Tag: ಸಿದ್ದರಾಮಯ್ಯ

  • ಹಳ್ಳಿಗಳ ಉದ್ಧಾರಕ್ಕೆ 14,061 ಕೋಟಿ ರೂ.: ಬಜೆಟ್‍ನಲ್ಲಿ ಸಿಕ್ಕಿದ್ದು ಏನು?

    ಹಳ್ಳಿಗಳ ಉದ್ಧಾರಕ್ಕೆ 14,061 ಕೋಟಿ ರೂ.: ಬಜೆಟ್‍ನಲ್ಲಿ ಸಿಕ್ಕಿದ್ದು ಏನು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಒಟ್ಟು 14,061 ಕೋಟಿ ರೂ. ಅನುದಾನವನ್ನು ಪ್ರಕಟಿಸಿದ್ದಾರೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – 14,061 ಕೋಟಿ
    – ನಮ್ಮ ಗ್ರಾಮ ನಮ್ಮ ಯೋಜನೆಗೆ – 20 ಕೋಟಿ ಅನುದಾನ
    – ಗ್ರಾಮೀಣಾ ನೀರು ಪುರೈಕೆಗೆ – 2,200 ಕೋಟಿ
    – 2500 ಶುದ್ಧ ನೀರು ಘಟಕೆ ಸ್ಥಾಪನೆ
    – ಬಯಲು ಬಹಿರ್ದಸೆ ಮುಕ್ತಾವಾಗಿಸಲು – 1585 ಕೋಟಿ
    – ಗ್ರಾಮೀಣ ರಸ್ತೆ ನಿರ್ವಹಣ ನೀತಿ ಜಾರಿ

    – 100 ಕೋಟಿ ವೆಚ್ಚದಲ್ಲಿ ನಮ್ಮ ಹೊಲ ನಮ್ಮ ದಾರಿ ಯೋಜನೆ
    – ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ 1 ಸಾವಿರ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ
    – 1765 ಕೋಟಿ ವೆಚ್ಚದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ
    – ಜಿಲ್ಲಾ ಪಂ. ಅಬೀವೃದ್ಧಿ ಅನುದಾನ 4 ಕೊಟಿಗೆ ಹೆಚ್ಚಳ
    – ಗ್ರಾಮ, ತಾಲೂಕು, ಜಿ.ಪಂ ಸದಸ್ಯರ ಗೌರವ ಧನ ಹೆಚ್ಚಳ

    – ಜಿಲ್ಲಾ ಪಂ. ಸದಸ್ಯರಿಗೆ 5 ಸಾವಿರ ಗೌರವಧನ, ತಾ. ಅಧ್ಯಕ್ಷರಿಗೆ 6 ಸಾವಿರ, ಉಪಾಧ್ಯಕ್ಷರಿಗೆ 4 ಸಾವಿರ, ತಾ.ಪಂ. ಸದಸ್ಯರಿಗೆ 3 ಸಾವಿರ, ಗ್ರಾ.ಪಂ. ಅಧ್ಯಕ್ಷರಿಗೆ 3,ಉಪಾಧ್ಯಕ್ಷರಿಗೆ 2 ಸಾವಿರ, ಸದಸ್ಯರಿಗೆ 1 ಸಾವಿರ ಗೌರವಧನ
    – 3 ಕೋಟಿ ವೆಚ್ಚದಲ್ಲಿ ಒಂದು ಮಾದರಿ ಪರಾಂಪರಿಕ ಗ್ರಾಮ ಸ್ಥಾಪನೆ

    ————–

    ಯೋಜನೆ ಮತ್ತು ಪ್ರದೇಶ ಅಭಿವೃದ್ಧಿ – 1828 ಕೋಟಿ
    – ಶಾಸಕರ ಕ್ಷೇತ್ರಾಭಿವೃದ್ಧಿ ಕಾರ್ಯಕ್ರಮಗಳಿಗೆ 600 ಕೋಟಿ
    – ನಕ್ಸಲ್ ಬಾದಿತ 9 ತಾಲೂಕುಗಳಿಗೆ ವಿಶೇಷ ಅನುದಾನ
    – ಅಭಿವೃದ್ಧಿ ಕಾಮಗಾರಿಗಳಿಗಾಗಿ 2.25 ಕೋಟಿ

    – ಪ್ರಾದೇಶಿಕ ಅಸಮತೋಲನ ತಗ್ಗಿಸಲು – 3 ಸಾವಿರ ಕೋಟಿ
    – ಮಲೆನಾಡು ಅಭಿವೃದ್ಧಿ ಮಂಡಳಿಗೆ 60 ಕೋಟಿ, ಬಯಲು ಸೀಮೆ-50, ಕರಾವಳಿ ಪ್ರದೇಶ-20 ಕೋಟಿ
    – ಹೈ-ಕ ಪ್ರದೇಶ ಅಭಿವೃದ್ಧಿಗೆ 1500 ಕೋಟಿ

     

  • 2018ರ ಏಪ್ರಿಲ್ 1 ರಿಂದ 2 ಸ್ಟ್ರೋಕ್ ಆಟೋ ರಿಕ್ಷಾ ರದ್ದು: ಸಾರಿಗೆ ಇಲಾಖೆಗೆ ಸಿಕ್ಕಿದ್ದು ಏನು?

    2018ರ ಏಪ್ರಿಲ್ 1 ರಿಂದ 2 ಸ್ಟ್ರೋಕ್ ಆಟೋ ರಿಕ್ಷಾ ರದ್ದು: ಸಾರಿಗೆ ಇಲಾಖೆಗೆ ಸಿಕ್ಕಿದ್ದು ಏನು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ತಮ್ಮ ಬಜೆಟ್‍ನಲ್ಲಿ ಸಾರಿಗೆ ಇಲಾಖೆಗೆ ಒಟ್ಟು 2354 ಕೋಟಿ ರೂ. ಅನುದಾನವನ್ನು ಪ್ರಕಟಿಸಿದ್ದಾರೆ. ಬಜಟ್‍ನಲ್ಲಿ ಘೋಷಣೆಯಾದ ಪ್ರಮುಖ ಅಂಶಗಳು ಇಲ್ಲಿದೆ.

