Tag: ಸಿದ್ದರಾಮೋತ್ಸವ

  • ಮುಖ್ಯಮಂತ್ರಿ ಆಗಬೇಕಾದರೆ ಜನಾದೇಶ ಬೇಕು: ಸಿದ್ದರಾಮಯ್ಯ ಟೀಂಗೆ ಎಂಟಿಬಿ ತಿರುಗೇಟು

    ಮುಖ್ಯಮಂತ್ರಿ ಆಗಬೇಕಾದರೆ ಜನಾದೇಶ ಬೇಕು: ಸಿದ್ದರಾಮಯ್ಯ ಟೀಂಗೆ ಎಂಟಿಬಿ ತಿರುಗೇಟು

    ಬೆಂಗಳೂರು: ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿ ಆಗಬೇಕಾದರೂ ಮೊದಲು ಜನಾದೇಶ ಮುಖ್ಯ ಎಂದು ಸಿದ್ದರಾಮಯ್ಯ ಟೀಂಗೆ ಸಚಿವ ಎಂಟಿಬಿ ನಾಗರಾಜ್ ತಿರುಗೇಟು ಕೊಟ್ಟಿದ್ದಾರೆ.

    ಸಿದ್ದರಾಮೋತ್ಸವದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ನಮ್ಮ ಸರ್ಕಾರದ ಸಾಧನೆ ತಿಳಿಸಲು ಜನೋತ್ಸವ ಮಾಡುತ್ತಿದ್ದೇವೆ. ಆದರೆ ಸಿದ್ದರಾಮಯ್ಯ ಅವರ ಟೀಂ ಸಿದ್ದರಾಮೋತ್ಸವ ಮಾಡುತ್ತಿದೆ. ಅವರು ಸಿದ್ದರಾಮೋತ್ಸವ ಮಾಡಲಿ, ನಾವು ಜನೋತ್ಸವ ಮಾಡುತ್ತೇವೆ. ಸಿದ್ದರಾಮೋತ್ಸವ ಮಾಡಿದರೆ ನಮಗೇನು ಅಭ್ಯಂತರ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಗೋಮಾಂಸ ಪ್ರಕರಣವನ್ನು ಪ್ರಸ್ತಾಪಿಸಿ ಸಿದ್ದುವನ್ನು ಸಿಂಹ ಎಂದು ಕೊಂಡಾಡಿದ ಜಮೀರ್

    ಸಿದ್ದರಾಮಯ್ಯ ಸಿಎಂ ಎಂಬ ಅವರ ಶಿಷ್ಯರ ಹೇಳಿಕೆಗೆ ತಿರುಗೇಟು ಕೊಟ್ಟ ಎಂಟಿಬಿ, ಯಾರೇ ಮುಖ್ಯಮಂತ್ರಿ ಆಗಬೇಕಾದರೂ ಜನರ ತೀರ್ಮಾನ ಮುಖ್ಯ. ಸಿಎಂ ಆಗಬೇಕಾದರೆ ಜನಾದೇಶ ಮೊದಲು‌ ಅವಶ್ಯಕತೆ ಇದೆ. ಜನರು ತೀರ್ಮಾನ ಕೊಡದೇ ಸಿಎಂ ಆಗಲು ಸಾಧ್ಯವಿಲ್ಲ ಅಂತಾ ಸಿದ್ದರಾಮಯ್ಯ ಟೀಂಗೆ ಎಂಟಿಬಿ ನಾಗರಾಜ್ ಟಾಂಗ್‌ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವ ಜನಪರ ಉತ್ಸವ ಅಲ್ಲ, ಅಸ್ತಿತ್ವ ತೋರ್ಪಡಿಕೆಯ ಉತ್ಸವ: ಹಾಲಪ್ಪ ಆಚಾರ್

    ಸಿದ್ದರಾಮೋತ್ಸವ ಜನಪರ ಉತ್ಸವ ಅಲ್ಲ, ಅಸ್ತಿತ್ವ ತೋರ್ಪಡಿಕೆಯ ಉತ್ಸವ: ಹಾಲಪ್ಪ ಆಚಾರ್

    ಧಾರವಾಡ: ಸಿದ್ದರಾಮೋತ್ಸವ ಅದೊಂದು ಜನಪರವಲ್ಲದ ಉತ್ಸವ. ತಮ್ಮ ಅಸ್ತಿತ್ವಕ್ಕಾಗಿ ಈ ಉತ್ಸವ ಮಾಡಿಕೊಳ್ಳುತ್ತಿದ್ದಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಸಿದ್ದರಾಮೋತ್ಸವದಿಂದ ಜನರಿಗೆ ಯಾವುದೇ ಲಾಭವಿಲ್ಲ. ಅವರು ತಮ್ಮ ಅಸ್ತಿತ್ವ ತೋರಿಸುವುದಕ್ಕಾಗಿ ಈ ಉತ್ಸವ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ ಎಂದರು.

    Siddaramaiah

    ಆರ್‌ಎಸ್‌ಎಸ್ ಒಂದು ಸುಳ್ಳು ಸಂಘ ಎಂಬ ಹೇಳಿಕೆ ಕೊಟ್ಟ ಪ್ರೊ.ಕೆ.ಎಸ್ ಭಗವಾನ್ ಅವರಿಗೆ ತಿರುಗೇಟು ನೀಡಿದ ಸಚಿವರು, ಒಬ್ಬ ವ್ಯಕ್ತಿಯ ಬೆಳವಣಿಗೆ ಸಹಿಸಲಾರದ ವ್ಯಕ್ತಿ, ಬಾಯಿಗೆ ಬಂದಂತೆ ಮಾತನಾಡುವುದು ಹಾಗೂ ತಮ್ಮ ವ್ಯಕ್ತಿತ್ವ, ವಿಚಾರಗಳನ್ನು ಹೊರ ಹಾಕುವ ಕೆಲಸ ಮಾಡುತ್ತಾನೆ. ಅದಕ್ಕೆ ಹೆಚ್ಚು ಒತ್ತು ಕೊಡುವ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಶಿಷ್ಯ- ಬಿಜೆಪಿಗರಿಗೆ ಜಮೀರ್ ಟಾಂಗ್

    ಸಿಎಂ ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಷ್ಟ್ರಪತಿಗಳ ಅಧಿಕಾರ ಸ್ವೀಕಾರ ಸಮಾರಂಭಕ್ಕಾಗಿ ಸಿಎಂ ದೆಹಲಿಗೆ ಹೋಗಿದ್ದಾರೆ. ಸಂಪುಟ ವಿಸ್ತರಣೆಗೆ ಹೋಗಿಲ್ಲ. ಆ ಪ್ರಸಂಗ ಬಂದರೆ ದೆಹಲಿ ವರಿಷ್ಠರೇ ಸಿಎಂ ಅವರನ್ನು ಕರೆಯುತ್ತಾರೆ ಎಂದರು.

