Tag: ಸಿಧು ಮೂಸೆ ವಾಲಾ

  • ಸಂಜಯ್ ರಾವತ್‍ಗೆ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್‍ನಿಂದ ಕೊಲೆ ಬೆದರಿಕೆ

    ಸಂಜಯ್ ರಾವತ್‍ಗೆ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್‍ನಿಂದ ಕೊಲೆ ಬೆದರಿಕೆ

    ನವದೆಹಲಿ: ಶಿವಸೇನಾ (Shiv Sena) ಸಂಸದ ಸಂಜಯ್ ರಾವತ್ (Sanjay Raut) ಅವರಿಗೆ ಜೀವ ಬೆದರಿಕೆ ಸಂದೇಶಗಳು ಬಂದಿವೆ. ಈ ಬಗ್ಗೆ ಶುಕ್ರವಾರ ರಾತ್ರಿ ಮುಂಬೈ (Mumbai) ಪೊಲೀಸರಿಗೆ ತಿಳಿಸಿದ್ದೇನೆ ಎಂದು ರಾವತ್ ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಬಗ್ಗೆ ರಾವತ್ ಪ್ರತಿಕ್ರಿಯಿಸಿ, ನನಗೆ ಈ ಹಿಂದೆ ಸಹ ಬೆದರಿಕೆ ಬಂದಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಆದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರತಿಪಕ್ಷ ನಾಯಕರ ಭದ್ರತೆಯ ಬಗ್ಗೆ ರಾಜ್ಯ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ- ಚೆನೈ ಕಲಾಕ್ಷೇತ್ರದ ಪ್ರೊಫೆಸರ್ ವಿರುದ್ಧ ದೂರು ದಾಖಲು

    ಕುಖ್ಯಾತ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moose Wala) ಹತ್ಯೆಯ ಮಾಸ್ಟರ್ ಮೈಂಡ್ ಆಗಿದ್ದು, ಪ್ರಸ್ತುತ ಪಂಜಾಬ್ ಜೈಲಿನಲ್ಲಿದ್ದಾನೆ. ಆತನ ಮೇಲೆ ಗಾಯಕನ ತಂದೆ ಬಲ್ಕೌರ್ ಸಿಂಗ್ ಮತ್ತು ನಟ ಸಲ್ಮಾನ್ ಖಾನ್‍ಗೆ (Salman Khan) ಬೆದರಿಕೆ ಒಡ್ಡಿದ ಆರೋಪಗಳಿವೆ. ಇದನ್ನೂ ಓದಿ: ಶಾಸಕ ಮಹೇಶ್ ಕುಮಠಳ್ಳಿಗೆ ಟಿಕೆಟ್ ಟೆನ್ಶನ್- ವಲಸಿಗ ಶಾಸಕರಿಗೆ ಮೂಲ ಬಿಜೆಪಿಗರಿಂದ ಕಿರಿಕ್

  • ಸಿಧು ಹತ್ಯಾ ಪ್ರಕರಣ – ಉತ್ತರ ಭಾರತದಾದ್ಯಂತ 50 ಕಡೆಗಳಲ್ಲಿ ಎನ್‌ಐಎ ದಾಳಿ

    ಸಿಧು ಹತ್ಯಾ ಪ್ರಕರಣ – ಉತ್ತರ ಭಾರತದಾದ್ಯಂತ 50 ಕಡೆಗಳಲ್ಲಿ ಎನ್‌ಐಎ ದಾಳಿ

    ನವದೆಹಲಿ: ರೌಡಿಶೀಟರ್‌ಗಳ(Gangsters) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಉತ್ತರ ಭಾರತದಾದ್ಯಂತ ಸುಮಾರು 50ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದೆ.

    ಹರಿಯಾಣ, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ವಿವಿಧ ರೌಡಿಶೀಟರ್‌ಗಳೊಂದಿಗೆ ಸಂಪರ್ಕ ಹೊಂದಿದ ಸ್ಥಳಗಳಲ್ಲಿ ಸ್ಥಳೀಯ ಪೊಲೀಸ್ ಪಡೆಗಳ ಸಮನ್ವಯದಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ.

    ರೌಡಿಶೀಟರ್‌ಗಳು ಮತ್ತು ಭಯೋತ್ಪಾದಕರ(Terrorist) ನಡುವೆ ಸಂಬಂಧಗಳಿರುವುದನ್ನು ಬಹಿರಂಗಪಡಿಸಲಾಗಿದೆ. ಭಾರತ ಮತ್ತು ವಿದೇಶಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ಯಾಂಗ್‌ಸ್ಟರ್ ಭಯೋತ್ಪಾದನಾ ವಿರೋಧಿ ಏಜೆನ್ಸಿಗಳಿಂದಲೂ ಈ ಬಗ್ಗೆ ಮಾಹಿತಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಂಜಾಬಿ ಗಾಯಕ ಸಿಧು ಮೂಸೆ ವಾಲಾ(Sidhu Moosewala) ಹತ್ಯೆಯ ಪ್ರಮುಖ ಶಂಕಿತ ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ಕೆಲವು ಆರೋಪಿಗಳು ಜೈಲಿನಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

    ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಬಳಿಕ ಭಯೋತ್ಪಾದಕರು ಮತ್ತು ರೌಟಿಶೀಟರ್‌ಗಳ ನಡುವೆ ನಂಟು ಬೆಳೆಯುತ್ತಿರುವುದು ಬಹಿರಂಗವಾಗಿದೆ. ಕೇಂದ್ರ ಈ ಬಗ್ಗೆ 2 ತಿಂಗಳಿನಿAದ ಪಂಜಾಬ್ ಪೊಲೀಸರಿಗೆ ಎಚ್ಚರಿಕೆ ನೀಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಟ್ರಾಫಿಕ್‍ನಲ್ಲಿ ಸಿಲುಕಿದ್ದ ಕಾರನ್ನು ಅಲ್ಲೇ ಬಿಟ್ಟರು – 3 ಕಿ.ಮೀ ಓಡಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ಪ್ರಾಣ ಉಳಿಸಿದ ಡಾಕ್ಟರ್

    ಕೇಂದ್ರ ಗೃಹ ಸಚಿವಾಲಯ ಭಾರತದಾದ್ಯಂತ ಈ ರೌಡಿಶೀಟರ್‌ಗಳ ವಿರುದ್ಧ ಗುಪ್ತಚರ ನೇತೃತ್ವದ ಸಂಘಟಿತ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮತ್ತು ಅವರ ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲು ಎನ್‌ಐಎ ಗೆ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಜೂನ್ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದ ಬಳಿ ಸಿಧು ಮೂಸೆ ವಾಲಾ ಅವರನ್ನು ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡು ಹಾರಿಸಲಾಗಿತ್ತು. ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದು 2ಕಿ.ಮೀ.ವರೆಗೂ ಎಳೆದೊಯ್ದ ಕಂಟೈನರ್ ಟ್ರಕ್

    Live Tv
    [brid partner=56869869 player=32851 video=960834 autoplay=true]

  • ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ನನಗಿಲ್ಲ: ಸಿಧು ಮೂಸೆ ವಾಲಾ ತಂದೆ

    ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ನನಗಿಲ್ಲ: ಸಿಧು ಮೂಸೆ ವಾಲಾ ತಂದೆ

    ಚಂಡೀಗಢ: ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಅವರ ಪೋಷಕರು ಶನಿವಾರ ಚಂಡೀಗಢದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಸಿಧು ಮೂಸೆ ವಾಲಾ ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದಾರೆ ಎಂದು ಹರಿದಾಡುತ್ತಿರುವ ಗಾಸಿಪ್‌ಗಳಿಗೆ ಬ್ರೇಕ್‌ ಹಾಕಿದ್ದಾರೆ.

    ಅಮಿತ್ ಶಾ ಅವರನ್ನು ಭೇಟಿಯಾಗುತ್ತಿದ್ದಂತೆ ಸಿಧು ಮೂಸ್ ವಾಲಾ ಅವರ ತಂದೆ ಮಗನ ಹತ್ಯೆ ಖಂಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ರಾಜಕೀಯಕ್ಕೆ ಬರುತ್ತೇನೆ ಎಂಬ ವಿಚಾರವಾಗಿ ಸಾಕಷ್ಟು ವದಂತಿಗಳಿದೆ. ಆದರೆ ಅವುಗಳನ್ನು ಯಾರೂ ನಂಬಬೇಡಿ. ಇತ್ತೀಚೆಗಷ್ಟೇ ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಚುನಾವಣೆಗೆ ಸ್ಪರ್ಧಿಸುವ ಯಾವ ಉದ್ದೇಶವನ್ನೂ ನಾನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೀಡಿಯೋದಲ್ಲಿ ಸಿಧು ಮೂಸೆ ವಾಲಾ ಅವರ ತಂದೆ ಅಮಿತ್ ಶಾ ಅವರ ಮುಂದೆ ಕಣ್ಣೀರು ಹಾಕುತ್ತಾ ತಮ್ಮ ಎರಡು ಕೈಗಳನ್ನು ಜೋಡಿಸಿ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ.

    ಈ ಮುನ್ನ ಪಂಜಾಬಿ ಗಾಯಕನ ಹತ್ಯೆ ಕುರಿತಂತೆ ಕೇಂದ್ರೀಯ ಸಂಸ್ಥೆಗಳು ತನಿಖೆ ನಡೆಸುವಂತೆ ಮೂಸೆ ವಾಲಾ ಕುಟುಂಬಸ್ಥರು ಅಮಿತ್ ಶಾ ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದರು ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ. ಇದನ್ನೂ ಓದಿ: 424 ವಿಐಪಿಗಳಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದ ಪಂಜಾಬ್ ಸರ್ಕಾರ

    ಸಿಧು ಮೂಸೆ ವಾಲಾ ಅವರನ್ನು ಮೇ 29ರಂದು ಮಾನ್ಸಾ ಬಳಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು 424 ಮಂದಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯುವ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಅದರಲ್ಲಿ ಮೂಸೆ ವಾಲಾ ಕೂಡ ಒಬ್ಬರಾಗಿದ್ದರು. ಅವರ ಭದ್ರತೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ ಈ ಘಟನೆ ಸಂಭವಿಸಿತ್ತು. ಇದನ್ನೂ ಓದಿ:  ಸಿಧು ಮೂಸೆ ವಾಲಾ ಹತ್ಯೆ: ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲು

    ಮೂಸೆ ವಾಲಾ ಅವರು ಮಾನ್ಸಾ ಬಳಿಯ ಮೂಸ್ ವಾಲಾ ಗ್ರಾಮಕ್ಕೆ ಸೇರಿದವರಾಗಿದ್ದು, ಕಳೆದ ಕೆಲವು ವರ್ಷಗಳಲ್ಲಿ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದರು. ಮೂಸೆ ವಾಲಾ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಭಾರೀ ಅಬ್ಬರದ ನಡುವೆ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು.