Tag: ಸಿದ್ದೇಶ್ವರ ಶ್ರೀಗಳು

  • ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಭರದ ಸಿದ್ಧತೆ- ಸಂಜೆ 5 ಗಂಟೆ ವೇಳೆಗೆ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ

    ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಭರದ ಸಿದ್ಧತೆ- ಸಂಜೆ 5 ಗಂಟೆ ವೇಳೆಗೆ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ

    ವಿಜಯಪುರ: ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿರುವ ಸಿದ್ದೇಶ್ವರ ಶ್ರೀ (Siddeshwara Sri) ಗಳ ಅಂತ್ಯಸಂಸ್ಕಾರಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.

    ವಿಜಯಪುರ (Vijayapura) ದ ಜ್ಞಾನಯೋಗಾಶ್ರಮದಲ್ಲಿ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತದಿಂದ ಸರ್ವ ಸಿದ್ಧತೆ ನಡೆಸಲಾಗುತ್ತಿದೆ. ಶ್ರೀಗಳ ಇಚ್ಛೆಯಂತೆ ಅವರು ಮಾಡಿದ ವಿಲ್ ಪ್ರಕಾರ ಅಗ್ನಿ ಸ್ಪರ್ಷ ಮಾಡಿ ಅಂತ್ಯಸಂಸ್ಕಾರ (Funeral) ನೆರವೇರಿಸಲಾಗುತ್ತಿದೆ. ಇದನ್ನೂ ಓದಿ: ಶ್ರೀಗಳು ವಿಲ್‍ನಲ್ಲಿ ಬರೆದಿಟ್ಟಿರುವಂತೆ ಅಂತ್ಯಸಂಸ್ಕಾರ ಮಾಡಲಾಗುವುದು: ಯತ್ನಾಳ್

    ಅಂತ್ಯಸಂಸ್ಕಾರದ ಕಟ್ಟೆ ಕಾಮಗಾರಿ ನಡೆಯುತ್ತಿದ್ದು, ಅಂತ್ಯಸಂಸ್ಕಾರಕ್ಕೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಕೇವಲ ಕುಟುಂಬಸ್ಥರು, ಗಣ್ಯರು, ಸ್ವಾಮೀಜಿಗಳಿಗೆ ಮಾತ್ರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಅಂತ್ಯಸಂಸ್ಕಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೊಶಿ ಸೇರಿದಂತೆ ಅನೇಕ ಸಚಿವರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ನಮ್ಮನೆಯಲ್ಲಿ ಕುರಾನ್ ಜೊತೆಗೆ ಶ್ರೀಗಳ ಆಶೀರ್ವಚನ ಕೇಳುತ್ತಿದ್ದೆವು: ಮುಸ್ಲಿಂ ಭಕ್ತರು

    ಗಣ್ಯರಿಗೆ 500 ಆಸನ, ಸ್ವಾಮಿಜಿಗಳಿಗೆ 150 ಆಸನ ಹಾಗೂ ಕುಟುಂಬಸ್ಥರಿಗೆ 100 ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 3 ಗಂಟೆಗೆ ಅಂತಿಮ ದರ್ಶನ ಪುರ್ಣಗೊಳಿಸಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಾಯಾತ್ರೆ ಮೂಲಕ ಪಾರ್ಥಿವ ಶರೀರ ಆಶ್ರಮಕ್ಕೆ ಬರಲಿದೆ. ಸಂಜೆ 5 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಸುತ್ತೂರು ಶ್ರೀ ಗಳು ಅಂತ್ಯಸಂಸ್ಕಾರದ ಬಗ್ಗೆ ಮಾಹಿತಿ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ- ಭಕ್ತರಿಗೆ ದರ್ಶನ

    ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ- ಭಕ್ತರಿಗೆ ದರ್ಶನ

    ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀ (Siddeshwara Sri) ಗಳು ಆರೋಗ್ಯ ಸ್ಥಿರವಾಗಿದೆ. ಶ್ರೀಗಳು ಆರೋಗ್ಯ ಚೇತರಿಕೆ ಆಗುತ್ತಿದೆ. ಶ್ರೀಗಳ ಭೇಟಿಗಾಗಿ ಗಣ್ಯಾತೀಗಣ್ಯರು, ಜನಪ್ರತಿನಿಧಿಗಳು ಸೇರಿದಂತೆ ಮಠಾಧೀಶರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಇನ್ನು ಭಕ್ತಸಾಗರವೂ ಸಹಸ್ರಾರೂ ಸಂಖ್ಯೆಯಲ್ಲಿ ಹರಿದುಬರುತ್ತಿದೆ.

