸೀಸನ್ 13’ ಶೂಟಿಂಗ್‍ನಲ್ಲಿ ಫರಾ ಖಾನ್ ಭಾಗವಹಿಸಿದ್ದು, ಈ ವೇಳೆ ಬಾಲಿವುಡ್ ಬಚ್ಚನ್ ಮತ್ತು ದೀಪಿಕಾ ಜೊತೆಗೆ ಕಾಲ ಕಳೆದಿದ್ದಾರೆ. ಈ ವೇಳೆ ಒಂದು ಸೆಲ್ಫಿಯನ್ನು ತೆಗೆದುಕೊಂಡಿದ್ದು, ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಲಾಗಿತ್ತು. ಇದನ್ನೂ ಓದಿ: ಮಾರ್ಷಲ್‍ನನ್ನೇ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಚಾಲಕ

    ಈ ಫೋಟೋ ನೋಡಿದವರು ಫರಾ ಖಾನ್ ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರ ಜೊತೆಗಿದ್ದ ದೀಪಿಕಾ ಮತ್ತು ಅಮಿತಾಭ್ ಗತಿ ಏನು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

     

    View this post on Instagram

     

    A post shared by Farah Khan Kunder (@farahkhankunder)

    ಫರಾ ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ, ಲೆಜೆಂಡ್ ಕೈಯಿಂದ ಸೆಲ್ಫಿಯನ್ನು ತೆಗೆದುಕೊಳ್ಳುವ ಸೌಭಾಗ್ಯ ನಮ್ಮದಾಗಿದೆ. ಶಿಕ್ಷಕರ ದಿನಾಚರಣೆಯ ನಡೆಸಿದ ವಿಶೇಷ ಸಂಚಿಕೆಯಲ್ಲಿ ಈ ಅದ್ಭುತ ಅವಕಾಶ ಸಿಕ್ಕಿರುವುದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ಈ ದಿನ ದೀಪಿಕಾ ಸಹ ಭಾಗವಹಿಸಿದ್ದು, ಅವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಈ ಫೊಟೋವನ್ನು ನನಗೆ ಪಾಸಿಟಿವ್ ಬರುವ ಮುನ್ನ ತೆಗೆಯಲಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಸಮಾಧಾನ ಸಿಕ್ಕಿದೆ.

  • ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

    ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

    ಬೆಂಗಳೂರು: ನಾನು ಫುಲ್ ಥ್ರಿಲ್ ಆಗಿದ್ದೇನೆ ಎಂದು ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆ ವೀಡಿಯೋ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

    ಆ ಪೋಸ್ಟ್‍ನಲ್ಲಿ ಏನಿದೆ?
    ರಚಿತಾ ರಾಮ್ ಅವರ ಸಹೋದರಿ ನಿತ್ಯ ರಾಮ್ ಮದುವೆಯಾಗಿ ವಿದೇಶಕ್ಕೆ ಹೋಗಿದ್ದರು. ಇದರಿಂದ ರಚಿತಾ ತನ್ನ ಸಹೋದರಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಮತ್ತೆ ಇವರಿಬ್ಬರು ಒಂದಾಗಿದ್ದಾರೆ. ರಚಿತಾ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ನಾನು ಎಷ್ಟು ಥ್ರಿಲ್ ಆಗಿದ್ದೇನೆ ಎಂದು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ ನಾವಿಬ್ಬರು ಒಂದಾಗಿದ್ದೇವೆ. ಈ ಖುಷಿಯಿಂದ ನನ್ನ ಹೃದಯ ಕರಗಿದೆ ಎಂದು ಬರೆದು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಮಾದಕ ನೋಟದಿಂದ ನಿದ್ದೆಗೆಡಿಸಿದ ನಟಿ ಶುಭ್ರ ಅಯ್ಯಪ್ಪ

     

    View this post on Instagram

     

    A post shared by Rachita Ram (@rachita_instaofficial)

    ಈ ವೀಡಿಯೋದಲ್ಲಿ ರಚಿತಾ ಮತ್ತು ನಿತ್ಯ ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದು, ವೈ ದಿಸ್ ಕೊಲವೆರಿ ಡಿ ಸಾಂಗ್ ಗೆ ಇಬ್ಬರು ಕ್ಯೂಟ್ ಆಗಿ ಎಕ್ಸ್ ಪ್ರೆಶನ್ ಕೊಟ್ಟಿದ್ದಾರೆ. ಇದನ್ನೂ ಓದಿ:   ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ

     

    View this post on Instagram

     

    A post shared by Rachita Ram (@rachita_instaofficial)

    ಇತ್ತೀಚೆಗೆ ರಚಿತಾ ನಟನೆಯ ‘ಲವ್ ಯೂ ರಚ್ಚು’ ಸಿನಿಮಾದ ಚಿತ್ರೀಕರಣದ ವೇಳೆ ಫೈಟರ್ ವಿವೇಕ್ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ದರು. ಈ ದುರಂತಕ್ಕೆ ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ ಎಂದು ರಚಿತಾ ಮತ್ತು ಚಿತ್ರತಂಡವನ್ನು ಬಿಡದಿ ಪೊಲೀಸರು ವಿಚಾರಣೆಯನ್ನು ಸಹ ಮಾಡಿದ್ದರು. ಪ್ರಸ್ತುತ ಚಿತ್ರತಂಡಕ್ಕೆ ನ್ಯಾಯಾಲಯ ಜಾಮೀನು ನೀಡಿದೆ.

  • ತಂದೆಯನ್ನು ನೆನೆದು ಭಾವುಕರಾಗಿ ಕರಣ್ ಜೋಹರ್ ಪೋಸ್ಟ್

    ತಂದೆಯನ್ನು ನೆನೆದು ಭಾವುಕರಾಗಿ ಕರಣ್ ಜೋಹರ್ ಪೋಸ್ಟ್

    ಮುಂಬೈ: ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಂದೆಯನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಭಾವುಕರಾಗಿದ್ದಾರೆ.

    ಕರಣ್ ಇನ್‍ಸ್ಟಾಗ್ರಾಮ್ ನಲ್ಲಿ, ನೀವು ನನ್ನನ್ನು ಬಿಟ್ಟು ಹೋಗಿ ತುಂಬಾ ವರ್ಷಗಳಾಗಿದೆ. ಆದರೂ ಸಹ ಅಪ್ಪ ನೀವು ನಿನ್ನೆ ನನ್ನ ಜೊತೆಯಲ್ಲಿ ಇದ್ದ ರೀತಿ ಇದೆ. ನಾನು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೂ ಅವರು ಮಾರ್ಗದರ್ಶನ ನೀಡುತ್ತಿದ್ದರು. ಯಶ್ ಜೋಹರ್ ಫೌಂಡೇಶನ್ ಈಗ ಸ್ಥಾಪನೆಯಾಗಿದೆ. ಅದರಿಂದ ನಮ್ಮ ಸುತ್ತಮುತ್ತ ಒಳ್ಳೆಯ ರೀತಿ ಬದಲಾಗುತ್ತೆ ಎಂದು ನಾನು ನಂಬಿದ್ದೇನೆ. ಅದು ಅಲ್ಲದೇ ನನ್ನ ಅಪ್ಪ ಎಲ್ಲಿಯೂ ಹೋಗಿಲ್ಲ. ಅವರು ಇಲ್ಲೇ ಇದ್ದಾರೆ. ನನ್ನನ್ನು ಬೆಂಬಲಿಸುವ ಹಲವು ರೂಪದಲ್ಲಿ ಇದ್ದಾರೆ. ಅವರ ಸ್ವಭಾವ ನಡತೆ ಮತ್ತು ದಯಾ ಗುಣ ಹಲವರಿಗೆ ಸ್ಫೂರ್ತಿ ನೀಡಿದೆ ಅದರಲ್ಲಿ ನನ್ನನ್ನು ತುಂಬಾ ಪ್ರಭಾವಿಸಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಲ್ಲುನನ್ನು ಮೀರಿಸಲು ಡ್ಯಾನ್ಸ್ ಕ್ಲಾಸ್‍ಗೆ ಹೋಗ್ತಿದ್ದಾರೆ ರಶ್ಮಿಕಾ!

