Tag: ಸಿದ್ಧಾರ್ಥ ಮಲ್ಹೋತ್ರಾ

  • ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ

    ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ

    `ಪುಷ್ಪ’ (Pushpa) ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್‌ನಲ್ಲಿ ಸದ್ದು ಮಾಡ್ತಿದ್ದಾರೆ. ಈಗ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಭರ್ಜರಿಯಾಗಿ ಪಾರ್ಟಿ ಮಾಡಿದ್ದಾರೆ. ಈ ಕುರಿತ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    ರಶ್ಮಿಕಾ ನಟನೆಯ ಮೊದಲ ಚಿತ್ರ `ಗುಡ್ ಬೈ’ ಬಿಟೌನ್ ಮಕಾಡೆ ಮಲಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ `ಮಿಷನ್ ಮಜ್ನು’ ಮೊದಲು ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ತಡವಾಗಿ ರಿಲೀಸ್ ಆಯ್ತು. ಕಳೆದ ವಾರ ಸಿದ್ಧಾರ್ಥ್ ಮತ್ತು ರಶ್ಮಿಕಾ ನಟನೆಯ `ಮಿಷನ್ ಮಜ್ನು’ ಚಿತ್ರ ಒಟಿಟಿಯಲ್ಲಿ ತೆರೆಕಂಡಿತ್ತು. ಸಿನಿಮಾ ಪ್ರೇಕ್ಷಕರು ವಾವ್ ಎಂದಿದ್ದಾರೆ. ಚಿತ್ರ ಸಕ್ಸಸ್ ಕೂಡ ಕಂಡಿದೆ. ಇದೇ ಖುಷಿಯಲ್ಲಿ ಇಡೀ ಚಿತ್ರತಂಡ ಪಾರ್ಟಿ ಮಾಡಿದ್ದಾರೆ.

     

    View this post on Instagram

     

    A post shared by yogen shah (@yogenshah_s)

    ರಶ್ಮಿಕಾ (Rashmika) ಅವರು ಹೊಸ ಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. `ಮಿಷನ್ ಮಜ್ನು’ (Mission Majnu) ಚಿತ್ರದಲ್ಲಿ ಕಣ್ಣಿಲ್ಲದ ಪಾಕ್ ಯುವತಿಯ ಪಾತ್ರವನ್ನು ರಶ್ಮಿಕಾ ಮಾಡಿದ್ದಾರೆ. ಅವರ ನಟನೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಖುಷಿಯಲ್ಲಿ ಎಲ್ಲರೂ ಮುಂಬೈನಲ್ಲಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಒಳಗೆ ತೆರಳುವುದಕ್ಕೂ ಮುನ್ನ ರಶ್ಮಿಕಾ ಹಾಗೂ ಸಿದ್ದಾರ್ಥ್ ಮಲ್ಹೋತ್ರ (Siddarth Malhotra) ಪಾಪರಾಜಿಗಳತ್ತ ಕೈ ಬೀಸಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಪರಭಾಷಾ ನಟರಾ?: ಫಿಲ್ಮ್ ಚೇಂಬರ್ ವಿರುದ್ಧ ವೀರಕಪುತ್ರ ಶ್ರೀನಿವಾಸ್ ಆಕ್ರೋಶ

    ಹೀಗೆ ಬಾಲಿವುಡ್ ಮತ್ತು ಸೌತ್ ಸಿನಿಮಾ ಅಂತಾ ಕನ್ನಡತಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಸದ್ಯ ʻಪುಷ್ಪ 2ʼ ಚಿತ್ರೀಕರಣದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Happy Birthday To My Love – ಬಾಲಿವುಡ್ ನಟನಿಗೆ ಸುದೀಪ್ ಪುತ್ರಿ ವಿಶ್

    Happy Birthday To My Love – ಬಾಲಿವುಡ್ ನಟನಿಗೆ ಸುದೀಪ್ ಪುತ್ರಿ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸುದೀಪ್ ಅವರ ಪುತ್ರಿ ಸಾನ್ವಿ ಅವರು ತಮ್ಮ ನೆಚ್ಚಿನ ನಟನಿಗೆ ಸೋಶಿಯಲ್ ಮೀಡಿಯಾ ಮೂಲಕವಾಗಿ ಪ್ರೀತಿಯಿಂದ ವಿಶ್ ಮಾಡಿ ಸುದ್ದಿಯಾಗಿದ್ದಾರೆ.

