Tag: ಸಿದ್ಧಾರ್ಥ್ ಶುಕ್ಲಾ

  • ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಭಾಯಿಜಾನ್ ಸಲ್ಮಾನ್ ಖಾನ್‌ಗೆ (Salman Khan) ಅಪಾರ ಅಭಿಮಾನಿಗಳ ಬಳಗವಿದೆ. ಅದರಲ್ಲೂ ಫೀಮೇಲ್ ಫ್ಯಾನ್ ಬೇಸ್ ದೊಡ್ಡ ಮಟ್ಟದಲ್ಲಿದೆ. ಸಲ್ಮಾನ್ ಜೊತೆ ಒಂದು ಸೆಲ್ಫಿ ಸಿಕ್ಕರೆ ಸಾಕು ಎಂದು ಜಪ ಮಾಡುವವರಿದ್ದಾರೆ. ಅಂತಹದ್ರಲ್ಲಿ ಸಿದ್ಧಾರ್ಥ್ ಶುಕ್ಲಾ (Siddarth Shukla) ಪ್ರೇಯಸಿ ಶೆಹನಾಝ್ ಗಿಲ್ (Shehnaaz Gill) ನಡೆ ಬಗ್ಗೆ ಗೊತ್ತಾದ್ದರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರಾ.?

    ‘ಕಾಮಿಡಿ ವಿತ್ ಕಪಿಲ್’ (Comedy Night With Kapil) ಕಾರ್ಯಕ್ರಮದಲ್ಲಿ ಇತ್ತೀಚಿಗೆ ಬಿಗ್ ಬಾಸ್ ಬೆಡಗಿ ಶೆಹನಾಝ್ ಗಿಲ್ ಭಾಗವಹಿಸಿದ್ದರು. ಆಗ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದ ಕತೆಯನ್ನ ನಟಿ ಬಾಯ್ಬಿಟ್ಟಿದ್ದಾರೆ. ಅಷ್ಟಕ್ಕೂ ನಟಿ ಕೊಟ್ಟ ಕಾರಣ ಅಚ್ಚರಿಪಟ್ಟಿದ್ದಾರೆ.

    ನಾನು ಗುರುದ್ವಾರಕ್ಕೆ ಭೇಟಿ ನೀಡಿದ ಸಮಯದಲ್ಲಿ ಅಪರಿಚಿತ ಕರೆ ಬಂತು. ಆಗ ಅದು ಸಲ್ಮಾನ್ ಖಾನ್ ಅವರ ನಂಬರ್ ಎಂದು ನನಗೆ ತಿಳಿದಿರಲಿಲ್ಲ. ಹಾಗಾಗಿ ಅಂದು ಆ ನಂಬರ್ ಬ್ಲಾಕ್ ಮಾಡಿದ್ದೆ. ನಂತರ ಸಲ್ಮಾನ್ ಖಾನ್ ನಿಮಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂದೇಶ ಬಂತು. ತಕ್ಷಣ ಟ್ರೂ ಕಾಲರ್‌ಗೆ ಹಾಕಿ ಚೆಕ್ ಮಾಡಿದೆ. ಆಗ ನನಗೆ ಅದು ಸಲ್ಮಾನ್ ಖಾನ್ ನಂಬರ್ ಎಂದು ಖಚಿತವಾಯಿತು. ತಕ್ಷಣ ನಂಬರ್ ಅನ್‌ಬ್ಲಾಕ್ ಮಾಡಿದೆ ಎಂದು ಹೇಳಿದ್ದಾರೆ. ಅನ್‌ಬ್ಲಾಕ್ ಮಾಡಿದ್ದೆ ತಡ ಸಲ್ಮಾನ್ ಖಾನ್ ಕಡೆಯಿಂದ ಕರೆ ಬಂತು. ಬಳಿಕ ಸಲ್ಮಾನ್ ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದರು ಎಂದು ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಆಲಿಯಾ- ರಣ್‌ಬೀರ್ ಜೋಡಿ

    ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಚಿತ್ರದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ (Pooja Hegde) ಜೊತೆ ಶೆಹನಾಜ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾ ಇದೇ ಏ.21ಕ್ಕೆ ತೆರೆಗೆ ಬರಲಿದೆ.

