Tag: ಸಿದ್ದರಾಮೋತ್ಸವ

  • ಸಿದ್ದರಾಮೋತ್ಸವ ಮಾದರಿಯಲ್ಲೇ ಶಿವಕುಮಾರೋತ್ಸವ ಮಾಡಿ – ಡಿಕೆಶಿ ಶಿಷ್ಯನಿಂದ ಪತ್ರ

    ಸಿದ್ದರಾಮೋತ್ಸವ ಮಾದರಿಯಲ್ಲೇ ಶಿವಕುಮಾರೋತ್ಸವ ಮಾಡಿ – ಡಿಕೆಶಿ ಶಿಷ್ಯನಿಂದ ಪತ್ರ

    ಬೆಂಗಳೂರು: ಸಿದ್ದರಾಮಯ್ಯ ಅಮೃತ ಮಹೋತ್ಸವ 75 ಮಾದರಿಯಲ್ಲಿ ಡಿ.ಕೆ.ಶಿವಕುಮಾರ್ ಉತ್ಸವ-23 ಆಚರಿಸುವಂತೆ ಈಗ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಸದಸ್ಯರುಗಳಿಗೆ ಕೆಪಿಸಿಸಿ ಮಾಧ್ಯಮ ಸಂಯೋಜಕರೊಬ್ಬರು ಪತ್ರ ಬರೆದಿದ್ದಾರೆ.

    ಮಾಧ್ಯಮ ಸಂಯೋಜಕ ಹಾಗೂ ಡಿ.ಕೆ.ಶಿವಕುಮಾರ್ ಶಿಷ್ಯರಾಗಿರುವ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊಣಕೆರೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಜೆಸಿ ರಾಜು ಪತ್ರ ಬರೆದಿದ್ದಾರೆ.

    ಜೆ.ಸಿ.ರಾಜು ಅಮೃತ ಮಹೋತ್ಸವ ಸಮಿತಿಗೆ ಪತ್ರ ಬರೆದು ಸಿದ್ದರಾಮೋತ್ಸವ ಮಾದರಿಯಲ್ಲೇ 60 ವರ್ಷ ತುಂಬಿದ ಡಿಕೆಶಿಗೆ ʼಶಿವಕುಮಾರೋತ್ಸವʼ ಆಚರಿಸಬೇಕು. ಸಿದ್ದರಾಮೋತ್ಸವ ಸಮಿತಿಯ ಸದಸ್ಯರೆಲ್ಲರೂ ಕಾಂಗ್ರೆಸ್ ನಾಯಕರೇ ಆಗಿರುವುದರಿಂದ ಡಿ.ಕೆ.ಶಿವಕುಮಾರ್ ಉತ್ಸವ 23 ಆಚರಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

    ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿಯ ಪೂರ್ವ ಭಾವಿ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಲಿದೆ.

    ಪತ್ರದಲ್ಲಿ ಏನಿದೆ?
    ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ತಾವೆಲ್ಲರೂ ಸೇರಿ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ಅವರ 75 ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಮಾಡುತ್ತಿರುವುದು ನಮ್ಮ ಪಕ್ಷದ ಹಿರಿಯರಿಂದ ಹಿಡಿದು ನನ್ನಂತಹ ಸಾಮಾನ್ಯ ಕಾರ್ಯಕರ್ತನವರೆಗೆ ಸಂತಸ ತರುವಂತಹ ವಿಚಾರ. ಹಾಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವಂತಹ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದರ ಮುಖಾಂತರ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಮ್ಮ ಸಮಿತಿಯ ಜೊತೆಗೆ ಸಾಮಾನ್ಯ ಕಾರ್ಯಕರ್ತರಾದ ನಾವೂ ಸಹ ಕೈ ಜೋಡಿಸುತ್ತೇವೆ.

    ಈ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ನನ್ನದೊಂದು ಮನವಿ ಸಲ್ಲಿಸುತ್ತಿದ್ದೇನೆ. ತಾವು ಮಾಡುತ್ತಿರುವ ಸಿದ್ಧರಾಮಯ್ಯ – 75 ಅಮೃತ ಮಹೋತ್ಸವ ಕಾರ್ಯಕ್ರಮದ ರೀತಿಯಲ್ಲಿ, ಚಿಕ್ಕವಯಸ್ಸಿನಿಂದಲೇ ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದು ಪಕ್ಷ ಕೊಟ್ಟಂಥ ಜವಾಬ್ದಾರಿಗಳನ್ನು ನಿಭಾಯಿಸಿ ಪಕ್ಷದ ತೀರ್ಮಾನಕ್ಕೆ, ತಲೆಬಾಗಿ ಎಂದೂ ಪಕ್ಷದ ವಿರುದ್ಧ ಮಾತನಾಡದ, ಪಕ್ಷಕ್ಕಾಗಿ ವೈಯಕ್ತಿಕ ತೊಂದರೆಗಳನ್ನು ಅನುಭವಿಸಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿರವರು ಇವರ ಪಕ್ಷ ನಿಷ್ಠೆಯನ್ನು ಪರಿಗಣಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಅಧ್ಯಕ್ಷರ ಇಲ್ಲದ ಕಷ್ಟಕಾಲದಲ್ಲಿ ಇವರನ್ನು ಅಧ್ಯಕ್ಷರನ್ನಾಗಿ ಮಾಡಿದ ದಿನದಿಂದಲೂ ಹಗಲು ರಾತ್ರಿ ಎನ್ನದೆ ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಹುರುವು ಮೂಡಿಸಿ ಪಕ್ಷವನ್ನು ಬಲಪಡಿಸಲು ತನು ಮನ ಧನ ಎಲ್ಲವನ್ನೂ ಪಕ್ಷಕ್ಕಾಗಿ ಅರ್ಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೆ ಅರುವತ್ತು ವರ್ಷ ತುಂಬಿದ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾ‌ರ್‌ ಅವರ ಹೆಸರಿನಲ್ಲಿ ಶಿವಕುಮಾರೋತ್ಸವ – 23 ಎಂಬ ಹೆಸರಿನಲ್ಲಿ ಕಾರ್ಯಕ್ರಮ ಮಾಡುವುದರ ಮುಖಾಂತರ ಪಕ್ಷ ಮತ್ತು ಕಾರ್ಯಕರ್ತರ ಪರವಾಗಿ ಗೌರವಾರ್ಪಣೆ ಸಲ್ಲಿಸಲು ತಮ್ಮ ಸಮಿತಿಯ ಮುಖಾಂತರವೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ಕೈಮುಗಿದು ಕೇಳಿ ಕೊಳ್ಳುತ್ತೇನೆ. ಇದನ್ನೂ ಓದಿ: ಕಬಿನಿಯಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ- 50ಕ್ಕೂ ಹೆಚ್ಚು ಹಳ್ಳಿಗಳ ಪ್ರಮುಖ ಮಾರ್ಗ ಬಂದ್

