Tag: ಸಿದ್ದರಾಮೋತ್ಸವ

  • ಜನಶಕ್ತಿಯ ಮುಂದೆ ದ್ವೇಷ ಶಕ್ತಿ ನಡೆಯಲ್ಲ: ಬಿಜೆಪಿಗೆ ಸಿದ್ದು ಟಾಂಗ್‌

    ಜನಶಕ್ತಿಯ ಮುಂದೆ ದ್ವೇಷ ಶಕ್ತಿ ನಡೆಯಲ್ಲ: ಬಿಜೆಪಿಗೆ ಸಿದ್ದು ಟಾಂಗ್‌

    ದಾವಣಗೆರೆ: ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜನಶಕ್ತಿಯ ಮುಂದೆ ದ್ವೇಷ ಶಕ್ತಿ ನಡೆಯಲ್ಲ ಎಂದು ಸಿದ್ದರಾಮಯ್ಯ ಟಾಂಗ್‌ ಕೊಟ್ಟರು.

    ತಮ್ಮ 75ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಅನಗತ್ಯ ಕಿರುಕುಳ ಕೊಟ್ಟರು. ಸೋನಿಯಾ ಗಾಂಧಿ ಅವರ ವಯಸ್ಸು ನೋಡದೇ ಗಂಟೆಗಟ್ಟಲೆ ವಿಚಾರಣೆ ಮಾಡಿದರು. ಅಮಾಯಕರ ವಿಚಾರಣೆಗೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಸೇಡಿನ ರಾಜಕಾರಣ ಮಾಡುವ ಕೋಮುವಾದಿ ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಜನತೆಗೆ ಕರೆ ನೀಡಿದರು. ಇದನ್ನೂ ಓದಿ: ಬಗ್ಗಿ ಬಗ್ಗಿ ನಮಸ್ಕಾರ ಮಾಡೋರನ್ನು ದೂರ ಇಡಿ- ಸಿದ್ದುಗೆ ರಮೇಶ್ ಕುಮಾರ್ ಕಿವಿಮಾತು

    ಒಂದು ನಾಯಕ, ಒಂದು ಚಿನ್ಹೆ, ಸರ್ವಾಧಿಕಾರ ಭಾವನೆಯೊಂದಿಗೆ ಸಂವಿಧಾನ ಬದಲಾಯಿಸಲು ಆರ್‌ಎಸ್‌ಎಸ್‌, ಬಿಜೆಪಿ ಹೊರಟಿದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಹಲವು ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪಾತ್ರ ಇಲ್ಲ ಎಂದು ತಿರುಗೇಟು ನೀಡಿದರು.

    ಈಗಿನ ಬಿಜೆಪಿ ಸರ್ಕಾರದಲ್ಲಿ ಕೋಮುವಾದಿತನ, ಭ್ರಷ್ಟಾಚಾರ ಮಿತಿಮೀರಿದೆ. ಇಷ್ಟೊಂದು ಕೋಮುವಾದಿತನ, ಭ್ರಷ್ಟಾಚಾರ ನಾನು ನೋಡಿಲ್ಲ. ಕೋಮುವಾದಿ ಬಿಜೆಪಿ ಕಿತ್ತೊಗೆದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ಪ್ರತಿಜ್ಞೆ ಮಾಡಿ ಎಂದು ಜನತೆಗೆ ಕರೆ ಕೊಟ್ಟರು.

    ದೇಶದಲ್ಲಿ ಆತಂಕದ ವಾತಾವರಣ ಇದೆ. ಮೋದಿ ಪ್ರಧಾನಿ ಆದ ಮೇಲೆ ಜನರಿಗೆ ಸಂಕಷ್ಟ ಎದುರಾಗಿದೆ. ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ, ಸಾಂವಿಧಾನಿಕ ರಕ್ಷಣೆ ಇಲ್ಲ. ಅವರು ಹಿಂದೂ ರಾಷ್ಟ್ರದ ನಿರ್ಮಾಣ ಎನ್ನುತ್ತಾ ಲೂಟಿ ಮಾಡಲು ಅಧಿಕಾರಕ್ಕೆ ಬಂದಿದ್ದಾರೆ. ಸಂವಿಧಾನ ಬದಲಾವಣೆ, ಸರ್ವಾಧಿಕಾರ ತರೋದು ಬಿಜೆಪಿಯ ಉದ್ದೇಶ. ಬಿಜೆಪಿ ನಾಯಕರೇ, ಮೋದಿಯವರೇ ನೀವೆಲ್ಲಿದ್ದರೂ ಕಾಂಗ್ರೆಸ್ ಮುಗಿಸಲು ಸಾಧ್ಯವಿಲ್ಲ. ಸಂವಿಧಾನ ಬದಲಾಯಿಸಲು ಈ ದೇಶದ ಜನ ಬಿಡಲ್ಲ. ನಿಮ್ಮ ಕನಸು ನನಸಾಗಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಕ್ಕಿಕಾಳಿನ ಆಕೃತಿ ನಿರ್ಮಿಸಿ, ಅನ್ನಭಾಗ್ಯ ಸ್ಮರಿಸಿದ ಸಿದ್ದು ಅಭಿಮಾನಿ

    ದೇಶದ ಅಧಿಕಾರವನ್ನು ಜನಕಾಳಜಿ ಇರೋರೇ ಹಿಡಿಯಬೇಕು. ಅದಕ್ಕೆ ರಾಹುಲ್ ಗಾಂಧಿ‌ ಯೋಗ್ಯರು. ಮೋದಿಯವರು ವಚನ ಭ್ರಷ್ಟರಾಗಿದ್ದಾರೆ. ಮೋದಿ ಪ್ರಧಾನಿ ಆಗೋ ಮುಂಚೆ ದೇಶದ ಸಾಲ ಎಷ್ಟಿತ್ತು, ಈಗ ಎಷ್ಟಿದೆ? ಮೋದಿ ಪ್ರಧಾನಿ ಆದ ಮೇಲೆ ಎಂಟು ವರ್ಷದ ಬಳಿಕ 155 ಲಕ್ಷ ಕೋಟಿ ರೂ. ಸಾಲ ಆಗಿದೆ. 102 ಲಕ್ಷ ಕೋಟಿ ಸಾಲವನ್ನು ಎಂಟು ವರ್ಷದಲ್ಲಿ ಮಾಡಿದ್ದಾರೆ ಎಂದು ಟೀಕಿಸಿದರಲ್ಲದೇ, 2024ಕ್ಕೆ ದೇಶದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ. ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗ್ತಾರೆ. ರಾಹುಲ್ ಗಾಂಧಿ ಈ ದೇಶದ ಆಶಾಕಿರಣ ಎಂದು ತಿಳಿಸಿದರು.