    ಸಾರಿಗೆ
    * ರೈತ ಸಾರಥಿ ಯೋಜನೆಯಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ತರಬೇತಿ – 2 ಕೋಟಿ
    * 5 ಕೋಟಿ ವೆಚ್ಚದಲ್ಲಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ರಚನೆ
    * 2018ರ ಏಪ್ರಿಲ್ 1 ರಿಂದ 2 ಸ್ಟ್ರೋಕ್ ಆಟೋ ರಿಕ್ಷಾಗಳ ರದ್ದು

    * 4 ಸ್ಟ್ರೋಕ್ ಎಲ್‍ಪಿಜಿಯ 10 ಸಾವಿರ ಆಟೋಗಳಿಗೆ ತಲಾ 30 ಸಾವಿರ ಸಹಾಯಧನ-30 ಕೋಟಿ
    * ಚಿಂತಾಮಣಿ, ರಾಣೆಬೆನ್ನೂರು, ಬಂಟ್ವಾಳದಲ್ಲಿ 3 ಆರ್‍ಟಿಓ ಕಚೇರಿ ಆರಂಭ
    * ಪ್ರಸಕ್ತ ಸಾಲಿನಲ್ಲಿ 3 ಸಾವಿರ ಹೊಸ ಬಿಎಂಟಿಸಿ ಬಸ್‍ಗಳ ಸೇರ್ಪಡೆ
    * 1500 ಹೊಸ ಬಸ್‍ಗಳ ಖರೀದಿ – 1500 ಬಸ್‍ಗಳು ಗುತ್ತಿಗೆ ಮೂಲಕ

    * ಸಾರಿಗೆ ನಿಗಮಗಳಿಂದ 3250 ಹೊಸ ಬಸ್‍ಗಳ ಖರೀದಿ
    * ವಾಯುವ್ಯ ಕರ್ನಾಟಕ ಸಾರಿಗೆಯಿಂದ 1050 ಬಸ್‍ಗಳು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ 700 ಬಸ್‍ಗಳು, ಕೆಎಸ್‍ಆರ್‍ಟಿಸಿಯಿಂದ 1500 ಬಸ್‍ಗಳು
    * ಕೇಂದ್ರ ಅನುದಾನದೊಂದಿಗೆ ಬೆಂಗಳೂರಿನಲ್ಲಿ 150, ಮೈಸೂರಿನಲ್ಲಿ 50 ಎಲೆಕ್ಟ್ರಿಕ್ ಬಸ್‍ಗಳ ಸಂಚಾರ
    * ಶಿವಮೊಗ್ಗದಲ್ಲಿ ಹೊಸ ವಿಭಾಗ ಆರಂಭ

    * ಸಾರಿಗೆ ನಿಗಮಗಳ ಮೂಲಕ 44 ಹೊಸ ಬಸ್ ನಿಲ್ದಾಣಗಳು, 14 ಹೊಸ ಬಸ್ ಡಿಪೋಗಳು ಮತ್ತು ತರಬೇತಿ ಕೇಂದ್ರ ಸ್ಥಾಪನೆ
    * ಕರ್ನಾಟಕದ ಗೋವಾ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅರ್ಜುನ ಮತ್ತು ಖೇಲ್‍ರತ್ನ ಪ್ರಶಸ್ತಿ ಪುರಸ್ಕೃತರಿಗೆ ಉಚಿತ ಬಸ್ ಪಾಸ್
    * ಬಿಎಂಟಿಸಿ ಮೊಬೈಲ್ ಆ್ಯಪ್‍ನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತಾ ದೃಷ್ಟಿಯಿಂದ ಎಸ್‍ಒಎಸ್ ಮತ್ತು ಟ್ರ್ಯಾಕಿಂಗ್ ಸೌಲಭ್ಯ
    * ಉಚಿತ ಹಾಗೂ ರಿಯಾಯಿತಿ ಧರದ ಬಸ್ ಹೊಂದಿರುವವರಿಗೆ ಸ್ಮಾರ್ಟ್ ಕಾರ್ಡ್
    * ಚಾಲಕರು ಮತ್ತು ಮೆಕ್ಯಾನಿಕ್‍ಗಳಿಗೆ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ – ಈಗಿರುವ ಕೇಂದ್ರಗಳು ಮೇಲ್ದರ್ಜೆಗೆ

  • ಸಿದ್ದು ಬಜೆಟ್‍ನಲ್ಲಿ ಸ್ಯಾಂಡಲ್‍ವುಡ್ ಮತ್ತು ಚಿತ್ರ ಪ್ರೇಕ್ಷಕರಿಗೆ ಗುಡ್‍ನ್ಯೂಸ್

    ಸಿದ್ದು ಬಜೆಟ್‍ನಲ್ಲಿ ಸ್ಯಾಂಡಲ್‍ವುಡ್ ಮತ್ತು ಚಿತ್ರ ಪ್ರೇಕ್ಷಕರಿಗೆ ಗುಡ್‍ನ್ಯೂಸ್

    ಬೆಂಗಳೂರು: ಇಂದು ವಿಧಾನಸೌಧದಲ್ಲಿ ಸಿದ್ದರಾಮಯ್ಯ ಸರ್ಕಾರದ ಐದನೇ ಬಜೆಟ್ ಮಂಡನೆಯಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಕ್ಕೆ ಸಿದ್ದರಾಮಯ್ಯ ಸರ್ಕಾರ ಈ ಕೆಳಕಂಡ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

    ಒಟ್ಟು ಅನುದಾನ: 283 ಕೋಟಿ ರೂ.

    ವಾರ್ತಾ ಇಲಾಖೆ:

    • 16 ಕೋಟಿ ವೆಚ್ದದಲ್ಲಿ ಜಿಲ್ಲಾ ಮಾಹಿತಿ ಉತ್ಸವ ಆಯೋಜನೆ.
    • 17 ಕೋಟಿ ವೆಚ್ಚದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಎಲ್ಲಾ ತಾಲೂಕುಗಳ ಸಾರ್ವಜನಿಕ ಸ್ಥಳಗಳಲ್ಲಿ ಡಿಜಿಟಲ್ ಪ್ರದರ್ಶನ ಫಲಕ.
    • 150 ವರ್ಷಗಳ ಜನ್ಮ ವರ್ಷಾಚರಣೆ ಪ್ರಯಕ್ತ ರಾಜ್ಯಾದ್ಯಂತ ಮಹಾತ್ಮಾಗಾಂಧಿ ಧ್ವನಿ ಬೆಳಕು ಪ್ರದರ್ಶನಕ್ಕೆ 5 ಕೋಟಿ ರೂ. ಅನುದಾನ.
    • ಅರಸೀಕೆರೆ ಕಸ್ತೂರ್ಬಾ ಆಶ್ರಮ ಅಭಿವೃದ್ಧಿಗೆ 2 ಕೋಟಿ ಅನುದಾನ.
    • ಪತ್ರಕರ್ತರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಉಚಿತ ಬಸ್ ಪಾಸ್.
    • ನಿವೃತ್ತ ಪತ್ರಕರ್ತರ ಮಾಶಾಸನ 8 ಸಾವಿರದಿಂದ 10 ಸಾವಿರಕ್ಕೆ ಏರಿಕೆ.