    ಜುಲೈ 13 ರಂದು ನಡೆಯುವ ಅಮೃತ ಮಹೋತ್ಸವ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ತಾವುಗಳು ಶಿವಕುಮಾರೋತ್ಸವ -23 ಕಾರ್ಯಕ್ರಮವನ್ನು ಕೈಗೊಳ್ಳಲು ಪ್ರಸ್ತಾಪ ಮಾಡಬೇಕೆಂದು ಸಮಿತಿಯ ಪದಾಧಿಕಾರಿಗಳಲ್ಲಿ ವಿನಂತಿಸುತ್ತೇನೆ. ಪಕ್ಷಕ್ಕಾಗಿ ದುಡಿದು ಮತ್ತು ರಾಜ್ಯದ ಜನರ ಸೇವೆ ಮಾಡಿದ ಹಿರಿಯರಿಗೆ ಪಕ್ಷದ ಹಿರಿಯರಿಂದ ಗೌರವ ಸಮರ್ಪಣೆ ಮಾಡುವ ಕಾರ್ಯಕ್ರಮಗಳಲ್ಲಿ ನನ್ನಂತಹ ಲಕ್ಷಾಂತರ ಜನ ಕಾರ್ಯಕರ್ತರು ತಮ್ಮ ಸಮಿತಿಯ ಜೊತೆಗಿರುತ್ತೇವೆ. ನಮ್ಮ ಪಕ್ಷದಲ್ಲಿ ನಾಯಕರ ವಿಚಾರ ಬಂದಾಗ ನನ್ನಂತಹ ಸಾಮಾನ್ಯ ಕಾರ್ಯಕರ್ತನ ಮನದಲ್ಲಿ ಪಕ್ಷದ ಎಲ್ಲ ನಾಯಕರಿಗೂ ಸಮಾನವಾದ ಗೌರವವಿದೆ.

    ಈ ವಿಚಾರದಲ್ಲಿ ಖಂಡಿತವಾಗಿಯೂ ಗೊಂದಲವಿಲ್ಲ, ಯಾರೂ ಸಹ ಗೊಂದಲ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಸಮಿತಿಯ ಪೂಜ್ಯ ಪದಾಧಿಕಾರಿಗಳು ದಯಮಾಡಿ ನನ್ನ ಮನವಿಯನ್ನು ಪುರಸ್ಕರಿಸಬೇಕು ಎಂದು ತಮ್ಮಲ್ಲಿ ವಿನಮ್ರವಾಗಿ ಬೇಡಿಕೊಳ್ಳುತ್ತೇನೆ. ತಾವುಗಳು ಸಮಿತಿಯ ಪದಾಧಿಕಾರಿಗಳಾಗಿದ್ದರೂ ಸಹ ತಾವೆಲ್ಲರೂ ನನ್ನ ಪಕ್ಷದ ಹಿರಿಯ ನಾಯಕರಾಗಿದ್ದೀರಿ ಹಾಗಾಗಿ ತಮ್ಮಲ್ಲಿ ಕಾರ್ಯಕ್ರಮದ ವಿಚಾರವಾಗಿ ಬೇಡಿ ಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ.

    ಇನ್ನು ಪತ್ರದಲ್ಲಿ ಶಿವಕುಮಾರೋತ್ಸವ ಕಾರ್ಯಕ್ರಮ ಆಯೋಜನೆ ಮಾಡುವಂತೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿರವರಿಗೆ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ,ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಗೂ ಮನವಿ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • PSI ಹಗರಣದ ಹಿಂದೆ ಬೊಮ್ಮಾಯಿ, ಗೃಹಸಚಿವರಿದ್ದಾರೆ – ಸರ್ಕಾರದ ಕುಮ್ಮಕ್ಕಿಲ್ಲದೇ ಇದೆಲ್ಲಾ ಸಾಧ್ಯವೇ ಎಂದ ಸಿದ್ದರಾಮಯ್ಯ

    PSI ಹಗರಣದ ಹಿಂದೆ ಬೊಮ್ಮಾಯಿ, ಗೃಹಸಚಿವರಿದ್ದಾರೆ – ಸರ್ಕಾರದ ಕುಮ್ಮಕ್ಕಿಲ್ಲದೇ ಇದೆಲ್ಲಾ ಸಾಧ್ಯವೇ ಎಂದ ಸಿದ್ದರಾಮಯ್ಯ

    ದಾವಣಗೆರೆ: PSI ಹಗರಣದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಇದ್ದಾರೆ. ಅದರ ಹಿಂದೆ ಹಿಂದಿನ ಗೃಹ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರೂ ಇದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

    ದಾವಣಗೆರೆಯ ಬಾಪೂಜಿ ಅತಿಥಿ ಗೃಹಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು `ಸಿದ್ದರಾಮಯ್ಯ ಅಮೃತ ಮಹೋತ್ಸವ’ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ಮಾಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    Siddaramaiah

    ಪಿಎಸ್‌ಐ ಹಗರಣದ ಹಿಂದೆ ಹಿಂದಿನ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಹಾಲಿ ಗೃಹ ಸಚಿವರು ಇದ್ದಾರೆ. ಈಗ ಅಮೃತ್ ಪೌಲ್ ಅವರನ್ನು ಬಂಧಿಸಿದ್ದಾರೆ. ಇದರಲ್ಲಿ ಬಿಜೆಪಿ ಇರಲಿ ಕಾಂಗ್ರೆಸ್ ಇರಲಿ, ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ಸರ್ಕಾರದ ಕುಮ್ಮಕ್ಕು ಇಲ್ಲದೇ ಇವೆಲ್ಲ ನಡಿಯೋಕೆ ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ.

