Tag: ಸಿದ್ಧಾರ್ಥ ಮಲ್ಹೋತ್ರ

  • ಪಡ್ಡೆಗಳ ಮತ್ತೆ ನಿದ್ದೆಗೆಡಿಸಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

    ಪಡ್ಡೆಗಳ ಮತ್ತೆ ನಿದ್ದೆಗೆಡಿಸಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋವನ್ನು ಹಂಚಿಕೊಂಡು ನಿಮ್ಮೊಂದಿಗೆ ಆದಷ್ಟು ಬೇಗ ಸೋಷಿಯಲ್ ಮೀಡಿಯಾ ಮೂಲಕ ಭೇಟಿ ಆಗುವುದಾಗಿ ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ನಿಮ್ಮೊಂದಿಗೆ ಮಾತನಾಡುವುದು ಅಂದರೆ ನನಗೆ ಎಲ್ಲಿಲ್ಲದ ಸಂಭ್ರಮ ಎಂದೂ ಅವರು ಹೇಳಿಕೊಂಡಿದ್ದಾರೆ.

    ಸದ್ಯ ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಬಿಡುಗಡೆಗೆ ಸಿದ್ಧವಾಗಿದೆ. ಈ ಬಿಡುಗಡೆಯ ಹೊತ್ತಿನಲ್ಲಿ ಇವೆಂಟ್ ಆಯೋಜನೆ ಮಾಡಿದ್ದು, ಆ ಕಾರ್ಯಕ್ರಮಕ್ಕಾಗಿಯೇ ರಶ್ಮಿಕಾ ವಿಶೇಷ ಕಾಸ್ಟ್ಯೂಮ್ ರೆಡಿ ಮಾಡಿಕೊಂಡಿದ್ದರು. ಅದೇ ಕಾಸ್ಟ್ಯೂಮ್ ನಲ್ಲಿ ಸೆರೆ ಹಿಡಿದ ಫೋಟೋಗಳನ್ನು ಅವರು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ರೋಲ್‌ನಲ್ಲಿ ಪಂಕಜ್ ತ್ರಿಪಾಠಿ: ಫಸ್ಟ್ ಲುಕ್ ಔಟ್

    ರಶ್ಮಿಕಾ ಹಂಚಿಕೊಂಡಿರುವ ಫೋಟೋಗಳ ಬಗ್ಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದು, ಸುಂದರಿಯನ್ನು ಹಾಡಿಹೊಗಳಿದ್ದಾರೆ. ನಿಮ್ಮೊಂದಿಗೆ ಮಾತನಾಡುವುದಕ್ಕಾಗಿ ನಾವೂ ಕೂಡ ಕಾಯುತ್ತಿದ್ದೇವೆ ಎಂದು ಕೆಲವರು ಬರೆದುಕೊಂಡಿದ್ದಾರೆ. ಆದಷ್ಟು ಬೇಗ ಅಂತಹ ಅವಕಾಶವನ್ನು ಒದಗಿಸಿ ಕೊಡಿ ಎಂದೂ ಅಭಿಮಾನಿಗಳು ಕೇಳಿಕೊಂಡಿದ್ದಾರೆ.

    ರಶ್ಮಿಕಾ ಮತ್ತು ಸಿದ್ಧಾರ್ಥ ಮಲ್ಹೋತ್ರ ಕಾಂಬಿನೇಷನ್ನ ‘ಮಿಷನ್ ಮಜ್ನು’ ಬಾಲಿವುಡ್ ಸಿನಿ ಅಂಗಳದಲ್ಲಿ ಕುತೂಹಲ ಮೂಡಿಸಿದೆ. ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ನಿರೀಕ್ಷೆ ಮೂಡಿಸಿದ್ದರಿಂದಲೇ ಅವರು ಕೂಡ ಪ್ರಚಾರ ಕಾರ್ಯದಲ್ಲಿ ಸಕ್ರೀಯರಾಗಿದ್ದಾರೆ. ಈ ಸಿನಿಮಾ ರಶ್ಮಿಕಾಗೆ ಬಾಲಿವುಡ್ ನಲ್ಲಿ ಒಳ್ಳೆಯ ಹೆಸರು ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

    ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

    ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ `ಭೂಲ್ ಭುಲಯ್ಯ’ ಸಕ್ಸಸ್ ಖುಷಿಯಲ್ಲಿದ್ದಾರೆ. ಸಿನಿಮಾ ವಿಚಾರದ ಜೊತೆ ವಯಕ್ತಿಕ ವಿಚಾರವಾಗಿಯೂ ಕಿಯಾರಾ ಸುದ್ದಿಯಲ್ಲಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ಕುರಿತು ಹೊಸ ವಿಚಾರ ಇದೀಗ ಸೌಂಡ್ ಮಾಡುತ್ತಿದೆ.

    ಬಿಟೌನ್‌ನಲ್ಲಿ ಸಿದ್ಧಾಥ್ ಮತ್ತು ಕಿಯಾರಾ ಲವ್ವಿ ಡವ್ವಿ ಬಗ್ಗೆ ಸಾಕಷ್ಟು ವಿಚಾರಗಳು ಈಗಾಗಲೇ ಹರಿದಾಡುತ್ತಾ ಇದೆ. ಬ್ರೇಕಪ್ ಮಾಡಿಕೊಂಡಿದ್ದ ಈ ಜೋಡಿ ಮತ್ತೆ ಒಂದಾಗಿದ್ದಾರೆ ಅನ್ನೋ ಸುದ್ದಿ ಕೂಡ ಇದೆ. ಈ ಬೆನ್ನಲ್ಲೇ ಕಿಯಾರಾಗೆ ಸಿದ್ಧಾರ್ಥ್ ಬೈತಾರಂತೆ ಅನ್ನೋ ವಿಚಾರವನ್ನ ನಿರ್ದೇಶಕ ಕಮಾಲ್ ಆರ್ ಖಾನ್ ಹೇಳಿದ್ದಾರೆ. ಇದನ್ನೂ ಓದಿ: ಜೂನ್ 3ಕ್ಕೆ ತೆರೆಮೇಲೆ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ

    ಈಗ ಕಿಯಾರಾ ಮತ್ತು ಸಿದ್ಧಾರ್ಥ್ ಬಗ್ಗೆ ಮಾತನಾಡಿರುವ ನಿರ್ದೇಶಕ ಕಮಾಲ್ ಖಾನ್ ಸದಾ ವಿವಾದಗಳಿಂದ ಸುದ್ದಿ ಆಗುತ್ತಾರೆ. ಬೇರೆ ನಟ, ನಟಿಯರ ಬಗ್ಗೆ ಮಾತನಾಡಿ ಕಾಲೆಳೆಯುವ ಕೆಲಸ ಮಾಡುತ್ತಾರೆ. ಅಂತೆಯೇ ಈಗ ಕಮಾಲ್ ಆರ್ ಖಾನ್ ಈಗ ಕಿಯಾರಾ ತನ್ನ ಬಗ್ಗೆ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಲು ಕಾರಣ ಸಿದ್ಧಾರ್ಥ್ ಮಲ್ಹೋತ್ರ ಎಂದಿದ್ದಾರೆ. ಕಮಾಲ್ ಖಾನ್ ತಮ್ಮ ಜೀವನ ಚರಿತ್ರೆಯ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ಅಮಿತಾಬ್ ಬಚ್ಚನ್ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಕಮಾಲ್ ಖಾನ್‌ಗೆ ಶುಭಕೋರಿ ಕಿಯಾರಾ ಟ್ವೀಟ್ ಮಾಡಿದ್ದರು. ಆದರೆ 10 ನಿಮಿಷದಲ್ಲಿ ಈ ಟ್ವೀಟ್ ಡಿಲೀಟ್ ಮಾಡಿದ್ದಾರೆ.

