Tag: ಸಿದ್ದರಾಮೋತ್ಸವ

  • ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ – ಸಿದ್ದರಾಮೋತ್ಸವದ ವಿರುದ್ಧ ಸಿಡಿಮಿಡಿಗೊಂಡ ಡಿಕೆಶಿ

    ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ – ಸಿದ್ದರಾಮೋತ್ಸವದ ವಿರುದ್ಧ ಸಿಡಿಮಿಡಿಗೊಂಡ ಡಿಕೆಶಿ

    ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ. ಸಿದ್ದರಾಮಯ್ಯ-ಡಿಕೆಶಿ ನಡುವಿನ ನಾಯಕತ್ವ ಕಿತ್ತಾಟ ಮುಂದುವರಿದಿದೆ. ದೆಹಲಿಯಲ್ಲಿ ರಾಜೀಸಂಧಾನದ ಮೂಲಕ ಎಷ್ಟೇ ತೇಪೆಹಾಕಲು ರಾಹುಲ್ ಗಾಂಧಿ ಪ್ರಯತ್ನಿಸಿದ್ರೂ, ಪ್ರಯೋಜನವಾಗಿಲ್ಲ.

    ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ನಾಯಕತ್ವ ಘೋಷಣೆ ಆಗಲಿದೆ ಎಂಬ ವದಂತಿಗಳ ಬೆನ್ನಲ್ಲೇ ಅಖಾಡಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧುಮುಕಿದ್ದು, ಸಿದ್ದರಾಮಯ್ಯ ಬಣಕ್ಕೆ ಶಾಕ್ ನೀಡಿದ್ದಾರೆ. ಸಿದ್ದರಾಮೋತ್ಸವಕ್ಕೆ ಒಂದು ತಿಂಗಳ ಮೊದಲೇ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಡಿಕೆ ಶಿವಕುಮಾರ್ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲೇ ಮಾತಿಗೆ ಬೆಲೆಯಿಲ್ಲದಷ್ಟು ಡಿಕೆಶಿ ಡಮ್ಮಿ ಆಗಿದ್ದೇಕೆ? – ಟ್ವೀಟ್ ಮಾಡಿ ಕಾಲೆಳೆದ ಬಿಜೆಪಿ

    ವ್ಯಕ್ತಿ ಪೂಜೆ ಮುಖ್ಯ ಅಲ್ಲ, ಪಕ್ಷ ಪೂಜೆ ಮುಖ್ಯ ಎಂದಿದ್ದಾರೆ. ಮಂತ್ರಿಗಿರಿ ಸಿಗದಿದ್ದಾಗಲೇ ಉಸಿರುಬಿಟ್ಟಿರಲಿಲ್ಲ. ಪಕ್ಷ ಸೋತಾಗಲೂ ಸಿದ್ದರಾಮಯ್ಯರನ್ನು ವಿಪಕ್ಷ ನಾಯಕರನ್ನಾಗಿ ಮಾಡಿದ್ದೇವೆ. ಎನ್ನುವ ಮೂಲಕ ತಮ್ಮನ್ನು ಪಕ್ಷ ನಿಷ್ಠ, ತ್ಯಾಗಮಯಿ ಎಂದು ಬಿಂಬಿಸಿಕೊಂಡಿದ್ದಾರೆ. ತಮಗೆ ಸಿದ್ದರಾಮೋತ್ಸವದ ಬಗ್ಗೆ ಹೆಚ್ಚು ಗೊತ್ತಿಲ್ಲ ಎಂದು ಖಾರವಾಗಿ ಹೇಳಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದಿರೋದು ಗಮನಾರ್ಹ. ಮಾಜಿ ಡಿಸಿಎಂ ಜಿ.ಪರಮೇಶ್ವರ್ ಕೂಡ ಸಾಮೂಹಿಕ ನಾಯಕತ್ವದ ಮಂತ್ರ ಜಪಿಸಿದ್ದಾರೆ. ಸಿದ್ದರಾಮೋತ್ಸವ ತಪ್ಪಲ್ಲ ಎಂದಿದ್ದಾರೆ. ಇದನ್ನೂ ಓದಿ: ನಮ್ಮ ರಕ್ತದಲ್ಲಿ ಕಾಂಗ್ರೆಸ್‌ ಇದೆ: JDS ತೊರೆದು ಕಾಂಗ್ರೆಸ್‌ ಸೇರಿದ ಹೆಚ್‌.ಆರ್.ಶ್ರೀನಾಥ್‌

    ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲಾ ಏನಿದ್ದರು ಪಕ್ಷದ ಪೂಜೆ ಆದ್ದರಿಂದ ಸಿದ್ದರಾಮೋತ್ಸವದಲ್ಲಿ ಪಕ್ಷದ ಸಹಭಾಗಿತ್ವ ಇರಬೇಕು ಎಂದು ಹೈಕಮಾಂಡ್ ಖಡಕ್ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯರ 75ನೇ ವರ್ಷಾಚರಣೆ ಮಾಡಲಾಗುತ್ತಿದೆ ಮಾಡಲಿ ಇದೇ ಮೊದಲು ಇದೇ ಕೊನೆ ಇನ್ನು ಮುಂದೆ ವ್ಯಕ್ತಿ ಆಧಾರಿತ ಕಾರ್ಯಕ್ರಮ ಇರಬಾರದು ಎಂದು ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಭರ್ಜರಿಯಾಗಿ ಸಿದ್ದರಾಮೋತ್ಸವ ನಡೆಸಲು ಮುಂದಾದ ಸಿದ್ದರಾಮಯ್ಯ ಬೆಂಬಲಿಗರಿಗೆ ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್ ನೀಡಿತ್ತು.

    Live Tv

  • ಕಾಂಗ್ರೆಸ್‌ನಲ್ಲೇ ಮಾತಿಗೆ ಬೆಲೆಯಿಲ್ಲದಷ್ಟು ಡಿಕೆಶಿ ಡಮ್ಮಿ ಆಗಿದ್ದೇಕೆ? – ಟ್ವೀಟ್ ಮಾಡಿ ಕಾಲೆಳೆದ ಬಿಜೆಪಿ

    ಕಾಂಗ್ರೆಸ್‌ನಲ್ಲೇ ಮಾತಿಗೆ ಬೆಲೆಯಿಲ್ಲದಷ್ಟು ಡಿಕೆಶಿ ಡಮ್ಮಿ ಆಗಿದ್ದೇಕೆ? – ಟ್ವೀಟ್ ಮಾಡಿ ಕಾಲೆಳೆದ ಬಿಜೆಪಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತು ಮೀರಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ಎಂದಾದರೆ ಅದು ಪಿತೂರಿ ಅಲ್ಲದೇ ಮತ್ತಿನ್ನೇನು? ಪಕ್ಷದ ಅಧ್ಯಕ್ಷರಿಗೇ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲದಷ್ಟು ಡಮ್ಮಿ ಡಿಕೆಶಿ ಆಗಿದ್ದೇಕೆ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ಕಾಲೆಳೆದಿದೆ.

    ಟ್ವೀಟ್‌ನಲ್ಲೇನಿದೆ?
    ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ನಡೆಯುತ್ತಿರುವ ಸಿದ್ದರಾಮೋತ್ಸವ ವಿಚಾರವಾಗಿ ಬಿಜೆಪಿ ಟ್ವೀಟ್ ಮಾಡಿದ್ದು, ಡಿಕೆಶಿ ಅವರೇ ಕೆಪಿಸಿಸಿ ಅಧ್ಯಕ್ಷರಾದ ನಿಮ್ಮ ಮಾತು ಮೀರಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ಎಂದಾದರೆ, ನಿಮ್ಮ ಸಂದೇಶ ತಲುಪುತ್ತಿಲ್ಲ ಅಥವಾ ನಿಮ್ಮ ಮಾತಿಗೆ ಬೆಲೆ ಇಲ್ಲ ಎಂದರ್ಥವಲ್ಲವೇ?