    ಇದೊಂದು ಮೈಲಿಗಲ್ಲು: 75 ವರ್ಷ ತುಂಬುವುದರಿಂದ ಇದೊಂದು ಮೈಲುಗಲ್ಲು. ಸ್ನೇಹಿತರು, ಅತ್ಮೀಯರು ಸೇರಿ ಅಮೃತೋತ್ಸವ ಮಾಡ್ತಾ ಇದ್ದಾರೆ. ಇದು ಸಿದ್ದರಾಮೋತ್ಸವ ಅಲ್ಲ. ಹೀಗೆ ಕರೆದವರು ಆರ್‌ಎಸ್‌ಎಸ್‌ನವರು. ನಾನು ಹುಟ್ಟುಹಬ್ಬ ಮಾಡಿಕೊಳ್ಳುವುದಿಲ್ಲ. ಅತ್ಮೀಯರು, ಸ್ನೇಹಿತರು ಮಾಡ್ತಾ ಇದಾರೆ. ಕೆ.ಎನ್.ರಾಜಣ್ಣ ಸಮಿತಿಯ ಅಧ್ಯಕ್ಷರಾಗಿದ್ದು, ಬೈರತಿ ಬಸವರಾಜ್ ಖಜಾಂಚಿಯಾಗಿ ಸಮಾರಂಭ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

    ESHWARAPPA

    75 ವರ್ಷ ತುಂಬುವ ವರ್ಷಕ್ಕೆ ಇನ್ನು ಚುನಾವಣೆ 8 ತಿಂಗಳು ಇರುತ್ತೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಒಟ್ಟಿನಲ್ಲಿ ನೂರಕ್ಕೆ ನೂರರಷ್ಟು 130 ಸ್ಥಾನಗಳನ್ನಾದರೂ ಗೆದ್ದು ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ. ಯಾರನ್ನ ಮುಖ್ಯಮಂತ್ರಿ ಮಾಡೋದು ಆಮೇಲೆ ನೋಡೋಣ. ಏಕೆಂದರೆ ಮುಖ್ಯಮಂತ್ರಿ ಮಾಡೋದು ಗೆದ್ದ ಶಾಸಕರಿಗೆ ಹಾಗೂ ಹೈಕಮಾಂಡ್‌ಗೆ ಬಿಟ್ಟ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ.

    ನಮ್ಮ ಪಕ್ಷದಿಂದ ಬಿಜೆಪಿಗೆ ಹೋಗುವವರು ಯಾರೂ ಇಲ್ಲ. ಬಿಜೆಪಿಗೆ ಈಗಾಗಲೇ ಭಯ ಶುರುವಾಗಿದೆ. ಬಾದಾಮಿ, ಕೋಲಾರ, ವರುಣ, ಮೈಸೂರು ಭಾಗಗಳಲ್ಲಿ ಜನ ನಿಲ್ಲಿ ಎಂದು ಕೇಳುತ್ತಿದ್ದಾರೆ. ನಾನು ಈಗ ಬಾದಾಮಿ ಶಾಸಕ. ಈಗಲೇ ಏನೂ ಹೇಳುವುದಿಲ್ಲ ಎಂದು ಹೇಳಿದ್ದಾರೆ.

    ಇನ್ನೂ `ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಇಬ್ಭಾಗವಾಗುತ್ತೆ’ ಎನ್ನುವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಉತ್ತರಿಸಿದ ಅವರು, ಅದು ಅವನ ಭ್ರಮೆ. ಈಶ್ವರಪ್ಪ ಮಂತ್ರಿ ಸ್ಥಾನ ಕಳೆದುಕೊಂಡಿದ್ದಾನೆ. ಇದರಿಂದ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದೆ. ಆಗ ಮಾಡಿದ್ದು ಕುರುಬರ ಸಮಾವೇಶ, ಈಗ ಮಾಡ್ತಾ ಇರೋದು ಅಮೃತ ಮಹೋತ್ಸವ. ಇವತ್ತೇ ಚುನಾವಣೆಯಾದರೂ ನಾವು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಒಂಟಿಕೊಪ್ಪಲ್ ಪಂಚಾಂಗದಲ್ಲಿ ಸಿದ್ದರಾಮೋತ್ಸವ ಸೇರಿಸಲಿ: ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ

    ಒಂಟಿಕೊಪ್ಪಲ್ ಪಂಚಾಂಗದಲ್ಲಿ ಸಿದ್ದರಾಮೋತ್ಸವ ಸೇರಿಸಲಿ: ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ

    ಚಾಮರಾಜನಗರ: ನಾವು ಬೇರೆ ಬೇರೆ ಉತ್ಸವಗಳನ್ನು ಕೇಳಿದ್ದೇವೆ. ಇನ್ನು ಮೇಲೆ ಒಂಟಿಕೊಪ್ಪಲ್ ಪಂಚಾಂಗದಲ್ಲಿ ಸಿದ್ದರಾಮೋತ್ಸವವನ್ನು ಸೇರಿಸಬೇಕು ಎಂದು ಚಾಮರಾಜನಗರದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.

    ಚಾಮರಾಜನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಜಾತಿಯವರು ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹೊರಟಿದ್ದರು. ಆದರೆ ಅದಕ್ಕೆ ಅವರ ಪಕ್ಷದಲ್ಲಿ ವಿರೋಧ ಬಂತು. ಹೀಗಾಗಿ ಪಕ್ಷದ ವತಿಯಿಂದ ಕಾರ್ಯಕ್ರಮ ಮಾಡಬೇಕು ಎಂದು ದೊಡ್ಡ ಸಮಿತಿ ರಚಿಸಿಕೊಂಡಿದ್ದಾರೆ. ಇವೆಲ್ಲವನ್ನೂ ಪ್ರಚಾರಕ್ಕೋಸ್ಕರ ಮಾಡುತ್ತಿದ್ದಾರೆ. ಇನ್ನು ಏನೇನು ಆಟ ಆಡಬೇಕು ಆಡಲಿ ಎಂದು ಕುಹಕವಾಡಿದರು. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ – ಚಿನ್ನ ಗೆದ್ದು ಭಾರತಕ್ಕೆ ಹೆಮ್ಮೆ ತಂದ 94ರ ಅಜ್ಜಿ

