Tag: ಸಿದ್ದು ಜೊನ್ನಲಗಡ್ಡ

  • ವಿಜಯ್ ದೇವರಕೊಂಡ ಚಿತ್ರದ ಜೊತೆ ಜೊತೆಗೆ ಒಟಿಟಿ ಬರಲಿದೆ ಟಿಲ್ಲು ಸ್ಕ್ವೇರ್

    ವಿಜಯ್ ದೇವರಕೊಂಡ ಚಿತ್ರದ ಜೊತೆ ಜೊತೆಗೆ ಒಟಿಟಿ ಬರಲಿದೆ ಟಿಲ್ಲು ಸ್ಕ್ವೇರ್

    ದೇ ಮಾರ್ಚ್ 29ರಂದು ವಿಶ್ವದ್ಯಾಂತ ಬಿಡುಗಡೆ ಆಗಿ ಭಾರೀ ಹವಾ ಕ್ರಿಯೇಟ್ ಮಾಡಿದ್ದ ಸಿದ್ದು ಜೊನ್ನಲಗಡ್ಡ (Siddu Jonnalagadda) ಹಾಗೂ ಅನುಪಮಾ ಪರಮೇಶ್ವರ್ ಕಾಂಬಿನೇಷನ್ ನ ಟಿಲ್ಲು ಸ್ಕ್ವೇರ್ ಸಿನಿಮಾ ಏಪ್ರಿಲ್ 26ರಂದು ಒಟಿಟಿಗೆ (Ott) ಬರಲಿದೆ. ಅಂದೇ ವಿಜಯ್ ದೇವರಕೊಂಡ ಅಭಿನಯದ ದಿ ಫ್ಯಾಮಿಲಿ ಸ್ಟಾರ್ ಕೂಡ ಒಟಿಟಿಯಲ್ಲಿ ಇರಲಿದೆ.

    ನಾನಾ ಕಾರಣಗಳಿಂದಾಗಿ ಟಿಲ್ಲು ಸ್ಕ್ವೇರ್ ಸುದ್ದಿಯಲ್ಲಿತ್ತು. ಕನ್ನಡವೂ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟಿ ಅನುಪಮಾ ಪರಮೇಶ್ವರನ್  (Anupama Parameswaran) ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರ ಮಾಡಿದ್ದರು. ಸಿದ್ದು ಜೊನ್ನಲಗಡ್ಡ ಜೊತೆಯಾಗಿ ನಟಿಸಿರುವ ಅನುಪಮಾ ಅಭಿಮಾನಿಗಳಿಗೆ ಮತ್ತೇರಿಸುವಂತ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.

    ಬೋಲ್ಡ್ ಪಾತ್ರಗಳಲ್ಲಿ ಮಾಡಲ್ಲ ಅಂತಿದ್ದ ಈ ನಟಿ ಟಿಲ್ಲು ಸ್ಕ್ವೇರ್ (Tillu Square) ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಜೊತೆಗೆ ಲಿಪ್ ಲಾಕ್ (Lip Lock) ಕೂಡ ಮಾಡಿದ್ದರು. ಈ ಹಿಂದೆ ರೌಡಿ ಬಾಯ್ಸ್ ಸಿನಿಮಾದಲ್ಲಿ ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರೂ, ಅಭಿಮಾನಿಗಳಿಗೆ ಅಷ್ಟೇನೂ ಅವು ಮತ್ತೇರಿಸಿರಲಿಲ್ಲ.

     

    ಟಿಲ್ಲು ಸ್ಕ್ವೇರ್ ಸ್ವೀಕೆಲ್ ಸಿನಿಮಾ. ಈ ಹಿಂದೆ 2022ರಲ್ಲಿ ಬಿಡುಗಡೆಯಾಗಿದ್ದ ಡಿಜೆ ಟಿಲ್ಲು ಸಿನಿಮಾದ ಮುಂದುವರೆದ ಭಾಗ ಇದಾಗಿತ್ತು.  ಟಿಲ್ಲು ಸ್ಕ್ವೇರ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿ, ಅನುಪಮಾ ಅಚ್ಚರಿ ಎನ್ನುವಂತೆ ಬೋಲ್ಡ್ ಸ್ಟೆಪ್ ಇಟ್ಟಿದ್ದರು.  ಈ ಸಿನಿಮಾವನ್ನು ಮಲ್ಲಿಕ್ ರಾಮ್ ನಿರ್ದೇಶನ ಮಾಡಿದ್ದು, ಸೂರ್ಯದೇವರ ನಾಗ್ ವಂಶಿ ನಿರ್ಮಾಣ ಮಾಡಿದ್ದಾರೆ.