    ವಿಪಕ್ಷ ನಾಯಕ ಸಿದ್ದರಾಮಯ್ಯರ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆಯುತ್ತಿರುವುದು ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿಲ್ಲ ಎಂದಾದರೆ ಪಕ್ಷದಲ್ಲಿ ಡಿಕೆಶಿ ಬೆನ್ನ ಹಿಂದೆ ನಡೆಯುತ್ತಿರುವುದು ಪಿತೂರಿಯಲ್ಲದೆ ಮತ್ತೇನು? ಪಕ್ಷದ ಅಧ್ಯಕ್ಷರಿಗೇ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲದಷ್ಟು #ಡಮ್ಮಿಡಿಕೆಶಿ ಆಗಿದ್ದೇಕೆ.

    ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ ಎಂಬ ಡಿ.ಕೆ.ಶಿವಕುಮಾರ್ ಅವರ ಮಾತನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಅವರ ಪಟಾಲಂ ಒಪ್ಪುತ್ತದೆಯೇ? ಸಿದ್ದರಾಮೋತ್ಸವ ಮಾಡುತ್ತೇವೆ ಎಂದು ಹೊರಟಿರುವ ಸಿದ್ದರಾಮಯ್ಯ ಬಣದ ನಾಯಕರನ್ನು ನಿಯಂತ್ರಿಸಲು ಡಿಕೆಶಿ ಅವರಿಗೇಕೆ ಸಾಧ್ಯವಾಗುತ್ತಿಲ್ಲ?.

    ಇತ್ತೀಚಿಗೆ ರಾಜಸ್ಥಾನದಲ್ಲಿ ಡಿಕೆಶಿ ಭಾಗವಹಿಸಿದ ಚಿಂತನಾ ಶಿಬಿರದಲ್ಲೂ, ಮೊನ್ನೆ ದೆಹಲಿಯಲ್ಲಿ ನಕಲಿ ಗಾಂಧಿಗಳ ಭೇಟಿ ಮಾಡಿದಾಗಲೂ, ಸಿದ್ದರಾಮಾತ್ಸವದ ಬಗ್ಗೆ ಯಾರೂ ಹೇಳಲಿಲ್ಲವೇ? ನಿಮ್ಮಿಬ್ಬರ ನಡುವೆ ಈಗ ಜೋಡೋ ಆಟವೋ ಅಥವಾ ತೋಡೋ ಆಟವೋ?.

    ರಾಜ್ಯ ಕಾಂಗ್ರೆಸ್ಸಿಗೆ ಅಧ್ಯಕ್ಷ ಯಾರು ಅನ್ನೋದೇ ಈಗ ಯಕ್ಷ ಪ್ರಶ್ನೆ. ನನ್ನ ಉತ್ಸವಕ್ಕೆ ರಾಹುಲ್ ಬರುತ್ತಾರೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ರಾಹುಲ್ ಬರೋ ವಿಷಯವೇ ಗೊತ್ತಿಲ್ಲವೆಂದು ಡಿಕೆಶಿ ಹೇಳ್ತಾರೆ. ಅಧ್ಯಕ್ಷರಿಗೇ ಮಾಹಿತಿಯಿಲ್ಲದೇ ಬರ್ತಾರೆ ಅಂದ್ರೆ ಇದು ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಸೂಚನೆಯೇ ಎಂದು ಬಿಜೆಪಿ ಸಂಶಯ ವ್ಯಕ್ತಪಡಿಸಿದೆ.

    Live Tv

  • ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಹ್ವಾನಿಸಲು ಸಿದ್ದರಾಮಯ್ಯ ತೀರ್ಮಾನ

    ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಹ್ವಾನಿಸಲು ಸಿದ್ದರಾಮಯ್ಯ ತೀರ್ಮಾನ

    ಬೆಂಗಳೂರು: ದೆಹಲಿ ಭೇಟಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಿದ್ದರಾಮೋತ್ಸವಕ್ಕೆ ಆಹ್ವಾನಿಸಲು ಮಾಜಿ ಸಿಎಂ ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ.

