Tag: ಸಿದ್ಧಗಂಗಾ

  • ಸಿಲಬಸ್ ವಾರ್: ಸಿದ್ದಗಂಗಾ ಮಠದ ಬಗ್ಗೆಯೂ ಕತ್ತರಿ, ಅನ್ನ ದಾಸೋಹ-ಅಕ್ಷರ ದಾಸೋಹ ವಾಕ್ಯ ಕಟ್‌

    ಸಿಲಬಸ್ ವಾರ್: ಸಿದ್ದಗಂಗಾ ಮಠದ ಬಗ್ಗೆಯೂ ಕತ್ತರಿ, ಅನ್ನ ದಾಸೋಹ-ಅಕ್ಷರ ದಾಸೋಹ ವಾಕ್ಯ ಕಟ್‌

    ಬೆಂಗಳೂರು: ಇತ್ತೀಚೆಗೆ ಹೆಚ್ಚು ಚರ್ಚೆಯಾಗುತ್ತಿರುವ ಪಠ್ಯ ವಿವಾದಕ್ಕೆ ಮುಕ್ತಿ ಸಿಗುತ್ತಿಲ್ಲ. ಈಗ ಮತ್ತೊಂದು ವಿವಾದದಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ಸಿಲುಕಿದೆ. ಆರನೇ ತರಗತಿಯ ಸಮಾಜ ಪಠ್ಯದಲ್ಲಿ ಸಿದ್ಧಗಂಗಾ ಮಠದ ಅನ್ನ ದಾಸೋಹ ಮತ್ತು ಅಕ್ಷರ ದಾಸೋಹ ನಡೆಸುತ್ತಿದೆ ಅನ್ನೋ ವಾಕ್ಯಕ್ಕೆ ರೋಹಿತ್ ಚಕ್ರತೀರ್ಥ ಸಮಿತಿ ಕತ್ತರಿ ಹಾಕಿದೆ ಎನ್ನಲಾಗಿದೆ.

    ಸುರಪುರ ನಾಯಕರ ಪಠ್ಯ ಕಡಿತಕ್ಕೆ ಶಾಸಕ ರಾಜೂಗೌಡ ಅಸಮಾಧಾನ ವ್ಯಕ್ತಪಡಿಸಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿಂದಿನಂತೆಯೇ ಪಠ್ಯ ಮುಂದುವರಿಸಲು ಒತ್ತಾಯಿಸಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿ, ಪಠ್ಯದಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡ್ತಿದ್ದೇವೆ ಎಂದಿದ್ದಾರೆ. ಸಚಿವ ಸುನೀಲ್ ಕುಮಾರ್, ಕಾಂಗ್ರೆಸ್ ಬೇಕಂತಲೇ ವಿವಾದ ಹುಟ್ಟು ಹಾಕುತ್ತಿದೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಟೆಕ್ ಸಮ್ಮಿಟ್ ಬೆಳ್ಳಿ ಹಬ್ಬ – ಉದ್ಘಾಟನೆಗೆ ಪ್ರಧಾನಿ ಆಹ್ವಾನ: ಅಶ್ವಥ್ ನಾರಾಯಣ 

    ಈ ಮಧ್ಯೆ, ಅಂಬೇಡ್ಕರ್ ಮುಂದೆ ಸಂವಿಧಾನ ಶಿಲ್ಪಿ ಎಂಬ ಪದನಾಮವನ್ನು ಮತ್ತೆ ಸೇರಿಸಲು ಮುಂದಾಗಿರೋದನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. ಅತ್ತ ಕೊಪ್ಪಳದಲ್ಲಿ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯ ಪುಸ್ತಕ ವಿತರಣೆ ಆಗದಿದ್ರೂ, ಆಗಿದೆ ಎಂದು ನಮೂದು ಮಾಡುವಂತೆ ಶಿಕ್ಷಕರ ಮೇಲೆ ಮೇಲಾಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

  • ಧರ್ಮಸ್ಥಳ ಬಳಿಕ ಸಿದ್ದಗಂಗಾ ಮಠದಲ್ಲೂ ನೀರಿಗೆ ಬರ!