    ವಿಜಯಪುರ (Vijayapura) ದ ಜ್ಞಾನ ಯೋಗಾಶ್ರಮದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀಗಳು ಆರೋಗ್ಯ ಸ್ಥಿರವಾಗಿದೆ. ಶ್ರೀಗಳು ಆರೋಗ್ಯ ಚೇತರಿಕೆ ಆಗುತ್ತಿದೆ. ಪಲ್ಸ್, ಬಿಪಿ ಸರಿಯಾಗಿದೆ. ಯಾವುದೇ ಆತಂಕ ಇಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ಶ್ರೀ ಸಿದ್ದೇಶ್ವರ ಶ್ರೀಗಳಿಗೆ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ.

    ಶ್ರೀಗಳ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಸ್ವಾಮೀಜಿ ದರ್ಶನಕ್ಕಾಗಿ ಭಕ್ತಗಣ ಕಾಯ್ದುಕುಳಿತಿದ್ರು. ಜ್ಞಾನಯೋಗಿ ಆಶ್ರಮದ ಆವರಣದಲ್ಲಿ ಭಕ್ತರ ಸಾಗರವೇ ಸೇರಿತ್ತು. ದೇವರ ದರ್ಶನ ಆಗಬೇಕು, ಮತ್ತೆ ಅವರು ಪ್ರವಚನ ಹೇಳಬೇಕು ಅಂತ ಭಕ್ತರು ಕಣ್ಣೀರಿಟ್ಟರು.

    ಹೀಗಾಗಿ ಜ್ಞಾನಯೋಗಾಶ್ರಮ ಆವರಣದಲ್ಲಿ ಎಲ್‍ಇಡಿ (LED) ಮೂಲಕ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಸಿದ್ದೇಶ್ವರ ಶ್ರೀಗಳು ದರ್ಶನ ನೀಡಿದ್ರು. ಶ್ರೀಗಳ ದರ್ಶನವಾಗುತ್ತಿದ್ದಂತೆ ಭಾವುಕರಾದ ಭಕ್ತರು ಸಾಷ್ಟಾಂಗ ನಮಸ್ಕಾರ ಹಾಕಿ ನಮನ ಸಲ್ಲಿಸಿದರು. ಸಿದ್ದೇಶ್ವರ ಸ್ವಾಮೀಜಿಗೆ ಜೈಕಾರ ಕೂಗಿದ್ರು.

    ಆದಿಚುಂಚನ ಶ್ರೀಗಳು, ವಚನಾನಂದ ಶ್ರೀಗಳು ಸೇರಿದಂತೆ ನಾನಾ ಮಠಾಧೀಶರು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ್ರು. ಸಿದ್ದೇಶ್ವರ ಶ್ರೀಗಳನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಇದನ್ನೂ ಓದಿ: ಕಾರಿನಲ್ಲಿ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ- ಡೆತ್‌ನೋಟ್‌ನಲ್ಲಿ ಪ್ರಭಾವಿ ರಾಜಕಾರಣಿ ಹೆಸರು ಉಲ್ಲೇಖ

    ಶಾಸಕ ಬಸನಗೌಡ ಪಾಟೀಲ ಯತ್ನಾಳ್, ವಿಜಯೇಂದ್ರ ಸೇರಿದಂತೆ ಜಿಲ್ಲೆಯ ಹಲವು ಶಾಸಕರು, ಮಾಜಿ ಶಾಸಕರು ಸೇರಿದಂತೆ ಗಣ್ಯರು ತಂಡೋಪ ತಂಡವಾಗಿ ಬಂದು ಶ್ರೀಗಳ ದರ್ಶನ ಪಡೆದರು. ವೈದ್ಯರ ತಂಡದೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಸದ್ಯ ಸಿದ್ದೇಶ್ವರ ಶ್ರೀಗಳು ಆರೋಗ್ಯವಾಗಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ. ಆದ್ರೆ ಭಕ್ತರು ಮಾತ್ರ ಮಠದ ಹೊರಗಡೆನೇ ಶ್ರೀಗಳ ದರ್ಶನಕ್ಕೆ ಕಾದು ಕುಳಿತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿಯ ಶೂ ಲೇಸ್ ಕಟ್ಟಿದ ಗವಿ ಸಿದ್ದೇಶ್ವರ ಶ್ರೀಗಳು