     

    View this post on Instagram

     

    A post shared by Karan Johar (@karanjohar)

    ಈ ಮೌಲ್ಯಗಳನ್ನು ನಮ್ಮ ಪರಂಪರೆಯಾಗಿ ಮುಂದುವರಿಸಲು ಮತ್ತು ಅದನ್ನು ನನ್ನ ಮಕ್ಕಳಿಗೂ ಕಲಿಸಲು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಪ್ರತಿದಿನವೂ ನಿಮ್ಮ ಶಕ್ತಿ, ನಿಮ್ಮ ಪ್ರೀತಿ ಮತ್ತು ನಿಮ್ಮ ವಾತ್ಸಲ್ಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ

    ಯಶ್ ಜೋಹರ್ ಕೂಡ ದೂಡ್ಡ ನಿರ್ಮಾಪಕರಾಗಿದ್ದು, ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ 2004 ಯಶ್ ಜೋಹರ್ ಸಾವನ್ನಪ್ಪಿದರು. ನಂತರ ಕರಣ್ ಅವರ ತಂದೆಯ ಧರ್ಮ  ಪ್ರೋಡಕ್ಷನ್ಸ್ ಅನ್ನು ವಹಿಸಿಕೊಂಡರು. ಪ್ರಸ್ತುತ ಬಾಲಿವುಡ್ ನಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ಹಲವು ಸ್ಟಾರ್‍ಗಳಿಗೆ ಗಾಡ್ ಫಾದರ್ ಸಹ ಆಗಿದ್ದಾರೆ.

  • ಅಲ್ಲುನನ್ನು ಮೀರಿಸಲು ಡ್ಯಾನ್ಸ್ ಕ್ಲಾಸ್‍ಗೆ ಹೋಗ್ತಿದ್ದಾರೆ ರಶ್ಮಿಕಾ!

    ಅಲ್ಲುನನ್ನು ಮೀರಿಸಲು ಡ್ಯಾನ್ಸ್ ಕ್ಲಾಸ್‍ಗೆ ಹೋಗ್ತಿದ್ದಾರೆ ರಶ್ಮಿಕಾ!

    ಚೆನ್ನೈ: ಟಾಲಿವುಡ್ ನಲ್ಲಿ ಅಲ್ಲು ಅರ್ಜುನ್ ಡ್ಯಾನ್ಸ್ ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ಜೊತೆ ಡ್ಯಾನ್ಸ್ ಮಾಡಬೇಕೆಂದರೆ ನಟಿಯರಿಗೆ ಹೆಚ್ಚು ಎನರ್ಜಿ ಬೇಕು. ಅದಕ್ಕೆ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಕ್ಲಾಸ್‍ಗೆ ಹೊಗುತ್ತಿದ್ದಾರೆ.

    ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಮೊದಲ ಬಾರಿಗೆ ‘ಪುಷ್ಪ’ ಸಿನಿಮಾದ ಮೂಲಕ ಒಂದಾಗಿ ನಟಿಸುತ್ತಿದ್ದು, ಈ ಸಿನಿಮಾಗಾಗಿ ರಶ್ಮಿಕಾ ಸಖತ್ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಡ್ಯಾನ್ಸ್ ಪ್ರಾಕ್ಟೀಸ್ ಗೆ ರಶ್ಮಿಕಾ ಹೋಗುತ್ತಿದ್ದು, ಅವರನ್ನು ಮ್ಯಾಚ್ ಮಾಡಲು ಫುಲ್ ಕಷ್ಟಪಟ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ

    ಇನ್ನೂ ಸ್ವಲ್ಪ ದಿನದಲ್ಲೇ ಈ ಡ್ಯಾನ್ಸ್ ಶೂಟ್ ಪ್ರಾರಂಭವಾಗುತ್ತಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಮಾಡುತ್ತಿದ್ದು, ಮೊದಲ ಭಾಗ ಇದೇ ಡಿಸೆಂಬರ್ ಗೆ ಬಿಡುಗಡೆಯಾಗುತ್ತಿದೆ. ಇದನ್ನು ಚಿತ್ರತಂಡವೇ ಅಧಿಕೃತವಾಗಿ ತಿಳಿಸಿದ್ದು, ಇವರಿಬ್ಬರ ನಟನೆಯನ್ನು ನೊಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ರಶ್ಮಿಕಾ ಸಹ ಒಳ್ಳೆಯ ಡ್ಯಾನ್ಸ್. ‘ಸರಿಲೆರು ನೀಕೇವ್ವರು’ ಮತ್ತು ‘ಭೀಷ್ಮ’ ಸಿನಿಮಾದಲ್ಲಿ ಅವರು ಸಖತ್ ಆಗಿ ಸ್ಟೆಪ್ ಹಾಕಿದ್ದರು. ಇನ್ನೂ ಈ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ. ಅವರ ಅಭಿನಯ ಹೇಗಿರಬಹುದೆಂದು ಎಲ್ಲರೂ ಕಾಯುತ್ತಿದ್ದಾರೆ. ಈ ಸಿನಿಮಾ ಕಥೆ ಬೇರೆ ರೀತಿ ಇದ್ದು, ರಶ್ಮಿಕಾ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಬಿಜೆಪಿ ಈ ದೇಶದ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ: ಎ.ನಾರಾಯಣಸ್ವಾಮಿ

    ರಶ್ಮಿಕಾ ಇತ್ತೀಚೆಗೆ ತಮ್ಮ ಬಾಲಿವುಡ್ ಮೊದಲ ಸಿನಿಮಾ ‘ಮಿಷನ್ ಮಜ್ನು’ ಶೂಟಿಂಗ್ ಮುಗಿಸಿ, ‘ಪುಷ್ಪ’ ಸಿನಿಮಾದ ಶೂಟಿಂಗ್ ಗಾಗಿ ಹೈದರಾಬಾದ್ ಗೆ ಬಂದಿದ್ದಾರೆ.

  • ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಸ್ವಸಹಾಯ ಸಂಘ ಸ್ಥಾಪನೆಗಳಿಗೆ ಸಹಕಾರ ನೀಡಿತು: ರಾಮಲಿಂಗಾರೆಡ್ಡಿ

    ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಸ್ವಸಹಾಯ ಸಂಘ ಸ್ಥಾಪನೆಗಳಿಗೆ ಸಹಕಾರ ನೀಡಿತು: ರಾಮಲಿಂಗಾರೆಡ್ಡಿ

    – ಮಹಿಳೆ ಸಮಾಜದ ಕಣ್ಣು, ಮಹಿಳೆಯರಿಗೆ ಗೌರವದ ಸಂಕೇತ ಬಾಗಿನ ವಿತರಣೆ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಸ್ವಸಹಾಯ ಸಂಘ ಸ್ಥಾಪನೆಗಳಿಗೆ ಸಹಕಾರ ನೀಡಿತು ಎಂದು ಕೆಪಿಸಿಸಿ ಶಾಸಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

    ಜಯನಗರ, ಸಾರಕ್ಕಿ ಸಿಂಧೂರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಸೇವಕ್ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ 500 ಮಹಿಳೆಯರಿಗೆ ಬಾಗಿನ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಜನಜಾಗೃತಿ ಅಭಿಯಾನ ಮಾಡಲಾಗಿದೆ. ಈ ಅಭಿಯಾನಕ್ಕೆ ರಾಮಲಿಂಗಾರೆಡ್ಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದನ್ನೂ ಓದಿ:ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!