    ಕರಾವಳಿಯಲ್ಲಿ ಇತ್ತೀಚೆಗೆ ಮೂರು ಕೊಲೆಗಳಾಗಿವೆ. ಮಸೂದ್, ಪ್ರವೀಣ್, ಫಾಝಿಲ್ ಕೊಲೆ ಆಯ್ತು. ಬೊಮ್ಮಾಯಿ ಇಡೀ ಕರ್ನಾಟಕದ ಮುಖ್ಯಮಂತ್ರಿ ನಾ? ಅಥವಾ ಒಂದು ಧರ್ಮಕ್ಕೆ ಸೇರಿದ ಮುಖ್ಯಮಂತ್ರಿ ನಾ? ಬೊಮ್ಮಾಯಿ ಪ್ರವೀಣ್‌ಗೆ ಪರಿಹಾರ ಕೊಟ್ಟಂತೆ ಯಾಕೆ ಮಸೂದ್, ಫಾಝಿಲ್‌ಗೆ ಕೊಡ್ಲಿಲ್ಲ? ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಹೇಳಲು ನೈತಿಕತೆ ಇಲ್ಲ. ಬೊಮ್ಮಾಯಿಗೆ ರಾಜ್ಯ ಆಳಲು ನೈತಿಕತೆ ಇಲ್ಲ. ಅಲ್ಪಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದಾರೆ. ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಳ್ಳಿತೆರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್

    ಕರ್ನಾಟಕದಲ್ಲಿ ಇನ್ನೂ ಕೃಷಿ, ಎಪಿಎಂಸಿ ಕಾಯ್ದೆ ವಾಪಸ್ ತಗೊಂಡಿಲ್ಲ ಸರ್ಕಾರ. ನಮ್ಮ ಸರ್ಕಾರ ಇದ್ದಾಗ ನಾವು ನುಡಿದಂತೆ ನಡೆದಿದ್ದೇವೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಇತಿಹಾಸದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ನುಡಿದಂತೆ ನಡೆದಿರೋದು. ನೀವು ಏನ್ಮಾಡಿದೀರಿ ಬೊಮ್ಮಾಯಿ? ರಾಜ್ಯದ ಜನ ನಿರ್ಧಾರ ಮಾಡಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿರ್ಧಾರ ಮಾಡಿದ್ದಾರೆ ಜನ ಎಂದು ಹೇಳಿದರು.

    2022 ರ ಆಗಸ್ಟ್‌ 15ಕ್ಕೆ ನಮಗೆ ಸ್ವಾತಂತ್ರ್ಯ ದೊರಕಿ 75 ವರ್ಷ ತುಂಬ್ತಿದೆ. ಈ ವರ್ಷ ಇಡೀ ದೇಶದಲ್ಲಿ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ರಾಜ್ಯ, ದೇಶದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಕೋರುತ್ತೇನೆ. ಕಾಕತಾಳೀಯ ಎಂಬಂತೆ ಇವತ್ತಿಗೆ ನನಗೆ 75 ವರ್ಷ ತುಂಬಿದೆ. ನಾನು ಎಂದೂ ಜನ್ಮದಿನ ಆಚರಿಸಿಕೊಂಡಿಲ್ಲ. ಪಕ್ಷದ ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು 75 ತುಂಬ್ತಿದೆ, ಸಕ್ರಿಯ ರಾಜಕಾರಣದಲ್ಲಿ ಇದ್ದೀರಿ ಅಂತಾ ಜನ್ಮದಿನ‌ ಮಾಡಿಕೊಳ್ಳಲು ಒತ್ತಾಯ ಮಾಡಿದ್ರು. ಅವರ ಒತ್ತಾಯಕ್ಕೆ ಮಣಿದು 75ನೇ ಹುಟ್ಟುಹಬ್ಬ ಆಚರಣೆಗೆ ಒಪ್ಪಿದೆ. ಎಲ್ಲರ ಆಶೀರ್ವಾದ, ಶುಭಾಶಯ ಬಯಸುತ್ತಿದ್ದೇನೆ. ಸಿದ್ದರಾಮಯ್ಯ ಅವರ ಮೇಲೆ ವಿಶೇಷ ಪ್ರೀತಿಯಿಂದ ಬಂದಿದ್ದೀನಿ ಅಂತಾ ರಾಹುಲ್ ಗಾಂಧಿ ಹೇಳಿದ್ರು. ಅವರಿಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ. ನಾನು ಕಾಂಗ್ರೆಸ್ ಸೇರಿದಾಗಿನಿಂದ ಇವತ್ತಿನವರೆಗೂ ನನ್ನ ಮೇಲೆ ಅವರು ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ನಾನು ಬೇರೆ ಪಕ್ಷದಿಂದ ಬಂದಿದ್ದರೂ ನನ್ನ ಮೇಲೆ ಪ್ರೀತಿ ಇದೆ. ನಾನು ಸಿಎಂ‌ ಆಗಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು

    ಜನಶಕ್ತಿಯ ಆಶೀರ್ವಾದ ಇಲ್ಲದಿದ್ರೆ ದೀರ್ಘಕಾಲ ರಾಜಕೀಯ, ಜನಸೇವೆ ಮಾಡಕ್ಕಾಗಲ್ಲ. ಜನರ ಆಶೀರ್ವಾದ, ಪ್ರೀತಿಯಿಂದ ಶಾಸಕ, ಮಂತ್ರಿ, ಮುಖ್ಯಮಂತ್ರಿ ಆಗಿ ಸೇವೆ ಮಾಡಲು ಅವಕಾಶ ಸಿಕ್ತು. ಎಲ್ಲಿವರೆಗೆ ದೈಹಿಕ, ಮಾನಸಿಕವಾಗಿ ಸದೃಢ ಆಗಿರುತ್ತೇನೋ ಅಲ್ಲಿಯವರೆಗೂ ಸಕ್ರಿಯ ರಾಜಕೀಯ ಮಾಡ್ತಾ ಜನರ ಸೇವೆ ಮಾಡ್ತೇನೆ. ಡಿಕೆಶಿ ಮತ್ತು ನನ್ನ ಬಗ್ಗೆ ವಿಪಕ್ಷಗಳು ಸುಳ್ಳು ಹೇಳಿಕೆ ನೀಡಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ. ನಮ್ಮ ಮಧ್ಯೆ ಬಿರುಕಿದೆ ಎನ್ನುವುದು ವಿಪಕ್ಷಗಳ ಭ್ರಮೆ. ನಾನು ಮತ್ತು ಡಿಕೆಶಿ ಒಟ್ಟಾಗಿ ಇದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಜನರ ಆಶೀರ್ವಾದ ಇರಬೇಕು ಎಂದು ಆಶಯ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಬೆಳ್ಳಿತೆರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್