  • ಲಿಪ್‌ಲಾಕ್‌ ಮಾಡಿದ್ಮೇಲೆ ಬದಲಾಯ್ತು ಲಕ್-‌ ಅನುಪಮಾಗೆ ಬಂಪರ್‌ ಆಫರ್ಸ್

    ಲಿಪ್‌ಲಾಕ್‌ ಮಾಡಿದ್ಮೇಲೆ ಬದಲಾಯ್ತು ಲಕ್-‌ ಅನುಪಮಾಗೆ ಬಂಪರ್‌ ಆಫರ್ಸ್

    ನ್ನಡದ ‘ನಟಸಾರ್ವಭೌಮ’ ನಾಯಕಿ ಅನುಪಮಾ ಪರಮೇಶ್ವರನ್ (Anupama Parameshwaran) ಇದೀಗ ಭಾರೀ ಬೇಡಿಕೆಯಲ್ಲಿದ್ದಾರೆ. ‘ಟಿಲ್ಲು ಸ್ಕ್ವೇರ್’ (Tillu Square) ರಿಲೀಸ್ ಆದ್ಮೇಲೆ ಪಡ್ಡೆಹುಡುಗರ ಕ್ರಶ್ ಕ್ವೀನ್ ಆಗಿದ್ದಾರೆ. ಮಡಿವಂತಿಗೆ ಬಿಟ್ಟು ಕೊಂಚ ಬೋಲ್ಡ್ ಆಗಿರುವ ಅನುಪಮಾಗೆ ಟಾಲಿವುಡ್‌ನಲ್ಲಿ ಭಾರೀ ಅವಕಾಶಗಳು ಅರಸಿ ಬರುತ್ತಿವೆ.

    ಲಿಪ್‌ಲಾಕ್ ಮಾಡಲ್ಲ, ಹಸಿಬಿಸಿ ದೃಶ್ಯಗಳಲ್ಲಿ ನಟಿಸಲ್ಲ ಎಂದು ಶಪಥ ಮಾಡಿದ್ದ ನಟಿ ಈಗ ಬದಲಾಗಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬಂತೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ನಟಿ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ.

    ಶ್ರೀಲೀಲಾ (Sreeleela) ನಟಿಸಲ್ಲ ಎಂದು ಕೈಬಿಟ್ಟಿದ್ದ ಈ ಸಿನಿಮಾ ಅನುಪಮಾ ಪಾಲಿಗೆ ವರವಾಗಿದೆ. ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ಹೀರೋ ಸಿದ್ದು ಜೊತೆ ಮೈ ಚಳಿ ಬಿಟ್ಟು ನಟಿಸಿದ್ದೇ ನಟಿಸಿದ್ದು, ಅನುಪಮಾ ಪಡ್ಡೆಹುಡುಗರ ಇಷ್ಟದೇವತೆಯಾಗಿದ್ದಾರೆ. ಇದನ್ನೂ ಓದಿ:‘ದೇವರ’ ಸಿನಿಮಾಗಾಗಿ ಜ್ಯೂ.ಎನ್‌ಟಿಆರ್‌ಗೆ ಸಾಥ್ ಕೊಟ್ಟ ಕರಣ್ ಜೋಹರ್

