Tag: ಸಿದ್ದಾರೂಢ ಮಠ

  • ಸಿದ್ಧಾರೂಢ ಮಠದಲ್ಲಿ ಪೂಜೆಸಲ್ಲಿಸಲು ಹೋದ ಯುವಕ ಕೆರೆ ಪಾಲು

    ಸಿದ್ಧಾರೂಢ ಮಠದಲ್ಲಿ ಪೂಜೆಸಲ್ಲಿಸಲು ಹೋದ ಯುವಕ ಕೆರೆ ಪಾಲು

    ಹುಬ್ಬಳ್ಳಿ: ಶ್ರೀ ಸಿದ್ದಾರೂಢರ ಮಠದ ಕೆರೆಯಲ್ಲಿನ ಶ್ರೀ ಸಿದ್ದಾರೂಢರ ಹಾಗೂ ಶ್ರೀ ಗುರುನಾಥರೂಢರ ಮೂರ್ತಿಗೆ ಅಲಂಕಾರ ಹಾಗೂ ಪೂಜೆ ಸಲ್ಲಿಸಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

    ಉಮೇಶಪ್ಪ ಜಾಲಿಹಾಳ (22) ಮೃತ. ಈತ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ನಿವಾಸಿಯಾಗಿದ್ದಾನೆ. ಕಳೆದ 6 ವರ್ಷಗಳಿಂದ ಮಠದ ವಿದ್ಯಾರ್ಥಿನಿಯದಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ. ಸಿದ್ಧಾರೂಢ ಮಠದಲ್ಲಿ ಪೂಜೆಸಲ್ಲಿಸಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪಿದ್ದಾನೆ. ಇದನ್ನೂ ಓದಿ: ಯಾರೂ ತಿರುಕನ ಕನಸು ಕಾಣೋದು ಬೇಡ: ಆರ್. ಅಶೋಕ್

    ಇಂದು ಬೆಳಗ್ಗೆ ಮಠದ ಕೆರೆಯ ಮಧ್ಯದಲ್ಲಿರುವ ಸಿದ್ದಾರೂಢ ಹಾಗೂ ಗುರುನಾಥರೂಢ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಈಜಿಕೊಂಡು ಹೋಗಿದ್ದಾನೆ. ಆದರೆ ಕೆರೆಯಲ್ಲಿ ಆತನಿಗೆ ಕೈ ಸೋತು ಕೆರೆಯಲ್ಲಿ ಮುಳಗಿದ್ದಾನೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಎನ್ ಡಿ ಆರ್ ಎಫ್ ಸಿಬ್ಬಂದಿ ಕಾರ್ಯಚರಣೆ ನಡೆಸಿ ಯುವಕನ ಶವ ಹೊರ ತೆಗೆದಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಮುಂದಿನ ಚುನಾವಣೆಗೆ ಮೈತ್ರಿ ಮುಂದುವರಿಯುವ ಬಗ್ಗೆ ಚರ್ಚೆ ನಡೆದಿಲ್ಲ – ದೇವೇಗೌಡ

  • ಸಿದ್ದಾರೂಢ ಮಠದ ಶಂಕರಾನಂದ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ಸಿದ್ದಾರೂಢ ಮಠದ ಶಂಕರಾನಂದ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ಹಾವೇರಿ: ಹಾನಗಲ್ ತಾಲೂಕು ಹೋತನಹಳ್ಳಿ ಸಿದ್ದಾರೂಢ ಮಠದ ಶಂಕರಾನಂದ ಸ್ವಾಮೀಜಿ ಅವರು ಪ್ರಯಾಣಿಸುತ್ತಿದ್ದ ಕಾರು ಹಾನಗಲ್ ಕೋರ್ಟ್ ಕ್ರಾಸ್ ಬಳಿ ಅಪಘಾತಕ್ಕೀಡಾಗಿದೆ.

    ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದಲ್ಲಿದ್ದ ಸಿಮೆಂಟ್ ರಿಂಗ್‍ಗಳಿಗೆ ಡಿಕ್ಕಿ ಹೊಡೆದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಕಾರು ಚಾಲಕ ಮತ್ತು ಶಂಕರಾನಂದ ಸ್ವಾಮೀಜಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

    ಅಪಘಾತ ನಡೆದ ತಕ್ಷಣ ಸ್ಥಳೀಯರು ಸ್ವಾಮೀಜಿ ಹಾಗೂ ಚಾಲಕನ ಸಹಾಯಕ್ಕೆ ಬಂದಿದ್ದು, ಸದ್ಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸ್ವಾಮೀಜಿ ಮಠಕ್ಕೆ ತೆರಳಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಹುಬ್ಬಳ್ಳಿಯಲ್ಲಿ ಬಂಗಾರ ಸನ್ ಆಫ್ ಬಂಗಾರ ಮನುಷ್ಯ ಚಿತ್ರದ ಚಿತ್ರೀಕರಣ

    ಹುಬ್ಬಳ್ಳಿಯಲ್ಲಿ ಬಂಗಾರ ಸನ್ ಆಫ್ ಬಂಗಾರ ಮನುಷ್ಯ ಚಿತ್ರದ ಚಿತ್ರೀಕರಣ

    – ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಶಿವಣ್ಣ

    ಹುಬ್ಬಳ್ಳಿ: ನಗರದಲ್ಲಿರುವ ಸಿದ್ದಾರೂಢ ಮಠಕ್ಕೆ ನಟ ಶಿವರಾಜಕುಮಾರ್ ಇಂದು ಭೇಟಿ ನೀಡಿದ್ದಾರೆ. ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ಚಿತ್ರೀಕರಣ ವೇಳೆ ಮಠಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಸಿದ್ದಾರೂಢ ಸ್ವಾಮಿಯ ದರ್ಶನ ಪಡೆದ್ರು.

    ಇದೇ ವೇಳೆ ಮಾತನಾಡಿದ ಅವರು, ನಮ್ಮ ಕುಟುಂಬ ಅಪ್ಪಾಜಿ ಕಾಲದಿಂದಲೂ ಮಠಕ್ಕೆ ಭೇಟಿ ನೀಡುತ್ತಾ ಬಂದಿದೆ. ಆ ಪರಂಪರೆಯನ್ನು ನಾವು ಇಂದು ಮುಂದುವರೆಸುತ್ತಾ ಬಂದಿದ್ದೇವೆ ಅಂದ್ರು.

    ಹುಬ್ಬಳ್ಳಿಯನ್ನೇ ಆಯ್ಕೆ ಮಾಡಿದ್ದು ಯಾಕೆ?
    ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಬಹನಿರಿಕ್ಷಿತ ಚಿತ್ರ. ಯೋಗಿ ಜಿ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಚಿತ್ರದ ಚಿತ್ರೀಕರಣ ಬಹತೇಕ ಮುಕ್ತಾಯ ಹಂತ ತಲುಪಿದೆ. ಈಗಾಗಲೇ ಹಲವಾರು ಸುಂದರ ಲೋಕೆಷನ್‍ಗಳಲ್ಲಿ ಚಿತ್ರತಂಡ ಶೂಟಿಂಗ್ ನಡೆಸಿದೆ. ಚಿತ್ರದ ಹಾಡೊಂದರ ಚಿತ್ರೀಕರಣಕ್ಕಾಗಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯನ್ನು ಆಯ್ಕೆ ಮಾಡಿಕೊಂಡಿದೆ.