    ಬೇಬಿ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಲ್ಲಿನ ಜನ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿದೆ. ಆದರೆ, ತಜ್ಞರು ಬಂದು ಅಲ್ಲಿ ಪರೀಕ್ಷೆ ಮಾಡಲಿದ್ದಾರೆ. ಆಮೇಲೆ ಗಣಿಗಾರಿಕೆ ಮಾಡಬೇಕೋ ಬೇಡವೋ ಎಂದು ತೀರ್ಮಾನಿಸಲಾಗುತ್ತದೆ ಎಂದರು. ಇದನ್ನೂ ಓದಿ: ಚುನಾವಣೆ ವರ್ಷ ಇದು, ಏನೇ ಮಾಡಿದರೂ ಪಕ್ಷಕ್ಕೆ ಲಾಭ: ಕೆ.ಎನ್ ರಾಜಣ್ಣ

    Live Tv
    [brid partner=56869869 player=32851 video=960834 autoplay=true]

  • ಸಿದ್ದು ಪರ ನಿಂತ ಎಚ್. ವಿಶ್ವನಾಥ್ ಪುತ್ರ

    ಸಿದ್ದು ಪರ ನಿಂತ ಎಚ್. ವಿಶ್ವನಾಥ್ ಪುತ್ರ

    ಮೈಸೂರು: ಸಿದ್ದರಾಮೋತ್ಸವಕ್ಕೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಪುತ್ರ ಕೈ ಜೋಡಿಸಿದ್ದಾರೆ. ಸಿದ್ದರಾಮಯ್ಯ ಪರ ಮತ್ತು ವಿರುದ್ಧವಾಗಿ ಅಪ್ಪ -ಮಗ ನಿಂತಂತಾಗಿದೆ.

    ಸಿದ್ದರಾಮಯ್ಯ ವಿರುದ್ಧ ಹೆಚ್ ವಿಶ್ವನಾಥ್ ಸದಾ ಟೀಕೆ ಮಾಡುತ್ತಾರೆ. ಆದರೆ, ಇತ್ತ ಸಿದ್ದರಾಮಯ್ಯ ಪರ ಅವರ ಪುತ್ರ ಅಮಿತ್ ದೇವರಹಟ್ಟಿ ನಿಂತಿದ್ದು, ಭಾನುವಾರ ಮೈಸೂರಿನಲ್ಲಿ ನಡೆದ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದರು.  ಇದನ್ನೂ ಓದಿ: ಗೂಗಲ್ ಕೋ-ಫೌಂಡರ್ ಪತ್ನಿ ಜೊತೆಗಿನ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ಮಸ್ಕ್

    H VISHWANATH

    ಕುರುಬ ಸಮುದಾಯದ ಪ್ರಮುಖ ಮುಖಂಡ ಪೂರ್ವಭಾವಿ ಸಭೆಯಲ್ಲಿ ವಿಶ್ವನಾಥ್ ಪುತ್ರ ಅಮಿತ್ ಭಾಗಿಯಾಗಿ ಸಿದ್ದರಾಮೋತ್ಸವಕ್ಕೆ ಜನರನ್ನು ಸೇರಿಸುವ ಹೊಣೆ ಹೊತ್ತರು. ನಾನು ಜಿಲ್ಲಾ ಪಂಚಾಯತ್‍ನಲ್ಲಿ ಗೆಲ್ಲಲು ಸಿದ್ದರಾಮಯ್ಯ ಕಾರಣ. ನನ್ನ ಪರ ಪ್ರಚಾರಕ್ಕೆ ಬಂದು ನನ್ನನ್ನು ಸಿದ್ದರಾಮಯ್ಯ ಗೆಲ್ಲಿಸಿದರು. ಇದನ್ನೂ ಓದಿ: ಬಸ್‍ಗಳ ನಡುವೆ ಭೀಕರ ಅಪಘಾತ – 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಸಿದ್ದರಾಮಯ್ಯ ಹೊಳೆಯುವ ವಜ್ರವಿದ್ದಂತೆ. ನಾವು(ಕುರುಬ ಸಮಾಜದವರು) ಮತ್ತಷ್ಟು ಹೊಳಪು ನೀಡುವ ಕೆಲಸ ಮಾಡಬೇಕು. ಶಾಸಕ ಹೆಚ್.ಪಿ. ಮಂಜುನಾಥ್, ಮುಖಂಡ ರವಿಶಂಕರ್ ಜೊತೆಗೂಡಿ ಹೆಚ್ಚಿನ ಜನರನ್ನು ಸೇರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೌದು ಹುಲಿಯಾ ಎಂದು ಬೊಬ್ಬೆ ಹಾಕಿಸಿ ಪಪ್ಪುವನ್ನು ಬೆಚ್ಚಿ ಬೀಳಿಸುವುದು ಸಿದ್ದು ಬಣದ ಲೆಕ್ಕಾಚಾರ: ಬಿಜೆಪಿ

    ಹೌದು ಹುಲಿಯಾ ಎಂದು ಬೊಬ್ಬೆ ಹಾಕಿಸಿ ಪಪ್ಪುವನ್ನು ಬೆಚ್ಚಿ ಬೀಳಿಸುವುದು ಸಿದ್ದು ಬಣದ ಲೆಕ್ಕಾಚಾರ: ಬಿಜೆಪಿ

