ತುಮಕೂರು: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ (V Somanna) ಅವರು ನವದೆಹಲಿಯಲ್ಲಿಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಅವರನ್ನು ಭೇಟಿ ಮಾಡಿ ತುಮಕೂರು ರೈಲ್ವೆ ನಿಲ್ದಾಣಕ್ಕೆ (Tumakuru Railway Station) ಡಾ ಶ್ರೀ ಶಿವಕುಮಾರ ಸ್ವಾಮೀಜಿ (Siddaganga Shree) ಅವರ ಹೆಸರನ್ನು ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲೆಯ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಕೇಂದ್ರ ಸಚಿವಾಲಯದಿಂದ 87 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಮೂಲಕ ಇಲಾಖೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅತ್ಯಂತ ಸಹಕಾರ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಅಭಿನಂದನೆ ಸಲ್ಲಿಸಿ, ತುಮಕೂರು, ರಾಯದುರ್ಗ ಮತ್ತು ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗವನ್ನು 2027ರ ಜೂನ್ ಮಾಹೆಯಲ್ಲಿ ಲೋಕಾರ್ಪಣೆ ಮಾಡಲು ತುಮಕೂರಿಗೆ ಆಗಮಿಸುವಂತೆ ಮತ್ತು ತುಮಕೂರು ರೈಲ್ವೆ ನಿಲ್ದಾಣಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ದನದ ಕೊಟ್ಟಿಗೆ ಶುಚಿಗೊಳಿಸಿ ಅಲ್ಲಿ ಮಲಗಿದರೆ ಕ್ಯಾನ್ಸರ್ ರೋಗ ವಾಸಿಯಾಗುತ್ತೆ: ಉತ್ತರ ಪ್ರದೇಶ ಸಚಿವ
ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೂ ಸ್ಯಾಂಡಲ್ ವುಡ್ ಗೂ ಗುರು ಶಿಷ್ಯರ ನಂಟಿದೆ. ಹಾಗಾಗಿ ಕನ್ನಡ ಸಿನಿಮಾ ರಂಗದಲ್ಲಿ ಅವರ ಕುರಿತಾಗಿ ಡಾಕ್ಯುಮೆಂಟರಿ, ವೆಬ್ ಸೀರಿಸ್ ಮತ್ತು ಸಿನಿಮಾಗಳ ರೂಪದಲ್ಲಿಯೂ ಶಿವಕುಮಾರ ಸ್ವಾಮೀಜಿ ದರ್ಶನ ಭಾಗ್ಯ ನೀಡಿದ್ದಾರೆ.
ಅಲ್ಲದೇ, ಸಿನಿಮಾ ಸಂಬಂಧಿ ಅನೇಕ ಕಾರ್ಯಕ್ರಮಗಳಿಗೆ ಶ್ರೀಗಳು ಆಗಮಿಸಿದ ಆಶೀರ್ವಾದ ಮಾಡಿದ್ದಾರೆ. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಡಾ. ಅಂಬರೀಶ್, ಶಿವರಾಜ್ ಕುಮಾರ್, ಜಗ್ಗೇಶ್, ಯಶ್, ಸುದೀಪ್, ರಶ್ಮಿಕಾ ಮಂದಣ್ಣ, ಅರ್ಜುನ್ ಸರ್ಜಾ, ಉಪೇಂದ್ರ ಸೇರಿದಂತೆ ಸಾಕಷ್ಟು ಕಲಾವಿದರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಕೂಡ ಪಡೆದಿದ್ದಾರೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ
ಶ್ರೀಗಳೇ ನಟಿಸಿರುವ ಸಿನಿಮಾ
ಓಂಕಾರ್ ನಿರ್ದೇಶನದಲ್ಲಿ ಮೂಡಿ ಬಂದ ಜ್ಞಾನ ಜ್ಯೋತಿ ಸಿದ್ಧಗಂಗಾ ಸಿನಿಮಾದಲ್ಲಿ ಸ್ವತಃ ಶಿವಕುಮಾರ ಸ್ವಾಮೀಜಿ ಕೂಡ ನಟಿಸಿದ್ದಾರೆ. ಇದು ಶಿವಕುಮಾರ ಸ್ವಾಮಿಗಳ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾವಾಗಿದ್ದು, ಸಿದ್ಧಗಂಗಾ ಮಠದ ಇತಿಹಾಸವನ್ನೇ ಹೇಳುವಂತಹ ಚಿತ್ರ ಇದಾಗಿದೆ. ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್, ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ, ಶ್ರೀಧರ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ನಟಿಸಿದ ಸಿನಿಮಾ ಇದಾಗಿದೆ. ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಮಠದಲ್ಲಿ ಓದುತ್ತಿದ್ದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಹಾಡೊಂದರಲ್ಲಿ ತೋರಿಸಿದ್ದಾರೆ ನಿರ್ದೇಶಕರು.