    ಸಾರ್ವಜನಿಕ ಸಂಪರ್ಕ:

    • ಚಲನ ಚಿತ್ರೋದ್ಯಮದ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಆರೋಗ್ಯ ಸೇವೆಗಾಗಿ ಸ್ಥಾಪಿಸಿರುವ ದತ್ತಿ ನಿಧಿ ಮೊತ್ತ 1 ಕೋಟಿಯಿಂದ 10 ಕೋಟಿ ಹೆಚ್ಚಳ.
    • ಮಲ್ಟಿಫ್ಲೆಕ್ಸ್ ಚಿತ್ರಮಂದಿರದ ಒಂದು ಪರದೆಯಲ್ಲಿ ಮಧ್ಯಾಹ್ನ 1.30ರಿಂದ 7.30ರ ವರೆಗೆ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಚಲನಚಿತ್ರ ಪ್ರದರ್ಶನ ಕಡ್ಡಾಯ.
    • ಎಲ್ಲಾ ಮಲ್ಟಿಫ್ಲೆಕ್ಸ್‍ಗಳಲ್ಲಿ ಏಕರೂಪ ಪ್ರವೇಶ ದರ ನಿಗದಿ. 200 ರೂಗಳ ಗರಿಷ್ಟ ಪ್ರವೇಶ ದರ ನಿಗದಿ.
  • ಬಜೆಟ್‍ನಲ್ಲಿ ಯುವಜನತೆಗೆ ಮತ್ತು ಕ್ರೀಡಾ ಇಲಾಖೆಗೆ ಸಿಕ್ಕಿದ್ದು ಏನು?

    ಬಜೆಟ್‍ನಲ್ಲಿ ಯುವಜನತೆಗೆ ಮತ್ತು ಕ್ರೀಡಾ ಇಲಾಖೆಗೆ ಸಿಕ್ಕಿದ್ದು ಏನು?

    ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡೆಗೆ ಸಿಎಂ ಸಿದ್ದರಾಮಯ್ಯ 288 ಕೋಟಿ ರೂ. ಅನುದಾನ ನೀಡಿದ್ದಾರೆ. ಬಜೆಟ್‍ನಲ್ಲಿ ಘೋಷಣೆಯಾದ ಪ್ರಮುಖ ಅಂಶಗಳು ಇಲ್ಲಿದೆ

    – ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಲು 1 ಸಾವಿರ ಪ್ರತಿಭಾನವಿತ ಕ್ರೀಡಾಪಟುಗಳಿಗೆ ತಲಾ 1 ಲಕ್ಷ ನೆರವು, 10 ಕೋಟಿ ಮೀಸಲು
    – 1 ಕೋಟಿ ವೆಚ್ಚದಲ್ಲಿ 4 ಕ್ರಿಡಾ ಅಕಾಡೆಮಿ ಸ್ಥಾಪನೆ, ಬೆಂಗಳೂರಿನ ವಿದ್ಯಾನಗರದಲ್ಲಿ ಬ್ಯಾಸ್ಕೇಟ್ ಬಾಲ್, ಉಡುಪಿಯಲ್ಲಿ ಈಜು, ಮೈಸೂಇನಲ್ಲಿ ಟೆನಿಸ್, ಚಿತ್ರದುರ್ಗದಲ್ಲಿ ಆರೋಹಣ ಅಕಾಡೆಮಿ ಸ್ಥಾಪನೆ
    – ಖಾಸಗಿ ಸಹಭಾಗ್ವಿತ್ವದಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿಗಳ ಪ್ರಾರಂಭ

    – 2 ಕೋಟಿ ವೆಚ್ಚದಲ್ಲಿ ಕ್ರೀಡಾ ವಿಜ್ಞಾನಕೇಂದ್ರಗಳ ಸ್ಥಾಪನೆ
    – ಖಾಸಗಿ ಸಹಭಾಗಿತ್ವದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನ ವರುಣ ಕೆರೆಯಲ್ಲಿ ಜಲಕ್ರೀಡಾ ಕೇಂದ್ರ ಅಭಿವೃದ್ಧಿ
    – 8 ಕೋಟಿ ವೆಚ್ಚದಲ್ಲಿ ನಾಲ್ಕು ಕ್ರೀಡಾ ವಿದ್ಯಾರ್ಥಿನಿಲಯಗಳಲ್ಲಿ ಅತ್ಯಾಧುನಿಕ ವ್ಯಾಯಾಮ ಶಾಲೆ ಆರಂಭ
    – ಮಹಿಳಾ ಆಥ್ಲೀಟ್‍ಗಳಿಗಾಗಿ ತಲಾ 1 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಸುಸಜ್ಜಿತ ಕ್ರೀಡಾ ವಿದ್ಯಾರ್ಥಿ ನಿಲಯ

    – ಬೆಳಗಾವಿ, ಮೈಸೂರಿನಲ್ಲಿ ಆಧುನಿಕ ಜಿಮ್ನಾಸ್ಟಿಕ್ ಸೌಲಭ್ಯ- 4 ಕೋಟಿ ಅನುದಾನ
    – ವಿಕಲಚೇತನ ಕ್ರೀಡಾ ವಿಭಾಗ- 4 ಕೋಟಿ ಅನುದಾನ
    – ಒಲಂಪಿಕ್ಸ್‍ನಲ್ಲಿ ಪದಕ ವಿಜೇತರರಿಗೆ ಬಂಪರ್- ಸ್ವರ್ಣ ಗದ್ದೆರೆ 5 ಕೋಟಿ, ರಜತ-3 ಕೋಟಿ, ಕಂಚು-2 ಕೋಟಿ
    – ಒಲಂಪಿಕ್ಸ್ ವಿಜೇತರಿಗೆ ಸರ್ಕಾರ ಇಲಾಖೆಗಳಲ್ಲಿ ಗ್ರೂಪ್ `ಎ, ದರ್ಜೆ ಹುದ್ದೆಗಳು
    – ಏಷ್ಯಾನ್, ಕಾಮನ್‍ವೆಲ್ತ್ ಕ್ರೀಡೆಗಳ ವಿಜೇತರಿಗೆ ಗ್ರೂಪ್ ಬಿ ದರ್ಜೆಯ ಹುದ್ದೆಗಳು
    – ಪ್ರತಿವರ್ಷ 10 ಜನ ಕ್ರೀಡಾ ಪ್ರವರ್ತಕರಿಗೆ – `ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ’

    – 20 ಕೋಟಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ಕಾಮಗಾರಿಗಳನ್ನ ಪೂರ್ಣ
    – ಗ್ರಾಮೀಣ ಯುವಕರಿಗಾಗಿ- ಯುವಚೈತನ್ಯ ಎಂಬ ಹೊಸ ಯೋಜನೆ ಪ್ರಾರಂಭ
    – ಪ್ರತಿ ಗ್ರಾ.ಪಂ. 1 ಲಕ್ಷ ರೂ ವೆಚ್ಚದಲ್ಲಿ ಕ್ರೀಡಾ ಸಾಮಾಗ್ರಿಗಳು, ಫಿಟ್‍ನೆಸ್ ಸಲಕರಣೆ ಒದಗಿಸುವುದು- 20 ಕೋಟಿ ಅನುದಾನ

    – 5 ಕೋಟಿ ಅನುದಾನದಲ್ಲಿ ಯೂತ್ ಕ್ಲಬ್‍ಗಳೀಗೆ ಆವರ್ಥ ನಿಧಿ
    – 1 ಕೋಟಿ ವೆಚ್ಚದಲ್ಲಿ ಕ್ರೀಡಾ ಐಟಿ ಕೋಶ ಸ್ಥಾಪನೆ
    – ರಾಜ್ಯ ರಾಷ್ಟ್ರೀಯ ಅಂತಾರಷ್ಟ್ರೀಯ ಮಾಜಿ ಕುಸ್ತಿ ಪೈಲ್ವಾನ್‍ಗಳಿಗೆ ಮಾಸಾಶನ ಹೆಚ್ಚಳ

  • ವಾಣಿಜ್ಯ ಮತ್ತು ಕೈಗಾರಿಕೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ವಾಣಿಜ್ಯ ಮತ್ತು ಕೈಗಾರಿಕೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಇಂದು ಸಿದ್ದರಾಮಯ್ಯ ಸಿಎಂ ಆಗಿ 5ನೇ ಬಜೆಟ್ ಹಾಗೂ ಹಣಕಾಸು ಸಚಿವರಾಗಿ ತಮ್ಮ 12ನೇ ಬಜೆಟ್ ಮಂಡನೆ ಮಾಡಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಲವು ಘೋಷಣೆಗಳನ್ನ ಮಾಡಿದ್ದು, ಅದರ ವಿವರ ಇಲ್ಲಿದೆ.

    ಒಟ್ಟು ಅನುದಾನ: 2,250 ಕೋಟಿ ರೂ.

    * ತುಮಕೂರು ಕೈಗಾರಿಕಾ ಘಟಕಕ್ಕಾಗಿ ಕೆಐಎಡಿಬಿಯಿಂದ ಭೂ ಸ್ವಾಧೀನಕ್ಕಾಗಿ 400 ಕೋಟಿ ರೂ.
    * ತುಮಕೂರು ಜಿಲ್ಲೆ ವಸಂತ ನರಸಾಪುರದಲ್ಲಿ 542 ಎಕರೆ ಜಮೀನಿನಲ್ಲಿ ಮೆಷಿಲ್ ಟೋಲ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿ.
    * ಕೇಂದ್ರ ತಯಾರಿಕಾ ತಂತ್ರಜ್ಞಾನ ಸಂಸ್ಥೆಯ ಆವರಣದಲ್ಲಿ ನಿಖರ ಮಾಪನ ಪ್ರಯೋಗಾಲಯ ಸ್ಥಾಪನೆ(ಶೇ.50ರಷ್ಟು ಕೇಂದ್ರ)
    * ಬೆಂಗಳೂರನ್ನ ದೇಶದ ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯನ್ನಾಗಿ ಮಾಡಲು ಕ್ರಮ.
    * ತೆಂಗು ನಾರು ಕುಶಲಕರ್ಮಿಗಳಿಗೆ ಅನುರೂಪ ವೇತನ ಪ್ರೋತ್ಸಾಹಕಗಳ ಸಂದಾಯ.

    * ಸಕ್ಕರೆ ಕಾರ್ಖಾನೆಗಳ ಸುತ್ತಮುತ್ತ ಇರುವ ರಸ್ತೆಗಳ ಅಭಿವೃದ್ಧಿಗೆ 25 ಕೋಟಿ ರೂ.
    * ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಉತ್ತೇಜನ ನೀಡಲು ಸಾರ್ವಜನಿಕ ಸೇವಾ ಕೇಂದ್ರ – 4 ಕೋಟಿ ರೂ.
    * ಕೇಂದ್ರದ ನೆರವಿನೊಂದಿಗೆ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ತಲಾ 10 ಕೋಟಿ ರೂ. ವೆಚ್ಚದಲ್ಲಿ ಖಾದಿ ಫ್ಲಾಜಾ ಸ್ಥಾಪನೆ.
    * ಎಸ್‍ಸಿ/ಎಸ್‍ಟಿ ಉದ್ಯಮಿಗಳು ಸ್ಥಾಪಿಸುವ ಸಣ್ಣ ಹಾಗೂ ಅತೀ ಸಣ್ಣ ಕೈಗಾರಿಕಾ ಘಟಕಗಳಿಗೆ ಮೊದಲು 5 ವರ್ಷ ಯೂನಿಟ್‍ಗೆ 2 ರೂ. ನಷ್ಟು ವಿದ್ಯುತ್ ಸಹಾಯ ಧನ.
    * ಮೊದಲ ಬಾರಿ ಸಣ್ಣ ಹಾಗೂ ಅತೀ ಸಣ್ಣ ಉದ್ಯಮಗಳನ್ನ ಸ್ಥಾಪಿಸುವ ಎಸ್‍ಸಿ/ಎಸ್‍ಟಿ ಉದ್ಯಮಿಗಳಿಗೆ ಸಾಲ ಪಡೆಯುವ ವೇಳೆ ವಿವಿಧ ಶುಲ್ಕವನ್ನ ಭರಿಸಲಿರುವ ಸರ್ಕಾರ.

    * 2010-11 ರಿಂದ 31-03-2017 ಎಸ್‍ಸಿ/ಎಸ್‍ಟಿ ಉದ್ಯಮಿಗಳು ಬೀಜ ಧನ ಬಂಡವಾಳ ಯೋಜನೆಯಲ್ಲಿ ಪಡೆದಿರುವ 46 ಕೋಟಿ ರೂ. ಸಾಲ ಮನ್ನಾ.
    * ದಾಬಸ್‍ಪೇಟೆಯಲ್ಲಿ ಸೆಂಟರ್ ಆಫ್ ಎಕ್ಸ್ ಲೆನ್ಸ್ ಸ್ಥಾಪಿಸಲು ಬೆಂಗಳೂರಿನ ಕಾಸಿಯಾ ಸಂಸ್ಥೆಗೆ 5 ಕೋಟಿ ರೂ. ವಿಶೇಷ ಅನುದಾನ.
    * ಕೆಐಎಡಿಬಿ, ಕೆಎಸ್‍ಎಸ್‍ಐಡಿಸಿ ಸಂಸ್ಥೆಗಳಿಂದ ಮಂಜೂರು ಆಗುವ ನಿವೇಶನಗಳಿಗೆ ಶೇ.25 ರಿಯಾಯಿತಿ
    * ಮಹಿಳಾ ಉದ್ಯಮಿಗಳನ್ನ ಉದ್ದೇಶಿಸಲು ಶೇ.4ರ ದರದಲ್ಲಿ ನೀಡುತ್ತಿರುವ ಸಾಲದ ಮಿತಿ 50 ಲಕ್ಷ ದಿಂದ 2 ಕೋಟಿ ರೂ.ಗೆ ಏರಿಕೆ.
    * ಮಹಿಳಾ ಉದ್ಯಮಿಗಳಿಗಾಗಿ ಬ್ಯುಸಿನೆಸ್ ಇನ್ಕ್ಯೂಬೇಟರ್ ಸ್ಥಾಪನೆ.

    * ಕೈ ಮಗ್ಗಗಳಿಗೆ ಎಲೆಕ್ಟ್ರಾನಿಕ್ ಜಕಾರ್ಡ್, ನ್ಯೂ ಮ್ಯಾಟಿಕ್ ಸೌಲಭ್ಯ.
    * ಲೋ ಟೆನ್ಷನ್ ವಿದ್ಯುತ್ ಪಡೆಯುತ್ತಿರುವ ರೇಪಿಯರ್ ಮಗ್ಗಗಳಿಗೆ ಶೇ.50ರಷ್ಟು ವಿದ್ಯುತ್ ಸಹಾಯ ಧನ.
    * ಕೇಂದ್ರದ ಸಹಾಯದೊಂದಿಗೆ ಮೈಸೂರಿನಲ್ಲಿ ಸಿಲ್ಕ್ ಮೆಘಾ ಕ್ಲಸ್ಟರ್ ಸ್ಥಾಪನೆ.
    * ಹಾವೇರಿ, ಹೊಸದುರ್ಗ, ಭನಹಟ್ಟಿ, ಗೌರಿಬಿದನೂರಿನಲ್ಲಿ ವಿದ್ಯುತ್ ಮಗ್ಗಗಳ ಸಂಕೀರ್ಣ ನಿರ್ಮಾಣ.
    * ಬೆಳಗಾವಿ ಜಿಲ್ಲೆಯ ಪಂತಬಾಳೇಕುಂದ್ರಿಯಲ್ಲಿ ಗೋದಾಮು ಮತ್ತು ನಾಗರೀಕ ಸೌಲಭ್ಯ ಕೇಂದ್ರ.
    * ಸಹಕಾರಿ ನೂಲಿನ ಗಿರಣಿಗಳಿಗೆ ಪ್ರತಿ ಯೂನಿಟ್‍ಗೆ 2 ರೂ.ನಂತೆ ಸಹಾಯಧನ.
    * ಮಧ್ಯಮ, ಸಣ್ಣ, ಅತೀಸಣ್ಣ ಉದ್ಯಮಿಗಳಿಗೆ ಹೊಸ ನಿರ್ದೇಶನಾಲಯ ಸ್ಥಾಪನೆ.

  • ಸರ್ಕಾರಕ್ಕೆ ಒಂದು ರೂಪಾಯಿ ಬಂದಿದ್ದು ಎಲ್ಲಿಂದ ಮತ್ತು 1 ರೂ. ಹೋಗಿದ್ದು ಎಲ್ಲಿಗೆ ಎನ್ನುವ ವಿವರ ಇಲ್ಲಿದೆ

    ಸರ್ಕಾರಕ್ಕೆ ಒಂದು ರೂಪಾಯಿ ಬಂದಿದ್ದು ಎಲ್ಲಿಂದ ಮತ್ತು 1 ರೂ. ಹೋಗಿದ್ದು ಎಲ್ಲಿಗೆ ಎನ್ನುವ ವಿವರ ಇಲ್ಲಿದೆ

    ಬೆಂಗಳೂರು: ಸರ್ಕಾರಕ್ಕೆ ಒಂದು ರೂಪಾಯಿ ಬಂದಿದ್ದು ಎಲ್ಲಿಂದ ಮತ್ತು 1 ರೂ. ಹೋಗಿದ್ದು ಎಲ್ಲಿಗೆ ಎನ್ನುವ ವಿವರ ಇಲ್ಲಿದೆ

    ರೂಪಾಯಿ ಬಂದಿದ್ದು ಎಲ್ಲಿಂದ..?

    (ಪೈಸೆಗಳಲ್ಲಿ)

    ರಾಜ್ಯ ತೆರಿಗೆ ಆದಾಯ – 48
    ಸಾಲ – 20
    ಕೇಂದ್ರದ ತೆರಿಗೆ ಪಾಲು – 17
    ಕೇಂದ್ರ ಸರ್ಕಾರದ ಅನುದಾನ – 9
    ರಾಜ್ಯ ತೆರಿಗೆಯೇತರ ರಾಜಸ್ವ – 4
    ಸಾರ್ವಜನಿಕ ಲೆಕ್ಕ – 2


    ರೂಪಾಯಿ ಹೋಗಿದ್ದು ಎಲ್ಲಿಗೆ..?
    (ಪೈಸೆಗಳಲ್ಲಿ)

    ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ – 19
    ನೀರು ಪೂರೈಕೆ, ನೈರ್ಮಲ್ಯ – 2
    ಆರೋಗ್ಯ – 4
    ಸಮಾಜ ಕಲ್ಯಾಣ – 10
    ಶಿಕ್ಷಣ – 11
    ಸಾಲ ತೀರಿಕೆ – 12
    ಇತರೆ ಸಾಮಾಜಿಕ ಸೇವೆ – 8
    ಇತರೆ ಆರ್ಥಿಕ ಸೇವೆ – 17
    ಇತರೆ ಸಾಮಾನ್ಯ ಸೇವೆ – 17

     

     

     

  • ಸಿದ್ದು ಬಜೆಟ್‍ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ?