  • ನಾನು ಇಂದು ಏನಾಗಿದ್ದರೂ ನೀನು ಕಾರಣ: ಸಿದ್ಧಾರ್ಥ್ ನೆನೆದು ಕಣ್ಣೀರಿಟ್ಟ ಶೆಹನಾಜ್

    ನಾನು ಇಂದು ಏನಾಗಿದ್ದರೂ ನೀನು ಕಾರಣ: ಸಿದ್ಧಾರ್ಥ್ ನೆನೆದು ಕಣ್ಣೀರಿಟ್ಟ ಶೆಹನಾಜ್

    ಕಿರುತೆರೆಯ ಸ್ಟಾರ್ ಸಿದ್ಧಾರ್ಥ್ ಶುಕ್ಲಾ(Siddarth Sukla) ನಿಧನ ಇಂದಿಗೂ ಅವರ ಆಪ್ತರಿಗೆ ಕಾಡುತ್ತಿದೆ. ಸಿದ್ಧಾರ್ಥ್ ನಿಧನ ಹೊಂದಿ ಒಂದು ವರ್ಷದ ಮೇಲಾದರೂ ಅವರ ನೆನಪಿನಲ್ಲೇ ಅನೇಕರು ಜೀವಿಸುತ್ತಿದ್ದಾರೆ. ಈ ಬೆನ್ನಲ್ಲೇ ಸಿದ್ಧಾರ್ಥ್ ಪ್ರೇಯಸಿ ಶೆಹನಾಜ್(Shehnaz Gill) ಗೆಳೆಯನ ನೆನೆದು ಕಣ್ಣೀರಿಟ್ಟಿದ್ದಾರೆ. ನಾನು ಇಂದು ಏನಾಗಿದ್ದರೂ ಅದಕ್ಕೆಲ್ಲಾ ನೀನೇ ಕಾರಣ ಅಂತಾ ಭಾವುಕರಾಗಿದ್ದಾರೆ.

     

    View this post on Instagram

     

    A post shared by Shehnaaz Gill (@shehnaazgill)

    ಬಿಗ್ ಬಾಸ್ ಶೋನಲ್ಲಿ(Bigg Boss) ಪರಿಚಿತರಾದ ಸಿದ್ಧಾಥ್ ಮತ್ತು ಶೆಹನಾಜ್, ದೊಡ್ಮನೆಯಿಂದ ಹೊರಬಂದ ಮೇಲೂ ಆ ಸ್ನೇಹ ಮುಂದುವರೆದಿತ್ತು. ಆದರೆ ಸಿದ್ಧಾರ್ಥ್ ಅನಿರೀಕ್ಷಿತ ಸಾವು ಗೆಳತಿ ಶೆಹನಾಜ್‌ಗೆ ದೊಡ್ಡ ಶಾಕ್ ಕೊಟ್ಟಿತ್ತು. ಇತ್ತೀಚಿಗೆ ನಡೆದ ಅವಾರ್ಡ್ ಕಾರ್ಯಕ್ರಮದಲ್ಲೂ ಶೆಹನಾಜ್ ಗಿಲ್ ಪ್ರಶಸ್ತಿ ಎತ್ತಿ ಹಿಡಿದು ಗೆಳೆಯ ಸಿದ್ಧಾರ್ಥ್‌ಗೆ ಧನ್ಯವಾದ ಹೇಳಿದರು. ಶೆಹನಾಜ್ ಭಾವುಕ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶೆಹನಾಜ್ ಗೆಳೆಯನಿಗೆ ಅರ್ಪಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದನ್ನೂ ಓದಿ:ಸುಕೃತ ನಾಗ್ ಜೊತೆಗಿನ ಮದುವೆಯ ಸುದ್ದಿಗೆ ಸ್ಪಷ್ಟನೆ ನೀಡಿದ ಶೈನ್ ಶೆಟ್ಟಿ