    ಧರ್ಮಸ್ಥಳ ಬಳಿಕ ಸಿದ್ದಗಂಗಾ ಮಠದಲ್ಲೂ ನೀರಿಗೆ ಬರ!

    ತುಮಕೂರು: ಎಲ್ಲೆಲ್ಲೂ ನೀರಿಗೆ ಬರ. ಧರ್ಮಸ್ಥಳದ ಆ ದೇವರಿಗೂ ಬರ ತಟ್ಟಿತ್ತು. ಇದೀಗ ತುಮಕೂರಿನ ಸಿದ್ದಗಂಗಾ ಮಠದಲ್ಲೂ ನೀರಿಗೆ ಬವಣೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಜೂನ್ ತಿಂಗಳಲ್ಲಿ ಮಳೆ ಬಾರದೇ ಇದ್ದರೆ ನೀರಿಗಾಗಿ ಪರದಾಟಪಡಬೇಕಾಗುತ್ತದೆ.

    ಧರ್ಮಸ್ಥಳದಲ್ಲಿ ನೀರಿನ ಲಭ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಸದ್ಯಕ್ಕೆ ಮಂಜುನಾಥನ ದರ್ಶನಕ್ಕೆ ಬರಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿದ್ದರು. ಇದೀಗ ತ್ರಿವಿಧ ದಾಸೋಹದ ಕ್ಷೇತ್ರ ತುಮಕೂರಿನ ಸಿದ್ದಗಂಗಾ ಮಠದಲ್ಲೂ ನೀರಿನ ಸಮಸ್ಯೆಗೆ ಬರ ಎದುರಾಗುವ ಪರಿಸ್ಥಿತಿ ಬಂದಿದೆ.

    ಸಿದ್ದಗಂಗಾ ಮಠದಲ್ಲಿ ದಿನಕ್ಕೆ ಸಾವಿರಾರು ಭಕ್ತಾದಿಗಳು ದಾಸೋಹ ಮಾಡುತ್ತಾರೆ. 10 ಸಾವಿರ ವಿದ್ಯಾಥಿಗಳು ವ್ಯಾಸಂಗ ಮಾಡುತ್ತಾರೆ. ಮಠದ ಉಪಯೋಗಕ್ಕೆ ಸರಿ ಸುಮಾರು ದಿನವೊಂದಕ್ಕೆ 80 ಸಾವಿರ ಲೀಟರ್ ನೀರು ಬೇಕಾಗುತ್ತೆ. ಈಗ ವಿದ್ಯಾರ್ಥಿಗಳು ರಜೆ ನಿಮಿತ್ತ ಊರಿಗೆ ಹೋಗಿದ್ರಿಂದ 50 ಸಾವಿರ ಲೀಟರ್ ನೀರಿನ ಅಗತ್ಯತೆ ಇದೆ.

    ಸದ್ಯಕ್ಕೆ 50 ಸಾವಿರ ಲೀಟರ್ ನೀರು ಸುಲಭವಾಗಿ ದೊರೆಯುತ್ತೆ. ಆದರೆ ಜೂನ್ ತಿಂಗಳಲ್ಲಿ ಶಾಲೆ ಆರಂಭವಾಗೋದ್ರಿಂದ 80 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಜೂನ್ ತಿಂಗಳಲ್ಲಿ ಮಳೆಯಾದರೆ ನೀರಿನ ಸಮಸ್ಯೆ ಆಗಲ್ಲ. ಇಲಾಂದ್ರೆ ನೀರಿಗೆ ಬರ ಬರಲಿದೆ ಎಂದು ಹೇಳಲಾಗುತ್ತಿದೆ.

    ಮಠದಲ್ಲಿ ನೂರಾರು ಜಾನುವಾರುಗಳಿದರೂ ಅವುಗಳ ಸಾಕಾಣಿಕೆಗೆ ನೀರಿನ ಅವಶ್ಯಕತೆ ಇದೆ. ಸುಮಾರು 30 ಬೋರ್‍ವೆಲ್‍ಗಳಿವೆ. ಅವುಗಳಲ್ಲಿ 5-6 ಬೋರ್ ವೆಲ್ ಕೈ ಕೊಟ್ಟಿವೆ. ಇನ್ನುಳಿದವುಗಳಲ್ಲಿ ಅಲ್ಪ ಸ್ವಲ್ಪ ನೀರು ಬರುತ್ತಿದೆ. ಈ ನೀರಿನಿಂದಲೇ ನಿತ್ಯದ ಕೆಲಸ ಸಾಗಿದೆ. ಮಹಾನಗರ ಪಾಲಿಕೆಯಿಂದ ನೀಡುತ್ತಿದ್ದ ಹೇಮಾವತಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಮೈದಾಳ ಕೆರೆಯಿಂದ ನೀರು ಹರಿಸುವ ಯೋಜನೆಯೂ ಸ್ಥಗಿತಗೊಂಡಿದೆ.

  • ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮ: ಸಿಎಂಗೆ ತಿರುಗೇಟು ನೀಡಲು ಬಿಜೆಪಿ ಮಾಸ್ಟರ್ ಗೇಮ್

    ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮ: ಸಿಎಂಗೆ ತಿರುಗೇಟು ನೀಡಲು ಬಿಜೆಪಿ ಮಾಸ್ಟರ್ ಗೇಮ್

    ಬೆಂಗಳೂರು: ಲಿಂಗಾಯತ ವೀರಶೈವ ಧರ್ಮ ಸ್ಥಾಪನೆ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಿರುವ ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಲು ಬಿಜೆಪಿ ಮುಂದಾಗಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ರಾಜ್ಯದ ಪ್ರಮುಖ ಲಿಂಗಾಯತ ಮಠಕ್ಕೆ ಕರೆದೊಯ್ಯಲು ಬಿಜೆಪಿ ಈಗ ಸಿದ್ಧತೆ ನಡೆಸಿದೆ.

    ನಾಲ್ಕು ಜಿಲ್ಲೆಗಳ ಪ್ರವಾಸಕ್ಕಾಗಿ ಮಾರ್ಚ್ 25ರಂದು ರಾತ್ರಿ ಬೆಂಗಳೂರಿಗೆ ಅಮಿತ್ ಶಾ ಆಗಮಿಸಲಿದ್ದಾರೆ. ಎರಡು ದಿನಗಳ ಮಧ್ಯ ಕರ್ನಾಟಕ ಭೇಟಿ ವೇಳೆ ನಾಲ್ಕು ಮಠಗಳಿಗೆ ಶಾ ಭೇಟಿ ನೀಡಲಿದ್ದಾರೆ.

    ಮಾರ್ಚ್ 26ರಂದು ಬೆಳಗ್ಗೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಸಿದ್ಧಗಂಗಾ ಶಿವಕುಮಾರ ಶ್ರೀಗಳನ್ನು ಶಾ ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. ಮಾರ್ಚ್ 27ರಂದು ದಾವಣಗೆರೆ ಜಿಲ್ಲೆಯ ಸಿರಿಗೆರೆ ಮಠ, ಮಾದಾರ ಚನ್ನಯ್ಯ ಸ್ವಾಮೀಜಿ ಮಠ ಮತ್ತು ಚಿತ್ರದುರ್ಗದ ಮುರುಘಾ ಮಠಕ್ಕೆ ಶಾ ಭೇಟಿ ಕೊಡಲಿದ್ದಾರೆ.

    ಅಮಿತ್ ಶಾ ಫೆಬ್ರವರಿ ನಾಲ್ಕನೇಯ ವಾರದಲ್ಲಿ ಎರಡು ದಿನ ಕರಾವಳಿ ಜಿಲ್ಲೆಯಲ್ಲಿ ಪಕ್ಷದ ಪ್ರಚಾರ ನಡೆಸಿದ್ದರು. ಫೆ.21ರಂದು ರಾತ್ರಿ ಉಡುಪಿಯಲ್ಲಿ ಪೇಜಾವರ ಮಠಕ್ಕೆ ಆಗಮಿಸಿದ ಅಮಿತ್ ಶಾ, ಮೂರು ಜಿಲ್ಲೆಯ ಸ್ವಾಮೀಜಿಗಳ ಜೊತೆ ಸಮಾಲೋಚನೆ ಮಾಡಿದ್ದರು.