    ರಾಮಲಿಂಗಾರೆಡ್ಡಿ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ್ದು, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ ಮಹಿಳಾ ಸಬಲೀಕರಣಕ್ಕೆ ಸ್ವಸಹಾಯ ಸಂಘ ಸ್ಥಾಪನೆಗಳಿಗೆ ಸಹಕಾರ ನೀಡಿತು. ಇಂದು ಸ್ವ-ಸಹಾಯ ಗುಂಪಿನಿಂದ ಮಹಿಳೆಯರಿಗೆ ಸಾಲ ಸೌಲಭ್ಯ, ಸ್ವಯಂ ಉದ್ಯೋಗ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸಲು ಸ್ವಸಹಾಯ ಸಂಘ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

    ಬಾಗಿನ ನೀಡುವುದು ಶುಭಕರದ ಸಂಕೇತ. ಮಹಿಳೆಯರಿಗೆ ಪ್ರಮುಖ ಹಬ್ಬಗಳಲ್ಲಿ ಸಂಪ್ರದಾಯ ಪ್ರಕಾರ ಅರಿಶಿನ, ಕುಂಕುಮ, ಹಸಿರು ಗಾಜಿನ ಬಳೆ ವಿವಿಧ ಶುಭಕರವಾದ ವಸ್ತುಗಳ ಕೊಟ್ಟು, ಶುಭಾಶಯ ಕೋರುವುದು ವಿಶೇಷವಾಗಿದೆ. ಜೆ.ಪಿ.ನಗರದಲ್ಲಿ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಒಂದೇ ಕುಟುಂಬದವರಂತೆ ಸಹಬಾಳ್ಮೆ ಮೂಲಕ ಬದುಕೋಣ ಎಂಬ ಸಂದೇಶ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್

    ಕೊರೊನಾ ಸಾಂಕ್ರಮಿಕ ರೋಗ ಇನ್ನೂ ಮುಕ್ತವಾಗಿಲ್ಲ. ಜನರು ಜಾಗೃತಿಯಿಂದ ಗಣೇಶ ಹಬ್ಬವನ್ನು ಮನೆಯಲ್ಲಿ ಅಚರಣೆ ಮಾಡಬೇಕು. ಸಾಮೂಹಿಕ ಗಣೇಶ ಹಬ್ಬ ಅಚರಣೆಗೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ತರಬೇಕು ಎಂದು ಆಗ್ರಹಿಸಿದ್ದಾರೆ. ಪರಿಸರ ಉಳಿದರೆ ಮಾತ್ರ ಮನುಷ್ಯ ಉಳಿಯುತ್ತಾನೆ. ಈ ಬಾರಿ ಗಣೇಶ ಪ್ರತಿಷ್ಠಾಪನೆ ಮಾಡುವ ಮನೆಗಳಲ್ಲಿ ಬಣ್ಣದ ರಾಸಯನಿಕ ಗಣೇಶ ಮೂರ್ತಿಗಳು ಬೇಡ ಅದರ ಬದಲು ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತನ್ನಿ. ಮಣ್ಣಿನ ಗಣೇಶ ನೀರಿನಲ್ಲಿ ಕರಗಿದರೆ ಯಾವುದೇ ಹಾನಿಯಿಲ್ಲ, ಪರಿಸರವು ಉಳಿಯುತ್ತೆ ಎಂದು ಸಂದೇಶವನ್ನು ನೀಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯರೆಡ್ಡಿ, ಕಾಂಗ್ರೆಸ್ ನ ಮುಖಂಡ ಅರುಣ್ ಕುಮಾರ್ ಸೇವಕ್, ಮಹಿಳಾ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮಂಜುಳಾ ಅರುಣ್ ಕುಮಾರ್, ಚಲನಚಿತ್ರ ನಟಿ ರಾಧ ಮತ್ತು ಡಾ||ಗೀತಾ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಇದನ್ನೂ ಓದಿ: ಬೆಳ್ಳಿ ಹುಡುಗ ಸುಹಾಸ್‍ಗೆ ಕುಟುಂಬಸ್ಥರ ಅಭಿನಂದನೆ

  • ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್

    ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್

    ಮುಂಬೈ: ನನ್ನ ಹೃದಯ ನಿನ್ನ ಬಳಿ ಇದೆ ಎಂದು ಬಾಲಿವುಡ್ ಹಾಟ್ ಬ್ಯೂಟಿ ಕತ್ರಿನಾ ಕೈಫ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ನಟಿ ಈ ರೀತಿ ಹೇಳಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸುವಂತೆ ಮಾಡಿದೆ.

