Tag: ಸಿದ್ಧಾಂತ್‌

  • ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ

    ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ

    ಬಿಟೌನ್‌ನಲ್ಲಿ ಹೊಸ ಲವ್‌ಸ್ಟೋರಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿನಿಮಾರಂಗದಲ್ಲಿ ಲವ್, ಡೇಟಿಂಗ್, ಬ್ರೇಕಪ್ ಎಲ್ಲವೂ ಇಲ್ಲಿ ಕಾಮನ್ ಆಗಿಬಿಟ್ಟಿದೆ. ಈಗ ಅಮಿತಾಬ್ ಬಚ್ಚನ್ ಮೊಮ್ಮಗಳ ಪ್ರೀತಿ ವಿಚಾರ ಬಿಟೌನ್ ಅಡ್ಡಾದಲ್ಲಿ ಸದ್ದು ಮಾಡುತ್ತಿದೆ. `ಗಲ್ಲಿಬಾಯ್’ ಖ್ಯಾತಿಯ ನಟ ಸಿದ್ಧಾಂತ್ ಚತುರ್ವೇದಿ ಜೊತೆ ಬಿಗ್‌ಬಿ ಮೊಮ್ಮಗಳು ನವ್ಯಾ ನವೇಲಿ ನಂದ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಹೊಸ ವಿಚಾರ ಬಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.

    ಇತ್ತೀಚಿಗಷ್ಟೇ ರಿಲೀಸ್ ಆಗಿದ್ದ ಸಿದ್ಧಾಂತ್ ನಟನೆಯ ದೀಪಿಕಾ ಪಡುಕೋಣೆ ನಟನೆಯ `ಗೆಹರಿಯಾನ್’ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿ ದೀಪಿಕಾ ಜತೆ ಲಿಪ್‌ಲಾಕ್ ಮಾಡಿ ಸಖತ್ ಸುದ್ದಿಯಾಗಿದ್ದರು. `ಗೆಹರಿಯಾನ್’ ಚಿತ್ರ ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು.

    ನಟ ಸಿದ್ಧಾಂತ್ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಈ ನಡುವೆ ಬಿಗ್‌ಬಿ ಮೊಮ್ಮಗಳು ನವ್ಯಾ ನವೇಲಿ ನಂದಾ ಜೊತೆ ಪ್ರೀತಿ ವಿಚಾರ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಿದ್ಧಾಂತ್ ಇತ್ತೀಚಿಗೆ ಸಿದ್ಧಾಂತ್ ಶೇರ್ ಮಾಡಿರುವ ಫೋಟೋ ನವ್ಯಾ ಜೊತೆಗಿನ ಪ್ರೀತಿ ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ನಟ ಶೇರ್ ಮಾಡಿರುವ ಫೋಟೋದಲ್ಲಿ ನವ್ಯಾಗೆ ಲಿಂಕ್ ಇದೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

    ವ್ಯಾನಿಟಿ ವ್ಯಾನ್‌ನಲ್ಲಿ ಕುಳಿತಿರುವ ಸಿದ್ಧಾಂತ್‌ಗೆ ವ್ಯಕ್ತಿಯೊಬ್ಬರು ಕತ್ತಿಗೆ ಚೈನ್ ಹಾಕಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿ ಸಿದ್ಧಾಂತ್, ಹರ್ ನೂಡಲ್ಸ್ ಎಂದು ಬರೆದುಕೊಂಡಿದ್ದಾರೆ. ಅದೇ ಸಮಯದಲ್ಲಿ ನವ್ಯಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದು ಅನುಮಾನ ಮೂಡಿಸಿದೆ. ನೂಡಲ್ಸ್ ಅಡಿಬರಹದೊಂದಿಗೆ ನವ್ಯಾ ಕೂಡ ಫೋಟೋ ಶೇರ್ ಮಾಡಿದ್ದಾರೆ. ಸಿದ್ಧಾಂತ್ ಪೋಸ್ಟ್ಗೆ ಅಭಿಮಾನಿಗಳು, ನೀವು ನವ್ಯಾ ಬಗ್ಗೆ ಹೇಳುತ್ತಿದ್ದೀರಾ? ಎಂದೆಲ್ಲ ಕಾಮೆಂಟ್ ಫ್ಯಾನ್ಸ್ ಮಾಡುತ್ತಿದ್ದಾರೆ. ಒಟ್ನಲ್ಲಿ ಇವರಿಬ್ಬರ ಪೋಸ್ಟ್ ಗಮನಿಸಿ, ಇವರ ನಡುವೆ ಪ್ರೀತಿ ಇದೆ ಅಂತಾ ನೆಟ್ಟಿಗರು ಊಹಿಸುತ್ತಿದ್ದಾರೆ. ಅಷ್ಟಕ್ಕೂ ಸುದ್ದಿ ನಿಜನಾ ಅಂತಾ ಕಾದು ನೋಡಬೇಕಿದೆ.