    ಬೆಂಗಳೂರು: ರಾಹುಲ್ ಗಾಂಧಿ ಸಮ್ಮುಖದಲ್ಲಿ ತಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುವುದು ಸಿದ್ದರಾಮಯ್ಯರ ಸಿದ್ದರಾಮೋತ್ಸವದ ಉದ್ದೇಶ. ಇದಕ್ಕಾಗಿಯೇ ರಾಹುಲ್‍ಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಲಕ್ಷಾಂತರ ಜನರ ಮೂಲಕ ಹೌದು ಹುಲಿಯಾ ಎಂದು ಬೊಬ್ಬೆ ಹಾಕಿಸಿ, ಪಪ್ಪುವನ್ನು ಬೆಚ್ಚಿ ಬೀಳಿಸುವುದು ಸಿದ್ದು ಬಣದ ಲೆಕ್ಕಾಚಾರ ಎಂದು ಸರಣಿ ಟ್ವೀಟ್‌ ಮಾಡಿ ಬಿಜೆಪಿ ಕಾಲೆಳೆದಿದೆ.

    ಟ್ವೀಟ್‌ನಲ್ಲಿ ಏನಿದೆ:
    ಕೆಪಿಸಿಸಿ ಕಚೇರಿಯಲ್ಲಿ ಪಿಸು ಮಾತು ಬಂದಾಗಲೇ ಡಿ.ಕೆ ಶಿವಕುಮಾರ್ ಎಚ್ಚೆತ್ತುಕೊಳ್ಳಬೇಕಿತ್ತು. ಸಿದ್ದರಾಮಯ್ಯ ಟೂಲ್ ಕಿಟ್ ಆಟ ಅದಾಗಲೇ ಶುರುವಾಗಿತ್ತು, ಅಮಾಯಕರ ತಲೆದಂಡವಾಯಿತಷ್ಟೇ. ಈಗ ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಟೂಲ್‍ಕಿಟ್ ಪ್ರಹಸನ ಆರಂಭಿಸಿದ್ದಾರೆ, ಈ ಬಾರಿ ದೊಡ್ಡ ಬೇಟೆಯಾಡುವುದು ಖಚಿತ! ಇದನ್ನೂ ಓದಿ: ಬಿಎಸ್‍ವೈ ಕಂಡು ಕಣ್ಣೀರು ಹಾಕಿದ ರೇಣುಕಾಚಾರ್ಯ

    ರಾಜಕೀಯ ಚದುರಂಗದಾಟದಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಸಿದ್ದರಾಮೋತ್ಸವ ಏಕಾಏಕಿ ಆಯೋಜನೆಗೊಂಡಿದ್ದಲ್ಲ. ಯಾವ ದಾಳವನ್ನು ಯಾವಾಗ ಯಾರ ಮುಂದೆ ಉರುಳಿಸಬೇಕೆಂಬ ಅನುಭವ ಸಿದ್ದರಾಮಯ್ಯಗಿದೆ. ಸಿದ್ದರಾಮೋತ್ಸವದ ಮೂಲಕ ಮುಂದೆ ಡಿಕೆಶಿ, ಪರಮೇಶ್ವರ್ ಹಾಗೂ ಖರ್ಗೆ ಅವರನ್ನು ಮಕಾಡೆ ಮಲಗಿಸುವ ಉದ್ದೇಶವಿದೆಯೇ? ಇದನ್ನೂ ಓದಿ: ದೇಶದಲ್ಲಿ 4 ಕೋಟಿಗೂ ಅಧಿಕ ಜನ ಮೊದಲ ಡೋಸ್ ಲಸಿಕೆ ಪಡೆದಿಲ್ಲ!

    ಪಕ್ಷತ್ಯಾಗ ಸಿದ್ದರಾಮಯ್ಯಗೆ ಹೊಸದಲ್ಲ. ಐದು ಬಾರಿ ಪಕ್ಷ ಬಿಟ್ಟ ಖ್ಯಾತಿ ಅವರದು. ಸಿದ್ದರಾಮೋತ್ಸವದಲ್ಲಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡದೇ ಇದ್ದರೆ ಸಿದ್ದರಾಮಯ್ಯ ಮತ್ತೆ ವಲಸೆ ಹೋಗುವುದು ನಿಶ್ಚಿತ. ಕಟ್ಟಿರುವ ಪಕ್ಷದಲ್ಲಿ ಸಿದ್ದರಾಮಯ್ಯ ಗೂಡು ಕಟ್ಟುತ್ತಾರೆಯೇ ವಿನಃ, ಪಕ್ಷ ಕಟ್ಟಿ ಅಭ್ಯಾಸವೇ ಇಲ್ಲ.

    ಸಿದ್ದರಾಮಯ್ಯ ಅವರಿಗೆ 75 ತುಂಬುವುದು ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗೆ ಎದುರಾಗುತ್ತಿರುವುದು ಕಾಕತಾಳೀಯವಲ್ಲ. ಇದೊಂದು ವ್ಯವಸ್ಥಿತ ಪೊಲಿಟಿಕಲ್ ಟೂಲ್‌ಕಿಟ್‌. ಖರ್ಗೆ, ಪರಮೇಶ್ವರ್, ಡಿಕೆಶಿ, ಎಂ.ಬಿ.ಪಾಟೀಲ್ ಸೇರಿದಂತೆ ಮೂಲ ಕಾಂಗ್ರೆಸ್ಸಿಗರನ್ನು ಹೇಗೆ ಮಟ್ಟ ಹಾಕಬೇಕೆಂಬುದೇ ಇದರ ರಹಸ್ಯ ಕಾರ್ಯಸೂಚಿ. ಇಷ್ಟು ವರ್ಷಗಳ ಕಾಲ ಅಧಿಕೃತವಾಗಿ ಜನ್ಮದಿನಾಚರಣೆಯನ್ನೇ ಆಚರಿಸಿಕೊಳ್ಳದ ಸಿದ್ದರಾಮಯ್ಯ ಹೇಗೆ ಅಮೃತಮಹೋತ್ಸವದ ಪ್ರಸ್ತಾವನೆ ಒಪ್ಪಿಕೊಂಡರು? ಪ್ರಯೋಜನ ಅಥವಾ ಲಾಭಾಕಾಂಕ್ಷಿ ಇಲ್ಲದೇ ದಡ್ಡನೂ ಹೆಜ್ಜೆ ಬದಲಾಯಿಸಲಾರ. ಅಂಥದರಲ್ಲಿ ಸಿದ್ದರಾಮಯ್ಯ ತಮ್ಮ ಉತ್ಸವದ ಮೂಲಕ ರಾಜಕೀಯ ಲಾಭ ಪಡೆಯದೇ ಬಿಡುತ್ತಾರೆಯೇ ಎಂದು ಪ್ರಶ್ನೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವ ಅಲ್ಲ ಅದು ಸಿದ್ದರಾಮಯ್ಯ ಅವರ ಕೊನೆಗಾಲದ ಉತ್ಸವ: ಲಕ್ಷ್ಮಣ ಸವದಿ ವ್ಯಂಗ್ಯ