    ಮಾರ್ಚ್ 29ರಂದು ರಿಲೀಸ್ ಆಗಿದ್ದ ‘ಟಿಲ್ಲು ಸ್ಕ್ವೇರ್’ ಸಿನಿಮಾ 90 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಹಿಟ್ ಸೇರಿದೆ. ಇದರಿಂದ ಮತ್ತೆ ಟಾಪ್ ನಟಿಯರ ರೇಸ್‌ನಲ್ಲಿದ್ದಾರೆ ಅನುಪಮಾ. ಈ ಚಿತ್ರದ ನಂತರ ಅನುಪಮಾಗೆ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಿಂದ ನಾಯಕಿಯಾಗಿ ನಟಿಸಲು ಆಫರ್ ಸಿಗುತ್ತಿದೆಯಂತೆ. ಸದ್ಯದಲ್ಲೇ ಹೊಸ ಸಿನಿಮಾಗಳ ಅಪ್‌ಡೇಟ್ ನೀಡಲಿದ್ದಾರೆ ಪ್ರೇಮಂ ನಟಿ.

    ಅಂದಹಾಗೆ, 2019ರಲ್ಲಿ ನಟಸಾರ್ವಭೌಮ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದರು. ಮೊದಲ ಚಿತ್ರದಲ್ಲೇ ಕನ್ನಡಿಗರ ಮನಗೆದ್ದಿದ್ದರು. ಮತ್ತೆ ಅದ್ಯಾವಾಗ ಅನುಪಮಾ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ಜ್ಯೂ.ಎನ್‌ಟಿಆರ್ ಜೊತೆ ಸಿದ್ದು- ಹೊಸ ಚಿತ್ರದ ಬಗ್ಗೆ ಸುಳಿವು ಕೊಟ್ರಾ?

    ಜ್ಯೂ.ಎನ್‌ಟಿಆರ್ ಜೊತೆ ಸಿದ್ದು- ಹೊಸ ಚಿತ್ರದ ಬಗ್ಗೆ ಸುಳಿವು ಕೊಟ್ರಾ?

    ಟಾಲಿವುಡ್ ನಟ ಸಿದ್ದು ಜೊನ್ನಲಗಡ್ಡ (Siddu Jonnalagadda) ಸದ್ಯ ‘ಟಿಲ್ಲು ಸ್ಕ್ವೇರ್’ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದೀಗ ಜ್ಯೂ.ಎನ್‌ಟಿಆರ್ (Jr.Ntr) ಜೊತೆಗಿನ ಸಿದ್ದು ಫೋಟೋ ಶೇರ್ ಮಾಡಿದ್ದಾರೆ. ಹಾಗಾದ್ರೆ ಇಬ್ಬರೂ ಜೊತೆಯಾಗಿ ಹೊಸ ಸಿನಿಮಾ ಮಾಡ್ತಾರಾ? ಇಲ್ಲಿದೆ ಮಾಹಿತಿ.

    ಸಿದ್ದು ಮತ್ತು ಅನುಪಮಾ (Anupama Parameshwaran) ನಟನೆಯ ‘ಟಿಲ್ಲು ಸ್ಕ್ವೇರ್’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತ ಜ್ಯೂ.ಎನ್‌ಟಿಆರ್ ‘ದೇವರ’ ಚಿತ್ರದ ಶೂಟಿಂಗ್ ಬ್ರೇಕ್ ಕೊಟ್ಟು ‘ಟಿಲ್ಲು ಸ್ಕ್ವೇರ್’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಿದ್ದು ಸಿನಿಮಾಗೆ ಭೇಷ್ ಎಂದಿದ್ದಾರೆ.

     

    View this post on Instagram

     

    A post shared by Siddhu Jonnalagadda (@siddu_buoy)

    ಜ್ಯೂ.ಎನ್‌ಟಿಆರ್ ಒಬ್ಬರೇ ಅಲ್ಲ, ವಿಶ್ವಕ್ ಸೇನ್ ಕೂಡ ಸೆಲೆಬ್ರೆಟಿ ಪ್ರಿಮಿಯರ್‌ನಲ್ಲಿ ಭಾಗಿಯಾಗಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಜ್ಯೂ.ಎನ್‌ಟಿಆರ್ ಜೊತೆಗಿನ ಫೋಟೋ ಶೇರ್ ಮಾಡಿ ಬಿಗ್ ಸರ್ಪ್ರೈಸ್ ಸದ್ಯದಲ್ಲೇ ಸಿಗಲಿದೆ ಎಂದು ಸಿದ್ದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಜಾಜಿ’ ಆಲ್ಬಂ ಸಾಂಗ್ ರಿಲೀಸ್ ಮಾಡಿದ ದರ್ಶನ್

    ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ತಾರಕ್ ಜೊತೆ ಸಿದ್ದು ಹೊಸ ಸಿನಿಮಾ ಮಾಡ್ತಿದ್ದಾರಾ? ಎಂಬ ಗುಸು ಗುಸು ಶುರುವಾಗಿದೆ. ಇನ್ನೂ ಕೆಲವರು ‘ಟಿಲ್ಲು ಸ್ಕ್ವೇರ್’ ಸಿನಿಮಾ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗುತ್ತಿದ್ದಾರೆ ಎಂದು ಕೂಡ ಸುದ್ದಿ ಹಬ್ಬಿದೆ. ಅಸಲಿಗೆ ಯಾವುದು ನಿಜ? ಎಂಬುದನ್ನು ಕಾದುನೋಡಬೇಕಿದೆ.

    ‘ಟಿಲ್ಲು ಸ್ಕ್ವೇರ್’ ಸಿನಿಮಾ ಇದೇ ಮಾರ್ಚ್ 29ರಂದು ರಿಲೀಸ್ ಆಗಿದ್ದು, ಇದೀಗ 100 ಕೋಟಿ ರೂ. ಕ್ಲಬ್ ಸೇರುವತ್ತ ದಾಪುಗಾಲಿಡುತ್ತಿದೆ.

  • ‘ಓ ಮೈ ಲಿಲ್ಲಿ’ ಎಂದು ಅನುಪಮಾ ಜೊತೆ ಸಿದ್ದು ಡ್ಯುಯೇಟ್

    ‘ಓ ಮೈ ಲಿಲ್ಲಿ’ ಎಂದು ಅನುಪಮಾ ಜೊತೆ ಸಿದ್ದು ಡ್ಯುಯೇಟ್

    ಟಾಲಿವುಡ್‌ನ ಸದ್ಯದ ಬ್ಯೂಟಿಫುಲ್ ಜೋಡಿ ಅಂದರೆ ಅನುಪಮಾ ಪರಮೇಶ್ವರನ್- ಸಿದ್ದು ಜೊನ್ನಲಗಡ್ಡ (Siddu Jonnalagadda) ಪೇರ್. ‘ಟಿಲ್ಲು ಸ್ಕ್ವೇರ್’ (Tillu Square) ಚಿತ್ರ ಇಬ್ಬರೂ ಸದ್ದು ಮಾಡ್ತಿದ್ದಾರೆ. ಸದ್ಯ ‘ಓ ಮೈ ಲಿಲ್ಲಿ’ (Oh My Lily) ಅಂತ ಅನುಪಮಾ ಜೊತೆ ಸಿದ್ದು ರೊಮ್ಯಾನ್ಸ್ ಮಾಡಿದ್ದಾರೆ.

    ‘ಟಿಲ್ಲು ಸ್ಕ್ವೇರ್’ ಸಿನಿಮಾ ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದೆ. ಕೆಲ ದಿನಗಳ ಹಿಂದೆ ಟ್ರೈಲರ್‌ನಿಂದ ಎಲ್ಲರ ಗಮನ ಸೆಳೆದಿತ್ತು. ಈಗ ರೊಮ್ಯಾಂಟಿಕ್ ಸಾಂಗ್‌ನಿಂದ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ. ಸಿದ್ದು ಜೊತೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಅನುಪಮಾ (Anupama Parameshwaran) ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಜೊತೆಯಾಗಿ ಕಾಣಿಸಿಕೊಂಡ್ರು ಉಪೇಂದ್ರ, ಶಿಲ್ಪಾ ಶೆಟ್ಟಿ, ಧ್ರುವ, ಮಾಲಾಶ್ರೀ- ಏನು ಸಮಾಚಾರ?

