Tag: ಸಿದ್ದರಾಮಯ್ಯ

  • ನಗರಾಭಿವೃದ್ಧಿ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ನಗರಾಭಿವೃದ್ಧಿ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಒಟ್ಟು ಅನುದಾನ – 18,127 ಕೋಟಿ ರೂ.

    ಬೆಂಗಳೂರು ಅಭಿವೃದ್ಧಿಗೆ

    > ಬೆಂಗಳೂರು ಮಹಾನಗರ ಪಾಲಿಕೆ 690 ಕೋಟಿ ವೆಚ್ಚದಲ್ಲಿ 80 ಕಿಲೋಮೀಟರ್ ಉದ್ದದ 43 ರಸ್ತೆಗಳನ್ನು ಶ್ರೇಷ್ಠ ದರ್ಜೆ ಮಟ್ಟದಲ್ಲಿ ಅಭಿವೃದ್ಧಿ ಹಾಗೂ ಪಾದಚಾರಿ ಸೌಲಭ್ಯ ಮೇಲ್ದರ್ಜೆಗೆ.
    > ಟೆಂಡರ್ ಶ್ಯೂರ್ ಮಾದರಿಯ 25 ಕಿಲೋಮೀಟರ್ ಉದ್ದದ್ದ 25 ಅಂತರ್ ಸಂಪರ್ಕ ರಸ್ತೆಗಳನ್ನು ಸಮಗ್ರವಾಗಿ ಮೇಲ್ದರ್ಜೆಗೇರಿಸುವುದು.
    > ಸಂಚಾರ ದಟ್ಟಣೆ ಇರುವ 12 ಕಾರಿಡಾರ್‍ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 150 ಕೋಟಿ ರೂ.
    > 200 ಕಿ.ಮೀ ಫುಟ್‍ಪಾತ್‍ಗಳ ಅಭಿವೃದ್ಧಿಗೆ 200 ಕೋಟಿ ರೂ.
    > ತಡೆರಹಿತ ವಾಹನ ಸಂಚಾರಕ್ಕೆ ಆಯ್ದ 9 ಜಂಕ್ಷನ್‍ಗಳಲ್ಲಿ ಗ್ರೇಡ್ ಸೆಪರೇಟರ್ ನಿರ್ಮಾಣ – 420 ಕೋಟಿ ರೂ. ಅನುದಾನ
    > ರೈಲ್ವೇ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣಕ್ಕೆ ಬಿಬಿಎಂಪಿಗೆ 150 ಕೋಟಿ ರೂ .
    > ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್ ನಿರ್ಮಾಣ – 80 ಕೋಟಿ ರೂ.
    > 1000 ಸಾರ್ವಜನಿಕ ಶೌಚಾಲಯಗಳ ನಿರ್ಮಾಣ – 50 ಕೋಟಿ ರೂ.
    > ಬೃಹತ್ ಮಳೆ ನೀರು ಚರಂಡಿ ಅಭಿವೃದ್ಧಿಗೆ – 300 ಕೋಟಿ ರೂ.
    > ರಸ್ತೆ ಉಬ್ಬು, ಲೇನ್ ಮಾರ್ಕಿಂಗ್, ಜಂಕ್ಷನ್ ಅಭಿವೃದ್ದಿ ಇತ್ಯಾದಿ ಸಂಚಾರಿ ಎಂಜಿನಿಯರಿಂಗ್ ಕಾಮಾಗಾರಿಗಳಿಗೆ -200 ಕೋಟಿ ರೂ.
    > ನಮ್ಮ ಕ್ಯಾಟಿಂನ್‍ಗೆ 100ಕೋಟಿ – ಬೆಂಗಳೂರಿನ 198 ವಾರ್ಡ್‍ಗಳಲ್ಲಿ ತಲಾ ಒಂದು ಕ್ಯಾಟಿಂನ್- 5 ರೂ. ಗೆ ತಿಂಡಿ, 10 ರೂ. ಗೆ ಮಧ್ಯಾಹ್ನ, ರಾತ್ರಿ ಊಟ

    ನಮ್ಮ ಮೆಟ್ರೋ

    > ಮೆಟ್ರೋ ಹಂತ 1ರ 42.3 ಕಿ.ಮೀ ಉದ್ದದ ಇಡೀ ಮಾರ್ಗ 2017ರ ಏಪ್ರಿಲ್‍ಗೆ ಪೂರ್ಣಗೊಳಿಸುವುದು.
    > ಮೆಟ್ರೋ ಹಂತ 2 – 72.095 ಕಿ.ಮೀ.ಗೆ ಅಂದಾಜು ವೆಚ್ಚ – 26,406 ಕೋಟಿ ರೂ.
    > ಮೆಟ್ರೋ ಹಂತ 2ಎ – ಸಿಲ್ಕ್ ಬೋರ್ಡ್‍ನಿಂದ ಕೆಆರ್ ಪುರಂ ಜಂಕ್ಷನ್ – 17 ಕಿಲೋಮೀಟರ್ – 4.200 ಕೋಟಿ ರೂ.
    > ಮೆಟ್ರೋ ಹಂತ 3 ಯೋಜನೆ ಅಧ್ಯಯನ ಪೂರ್ಣ – ಏರ್‍ಪೋರ್ಟ್‍ಗೆ ಸೂಕ್ತ ಮಾರ್ಗ ಕಲ್ಪಿಸುವ ಮಾರ್ಗ ಅಂತಿಮ ಹಂತದಲ್ಲಿ.

    ನಗರ ಭೂ ಸಾರಿಗೆ

    > ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆಗೆ ಉಪನಗರ ರೈಲ್ವೆ ಯೋಜನೆ ಆರಂಭ – 345 ಕೋಟಿ ರೂ.
    > ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ.
    > ಮೈಸೂರಿನ ಮಾದರಿಯಂತೆ ಬೆಂಗಳೂರಲ್ಲಿ ಕೆಲವೆಡೆ ಬಾಡಿಗೆ ಸೈಕಲ್ ಒದಗಿಸುವ ಯೋಜನೆ.

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

    – ಕೆಂಪೇಗೌಡ ಬಡವಾಣೆಯಲ್ಲಿ 5 ಸಾವಿರ ನಿವೇಶನ ಹಂಚಿಕೆ, 3 ಸಾವಿರ ಫ್ಲಾಟ್.
    – ಕೋನದಾಸಪುರ ಗ್ರಾಮದಲ್ಲಿ 166 ಎಕರೆ ಪ್ರದೇಶದಲ್ಲಿ ಬಿಡಿಎನಿಂದ ಟೌನ್‍ಶಿಪ್ ಅಭಿವೃದ್ಧಿ ಪಡಿಸಲು ಉದ್ದೇಶ.
    – ಕೆಂಪೇಗೌಡ ಬಡಾವಣೆಯಿಂದ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿ.ಮೀ ಅರ್ಟೀರಿಯಲ್ ರಸ್ತೆ ನಿರ್ಮಾಣ- 350 ಕೋಟಿ ರೂ. ಅನುದಾನ.
    – 42 ಕೋಟಿ ರೂ. ವೆಚ್ಚದಲ್ಲಿ 10 ಕೆರೆ ಸಮಗ್ರ ಅಭಿವೃದ್ಧಿ, ಬೆಳ್ಳಂದೂರು, ವರ್ತೂರು ಕೆರೆಗಳ ಸಮಗ್ರ ಅಭಿವೃದ್ಧಿ.
    – ಹೆಬ್ಬಾಳ ಜಂಕ್ಷನ್‍ನಲ್ಲಿ ಕೆಳಸೇತುವೆ ನಿರ್ಮಾಣ, ಮೇಲ್ಸೇತುವೆ ಅಗಲೀಕರಣ – 88 ಕೋಟಿ ರೂ. ವೆಚ್ಚ.
    – ಬೆಂಗಳೂರು ಸಂಚಾರ ಅನುಕೂಲಕ್ಕಾಗಿ ಸಿಲ್ಕ್ ಬೋಡ್ ಜಂಕ್ಷನ್ ಹಾಗೂ ಕೆಆರ್ ಪುರಂ ಜಂಕ್ಷನ್ ಬಿಎಂಆರ್‍ಸಿಎಲ್ ಸಹಯೋಗದೊಂದಿಗೆ ಅಭಿವೃದ್ಧಿ.

  • ಸಣ್ಣ ನೀರಾವರಿ, ಜಲಸಂಪನ್ಮೂಲ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಸಣ್ಣ ನೀರಾವರಿ, ಜಲಸಂಪನ್ಮೂಲ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ರಾಜ್ಯ ಬಾಜೆಟ್‍ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಹಾಗೂ ಸಣ್ಣ ನೀರಾವರಿಗೆ ಸಿಕ್ಕ ಸನುದಾನವೆಷ್ಟು, ಘೋಷಣೆಗಳೇನು ಎಂಬ ಮಾಹಿತಿ ಇಲ್ಲಿದೆ.