    ಸಿದ್ದರಾಮೋತ್ಸವ ಅಲ್ಲ ಅದು ಸಿದ್ದರಾಮಯ್ಯ ಅವರ ಕೊನೆಗಾಲದ ಉತ್ಸವ: ಲಕ್ಷ್ಮಣ ಸವದಿ ವ್ಯಂಗ್ಯ

    ಬಾಗಲಕೋಟೆ: ಸಿದ್ದರಾಮೋತ್ಸವ ಅದು ಸಿದ್ದರಾಮಯ್ಯರ ಕೊನೆಗಾಲೋತ್ಸವ ಆಗುತ್ತದೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.

    ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿದ್ದರಾಮೋತ್ಸವದಿಂದ ಬಿಜೆಪಿಗೆ ಹುಮ್ಮಸ್ಸು, ಆತ್ಮಸ್ಥೈರ್ಯ ಬಂದಿದೆ. ಹೊಸ ಅಲೆಯನ್ನು ಸೃಷ್ಟಿ ಮಾಡುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ. ಹೀಗಾಗಿ ಸಿದ್ದರಾಮೋತ್ಸವ ಬಗ್ಗೆ ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಕೊನೆಗಾಲೋತ್ಸವ ಆಗುತ್ತೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅವಿವಾಹಿತೆಗೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

    ಕಾಂಗ್ರೆಸ್ಸಿನ ತಾಯಿ ಬಂಜೆ: ಕಾಂಗ್ರೆಸ್ ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇದೆ. ರಾಜಾಸ್ಥಾನ ಸೇರಿ ಕೆಲ ಸಣ್ಣಪುಟ್ಟ ರಾಜ್ಯಗಳಲ್ಲಿ ಮಾತ್ರವೇ ಉಳಿದಿದೆ. ಕಾಂಗ್ರೆಸ್ ಬಗ್ಗೆ ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸುತ್ತಾರೆ ಅಂತಾರೆ. ನಾನು ಈ ಮಾತು ಒಪ್ಪಲ್ಲ. ಗರ್ಭಿಣಿ ಆದರೆ ತಾನೆ ಕುಲಾಯಿ ಹೊಲಿಸುವುದು. ಕಾಂಗ್ರೆಸ್ಸಿನ ತಾಯಿ ಬಂಜೆ ಆಗಿದ್ದಾಳೆ. ಆ ತಾಯಿ ಗರ್ಭಿಣಿಯೂ ಆಗಲ್ಲ, ಕೂಸೂ ಹಡಿಯಲ್ಲ… ಹೀಗಾಗಿ ಕುಲಾಯಿ ಹೊಲಿಸುವ ಪ್ರಸಂಗವೂ ಬರಲ್ಲ ಲೇವಡಿ ಮಾಡಿದ್ದಾರೆ.

    ಕಾಂಗ್ರೆಸ್ ಪಕ್ಷದಲ್ಲೇ ಸಾಕಷ್ಟು ಅಸಮಾಧಾನ ಇದೆ. ಸಿದ್ದರಾಮಯ್ಯ ಈಗಾಗಲೇ 5 ವರ್ಷ ಮುಖ್ಯಮಂತ್ರಿ ಆಗಿದ್ದಾರೆ. ಅಧಿಕಾರ ಅನುಭವಿಸಿ ಮತ್ತೆ ಸಿಎಂ ಆಗುವುದು ಸರಿಯಲ್ಲ ಅನ್ನೋದು ಕಾಂಗ್ರೆಸ್ ನಾಯಕರ ಅಭಿಪ್ರಾಯ. ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗ್ಬೇಕು ಅಂತಾರೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಯಸ್ಸಾಗಿದೆ. ಒಮ್ಮೆ ಆದ್ರೂ ಸಿಎಂ ಆಗಿ ನಿವೃತ್ತಿ ಆಗ್ಬೇಕು ಅಂತಾ ಇದ್ದಾರೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷನಾಗಿ ಹೆಚ್ಚುಕಾಲ ಸೇವೆ ಮಾಡಿದರೂ ತಮ್ಮನ್ನ ಸೋಲಿದ್ರಲ್ಲಾ ಅನ್ನೋ ಬೇಸರ ಪರಮೇಶ್ವರ್ ಅವರದ್ದು, ಅವರಿಗೂ ಸಿಎಂ ಆಗಬೇಕು ಅನ್ನೋ ಆಸೆ. ಇತ್ತೀಚೆಗೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರೂ ಸಿಎಂ ಆಗಬೇಕು ಅನ್ನುತ್ತಿದ್ದಾರೆ. ಇನ್ನು ಒಂದೆರಡು ತಿಂಗಳಲ್ಲಿ ಕಾಂಗ್ರೆಸ್ ನಲ್ಲಿ 2 ಡಜನ್ ಜನರು ಸಿಎಂ ಆಗಲು ಎದ್ದು ನಿಲ್ಲುವ ಸಂಭವವಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಪ್ರೇಯಸಿ ಕತ್ತು ಹಿಸುಕಿ ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ 

    ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಕೊರತೆಯಿದೆ. ದೋಣಿ ದಡ ಮುಟ್ಟಿಸಲು ಪರಿಣಿತ ನಾವಿಕ ಬೇಕಾಗಿದೆ. ನಾವಿಕನಿಲ್ಲದ ದೋಣಿ ಮುಂದೆ ಬರಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರು ಹಗಲು ಕನಸು ಕಾಣ್ತಿದ್ದಾರೆ. ರಾಜ್ಯದಲ್ಲಿ ಮುಂದಿನ 5 ವರ್ಷ ಬಿಜೆಪಿಯೇ ಆಡಳಿತಕ್ಕೆ ಬರಲಿದೆ. ಮುಖ್ಯಮಂತ್ರಿ ಆದವರು 5 ವರ್ಷ ಉತ್ತಮ ಆಡಳಿತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಭಸ್ಮಾಸುರ ಇದ್ದಂತೆ: ಶ್ರೀರಾಮುಲು

    ಸಿದ್ದರಾಮಯ್ಯ ಭಸ್ಮಾಸುರ ಇದ್ದಂತೆ: ಶ್ರೀರಾಮುಲು

    ಬೀದರ್: ಸಿದ್ದರಾಮಯ್ಯ ಎಲ್ಲರನ್ನು ಮುಗಿಸಿ ಬಂದಿರುವ ವ್ಯಕ್ತಿ, ಅವರು ಭಸ್ಮಾಸುರ ಇದ್ದಂತೆ ಸಾರಿಗೆ ಸಚಿವ ಶ್ರೀರಾಮುಲು ಅವರು ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಬೀದರ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲರನ್ನು ಮುಗಿಸಿ ಬಂದಿರುವ ವ್ಯಕ್ತಿ, ಅವರು ಭಸ್ಮಾಸುರ ಇದ್ದಂತೆ. ಯಾವ ಪಕ್ಷಕ್ಕೆ ಹೋಗತ್ತಾರೆ ಅಲ್ಲಿ ಎಲ್ಲರನ್ನು ಮುಗಿಸಿ ಬರುತ್ತಾರೆ. ಅಷ್ಟೇ ಅಲ್ಲ ಜೆಡಿಎಸ್‍ನ ತಂದೆ – ಮಗನನ್ನು ಕೂಡ ಬಿಟ್ಟಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚೋದಿಲ್ಲ, ಆದರೆ ….. : ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು?

    SIDDARAMAIAH

    ಅಂದು ಸೋಲಿನ ಭೀತಿಯಲ್ಲಿ ಸಿದ್ದರಾಮಯ್ಯ ಬಾದಾಮಿಗೆ ಬಂದರು. ಈಗ ಸಿದ್ದರಾಮಯ್ಯ ಬಾದಾಮಿಯಲ್ಲಿ ನಿಂತರೆ ಡೆಪಾಸಿಟ್ ಕಳೆದುಕೊಳ್ಳುತ್ತಾರೆ. ಅದಕ್ಕಾಗಿ ಸಿದ್ದರಾಮಯ್ಯ ಇದೀಗ ಕೋಲಾರ, ಚಾಮರಾಪೇಟೆ, ವರುಣ, ಚಾಮುಂಡೇಶ್ವರಿ ಎಂದು ಕ್ಷೇತ್ರ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.

    ಇದೇ ವೇಳೆ ಪಕ್ಷ ಸೂಚನೆ ಕೊಟ್ಟರೆ ನಾನು ಬಾದಾಮಿಯಲ್ಲಿ ಸ್ಪರ್ಧೆ ಮಾಡಲು ರೆಡಿಯಾಗಿದ್ದೇನೆ. ಬದಾಮಿಯಲ್ಲಿ ಮತ್ತೆ ಸಿದ್ದು ವಿರುದ್ಧ ಸ್ಪರ್ಧೆ ಮಾಡುತ್ತೇನೆಯೇ ಹೊರೆತು ಹಿಂದೆ ಸರಿಯುವ ಮಾತೇ ಇಲ್ಲ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಪಿಎಂ ಆವಾಸ್ ಯೋಜನೆಯಲ್ಲಿ ರಾಜ್ಯಕ್ಕೆ ಅನುದಾನ ಕಡಿತ – ಬಿಜೆಪಿಗೆ ವೋಟ್ ಹಾಕಿದ ತಪ್ಪಿಗೆ ಈ ಶಿಕ್ಷೆಯೇ?: ದಿನೇಶ್ ಗುಂಡೂರಾವ್

    ನಂತರ ಸಿದ್ದರಾಮೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಮ್ಮ ಅಸ್ತಿತ್ವಕ್ಕಾಗಿ ಸಿದ್ದು ಹಾಗೂ ಡಿಕೆಶಿ ಮದ್ಯ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದ್ದು, ಪಕ್ಷ ನಿಷ್ಠೆ ಎಂದು ಒಬ್ಬರು ಹೋಗುತ್ತಿದ್ದರೆ, ಸ್ವಂತ ಶಕ್ತಿ ಇದೆ ಎಂದು ಮತ್ತೊಬ್ಬ ಹೋಗುತ್ತಿದ್ದಾನೆ. ಮೊತ್ತೊಂದು ಕಡೆ ಸಿದ್ದರಾಮೋತ್ಸವ ನಡೆಯುತ್ತಿದ್ದು, ಸಿದ್ದರಾಮಯ್ಯ ಉತ್ಸವ ಮೂರ್ತಿ ಇದ್ದಂತೆ. ಹೀಗಾಗಿ ಕೇವಲ ಉತ್ಸವಗಳು ಇದ್ದಾಗ ಮಾತ್ರ ಮೂರ್ತಿಗಳನ್ನು ಹೊರ ತೆಗೆಯಲಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವದಲ್ಲಿ ರಾಹುಲ್ ಪಾಲ್ಗೊಳ್ತಾರೆ, `ಸರಿಯಾಗಿ ನಡ್ಕೊಳಿ’ – ಕೆಪಿಸಿಸಿಗೆ ಹೈಕಮಾಂಡ್ ವಾರ್ನಿಂಗ್

    ಸಿದ್ದರಾಮೋತ್ಸವದಲ್ಲಿ ರಾಹುಲ್ ಪಾಲ್ಗೊಳ್ತಾರೆ, `ಸರಿಯಾಗಿ ನಡ್ಕೊಳಿ’ – ಕೆಪಿಸಿಸಿಗೆ ಹೈಕಮಾಂಡ್ ವಾರ್ನಿಂಗ್

    ಬೆಂಗಳೂರು: ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವದ ವೇದಿಕೆ ಕಾರ್ಯಕ್ರಮದ ರೂಪುರೇಷೆ ಎಐಸಿಸಿ ಸೂಚನೆಯಂತೆ ನಡೆಯುವ ಸಾಧ್ಯತೆ ಇದೆ.