    ‘ಓ ಮೈ ಲಿಲ್ಲಿ’ ಸಾಂಗ್ ರಿಲೀಸ್ ಆಗಿದೆ. ಸಿದ್ದು- ಅನುಪಮಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಜೊತೆಯಾಗಿ ತುಣುಕು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಪಡ್ಡೆಹುಡುಗರೆಲ್ಲಾ ಲಿಲ್ಲಿ ಗುಂಗಲ್ಲಿದ್ದಾರೆ. ಶ್ರೀರಾಮ್ ಚಂದ್ರಾ ಹಾಡಿಗೆ ಧ್ವನಿಯಾಗಿದ್ದಾರೆ. ಇದೇ ಮಾರ್ಚ್ 29ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

     

    View this post on Instagram

     

    A post shared by Siddhu Jonnalagadda (@siddu_buoy)


    ಬೋಲ್ಡ್ ಪಾತ್ರಗಳಲ್ಲಿ ಮಾಡಲ್ಲ ಅಂತಿದ್ದ ಈ ನಟಿ ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದಾರೆ. ಜೊತೆಗೆ ಲಿಪ್ ಲಾಕ್ ಕೂಡ ಮಾಡಿದ್ದಾರೆ. ಈ ಹಿಂದೆ ‘ರೌಡಿ ಬಾಯ್ಸ್’ ಸಿನಿಮಾದಲ್ಲಿ ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರೂ, ಅಭಿಮಾನಿಗಳಿಗೆ ಅಷ್ಟೇನೂ ಅವು ಮತ್ತೇರಿಸಿರಲಿಲ್ಲ.

    ಟಿಲ್ಲು ಸ್ಕ್ವೇರ್ ಸ್ವೀಕೆಲ್ ಸಿನಿಮಾ. ಈ ಹಿಂದೆ 2022ರಲ್ಲಿ ಬಿಡುಗಡೆಯಾಗಿದ್ದ ‘ಡಿಜೆ ಟಿಲ್ಲು’ ಸಿನಿಮಾದ ಮುಂದುವರೆದ ಭಾಗ ಇದಾಗಿದೆ. ‘ಟಿಲ್ಲು ಸ್ಕ್ವೇರ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಅನುಪಮಾ ಅಚ್ಚರಿ ಎನ್ನುವಂತೆ ಬೋಲ್ಡ್ ಸ್ಟೆಪ್ ಇಟ್ಟಿದ್ದಾರೆ. ಈ ಸಿನಿಮಾವನ್ನು ಮಲ್ಲಿಕ್ ರಾಮ್ ನಿರ್ದೇಶನ ಮಾಡಿದ್ದು, ಸೂರ್ಯದೇವರ ನಾಗ್ ವಂಶಿ ನಿರ್ಮಾಣ ಮಾಡಿದ್ದಾರೆ.

    ಅನುಪಮಾ ಈ ಹಿಂದೆ ಈಗಲ್ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಬೆನ್ನಲ್ಲೆ ಟಿಲ್ಲು ಸ್ಕ್ವೇರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

  • ನಟಿ ಅನುಪಮಾ ‘ಲಿಪ್ ಲಾಕ್’ ಬಲು ದುಬಾರಿ

    ನಟಿ ಅನುಪಮಾ ‘ಲಿಪ್ ಲಾಕ್’ ಬಲು ದುಬಾರಿ

    ಕ್ಷಿಣದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಕಾರಿನಲ್ಲಿ ಕೂತುಕೊಂಡು ನಾಯಕ ನಟನ ಜೊತೆ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ಇದೊಂದು ದುಬಾರಿ ಲಿಪ್ ಲಾಕ್ ಎಂದು ಬಣ್ಣಿಸಲಾಗುತ್ತಿದೆ. ಕಾರಣ ಅನುಪಮಾ ಈ ಸಿನಿಮಾಗಾಗಿ ಡಬಲ್ ಸಂಭಾವನೆಯನ್ನು ಪಡೆದಿದ್ದಾರಂತೆ.