    ವಿದ್ಯಾರ್ಥಿಯ ಶೂ ಲೇಸ್ ಕಟ್ಟಿದ ಗವಿ ಸಿದ್ದೇಶ್ವರ ಶ್ರೀಗಳು

    ಕೊಪ್ಪಳ: ವಿಶ್ವವಿಖ್ಯಾತ ಗವಿ ಮಠದ ಗವಿ ಸಿದ್ದೇಶ್ವರ ಶ್ರೀಗಳು ವಿದ್ಯಾರ್ಥಿಯೊಬ್ಬನ ಶೂ ಲೇಸ್ ಕಟ್ಟಿ ಸರಳತೆ ಮೆರೆದಿದ್ದಾರೆ.

    ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಮಠದ ವತಿಯಿಂದ ವಿನೂತನ ವೃಕ್ಷ ಸಂಕಲ್ಪ ಜಾಗೃತಿ ಅಭಿಯಾನವನ್ನು ಆಯೋಜಿಲಾಗಿತ್ತು. ಲಕ್ಷ ವೃಕ್ಷೋತ್ಸವ ಶೀರ್ಷಿಕೆಯ ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕರಕ್ಕೆ ಲಕ್ಷ ವೃಕ್ಷೋತ್ಸವ ಎಂಬ ಘೋಷವಾಕ್ಯದೊಂದಿಗೆ ಕೊಪ್ಪಳದ ಸಾರ್ವಜನಿಕ ಮೈದಾನದಿಂದ ಆರಂಭವಾದ ಜಾಥಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್‍ಕುಮಾರ ಚಾಲನೆ ನೀಡಿದ್ದರು.

    ಲಕ್ಷ ವೃಕ್ಷೋತ್ಸವ ಜಾಥಾ ಸಮಯದಲ್ಲಿ ಬಾಲಕನೊಬ್ಬನ ಶೂ ಲೇಸ್ ಬಿಚ್ಚಿತ್ತು. ಇದನ್ನು ಗಮಿನಿಸಿದ ಗವಿ ಸಿದ್ದೇಶ್ವರ ಶ್ರೀಗಳು, ಬಾಲಕ ಬಳಿಗೆ ಬಂದು ಶೂ ಲೇಸ್ ಕಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶ್ರೀಗಳ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ವೃಕ್ಷ ಸಂಕಲ್ಪ ಜಾಗೃತಿ ಅಭಿಯಾನದಲ್ಲಿ ವಿವಿಧ ಶಾಲೆ ಹಾಗೂ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೆರವಣಿಗೆಯು ಸಾರ್ವಜನಿಕ ಮೈದಾನದಿಂದ ಅಶೋಕ ಸರ್ಕಲ್, ಜವಾಹರ್ ರಸ್ತೆ, ಗಡಿಯಾರ ಕಂಭ, ಶಾರದಾ ಚಿತ್ರಮಂದಿರವಾಗಿ ಸಾಗಿ ಗವಿಮಠದ ಮಹಾದಾಸೋಹ ಭವನ ತಲುಪಿತು.

    ಲಕ್ಷವೃಕ್ಷೋತ್ಸವ ಎಂಬ ಜಾಥಾ ನಡಿಗೆ ಕಾರ್ಯಕ್ರಮದ ನಿಮಿತ್ತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಆಯ್ಕೆಯಾಗಿ ಪ್ರಥಮ, ದ್ವೀತಿಯ, ಹಾಗೂ ತೃತಿಯ ಸ್ಥಾನ ಪಡೆದ ಪ್ರೌಢ ಶಾಲಾ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಸಣ್ಣ ನೀರಾವರಿ ಮತ್ತು ಕೆರೆಯ ಅಭಿವೃದ್ಧಿ ಪ್ರಾಧಿಕಾರ, ಖಾಸಗಿ ಶಾಲಾ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಯ ಅಧಿಕಾರಿಗಳು, ಶಿಕ್ಷಕವೃಂದ, ಸಿಬ್ಬಂದಿವರ್ಗ ಮತ್ತು ಇತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.