Tag: ಸಿದ್ದೇಗೌಡ

  • ತರ್ಲೆ ವಿಲೇಜ್ ನಿರ್ದೇಶಕ ‘ಕುಂಟೆಬಿಲ್ಲೆ’ ಆಡಲು ಶುರು

    ತರ್ಲೆ ವಿಲೇಜ್ ನಿರ್ದೇಶಕ ‘ಕುಂಟೆಬಿಲ್ಲೆ’ ಆಡಲು ಶುರು

    ಮೊದಲು ದಕ್ಷ ಯಜ್ಞ, ತರ್ಲೆ ವಿಲೇಜ್, ಋತುಮತಿ ಚಿತ್ರ ಗಳನ್ನು ನಿರ್ದೇಶನ ಮಾಡಿದ್ದ ಸಿದ್ದೇಗೌಡ (Siddegowda) ಜಿ.ಬಿ‌.ಎಸ್.  ಅವರು ಕುಂಟೆಬಿಲ್ಲೆ (Kuntebille) ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಯುವ ನಟ ಯದು ಮೊದಲ ಬಾರಿಗೆ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ‌. ಹತ್ತಕ್ಕೂ ಹೆಚ್ಚು ಚಿತ್ರ ಮಾಡಿರುವ ಮೇಘ ಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪೋಷಕ ಪಾತ್ರಗಳಲ್ಲಿ ಕಿಶೋರ್, ಪವಿತ್ರ ಲೋಕೇಶ್, ಶಂಕರ್ ಅಶ್ವಥ್, ಚಂದ್ರಪ್ರಭ ಮೊದಲಾದವರು ನಟಿಸಲಿದ್ದಾರೆ.

    ನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ಕುಂಟೆಬಿಲ್ಲೆ‌. ಅದೇ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಕಟ್ಟಿಕೊಡಲಿದ್ದೇವೆ ಎಂದು ನಿರ್ದೇಶಕ ಸಿದ್ದೇಗೌಡ ತಿಳಿಸಿದರು. ನಿರ್ಮಾಪಕ ಎಸ್.ಬಿ. ಶಿವು ಮಾತನಾಡಿ, ಜೀವಿತ ಕ್ರಿಯೇಷನ್ ನಿಂದ ಒಳ್ಳೆಯ ಸಿನಿಮಾ ಮಾಡಿದ್ದೇವೆ. ಯದು ಹೊಸ ಪ್ರತಿಭೆ ಆಗಿದ್ದು ಅವರನ್ನೇ ನಾಯಕರನ್ನಾಗಿ ಮಾಡಿಕೊಂಡಿದ್ದೇವೆ ಎಂದರು.

    ಮತ್ತೊಬ್ಬ ನಿರ್ಮಾಪಕ ಕುಮಾರ್ ಗೌಡ ಅವರು ಮಾತನಾಡಿ, ನಿರ್ಮಾಣ ಕ್ಷೇತ್ರ ನನಗೆ ಹೊಸದು. 30 ವರ್ಷದ ಹಿಂದೆ ನಾನೊಬ್ಬ ಕಲಾವಿದ ಆಗಬೇಕು ಎಂದು ಬೆಂಗಳೂರಿಗೆ ಹೋಗಿದ್ದವನು‌. ಆದರೆ ಅದು ಸಾಧ್ಯವಾಗಿರಲಿಲ್ಲ‌. ಈಗ ಅದನ್ನು ನನ್ನ ಮಗನ ಮೂಲಕ ಈಡೇರಿಸಿಕೊಳ್ಳುತ್ತಿದ್ದೇನೆ. ನನ್ನ ಮಗನಿಗೆ ರಂಗಭೂಮಿ ಕಡೆಗೆ ಆಸಕ್ತಿ ಇತ್ತು . ಇದೀಗ ವಿದ್ಯಾಭ್ಯಾಸ ಮುಗಿಸಿ ನಟನೆ ಕಡೆಗೆ ಬರುತ್ತಿದ್ದಾನೆ. ಈಗ ನಾನೇ ಮುಂದೆ ನಿಂತು ನಿರ್ದೇಶಕ ಸಿದ್ದೇಗೌಡ ಅವರ ಗರಡಿಗೆ ಬಿಟ್ಟಿದ್ದೇವೆ. ನನ್ನ ಮಗನಿಗೆ ಹೊಂದುವಂತ ಒಳ್ಳೆಯ ಕತೆ ಇದೆ. ಸಿನಿಮಾ ಚೆನ್ನಾಗಿ ಮೂಡಿಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು‌.