    Siddaramaiah

    ಮೋದಿ ಸರ್ಕಾರ ತೊಲಗಿದರೆ ದೇಶಕ್ಕೆ ಒಳ್ಳೆಯದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಶ್ರೀನಿವಾಸ ಪ್ರಸಾದ್, ಮೋದಿ ಜನಾದೇಶದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯನನ್ನು ಕೇಳಿಕೊಂಡು ಬಂದಿಲ್ಲ. ಸಿದ್ದರಾಮಯ್ಯ ಪ್ರಚಾರಕ್ಕೋಸ್ಕರ ಕಿರುಚಾಡಿ ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: 5 ಎಕ್ರೆ ಜಾಗಕ್ಕೆ ಕಿರಿಕ್ – ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್‌ಗೆ ಮತ್ತೊಂದು ಟ್ವಿಸ್ಟ್

    ನಿಮ್ಮ ಸ್ಥಿತಿ ಏನು ಎಂದು ಅರ್ಥ ಮಾಡಿಕೊಂಡು ಮಾತನಾಡಿ. ನೀವು 36 ಸಾವಿರ ಮತಗಳಿಂದ ಸೋತಾಯ್ತು. 17 ಜನರನ್ನು ಕಳುಹಿಸಿ ಸರ್ಕಾರವನ್ನು ಕೆಡವಿದ್ದಾಯ್ತು. 28 ಕ್ಷೇತ್ರಗಳಲ್ಲಿ ಒಂದೇ ಒಂದು ಕ್ಷೇತ್ರ ಗೆದ್ದಿರುವುದು. ಇನ್ನಾದರೂ ಹೀಗೆ ಮಾತನಾಡುವುದನ್ನು ಬಿಡಪ್ಪಾ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    Live Tv
    [brid partner=56869869 player=32851 video=960834 autoplay=true]

  • ಮೋದಿ ಸೋಲಿಸಲು ಕಾಂಗ್ರೆಸ್‌ನವರು ಪಾಕಿಸ್ತಾನದ ಬೆಂಬಲ ಕೇಳಿದ್ರು – ಪ್ರಹ್ಲಾದ್ ಜೋಶಿ

    ಮೋದಿ ಸೋಲಿಸಲು ಕಾಂಗ್ರೆಸ್‌ನವರು ಪಾಕಿಸ್ತಾನದ ಬೆಂಬಲ ಕೇಳಿದ್ರು – ಪ್ರಹ್ಲಾದ್ ಜೋಶಿ

    ಬೆಂಗಳೂರು: ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಸೋಲಿಸಲು ಕಾಂಗ್ರೆಸ್‌ನವರು ಪಾಕಿಸ್ತಾನದ ಬೆಂಬಲ ಕೇಳಿದ್ರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮೋದಿ ಅವರನ್ನು ಸೋಲಿಸಲು ಪಾಕಿಸ್ತಾನದ ಬೆಂಬಲ ಕೇಳಿದ್ದರು. ಈ ತರಹದ ವ್ಯಕ್ತಿಗಳು ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲಿ ಪ್ರತಿಭಟನಾಕಾರರಿಗೆ ಸಿಕ್ತು ಲಕ್ಷ ಲಕ್ಷ ಹಣ!

    Congress

    ಕಾಂಗ್ರೆಸ್ ಇಡೀ ದೇಶದಲ್ಲಿ ಭಯೋತ್ಪಾದನೆ ವಿಷಯದಲ್ಲಿ ಪ್ರೆಸ್‌ಮೀಟ್ ಮಾಡುತ್ತಿದ್ದು, ಇದೊಂದು ಹಾಸ್ಯಾಸ್ಪದ ಸಂಗತಿಯಾಗಿದೆ. ಕಾಂಗ್ರೆಸ್‌ನಿಂದಲೇ ಭಯೋತ್ಪಾದನೆ ಪ್ರಾರಂಭವಾಯಿತು. ಆಗ ದೇಶದ ಮೂಲೆ ಮೂಲೆಯಲ್ಲೂ ಭಯೋತ್ಪಾದನಾ ಚಟುವಟಿಕೆಗಳು ನಡೆದಿವೆ. ಈಗ ದೇಶದ ಯಾವುದೇ ಭಾಗದಲ್ಲೂ ಭಯೋತ್ಪಾದನೆ ನಡೆಯುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ತನ್ನ ವೋಟ್‌ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹೊಳೆಗೆ ಕಾರು ಉರುಳಿದ ಪ್ರಕರಣಕ್ಕೆ ಟ್ವಿಸ್ಟ್- ಆಕ್ಸಿಡೆಂಟ್ ಆಗೋ 4 ನಿಮಿಷ ಮೊದಲೇ ಕರೆ ಮಾಡಿದ್ದ ಯುವಕರು..!

    ಕಾಂಗ್ರೆಸ್ ನೀತಿಯಿಂದಲೇ ಭಯೋತ್ಪಾದನೆ ಪ್ರಾರಂಭವಾಯಿತು. ಒಂದು ರೀತಿಯಲ್ಲಿ ಕಾಂಗ್ರೆಸ್ ಪ್ರಾಯೋಜಿತ ಭಯೋತ್ಪಾದನೆಗಳೇ ನಡೆದಿವೆ. ತುಷ್ಟೀಕರಣದ ರಾಜಕಾರಣದ ಪರಾಕಾಷ್ಟೇ ಎಷ್ಟರ ಮಟ್ಟಿಗೆ ಇತ್ತೆಂದರೆ, ಬಾಟ್ಲಾಹೌಸ್ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕರು ಸತ್ತಾಗ ಸೋನಿಯಾಗಾಂಧಿ ಅವರು ಕಣ್ಣೀರು ಹಾಕಿದ್ದರೆಂದು ಪಕ್ಷವೇ ಘೋಷಣೆ ಮಾಡಿದೆ. ತುಕಡೆ-ತುಕಡೆ ಗ್ಯಾಂಗ್ ಅಫ್ಜಲ್ ಗುರು ಪರ ಘೋಷಣೆ ಹಾಕಿದಾಗ ಅವರ ಪರ ನಿಂತವರು ರಾಹುಲ್ ಗಾಂಧಿ. ಈ ರೀತಿ ಹಲವು ಉದಾಹರಣೆಗಳಿವೆ ಅಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಡಿಕೆಶಿ ಅವರೇ ಸಿದ್ದರಾಮಯ್ಯರ ಟಾರ್ಗೆಟ್: ಸಿದ್ದರಾಮೋತ್ಸವ ಮಾಡ್ತಿರೋದಕ್ಕೆ ನಮಗೆ ಹೊಟ್ಟೆಕಿಚ್ಚಿಲ್ಲ. ಕಾಂಗ್ರೆಸ್ ಪಕ್ಷದವರಿಗೇ ಹೊಟ್ಟೆಕಿಚ್ಚಿದೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಬಂದು ಮೊದಲು ಖರ್ಗೆಯವರನ್ನ ಮುಳುಗಿಸಿದರು. ನಂತರ ಪರಮೇಶ್ವರ್‌ರನ್ನ ಮುಳುಗಿಸಿದರು. ಈಗ ಸಿದ್ದರಾಮಯ್ಯ ಅವರ ಮುಂದಿನ ಟಾರ್ಗೆಟ್ ಡಿ.ಕೆ.ಶಿವಕುಮಾರ್. ಹಾಗಾಗಿ ಸಿದ್ದರಾಮೋತ್ಸವ ಮಾಡಿದಷ್ಟೂ ನಮಗೇ ಲಾಭ. ಅದಕ್ಕೆ ನಾನು ಶುಭ ಹಾರೈಸುತ್ತೇನೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಒಂದು ಕಾಲದಲ್ಲಿ ಗುರು, ಈಗ ಬೇರೆ ಗುರು ಬಂದಿದ್ದಾರೆ: ಎಂಟಿಬಿ