    ಸಿದ್ದು ಬಜೆಟ್‍ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‍ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ಸಿಕ್ಕಿದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

    ಕೃಷಿ – 5,080 ಕೋಟಿ
    ತೋಟಗಾರಿಕೆ – 1091 ಕೋಟಿ
    ಪಶು ಸಂಗೋಪನೆ – 2245 ಕೋಟಿ
    ರೇಷ್ಮೆ – 429 ಕೋಟಿ
    ಮೀನುಗಾರಿಕೆ – 337 ಕೋಟಿ
    ಸಹಕಾರ – 1663 ಕೋಟಿ
    ಜಲಸಂಪನ್ಮೂಲ – 15929 ಕೋಟಿ

    ಸಣ್ಣ ನೀರಾವರಿ – 2099 ಕೋಟಿ
    ಅರಣ್ಯ, ಪರಿಸರ ಮತ್ತು ವನ್ಯಜೀವಿ – 1732 ಕೋಟಿ
    ಪ್ರಾಥಮಿಕ & ಪ್ರೌಢ ಶಿಕ್ಷಣ – 18,266 ಕೋಟಿ
    ಉನ್ನತ ಶಿಕ್ಷಣ – 4401 ಕೋಟಿ
    ಆರೋಗ್ಯ & ಕುಟುಂಬ ಕಲ್ಯಾಣ – 5118 ಕೋಟಿ

    ವೈದ್ಯಕೀಯ ಶಿಕ್ಷಣ – 2004 ಕೋಟಿ
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ – 4926 ಕೋಟಿ
    ಸಮಾಜ ಕಲ್ಯಾಣ – 6363 ಕೋಟಿ
    ಹಿಂದುಳಿದ ವರ್ಗಗಳ ಕಲ್ಯಾಣ – 3154 ಕೋಟಿ
    ಅಲ್ಪಸಂಖ್ಯಾತರ ಕಲ್ಯಾಣ & ಹಜ್ – 2750 ಕೋಟಿ
    ವಸತಿ – 4708 ಕೋಟಿ

    ಕಾರ್ಮಿಕ, ಉದ್ಯೋಗ ಮತ್ತು ತರಬೇತಿ – 469 ಕೋಟಿ
    ಕೌಶಲ್ಯ ಅಭಿವೃದ್ಧಿ – 1332 ಕೋಟಿ
    ಕನ್ನಡ ಮತ್ತು ಸಂಸ್ಕøತಿ – 424 ಕೋಟಿ
    ಕ್ರೀಡಾ ಮತ್ತು ಯುವಜನ ಸೇವೆ – 285 ಕೋಟಿ
    ಆಹಾರ ಮತ್ತು ನಾಗರಿಕ ಸರಬರಾಜು – 3636
    ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ – 14061 ಕೋಟಿ
    ಯೋಜನೆ ಮತ್ತು ಪ್ರದೇಶಾಭಿವೃದ್ಧಿ – 1828

    ನಗರಾಭಿವೃದ್ಧಿ – 18127 ಕೋಟಿ
    ಕಂದಾಯ – 5900 ಕೋಟಿ
    ಇಂಧನ – 14094 ಕೋಟಿ
    ಲೋಕೋಪಯೋಗಿ, ಬಂದರು & ಒಳನಾಡು ಜಲಸಾರಿಗೆ – 8559 ಕೋಟಿ
    ಮೂಲಸೌಲಭ್ಯ ಅಭಿವೃದ್ಧಿ – 790 ಕೋಟಿ
    ವಾಣಿಜ್ಯ & ಕೈಗಾರಿಕೆ – 2250 ಕೋಟಿ
    ಐಟಿ, ಬಿಟಿ, ವಿಜ್ಞಾನ & ತಂತ್ರಜ್ಞಾನ – 299 ಕೋಟಿ
    ಇ-ಆಡಳಿತ – 189 ಕೋಟಿ

    ಪ್ರವಾಸೋದ್ಯಮ – 572 ಕೋಟಿ
    ವಾರ್ತಾ, ಸಾರ್ವಜನಿಕ ಸಂಪರ್ಕ – 283 ಕೋಟಿ
    ಒಳಾಡಳಿತ – 4938 ಕೋಟಿ
    ಸಾರಿಗೆ – 2354 ಕೋಟಿ
    ಕಾನೂನು & ನ್ಯಾಯಾಲಯ – 731 ಕೋಟಿ
    ಸಂಸದೀಯ ವ್ಯವಹಾರ, ಶಾಸನ ರಚನೆ – 256 ಕೋಟಿ
    ಸಾರ್ವಜನಿಕ ಉದ್ದಿಮೆ – 250 ಕೋಟಿ

     

  • ಆರೋಗ್ಯ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಆರೋಗ್ಯ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾಸೌಧದಲ್ಲಿ 2017-18ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್‍ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿರುವ ಅನುದಾನದ ಮಾಹಿತಿ ಇಲ್ಲಿದೆ.

    ಒಟ್ಟು ಅನುದಾನ: 5118 ಕೋಟಿ ರೂ.