    ಮೇಘಶ್ರೀ ಮಾತಿಗಿಳಿದು, ಟೈಟಲ್ ನಷ್ಟೇ ಸ್ಕ್ರಿಪ್ಟ್ ಕೂಡ ಚೆನ್ನಾಗಿದೆ. ಕನ್ನಡದಲ್ಲಿ ಈ ರೀತಿಯ ಸ್ಟೋರಿ ಕೇಳಿರಲಿಲ್ಲ. ಒಳ್ಳೆಯ ತಂಡ ಸಿಕ್ಕಿದ್ದು, ನಾನು ಹಳ್ಳಿಯೊಂದರ ಶ್ರೀಮಂತ ಕುಟುಂಬದ ಹುಡುಗಿಯ ಪಾತ್ರ ಮಾಡಲಿದ್ದೇನೆ ಎಂದರು. ನಾಯಕ ಯದು ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ‌. ಆ ನಿಟ್ಟಿನಲ್ಲಿ ಪಾತ್ರ ಮಾಡುವೆ ಎಂದರು. ಹಿರಿಯ ನಟ ಶಂಕರ್ ಅಶ್ವಥ್ ಮಾತನಾಡಿ, ಅಕ್ಷಯ ತೃತೀಯ ದಿನದಂದು ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ‌. ಅದೇ ರೀತಿ ಈ ಚಿತ್ರಕ್ಕೂ ಒಳ್ಳೆಯದಾಗಲಿ. ನನ್ನದು ನಾಯಕಿಯ ತಂದೆ ಪಾತ್ರ‌. ಒಂದು ಗ್ರಾಮೀಣ ಆಟ ಜೀವನದಲ್ಲಿ ಎಷ್ಟು ಮುಖ್ಯ ಆಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದಾರೆ‌. ವಿಭಿನ್ನ ಮತ್ತು ಕುತೂಹಲಕಾರಿ ಚಿತ್ರ ಇದಾಗಿರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಸಂಭಾಷಣೆ ಬರೆದಿರುವ ಮಧು ಮಾತನಾಡಿ ನಾನು ಪ್ರತಿ ಸಿನಿಮಾಗೆ ಬರೆಯುವಾಗಲೂ ಹೊಸದಾಗಿಯೇ ಬರೆಯುತ್ತೇನೆ.  ಈ ಚಿತ್ರದ ಕಥೆ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಸಂಭಾಷಣೆ ಬರೆದಿದ್ದೇನೆ. ಹಳ್ಳಿಯ ನೈಜ ಘಟನೆಗಳು ಇಲ್ಲಿ ಇವೆ ಎಂದು ತಿಳಿಸಿದರು.

  • ಅಣ್ಣ ಬಹಳ ಕಷ್ಟಪಟ್ಟಿದ್ದಾನೆ, ನಾವ್ಯಾವತ್ತೂ ವಿಧಾನಸೌಧಕ್ಕೆ ಹೋಗಲ್ಲ: ಸಿದ್ದರಾಮಯ್ಯ ಸಹೋದರ

    ಅಣ್ಣ ಬಹಳ ಕಷ್ಟಪಟ್ಟಿದ್ದಾನೆ, ನಾವ್ಯಾವತ್ತೂ ವಿಧಾನಸೌಧಕ್ಕೆ ಹೋಗಲ್ಲ: ಸಿದ್ದರಾಮಯ್ಯ ಸಹೋದರ

    ಮೈಸೂರು: ಈ ಬಾರಿಯೂ ನಮ್ಮ ಅಣ್ಣ ಬಹಳ ಒಳ್ಳೆಯ ಆಡಳಿತ ಮಾಡುತ್ತಾರೆ. ನಮ್ಮ ಅಣ್ಣ ಬಡವರ ಪರ. ನಾವು ಕುಟುಂಬದವರು ಯಾವತ್ತೂ ನಮ್ಮ ಅಣ್ಣನ ಆಡಳಿತದ ಹತ್ತಿರ ಹೋಗಲ್ಲ ಎಂದು ಸಿದ್ದರಾಮಯ್ಯ (Siddaramaiah) ಸಹೋದರ ಸಿದ್ದೇಗೌಡ (Siddegowda)ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮ್ಮ ಅಣ್ಣ ಈ ಸ್ಥಾನಕ್ಕೆ ಬರಲು ಬಹಳ ಕಷ್ಟಪಟ್ಟಿದ್ದಾನೆ. ನಾನು ಅನಕ್ಷರಸ್ಥ. ನಾನು ಏನೂ ಅಂತಾ ಅವನ ಬಳಿ ಹೋಗಿ ಕೇಳಲಿ. ನಾವು ಸಹೋದರರು ಯಾವತ್ತೂ ಫೋನ್ ನಲ್ಲೂ ಮಾತಾಡಲ್ಲ ಎಂದರು. ಇದನ್ನೂ ಓದಿ: Exclusive – ಮತ್ತೆ ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್‌ ಡಿಸಿಎಂ

    ಏನಾದ್ರೂ ಇದ್ದರೆ ಮನೆಗೆ ಹೋಗಿ ಮಾತಾಡಿ ಬರ್ತಿವಿ. ವಿಧಾನಸೌಧ (Vidhanasoudha) ಕ್ಕೆ ಹೋಗೋ ಅಭ್ಯಾಸವೂ ನಮಗೆ ಇಲ್ಲ ಎಂದು ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ ಹೇಳಿದ್ದಾರೆ.

     ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್‌ (DK Shivakumar) ನಡುವಿನ ಕುರ್ಚಿ ಕದನ ಬಹುತೇಕ ಅಂತ್ಯವಾಗಿದ್ದು, ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ (Chief Minister) ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ.