Tag: ಸಿದ್ದರಾಯ್ಯ

  • ವರುಣಾದಿಂದಲೇ ತಂದೆ ಸ್ಪರ್ಧಿಸಲಿ ಎಂದ ಯತೀಂದ್ರ – ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ

    ವರುಣಾದಿಂದಲೇ ತಂದೆ ಸ್ಪರ್ಧಿಸಲಿ ಎಂದ ಯತೀಂದ್ರ – ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಕ್ಷೇತ್ರ ಯಾವುದು ಎನ್ನುವುದು ಇನ್ನೂ ಫೈನಲ್ ಆಗಿಲ್ಲ. ಆದರೆ ಪುತ್ರ ಯತೀಂದ್ರ ವರುಣಾದಿಂದಲೇ ತಂದೆ ಸ್ಪರ್ಧೆ ಮಾಡಲಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

    ಕೋಲಾರಾ? ವರುಣಾ ಈ ಪೈಕಿ ಯಾವುದನ್ನು ಆಯ್ಕೆ ಮಾಡಲಿ ಎಂಬ ಗೊಂದಲದಲ್ಲಿ ಸಿದ್ದರಾಮಯ್ಯ ಇದ್ದರೋ? ಅಥವಾ ವಿರೋಧಿಗಳು ಮತ್ತು ಹಿತಶತ್ರುಗಳ ದಾರಿ ತಪ್ಪಿಸಲು ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೋ ಎನ್ನುವುದು ಗೊತ್ತಾಗುತ್ತಿಲ್ಲ. ಹೀಗಾಗಿ ಈಗ ಎಲ್ಲರೂ ಸಿದ್ದರಾಮಯ್ಯ ನಿಮ್ಮ ಕ್ಷೇತ್ರ ಯಾವುದಯ್ಯ ಎಂದು ಕೇಳುವಂತಾಗಿದೆ.

    ನಮ್ಮಪ್ಪ ವರುಣಾದಿಂದಲೇ ಸ್ಪರ್ಧೆ ಮಾಡಲಿ. ಕೋಲಾರ ಸೇರಿ ಹಲವು ಕ್ಷೇತ್ರಗಳು ಸಿದ್ದರಾಮಯ್ಯಗೆ ಸೇಫ್ ಇರಬಹುದು. ಆದರೆ ವರುಣಾದಿಂದಲೇ ಕಣಕ್ಕಿಳಿಯಲಿ ಎನ್ನುವುದು ನನ್ನಾಸೆ. ನಮ್ಮಪ್ಪ ವರುಣಾದಿಂದ ಕಣಕ್ಕಿಳಿದರೆ ನಾನು ಬೇರೆ ಕಡೆಯಿಂದ ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ಯತೀಂದ್ರ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 15 ಸಾವಿರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

    ತಾನು ವರುಣಾದಿಂದ ಕಣಕ್ಕಿಳಿದರೆ ಯತೀಂದ್ರ ರಾಜಕೀಯ ಭವಿಷ್ಯ ಮಸುಕಾಗಬಹುದು ಎಂಬ ಆತಂಕವೂ ಸಿದ್ದರಾಮಯ್ಯನವರಿಗೆ ಇದ್ದಂತೆ ಕಾಣುತ್ತಿದೆ. ಮತ್ತೊಂದು ಕಡೆ ಕೋಲಾರದಲ್ಲಿ ಸಿದ್ದರಾಮಯ್ಯ ಆಪ್ತ ಬಳಗ ಬೂತ್ ಮಟ್ಟದಲ್ಲಿ ಸರ್ವೇ ಕಾರ್ಯ ನಡೆಸುತ್ತಿದೆ. ಈ ಬೆಳವಣಿಗೆಗಳ ಬಗ್ಗೆ ಯತೀಂದ್ರ ಟೀಂ ಕಣ್ಣಿಟ್ಟಿರುವುದು ಸಿದ್ದರಾಮಯ್ಯ ಆಪ್ತರ ಅಸಮಾಧಾನಕ್ಕೆ ಕಾರಣವಾಗಿದೆ.

    ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಬಳಿಯೇ ಅಸಮಾಧಾನ ತೋಡಿಕೊಂಡಿದ್ದಾರಂತೆ. ಆದರೆ ಯತೀಂದ್ರ ಜೊತೆ ಹೊಂದಿಕೊಂಡು ಹೋಗ್ರಪ್ಪ ಎಂದು ಸಿದ್ದರಾಮಯ್ಯ ತಿಳಿಹೇಳಿದ್ದಾರಂತೆ. ಇದು ಯತೀಂದ್ರ ಗಮನಕ್ಕೂ ಬಂದಿದೆ. ನಿಮ್ಮ ವಿಚಾರದಲ್ಲಿ ನಾನು ರಿಸ್ಕ್ ತಗೊಳ್ಳಲ್ಲ. ಇಲ್ಲ ಅಂದರೆ ಕೋಲಾರ ಸಹವಾಸವೇ ನಮಗೆ ಬೇಡ ಅಂತಾ ಸಿದ್ದರಾಮಯ್ಯ ಬಳಿ ಯತೀಂದ್ರ ಖಡಕ್ಕಾಗಿ ಹೇಳಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

    ಮಗನ ಮಾತು ಕೇಳಿ ವರುಣಾಗೆ ಹೋಗ್ಬೇಕೋ? ಸ್ನೇಹಿತರ ಮಾತು ಕೇಳಿ ಕೋಲಾರಕ್ಕೆ ಹೋಗ್ಬೇಕೋ ಎಂಬ ಧರ್ಮ ಸಂಕಟದಲ್ಲಿ ಈಗ ಸಿದ್ದರಾಮಯ್ಯ ಸಿಲುಕಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಅಭಿಮಾನಿಗಳು ಕೇಳಿದರೂ ನೋಡೋಣ ಸುಮ್ನಿರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಲ್ಪಸಂಖ್ಯಾತರ ಮತ ಪಡೆಯಲು ಸಿದ್ದರಾಮಯ್ಯ, ಕುಮಾರಸ್ವಾಮಿ RSS ಟೀಕೆ: ಪ್ರಹ್ಲಾದ್ ಜೋಶಿ

    ಅಲ್ಪಸಂಖ್ಯಾತರ ಮತ ಪಡೆಯಲು ಸಿದ್ದರಾಮಯ್ಯ, ಕುಮಾರಸ್ವಾಮಿ RSS ಟೀಕೆ: ಪ್ರಹ್ಲಾದ್ ಜೋಶಿ

    ಧಾರವಾಡ: ಅಲ್ಪಸಂಖ್ಯಾತರ ಮತ ಪಡೆಯಲು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಆರ್‌ಎಸ್‍ಎಸ್‍ನ್ನು ಟೀಕೆ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಮುಸ್ಲಿಂ ವಿರೋಧಿಗಳು ಅಲ್ಲ, ಯಾವ ಸಮುದಾಯದ ವಿರೋಧವೂ ನಮಗಿಲ್ಲ. ಆದರೆ ಅವರು ಮುಗ್ದ ಮುಸ್ಲಿಂರ ವೋಟ್ ಪಡೆಯಲು ಆರ್‍ಎಸ್‍ಎಸ್ ಬಿಜೆಪಿ ಬೈಯುತ್ತಾರೆ ಎಂದರು. ಇದನ್ನೂ ಓದಿ:  ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ಬಿಜೆಪಿ, ಆರ್‌ಎಸ್‍ಎಸ್‍ನ್ನು ಭೂತದಂತೆ ತೋರಿಸುತ್ತಿದ್ದಾರೆ. ಅದಕ್ಕಾಗಿಯೇ ಸಿದ್ದರಾಮಯ್ಯ, ಎಚ್‍ಡಿಕೆ ಸ್ಪರ್ಧಿಗೆ ಬಿದ್ದಿದ್ದಾರೆ. ಇನ್ನು ಬೇರೆ ವೋಟ್ ಬ್ಯಾಂಕ್ ಎಲ್ಲ ಅವರದು ಕಡಿಮೆ ಆಗುತ್ತಿದೆ ಹೀಗಾಗಿ ಆ ರೀತಿ ಮಾತನಾಡುತ್ತಾರೆ ಎಂದು ಜೋಶಿ ಹೇಳಿದರು. ಜನಸಂಖ್ಯೆ ನಿಯಂತ್ರಣ ಬಗ್ಗೆ ಆರ್‌ಎಸ್‍ಎಸ್ ಪ್ರಮುಖ ಮೋಹನ್ ಭಾಗವತ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಭಾಗವತ್ ಹೇಳಿರುವ ವಿಚಾರ ಸತ್ಯವಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಸರ್ಕಾರಗಳು ಗಂಭೀರ ಚಿಂತನೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಚಿಂತನೆ ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ:  ಭಯ ಹುಟ್ಟಿಸಲು ಉಗ್ರರು ಹತ್ಯೆಯನ್ನು ಗುರಿಯಾಗಿಸಿಕೊಂಡಿದ್ದಾರೆ: ಮೋಹನ್ ಭಾಗವತ್

