Tag: ಸಿದ್ಧಾಂತ್‌ ಚತುರ್ವೇದಿ

  • ಸಿದ್ಧಾಂತ್ ಚತುರ್ವೇದಿ ಜೊತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಿ ಮೊಮ್ಮಗಳು

    ಸಿದ್ಧಾಂತ್ ಚತುರ್ವೇದಿ ಜೊತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಿ ಮೊಮ್ಮಗಳು

    ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಮನೆಯ ಖಾಸಗಿ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿಯ ಡಿವೋರ್ಸ್ ಸುದ್ದಿ ನಡುವೆ ಬಿಗ್ ಬಿ ಮೊಮ್ಮಗಳು ನವ್ಯಾ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದೆ. ನಟ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ನವ್ಯಾ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಚಿತ್ರರಂಗದಲ್ಲಿ ಲವ್, ಬ್ರೇಕಪ್, ಡಿವೋರ್ಸ್, ಡೇಟಿಂಗ್ ಎಲ್ಲವೂ ಕಾಮನ್ ಆಗಿದೆ. ಸದ್ಯ ಸ್ಟಾರ್‌ ನಟಿ ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್‌ ಬಚ್ಚನ್ ದಾಂಪತ್ಯ ಮುರಿದು ಬಿದ್ದಿದೆ ಎಂಬ ಸುದ್ದಿಯ ನಡುವೆ‌ ಈಗ ಸಿದ್ಧಾಂತ್ ಪ್ರೀತಿಗೆ ನವ್ಯಾ (Navya Naveli Nanda) ಗುಡ್ ಬೈ ಹೇಳಿದ್ದಾರೆ ಎಂದು ಗುಸು ಗುಸು ಶುರುವಾಗಿದೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಅಣ್ಣನ ಗೆಳೆಯನ ಮೇಲೆ ನಿಹಾರಿಕಾಗೆ ಪ್ಯಾರ್

    ಕಳೆದ 2 ವರ್ಷಗಳಿಂದ ಸಿದ್ಧಾಂತ್ ಮತ್ತು ನವ್ಯಾ ಲವ್ವಿ ಡವ್ವಿ ಶುರುವಾಗಿತ್ತು. ಮುಂಬೈ ಬೀದಿಗಳಲ್ಲಿ ಜೋಡಿ ಹಕ್ಕಿಗಳಂತೆ ಹಾರಾಡಿಕೊಂಡಿದ್ದ ಈ ಜೋಡಿಯ ನಡುವೆ ಈಗ ಬಿರುಕು ಮೂಡಿದೆ ಎನ್ನಲಾಗಿದೆ. ಬ್ರೇಕಪ್‌ಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದರೆ ಈಗ ಬ್ರೇಕಪ್ ನ್ಯೂಸ್ ಮಾತ್ರ ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದೆ.

    ಅಷ್ಟಕ್ಕೂ ಈ ಬ್ರೇಕಪ್ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದು ಈ ಜೋಡಿಯೇ ತಿಳಿಸಬೇಕಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ. ಸದ್ಯ ಸಿದ್ಧಾಂತ್ ಮತ್ತು ನವ್ಯಾ ದೂರ ಆಗಿರುವ ವಿಷ್ಯ ಕೇಳಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ನಿಜವೇ ಆಗಿದ್ದಲ್ಲಿ ಇಬ್ಬರೂ ಮತ್ತೆ ಒಂದಾಗಲಿ ಎಂದು ಆಶಿಸುತ್ತಿದ್ದಾರೆ.

  • ದೀಪಿಕಾ ಜೊತೆ ಇಂಟಿಮೇಟ್ ದೃಶ್ಯ ನಿಭಾಯಿಸಿದ್ದು ಅಷ್ಟು ಸುಲಭವಾಗಿರಲಿಲ್ಲ: ಸಿದ್ಧಾಂತ್ ಚತುರ್ವೇದಿ

    ದೀಪಿಕಾ ಜೊತೆ ಇಂಟಿಮೇಟ್ ದೃಶ್ಯ ನಿಭಾಯಿಸಿದ್ದು ಅಷ್ಟು ಸುಲಭವಾಗಿರಲಿಲ್ಲ: ಸಿದ್ಧಾಂತ್ ಚತುರ್ವೇದಿ

    ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ (Siddant Chaturvedi) ಸದ್ಯ ಕರಣ್ ಜೋಹರ್ ನಿರ್ಮಾಣದ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರು ನೀಡಿದ ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ (Deepika Padukone) ಜೊತೆ ಇಂಟಿಮೇಟ್ ದೃಶ್ಯ ನಿಭಾಯಿಸಿದ್ದು ಅಷ್ಟು ಸುಲಭವಾಗಿರಲಿಲ್ಲ ಎಂದು ಮಾತನಾಡಿದ್ದಾರೆ.