    ಬಾಲಿವುಡ್ ನಟ ಸಿದ್ಧಾರ್ಥ ಮಲ್ಹೋತ್ರಾ ಇಂದು 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ನೆಚ್ಚಿನ ನಟನಿಗೆ ಸಾನ್ವಿ ಸುದೀಪ್‍ಗೆ, ಬಾಲಿವುಡ್ ಸಿದ್ಧಾರ್ಥ್ ಎಂದರೆ ಬಲು ಇಷ್ಟ. ಹೀಗಾಗಿ ತುಂಬಾ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಭಾಮ

    ಸಾನ್ವಿ ಅವರು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಫೋಟೋವನ್ನು ಶೇಋ ಮಾಡಿ ‘ ಹ್ಯಾಪಿ ಬರ್ತ್‍ಡೇ ಟು ಮೈ ಲವ್ ಎಂದು ಬರೆದುಕೊಂಡಿದ್ದಾರೆ. ಸಾನ್ವಿ ಹಲವು ಬಾರಿ ಸಿದ್ಧಾರ್ಥ್ ಅವರ ಫೋಟೋ ವೀಡಿಯೋಗಳನ್ನು ಶೇರ್ ಮಾಡುತ್ತಾ ಇರುತ್ತಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ಸಿದ್ಧಾರ್ಥ್ ಅವರಿಗೆ ಬಾಲಿವುಡ್ ಸೆಲೆಬ್ರೆಟಿಗಳು ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್

  • ಆಲ್ ದಿ ಬೆಸ್ಟ್.. ನಾನು ಇಲ್ಲದೆ ಸಂತೋಷದಿಂದ ಇರಿ: ರಶ್ಮಿಕಾ ಮಂದಣ್ಣ

    ಆಲ್ ದಿ ಬೆಸ್ಟ್.. ನಾನು ಇಲ್ಲದೆ ಸಂತೋಷದಿಂದ ಇರಿ: ರಶ್ಮಿಕಾ ಮಂದಣ್ಣ

    ಬೆಂಗಳೂರು: ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಫೆಬ್ರವರಿ 6 ರಿಂದ ಲಕ್ನೋದಲ್ಲಿ ಪ್ರಾರಂಭವಾಗಿದೆ. ಆದರೆ ಸಿನಿಮಾದ ಪ್ರಮುಖ ನಾಯಕಿ ರಶ್ಮಿಕಾ ಮಂದಣ್ಣ ಚಿತ್ರೀಕರಣದಲ್ಲಿ ಸದ್ಯ ಪಾಲ್ಗೊಂಡಿಲ್ಲ. ಬದಲಾಗಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದು ವಿಶ್ ಮಾಡಿದ್ದಾರೆ.

    ಸಿನಿಮಾ ನಿರ್ಮಾಣ ಮಾಡುತ್ತಿರುವ ಆರ್‍ಎಸ್‍ವಿಪಿ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕ ಮಿಷನ್ ಮಜ್ನು ಕ್ಲಾಪ್ ಬೋರ್ಡ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಭಾರತದ ಮಾರಕ ರಹಸ್ಯ ಕಾರ್ಯಚರಣೆಯ ಮೊದಲ ಅಧ್ಯಾಯವು ಇಂದು ಆರಂಭವಾಗಿದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದೆ.

    ಜೊತೆಗೆ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣವನ್ನು ಲಕ್ನೋನಲ್ಲಿ ಇಂದಿನಿಂದ ಆರಂಭಿಸಲಾಗಿದ್ದು, ಮುಂದಿನ ಒಂದೆರಡು ದಿನಗಳ ಕಾಲ ಕೇವಲ ಸಿದ್ಧಾರ್ಥ್ ಮಲ್ಹೋತ್ರಾ ದೃಶ್ಯಗಳನ್ನು ಮಾತ್ರ ಚಿತ್ರೀಕರಿಸಲಾಗುತ್ತದೆ. ನಂತರದ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ಸಿನಿಮಾ ಕುರಿತಂತೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಹಾಹಾಹಾ… ನಮ್ಮ ಹುಡುಗರು ಇಂದು ರೋಲಿಂಗ್ ಆರಂಭಿಸಿದ್ದಾರೆ. ಆಲ್ ದಿ ಬೆಸ್ಟ್ ಆಲ್. ನಾನು ಇಲ್ಲದೆ ಸಂತೋಷದಿಂದ ಇರಿ ಎಂದು ಬೇಸರದ ಸಿಂಬಲ್ ಹಾಕಿ ವಿಶ್ ಮಾಡಿದ್ದಾರೆ. ಇನ್ನೂ ಈ ಪೋಸ್ಟ್‍ನನ್ನು ಆರ್‍ಎಸ್‍ವಿಪಿ ಚಲನಚಿತ್ರ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

    ಮಿಷನ್ ಮಜ್ನು ಸಿನಿಮಾದ ಲೀಡ್ ರೋಲ್‍ನಲ್ಲಿ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೇ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‍ನನ್ನು ಶೇರ್ ಮಾಡಿಕೊಂಡಿದ್ದರು. ಜೊತೆಗೆ ನಮ್ಮ ಗುಪ್ತಚರ ಸಂಸ್ಥೆ ಶತ್ರುಗಳ ಕುರಿತಂತೆ ನಡೆಸಿದ ಅತ್ಯಂತ ಮಾರಕ ರಹಸ್ಯ ಕಾರ್ಯಾಚರಣೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.