    ಕಿಯಾರಾ ಟ್ವೀಟ್ ಡಿಲೀಟ್ ಮಾಡಲು ಕಾರಣ ಏನು ಎಂದು ನಾನು ಕೇಳಿದೆ. ಆಗ ಕಿಯಾರಾ, ಸಿದ್‌ಗೆ ಕೋಪ ಬಂದಿದೆ. ಇದನ್ನು ಡಿಲೀಟ್ ಮಾಡಲು ಸಿದ್ಧಾರ್ಥ್ ಮಲ್ಹೋತ್ರಾ ಹೇಳಿದ್ದಾರೆ. ಈ ಮೂಲಕ ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಬೈಯುತ್ತಾರೆ ಎಂಬ ವಿಚಾರವನ್ನ ಕಮಲ್ ಖಾನ್ ತಿಳಿಸಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಈ ಸುದ್ದಿಯೇ ಜೋರಾಗಿದೆ.

  • ಮುನಿಸು ಮರೆತು ಮತ್ತೆ ಒಂದಾದ್ರು ಕಿಯಾರಾ- ಸಿದ್ಧಾರ್ಥ್ ಮಲ್ಹೋತ್ರಾ

    ಮುನಿಸು ಮರೆತು ಮತ್ತೆ ಒಂದಾದ್ರು ಕಿಯಾರಾ- ಸಿದ್ಧಾರ್ಥ್ ಮಲ್ಹೋತ್ರಾ

    ಬಾಲಿವುಡ್ ಕ್ಯೂಟ್ ಕಪಲ್ ಕಿಯಾರಾ ಮತ್ತು ಸಿದ್ಧಾರ್ಥ್ ಬೇರೆಯಾಗಿದ್ದಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುನಿಸು ಮರೆತು ಮತ್ತೆ ಈ ಜೋಡಿ ಒಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಕಿಯಾರಾ ಸಿನಿಮಾ ರಿಲೀಸ್‌ಗೆ ಬಂದು ಚಿತ್ರ ನೋಡಿ ಚಿತ್ರತಂಡಕ್ಕೆ ಸಿದ್ಧಾರ್ಥ್ ಸಾಥ್ ನೀಡಿದ್ದಾರೆ.

    ಶೇರ್‌ಷಾ ಜೋಡಿ ಮತ್ತೆ ಒಂದಾಗಿದ್ದಾರೆ. ಕಿಯಾರಾ ಮತ್ತು ಕಾರ್ತಿಕ್ ಆರ್ಯನ್ ನಟನೆಯ `ಭೂಲ್ ಭುಲಯ್ಯ’ ಚಿತ್ರದ ಶೋಗೆ ಸಿದ್ಧಾರ್ಥ್ ಮಲ್ಹೋತ್ರಾ ಬಂದು ಚಿತ್ರ ನೋಡಿ ಸಿನಿಮಾ ತಂಡಕ್ಕೆ ಶುಭಹಾರೈಸಿದ್ದಾರೆ. ಕಿಯಾರಾ ಮತ್ತು ಕಾರ್ತಿಕ್ ಚಿತ್ರ ನೋಡಿ ಇಷ್ಟಪಟ್ಟಿದ್ದಾರೆ.

    `ಭೂಲ್ ಭುಲಯ್ಯ’ ಚಿತ್ರದ ಶೋ ಬರುವಂತೆ ಕಿಯಾರಾ ಸಿದ್ಧಾರ್ಥ್ ಅವರನ್ನು ಕರೆಯಲಾಗಿತ್ತು. ಕಿಯಾರಾ ಮನವಿಯಂತೆ ಚಿತ್ರ ನೋಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ ಸಿದ್ಧಾರ್ಥ್ , ಕಿಯಾರಾ ಅವರನ್ನು ತಬ್ಬಿ ಚಿತ್ರದ ಕುರಿತು ಪ್ರಶಂಸಿದ್ದಾರೆ. ಈ ಮೂಲಕ ನಮ್ಮ ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂಬುದನ್ನು ಈ ಜೋಡಿ ತೋರಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ `ಕಿಸ್’ ಬ್ಯೂಟಿ ಶ್ರೀಲೀಲಾ