     

    View this post on Instagram

     

    A post shared by Shehnaaz Gill (@shehnaazgill)

    ಅಂದಹಾಗೆ ಪ್ರತಿಷ್ಠಿತ ಅವಾರ್ಡ್ ಸಮಾರಂಭ ಪ್ರಶಸ್ತಿ ದುಬೈನಲ್ಲಿ ನಡೆಯುತ್ತಿದೆ. ಈ ಸಮಾರಂಭದಲ್ಲಿ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಶೆಹನಾಜ್ ಗಿಲ್ ಎಲ್ಲರ ಗಮನ ಸೆಳೆದರು. ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದ ಶೆಹನಾಜ್ ಕೊಂಚ ನರ್ವಸ್ ಆಗಿದ್ದರು.

    ಬಳಿಕ ಮೈಕ್ ಹಿಡಿದು, ‘ನಾನು ಯಾರಿಗಾದರೂ ಧನ್ಯವಾದ ಹೇಳಬೇಕೆಂದರೆ ಅದು ಒಬ್ಬರಿಗೆ ಮಾತ್ರ. ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದಗಳು. ನಾನು ಇಂದು ಏನಾಗಿದ್ದರೂ ಅದಕ್ಕೆ ನೀನೆ ಕಾರಣ. ಇದು ನಿನಗಾಗಿ ಸಿದ್ಧಾರ್ಥ್ ಶುಕ್ಲಾ ಎಂದು ಭಾವುಕರಾಗಿದರು. ಶೆಹನಾಜ್ ಮಾತಿನಿಂದ ನೆರೆದಿದ್ದವರು ಜೋರಾಗಿ ಚಪ್ಪಾಳೆ ತಟ್ಟಿ ಪ್ರಶಂಸಿದರು. ಶೆಹನಾಜ್ ಮಾತಿನ ವಿಡಿಯೋ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ಕೊರಿಯೋಗ್ರಾಫರ್ ಜೊತೆ ಶೆಹನಾಜ್ ಗಿಲ್ ಡೇಟಿಂಗ್

    ಖ್ಯಾತ ಕೊರಿಯೋಗ್ರಾಫರ್ ಜೊತೆ ಶೆಹನಾಜ್ ಗಿಲ್ ಡೇಟಿಂಗ್

    ಬಾಲಿವುಡ್ ನಟಿ ಶೆಹನಾಜ್ ಗಿಲ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಿದ್ಧಾರ್ಥ್ ಶುಕ್ಲಾ ಜೊತೆ ಗಳೆತನ ವಿಚಾರವಾಗಿ ಹೈಲೈಟ್ ಆಗಿದ್ದರು. ನಂತರ ಸಿದ್ಧಾರ್ಥ್ ಸಾವಿನ ನಂತರ ಇದೀಗ ಚೇತರಿಸಿಕೊಂಡಿರುವ ನಟಿ, ಸದ್ಯ ಬಿಟೌನ್‌ನ ಖ್ಯಾತ ಕೊರಿಯೋಗ್ರಾಫರ್ ಜೊತೆ ಶೆಹನಾಜ್ ಹೆಸರು ತಳಕು ಹಾಕಿಕೊಂಡಿದೆ.