    ಸಾಮಾನ್ಯವಾಗಿ ಅನುಪಮಾ ಸಿನಿಮಾವೊಂದಕ್ಕೆ ಒಂದು ಕೋಟಿ ಅಥವಾ ಒಂದೂವರೆ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಸಿನಿಮಾಗಾಗಿ ಅವರು ಎರಡು ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರಂತೆ. ಕಾರಣ ಪಾತ್ರ ಸಖತ್ ಬೋಲ್ಡ್ ಆಗಿ ಇರುವುದೇ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಕನ್ನಡವೂ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟಿ ಅನುಪಮಾ ಪರಮೇಶ್ವರನ್  (Anupama Parameswaran)ಇದೀಗ ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಸಿದ್ದು ಜೊನ್ನಲಗಡ್ಡ ಜೊತೆಯಾಗಿ ನಟಿಸಿರುವ ಅನುಪಮಾ ಅಭಿಮಾನಿಗಳಿಗೆ ಮತ್ತೇರಿಸುವಂತ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

    ಬೋಲ್ಡ್ ಪಾತ್ರಗಳಲ್ಲಿ ಮಾಡಲ್ಲ ಅಂತಿದ್ದ ಈ ನಟಿ ಟಿಲ್ಲು ಸ್ಕ್ವೇರ್ (Tillu Square) ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದಾರೆ. ಜೊತೆಗೆ ಲಿಪ್ ಲಾಕ್ (Lip Lock) ಕೂಡ ಮಾಡಿದ್ದಾರೆ. ಈ ಹಿಂದೆ ರೌಡಿ ಬಾಯ್ಸ್ ಸಿನಿಮಾದಲ್ಲಿ ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರೂ, ಅಭಿಮಾನಿಗಳಿಗೆ ಅಷ್ಟೇನೂ ಅವು ಮತ್ತೇರಿಸಿರಲಿಲ್ಲ.

    ಟಿಲ್ಲು ಸ್ಕ್ವೇರ್ ಸ್ವೀಕೆಲ್ ಸಿನಿಮಾ. ಈ ಹಿಂದೆ 2022ರಲ್ಲಿ ಬಿಡುಗಡೆಯಾಗಿದ್ದ ಡಿಜೆ ಟಿಲ್ಲು ಸಿನಿಮಾದ ಮುಂದುವರೆದ ಭಾಗ ಇದಾಗಿದೆ.  ಟಿಲ್ಲು ಸ್ಕ್ವೇರ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಅನುಪಮಾ ಅಚ್ಚರಿ ಎನ್ನುವಂತೆ ಬೋಲ್ಡ್ ಸ್ಟೆಪ್ ಇಟ್ಟಿದ್ದಾರೆ.  ಈ ಸಿನಿಮಾವನ್ನು ಮಲ್ಲಿಕ್ ರಾಮ್ ನಿರ್ದೇಶನ ಮಾಡಿದ್ದು, ಸೂರ್ಯದೇವರ ನಾಗ್ ವಂಶಿ ನಿರ್ಮಾಣ ಮಾಡಿದ್ದಾರೆ.

     

    ಅನುಪಮಾ ಈ ಹಿಂದೆ ಈಗಲ್ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಬೆನ್ನಲ್ಲೆ ಟಿಲ್ಲು ಸ್ಕ್ವೇರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್ 29ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ.

  • ‘ಡಿಜೆ ಟಿಲ್ಲು’ ಹೀರೋ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

    ‘ಡಿಜೆ ಟಿಲ್ಲು’ ಹೀರೋ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

    ನ್ನಡದ ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ (Rashmika Mandanna) ಅವರು ತೆಲುಗು- ಬಾಲಿವುಡ್ ರಂಗದಲ್ಲಿ ಬ್ಯುಸಿಯಿದ್ದಾರೆ. ನಿತಿನ್ ಸಿನಿಮಾದಿಂದ ಹೊರ ನಡೆದ ಮೇಲೆ ಹೊಸ ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ನಟ ಸಿದ್ದು ಜೊತೆ ಕೂರ್ಗ್ ಚೆಲುವೆ ರಶ್ಮಿಕಾ ರೊಮ್ಯಾನ್ಸ್ ಮಾಡಲಿದ್ದಾರೆ.