    ಬೆಳ್ಳಿತೆರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್

    ಇಂದು ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಆಚರಿಸಲು ಇಡೀ ಕರ್ನಾಟಕವೇ ದಾವಣಗೆರೆಯಲ್ಲಿ ನೆರೆದಿದೆ. ಈ ಸಂದರ್ಭದಲ್ಲಿ ತೆಲಂಗಾಣದ ಉದ್ಯಮಿ ಶ್ರೀಧರ್ ರಾವ್ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ನೀಡಿದ್ದು, ಅವರ ಬಯೋಪಿಕ್ ಅನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರಂತೆ.

    ಈ ಕುರಿತು ವಿಷಯ ಹಂಚಿಕೊಳ್ಳಲು ಪತ್ರಿಕಾಗೋಷ್ಠಿ ಕರೆದಿದ್ದ ಶ್ರೀಧರ್ ರಾವ್, ‘ಸಿದ್ದರಾಮಯ್ಯನವರ ಅನುಪತಿ ಪಡೆದುಕೊಂಡೇ ಸಿನಿಮಾ ಮಾಡಲಾಗುವುದು. ಇದು ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಇದೊಂದು ದೊಡ್ಡ ಬಜೆಟ್ ಸಿನಿಮಾವಾಗಿದದ್ದು, ಅವರ ಜೀವನ, ರಾಜಕೀಯ ಪ್ರವೇಶ, ಮುಖ್ಯಮಂತ್ರಿಯಾದಾಗಿನ ಸಾಧನೆ ಸೇರಿದಂತೆ ಹತ್ತು ಹಲವು ವಿಷಯಗಳು ಈ ಸಿನಿಮಾದಲ್ಲಿ ಇರಲಿವೆ. ಇದನ್ನೂ ಓದಿ:ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಯ್ತು ‘ವಿಜಯಾನಂದ’ ಟ್ರೈಲರ್

    ಸಿದ್ದರಾಮಯ್ಯನವರು ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಹಾಗಾಗಿಯೇ ಸಿನಿಮಾ ರಂಗವು ಅವರನ್ನು ವಿಭಿನ್ನ ರೀತಿಯಲ್ಲಿ ಸ್ಮರಿಸುತ್ತಿದೆ. ಈಗಾಗಲೇ ಸಿದ್ದರಾಮೋತ್ಸವದಲ್ಲಿ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಹಂಸಲೇಖ ಕೂಡ ಒಂದು ಹಾಡನ್ನು ಸಿದ್ದರಾಮಯ್ಯನವರಿಗೆ ಅರ್ಪಿಸಿದ್ದಾರೆ. ಇದೀಗ ಅವರ ಕುರಿತಾಗಿಯೇ ಸಿನಿಮಾ ಮಾಡಲು ಶ್ರೀಧರ್ ಮುಂದಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು

    ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು

    ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಒಂದು ತಿಂಗಳಿಂದ ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇಂದು ಆ ದಿನ ಬಂದಿದ್ದು, ಸಿದ್ದರಾಮಯ್ಯ ಅವರು 75ನೇ ಹರೆಯಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಅವರ ಹುಟ್ಟುಹಬ್ಬಕ್ಕೆ ಅದ್ಧೂರಿಯಾಗಿ ವೇದಿಕೆ ಸಿದ್ಧವಾಗಿದ್ದು, ‘ವಂದೇಮಾತರಂ’ ಹಾಡುವ ಮೂಲಕ ಸಿದ್ದರಾಮೋತ್ಸವ ಆರಂಭವಾಗಿದೆ.

    ಸಿದ್ದರಾಮೋತ್ಸವಕ್ಕೆ ಮುಖ್ಯ ವೇದಿಕೆ ಅದ್ಧೂರಿಯಾಗಿ ಸಿದ್ಧವಾಗಿತ್ತು. ಮುಖ್ಯ ವೇದಿಕೆಯಲ್ಲಿ ಮೂರು ಬೃಹತ್ ಎಲ್‍ಇಡಿ ಪರದೆಗಳಿದ್ದು, ಇದರಲ್ಲಿ ಸಿದ್ದರಾಮಯ್ಯ, ವರಿಷ್ಠರ ಭಾವಚಿತ್ರ, ವೀಡಿಯೋಗಳ ಪ್ರದರ್ಶನ ಮಾಡಲಾಗುತ್ತಿದೆ. ಜನ ಕೂರಲು ಐದು ದೊಡ್ಡ ಪೆಂಡಾಲ್‍ಗಳ ನಿರ್ಮಾಣ ಮಾಡಲಾಗಿದ್ದು, ಐದು ಲಕ್ಷಕ್ಕೂ ಹೆಚ್ಚು ಕುರ್ಚಿಗಳನ್ನು ಹಾಕಲಾಗಿದೆ. ಆದರೆ ಕುರ್ಚಿಗಳು ಸಾಲದಂತೆ ಸಿದ್ದರಾಮಯ್ಯ ಅಭಿಮಾನಿ ಬಳಗ ಬಂದಿದ್ದರು. ಅಲ್ಲದೇ ಮುಖ್ಯವೇದಿಕೆಯಲ್ಲಿ ರಾಹುಲ್ ಗಾಂಧಿ ಸೇರಿ 50 ಗಣ್ಯರು ಕೂರಲು ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಸಿದ್ದರಾಮೋತ್ಸವ : ‘ಮೈಸೂರು ಹುಲಿಯಾ’, ‘ಸೆಲ್ಫ್ ಮೇಡ್ ಸಿದ್ದಣ್ಣ’ ಹಾಡು ರಿಲೀಸ್