    ಬಿಗ್ ಬಾಸ್ ಸೀಸನ್ 13ರಲ್ಲಿ ಗಮನ ಸೆಳೆದ ಸ್ಪರ್ಧಿ ಶೆಹನಾಜ್ ಈಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಿದ್ಧಾರ್ಥ್ ಶುಕ್ಲಾ ಮತ್ತು ಶೆಹನಾಜ್ ಪರಿಚಿತರಾಗಿ ಈ ಶೋ ಬಳಿಕವೂ ಆ ಸ್ನೇಹ ಮುಂದುವರೆದು ಪ್ರೀತಿಯಲ್ಲಿದ್ದರು. ಸಿದ್ಧಾರ್ಥ್ ಸಾವಿನ ನಂತರ ಕ್ಯಾಮೆರಾ ಕಣ್ಣಿಂದ ದೂರವಿದ್ದ ನಟಿ, ಈಗ ಮತ್ತೋರ್ವ ಖ್ಯಾತ ಕೊರಿಯೋಗ್ರಾಫರ್ ರಾಘವ ಜತೆ ಶೆಹನಾಜ್ ಗಿಲ್ ಹೆಸರು ಕೇಳಿ ಬರುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ರಾಜಸ್ಥಾನ ಬೆಡಗಿ ಕಿರಣ್ ಯೋಗೇಶ್ವರ್‌ ಔಟ್

    ನಟ ಸಿದ್ಧಾರ್ಥ್ ಶುಕ್ಲಾ ಸಾವಿನ ನೋವಿನಿಂದ ಹೊರ ಬಂದಿರುವ ಶೆಹನಾಜ್ ಈಗ ರಾಘವ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ವಿಚಾರ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ಧಾರ್ಥ್ ಶುಕ್ಲಾ ಕುಸಿದ ವೀಡಿಯೋ ವೈರಲ್ – ಸತ್ಯ ಇಲ್ಲಿದೆ

    ಸಿದ್ಧಾರ್ಥ್ ಶುಕ್ಲಾ ಕುಸಿದ ವೀಡಿಯೋ ವೈರಲ್ – ಸತ್ಯ ಇಲ್ಲಿದೆ

    ಮುಂಬೈ: ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಕುಸಿದ ಎನ್ನಲಾದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದ್ರೆ ಈ ವೀಡಿಯೋ ಸತ್ಯಾಸತ್ಯವನ್ನು ಮಾಧ್ಯಮ ಅಲ್ಲಗಳೆದಿದೆ.

    ಮೆಟ್ಟಿಲುಗಳ ಮೇಲೆ ಕುಳಿತ ಯುವಕನೋರ್ವ ಕುಸಿದು ಬೀಳುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೀಡಿಯೋದಲ್ಲಿರುವ ಯುವಕ ಸಿದ್ಧಾರ್ಥ್ ಶುಕ್ಲಾ ಎಂದು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋ ಸತ್ಯ:
    ವೀಡಿಯೋದಲ್ಲಿರುವ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ. ನಗರದ ಬನಶಂಕರಿ ಗೋಲ್ಡ್ ಜಿಮ್ ನಲ್ಲಿ ನಡೆದಿದೆ. ಜಿಮ್ ನಲ್ಲಿ ಯುವಕ ಹೃದಯಾಘಾತದಿಂದ ಸಾವನ್ನಪ್ಪಿರೋದನ್ನು ಜಿಮ್ ಮಾಲೀಕ ಮತ್ತು ಸಿ.ಕೆ. ಅಚ್ಚುಕಟ್ಟು ಠಾಣೆಯ ಪೊಲೀಸರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

    ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ಬ್ರಹ್ಮಕುಮಾರಿ ಅನುಯಾಯಿಗಳ ಸಂಪ್ರದಾಯದಂತೆ ಮುಂಬೈನ ಓಶಿವಾರ ಸ್ಮಶಾನದಲ್ಲಿ ನೆರವೇರಿದೆ. ಸಿದ್ದಾರ್ಥ್ ಶುಕ್ಲಾ ತಾಯಿ ರೀಟಾ ಶುಕ್ಲಾ, ಗೆಳತಿ ಶೆಹ್ನಾಜ್ ಗಿಲ್, ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನೆರವೇರಿದವು. ಇದನ್ನೂ ಓದಿ: ಪಂಜ್‍ಶೀರ್ ವಶಕ್ಕೆ ಪಡೆದ ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು!

  • ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

    ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

    ಮುಂಬೈ: ಬಾಲಿವುಡ್, ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇಷ್ಟು ಫಿಟ್, ವರ್ಕೌಟ್ ಮಾಡಿಕೊಂಡಿದ್ದ ಸಿದ್ಧಾರ್ಥ್ ಶುಕ್ಲಾಗೆ ಹೃದಯಾಘಾತ ಆಗಿದ್ದೇಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಸಿದ್ಧಾರ್ಥ್ ಸಾವಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯದ ವರದಿಗಳ ಪ್ರಕಾರ ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    ಹೃದಯಾಘಾತಕ್ಕೆ ಕಾರಣವೇನು?:
    ಸೆಲೆಬ್ರಿಟಿಗಳು ಫಿಟ್ ಆಗಿ ಕಾಣಲು ಜಿಮ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಹೆಚ್ಚು ವರ್ಕೌಟ್ ಮಾಡೋದರಿಂದ ವ್ಯಕ್ತಿಯ ಎನರ್ಜಿ ನಿರಂತರವಾಗಿ ನಷ್ಟವಾಗಿರುತ್ತದೆ. ಯಾವುದೇ ವರ್ಕೌಟ್ ಗಳು ನಿಯಮಿತವಾಗಿರಬೇಕು ಅನ್ನೋದನ್ನು ಮರೆಯುತ್ತಾರೆ. ಇನ್ನು ಶುಕ್ಲಾ ಆಪ್ತರ ಪ್ರಕಾರ, ನಟ ಕಡಿಮೆ ನಿದ್ದೆ ಮಾಡುತ್ತಿದ್ದರು ಎಂದು ಹೇಳುತ್ತಾರೆ. ಇದು ತುಂಬಾನೇ ಅಪಾಯಕಾರಿ ಎಂಬುವುದು ಕೆಲ ವೈದ್ಯರ ಅಭಿಪ್ರಾಯ.

    ಬ್ಯುಸಿ ಲೈಫ್ ನಲ್ಲಿ ಕೆಲವರು ಮಾದಕ ವಸ್ತುಗಳಿಗೆ ದಾಸರಾಗುತ್ತಾರೆ. ಕೆಲ ಕ್ಷಣದ ನೆಮ್ಮದಿ ಅಥವಾ ನಿದ್ದೆಗಾಗಿ ಡ್ರಗ್ಸ್ ನಂತಹ ಉತ್ಪನ್ನಗಳ ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ವರ್ಕೌಟ್ ಮಾಡುತ್ತಿದ್ರೂ ಇಂತಹ ಅಭ್ಯಾಸಗಳು ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ. 30 ವರ್ಷದ ಆಸುಪಾಸಿನ ಯುವ ಜನತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಕೆಲವೊಮ್ಮೆ ಅನುವಂಶಿಕ ರೋಗ ಲಕ್ಷಣಗಳು ಕಂಡು ಬಂದ್ರೆ ಶೀಘ್ರವೇ ಚಿಕಿತ್ಸೆ ಪಡೆದುಕೊಳ್ಳಲು ಸಹಾಯವಾಗುತ್ತದೆ. ಆದ್ರೆ ಶುಕ್ಲಾ ನಿಧನ ನಿಖರವಾಗಿ ಇದೇ ಕಾರಣಕ್ಕೆ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಮರಣೋತ್ತರ ಶವ ಪರೀಕ್ಷೆ ವರದಿ ಪ್ರಕಾರ ಸಾವಿನ ಕಾರಣಗಳನ್ನು ಅಂದಾಜಿಸಬಹುದು ಎಂದು ಏಮ್ಸ್ ಹಿರಿಯ ವೈದ್ಯ ನರೇಶ್ ರೋಹನ್ ಹೇಳುತ್ತಾರೆ. ಇದನ್ನೂ ಓದಿ: ಬೇಗ ಪಯಣ ಮುಗಿಸಿದೆ – ಸಿದ್ಧಾರ್ಥ್ ನಿಧನಕ್ಕೆ ಸಲ್ಮಾನ್ ಕಂಬನಿ