     

    View this post on Instagram

     

    A post shared by Sidharth Malhotra (@sidmalhotra)

    ಮಿಷನ್ ಮಜ್ನು 1870ರ ನೈಜ ಘಟನೆಗಳಿಂದ ಪ್ರೇರಿತವಾಗಿರುವ ಒಂದು ಪತ್ತೆದಾರಿ ಥ್ರಿಲ್ಲರ್ ಚಿತ್ರವಾಗಿದ್ದು, ಈ ಸಿನಿಮಾವು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನು ಶಾಶ್ವತವಾಗಿ ಬದಲಿಸಿದ ಕಥೆಯನ್ನು ಒಳಗೊಂಡಿದೆ ಎಂದು ಸಿನಿಮಾತಂಡ ತಿಳಿಸಿದೆ.

  • ಬಾಲಿವುಡ್ ಮಿಷನ್ ಮಜ್ನು ಸೇರಿದ ಸಾನ್ವಿ ಟೀಚರ್

    ಬಾಲಿವುಡ್ ಮಿಷನ್ ಮಜ್ನು ಸೇರಿದ ಸಾನ್ವಿ ಟೀಚರ್

    ಬೆಂಗಳೂರು: ಕೊಡಗಿನ ಚೆಲುವೆ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಿಟೌನ್‍ಗೆ ಮಿಷನ್ ಮಜ್ನು ಮೂಲಕ ಎಂಟ್ರಿ ಕೊಡಲಿದ್ದಾರೆ. ಇಂದು ಚಿತ್ರದ ಫಸ್ಟ್ ಲುಕ್ ಔಟ್ ಆಗಿದ್ದು, ಸಿದ್ಧಾರ್ಥ ಮಲ್ಹೋತ್ರಾಗೆ ಸಾನ್ವಿ ಟೀಚರ್ ನಾಯಕಿಯಾಗಲಿದ್ದಾರೆ.

    ಕಿರಿಕ್ ಪಾರ್ಟಿ ಮೂಲಕ ಕನ್ನಡಕ ತೊಟ್ಟು ಬಣ್ಣದ ದುನಿಯಾಗೆ ಬಂದ ಮುದ್ದು ಮುಖದ ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನವಾಗ ತೊಡಗಿದೆ. ಕೇವಲ ಚಂದನವನ ಮಾತ್ರವಲ್ಲದೇ ಟಾಲಿವುಡ್ ನಲ್ಲಿ ಬೇಡಿಕೆಯ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಸಹ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಬ್ಯಾಗ್ ನಲ್ಲಿ ಮಿಷನ್ ಮಜ್ನು ಸೇರಿಕೊಂಡಿದೆ. ಯಶ್ ರಾಜ್ ಫಿಲಂಸ್ ನಿರ್ಮಿಸುತ್ತಿರುವ ರ್ಯಾಪರ್ ಬಾದ್‍ಶಾ ಅಲ್ಬಂ ಹಾಡಿನಲ್ಲಿಯೂ ರಶ್ಮಿಕಾ ನಟಿಸಿದ್ದಾರೆ. ಹಾಡಿನ ಶೂಟಿಂಗ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿವೆ.

    1970ರಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ಶಾಂತೂನು ಬಾಗ್ಚಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ರೊನ್ನಿ ಸ್ಕ್ರೀವಲ್, ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ನಿರ್ಮಾಣದಲ್ಲಿ ಮಿಷನ್ ಮಜ್ನು ಮೂಡಿ ಬರಲಿದೆ. ಸಿದ್ಧಾರ್ಥ್ ರಾ ಏಜೆಂಟ್ ಪಾತ್ರದಲ್ಲಿ ನಟಿಸಿದ್ದು, ಪಾಕಿಸ್ತಾನದಲ್ಲಿಯೂ ಚಿತ್ರೀಕರಣ ನಡೆಯಲಿದೆ. ಫೆಬ್ರವರಿಯಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.