ಶ್ರೀಗಳ ಕುರಿತು ವೆಬ್ ಸಿರೀಸ್
ಸಿದ್ಧಗಂಗಾ ಶ್ರೀಗಳ ಕುರಿತಾಗಿ ಹಂಸಲೇಖ ವೆಬ್ ಸೀರಿಸ್ ವೊಂದನ್ನು ತಯಾರಿಸಲು ರೆಡಿ ಮಾಡಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಸಂಸ್ಕೃತ ಸೇರಿದಂತೆ ಹತ್ತು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ವೆಬ್ ಸೀರಿಸ್ ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಶ್ರೀಗಳ ಪಾತ್ರ ಮಾಡಬೇಕು ಎನ್ನುವುದು ಹಂಸಲೇಖಾ ಆಸೆ. ಹಾಗಾಗಿ ಅಮಿತಾಭ್ ಅವರಿಗೆ ಈ ವಿಷಯವನ್ನು ಮುಟ್ಟಿಸಿದ್ದಾರೆ. ಇನ್ನಷ್ಟೇ ಇದರ ಶೂಟಿಂಗ್ ಆರಂಭವಾಗಬೇಕಿದೆ. ಇದನ್ನೂ ಓದಿ: ಬಾಲ್ಯ ವಿವಾಹ ಮಾಡಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ರು
ನಿಡಸಾಲೆ ಪುಟ್ಟಸ್ವಾಮಯ್ಯ ತಯಾರಿಸಿದ ಸಿದ್ದಗಂಗಾ
ಕನ್ನಡದ ಹೆಸರಾಂತ ಪ್ರಕಾಶಕ, ಲೇಖಕ ಹಾಗೂ ನಟ ನಿಡಸಾಲೆ ಪುಟ್ಟಸ್ವಾಮಯ್ಯ ನಿರ್ಮಾಣದಲ್ಲಿ ‘ಸಿದ್ದಗಂಗಾ’ ಹೆಸರಿನಲ್ಲಿ ಸಿನಿಮಾ ಮೂಡಿ ಬಂದಿದೆ. ಸಿದ್ಧಗಂಗಾ ಚಿತ್ರವು ಸಿದ್ದ ಮತ್ತು ಗಂಗಾರ ಬದುಕಿನ ಕಥೆಯಾಗಿದ್ದರೂ, ಸಿದ್ದಗಂಗಾ ಮಠದ ಇತಿಹಾಸವನ್ನೂ ಈ ಚಿತ್ರ ಹೇಳುತ್ತದೆ. ಈ ಸಿನಿಮಾದ ಆಡಿಯೋವನ್ನು ಸ್ವತಃ ಸಿದ್ಧಗಂಗಾ ಶ್ರೀಗಳೇ ಮಾಡಿದ್ದು ವಿಶೆಷ. ಜಿ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ನೈಜ ಬದುಕಿನ ಕಥಾಹಂದರ ಹೊಂದಿತ್ತು.
