Tag: ಸಿದ್ದಲಿಂಗ ಶ್ರೀ

  • ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಕೊಡುವಂತೆ ಯಾರೂ ಆಗ್ರಹಿಸಬೇಡಿ: ಸಿದ್ದಲಿಂಗ ಸ್ವಾಮೀಜಿ

    ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಕೊಡುವಂತೆ ಯಾರೂ ಆಗ್ರಹಿಸಬೇಡಿ: ಸಿದ್ದಲಿಂಗ ಸ್ವಾಮೀಜಿ

    ತುಮಕೂರು: ಶ್ರೀ ಶಿವಕುಮಾರ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಕೊಡುವಂತೆ ಯಾರೂ ಆಗ್ರಹಿಸಬೇಡಿ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗಸ್ವಾಮಿಜಿಗಳು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶಸ್ತಿ ಕೊಡಿ ಎನ್ನುವ ಮಾತನ್ನು ಯಾರು ಕೂಡಾ ಆಡಬಾರದು. ಅದನ್ನ ಕೇಳಿ ಪಡೆಯುವ ಪ್ರಶ್ನೆ ಇಲ್ಲ. ಅದಾಗಿಯೇ ಬಂದದ್ದು ಅಮೃತಕ್ಕೆ ಸಮಾನ, ಕೇಳಿ ಬಂದಿದ್ದು ವಿಷಕ್ಕೆ ಸಮಾನ ಆದ್ದರಿಂದ ಬಾಯ್ಬಿಟ್ಟು ಕೇಳುವಂತಹ ಪ್ರಶ್ನೆಯೇ ಇಲ್ಲ ಎಂದರು. ಇದನ್ನೂ ಓದಿ: ಶೀಘ್ರವೇ ಕೋವಿಡ್-19 ಕಾಲರ್ ಟ್ಯೂನ್ ಬಂದ್?

    ಯಾರು ಕೇಳಲೇ ಬಾರದು ಅದರ ಬಗ್ಗೆ ಚರ್ಚೆ ಮಾಡಲೇಬಾರದು. ಶ್ರೀಗಳು ಭಾರತ ರತ್ನ ವನ್ನು ಮೀರಿರುವಂತವರು. ಅದು ಬಂದ ಕ್ಷಣಕ್ಕೆ ಅವರ ಗೌರವ ಹೆಚ್ಚುವಂತಹದ್ದಲ್ಲ. ಅದನ್ನ ನಾವು ಯಾರು ನಿರೀಕ್ಷೆ ಮಾಡಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಟ್ಟು 48 ಕೇಸ್ – ಬೆಂಗಳೂರು ಸಹಿತ 4 ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ಪ್ರಕರಣ

  • ಮಠದಲ್ಲಿ ಯಾರಿಗೂ ಕೊರೊನಾ ಪಾಸಿಟಿವ್ ಲಕ್ಷಣಗಳು ಇಲ್ಲ: ಸಿದ್ದಲಿಂಗ ಶ್ರೀ

    ಮಠದಲ್ಲಿ ಯಾರಿಗೂ ಕೊರೊನಾ ಪಾಸಿಟಿವ್ ಲಕ್ಷಣಗಳು ಇಲ್ಲ: ಸಿದ್ದಲಿಂಗ ಶ್ರೀ

    ತುಮಕೂರು: ಸಿದ್ದಗಂಗಾ ಮಠದಲ್ಲಿ ಯಾರಿಗೂ ಕೊರೊನಾ ಪಾಸಿಟಿವ್ ಲಕ್ಷಣಗಳು ಇಲ್ಲ ಎಂದು ಸಿದ್ದಲಿಂಗ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

    ಮಠದಲ್ಲಿ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಇದೆ ಎಂದು ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಖುದ್ದು ಸ್ಪಷ್ಟನೆ ನೀಡಿದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಆಂಧ್ರದಿಂದ ಬಂದ ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬುದಾಗಿ ಪ್ರಚಾರವಾಗಿತ್ತು. ಆ ವಿದ್ಯಾರ್ಥಿಯನ್ನ ಜಿಲ್ಲಾಡಳಿತ ಪರೀಕ್ಷೆ ನಡೆಸಿತು. ಆತನ ಪರೀಕ್ಷೆಯಲ್ಲಿ ಎಲ್ಲಾ ವರದಿಗಳು ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

    ಜೊತೆಗೆ ಆತನ ಬಿಲ್ಡಿಂಗ್‍ನಲ್ಲಿದ್ದ 120 ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗಿದೆ. ಆದರೆ ಯಾರಿಗೂ ಕೂಡ ಪಾಸಿಟಿವ್ ಲಕ್ಷಣಗಳು ಇಲ್ಲ. ಹೀಗಾಗಿ ಈ ಬಗ್ಗೆ ಯಾರು ಕೂಡ ಆತಂಕ ಪಡುವ ಅಥವಾ ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

  • ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿರ ಪೂರ್ವಾಶ್ರಮದ ಸಹೋದರ ಶಿವೈಕ್ಯ

    ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿರ ಪೂರ್ವಾಶ್ರಮದ ಸಹೋದರ ಶಿವೈಕ್ಯ

    ರಾಮನಗರ: ತುಮಕೂರಿನ ಸಿದ್ದಗಂಗಾ ಮಠದ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಪೂರ್ವಾಶ್ರಮದ ಸೋದರ ಬಿ.ಎಸ್.ಚಂದ್ರಶೇಖರಯ್ಯ (72) ಶಿವೈಕ್ಯರಾಗಿದ್ದಾರೆ.

    ಮಾಗಡಿ ತಾಲೂಕಿನ ಬಂಡೇಮಠ ಗ್ರಾಮದ ನಿವಾಸಿಯಾಗಿದ್ದ ಬಿ.ಎಸ್.ಚಂದ್ರಶೇಖರಯ್ಯ ಸಿದ್ದಗಂಗಾ ಶಿಕ್ಷಣ ಸಂಸ್ಥೆ ನೌಕರರಾಗಿ, ಬಂಡೇಮಠದ ಮ್ಯಾನೇಜರ್ ಆಗಿ ಸೇವೆಸಲ್ಲಿಸಿದ್ದರು. 10 ವರ್ಷದ ಹಿಂದೆ ನಿವೃತ್ತಿಗೊಂಡು ವ್ಯವಸಾಯ ಮಾಡಿಕೊಂಡಿದ್ದರು.

    ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನನ್ನು ಅಗಲಿದ್ದಾರೆ. ಮೃತ ಬಿ.ಎಸ್.ಚಂದ್ರಶೇಖರಯ್ಯರ ಅಂತ್ಯಕ್ರಿಯೆ ಬಂಡೇಮಠದ ತೋಟದಲ್ಲಿ ಶನಿವಾರ 12.30 ಕ್ಕೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

    ಮೃತರ ಅಂತ್ಯಕ್ರಿಯೆಯಲ್ಲಿ ತುಮಕೂರು ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಬಂಡೇಮಠದ ಬಸವಲಿಂಗಸ್ವಾಮೀಜಿ, ಗುಮ್ಮಸಂದ್ರ ಚಂದ್ರಶೇಖರ ಸ್ವಾಮೀಜಿ, ಜಡೇದೇವರ ಮಠದ ಹಿಮ್ಮಡಿ ಬಸವರಾಜ ಸ್ವಾಮೀಜಿ, ಬೆಟ್ಟಹಳ್ಳಿ ಚಂದ್ರಶೇಖರಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ ಎನ್ನಲಾಗಿದೆ.