    ಸಣ್ಣ ನೀರಾವರಿ ಇಲಾಖೆಗೆ ಒಟ್ಟು ಅನುದಾನ – 2099 ಕೋಟಿ ರೂ.

    – ಕೆರೆಗಳ ಹೂಳೆತ್ತಲು ಕೆರೆ ಸಂಜೀವಿನಿ ಯೋಜನೆ – 100 ಕೋಟಿ ರೂ.
    – ಪಶ್ಚಿಮ ವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ- 100 ಕೋಟಿ ರೂ.
    – ಅಂತರ್ಜಲ ತೀವ್ರವಾಗಿ ಕುಸಿದಿರುವ ಬೀದರ್, ಚಾಮರಾಜನಗರ, ಹಾವೇರಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಚೆಕ್ ಡ್ಯಾಮ್ ನಿರ್ಮಾಣ- 50 ಕೋಟಿ ರೂ.ವೆಚ್ಚ
    – ಕಲಬುರಗಿಯ ಅಳಂದ ತಾಲೂಕಿನಲ್ಲಿ ಅಂತರ್ಜಲ ಅಭಿವೃದ್ಧಿಪಡಿಸುವ ವಿಶೇಷ ಯೋಜನೆ

    ಜಲಸಂಪನ್ಮೂಲ ಇಲಾಖೆಗೆ ಒಟ್ಟು ಅನುದಾನ – 15,929 ಕೋಟಿ ರೂ

    * 6 ಸಾವಿರ ಕೋಟಿ ರೂ. ಮೊತ್ತದಲ್ಲಿ ಕೆಳಕಂಡ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶ
    – ನಾರಾಯಣಪುರ ಎಡದಂಡೆ ಕಾಲುವೆ ಜಾಲದ ಆಧುನೀಕರಣ ಯೋಜನೆಯಡಿ ಎಸ್‍ಸಿಎಡಿಎ ಬೇಸ್ಡ್ ಆಟೋಮೇಷನ್ ಅನುಷ್ಠಾನ.
    – ಕೆಂಪೇವಾಡ ಏತ ನೀರಾವರಿ ಯೋಜನೆ.
    – ಹಗರಿಬೊಮ್ಮನಹಳ್ಳಿಯ ಚಿಲವಾರ ಬಂಡಿ ಏತ ನೀರಾವರಿ ಯೋಜನೆ.
    – ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ.
    – ಹನಗೋಡು ಸರಣಿ ನಾಲೆಗಳ ಆಧುನೀಕರಣ.
    – ಎತ್ತಿನಹೊಳೆ ಯೋಜನೆಯಡಿ, ಭೈರಗೊಂಡ್ಲು ಜಲಾಶಯ ನಿರ್ಮಾಣ, ಕಾಲುವೆ ಕಾಮಗಾರಿ ಆರಂಭ.
    – 68,264 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ.
    – 35 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆ ನಿರ್ಮಾಣ.
    – 12,500 ಹೆಕ್ಟೇರ್ ಪ್ರದೇಶದ ಸವಳು- ಜವಳು ಭೂಮಿ ಅಭಿವೃದ್ಧಿ
    – 28 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬಸಿಗಾಲುವೆ ನಿರ್ಮಾಣ.

    * ಕಾವೇರಿ ಕೊಳ್ಳದಲ್ಲಿ 374 ಕಿಮೀ ನಾಲೆ ಅಭಿವೃದ್ಧಿ – 509 ಕೋಟಿ ರೂ.
    * ಹಾರಂಗಿ ಎಡದಂಡೆ ನಾಲೆಯ ಸರಪಳಿ 27.083 ಕಿ.ಮೀ ನಿಂದ 149.38 ಕಿ.ಮೀ ವರೆಗಿನ ಆಧುನೀಕರಣ.
    * ಕಣ್ವ ನಾಲೆಗಳ ಆಧುನೀಕರಣ.
    * ಕೆಆರ್‍ಎಸ್ ಯೋಜನೆಯ ಆರ್‍ಬಿಎಲ್‍ಎಲ್ ಆಧುನೀಕರಣ.
    * ಮಾರ್ಕೋನಹಳ್ಳಿ ಎಡ, ಬಲದಂಡೆ ನಾಲೆ ಆಧುನೀಕರಣ.
    * ಹಾರೋಹಳ್ಳಿ ಮೇಲ್ಮಟ್ಟದ ನಾಲೆ ಆಧುನೀಕರಣ.
    * ತೀವ್ರ ಬರಗಾಲ ಎದುರಿಸುತ್ತಿರುವ ಪ್ರದೇಶಗಳಲ್ಲಿ ಮೋಡಬಿತ್ತನೆ- 30 ಕೋಟಿ ರೂ.