  • ಹಿಂದಿ ಹೇರಿಕೆ ಮಾಡಿದ್ರೆ ರಕ್ತಪಾತವಾಗುತ್ತೆ: ಸಿದ್ದರಾಮಯ್ಯ

    ಹಿಂದಿ ಹೇರಿಕೆ ಮಾಡಿದ್ರೆ ರಕ್ತಪಾತವಾಗುತ್ತೆ: ಸಿದ್ದರಾಮಯ್ಯ

    ಮಂಡ್ಯ: ಭಾರತ ದೇಶದಲ್ಲಿ ಕನ್ನಡವನ್ನು ಪಕ್ಕಕ್ಕೆ ತಳ್ಳಿ ಬಲವಂತವಾಗಿ ಹಿಂದಿ ಹೇರಿಕೆ ಮಾಡಿದ್ರೆ ರಕ್ತಪಾತವಾಗುತ್ತದೆ. ಕನ್ನಡಕ್ಕೆ ಪ್ರಥಮ ಸ್ಥಾನವನ್ನು ಕೊಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಮಂಡ್ಯದ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಡಾ.ಹಾಮಾನಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿ ಭಾಷೆ ಎಂದಿಗೂ ರಾಷ್ಟ್ರ ಭಾಷೆಯಾಗಲು ಸಾಧ್ಯವಿಲ್ಲ. ಹಿಂದಿ ಭಾಷೆ ಉತ್ತರ ಭಾರತದ 5 ರಾಜ್ಯಗಳಲ್ಲಿ ಮಾತ್ರ ಇದೆ. ದೇಶದ ಬೇರೆ ಯಾವ ರಾಜ್ಯದಲ್ಲೂ ಹಿಂದಿ ಇಲ್ಲ. ಹೀಗಿರುವಾಗ ಹಿಂದಿ ರಾಷ್ಟ್ರ ಭಾಷೆ ಆಗಲು ಹೇಗೆ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದಿ ಹೇರಿಕೆ ಟೀಕೆಗೆ ಉತ್ತರ – ರಾಷ್ಟ್ರೀಯ ಅನುವಾದ ಮಿಷನ್‌ ಆರಂಭ

    ಒಂದು ವೇಳೆ ಹಿಂದಿ ಭಾಷೆಯನ್ನು ಭಾರತ ದೇಶದಲ್ಲಿ ಬಲವಂತವಾಗಿ ಹೇರಿಕೆ ಮಾಡಿದರೆ ರಕ್ತಪಾತವಾಗುತ್ತದೆ. ಎಲ್ಲಾ ಭಾಷೆ ಸಂಸ್ಕ್ರತಿ, ಜನಾಂಗ, ಆಚಾರವನ್ನು ಹೊಂದಿವರು ಇದ್ದಾರೆ. ಈ ಹಿಂದಿ ಏರಿಕೆಯ ಕನಸನ್ನು ಕೇಂದ್ರ ಸರ್ಕಾರ ಬಿಡಬೇಕು. ಭಾಷೆಯನ್ನು ಕಲಿಯಿರಿ ಬೇಡ ಎಂದು ಹೇಳುತ್ತಿಲ್ಲ ಆದರೆ ಕನ್ನಡ ಮಾತ್ರ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಶಿಕ್ಷಣದಲ್ಲಿ ಹಿಂದಿ ಹೇರಿಕೆ ಮಾಡಲ್ಲ – ಕೇಂದ್ರ ಸರ್ಕಾರ ಸ್ಪಷ್ಟನೆ: ಏನಿದು ವಿವಾದ?