    ಟಾಲಿವುಡ್‌ನಲ್ಲಿ ಶ್ರೀಲೀಲಾ (Sreeleela) ಹವಾ ಜೋರಾಗಿ ನಡೆಯುತ್ತಿದ್ದರು. ರಶ್ಮಿಕಾ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ಪ್ಯಾನ್ ಇಂಡಿಯಾ ನಾಯಕಿಗೆ ಈಗಲೂ ವಿಭಿನ್ನ ಕಥೆಗಳು ಅರಸಿ ಬರುತ್ತಿದೆ. ರಶ್ಮಿಕಾ ಮಂದಣ್ಣ ಅವರು ನಿತಿನ್ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣಕ್ಕೆ ಅವರು ಸಿನಿಮಾದಿಂದ ಹೊರ ನಡೆದರು. ರಶ್ಮಿಕಾ ಅವರು ಈಗ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ಈ ಪೈಕಿ ಅವರಿಗೆ ಒಂದು ಕಥೆ ಇಷ್ಟವಾಗಿದೆ. ಈ ಚಿತ್ರಕ್ಕೆ ಸಿದ್ದು ಜೊನ್ನಲಗಡ್ಡ (Siddu Jonnalagadda) ಅವರು ನಾಯಕನಾಗಿದ್ದು, ಫ್ಯಾಷನ್ ಸ್ಟೈಲೀಸ್ಟ್ ನೀರಜ ಕೋನ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾವಾಗಿದೆ. ಇದನ್ನೂ ಓದಿ:‘ಸಂಜು ವೆಡ್ಸ್ ಗೀತಾ 2’ ಸಿನಿಮಾವನ್ನು ಅಪ್ಪು ಬಾಸ್‌ಗೆ ಅರ್ಪಿಸಿದ ನಾಗಶೇಖರ್

    ಸಿದ್ದು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2019ರಲ್ಲಿ ಬಂದ ‘ಜೋಶ್’ ಚಿತ್ರದಲ್ಲಿ ಅವರು ಮುಖ್ಯ ಪಾತ್ರ ಒಂದನ್ನು ನಿರ್ವಹಿಸಿದ್ದರು. ‘ಎಲ್‌ಬಿಡಬ್ಲ್ಯೂ: ಲೈಫ್ ಬಿಫೋರ್ ವೆಡ್ಡಿಂಗ್’ ಚಿತ್ರದ ಮೂಲಕ ಅವರು ಹೀರೋ ಆದರು. ಕಳೆದ ವರ್ಷ ರಿಲೀಸ್ ಆದ ‘ಡಿಜೆ ಟಿಲ್ಲು’ ಸಿನಿಮಾ ಮೂಲಕ ಸಿದ್ದು ಯಶಸ್ಸು ಕಂಡರು. ಈಗ ಮೂರ್ನಾಲ್ಕು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ರಶ್ಮಿಕಾ ಜೊತೆಗಿನ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಹೀರೋ ಸಿದ್ದುಗಿಂತ ರಶ್ಮಿಕಾ ಅವರು ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

    ಸಿದ್ದು-ರಶ್ಮಿಕಾ ಇದೇ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡ್ತಿದ್ದಾರೆ. ತೆರೆಯ ಮೇಲೆ ನೋಡೋಕೆ ಇದು ಹೊಸ ಜೋಡಿಯಾಗಿದೆ. ಸಿದ್ದು- ರಶ್ಮಿಕಾ ಲವ್ ರೊಮ್ಯಾನ್ಸ್ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

    ರಶ್ಮಿಕಾ ಮಂದಣ್ಣ ಅವರು ಪುಷ್ಪ 2, ರೈನ್‌ಬೋ, ಅನಿಮಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ ಸಕ್ಸಸ್ ನಂತರ ಶ್ರೀವಲ್ಲಿಯನ್ನ ಪಾರ್ಟ್ 2ನಲ್ಲಿ ನೋಡೋಕೆ ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]