    ಹೌಸ್ ಫುಲ್
    ಸಿದ್ದರಾಮೋತ್ಸವಕ್ಕೆ ಜನಸಾಗರ ಹರಿದು ಬಂದಿದ್ದು, ಸಿದ್ದರಾಮೋತ್ಸವದಲ್ಲಿ ಹೌಸ್ ಫುಲ್ ಆಗಿದೆ. ಐದು ಲಕ್ಷಕ್ಕೂ ಹೆಚ್ಚು ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರೀಕ್ಷೆ ಮೀರಿ ಅಭಿಮಾನಿಗಳು ಬಂದಿದ್ದು, ಕುರ್ಚಿಗಳು ಸಿಗದೇ ಸಹಸ್ರಾರು ಜನ ನಿಂತಿದ್ದಾರೆ. ಆಯೋಜನಕರ ಸಂಖ್ಯಾ ಲೆಕ್ಕಾಚಾರ ಮೀರಿ ಜನ ಬಂದಿದ್ದು, ಸುಮಾರು 7 ಲಕ್ಷ ಜನಕ್ಕೂ ಹೆಚ್ಚು ಬಂದಿರಬಹುದು ಎಂದು ಹೇಳಲಾಗುತ್ತಿದೆ.

    ಸಂಗೀತ ಕಾರ್ಯಕ್ರಮ
    ‘ವಂದೇಮಾತರಂ’ ಹಾಡುವ ಮೂಲಕ ಸಿದ್ದರಾಮೋತ್ಸವ ಆರಂಭವಾಗಿದ್ದು, ಸಂಗೀತದ ಮೂಲಕವೇ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿಯಿತು. ಸಾಧುಕೋಕಿಲ ಮತ್ತು ತಂಡ ಭಾರೀ ಸಿದ್ದರಾಮಯ್ಯ ಅವರ ಅಭಿಮಾನಿಗಳನ್ನು ತಮ್ಮ ಸಂಗೀತದ ಮೂಲಕ ರಂಚಿಸಿದ್ದಾರೆ. ಹಂಸಲೇಖ, ಸಾಧುಕೋಕಿಲ, ಅನುರಾಧ ಭಟ್, ಹೇಮಂತ್ ಅವರಿಂದ ಸಂಗೀತದ ಮೂಲಕ ಮನರಂಜನೆ ನೀಡಿದ್ದಾರೆ.

    ಅಭಿಮಾನಿಯಿಂದ ಸ್ಟೆಪ್ಸ್
    ಅಭಿಮಾನಿಗಳು ಸಿದ್ದರಾಮಯ್ಯ ಕುರಿತು ಹಾಡು ಬರೆದಿದ್ದು, ಅದಕ್ಕೆ ಅಭಿಮಾನಿ ಸಖತ್ ಸ್ಟೆಪ್ಸ್ ಹಾಕಿದ್ದಾನೆ. ತಲೆವಸ್ತ್ರ ಕಟ್ಟಿಕೊಂಡು ಭರ್ಜರಿ ಡಾನ್ಸ್ ಮಾಡಿ ಹರ್ಷವನ್ನು ವ್ಯಕ್ತಪಡಿಸಿದ್ದಾನೆ. ಅಲ್ಲದೇ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳೆಲ್ಲ ಸಖತ್ ಆಗಿ ಡ್ಯಾನ್ಸ್ ಮಾಡಿದ್ದು, ಸಿದ್ದರಾಮಯ್ಯ ಅವರ ಘೋಷಣೆಯನ್ನು ನಿರಂತರವಾಗಿ ಕೂಗುತ್ತ ಇದ್ದರು. ಇದನ್ನೂ ಓದಿ:  30 ವರ್ಷಗಳ ನಂತರ ಕೋಡಿ ಹರಿದ ಕೆರೆಗೆ ಮೂವರು ಬಾಲಕರ ಬಲಿ

    ಕಂಬಳಿ ಬಿಸಿ ಡ್ಯಾನ್ಸ್
    ಸಿದ್ದರಾಮಯ್ಯ ಹಾಡಿಗೆ ಅಭಿಮಾನಿಗಳು ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ್ದು, ಸಂಭ್ರಮದಿಂದ ಕೇಕ್, ಚಪ್ಪಾಳೆ ಶಿಳ್ಳೆಯಿಂದ ಕುಣಿದು ಕುಪ್ಪಳಿಸಿದ್ದಾರೆ.

    ಸಿದ್ದರಾಮೋತ್ಸವ ವೇದಿಕೆ ಮೇಲೆ ಸಿದ್ದರಾಮಯ್ಯ ಜೊತೆ ಮೊದಲ ಸಾಲಿನಲ್ಲಿ ಜಿ.ಪರಮೇಶ್ವರ್, ಜಮೀರ್, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಸತೀಶ್ ಜಾರಕಿಹೊಳಿ, ರಮೇಶ್ ಕುಮಾರ್, ಕೆ.ಬಿ.ಕೋಳಿವಾಡ, ಕೆ.ಎನ್.ರಾಜಣ್ಣ ಆಸೀನ, ಎರಡನೇ, ಮೂರನೇ ಸಾಲಿನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ, ಯತೀಂದ್ರ, ನಾಸೀರ್ ಹುಸೇನ್, ಸುದರ್ಶನ್, ಬಿ.ಎಲ್.ಶಂಕರ್, ಭೀಮಾನಾಯಕ್ ಸೇರಿ ಹಲವರು ಆಸೀನರಾಗಿದ್ದಾರೆ. ವೇದಿಕೆಯ ಅಕ್ಕ-ಪಕ್ಕ ಶಾಸಕರು, ಪರಿಷತ್ ಸದಸ್ಯರು ಕುಳಿತು ಕೊಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವ : ‘ಮೈಸೂರು ಹುಲಿಯಾ’, ‘ಸೆಲ್ಫ್ ಮೇಡ್ ಸಿದ್ದಣ್ಣ’ ಹಾಡು ರಿಲೀಸ್

    ಸಿದ್ದರಾಮೋತ್ಸವ : ‘ಮೈಸೂರು ಹುಲಿಯಾ’, ‘ಸೆಲ್ಫ್ ಮೇಡ್ ಸಿದ್ದಣ್ಣ’ ಹಾಡು ರಿಲೀಸ್

    ಬೆಣ್ಣೆ ನಗರಿ ದಾವಣಗೆರೆಯಲ್ಲಿ ಇಂದು ನಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಅವರಿಗಾಗಿ ತಯಾರಾದ ಎರಡು ಹಾಡುಗಳು ರಿಲೀಸ್ ಆಗುತ್ತಿದೆ. ಇಂದು ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬವನ್ನು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸಿದ್ದರಾಮೋತ್ಸವ ಎಂದು ಹೆಸರಿಡಲಾಗಿದೆ. ಈ ಸಮಾರಂಭದಲ್ಲಿ ಸಿನಿಮಾ ಮಾದರಿಯ ಎರಡು ಹಾಡುಗಳು ಬಿಡುಗಡೆ ಆಗಲಿವೆ.