     

  • ಕೌಶಲ್ಯ ಅಭಿವೃದ್ಧಿ ಇಲಾಖೆಗೆ ಸಿದ್ದು ಬಜೆಟ್‍ನಿಂದ ಸಿಕ್ಕಿದ್ದೇನು?

    ಕೌಶಲ್ಯ ಅಭಿವೃದ್ಧಿ ಇಲಾಖೆಗೆ ಸಿದ್ದು ಬಜೆಟ್‍ನಿಂದ ಸಿಕ್ಕಿದ್ದೇನು?

    ಕೌಶಲ್ಯ ಅಭಿವೃದ್ಧಿ

    ಒಟ್ಟು ಅನುದಾನ- 1,332 ಕೋಟಿ ರೂ.

    * ಕೌಶಲ್ಯಾಭಿವೃದ್ಧಿ ಮಿಷನ್ ಪ್ರಾರಂಭ – 200 ಕೋಟಿ ರೂ. ಅನುದಾನ
    * ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಯೋಜನೆಯಡಿ 5 ಲಕ್ಷ ಯುವಜನತೆಗೆ ತರಬೇತಿ.
    * ಮುಖ್ಯಮಂತ್ರಿಗಳ ಕರ್ನಾಟಕ ಜೀವನೋಪಾಯ ಯೋಜನೆಯಡಿ 50 ಸಾವಿರ ಸ್ಥಳೀಯ ಕುಶಲಕರ್ಮಿಗಳಿಗೆ ತರಬೇತಿ, ವಿನ್ಯಾಸ ನಿರ್ಮಾಣಕ್ಕೆ ನೆರವು, ಮಾರುಕಟ್ಟೆ ಸೌಲಭ್ಯ.
    * 50 ಸಾವಿರ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್‍ಷಿಪ್ ತರಬೇತಿ ನೀಡಲು ಪ್ರತಿ ಅಪ್ರೆಂಟಿಸ್‍ಗೆ ತಿಂಗಳಿಗೆ ತಲಾ 1 ಸಾವಿರ ರೂ. ಸ್ಟೈಫಂಡ್ ಮರುಪಾವತಿ.
    * ಪ್ರವೀಣ್ಯತಾ ಕೇಂದ್ರಗಳ ಸ್ಥಾಪನೆ.
    * 34 ಉದ್ಯೋಗ ವಿನಿಮಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶ.
    * ಖಾಸಗಿ ಸಹಭಾಗಿತ್ವ ಯೋಜನೆಯಡಿ ಕೌಶಲ್ಯ ವಿವಿ ಸ್ಥಾಪನೆ.
    * ಎಸ್‍ಸಿ, ಎಸ್‍ಟಿ ಉದ್ದಿಮೆದಾರರ ಸಂಘದ ವತಿಯಿಂದ ಸ್ಥಾಪಿಸುವ ಕೌಶಲ್ಯಾಭಿವೃದ್ಧಿ ಕೇಂದ್ರಗಳ ವಿಸ್ತರಣೆಗೆ 5 ಕೋಟಿ ರೂ. ಅನುದಾನ.
    * ಚಿಂತಾಮಣಿ, ಗುಬ್ಬಿ, ಕಾರ್ಕಳ, ಮೂಡಿಗೆರೆ, ನರಸಿಂಹರಾಜಪುರ, ರಾಯಬಾಗ, ಯಲ್ಲಾಪುರ, ಮುಧೋಳ, ಶಹಪುರ, ಸುರಪುರ, ಮಾನ್ವಿಯಲ್ಲಿ ಸರ್ಕಾರಿ ಐಟಿಐ ಸ್ಥಾಪನೆ
    * ಐಟಿಐಯಲ್ಲಿರುವ ಸಲಕರಣೆ ಮೇಲ್ದರ್ಜೆಗೆ- 228 ಕೋಟಿ ರೂ.

     

  • ಸಿದ್ದರಾಮಯ್ಯ `ರಾಮರಾಜ್ಯ ನಿರ್ಮಾಣ’ ಅಸಾಧ್ಯ ಎಂದಿದ್ದು ಯಾರಿಗೆ?