    SIDDARAMAIAH

    ರಾಹುಲ್ ಗಾಂಧಿ ಭಾಗವಹಿಸುವ ಸಮಾವೇಶದಲ್ಲಿ ಹೈಕಮಾಂಡ್‍ಗೆ ಆಗಲಿ ಪಕ್ಷಕ್ಕಾಗಲಿ ಮುಜುಗರ ಆಗದಂತೆ ನೋಡಿಕೊಳ್ಳಲು ಸ್ವತಃ ಎಐಸಿಸಿಯೇ ಒಂದಷ್ಟು ಸೂಚನೆಗಳನ್ನು ಅಮೃತ ಮಹೋತ್ಸವ ಸಮಿತಿಗೆ ನೀಡಿದೆ ಎನ್ನಲಾಗುತ್ತಿದೆ. ಏನಿರಬೇಕು? ಏನಿರಬಾರದು ಎಂಬ ಮೌಖಿಕ ಸಂದೇಶ ರವಾನಿಸಿದೆ. ಸಿದ್ದರಾಮಯ್ಯ ಸಿಎಂ, ಅವರನ್ನು ಕೈ ಹಿಡಿಯಿರಿ, ಅವರ ಕೈ ಬಲಪಡಿಸಿ, ಮುಂದೆ ಅವರಿಗೆ ಅವಕಾಶ ಇದೆ. ಈ ರೀತಿಯ ಮಾತು, ನಡವಳಿಕೆ ಇದ್ಯಾವುದಕ್ಕೂ ವೇದಿಕೆ ಮೇಲೆ ಅವಕಾಶ ಇಲ್ಲ. ಓನ್ಲಿ ಪಾರ್ಟಿ… ನಾಟ್ ಎ ಪರ್ಸನ್ ಎಂಬ ಸಂದೇಶ ರವಾನಿಸಲು ಎಐಸಿಸಿ ಸೂಚಿಸಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ನಾಳೆಯಿಂದ ದುಬಾರಿ ದುನಿಯಾ – ಮೀನು, ಮಾಂಸ, ಗೋಧಿ ಸೇರಿ ಎಲ್ಲವೂ ಕಾಸ್ಟ್ಲಿ

    ಅಭಿಮಾನಿಗಳು, ಬೆಂಬಲಿಗರು ಸಹಾ ಮುಜುಗರ ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ವತಃ ಸಿದ್ದರಾಮಯ್ಯ ಹೆಗಲಿಗೆ ಹೊರಿಸಲಾಗಿದೆ. ಹೀಗೆ ಮುಂದಿನ ರಾಜಕೀಯ ಬೆಳವಣಿಗೆಯ ಯಾವುದೇ ಮಾತು ಅಥವಾ ಸನ್ನಿವೇಶ ಎದುರಾಗದಂತೆ ಕಾರ್ಯಕ್ರಮ ನಿರ್ವಹಿಸುವಂತೆ ಎಐಸಿಸಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ತಡೆಗೋಡೆ ಕುಸಿತ : ಮಡಿಕೇರಿ- ಮಂಗಳೂರು ರಸ್ತೆ ಸಂಚಾರ ಬಂದ್‌

    Live Tv
    [brid partner=56869869 player=32851 video=960834 autoplay=true]

  • ನನಗೂ ಇತಿಮಿತಿ ಇದೆ – ಸಿದ್ದರಾಮೋತ್ಸವ ಪ್ರಶ್ನೆಗೆ ಡಿಕೆಶಿ ಸಿಟ್ಟು

    ನನಗೂ ಇತಿಮಿತಿ ಇದೆ – ಸಿದ್ದರಾಮೋತ್ಸವ ಪ್ರಶ್ನೆಗೆ ಡಿಕೆಶಿ ಸಿಟ್ಟು

    ಬೆಂಗಳೂರು: ಸಿದ್ದರಾಮೋತ್ಸವ ವಿಚಾರ ಯಾರಿಗೆ ಕೇಳಬೇಕೋ ಅವರನ್ನ ಕೇಳಿ, ನಾನು ಪಕ್ಷದ ಶಿಸ್ತಿನ ಸಿಪಾಯಿ, ನನಗೆ ಸೋನಿಯಾ ಗಾಂಧಿ ಅವರು ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

    ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರು ನನಗೆ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನನಗೂ ಇತಿ ಮಿತಿ ಇದೆ ಎಂದು ಸಿದ್ದರಾಮೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಿದರು.

    ಶೂ ಸಾಕ್ಸ್ ವಿಚಾರದಲ್ಲಿ ಭೀಕ್ಷೆ ಎತ್ತಿ ಕೊಡಲು ನಾವು ಸಿದ್ಧರಿದ್ದೆವು ಎಂದ ಅವರು, ಬೆಳಗಾವಿ ಹೆಣ್ಣು ಮಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ನ್ಯಾಯ ಒದಗಿಸಿ ಕೊಡಿ. ಸಂತೋಷ್ ಪಾಟೀಲ್ ರೀತಿ ಹಲವರು ನೊಂದಿದ್ದಾರೆ ಬೆಂದಿದ್ದಾರೆ. ಮಠಾಧೀಶರು ಕಮಿಷನ್ ಬಗ್ಗೆ ಮಾತಾಡಿದರೂ ಅವರ ಮೇಲೆ ಕೇಸು ಹಾಕಲಿಲ್ಲ ಮತ್ತೆ. ಮಾಜಿ ಸಿಎಂ ಮಗ ಇದಾರೆ ಅಂತ ನಿಮ್ಮ ಶಾಸಕರೆ ಹೇಳಿದ್ದಾರೆ. ಅವರು ಇದಾರೋ ಇಲ್ವೋ ಆದರೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸ್ವಂತ ಖರ್ಚಿನಲ್ಲಿಯೇ ಗುಂಡಿ ಮುಚ್ಚೋ ಕಾರ್ಯ- ಬೈಕ್ ಸವಾರರ ಜೀವ ಉಳಿಸ್ತಿರುವ ಮಲ್ನಾಡ್ ಯುವಕ