  • ಬೇಗ ಪಯಣ ಮುಗಿಸಿದೆ – ಸಿದ್ಧಾರ್ಥ್ ನಿಧನಕ್ಕೆ ಸಲ್ಮಾನ್ ಕಂಬನಿ

    ಬೇಗ ಪಯಣ ಮುಗಿಸಿದೆ – ಸಿದ್ಧಾರ್ಥ್ ನಿಧನಕ್ಕೆ ಸಲ್ಮಾನ್ ಕಂಬನಿ

    ಮುಂಬೈ: ನಟ ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಬಾಲಿವುಡ್ ಭಾಯಿಜಾನ್ ಕಂಬನಿ ಮಿಡಿದಿದ್ದಾರೆ. ಸಿದ್ಧಾರ್ಥ್ ಶುಕ್ಲಾ ಬಿಗ್‍ಬಾಸ್-13ರ ವಿನ್ನರ್ ಆಗಿದ್ದರು. ಸಿದ್ಧಾರ್ಥ್ ನಿಧನದ ಸುದ್ದಿ ಕೇಳಿ ಸಿನಿ ಅಂಗಳವೇ ಅಘಾತಕ್ಕೊಳಗಾಗಿದ್ದು, ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಅಂದು ಸಿದ್ಧಾಥ್ ಕೈ ಮೇಲೆತ್ತಿ ವಿನ್ನರ್ ಎಂದು ಘೋಷಿಸಿದ್ದ ಸಲ್ಮಾನ್ ಖಾನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

    ಸಲ್ಮಾನ್ ಸಂತಾಪ:
    ಬಹಳ ಬೇಗೆ ಹೋದೆ ಸಿದ್ಧಾರ್ಥ್.. ನೀನು ಸದಾ ನಮ್ಮ ನೆನಪಿನಲ್ಲಿರುತ್ತೀಯಾ. ನಿಮ್ಮ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ನಿಮ್ಮ ಅತ್ಮಕ್ಕೆ ಶಾಂತಿ ಸಿಗಲಿ.

    ಬಿಗ್‍ಬಾಸ್ ಸೀಸನ್-13 ಆರಂಭದಿಂದಲೂ ಸಿದ್ಧಾರ್ಥ್ ಶುಕ್ಲಾ ಮನೆಯ ಸೆಂಟರ್ ಆಫ್ ಅಟ್ರ್ಯಾಕ್ಸನ್ ಆಗಿದ್ದರು. ಬಿಗ್‍ಬಾಸ್ ಮನೆಯಲ್ಲಿ ಪದೇ ಪದೇ ಕೋಪಗೊಳ್ಳುತ್ತಿದ್ದ ಶುಕ್ಲಾಗೆ ವೀಕೆಂಡ್ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಕ್ಲಾಸ್ ಸಹ ತೆಗೆದುಕೊಂಡಿದ್ದರು. ಕೋಪದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಆ ವೇಳೆ ನೀವಾಡುವ ಮಾತುಗಳ ಮೇಲೆ ಹಿಡಿತ ಇರಬೇಕು ಎಂದು ಸಿದ್ಧಾರ್ಥ್ ಶುಕ್ಲಾಗೆ ಸಲ್ಮಾನ್ ಸಲಹೆ ನೀಡಿದ್ದರು. ಇದನ್ನೂ ಓದಿ: ನಟ, ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಸಾವು

    ಇಂದು ಬೆಳಗ್ಗೆ ಹೃದಯಾಘಾತದಿಂದ ಕುಸಿದಿದ್ದ ಸಿದ್ಧಾರ್ಥ್ ಶುಕ್ಲಾ ಅವರನ್ನು ಆಪ್ತರು ಆಸ್ಪತ್ರೆಗೆ ದಾಖಲಿಸಿದ್ದರು. ಸಿದ್ಧಾರ್ಥ್ ಅವರನ್ನ ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರೋದನ್ನು ಖಚಿತ ಪಡಿಸಿದರು. ಸದ್ಯ ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ನಿವಾಸಕ್ಕೆ ತರಲಾಗಿದ್ದು, ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಸಿದ್ಧಾರ್ಥ್ ಮೂಲತಃ ಉತ್ತರ ಪ್ರದೇಶದವರಾಗಿದ್ದು, ಬಾಲಿಕಾ ವಧು ಧಾರಾವಾಹಿ ಮೂಲಕ ವೀಕ್ಷಕರಿಗೆ ಹತ್ತಿರವಾಗಿದ್ದರು.

  • ನಟ, ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಸಾವು

    ನಟ, ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಸಾವು

    ಮುಂಬೈ: ನಟ, ಬಿಗ್ ಬಾಸ್ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ(40) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

    ಈ ಕುರಿತು ಕೂಪರ್ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದು, ಸಿದ್ಧಾರ್ಥ್ ಶುಕ್ಲಾ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

    ಸಿದ್ಧಾರ್ಥ್ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಈ ಸುದ್ದಿ ಕೇಳಿದ ಅವರ ಅಭಿಮಾನಿಗಳಿಗೆ ಆಘಾತವಾಗಿದೆ. ಅವರು ಇತ್ತೀಚೆಗೆ ಬಿಗ್ ಬಾಸ್ ಒಟಿಟಿ ಹಾಗೂ ಡ್ಯಾನ್ಸ್ ದಿವಾನೆ 3ಯಲ್ಲಿ ಅವರ ಗರ್ಲ್‍ಫ್ರೆಂಡ್ ಎಂದೇ ಬಿಂಬಿತವಾಗಿರುವ ಶೇಹ್ನಾಜ್ ಗಿಲ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ವಿಕ್ರಾಂತ್ ರೋಣ ‘ಡೆಡ್ ಮ್ಯಾನ್ ಆಂಥೆಮ್’ ಔಟ್- ಸ್ಟೈಲಿಶ್ ಲುಕ್‍ನಲ್ಲಿ ಸುದೀಪ್

    ಸಿದ್ಧಾರ್ಥ್ ಬಿಗ್ ಬಾಸ್ 13ರ ವಿನ್ನರ್ ಆಗಿದ್ದು, ಹಂಪ್ಟಿ ಶರ್ಮಾ ಕೆ ದುಲ್ಹನಿಯಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಕ್ತಾ ಕಪೂರ್ ಅವರ ಜನಪ್ರಿಯ ಶೋ ಬ್ರೋಕನ್ ಬಟ್ ಬ್ಯೂಟಿಫುಲ್ 3 ನಲ್ಲಿ ಕೊನೆಯದಾಗಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದರು. ಇದರಲ್ಲಿ ಅಗಸ್ತ್ಯ ಪಾತ್ರವನ್ನು ನಿರ್ವಹಿಸಿದ್ದರು.

    ಅಶೋಕ್ ಶುಕ್ಲಾ, ರೀಟಾ ಶುಕ್ಲಾ ದಂಪತಿ ಪುತ್ರನಾಗಿ 12 ಡಿಸೆಂಬರ್ 1980ರಲ್ಲಿ ಮುಂಬೈನಲ್ಲಿ ಜನಿಸಿದ್ದ ಸಿದ್ಧಾರ್ಥ್, ಪೋಷಕರೊಂದಿಗೆ ಪ್ರಯಾಗ್‍ರಾಜ್‍ಗೆ ತೆರಳಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಫೋರ್ಟ್‍ನ ಸೇಂಟ್ ಕ್ಸೇವಿಯರ್ಸ್ ಹೈ ಸ್ಕೂಲ್‍ನಲ್ಲಿ ಮುಗಿಸಿದ್ದರು. ರಚನಾ ಸಂಸದ್ ಸ್ಕೂಲ್ ಆಫ್ ಇಂಟೀರಿಯರ್ ಡಿಸೈನ್ ಸಂಸ್ಥೆಯಲ್ಲಿ ಇಂಟೀರಿಯರ್ ಡಿಸೈನ್‍ನಲ್ಲಿ ಪದವಿ ಪಡೆದಿದ್ದಾರೆ.