    ಸಿದ್ದರಾಮಯ್ಯ `ರಾಮರಾಜ್ಯ ನಿರ್ಮಾಣ’ ಅಸಾಧ್ಯ ಎಂದಿದ್ದು ಯಾರಿಗೆ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 12 ನೇ ಬಜೆಟ್‍ನಲ್ಲಿ ಇಂದು ರಾಮರಾಜ್ಯದ ಪ್ರಸ್ತಾಪವೂ ಆಯಿತು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿರೋಧಿಸುವವರು ರಾಮರಾಜ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ ಅಂತಾ ರಾಮಮಂದಿರ ಜಪ ಮಾಡುತ್ತಿರುವ ಬಿಜೆಪಿಗೆ ಸಿಎಂ ಸಿದ್ದು ಪರೋಕ್ಷ ಟಾಂಗ್ ನೀಡಿದ್ರು.

    ಬಜೆಟ್‍ನಲ್ಲಿ ‘ರಾಮ ರಾಜ್ಯ’ದ ಬಗ್ಗೆ ಏನಿದೆ?: ‘ರಾಮರಾಜ್ಯವೆನ್ನುವುದು ಹಸಿವು ಮುಕ್ತ, ಶೋಷಣೆ ಮುಕ್ತ, ಗಾಢ ಸಾಮರಸ್ಯದ, ಸರ್ವಾಂಗೀಣ ಪ್ರಗತಿಯನ್ನು ಪ್ರತಿನಿಧಿಸುವ ಒಂದು ಪರಿಕಲ್ಪನೆ.

    ಅಂಬೇಡ್ಕರ್ ರಚಿಸಿದ ಸಂವಿಧಾನದ ಹಿಂದಿನ ಪ್ರೇರಣೆಯಾಗಲಿ, ನನ್ನ ಬದುಕೇ ನನ್ನ ಸಂದೇಶವೆಂದ ಗಾಂಧೀಜಿಯ ಜೀವನವಾಗಲಿ, ಅಣ್ಣ ಬಸವಣ್ಣನ ಆದರ್ಶವಾಗಲಿ ಇವೆಲ್ಲವೂ ಧ್ವನಿಸುವುದು ಇದನ್ನೇ. ಹಾಗಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿರೋಧಿಸುವವರು ರಾಮರಾಜ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ’ ಎಂದು ಸಿಎಂ ಸಿದ್ದರಾಮಯ್ಯ ರಾಮಜಪ ಮಾಡುತ್ತಿರುವ ಕೇಸರಿ ಪಡೆಗೆ ಟಾಂಗ್ ನೀಡಿದ್ದಾರೆ.

  • ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ 5ನೇ ಬಜೆಟ್ ಇಂದು ಮಂಡನೆಯಾಗಿದೆ. ಬಜೆಟ್‍ನಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ

    ಒಟ್ಟು ಅನುದಾನ- 8559 ಕೋಟಿ

    – ಬೆಂಗಳೂರಿನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಸುತ್ತಮುತ್ತಲಿನ ಕೆಳಕಂಡ 150 ಕಿ.ಮೀ ರಸ್ತೆಗಳ ಅಭಿವೃದ್ಧಿ – 1455 ಕೋಟಿ ರೂ. ವೆಚ್ಚ.
    * ಹೊಸಕೋಟೆ – ಬೂದಿಗೆರೆ – ಮೈಲೇನಹಳ್ಳಿ – ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ.
    * ನೆಲಮಂಗಲ – ಮಧುರೆ – ಬ್ಯಾತ ರಸ್ತೆ.
    * ಆನೇಕಲ್ – ಅತ್ತಿಬೆಲೆ – ಸರ್ಜಾಪುರ – ವರ್ತೂರ್ – ವೈಟ್‍ಫೀಲ್ಡ್ – ಹೊಸಕೋಟೆ ರಸ್ತೆ.
    * ಹಾರೋಹಳ್ಳಿ – ಉರುಗನದೊಡ್ಡಿ – ಕೆಐಎಡಿಬಿ ಕೈಗಾರಿಕಾ ಪ್ರದೇಶ – ಜಿಗಣಿ – ಆನೇಕಲ್ ರಸ್ತೆ

    – ಕೊಡಗು ಜಿಲ್ಲೆಗೆ 50 ಕೋಟಿ ರೂ. ವಿಶೇಷ ರಸ್ತೆ ಪ್ಯಾಕೇಜ್
    – ಮೈಸೂರು ನಗರದ ಸುತ್ತಲಿನ 22 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿ – 117 ಕೋಟಿ ರೂ. ವೆಚ್ಚ.
    – ಮಂಗಳೂರು – ಅತ್ರಾಡಿ ರಾಜ್ಯ ಹೆದ್ದಾರಿ 67ರ 2.50 ಕಿಮೀ ಉದ್ದದ ರಸ್ತೆ ಅಭಿವೃದ್ಧಿ – 50 ಕೋಟಿ ರೂ. ವೆಚ್ಚ.