    ಕತ್ರಿನಾ ಸಿನಿಮಾ ಸುದ್ದಿಗಿಂತ ಮದುವೆ ವಿಚಾರದಲ್ಲಿ ಸಖತ್ ಸುದ್ದಿಯಾಗುತ್ತಿರುತ್ತಾರೆ. ಇಂದು ಕತ್ರಿನಾ ಇನ್‍ಸ್ಟಾದಲ್ಲಿ, ಟರ್ಕಿ… ನಿನ್ನ ಬಳಿ ನನ್ನ ಹೃದಯ ಇದೆ ಎಂದು ಬರೆದು ತಮ್ಮ ಫೊಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಸಾಲುಗಳನ್ನು ನೋಡಿದ ಅಭಿಮಾನಿಗಳು ನಿಮ್ಮ ಸಂಗತಿ ಯಾರು? ಎಂದು ಯಾವಾಗ ಹೇಳುತ್ತೀರಾ? ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಇದನ್ನೂ ಓದಿ :ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್

     

    View this post on Instagram

     

    A post shared by Katrina Kaif (@katrinakaif)

    ಕತ್ರಿನಾ ಈ ಹಿಂದೆ ವಿಕ್ಕಿ ಕೌಶಲ್ ಜೊತೆ ನಿಶ್ಚಿತಾರ್ಥವಾಗಿದೆ ಎಂದು ಸುದ್ದಿಯಾಗಿದ್ದರು. ಕತ್ರಿನಾಗೆ ಇದು ಹೊಸದಲ್ಲ. ಈ ಹಿಂದೆಯೂ ಇವರನ್ನು ಸಲ್ಮಾನ್ ಖಾನ್, ರಣಬೀರ್ ಕಪೂರ್ ಜೊತೆ ರಿಲೇಶನ್ ಶಿಪ್‍ನಲ್ಲಿ ಇದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಈ ಕುರಿತು ಕತ್ರಿನಾ ಮಾತ್ರ ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಇದನ್ನೂ ಓದಿ :ಬೆಳ್ಳಿ ಹುಡುಗ ಸುಹಾಸ್‍ಗೆ ಕುಟುಂಬಸ್ಥರ ಅಭಿನಂದನೆ

     

    View this post on Instagram

     

    A post shared by Mehmet Nuri Ersoy (@mehmetersoytr)

    ಕತ್ರಿನಾ ಪ್ರಸ್ತುತ ‘ಟೈಗರ್ 3’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದು, ಶೂಟಿಂಗ್‍ಗಾಗಿ ರಷ್ಯಾಗೆ ತೆರಳಿದ್ದಾರೆ. ಈ ವೇಳೆ ತೆಗೆದ ಕೆಲವು ಫೊಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದು, ಇವರಿಬ್ಬರೂ ಮತ್ತೆ ತೆರೆಮೇಲೆ ಮೋಡಿಮಾಡಲು ಬರುತ್ತಿದ್ದಾರೆ. ಇವರಿಬ್ಬರ ಜೋಡಿಯನ್ನು ನೋಡಲು ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ :ನಿಗದಿತ ಅವಧಿಯ ಒಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುತ್ತೆ: ಸಿ.ಸಿ.ಪಾಟೀಲ್

    ಈ ಸಿನಿಮಾದ ಬಜೆಟ್ ಕೂಡ ಹೈ ಇದ್ದು, ನಿರ್ಮಾಪಕರು ಸಹ ಚಿತ್ರದಲ್ಲಿ ಯಾವುದೇ ರೀತಿಯ ರಾಜಿಯಾದೆ ಶೂಟಿಂಗ್ ಅನ್ನು ಹೆಚ್ಚು ವಿದೇಶದಲ್ಲಿ ಮಾಡುತ್ತಿದ್ದಾರೆ. ಈಗ ಈ ಚಿತ್ರತಂಡ ಟರ್ಕಿಯಲ್ಲಿದೆ.