    Congress

    ಯಾವ ಯಾವ ಹುದ್ದೆಗೆ ಎಷ್ಟು ಹಣ ಎಂದು ಪಿಎಸ್‍ಐ ಹಗರಣ ವಿಚಾರದಲ್ಲಿ ಹೋಟೆಲ್ ಮೆನು ಕಾರ್ಡ್ ರೀತಿ ಹಾಕಿದ್ದಿರಿ. ಕೋವಿಡ್ ಕೆಲಸಕ್ಕೆ ನಮ್ಮ ಕಾರ್ಯಕರ್ತರು ಹಣ ನೀಡಿದ್ದಾರೆ. ಸರ್ಕಾರದ ಕೈಯಲ್ಲಿ ಮಾಡಲಾಗದ ಕೆಲಸವನ್ನು ನಾವು ಮಾಡಿದ್ದೇವೆ. ಸರ್ಕಾರಕ್ಕೆ ಒಂದು ಲಕ್ಷ ರೂ. ಈವರೆಗೂ ನೀಡಲು ಆಗಿಲ್ಲ. ಒಂದು ದಿನ ಸುದ್ದಿಗೋಷ್ಠಿ ಮಾಡಿ ಏನೇನು ಮಾಡಿದ್ದೇವೆ ಹೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಓಲೈಕೆಗೆ 29 ಕೋಟಿ ಹೊಳೆ – ಏರ್‌ಪೋರ್ಟ್ ರೋಡ್ ಟೆಂಡರ್‌ಗೆ ಆಕ್ರೋಶ

    ಅಮೃತ್ ಪಾಲ್‍ರನ್ನ ಕೋರ್ಟ್ ಮುಂದೆ ನಿಲ್ಲಿಸಿ. ಯಾರ ಹೆಸರು ಇದೆ ಎನ್ನುವುದು ಬಯಲಿಗೆ ತಂದು ಅವರನ್ನು ಬಂಧಿಸಿ. ಏನೇನು ನಡೆದಿದೆ ಎಂಬ ಬಗ್ಗೆ ನಮ್ಮ ಬಳಿಯೂ ಮಾಹಿತಿ ಇದೆ. ಸರ್ಕಾದ ಚಾರ್ಜ್ ಶೀಟ್‍ನಲ್ಲಿ ಏನಿದೆ. ಸರ್ಕಾರ ರಾಜಕಾರಣಿ, ಮಂತ್ರಿಗಳ ಕುಮ್ಮಕ್ಕು ಇಲ್ಲದೆ ಯಾವುದು ನಡೆಯಲು ಸಾಧ್ಯವಿಲ್ಲ ಎಂದು ಶಂಕೆ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಆಚರಣೆ, ವೈಭವಗಳನ್ನ ಇಷ್ಟಪಡದ ಸಿದ್ದರಾಮಯ್ಯ ಈಗ ಉತ್ಸವ ಆಚರಿಕೊಳ್ಳುತ್ತಿದ್ದಾರೆ: ವಿ.ಸೋಮಣ್ಣ

    ಆಚರಣೆ, ವೈಭವಗಳನ್ನ ಇಷ್ಟಪಡದ ಸಿದ್ದರಾಮಯ್ಯ ಈಗ ಉತ್ಸವ ಆಚರಿಕೊಳ್ಳುತ್ತಿದ್ದಾರೆ: ವಿ.ಸೋಮಣ್ಣ

    ರಾಯಚೂರು: ಮಹಾತ್ಮರ ಜನ್ಮ ದಿನವನ್ನು ಉತ್ಸವವನ್ನಾಗಿ ನಾವು ಆಚರಿಸಿದ್ದೇವೆ. ತುಮಕೂರಿನ ಶಿವಕುಮಾರ ಸ್ವಾಮಿಜೀಯವರ ಜನ್ಮೋತ್ಸವ ಮಾಡಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವಳಿಕೆಗಳು ಈ ಹಿಂದೆ ಭಿನ್ನವಾಗಿದ್ದವು ಎಂದು ವಸತಿ ಸಚಿವ ವಿ.ಸೋಮಣ್ಣ ಸಿದ್ದರಾಮೋತ್ಸವಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

    ಮಾನ್ವಿಯಲ್ಲಿ ಶಾಸಕ ಶಿವನಗೌಡ ನಾಯಕ್ ಹುಟ್ಟುಹಬ್ಬ ನಿಮಿತ್ತ ಆಯೋಜಿಸಿರುವ ಶಿವಾಭಿಮಾನ ಕಾರ್ಯಕ್ರಮ ಹಿನ್ನೆಲೆ ವಿ.ಸೋಮಣ್ಣ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಚರಣೆ, ವೈಭವಗಳನ್ನು ಸಿದ್ದರಾಮಯ್ಯ ಅವರು ಇಷ್ಟ ಪಡುತ್ತಿರಲಿಲ್ಲ. ಈಗ ತಮ್ಮ 75ನೇ ವರ್ಷದ ಜನ್ಮ ದಿನೋತ್ಸವ ಆಚರಣೆಗೆ ಮುಂದಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ನಾನು ಶುಭ ಕೋರುತ್ತೇನೆ ಎಂದರು. ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ಶಿವಮೊಗ್ಗ ಬೀದಿಯಲ್ಲೇ ಬರ್ಬರ ಕೊಲೆ 

    ಸಿದ್ದರಾಮಯ್ಯ ಅವರ ಉತ್ಸವ ಆಗಲಿ ನಮಗೇನು? ಅವರ ಕಾರ್ಯಕರ್ತರು ಬರ್ತಾರೆ, ನಮ್ಮವರು ನಾಲ್ಕು ಜನ ಹೋಗ್ತಾರೆ. ಅಲ್ಲಿ ನೋಡ್ಕೊಂಡು ಬರ್ತಾರೆ. ಯಾರ್ಯಾರನ್ನ ಕರೆದುಕೊಂಡು ಬರಬೇಕೋ ಕರಕೊಂಡಬರ್ತಾರೆ. ಅವರಲ್ಲಿ ಯಾರ್ಯಾರು ಸ್ವಲ್ಪ ಬುದ್ಧಿವಂತರು ಇದಾರೋ ಅವರನ್ನು ಕರೆದುಕೊಂಡು ಬರೋಕೆ ಸ್ಕೀಮ್ ಹಾಕ್ತಿವಿ ಎಂದು ತಿಳಿಸಿದರು.