    ಒಂದು ಹಾಡಿಗೆ ಮೈಸೂರು ಹುಲಿಯಾ ಎಂದು ಹೆಸರಿಟ್ಟಿದ್ದರೆ ಮತ್ತೊಂದು ಗೀತೆಗೆ ಸೆಲ್ಫ್ ಮೇಡ್ ಸಿದ್ದಣ್ಣ ಎಂದು ಶೀರ್ಷಿಕೆ ಇಡಲಾಗಿದೆ. ಈ ಎರಡೂ ಹಾಡುಗಳನ್ನೂ ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಬರೆದಿದ್ದಾರೆ. ಸಲದ ಟಿಣಿಂಗ್ ಮಿಣಿಂಗ್ ಹಾಡು ಹೇಳುವ ಮೂಲಕ ಖ್ಯಾತಿಯಾಗಿರುವ ಗಿರಿಜಾ ಸಿದ್ಧಿ ಒಂದು ಗೀತೆಯನ್ನು ಹಾಡಿದ್ದು, ಮತ್ತೊಂದು ಹಾಡನ್ನು ಚುಟುಚುಟು ಹಾಡಿನ ಖ್ಯಾತಿಯ ರವೀಂದ್ರ ಸೊರಗಾವಿ ಹೇಳಿದ್ದಾರೆ.  ಇದನ್ನೂ ಓದಿ:ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್

    ಈ ಎರಡೂ ಹಾಡುಗಳು ಸಿದ್ಧರಾಮಯ್ಯ ಅವರ ಜೀವನ ಮತ್ತು ಹೋರಾಟದ ಗೀತೆಗಳಾಗಿದ್ದು, ವೀರ ಸಮರ್ಥ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿವೆ. ಈಗಾಗಲೇ ಈ ಹಾಡುಗಳ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ಸಿದ್ದರಾಮಯ್ಯನವರ ಸಾಧನೆಯನ್ನು ಸಾಹಿತ್ಯದಲ್ಲಿ ಅಳವಡಿಸಿಕೊಂಡಿದ್ದಾರೆ ಚೇತನ್ ಕುಮಾರ್.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವಕ್ಕೆ ಹೊರಟ ಕ್ರೂಸರ್ ಪಲ್ಟಿ- ಓರ್ವ ಸಾವು, ಮೂವರಿಗೆ ಗಂಭೀರ ಗಾಯ

    ಸಿದ್ದರಾಮೋತ್ಸವಕ್ಕೆ ಹೊರಟ ಕ್ರೂಸರ್ ಪಲ್ಟಿ- ಓರ್ವ ಸಾವು, ಮೂವರಿಗೆ ಗಂಭೀರ ಗಾಯ

    ಬಾಗಲಕೋಟೆ: ಸಿದ್ದರಾಮೋತ್ಸವಕ್ಕೆ ಹೊರಟ ಕ್ರೂಸರ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯವಾದ ಘಟನೆ ಬಾದಾಮಿ ತಾಳೂಕಿನ ಹುಲಗೇರೆ ಸಮೀಪ ನಡೆದಿದೆ.

    ಪ್ರಕಾಶ್ ಬಡಿಗೇರ್ (34) ಮೃತ ದುರ್ದೈವಿ. ಮೃತ ವ್ಯಕ್ತಿ ಮುಧೋಳ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದವಾನಾಗಿದ್ದರು. ಘಟನೆಯಲ್ಲಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದರೇ, ಮೂವರಿಗೆ ಗಂಭೀರ ಗಾಯವಾಗಿದ್ದು, 6 ಜನರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಗೊಂಡ 11 ಜನ ಹಿರೇ ಆಲಗುಂಡಿ ಗ್ರಾಮದವರಾಗಿದ್ದಾರೆ. ಇವರೆಲ್ಲರೂ ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವಕ್ಕೆ ಭಾಗಿಯಾಗಲು ಹೋರಟಿದ್ದರು. ಈ ಸಮಯದಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಎಸ್‍ಡಿಪಿಐ, ಪಿಎಫ್‍ಐ ಅವರನ್ನ ಸಾಕ್ತಿರೋದೆ ಬಿಜೆಪಿ: ಸಿದ್ದರಾಮಯ್ಯ

    ಘಟನೆ ಸಂಬಂಧಿಸಿ ಸ್ಥಳಕ್ಕೆ ಕೆರೂರ ಪೊಲೀಸ್ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ತುಂಬಿ ಹರಿದ ಪಯಸ್ವಿನಿ ನದಿ- ಸಂಪಾಜೆ ಸಮೀಪದ ರಸ್ತೆ ಜಲಾವೃತ, ಅಂಗಡಿಗಳಿಗೆ ನುಗ್ಗಿತು ನೀರು

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆ ಕೈಗೊಂಡಿರುವ ಸಿದ್ದು ಅಪ್ಪಟ್ಟ ಅಭಿಮಾನಿ

    ಸಿದ್ದರಾಮೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆ ಕೈಗೊಂಡಿರುವ ಸಿದ್ದು ಅಪ್ಪಟ್ಟ ಅಭಿಮಾನಿ

    ಹುಬ್ಬಳ್ಳಿ: ಸದ್ಯ ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಜನ್ಮದಿನದೇ ಮಾತು, ಸಿದ್ದು ಅವರ ಅಭಿಮಾನಿಗಳು ಮತ್ತು ಆಪ್ತರು ದಾವಣಗೆರೆಯಲ್ಲಿ ಜನ್ಮದಿನದ ಸಂಭ್ರಮವನ್ನು ಉತ್ಸವರ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ.

    ಈ ಕಾರ್ಯಕ್ರಮಕ್ಕೆ ಧಾರವಾಡದ ಸಿದ್ದು ಅಭಿಮಾನಿ ಸಿದ್ದರಾಮೋತ್ಸವಕ್ಕೆ ಬರಿಗಾಲಲ್ಲಿ ದಾವಣಗೆರೆ ಕಾಲ್ನಡಿಗೆ ಹೊರಟಿದ್ದಾನೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಪಂ ಸದಸ್ಯ ಹನಮಂತಪ್ಪರಿಂದ ಏಕಾಂಗಿಯಾಗಿ, ಗ್ರಾಮದಿಂದ ದಾವಣಗೆರೆವರೆಗೆ 120 ಕಿ.ಮೀವರೆಗೆ ಪಾದಯಾತ್ರೆ ಹೊರಟ್ಟಿದ್ದಾನೆ.

    ಅಪ್ಪಟ ಕಾಂಗ್ರೆಸ್ ಕಾರ್ಯಕರ್ತನಾಗಿರುವ ಹನುಮಂತ ಈ ಹಿಂದೆ ದಿವಂಗತ ಸಿ.ಎಸ್. ಶಿವಳ್ಳಿವರು ಸಚಿವ ಸ್ಥಾನ ಸಿಗಲೆಂದು ಧೀರ್ಘ ದಂಡ ನಮಸ್ಕಾರ ಹಾಕಿದ್ದರು. ಇದಾದ ಬಳಿಕ ಅವರ ಮರಣದ ನಂತರ ಶಿವಳ್ಳಿ ಪತ್ನಿ ಕುಸುಮಾರವರು ಶಾಸಕಿಯಾಗಲೆಂದು ಮತ್ತೆ ದೀರ್ಘ ದಂಡ ನಮಸ್ಕಾರ ಹಾಗೂ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ದರು. ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ, ಅದು ಸ್ವಾಭಾವಿಕ: ನಿರ್ಮಲಾ ಸೀತಾರಾಮನ್

    Live Tv
    [brid partner=56869869 player=32851 video=960834 autoplay=true]

  • ರಾಜ್ಯ ಹಾಳು ಮಾಡಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ: ಅರಗ

    ರಾಜ್ಯ ಹಾಳು ಮಾಡಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ: ಅರಗ

    ಬೆಂಗಳೂರು: 5 ವರ್ಷ ರಾಜ್ಯವನ್ನು ಹಾಳು ಮಾಡಿ ಈಗ ಸಿದ್ದರಾಮೋತ್ಸವ ಮಾಡಿಕೊಳ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿದ್ದರಾಮೋತ್ಸವದ ವಿರುದ್ಧ ಗೃಹ ಸಚಿವ ಅರಗ ಜ್ಞಾನೇಂದ್ರ ಆಕ್ರೋಶ ಹೊರಹಾಕಿದ್ದಾರೆ.

    ಸಿದ್ದರಾಮೋತ್ಸವ ಕುರಿತು ಮಾತನಾಡಿದ ಅವರು, ಸಿದ್ದರಾಮೋತ್ಸವಕ್ಕೆ ಶುಭವಾಗಲಿ. ಆದರೆ ಕಾಂಗ್ರೆಸ್ 5 ವರ್ಷ ಈ ರಾಜ್ಯದಲ್ಲಿ ಮಾಡಬಾರದ್ದನ್ನು ಮಾಡಿದೆ. ಈಗ ಜನರ ಮನಸ್ಸನ್ನು ಏನೋ ಮಾಡ್ತೀವಿ ಅಂತ ತೋರಿಸೋಕೆ ಪೋಸ್ ಕೊಡ್ತಿದ್ದಾರೆ. ಜನ ಯಾರು ಇದನ್ನು ನಂಬೋದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್

    ಸಿದ್ದರಾಮಯ್ಯ ಅವರ ಅವಧಿಯಲ್ಲಿ ಏನ್ ಮಾಡಿದ್ದಾರೆ ಅನ್ನೋದನ್ನ ಈಗ ಅನುಭವಿಸುತ್ತಿದ್ದೇವೆ. ‘ಲಾ ಅಂಡ್ ಅರ್ಡರ್’ ಪರಿಸ್ಥಿತಿ ಹೇಗೆ ಹಾಳಾಗ್ತಿದೆ ಅಂತ ಈಗ ಗೊತ್ತಾಗುತ್ತಿದೆ. ಅಲ್ಪಸಂಖ್ಯಾತ, ಕೆಲ ಮತಾಂಧರ ಮೇಲೆ ಇದ್ದ ಕೇಸ್‍ಗಳನ್ನ ವಾಪಸ್ ಪಡೆದಿದ್ದರು ಎಂದು ಆರೋಪಿಸಿದ್ದಾರೆ.

    ಮತಾಂಧ ಶಕ್ತಿಗಳನ್ನ ಸಿದ್ದರಾಮಯ್ಯ ಸರ್ಕಾರದಲ್ಲಿ ಬೆಳೆಸಿ ಇಟ್ಟಿದ್ದಾರೆ. ಈಗ ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತ ಅವರೇ ಟೀಕೆ ಮಾಡ್ತಾರೆ. ಇವತ್ತಿನ ಈ ಸ್ಥಿತಿಗೆ ಸಿದ್ದರಾಮಯ್ಯ ಅವ್ರೇ ಕಾರಣ. ಜನ ಇದನ್ನ ಯಾವತ್ತೂ ಕೂಡಾ ಮರೆಯೋದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹಲಸಿನ ಹಣ್ಣಿಗಾಗಿ ಗಜರಾಜನ ಸರ್ಕಸ್ – ಕೊನೆಗೆ ಏನಾಯ್ತು ನೋಡಿ

    Live Tv
    [brid partner=56869869 player=32851 video=960834 autoplay=true]

  • ನಾಳೆ ಸಿದ್ದರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ – ರಾಜ್ಯಕ್ಕೆ ಇಂದು ರಾಹುಲ್ ಗಾಂಧಿ ಆಗಮನ

    ನಾಳೆ ಸಿದ್ದರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ – ರಾಜ್ಯಕ್ಕೆ ಇಂದು ರಾಹುಲ್ ಗಾಂಧಿ ಆಗಮನ