    • ಆಶಾ ಕಾರ್ಯಕರ್ತರು ಈಗಾಗಲೇ ಪಡೆಯುತ್ತಿರುವ ಪ್ರೋತ್ಸಾಹ ಧನದ ಜೊತೆ 1000 ರೂ ಗೌರವಧನ.
    • ತಲಾ 25 ಕೋಟಿ ವೆಚ್ಚದಲ್ಲಿ 5 ಸೂಪರ್ ಸ್ಪೆಷಾಲಿಸಿ ಆಸ್ಪತ್ರೆ – ದಾವಣಗೆರೆ, ರಾಮನಗರ, ತುಮಕೂರು, ವಿಜಯಪುರ ಮತ್ತು ಕೋಲಾರದಲ್ಲಿ ಸ್ಥಾಪನೆ.
    • ಮಂಗಳೂರು ವೆನ್ಲಾಕ್ ಆಸ್ಪತ್ರೆ 10 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವುದು.
    • 15 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದೂರು ಇರುವ ಗ್ರಾಮಗಳಲ್ಲಿ 150 ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಸ್ಥಾಪನೆ.
    • 10 ರಿಂದ 15 ಕಿ.ಮೀ ಸುತ್ತಳತೆಯಲ್ಲಿ 35 ಸಾವಿರ ಜನಸಂಖ್ಯೆಗೆ ಒಂದರಂತೆ ಆಂಬುಲೆನ್ಸ್ ಸೇವೆ.
    • 64 ಸಂಚಾರಿ ಆರೋಗ್ಯ ಘಟಕಗಳ ಆರಂಭ.
    • ಎಸ್‍ಇ/ಎಸ್‍ಟಿ ಜನಸಂಖ್ಯೆ ಹೊಂದಿರುವ ಗ್ರಾಮಗಳ ಜನರ ಆರೋಗ್ಯ ಸೇವೆಗೆ 25.34ಕೋಟಿ ಅನುದಾನ.
    • ಬೆಳಗಾವಿಯ ಲಸಿಕಾ ಸಂಸ್ಥೆಯ ಆವರಣದಲ್ಲಿ 5 ಕೋಟಿ ವೆಚ್ಚದಲ್ಲಿ ಆಯುಷ್ ಔಷಧ ತಯಾರಿಕಾ ಕೇಂದ್ರಗಳ ಸ್ಥಾಪನೆ.
    • 4.5 ಕೋಟಿ ವೆಚ್ಚದಲ್ಲಿ 150 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶವಾಗಾರ ನಿರ್ಮಾಣ.
    • ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗಳಲ್ಲಿ 50 ಹಾಸಿಗೆಗಳ ಸಂಯೋಜಿತ ಆಯುಷ್ ಆಸ್ಪತ್ರೆಗಳ ಸ್ಥಾಪನೆಗೆ 6 ಕೋಟಿ ರೂ.
    • ರಾಜ್ಯದಲ್ಲಿ ಜನೌಷಧ ಔಷಧ ಮಳಿಗೆಗಳು ಮತ್ತು 200 ಜನರಿಕ್ ಔಷಧಿ ಮಳಿಗೆಗಳ ಸ್ಥಾಪನೆ

    ವೈದ್ಯಕೀಯ ಶಿಕ್ಷಣ:

    • ಕಲಬುರಗಿ, ಮೈಸೂರು, ಬೆಳಗಾವಿಯಲ್ಲಿ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ 310 ಕೋಟಿ ರೂ.
    • ಇಂದಿರಾನಗರದಲ್ಲಿ 35 ಕೋಟಿ ವೆಚ್ಚದಲ್ಲಿ ಕರ್ನಾಟಕ ಇನ್ಸ್ ಸ್ಟಿಟ್ಯೂಟ್ ಆಫ್ ಎಂಡೋಕ್ರೈನಾಲಿಜಿಯ ಹೊಸ ಆಸ್ಪತ್ರೆ.
    • ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ 5 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ವಿಜ್ಞಾನಗಳ ಸಂಶೋದನ ಕೇಂದ್ರ ಘಟಕ.
    • ಮಿಂಟೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ.
    • ಬೆಂಗಳೂರಿನ ಕ್ಷಯ ರೋಗ ಆಸ್ಪತ್ರೆ ಆವರಣದಲ್ಲಿ 10 ಕೋಟಿ ವೆಚ್ಚದಲ್ಲಿ ಚರ್ಮರೋಗ ಸಂಸ್ಥೆ.
    • ಬಳ್ಳಾರಿ ವಿಮ್ಸ್ ಭೋದನಾ ಆಸ್ಪತ್ರೆ 25 ವೆಚ್ಚದಲ್ಲಿ ನವೀಕರಣ.

  • ಸಮಾಜ ಕಲ್ಯಾಣ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಸಮಾಜ ಕಲ್ಯಾಣ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಸರ್ಕಾರದ 5ನೇ ಬಜೆಟ್ ಮಂಡನೆಯಾಗಿದೆ. ಬಜೆಟ್‍ನಲ್ಲಿ ಸಿಎಂ ಸಿದ್ದರಾಮಯ್ಯ ಹಲವು ಘೋಷಣೆಗಳನ್ನ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕಕಿದ್ದೇನು ಎಂಬುದರ ವಿವರ ಇಲ್ಲಿದೆ.

    > ಪ್ರತಿ ಜಿಲ್ಲೆಗೆ ತಲಾ 1 ಕೋಟಿ ರೂ. ಅನುದಾನ ಘೋಷಣೆ.
    > 30 ಮೊರಾರ್ಜಿ ವಸತಿ ಶಾಲೆಗಳು ಮೇಲ್ದರ್ಜೆಗೆ.
    > ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ವಿದ್ಯಾರ್ಥಿಗಳ ಭೋಜನ ವೆಚ್ಚ 1400 ರೂ.ನಿಂದ 1500 ರೂ.ಗೆ ಹೆಚ್ಚಳ.
    > ಎಸ್‍ಸಿ, ಎಸ್‍ಟಿ ಹಾಸ್ಟೆಲ್‍ಗಳಲ್ಲಿ ಪುಸ್ತಕ ಬ್ಯಾಂಕ್‍ಗಳ ಸ್ಥಾಪನೆ.
    > ಎಸ್‍ಸಿ, ಎಸ್‍ಟಿ 1 ಲಕ್ಷ ನಿರುದ್ಯೋಗಿಗಳಿಗೆ ಕೌಶಲ ತರಬೇತಿ.
    > ಎಸ್‍ಸಿ, ಎಸ್‍ಟಿ ವಿದ್ಯಾರ್ಥಿ ಡೇ ಸ್ಕಾಲರ್‍ಶಿಪ್ ಹೆಚ್ಚಳ – ದಿನಕ್ಕೆ 250 ರೂ.
    > 5 ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡಗಳ ಕಚೇರಿ.

    > ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ವೆಚ್ಚ ಹೆಚ್ಚಳ – 2.50 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ ಏರಿಕೆ – ಸಬ್ಸಿಡಿ 2 ರಿಂದ 2.5 ಲಕ್ಷಕ್ಕೆ ಹೆಚ್ಚಳ.
    > ಎಸ್‍ಸಿ, ಎಸ್‍ಟಿ ಭೂ ರಹಿತ ಕಾರ್ಮಿಕರ ಜಮೀನು ಖರೀದಿಗೆ ವೆಚ್ಚ ಹೆಚ್ಚಳ.
    > 1400 ಪರಿಶಿಷ್ಟ ಜಾತಿ, 600 ಪರಿಶಿಷ್ಟ ಪಂಗಡ ನಿರುದ್ಯೋಗಿ ಯುವಕರಿಗೆ ತಲಾ 5 ಲಕ್ಷ ರೂ. – ಸಬ್ಸಿಡಿ 2.5 ಲಕ್ಷ ರೂ.
    > ಚಾಲನಾ ಪರವಾನಗಿ ಇರುವ ಎಸ್‍ಸಿ, ಎಸ್‍ಟಿ 5 ಸಾವಿರ ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ ಖರೀದಿಗೆ 3 ಲಕ್ಷ ರೂ. ಸಹಾಯಧನ.
    > ಚಾಮರಾಜನಗರ, ಹಾಸನ, ಕೊಪ್ಪಳ, ಯಾದಗಿರಿ, ಹಾವೇರಿಯಲ್ಲಿ 5 ಭಿಕ್ಷುಕ ಕೇಂದ್ರಗಳ ಸ್ಥಾಪನೆ.
    > ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ ಭಾಗ್ಯ.

    > ಕಾನೂನು ಪದವೀಧರರ ಮಾಸಿಕ ತರಬೇತಿ ಭತ್ಯೆ 2 ರಿಂದ 5 ಸಾವಿರ ರೂ.ಗೆ ಹೆಚ್ಚಳ
    > ಆದಿವಾಸಿ ಸಮುದಾಯ ಭವನ ನಿರ್ಮಾಣಕ್ಕೆ 15 ಕೋಟಿ ರೂ.
    > ದಾವಣಗೆರೆ ಸೇವಾ ಲಾಲ್ ಟ್ರಸ್ಟ್‍ಗೆ 5 ಕೋಟಿ ರೂ.
    > ಎಸ್‍ಸಿ, ಎಸ್‍ಟಿ ವಿಧವೆಯರ ಮರು ಕಲ್ಯಾಣಕ್ಕೆ 3 ಲಕ್ಷ ರೂ. ಪ್ರೋತ್ಸಾಹಧನ.
    > ಎಸ್‍ಸಿ, ಎಸ್‍ಟಿ ಯುವಕ, ಯುವತಿಯರು ಅಂತರ್ಜಾತಿ ವಿವಾಹವಾದರೆ 2 ಲಕ್ಷ ರೂ. ಪ್ರೋತ್ಸಾಹ ಧನ.
    > ಎಸ್‍ಸಿ, ಎಸ್‍ಟಿ ಉದ್ದಿಮೆದಾರರಿಗೆ ಸಾಲ- 100 ಕೋಟಿ ರೂ. ನಿಧಿ ಸ್ಥಾಪನೆ.

    > ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ.
    > ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಿಗೆ ಸರ್ಕಾರದಿಂದಲೇ ತರಬೇತಿ
    > ಆದಿವಾಸಿ ಸಮುದಾಯಕ್ಕೆ ಉದ್ಯೋಗ ಕಲ್ಪಿಸಲು 200 ಕೋಟಿ ರೂ. ಅನುದಾನ.
    > ಗಾರ್ಡ್, ವಾಚರ್‍ಗಳಿಗೆ ವಿಶೇಷ ನಿಯಮಾವಳಿ
    > ಎಸ್‍ಸಿ, ಎಸ್‍ಟಿ ಆರ್ಥಿಕ ಅಭಿವೃದ್ಧಿಗೆ 15 ಸಾವಿರ ರೂ. ನೇರ ಸಾಲ
    > ಎಸ್‍ಸಿ, ಎಸ್‍ಟಿ 2 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ – 100 ಕೋಟಿ ರೂ.

  • 49 ಹೊಸ ತಾಲೂಕು ರಚನೆ: ಪೂರ್ಣ ಪಟ್ಟಿ ಇಲ್ಲಿದೆ

    49 ಹೊಸ ತಾಲೂಕು ರಚನೆ: ಪೂರ್ಣ ಪಟ್ಟಿ ಇಲ್ಲಿದೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳನ್ನು ಪ್ರಕಟಿಸಿದ್ದಾರೆ. ಹೊಸ ತಾಲೂಕುಗಳ ವಿವರವನ್ನು ಇಲ್ಲಿ ನೀಡಲಾಗಿದೆ.

    ಬಾಗಲಕೋಟೆ – ಗುಳೇದ ಗುಡ್ಡ, ರಬಕವಿ, ಬನಹಟ್ಟಿ, ಇಳಕಲ್
    ಬೆಳಗಾವಿ – ನಿಪ್ಪಾಣಿ, ಮೂಡಲಗಿ, ಕಾಗವಾಡ
    ಚಾಮರಾಜನಗರ – ಹನೂರು
    ದಾವಣಗೆರೆ – ನ್ಯಾಮತಿ

    ಬೀದರ್ – ಚಿಟಗುಪ್ಪ, ಹುಲಸೂರು, ಕಮಲಾನಗರ
    ಬಳ್ಳಾರಿ – ಕುರುಗೋಡು, ಕೊಟ್ಟೂರು, ಕಂಪ್ಲಿ
    ಧಾರವಾಡ – ಅಣ್ಣಿಗೇರಿ, ಅಳ್ನಾವರ, ಹುಬ್ಬಳ್ಳಿ ನಗರ
    ಗದಗ – ಗಜೇಂದ್ರಗಡ, ಲಕ್ಷ್ಮೇಶ್ವರ

    ಕಲಬುರಗಿ – ಕಾಳಗಿ, ಕಮಲಾಪುರ, ಯಡ್ರಾವಿ, ಶಹಾಭಾಗ್
    ಯಾದಗಿರಿ – ಹುಣಸಗಿ, ವಡಗೆರ, ಗುರುಮಿಟ್ಕಲ್
    ಕೊಪ್ಪಳ – ಕುಕನೂರು, ಕನಕಗಿರಿ, ಕಾರಟಗಿ
    ರಾಯಚೂರು – ಮಸ್ಕಿ, ಸಿರಾವರ

    ಉಡುಪಿ – ಬ್ರಹ್ಮಾವರ, ಕಾಪು, ಬೈಂದೂರು
    ದಕ್ಷಿಣ ಕನ್ನಡ – ಮೂಡಬಿದರೆ, ಕಡಬ
    ಬೆಂಗಳೂರು ನಗರ – ಯಲಹಂಕ
    ವಿಜಯಪುರ – ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ, ಕೋಲ್ಹಾರ
    ಹಾವೇರಿ – ರಟ್ಟಿಹಳ್ಳಿ

    ಮೈಸೂರು – ಸರಗೂರು
    ಚಿಕ್ಕಮಗಳೂರು – ಅಜ್ಜಂಪುರ
    ಉತ್ತರ ಕನ್ನಡ – ದಾಂಡೇಲಿ
    ಕೋಲಾರ – ಕೆಜಿಎಫ್