     

  • ವಿದ್ಯಾರ್ಥಿನಿಯರಿಗೆ ಚೂಡಿದಾರ್ ಭಾಗ್ಯ!

    ವಿದ್ಯಾರ್ಥಿನಿಯರಿಗೆ ಚೂಡಿದಾರ್ ಭಾಗ್ಯ!

    ಬೆಂಗಳೂರು: ಶಾಲಾ ವಿದ್ಯಾರ್ಥಿನಿಯರಿಗೆ ಇನ್ಮುಂದೆ ಚೂಡಿದಾರ್ ಭಾಗ್ಯ ಸಿಗಲಿದೆ. ಈಗಾಗಲೇ ಹಲವು ಭಾಗ್ಯಗಳ ಸರದಾರರಾಗಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2017-18ನೇ ಸಾಲಿನ ಬಜೆಟ್‍ನಲ್ಲಿ, 8 ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಸಮವಸ್ತ್ರವನ್ನಾಗಿ ಚೂಡಿದಾರ್ ನೀಡುವುದಾಗಿ ಪ್ರಕಟಿಸಿದ್ದಾರೆ.

    ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರೇರಣೆಗಾಗಿ ಹಲವು ಹೊಸ ಘೋಷಣೆಗಳನ್ನೂ ಸಿಎಂ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಣೆ ಮಾಡುವುದಾಗಿಯೂ ಘೋಷಿಸಿದ್ದಾರೆ. ವಾರದಲ್ಲಿ 5 ದಿನ ಹಾಲು ವಿತರಣೆ ಯೋಜನೆ ಕೂಡ ಇದ್ದು, ಇದನ್ನು ಜುಲೈ ತಿಂಗಳಿನಿಂದ ಜಾರಿಗೆ ತರುವುದಾಗಿ ಹೇಳಿದ್ದಾರೆ.

    ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮದ ಅಡಿ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ 4 ಲಕ್ಷ ಮಕ್ಕಳಿಗೆ ಸಾರವರ್ಧಕ ಅಕಿಯನ್ನು 4 ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುವುದು. ಶಾಲಾ ಗ್ರಂಥಾಲಯಗಳಿಗೆ ಸಾಮಾಜಿಕ ಸಂದೇಶವುಳ್ಳ ಕಥಾ ಪುಸ್ತಕಗಳು, ದೃಷ್ಟಿ ಪರೀಕ್ಷೆ ಮತ್ತು ಕನ್ನಡಕಗಳ ವಿತರಣೆ, 50 ಸಾವಿರ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಪ್ರಮುಖ ವಿಷಯಗಳಲ್ಲಿ ಮಧ್ಯಮ ಮತ್ತು ದೀರ್ಘ ಅವಧಿಯ ಅವಶ್ಯಾಧಾರಿತ ಪುನರ್ ರಚನಾ ತರಬೇತಿ ನೀಡುವ ಯೋಜನೆಯನ್ನು ಸಿಎಂ ಪ್ರಕಟಿಸಿದ್ದಾರೆ.

  • ಕಾರ್ಮಿಕ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಕಾರ್ಮಿಕ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‍ನಲ್ಲಿ ಕಾರ್ಮಿಕ ಇಲಾಖೆಗೆ ಸಿಕ್ಕಿದ್ದೇನು? ಇಲ್ಲಿದೆ ಅದರ ವಿವರ