    ಬೆಂಗಳೂರು: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಒಂದೇ ದಿನ ಇದ್ದು, ದಾವಣಗೆರೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

    ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 50 ಎಕರೆ ವಿಸ್ತಾರವಾದ ಶಾಮನೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ಅರಮನೆ ಮಾದರಿಯ ಬೃಹತ್ ವೇದಿಕೆ ಸಿದ್ಧವಾಗಿದೆ. ವೇದಿಕೆಯ ಮೇಲೆ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ಖರ್ಗೆ ಸೇರಿದಂತೆ ಕೇವಲ 45 ಜನ ಮುಖ್ಯ ಗಣ್ಯರಿಗೆ ಕೂರಲು ಅವಕಾಶ ನೀಡಲಾಗಿದೆ. ಹಾಗೆಯೇ ವೇದಿಕೆ ಮುಂಭಾಗದಲ್ಲಿ 6 ಲಕ್ಷ ಜನರಿಗೆ ಆಸನಗಳು ಸಜ್ಜಾಗಿವೆ. ಮಾಜಿ ಸಚಿವರು, ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.

    ಸಿದ್ದರಾಮಯ್ಯನವರ 75 ವರ್ಷಗಳ ಕಾಲ ನಡೆದು ಬಂದ ಹಾದಿಯ ಬಗ್ಗೆ ಜನರಿಗೆ ತಿಳಿಸಲು ಛಾಯಾಚಿತ್ರ ಪ್ರದರ್ಶನವನ್ನು ಕೂಡ ಆಯೋಜನೆ ಮಾಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯ ಬಾಸ್ ಎಂದು ಚಿನ್ನದಲ್ಲಿ ಬರೆಸಿ ಸಿದ್ದರಾಮಯ್ಯಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ಎಕ್ಸ್ ಸಿಎಂ ಎಂದು ಬರೆಸಬೇಕಿತ್ತು ಸಿದ್ದು ಅಭಿಮಾನಿಗೆ ತಿಳಿಸಿದ್ದಾರೆ.

    ಸಿದ್ದರಾಮೋತ್ಸವಕ್ಕೆ ಹೋಗುವವರಿಗೆ ಅಭಿಮಾನಿಗಳನ್ನು ಕರೆದೊಯ್ಯಲು ಈಗಾಗಲೇ ವಿವಿಧ ಜಿಲ್ಲೆಗಳಿಂದ ಸುಮಾರು 7 ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ 200 ಕಾರು, 100 ಆಟೋಗಳಿಗೆ ರಕ್ಷಾರಾಮಯ್ಯ ಚಾಲನೆ ನೀಡಿದ್ದಾರೆ. ಇಂದು ಸಂಜೆ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದು. ಹುಬ್ಬಳ್ಳಿಗೆ ಸಂಜೆ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ಖಾಸಗಿ ಹೋಟೆಲ್‌ಗೆ ತೆರಳುವ ರಾಹುಲ್, ಮೊದಲ ಬಾರಿಗೆ ಕಾರ್ಯಕರ್ತರು ಮತ್ತು ಮುಖಂಡರ ಜೊತೆಗೆ ಚುನಾವಣೆ ಸಂಬಂಧಿತ ಐತಿಹಾಸಿಕ ಸಭೆ ನಡೆಸಲಿದ್ದಾರೆ. ಬಳಿಕ ರಾತ್ರಿ ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಮಾಡಿ ಬೆಳಗ್ಗೆ ಚಿತ್ರದುರ್ಗದ ಕಡೆ ತೆರಳಲಿದ್ದಾರೆ ಎಂದು ಸಿದ್ದರಾಮಯ್ಯ ಅಮೃತಮಹೋತ್ಸವ ಸಮಿತಿ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಬರ್ತ್‌ಡೇ ಇದ್ರೆ ಹೇಳಿ ಅದಕ್ಕೂ ಬರ್ತೀವಿ: ಡಿಕೆಶಿ

    ನಿಮ್ಮ ಬರ್ತ್‌ಡೇ ಇದ್ರೆ ಹೇಳಿ ಅದಕ್ಕೂ ಬರ್ತೀವಿ: ಡಿಕೆಶಿ

    ಹುಬ್ಬಳ್ಳಿ: ನಮ್ಮ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ನೇ ಜನ್ಮದಿನಾಚರಣೆ ಇದೆ. ಆ ಕಾರ್ಯಕ್ರಮಕ್ಕೆ ನಾವೆಲ್ಲಾ ಹೋಗುತ್ತೇವೆ. ನಿಮ್ಮ ಬರ್ತ್ಡೇ ಇದ್ದರೆ ಹೇಳಿ, ಆ ಕಾರ್ಯಕ್ರಮಕ್ಕೂ ನಾವು ಬರ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದರು.

    ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನೀವು ಸಿದ್ದರಾಮೋತ್ಸವದಲ್ಲಿ ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆಯನ್ನು ಪತ್ರಕರ್ತರು ಡಿಕೆಶಿಗೆ ಕೇಳಿದ್ದು, ಅವರು ಎಲ್ಲೂ ಸಿದ್ದರಾಮೋತ್ಸವ ಪದವನ್ನು ಬಳಸದೇ, ನಮ್ಮ ಮಾಜಿ ಸಿಎಂ ಅವರ 75 ನೇ ವರ್ಷದ ಜನ್ಮದಿನ ಅಷ್ಟೇ. ಅದನ್ನು ನೀವೇನು ಬೇಕಾದರೂ ಬರೆದುಕೊಳ್ಳಿ ನಾನೇನೂ ಹೇಳಲ್ಲ ಎಂದರು.

    Siddaramaiah

    ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಪದೇ ಪದೆ ಇಂತಹ ಹತ್ಯೆಗಳು ನಡೆಯುತ್ತಿವೆ, ಇದಕ್ಕೆ ಖಂಡನೆಯಿದೆ. ಸಾವು ಯಾರದ್ದೇ ಆದರೂ ಅದು ಮನುಷ್ಯನ ಸಾವು. ಸರ್ಕಾರ ಅಂತಹ ಸಾವುಗಳಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಬೇಕಿದೆ. ಬಿಜೆಪಿ ಕಾರ್ಯಕರ್ತರಿಗೆ ಅವರ ಸರ್ಕಾರದ ಮೇಲೆ ನಂಬಿಕೆ ಇತ್ತು. ಆದರೆ ಸರ್ಕಾರ ಅವರ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ಹೇಳಿದರು. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿರ್ಬಂಧ ಇನ್ನೆರಡು ದಿನ ವಿಸ್ತರಣೆ

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅವರ ಕೈಯಿಂದ ಆಗಲ್ಲ. ಬಿಜೆಪಿ ಕಾರ್ಯಕರ್ತರ ನೋವಿನಲ್ಲಿ ನಾನೂ ಇದ್ದೇನೆ. ಹತ್ಯೆಯಾದ ಮೂವರೂ ಅಮಾಯಕರ ಮನೆಗೆ ಒಂದು ದಿನ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದರು.