    ಸಿದ್ದರಾಮಯ್ಯ ಅವರು ಎರಡು ದಿನದ ದೆಹಲಿ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ವೇಳೆ ಅವರು ರಾಹುಲ್ ಗಾಂಧಿ ಅವರನ್ನು ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಲಿದ್ದಾರೆ. ಇದನ್ನೂ ಓದಿ:  ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರಗ್ಸ್ ವಶ – ಆರೋಪಿಗಳ ಬಗ್ಗೆ ಸಿಕ್ಕಿಲ್ಲ ಸುಳಿವು

    ಏನಿದು ಕಾರ್ಯಕ್ರಮ?
    ಆಗಸ್ಟ್ 12 ರಂದು ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬುತ್ತೆ. ಅದಕ್ಕೆ ಸಿದ್ದು ಬೆಂಬಲಿಗರು ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರನ್ನು ಕರೆಯಬೇಕು ಎಂದು ನಿರ್ಧರಿಸಿದ್ದಾರೆ.

    ಮುಸುಕಿನ ಗುದ್ದಾಟ
    5 ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಿ ಸಿದ್ದರಾಮೋತ್ಸವ ನಡೆಸಲು ಸಿದ್ದು ಬೆಂಬಲಿಗರು ತೀರ್ಮಾನ ಮಾಡಿದ್ದಾರೆ. ಇದಕ್ಕೆ ಹೈಕಮಾಂಡ್ ನಾಯಕರ ಆಹ್ವಾನದ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಪಕ್ಷದ ಹಿರಿಯ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು.

    ಸಿದ್ದರಾಮಯ್ಯ ಬೆಂಬಲಿಗರು ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ಅವರು ಮಾತ್ರ ಸೆಂಟರ್ ಆಫ್ ಅಟ್ರಾಕ್ಷನ್ ಅಗಬೇಕು ಎಂದು ಪಟ್ಟುಹಿಡಿದಿದ್ದರು. ಆದರೆ ಹಿರಿಯ ಕೈ ನಾಯಕರು ಹೈಕಮಾಂಡ್ ನಾಯಕರನ್ನು ಆಹ್ವಾನಿಸಬೇಕು ಎಂದು ಒತ್ತಾಯಿಸುತ್ತಿದ್ದರು. ಇದನ್ನೂ ಓದಿ: ಪದ್ಮಭೂಷಣ ವಿಜೇತ, ಬಿಲಿಯನೇರ್ ಪಲ್ಲೊಂಜಿ ಮಿಸ್ತ್ರಿ ನಿಧನ 

    ಈಗ ಸಿದ್ದರಾಮಯ್ಯ ಅವರು ತಮ್ಮ ಶಕ್ತಿ ಪ್ರದರ್ಶನಕ್ಕೆ ಹೈಕಮಾಂಡ್‍ಗೆ ತಾವೇ ಆಹ್ವಾನ ನೀಡಲು ಮುಂದಾಗಿದ್ದಾರೆ. ಹೈಕಮಾಂಡ್ ನಾಯಕರನ್ನ ವೇದಿಕೆ ಮೇಲೆ ಕೂರಿಸಿಕೊಂಡೆ ತಮ್ಮ ಶಕ್ತಿ ಪ್ರದರ್ಶನ ನಡೆಸಲು ಸಿದ್ದರಾಮಯ್ಯ ಅವರು ಯೋಜನೆ ಮಾಡಿಕೊಂಡಿದ್ದಾರೆ. ಅದಕ್ಕೆ ಅವರು ಇಂದು ಅಥವಾ ನಾಳೆ ರಾಹುಲ್ ಗಾಂಧಿಗೆ ಅಧಿಕೃತ ಆಹ್ವಾನ ನೀಡಲಿದ್ದಾರೆ.

    Live Tv