    ಒಟ್ಟು ಅನುದಾನ – 469 ಕೋಟಿ

    > ಖಾಸಗಿ ಉದ್ಯೋಗಿಗಳ ನಿವೃತ್ತಿ ವಯಸ್ಸು 58 ರಿಂದ 60ಕ್ಕೆ ಏರಿಕೆ.
    > ಖಾಸಗಿ ವಲಯದ ಉದ್ದಿಮೆಗಳಲ್ಲಿ ಸಿ, ಡಿ ದರ್ಜೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಶೇಕಡ 100ರಷ್ಟು ಮತ್ತು ವಿಕಲಚೇತನರಿಗೆ ಶೇಕಡ 5 ರಷ್ಟು ಆದ್ಯತೆ.
    > ಖಾಸಗಿ ವಲಯದ ಸಂಸ್ಥೆಗಳಲ್ಲಿ ಎಸ್‍ಸಿ, ಎಸ್‍ಟಿ ಕಾರ್ಮಿಕರಿಗೆ ಉದ್ಯೋಗ ದೊರಕಿಸಲು ಆಶಾದೀಪ ಯೋಜನೆ.
    > ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ – 33 ಕೋಟಿ ರೂ.
    > 61 ಹೊಸ ಇಎಸ್‍ಐ ಚಿಕಿತ್ಸಾಲಯ
    > ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಇಎಸ್‍ಐ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ 100ಕ್ಕೆ ಏರಿಕೆ.
    > ಇಂದಿರಾನಗರದ ಇಎಸ್‍ಐ ಆಸ್ಪತ್ರೆ ಉನ್ನತೀಕರಣ, ಸೂಪರ್ ಸ್ಪೆಷಾಲಿಟಿ ವಿಭಾಗಗಳ ಆರಂಭ.
    > ಎಲ್ಲಾ ಇಎಸ್‍ಐ ಆಸ್ಪತ್ರೆಗಳಲ್ಲಿ ಆಯುಷ್ ವಿಭಾಗ ಆರಂಭ.
    > ಎಲ್ಲಾ ಇಎಸ್‍ಐ ಆಸ್ಪತ್ರೆಗಳಲ್ಲಿ ಡಯಾಲಿಸಿಸ್, ಐಸಿಯು, ಎಂಐಸಿಯು, ಪಿಐಸಿಯು ವಿಭಾಗಳನ್ನ ಹೊರಗುತ್ತಿಗೆ ಮುಖಾಂತರ ನಿರ್ವಹಣೆ
    > ಹಮಾಲರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸದವರು, ಚಿಂದಿ ಆಯುವವರಿಗೆ 10 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‍ಕಾರ್ಡ್ ಒದಗಿಸುವ ಮೂಲಕ ಅಪಘಾತ ಪರಿಹಾರ, ಭವಿಷ್ಯ ನಿಧಿ ಪಿಂಚಣಿ.
    > ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆ ಸಮಗ್ರ, ಭವಿಷ್ಯ ನಿಧಿ ಪಿಂಚಣಿ ಯೋಜನೆ.
    > ಅಪಾಯಕಾರಿ ಕೈಗಾರಿಕೆಗಳ ಉಸ್ತುವಾರಿ ಕೋಶ ಸ್ಥಾಪನೆ.

     

  • ಮೋದಿ ‘ನೋಟ್ ಬ್ಯಾನ್’ಗೆ ಬಜೆಟ್‍ನಲ್ಲಿ ಟಾಂಗ್ ನೀಡಿದ ಸಿದ್ದರಾಮಯ್ಯ!

    ಮೋದಿ ‘ನೋಟ್ ಬ್ಯಾನ್’ಗೆ ಬಜೆಟ್‍ನಲ್ಲಿ ಟಾಂಗ್ ನೀಡಿದ ಸಿದ್ದರಾಮಯ್ಯ!

    ಬೆಂಗಳೂರು: ಕೇಂದ್ರ ಸರ್ಕಾರದ 500 ಹಾಗೂ 1000 ರೂ.ಗಳ ನೋಟ್ ಬ್ಯಾನ್ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಇಂದು ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದರು.

    ನೋಟ್ ಬ್ಯಾನ್‍ನಿಂದಾಗಿ ಜನರು ಸಂಕಷ್ಟ ಎದುರಿಸಿದರು. ಒಟ್ಟಾರೆ ನೋಟ್ ಬ್ಯಾನ್‍ನಿಂದ ಆಗಿರುವ ಫಲಶೃತಿಯೇನು ಎನ್ನುವುದನ್ನು ಕೇಂದ್ರ ಸರ್ಕಾರ ತಿಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ಪದೇ ಪದೇ ನಿಯಮಗಳನ್ನು ಬದಲಾಯಿಸಿದ ಆರ್‍ಬಿಐ ಕ್ರಮ, ಇದರಿಂದ ಜನರು ಎದುರಿಸಿದ ಸಂಕಷ್ಟದ ಬಗ್ಗೆಯೂ ಬಜೆಟ್ ಭಾಷಣದಲ್ಲಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