    ಭಾರತದ ಅನೇಕರು ಸಿಕ್ಕ ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಮಾತ್ರವಲ್ಲ ಇಂತಹ ದೃಶ್ಯಗಳನ್ನು ನಿಭಾಯಿಸುವಾಗ ತಂದೆಯ ಸಹಕಾರ ಕೂಡ ನನಗಿತ್ತು. ‌’ಗೆಹ್ರೈಯಾನ್’ (Gehraiyaan) ಚಿತ್ರದಲ್ಲಿ ದೀಪಿಕಾ ಜೊತೆ ಹಸಿ ಬಿಸಿ ದೃಶದಲ್ಲಿ ನಟಿಸುವಾಗ ತುಂಬಾ ನರ್ವಸ್ ಆಗಿದ್ದೆ. ಕರಣ್ ಜೋಹರ್ ಅವರ ಬಳಿ ಕೂಡ ನನ್ನ ಕಳವಳ ವ್ಯಕ್ತಪಡಿಸಿದ್ದೆ. ವೃತ್ತಿಪರವಾಗಿ ಪರಿಸ್ಥಿತಿಯನ್ನು ನಿಭಾಯಿಸಲು ನನಗೆ ಪ್ರೋತ್ಸಾಹಿಸಿದರು ಎಂದು ನಟ ಸಿದ್ಧಾಂತ್ ಮಾತನಾಡಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಶಕುನ್ ಬಾತ್ರಾ ಜೊತೆ ಕೆಲಸ ಮಾಡುವ ಒಳ್ಳೆಯ ಅವಕಾಶ ನನ್ನದಾಗಿತ್ತು ಎಂದು ಹೇಳಿದ್ದಾರೆ.

    ಇನ್ನೂ ದೀಪಿಕಾ ಪಡುಕೋಣೆ (Deepika Padukone) ಸ್ವೀಟ್ ವ್ಯಕ್ತಿಯಾಗಿದ್ದರು. ಈ ಸಿನಿಮಾ ಮಾಡುವಾಗ ಬೆಂಬಲಿಸಿದ್ದರು. ಆ ಬಾಂಧವ್ಯದಿಂದಲೇ ನಾವು ಉತ್ತಮ ಸ್ನೇಹಿತರಾದೆವು ಎಂದು ಸಿದ್ಧಾಂತ್ ಚರ್ತುರ್ವೇದಿ ಮಾತನಾಡಿದ್ದಾರೆ. ಇದನ್ನೂ ಓದಿ:ಧ್ರುವ ಸರ್ಜಾ ಮುಂದೆ ‘ಢಾಕ್ ದೇವ’ನಾಗಿ ಬಂದ ಸಂಜಯ್ ದತ್- ರಿವೀಲ್ ಆಯ್ತು ‘ಕೆಡಿ’ ಲುಕ್

    ಅಂದಹಾಗೆ, ‘ಗೆಹ್ರೈಯಾನ್’ ಸಿನಿಮಾ 2022ರಲ್ಲಿ ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಈ ಚಿತ್ರವನ್ನು ಕರಣ ಜೋಹರ್ ನಿರ್ಮಾಣ ಮಾಡಿದ್ದರು.

  • ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿ

    ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿ

    ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್‌ಗೆ (Mrunal Thakur) ಇದೀಗ ಭಾರೀ ಬೇಡಿಕೆಯಿದೆ. ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾ ಕೊಟ್ಮೇಲೆ ‘ಸೀತಾರಾಮಂ’ ನಟಿಯ ಅದೃಷ್ಟ ಖುಲಾಯಿಸಿದೆ. ಬಿಟೌನ್ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾದಲ್ಲಿ ಹೀರೋಯಿನ್ ಆಗಿ ಮೃಣಾಲ್ ಸೆಲೆಕ್ಟ್ ಆಗಿದ್ದಾರೆ.

    ಬಾಲಿವುಡ್‌ನ ಹಾಟ್ ಹೀರೋ ಸಿದ್ಧಾಂತ್ ಚತುರ್ವೇದಿಗೆ (Siddhant Chaturvedi) ಮೃಣಾಲ್ ನಾಯಕಿಯಾಗಿದ್ದಾರೆ. ಮುಂದಿನ ವಾರದಿಂದ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಸದ್ಯ ಸಿನಿಮಾ ವರ್ಕ್ಶಾಪ್‌ನಲ್ಲಿ ನಟಿ ಭಾಗಿಯಾಗುತ್ತಿದ್ದಾರೆ. ಪಾತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ ಮೃಣಾಲ್. ಇದನ್ನೂ ಓದಿ:ಇಡಿ ದಾಳಿ ಬಳಿಕ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ದಂಪತಿ ಪ್ರತಿಕ್ರಿಯೆ

    ಇತ್ತೀಚೆಗೆ ಮೃಣಾಲ್‌ರನ್ನು ಆಫೀಸ್‌ಗೆ ಕರೆಸಿ ಕಥೆ ಬಗ್ಗೆ ಚರ್ಚೆಸಿದ್ದರು ಬನ್ಸಾಲಿ ಟೀಮ್. ಅಷ್ಟು ಸುಲಭವಾಗಿ ಯಾರಿಗೂ ಮಣೆ ಹಾಕದ ನಿರ್ದೇಶಕ ಸಂಜಯ್ ಈಗ ಮೃಣಾಲ್ ನಟನೆಯನ್ನು ಮೆಚ್ಚಿ ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಉತ್ತಮ ಪಾತ್ರವನ್ನೇ ಮೃಣಾಲ್‌ಗೆ ನೀಡಿದ್ದಾರೆ.

    ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಗರಡಿಯಲ್ಲಿ ಮೃಣಾಲ್ ಪಳಗುತ್ತಾರೆ ಎಂದರೆ ಸಕ್ಸಸ್ ಕಟ್ಟಿಟ್ಟ ಬುತ್ತಿ ಎಂದರ್ಥ. ಸೀತಾರಾಮಂ, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಚಿತ್ರದ ಸಕ್ಸಸ್ ನಂತರ ಮೃಣಾಲ್ ಮತ್ತೆ ಹೇಗೆ ಹವಾ ಕ್ರಿಯೇಟ್ ಮಾಡುತ್ತಾರೆ ಎಂದು ಕಾದುನೋಡಬೇಕಿದೆ.

  • ಅಮಿತಾಭ್ ಮೊಮ್ಮಗಳ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಟ ಸಿದ್ಧಾಂತ್

    ಅಮಿತಾಭ್ ಮೊಮ್ಮಗಳ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಟ ಸಿದ್ಧಾಂತ್

    ಬಾಲಿವುಡ್‌ನ ಯಂಗ್ ಹೀರೋ ಸಿದ್ಧಾಂತ್ ಚತುರ್ವೇದಿ (Siddant Chaturvedi) ತಮ್ಮ ಸಿನಿಮಾಗಳಿಗಿಂತ ಡೇಟಿಂಗ್ ವಿಷ್ಯವಾಗಿಯೇ ಬಿಟೌನ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ(Navya Naveli Nanda) ಜೊತೆಗಿನ ಸಿದ್ಧಾಂತ್ ಡೇಟಿಂಗ್ ಇದೀಗ ಬಿಟೌನ್‌ನ ಹಾಟ್ ಟಾಪಿಕ್ ಆಗಿದೆ.

    `ಗಲ್ಲಿಬಾಯ್'(Gully Boy) ಚಿತ್ರದ ಮೂಲಕ ಬಿಟೌನ್‌ಗೆ ಎಂಟ್ರಿ ಕೊಟ್ಟ ಸಿದ್ಧಾಂತ್ ಸದ್ಯ ʻಫೋನ್ ಬೂತ್ʼ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ನವ್ಯಾ ಜೊತೆಗಿನ ಡೇಟಿಂಗ್ ಬಗ್ಗೆ ಸಿದ್ಧಾಂತ್‌ಗೆ ಕೇಳಲಾಗಿದೆ. ಈ ಬಗ್ಗೆ ನಟ ಸಿದ್ಧಾಂತ್ ಕೂಡ ಕ್ಲ್ಯಾರಿಟಿ ಕೊಟ್ಟಿದ್ದಾರೆ.

     

    View this post on Instagram

     

    A post shared by Navya Naveli Nanda (@navyananda)

    ನಾನು ಡೇಟಿಂಗ್ ಮಾಡುತ್ತಿದ್ದೇನೆ, ಯಾರನ್ನಾದರೂ ನೋಡುತ್ತಿದ್ದೇನೆ ಎಂದು ಗಾಸಿಪ್ ಆಗಿದ್ದರೆ, ನಾನು ವಿಷ್ಯ ನಿಜವಾಗಲಿ ಎಂದು ಬಯಸುತ್ತೇನೆ ಎಂದು ಮಾತನಾಡಿದ್ದಾರೆ. ಇತ್ತೀಚೆಗೆ ಕರಣ್ ಜೋಹರ್ ಬರ್ತ್ಡೇ ಪಾರ್ಟಿಯಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಡ್ಯಾನ್ಸ್ ಕೂಡ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ಇವರಿಬ್ಬರ ಡೇಟಿಂಗ್ ವಿಷ್ಯ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:`ಬಾಹುಬಲಿ’ ಪ್ರಭಾಸ್‌ಗೆ ಶಾಕ್ ಕೊಟ್ಟ ಜಿಎಸ್‌ಟಿ ಅಧಿಕಾರಿಗಳು

    `ಫೋನ್ ಬೂತ್’ ಸಿನಿಮಾ ನವೆಂಬರ್ 4ರಂದು ತೆರೆಗೆ ಬರುತ್ತಿದೆ. ಕತ್ರಿನಾ ಕೈಫ್ ಜೊತೆ ಪ್ರಮುಖ ಪಾತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]