    ಸಿದ್ದರಾಮಯ್ಯ ಒಂದು ಕಾಲದಲ್ಲಿ ಗುರು, ಈಗ ಬೇರೆ ಗುರು ಬಂದಿದ್ದಾರೆ: ಎಂಟಿಬಿ

    ಕೋಲಾರ: ಸಿದ್ದರಾಮಯ್ಯ ಅವರು ನನ್ನ ಗುರು, ನಾನು ಅವರ ಶಿಷ್ಯನೆ, ಈಗ ಗುರುವನ್ನೆ ಬಿಟ್ಟು ಬೇರೆ ಪಕ್ಷಕ್ಕೆ ಸೇರಿದ್ದೇನೆ. ಈಗ ಬೇರೆ ಗುರು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

    ಮಾಲೂರು ಪಟ್ಟಣದ ಅರಳೇರಿ ರಸ್ತೆಯಲ್ಲಿರುವ ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ಬಿಜೆಪಿ ರಾಜ್ಯ ಫಲಾನುಭವಿಗಳ ಪ್ರಕೋಷ್ಠ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ನನ್ನ ಕರೆದಿಲ್ಲ, ಅವರ ಇಷ್ಟ ಮಾಡಿಕೊಳ್ಳಲಿ ಎಂದರು.

    ಅಲ್ಲದೆ ಸಿದ್ದರಾಮಯ್ಯ ಅವರನ್ನು ಚುನಾವಣೆಯಲ್ಲಿ ಕೋಲಾರದಲ್ಲಿ ಸ್ಪರ್ಧಿಸಲು ಹಲವು ಕಾಂಗ್ರೆಸ್ ನಾಯಕರು ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಮಾಹಿತಿ ಇಲ್ಲ. ಅಧಿಕೃತವಾಗಿ ಆ ಬಗ್ಗೆ ಏನೂ ಮಾಹಿತಿ ಇಲ್ಲ ಎಂದರು. ಇದನ್ನೂ ಓದಿ: ಕಲಬುರಗಿಯಲ್ಲಿ ವರುಣಾರ್ಭಟಕ್ಕೆ ಮೊದಲ ಬಲಿ- ಜನ ಜೀವನ ಅಸ್ತವ್ಯಸ್ತ

    ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರೆಂದ್ಲಾಜೆ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ನಾಗೇಶ್ ಭಾಗಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಇದ್ದರು. ಇದನ್ನೂ ಓದಿ: ಪದವಿ, ಸ್ನಾತಕೋತ್ತರ ಕೋರ್ಸ್‌ಗೆ ರಾಜ್ಯಕ್ಕೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ: ಅಶ್ವಥ್ ನಾರಾಯಣ

    Live Tv
    [brid partner=56869869 player=32851 video=960834 autoplay=true]

  • ಕೋಲು ಹಿಡಿದು ರಾಜಕಾರಣ ಮಾಡಲ್ಲ, 80 ವರ್ಷ ಆದ್ಮೇಲೆ ಚುನಾವಣೆಗೆ ನಿಲ್ಲಲ್ಲ: ಸಿದ್ದರಾಮಯ್ಯ

    ಕೋಲು ಹಿಡಿದು ರಾಜಕಾರಣ ಮಾಡಲ್ಲ, 80 ವರ್ಷ ಆದ್ಮೇಲೆ ಚುನಾವಣೆಗೆ ನಿಲ್ಲಲ್ಲ: ಸಿದ್ದರಾಮಯ್ಯ

    ಚಾಮರಾಜನಗರ: ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ. 80ರ ನಂತರ ಚುನಾವಣೆಗೆ ನಿಲ್ಲಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.

    ಕೊಳ್ಳೇಗಾಲದ ಬಸ್ತಿಪುರ ಬಡಾವಣೆಯಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಮುಂದೆಯೂ ಸಹ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಧ್ಯಂತರ ಚುನಾವಣೆಗೆ ಆಗ್ರಹ – ನನ್ನ ಮಹಾ ಸರ್ಕಾರವನ್ನು ಜನರೇ ಉರುಳಿಸಲಿ ಎಂದ ಉದ್ಧವ್ ಠಾಕ್ರೆ

    ನಾನು ಶಾಸಕನಾಗಿ 39 ವರ್ಷ ಪೂರೈಸಿದ್ದೇನೆ. ಮುಂದಿನ 5 ವರ್ಷ ಅಧಿಕಾರ ಮುಗಿಯುವುದರೊಳಗೆ ನನಗೆ 80 ವರ್ಷ ಕಳೆಯುತ್ತದೆ. ಹಾಗಾಗಿ 2023ರ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಆಗಲಿದೆ. 80 ವರ್ಷ ಕಳೆದ ನಂತರ ನಾನು ಕೋಲು ಹಿಡಿದು ರಾಜಕಾರಣ ಮಾಡುವುದಿಲ್ಲ ಎಂದು ತಮ್ಮ ರಾಜಕೀಯ ನಿವೃತ್ತಿಯ ಸೂಚನೆ ನೀಡಿದ್ದಾರೆ. ಇದನ್ನೂಓದಿ: ಅಮರನಾಥದಲ್ಲಿ ಮೇಘಸ್ಪೋಟ, 8 ಮಂದಿ ಸಾವು – NDRF, BSF ತಂಡಗಳಿಂದ ಕಾರ್ಯಾಚರಣೆ

    ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಳಿಕ ಸಿದ್ದರಾಮಯ್ಯ ಅವರು `ಸಿದ್ದಪ್ಪ ಸ್ವಾಮಿ ಬನ್ನಿ, ಪವಾಡ ಗೆದ್ದಯ್ಯ ನೀವೇ ಬನ್ನಿ’ ಹಾಗೂ `ಆನು ಮಲೆ ಜೇನು ಮಲೆ, ಗುಂಜುಮಲೆ ಗುಲಗಂಜಿಮಲೆ’ ಮಲೆ ಮಹದೇಶ್ವರ ಪದಗಳನ್ನಾಡಿ ಮಹದೇಶ್ವರದ ಬೆಟ್ಟದಲ್ಲಿ ನಡೆದ ಪ್ರಸಂಗವನ್ನು ಹಂಚಿಕೊಂಡರು. ಇದನ್ನೂ ಓದಿ: ಅಮರನಾಥದಲ್ಲಿ ಮೇಘಸ್ಪೋಟ, 8 ಮಂದಿ ಸಾವು – NDRF, BSF ತಂಡಗಳಿಂದ ಕಾರ್ಯಾಚರಣೆ

    ಸಿದ್ದರಾಮೋತ್ಸವ ಅಲ್ಲ ಇದು ಅಮೃತ ಮಹೋತ್ಸವ: ನಾನು ಶಾಲೆಗೆ ಸೇರುವಾಗ ಅಂದಿನ ಮುಖ್ಯಶಿಕ್ಷಕರಾಗಿದ್ದ ರಾಜಪ್ಪ ಅವರು ಕೊಟ್ಟ ದಿನಾಂಕವೇ ನನ್ನ ಜನ್ಮದಿನಾಂಕವಾಗಿದೆ. ನನ್ನ ಹಿತೈಷಿಗಳು, ಅಭಿಮಾನಿಗಳು ಹಾಗೂ ಸ್ನೇಹಿತರು ಒಟ್ಟಾಗಿ ಸೇರಿ 75ನೇ ಜನ್ಮ ದಿನಾಚರಣೆಯನ್ನು ದಾವಣಗೆರೆಯಲ್ಲಿ ಆಚರಿಸುತ್ತಿದ್ದಾರೆ. ಸಿದ್ದರಾಮೋತ್ಸವ ಎಂಬುದಾಗಿ ಆರ್‌ಎಸ್‌ಎಸ್ ನವರು ಕರೆದಿದ್ದಾರೆ. ಸಿದ್ದರಾಮೋತ್ಸವ ಅಂಥಾ ಎಲ್ಲೂ ಇಲ್ಲ. ಆ ರೀತಿ ಉತ್ಸವ ನಡೆಯೋದು ಇಲ್ಲ. ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಎಂದು ಆಚರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವ ಮುಗೀತಿದ್ದಂತೆ ಕಾಂಗ್ರೆಸ್ ಇಬ್ಭಾಗ- ಈಶ್ವರಪ್ಪ ಭವಿಷ್ಯ

    ಸಿದ್ದರಾಮೋತ್ಸವ ಮುಗೀತಿದ್ದಂತೆ ಕಾಂಗ್ರೆಸ್ ಇಬ್ಭಾಗ- ಈಶ್ವರಪ್ಪ ಭವಿಷ್ಯ

    ಶಿವಮೊಗ್ಗ: ಸಿದ್ದರಾಮೋತ್ಸವ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಇಬ್ಭಾಗ ಆಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮೋತ್ಸವ ವಿರೋಧ ಮಾಡುತ್ತೇನೆ ಅಂತಾ ಡಿಕೆಶಿ ಧೈರ್ಯವಾಗಿ ಹೇಳಬಹುದಿತ್ತು. ಬಹಿರಂಗವಾಗಿ ನನಗೂ ಸಿದ್ದರಾಮಯ್ಯ ಅವರಿಗೆ ವೈಮನಸ್ಸು ಇದೆ ಅಂತ ಒಪ್ಪಿಕೊಳ್ಳದ ಡಿಕೆಶಿ ಶಿಖಂಡಿ ರೂಪದಲ್ಲಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಬರೋದು ಗ್ಯಾರಂಟಿ; ಆದರೆ…!

    ಸಿದ್ದರಾಮಯ್ಯ, ಡಿಕೆಶಿ ಚುನಾವಣೆಯಲ್ಲಿ ಗೆಲ್ಲುತ್ತಾರೋ, ಸೊಲುತ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯನಿಗೆ ಇನ್ನೂ ಕ್ಷೇತ್ರವೇ ಗೊತ್ತಿಲ್ಲ. ಆಗಲೇ ಮುಖ್ಯಮಂತ್ರಿ ಅಂತಾರೆ. ಜನತೆ ಇವರನ್ನು ನೋಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರನ್ನೂ ಜನರೇ ಸೋಲಿಸುತ್ತಾರೆ. ಹಿಂದೆ ಸರ್ಕಾರವನ್ನು ಉರುಳಿಸಿದರು. ಬರೋ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷವಾಗಿಯೂ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಬರೋದು ಗ್ಯಾರಂಟಿ; ಆದರೆ…!

    ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಬರೋದು ಗ್ಯಾರಂಟಿ; ಆದರೆ…!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ನಡೆಯುವ ಸಿದ್ದರಾಮೋತ್ಸವದಲ್ಲಿ ಎಐಸಿಸಿ ನಾಯಕ ರಾಹುಲ್‌ ಗಾಂಧಿ ಭಾಗವಹಿಸುವುದು ಖಚಿತವಾಗಿದೆ. ಆದರೆ ಕೊನೆಗಳಿಗೆಯಲ್ಲಿ ಬದಲಾವಣೆ ಆಗಬಹುದು ಎಂದು ರಾಹುಲ್‌ ಗಾಂಧಿ ಕಚೇರಿಯಿಂದ ಮಾಹಿತಿ ರವಾನೆಯಾಗಿದೆ.

    ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವದಲ್ಲಿ ಎಐಸಿಸಿ ನಾಯಕರ ರಾಹುಲ್ ಗಾಂಧಿ ಭಾಗವಹಿಸುವುದು ಖಚಿತವಾಗಿದೆ. ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ರಾಹುಲ್ ಗಾಂಧಿ ಭಾಗವಹಿಸುತ್ತಾರೆ ಎಂದು ರಾಹುಲ್ ಗಾಂಧಿ ಕಚೇರಿಯಿಂದ ಸಿದ್ದರಾಮಯ್ಯಗೆ ಮಾಹಿತಿ ತಲುಪಿಸಲಾಗಿದೆ. ಇದನ್ನೂ ಓದಿ: ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್

    Siddaramaiah

    ಸಿದ್ದರಾಮೋತ್ಸವ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಆದರೂ ಕೊನೆಗಳಿಗೆಯಲ್ಲಿ ಬದಲಾವಣೆ ಆಗಬಹುದು. ಸ್ವತಃ ರಾಹುಲ್ ಗಾಂಧಿ ಕಚೇರಿಯಿಂದ ಸಿದ್ದರಾಮಯ್ಯಗೆ ಬಂದಿರುವ ಸಂದೇಶ. ಜುಲೈ 31 ರಂದು ಇಡಿ ವಿಚಾರಣೆಗೆ ಹಾಜರಾಗುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಮನ್ಸ್ ನೀಡಲಾಗಿದೆ. ವಿಚಾರಣೆ ಆಗಸ್ಟ್ 3 ಕ್ಕೂ ಮುಂದುವರಿದರೆ ರಾಹುಲ್ ಗಾಂಧಿ ಸಿದ್ದರಾಮೋತ್ಸವಕ್ಕೆ ಬರಲು ಆಗಲ್ಲ ಎಂದು ರಾಹುಲ್ ಗಾಂಧಿ ಕಚೇರಿಯಿಂದ ಮಾಹಿತಿ ರವಾನಿಸಲಾಗಿದೆ.

    ಆಗಸ್ಟ್ 3 ರಂದು ಸೋನಿಯಾ ಗಾಂಧಿಯವರ ವಿಚಾರಣೆ ಇದ್ದರೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರಲು ಸಾಧ್ಯವಿಲ್ಲ. ಆಗಸ್ಟ್ 3 ರಂದು ರಾಹುಲ್ ಗಾಂಧಿಯವರನ್ನೇ ವಿಚಾರಣೆಗೆ ಕರೆದರೆ ಸಿದ್ದರಾಮೋತ್ಸವಕ್ಕೆ ಬರಲ್ಲ. ಈ ಬೆಳವಣಿಗೆ ನಡೆಯದಿದ್ದರೆ ಖಂಡಿತ ಆಗಸ್ಟ್ 3 ರಂದು ರಾಹುಲ್ ಗಾಂಧಿ ಅಮೃತ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ ಎಂದು ರಾಹುಲ್ ಗಾಂಧಿ ಕಚೇರಿಯಿಂದ ಸಿದ್ದರಾಮಯ್ಯಗೆ ಸಂದೇಶ ತಲುಪಿದೆ. ಇದನ್ನೂ ಓದಿ: ಭ್ರಷ್ಟಾಚಾರದ ಇನ್ನೊಂದು ಮುಖವೇ ಕಾಂಗ್ರೆಸ್: ರೇಣುಕಾಚಾರ್ಯ

    Live Tv
    [brid partner=56869869 player=32851 video=960834 autoplay=true]

  • ಡಿಕೆಶಿ ನಿಮ್ಮ ಪ್ರತಿಸ್ಪರ್ಧಿಯೇ: ಸಿದ್ದುಗೆ ಬಿಜೆಪಿ ಪ್ರಶ್ನೆ

    ಡಿಕೆಶಿ ನಿಮ್ಮ ಪ್ರತಿಸ್ಪರ್ಧಿಯೇ: ಸಿದ್ದುಗೆ ಬಿಜೆಪಿ ಪ್ರಶ್ನೆ

    ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ನಾಯಕತ್ವದ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬಿಜೆಪಿ ಟ್ವೀಟ್‌ ಮೂಲಕ ಈ ಇಬ್ಬರು ನಾಯಕರ ಕಾಲೆಳೆದಿದೆ.

    ಟ್ವೀಟ್‌ನಲ್ಲೇನಿದೆ?
    ಕೆಪಿಸಿಸಿ ಅಧ್ಯಕ್ಷರನ್ನೇ ಆಪ್ತ ಎನ್ನಲು ಸಿದ್ದರಾಮಯ್ಯ ಹಿಂದೇಟು ಹಾಕಿದ್ದಾರೆಂದರೆ ಇವರ ನಡುವಿನ ಕಂದಕ ಎಷ್ಟು ಆಳವಿರಬಹುದು? ಸಿದ್ದರಾಮಯ್ಯನವರೇ, ಸಿದ್ದರಾಮೋತ್ಸವ ಸ್ವಾಗತ ಸಮಿತಿಯಲ್ಲಿ ಇರುವವರು ಮಾತ್ರ ಆಪ್ತರೇ? ಡಿಕೆಶಿ ನಿಮ್ಮ ಪ್ರತಿಸ್ಪರ್ಧಿಯೇ? ಇದನ್ನೂ ಓದಿ: ಎಸಿಬಿ ದಾಳಿಗೆ ಒಳಗಾಗುವವರು ಶುದ್ಧರಾಗಿದ್ರೆ ಏಕೆ ಹೆದರಬೇಕು: ಬಿ.ಸಿ.ನಾಗೇಶ್ ಟಾಂಗ್