    ಬಿಜೆಪಿಯವರಿಗೆ ಸ್ವಾತಂತ್ರ್ಯದ ಬಗ್ಗೆ ಗೌರವ ಇಲ್ಲ. ರಾಷ್ಟ್ರಧ್ವಜದ ಬಗ್ಗೆ ಮಾತನಾಡುವವರಿಗೆ ಅದರ ಇತಿಹಾಸ ಗೊತ್ತಿಲ್ಲ. ಇತಿಹಾಸ ಗೊತ್ತಿಲ್ಲದೆಯೇ ರಾಷ್ಟ್ರಧ್ವಜದ ಬಗ್ಗೆ ಮಾತನಾಡುತ್ತಾರೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ನಿವೃತ್ತಿ ಅಂಚಿನಲ್ಲಿರೋ ಸಿದ್ದು, ಯೋಗ್ಯತೆಯಿಲ್ಲದ ಡಿಕೆಶಿನ ಸಿಎಂ ಮಾಡಿ ಏನ್ ಮಾಡ್ಬೇಕು – ಅಶ್ವಥ್ ನಾರಾಯಣ

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವಕ್ಕೆ ಟಕ್ಕರ್ – ಬಿಜೆಪಿಯಿಂದ ಜನೋತ್ಸವ

    ಸಿದ್ದರಾಮೋತ್ಸವಕ್ಕೆ ಟಕ್ಕರ್ – ಬಿಜೆಪಿಯಿಂದ ಜನೋತ್ಸವ

    ಬೆಂಗಳೂರು: ಸಿದ್ದರಾಮೋತ್ಸವಕ್ಕೆ ಪ್ರತಿಯಾಗಿಯೋ ಏನೋ ಬಿಜೆಪಿ ಸರ್ಕಾರದ ಸಾಧನಾ ಸಮಾವೇಶಕ್ಕೆ `ಜನೋತ್ಸವ’ ಎಂದು ಹೆಸರಿಡಲಾಗಿದೆ. ಈ ಮೂಲಕ ನಮ್ಮಲ್ಲಿ ವ್ಯಕ್ತಿ ಪೂಜೆ ಇಲ್ಲ, ಏನಿದ್ದರೂ ಜನರ ಪೂಜೆ ಎಂಬ ಸಂದೇಶವನ್ನು ಕೇಸರಿ ಪಡೆ ಕೊಟ್ಟಂತೆ ಕಾಣುತ್ತಿದೆ.

    ದೊಡ್ಡಬಳ್ಳಾಪುರದಲ್ಲಿ ಬೃಹತ್ ಜನೋತ್ಸವ ಸಮಾವೇಶಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಜುಲೈ 29 ಮತ್ತು 30ರಂದು ಎಲ್ಲಾ ಜಿಲ್ಲೆಗಳಲ್ಲಿ ಜನೋತ್ಸವ ಸಮಾವೇಶ ಆಯೋಜಿಸಲು ಬಿಜೆಪಿ ತೀರ್ಮಾನಿಸಿದೆ. ಜನೋತ್ಸವದ ಕಾರ್ಯಕ್ರಮದ ಲೋಗೋ ಬಿಡುಗಡೆ ಮಾಡಿದ್ದು, 3 ಮತ್ತು 1 ಸಂಖ್ಯೆಯನ್ನು ಲೋಗೋದಲ್ಲಿ ಬಳಸಿಕೊಂಡಿದೆ. ಇದನ್ನೂ ಓದಿ: ನೂತನ ಸಂಸತ್ ಭವನದಲ್ಲಿ ಅನುಭವ ಮಂಟಪ ಕಲಾಕೃತಿ ಸ್ಥಾಪನೆ ಕರ್ನಾಟಕದ ಹೆಮ್ಮೆ: ಪ್ರಹ್ಲಾದ್ ಜೋಶಿ

    3 ಸಂಖ್ಯೆಯ ಅರ್ಥ ಬಿಜೆಪಿ ಸರ್ಕಾರಕ್ಕೆ 3 ವರ್ಷವಾದರೆ, 1 ಎಂದರೆ ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ ಎಂಬ ಅರ್ಥ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿರುವ ಬೇಬಿಬೆಟ್ಟದ ಆ ಜಾಗ ಮೈಸೂರು ಅರಮನೆಗೆ ಸೇರಿದ್ದು: ಯದುವೀರ್

    ಬಿಜೆಪಿಯ ಜನೋತ್ಸಕ್ಕೆ ಕಾಂಗ್ರೆಸ್ ನಾಯಕರು ಟೀಕೆ ವ್ಯಕ್ತಪಡಿಸಿದ್ದಾರೆ. ಇದು ಜನೋತ್ಸವ ಅಲ್ಲ, ಭ್ರಷ್ಟೋತ್ಸವ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಬೊಮ್ಮಾಯಿ ಸರ್ಕಾರದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿ, ಎಲ್ಲಾ ವಿಚಾರಗಳಲ್ಲಿ ಸರ್ಕಾರ ವಿಫಲವಾಗಿದೆ. ಭ್ರಷ್ಟಾಚಾರವೇ ಈ ಸರ್ಕಾರದ ಸಾಧನೆ ಎಂದು ಕಾಂಗ್ರೆಸ್ ಬಿಂಬಿಸಿದೆ. ಬನ್ನಿ, ನನ್ನ ಸಾಧನೆ ಸಮಾರಂಭದಲ್ಲಿ ಪಾಲ್ಗೊಳ್ಳಿ ಎಂದು ಸಿಎಂ ಬೊಮ್ಮಾಯಿ ಆಹ್ವಾನ ನೀಡಿರುವಂತೆ ಕಾರ್ಡ್ನಲ್ಲಿ ವ್ಯಂಗ್ಯ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]