    ಒಬ್ಬರ ಸಿನಿಮಾಗೆ ಇನ್ನೊಬ್ಬರು ಸಾಥ್ ಕೊಡ್ತಿರೋದು ಜೊತೆಗೆ ಕಿಯಾರಾ ಚಿತ್ರದ ಸಕ್ಸಸ್ ಖುಷಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಬಾಗಿಯಾಗಿರೋದನ್ನ ನೋಡಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

  • ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ನ್ನಡದ ನಟಿ ರಶ್ಮಿಕಾ ಮಂದಣ್ಣ ತಮಿಳು, ತೆಲುಗಿನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟು, ಬಾಲಿವುಡ್ ಗೂ ಹಾರಿದ್ದರು. ಇವರ ನಟನೆಯ ಮೊದಲನೇ ಬಾಲಿವುಡ್ ಸಿನಿಮಾ ಇದೀಗ ರಿಲೀಸ್ ಆಗುತ್ತಿದ್ದು, ಮೊದಲ ಚಿತ್ರವನ್ನು ಬಾಲಿವುಡ್ ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದನ್ನು ಕಾದು ನೋಡಬೇಕು. ಇದನ್ನೂ ಓದಿ : ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’

    ಈಗಾಗಲೇ ಬಾಲಿವುಡ್ ನಲ್ಲಿ ರಶ್ಮಿಕಾ ಎರಡು ಚಿತ್ರಗಳಲ್ಲಿ ನಟಿಸಿದ್ದರೂ, ಮೊದಲು ಬಿಡುಗಡೆ ಆಗುತ್ತಿರುವುದು ಸಿದ್ಧಾರ್ಥ ಮಲ್ಹೋತ್ರ ನಾಯಕನಾಗಿ ನಟಿಸಿರುವ ‘ಮಿಷನ್ ಮಜ್ನು’ ಸಿನಿಮಾ. ಇದು ಬಾಲಿವುಡ್ ನ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿದ್ದು, ರಶ್ಮಿಕಾಗೆ ಬಾಲಿವುಡ್ ನಲ್ಲೂ ಅದೃಷ್ಟ ತಂದುಕೊಡುತ್ತಾ ಕಾಯಬೇಕು. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಮೇ 13 ರಂದು ದೇಶಾದ್ಯಂತ ಬಿಡುಗಡೆ ಆಗಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಜೂನ್ 10ಕ್ಕೆ ರಿಲೀಸ್ ಆಗಲಿದೆಯಂತೆ. ಸ್ವತಃ ಈ ಮಾಹಿತಿಯನ್ನು ರಶ್ಮಿಕಾ ಮಂದಣ್ಣ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್

    “ಇತಿಹಾಸ ಪುಟಗಳ ಅನುಭವ ಪಡೆಯಲು ನೀವು ರೆಡಿಯಾಗಿ. ಇದು ಅಂತಿಂಥ ಮಿಷನ್ ಅಲ್ಲ” ಎಂದೂ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಹರೀಶ್ ವಯಸ್ಸು 36 ಹಾಸ್ಯ ಸಿನಿಮಾಗಾಗಿ ಟೈಟಲ್ ಸಾಂಗ್ ಹಾಡಿದ ಪುನೀತ್

    ಇದೊಂದು ನೈಜ ಘಟನೆಯನ್ನು ಆಧರಿಸಿದ ಚಿತ್ರ. 2020ರಲ್ಲೇ ಈ ಸಿನಿಮಾವನ್ನು ನಿರ್ದೇಶಕ ಶಾಂತನು ಬಗ್ಚಿ ಅನೌನ್ಸ್ ಮಾಡಿದ್ದರು. ಕೋವಿಡ್ ಕಾರಣದಿಂದಾಗಿ ಚಿತ್ರೀಕರಣ ವಿಳಂಬವಾಯಿತು. ಇದೀಗ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಬಾಲಿವುಡ್ ನ ಮೊದಲ ಸಿನಿಮಾವನ್ನು ಅಭಿಮಾನಿಗಳಿಗೆ ತೋರಿಸಲು ರಶ್ಮಿಕಾ ತುದಿಗಾಲಲ್ಲಿ ನಿಂತಿದ್ದಾರೆ.