    ಸಿದ್ದರಾಮಯ್ಯ ಅವರು ಈ ರಾಜ್ಯದ ಒಬ್ಬ ನಾಯಕರು. ಅವರಿಗೆ ಒಳ್ಳೆಯದಾಗಲಿ ಇನ್ನೊಂದು ಸ್ವಲ್ಪ ಸರಿಹೋದರೆ ಎಲ್ಲಾ ಸರಿಹೋಗುತ್ತೆ. ಅವರವರೇ ಮಾತನಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮೋತ್ಸವಕ್ಕೆ ನಮ್ಮದು ಪರಾನೂ ಇಲ್ಲ, ವಿರೋಧಾನೂ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಿಕ್ಕಿ ಹೊಡೆದು ಆಟೋ ಮೇಲೆಯೇ ಬಿತ್ತು ಕಾರು – ಮೂವರು ಸ್ಥಳದಲ್ಲಿಯೇ ಸಾವು

    Live Tv
    [brid partner=56869869 player=32851 video=960834 autoplay=true]

  • ನನಗೆ ಯಾವ ಉತ್ಸವವು ಬೇಡ: ಡಿಕೆಶಿ

    ನನಗೆ ಯಾವ ಉತ್ಸವವು ಬೇಡ: ಡಿಕೆಶಿ

    ಬೆಂಗಳೂರು: ಸಿದ್ದರಾಮಯ್ಯ 75 ಅಮೃತ ಮಹೋತ್ಸವಕ್ಕೆ ಡಿಕೆಶಿ 23 ಉತ್ಸವ ಕೌಂಟರ್ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರತಿಕ್ರಿಯಿಸಿದ್ದು, ನನಗೆ ಯಾವ ಉತ್ಸವವು ಬೇಡ ಎಂದು ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಟ್ಟುಹಬ್ಬದಂದು ಬೇರೆಯವರಿಗೆ ತೊಂದರೆ ಆಗಬಾರದು ಎಂದು ಕುಟುಂಬದ ಜೊತೆ ಕೇದಾರನಾಥ್‍ಗೆ ಹೋಗಿದ್ದೆವು. ಕಾಂಗ್ರೆಸ್ ಕಾರ್ಯಕರ್ತ ರಾಜು ಬರೆದ ಪತ್ರ ವೈಯಕ್ತಿಕ ವಿಚಾರವಾಗಿದೆ. ಅದಕ್ಕೂ ನನಗೆ ಸಂಬಂಧವಿಲ್ಲ. ನಾನು ಅಧಿಕಾರ ಸ್ವೀಕರಿಸುವಾಗಲೇ ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ ಎಂದು ಹೇಳಿದ್ದೇನೆ. ಇವತ್ತು ಅದನ್ನೇ ಹೇಳುತ್ತೇನೆ. ನನಗೆ ಪಾರ್ಟಿ ಉತ್ಸವ ಬೇಕು. ವಿಧಾನಸೌಧದಲ್ಲಿ ಪಾರ್ಟಿಯನ್ನು ಕೂರಿಸಬೇಕು ಎಂದರು.

    ಸಿದ್ದರಾಮೋತ್ಸವಕ್ಕೆ ಕರೆದಿದ್ದಾರೆ. ನಾನು ಒಬ್ಬ ಪಕ್ಷದ ಅಧ್ಯಕ್ಷನಾಗಿದ್ದೇನೆ. ಆಗಸ್ಟ್ 3ಕ್ಕೆ ಕಾರ್ಯಕ್ರಮಕ್ಕೆ ಹೋಗುತ್ತೇನೆ. ರಾಹುಲ್ ಗಾಂಧಿ ಅವರು ಬರುತ್ತಿದ್ದಾರೆ. ನಾನೂ ಕೂಡ ಅತಿಥಿ ಎಂದು ಸಿದ್ದರಾಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗುವ ಬಗ್ಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸ್ನಾನ ಮಾಡಲು ಹೋಗಿ ನದಿ ನೀರಲ್ಲಿ ಕೊಚ್ಚಿ ಹೋದ ಬೆಂಗಳೂರು ಯುವಕ

    ಲಕ್ಷ್ಮೀ ಹೆಬ್ಬಾಳ್ಕರ್ ಬಿಎಸ್‍ವೈ ಭೇಟಿಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕವೋ ಅಥವಾ ರಾಜಕೀಯ ವಿಚಾರವೋ ಗೊತ್ತಿಲ್ಲ. ಯಾವ ವಿಚಾರವಾಗಿ ಭೇಟಿಯಾಗಿದ್ದಾರೋ ನನಗೆ ಗೊತ್ತಿಲ್ಲ. ಅವರೂ ಒಬ್ಬರು ಶಾಸಕಿ, ಎಲ್ಲರೂ ಎಲ್ಲಾ ಪಾರ್ಟಿಯ ಹಿರಿಯರನ್ನ ಭೇಟಿಯಾಗ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮೋತ್ಸವ ಮಾದರಿಯಲ್ಲೇ ಶಿವಕುಮಾರೋತ್ಸವ ಮಾಡಿ – ಡಿಕೆಶಿ ಶಿಷ್ಯನಿಂದ ಪತ್ರ

    Live Tv
    [brid partner=56869869 player=32851 video=960834 autoplay=true]