ಕಾಯಕ ಯೋಗಿ ಸಿನಿಮಾ
ನಿರ್ದೇಶಕ ಪುರುಷೋತ್ತಮ್ ಅವರು ‘ಕಾಯಕಯೋಗಿ’ ಶೀರ್ಷಿಕೆಯೊಂದಿಗೆ ಶ್ರೀಗಳ ಕುರಿತಾಗಿ ಸಿನಿಮಾ ಮಾಡಿದ್ದರು. ಈ ಚಿತ್ರಕ್ಕೆ ಸ್ವತಃ ಶ್ರೀಗಳೇ ಚಾಲನೆ ನೀಡಿದ್ದರು. ಭಕ್ತಿ ಪ್ರದಾನ ಸಿನಿಮಾಗಳಿಗೆ ಹೆಸರಾಗಿದ್ದ ಪುರುಷೋತ್ತಮ್, ಸಿದ್ಧಗಂಗಾ ಮಠದ ಚರಿತ್ರೆಯನ್ನು ಈ ಸಿನಿಮಾದ ಮೂಲಕ ಕಟ್ಟಿಕೊಟ್ಟಿದ್ದರು. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ
ಟಗರು ಸಿನಿಮಾದಲ್ಲಿ ಶ್ರೀಗಳು
ಶಿವರಾಜ್ ಕುಮಾರ್ ನಟನೆಯ ಟಗರು ಸಿನಿಮಾದಲ್ಲಿಯೂ ಒಂದು ಸಣ್ಣ ಪಾತ್ರದಲ್ಲಿ ಶಿವಕುಮಾರ ಸ್ವಾಮಿಗಳು ಕಾಣಿಸಿಕೊಂಡಿದ್ದರು. ಈ ಮಠದಲ್ಲಿ ಬೆಳೆದ ಹುಡುಗನೊಬ್ಬ ದೊಡ್ಡ ಅಧಿಕಾರಿಯಾಗಿ ಬೆಳೆಯುತ್ತಾನೆ ಎನ್ನುವ ಕಥೆಯನ್ನು ಈ ಸಿನಿಮಾ ಹೊಂದಿತ್ತು. ಹಾಗಾಗಿ ಶ್ರೀಗಳು ನಾಯಕನಿಗೆ ಆಶೀರ್ವಾದ ಮಾಡುವಂತಹ ದೃಶ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು.
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಶ್ರೀಗಳ ಕುರಿತಾಗಿ ಸಿನಿ ಸೀರಿಸ್ ಸಿದ್ಧವಾಗುತ್ತಿದೆ. 52 ಕಂತುಗಳು ಮೆಗಾ ಸೀರಿಸ್ ಇದಾಗಿದ್ದು, ಹಂಸಲೇಖ ಅವರ ಸಾರಥ್ಯದಲ್ಲಿ ಮೂಡಿ ಬರಲಿದೆ. ಸಿದ್ದಗಂಗಾ ಶ್ರೀಗಳ 115ನೇ ಜಯಂತೋತ್ಸವದ ಪ್ರಯುಕ್ತ ಈ ಸೀರಿಸ್ ಸಿದ್ಧವಾಗುತ್ತಿದ್ದು, ಶ್ರೀಗಳ ಪಾತ್ರಕ್ಕಾಗಿ ಅಮಿತಾಭ್ ಬಚ್ಚನ್ ಅವರನ್ನು ಕೇಳಲಾಗಿದೆಯಂತೆ. ಆದರೆ ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಂಗೀತ ಬ್ರಹ್ಮ ಹಂಸಲೇಖ ತಿಳಿಸಿದ್ದಾರೆ.
ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಸೀರಿಸ್ ಇದಾಗಿದ್ದರಿಂದ ದೊಡ್ಡ ಮಟ್ಟದಲ್ಲೇ ನಿರ್ಮಾಣ ಮಾಡುವ ಯೋಜನೆ ತಂಡದ್ದು. ಹಾಗಾಗಿ ಅಮಿತಾಭ್ ಬಚ್ಚನ್ ಅವರನ್ನು ನಿರ್ಮಾಣ ತಂಡ ಈಗಾಗಲೇ ಸಂಪರ್ಕ ಮಾಡಿದೆ. ಅಮಿತಾಭ್ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣದಿಂದಾಗಿ ಅವರ ಗ್ರೀನ್ ಸಿಗ್ನಲ್ ಗೆ ತಂಡ ಕಾಯುತ್ತಿದೆ. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು
ಅಮಿತಾಭ್ ಈ ಹಿಂದೆ ಅಮೃತಧಾರೆ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಅಮಿತಾಭ್ ಕಾರಣದಿಂದಾಗಿ ಬಾಲಿವುಡ್ ಮಂದಿಗೂ ತಲುಪಿತ್ತು. ಹಾಗಾಗಿ ಅಮಿತಾಭ್ ಅವರು ಶ್ರೀಗಳ ಪಾತ್ರ ಮಾಡಿದರೆ, ಇನ್ನಷ್ಟು ಜನಕ್ಕೆ ಶ್ರೀಗಳ ಜೀವನ ತಿಳಿಸಿದ ಹಾಗೆ ಆಗುತ್ತೆ ಎನ್ನುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದಿದೆ ತಂಡ. ಇದನ್ನೂ ಓದಿ: ಅಪ್ಪ-ಮಗನ್ನ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳ ಕಾತರ : ‘ಆಚಾರ್ಯ’ದಲ್ಲಿ ಒಂದಾದ ಮಗಧೀರ ಜೋಡಿ
ಈ ಸಿನಿ ಸಿರೀಸ್ ಕನ್ನಡವೂ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ಮತ್ತೊಂದು ವಿಶೇಷ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಹಾಗೂ ಸಂಸ್ಕೃತ ಭಾಷೆಯಲ್ಲೂ ಈ ಸೀರಿಸ್ ಅನ್ನು ತಯಾರಿಸಲಾಗುತ್ತಿದೆ. ಮುನ್ನೂರಕ್ಕೂ ಅಧಿಕ ತಂತ್ರಜ್ಞರು ಇದಕ್ಕಾಗಿ ಕೆಲಸ ಮಾಡಿದರೆ, ಏಳೇಳು ತಂಡಗಳಲ್ಲಿ ಈ ಕೆಲಸ ನಡೆಯಲಿದೆ.
13ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ಹೊಸದೊಂದು ಪರಂಪರೆಗೆ ನಾಂದಿ ಹಾಡಿತು. ಮೈಸೂರಿನ ಸುತ್ತೂರು ಮಠದ ಸಾವಿರ ವರ್ಷಗಳ ಇತಿಹಾಸವನ್ನು ಕಟ್ಟಿಕೊಡುವ ‘ಸುತ್ತೂರು ಗುರು ಪರಂಪರೆ’ ಹೆಸರಿನ ಆನಿಮೇಷನ್ ಸಿನಿಮಾವನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಈ ಪ್ರದರ್ಶನಕ್ಕೆ ಸುತ್ತೂರು ಮಠದ ಶಿವಮೂರ್ತಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಆಗಮಿಸಿದ್ದರು. ಇದೇ ಮೊದಲ ಬಾರಿಗೆ ಚಿತ್ರೋತ್ಸವದಲ್ಲಿ ಹೆಸರಾಂತ ಎರಡು ಮಠದ ಸ್ವಾಮಿಗಳು ಆಗಮಿಸಿದ್ದು ವಿಶೇಷ. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ
ಈಗಾಗಲೇ ಈ ಆನಿಮೇಷನ್ ಸಿನಿಮಾ ಜಪಾನ್, ಅಮೆರಿಕಾ, ಇಟಲಿ ಸೇರಿದಂತೆ ಹಲವು ದೇಶಗಳಲ್ಲಿ ಪ್ರದರ್ಶನವಾಗಿದೆ. ಹಲವು ಬಹುಮಾನಗಳನ್ನೂ ಪಡೆದಿದೆ. ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕರ್ನಾಟಕದಲ್ಲಿ ಪ್ರದರ್ಶನವಾಗಿದ್ದು ವಿಶೇಷ. ಸಿನಿಮಾ ಪ್ರದರ್ಶನದ ನಂತರ ಮಾತನಾಡಿದ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ‘ಚಿತ್ರೋತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂಥದ್ದೊಂದು ವಿಸ್ಮಯ ನಡೆದಿದೆ. ಚಿತ್ರೋತ್ಸವಕ್ಕೆ ಈ ಮೂಲಕ ಹೊಸ ಆಯಾಮ ಸಿಕ್ಕಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಪ್ರಂಶಸೆ ವ್ಯಕ್ತ ಪಡಿಸಿದ್ದಾರೆ” ಎಂದರು. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ
ಪ್ರದರ್ಶನದ ವೇಳೆ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಜೈರಾಜ್, ಜಾನಪದತಜ್ಞ ಗೊ.ರು.ಚನ್ನಬಸಪ್ಪ, ಆನಿಮೇಷನ್ ಚಿತ್ರ ನಿರ್ದೇಶಕ ಅಬ್ದುಲ್ ಕರೀಂ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.