    ಇದು ಮೊದಲೇ ರೈತ ಪ್ರಧಾನ ಚಿತ್ರದವಾದ್ದರಿಂದ ಈ ಹಾಡನ್ನ ನಾಡಿನ ಅನ್ನದಾತನಿಗೆ ಚಿತ್ರತಂಡ ಅರ್ಪಿಸುತ್ತಿದೆಯಂತೆ. ಉಳುವಾ ಯೋಗಿ ಉಳಿಮೆ ಬಿಟ್ರೆ ಉಳಿಯೋರು ಯಾರು ಅನ್ನೋ ಸೆಂಟಿಮೆಂಟಲ್ ಸಾಹಿತ್ಯದೊಂದಿಗೆ ಹಾಡು ತಯಾರಾಗಿದೆ. ಹೀಗಾಗಿ ಹಾಡಿಗೆ ತಕ್ಕಂತೆ ಚಿತ್ರತಂಡ ಶೂಟಿಂಗ್ ಸ್ಪಾಟ್ ಗಳನ್ನ ಹುಡುಕಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಹಾಡಿನ ಚಿತ್ರೀಕರಣ ಮಾಡ್ಬೇಕು ಅಂದುಕೊಂಡು ಚಿತ್ರತಂಡ ಇವತ್ತು ಹುಬ್ಬಳ್ಳಿಗೆ ಆಗಮಿಸಿತ್ತು. ಅದರಂತೆ ಇಲ್ಲಿನ ಇತಿಹಾಸ ಪ್ರಸಿದ್ಧ ಸಿದ್ದಾರೂಢ ಮಠದಲ್ಲಿ ಹಾಡಿನ ಚಿತ್ರೀಕರಣ ನಡೆಯಿತು. ಉರಿಯುವ ಬಿಸಿಲನ್ನು ಲೆಕ್ಕಿಸದೇ ಶಿವಣ್ಣ, ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಲೇ ಅಂತಿಮ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

    ಮಠದ ಆವರಣದಲ್ಲಿ ಸುಮಾರು ಮೂರು ತಾಸುಗಳಿಗಿಂತಲೂ ಹೆಚ್ಚು ಹೊತ್ತು ಚಿತ್ರೀಕರಣದ ನಡೆಸಿದ ತಂಡ ಫುಲ್ ಏಂಜಾಯ್ ಮಾಡ್ತು. ಶಿವಣ್ಣರನ್ನು ನೊಡಲು ಜನ ಸಾಗರವೇ ಮಠದ ಆವರಣಕ್ಕೆ ಹರಿದು ಬಂದಿತ್ತು. ಅಷ್ಟೇ ಅಲ್ಲದೇ ಶಿವಣ್ಣ ಚಿತ್ರೀಕರಣದಲ್ಲಿ ತೊಡಗಿದ್ದರೆ ಇತ್ತ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಹೊಡೆಯುವ ಮೂಲಕ ಪ್ರೋತ್ಸಾಹ ನೀಡಿದರು.

    ಬೆಳಿಗ್ಗೆ 11 ಗಂಟೆಯಿಂದಲೇ ಚಿತ್ರೀಕರಣದಲ್ಲಿ ಭಾಗವಹಿಸಿದ ಶಿವಣ್ಣ ಅಭಿಮಾನಿಗಳ ಜೊತೆಗೆ ಸೆಲ್ಫಿಗೂ ಪೋಸ್ ಕೊಟ್ಟರು. ಇನ್ನು ತಮ್ಮ ನೆಚ್ಚಿನ ಕೋರಿಯೋಗ್ರಾಫರ್ ಹರ್ಷ ಶಿವಣ್ಣ ಹಾಡಿನ ನೇತೃತ್ವ ವಹಿಸಿದ್ದರು. ಹರ್ಷ ಜೊತೆಗೆ ನಿರ್ದೇಶಕ ಯೋಗಿ ಕೂಡಾ ಭಾಗವಹಿಸಿ ಶಿವಣ್ಣನಿಗೆ ಸಾಥ್ ನೀಡಿದರು.

    ಚಿತ್ರಿಕರಣದ ಬಳಿಕ ಮಾತನಾಡಿದ ನಿರ್ದೇಶಕ ಯೋಗಿ ಜಿ ರಾಜ್, ಇದು ನನ್ನ ಬಹು ನಿರೀಕ್ಷಿತ ಚಿತ್ರ. ಅಷ್ಟೆ ಅಲ್ಲದೆ ಶಿವಣ್ಣ ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ. ಈಗಾಗಾಲೇ ಚಿತ್ರದ ಚಿತ್ರಿಕರಣ ಮುಗಿದಿದ್ದು ಮುಂದಿನ ತಿಂಗಳು ಬಿಡುಗಡೆ ಮಾಡುವ ಪ್ಲಾನ್‍ನಲ್ಲಿದ್ದೇವೆ ಅಂದ್ರು.

    https://www.youtube.com/watch?v=y7fN3n73fS4

    https://www.youtube.com/watch?v=XODoKti5F0M