    ಸಿದ್ದರಾಮಯ್ಯರನ್ನು ಮುಂದಿನ ಸಿಎಂ ಎಂದು ಘೋಷಿಸುವ ವೇದಿಕೆಯೇ ಸಿದ್ದರಾಮೋತ್ಸವ ಎಂದು ನಾವು ಆರಂಭದಲ್ಲೇ ಹೇಳಿದ್ದೆವು. ಈಗ ನಾಡಿನ ಜನತೆಯಲ್ಲಿ ಹೀಗೊಂದು ಸಂಶಯ ಹರಿದಾಡುತ್ತಿದೆ. srlopcm75@gmail.com ಅಂದರೆ,
    sr = ಸಿದ್ದರಾಮಯ್ಯ
    lop= ಪ್ರತಿಪಕ್ಷ ನಾಯಕ
    cm = ಮುಖ್ಯಮಂತ್ರಿ
    75= ಅಮೃತ ಮಹೋತ್ಸವ
    ನಿಜವೇ ಇದು? #ಉತ್ತರಿಸಿಸಿದ್ದರಾಮಯ್ಯ ಎಂದು ಬಿಜೆಪಿ ಟ್ವೀಟ್‌ ಮೂಲಕ ಪ್ರಶ್ನಿಸಿದೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 75ನೇ ಜನ್ಮದಿನಾಚರಣೆ ಸಂಭ್ರಮದ ಹೊಸ್ತಿಲಲ್ಲಿದ್ದಾರೆ. ಹುಟ್ಟುಹಬ್ಬದಂದು ಸಿದ್ದರಾಮೋತ್ಸವ ಕಾರ್ಯಕ್ರಮದ ಮೂಲಕ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಆದರೆ ಇದಕ್ಕೆ ಡಿ.ಕೆ.ಶಿವಕುಮಾರ್‌ ಬೇಸರಗೊಂಡಿದ್ದಾರೆ. ವ್ಯಕ್ತಿ ಪೂಜೆ ಅಲ್ಲ, ಪಕ್ಷ ಪೂಜೆ ಮುಖ್ಯ ಎಂದು ಪರೋಕ್ಷವಾಗಿ ಸಿದ್ದರಾಮೋತ್ಸವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಡೀ ದೇಶದಲ್ಲೇ ಕರ್ನಾಟಕ ಮೋಸ್ಟ್ ಕರಪ್ಟ್ ಸ್ಟೇಟ್, ಸರ್ಕಾರ ಒಟ್ಟಾಗಿ ಉಪ್ಪಿನ ಅಂಗಡಿ ತೆರೆದಿದೆ: ಡಿಕೆಶಿ

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವಕ್ಕೆ ಡಿಕೆಶಿ ಕೆಂಪೇಗೌಡ ಉತ್ಸವ ಟಕ್ಕರ್

    ಸಿದ್ದರಾಮೋತ್ಸವಕ್ಕೆ ಡಿಕೆಶಿ ಕೆಂಪೇಗೌಡ ಉತ್ಸವ ಟಕ್ಕರ್

    ಬೆಂಗಳೂರು: ಸಿದ್ದರಾಮಯ್ಯನವರ ಸಿದ್ದರಾಮೋತ್ಸವಕ್ಕೆ ಭರ್ಜರಿ ಕೌಂಟರ್ ಕೊಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

    SIDDARAMAIAH

    ಹಳೆ ಮೈಸೂರು ಭಾಗದಲ್ಲಿ ಅದ್ದೂರಿ ಕೆಂಪೇಗೌಡರ ಉತ್ಸವಕ್ಕೆ ಒಕ್ಕಲಿಗ ಸಮುದಾಯದ ನಾಯಕರು ಹಾಗೂ ಸ್ವಾಮೀಜಿಗಳು ಆಸಕ್ತಿ ತೋರುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದ್ದು, ಸಮುದಾಯದ ವತಿಯಿಂದ ಕೆಂಪೇಗೌಡ ಉತ್ಸವದ ಅಂಗವಾಗಿ ಬೃಹತ್ ಸಮಾವೇಶ ನಡೆಸಿದರೆ ಸಮಾವೇಶದ ಸಂಪೂರ್ಣ ಜವಾಬ್ದಾರಿ ಹೊರಲು ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಭಾರೀ ಮಳೆಗೆ ಕಳಸ, ಹೊರನಾಡು ಸಂಪರ್ಕ ಕಡಿತ – ಬೆಳ್ತಂಗಡಿ ಶಾಲಾ, ಕಾಲೇಜುಗಳಿಗೆ ರಜೆ

    ಈ ಮೂಲಕ, ರಾಜಕೀಯ ಎದುರಾಳಿಗಳಿಗೆ ತಮ್ಮ ಸಮುದಾಯದ ಶಕ್ತಿ ಹಾಗೂ ಬೆಂಬಲದ ಸಂದೇಶ ರವಾನಿಸುವುದು ಡಿಕೆಶಿ ಲೆಕ್ಕಾಚಾರವಾಗಿದೆ. ಈ ಮಧ್ಯೆ ಸಿದ್ದರಾಮಯ್ಯ ಅಮೃತ ಮಹೋತ್ಸವದ ಮಾಹಿತಿಯನ್ನ ಅಮೃತ ಮಹೋತ್ಸವ ಸಮಿತಿ ಇಂದು ಅಧಿಕೃತವಾಗಿ ಪ್ರಕಟಿಸಲಿದೆ. ಇದನ್ನೂ ಓದಿ: ಜುಲೈ 12ಕ್ಕೆ ಚಾಮರಾಜಪೇಟೆ ಬಂದ್ – ಬೆಂಬಲ ನೀಡಲು ಮುಸ್ಲಿಂ ವ್ಯಾಪಾರಿಗಳು ನಿರಾಕರಣೆ

    ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಬೆಳಗ್ಗೆ 10ಕ್ಕೆ ಸಭೆ ನಡೆಯಲಿದೆ. ಆರ್.ವಿ.ದೇಶಪಾಂಡೆ ನೇತೃತ್ವದ ಅಮೃತೋತ್ಸವ ಸಮಿತಿಯ ಸದಸ್ಯರಾದ ಮಹದೇವಪ್ಪ, ಬೈರತಿ ಸುರೇಶ್, ಕೆ.ಜೆ.ಜಾರ್ಜ್, ಪಿಜಿಆರ್ ಸಿಂಧ್ಯ, ಜಯಮಾಲ, ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಜಮೀರ್ ಅಹಮ್ಮದ್ ಸೇರಿದಂತೆ ಘಟಾನುಘಟಿಗಳು ಸಭೆಯಲ್ಲಿ ಭಾಗಿ ಆಗಲಿದ್ದಾರೆ. ಆಗಸ್ಟ್ 3ರ ಸಮಾವೇಶ, ಪೂರ್ವ ಸಿದ್ಧತೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]