  • ಸೆಲ್ಫಿ ಕೇಳಿದ ಅಭಿಮಾನಿಗೆ ಷರತ್ತು ಹಾಕಿದ ಬಿಗ್‍ಬಾಸ್ ವಿನ್ನರ್

    ಸೆಲ್ಫಿ ಕೇಳಿದ ಅಭಿಮಾನಿಗೆ ಷರತ್ತು ಹಾಕಿದ ಬಿಗ್‍ಬಾಸ್ ವಿನ್ನರ್

    -ಷರತ್ತು ಒಪ್ಪಿದ ಅಭಿಮಾನಿ

    ಮುಂಬೈ: ಸೆಲ್ಫಿ ಕೇಳಿದ ಅಭಿಮಾನಿಗೆ ಬಿಗ್‍ಬಾಸ್ ಸೀಸನ್ 13ರ ವಿಜೇತ, ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಕಂಡೀಷನ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ಅಭಿಮಾನಿ ಸಹ ನೆಚ್ಚಿನ ನಟ ಕಂಡೀಷನ್ ಒಪ್ಪಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.

    ಜಿಮ್ ಸೆಂಟರ್ ನಿಂದ ಸಿದ್ಧಾರ್ಥ್ ಹೊರ ಬರುತ್ತಿದ್ದಂತೆ ಓರ್ವ ಅಭಿಮಾನಿ ಸೆಲ್ಫಿ ಕೇಳಿದ್ದಾರೆ. ಆದ್ರೆ ಸಿದ್ಧಾರ್ಥ್ ತಾವು ಹಾಕಿರುವ ಮಾಸ್ಕ್ ತೆಗೆಯಲ್ಲ, ಹಾಗೆಯೇ ಫೋಟೋ ತೆಗೆದುಕೊಳ್ಳಬೇಕು ಎಂದಿದ್ದಾರೆ. ಸಿದ್ಧಾರ್ಥ್ ಮಾತಿಗೆ ಒಪ್ಪಿದ ಅಭಿಮಾನಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಂಭ್ರಮದಲ್ಲಿ ಅಭಿಮಾನಿ ಮಾಸ್ಕ್ ಧರಿಸಿರಲಿಲ್ಲ.

    ಕೊರೊನಾದಿಂದಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಅಂತೆಯೇ ಸಿದ್ಧಾರ್ಥ್ ಕೋವಿಡ್ ನಿಯಮ ಪಾಲನೆ ಮಾಡಿದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

    ಸಿದ್ಧಾರ್ಥ್ ಅಭಿನಯದ ‘ದಿಲ್ ಕೋ ಕರಾರ್ ಆಯಾ’ ಹಾಡು ರಿಲೀಸ್ ಆಗಿದೆ. ಬಾಲಿವುಡ್ ನಟಿ ನೇಹಾ ಶರ್ಮಾ ಈ ಹಾಡಿನಲ್ಲಿ ಸಿದ್ಧಾರ್ಥ್ ಗೆ ಜೊತೆಯಾಗಿದ್ದು ಇಬ್ಬರ ಕೆಮಿಸ್ಟ್ರಿ ಮೋಡಿ ಮಾಡಿದೆ. ಶಹನಾಜ್ ಗಿಲ್ ಜೊತೆ ಅಲ್ಬಂನಲ್ಲಿ ಸಿದ್ಧಾರ್ಥ್ ಕಾಣಿಸಿಕೊಂಡಿದ್ದಾರೆ.