    ಸಿಎಂ ಬಜೆಟ್ ಭಾಷಣದಲ್ಲಿ ಹೇಳಿದ್ದೇನು?: ‘ಯಾವುದೇ ಸಾರ್ವಜನಿಕ ನೀತಿಯು ನಿಗದಿತ ಗುರಿಯನ್ನು ಸಾಧಿಸುವ ಉದ್ದೇಶದ ಜೊತೆಗೆ ಅದನ್ನು ಕಾರ್ಯಗತಗೊಳಿಸುವುದರಲ್ಲಿಯೂ ಹೆಚ್ಚು ಸಮರ್ಥವಾಗಿರಬೇಕು. ಅಪಮೌಲ್ಯೀಕರಣವು ಜನಸಾಮಾನ್ಯರಿಗೆ ಅಪಾರ ಸಂಕಷ್ಟ ಉಂಟು ಮಾಡಿತು. ಆದರೆ, ಅದರಿಂದ ಸಾಧಿಸಿದ ಫಲಶೃತಿಯೇನು ಎಂಬುದನ್ನು ಕೇಂದ್ರ ಸರ್ಕಾರವು ಇನ್ನೂ ತಿಳಿಸಬೇಕಾಗಿದೆ. ರೈತರು ಹಾಗೂ ಗ್ರಾಮೀಣ ಜನತೆಗೆ ಸೇವೆ ನೀಡುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸುವ ಇಡೀ ಸಹಕಾರ ವಲಯವು ಅಕ್ಷರಶಃ ಸ್ತಬ್ಧ ಗೊಂಡಿತು.

    ತಮಗೆ ವಹಿಸಿದ್ದ ಜವಾಬ್ದಾರಿಯನ್ನು ನಿರ್ವಹಿಸಲು ಬ್ಯಾಂಕಿಂಗ್ ವ್ಯವಸ್ಥೆಯು ಸನ್ನದ್ಧರಾಗಿಲ್ಲದೇ ಇದ್ದದ್ದು ಅದರ ಅನುಷ್ಠಾನದ ರೀತಿಯಲ್ಲಿನ ಸಿದ್ಧತೆಯ ಕೊರತೆಯನ್ನು ಜಾಹೀರುಪಡಿಸಿತು. ಅನುಷ್ಠಾನದ ನಡುವೆಯೇ ಗುರಿಯ ದಿಕ್ಕನ್ನು ಬದಲಿಸಲಾಯಿತು ಹಾಗೂ ನಿಯಮಗಳನ್ನು ಪದೇ ಪದೇ ಪರಿಷ್ಕರಿಸಲಾಯಿತು.

    ಅಪಮೌಲ್ಯೀಕರಣದ ಅಗತ್ಯತೆಯೇ ಚರ್ಚಾಸ್ಪದವಾಗಿದ್ದು, ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‍ಗಳು ಕನಿಷ್ಠ ಪಕ್ಷ ಮುಂದೆ ಒದಗಬಹುದಾದ ತೊಂದರೆಗಳನ್ನು ಮುಂದಾಲೋಚಿಸಿ, ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯಸಾಧ್ಯ ಹಾಗೂ ಸಶಕ್ತವಾದ ವ್ಯವಸ್ಥೆಯನ್ನು ಆಚರಣೆಗೆ ತರಬೇಕಿತ್ತು ಎಂಬುದು ನನ್ನ ಅನಿಸಿಕೆ.

    ಕಳೆದ ನಾಲ್ಕು ವರ್ಷಗಳ ನಮ್ಮ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಕಳೆದೆರಡು ವರ್ಷಗಳ ನಿರಂತರ ಬರಗಾಲ, ಇತ್ತೀಚಿನ ನೋಟು ಅಮಾನ್ಯೀಕರಣದಿಂದಾಗಿ ಕುಂಠಿತಗೊಂಡ ಆರ್ಥಿಕ ಚಟುವಟಿಕೆಯಿಂದಾದ ನಷ್ಟವೂ ಸೇರಿದಂತೆ ಎದುರಾದ ಪ್ರತಿಕೂಲಗಳನ್ನು ಆರ್ಥಿಕ ಶಿಸ್ತು, ಸಂಪನ್ಮೂಲ ಸಂಗ್ರಹಣೆಯ ಬದ್ಧತೆ ಮತ್ತು ದಕ್ಷ ಆಡಳಿತ ಮೂಲಕ ಎದುರಿಸುತ್ತಾ ಬಂದಿದ್ದೇವೆ’ ಎಂದು ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿದರು.

  • ಶ್ರವಣಬೆಳಗೋಳದ ಮಹಾಮಸ್ತಾಕಾಭೀಷೆಕ ಉತ್ಸವಕ್ಕೆ 175 ಕೋಟಿ ರೂ.: ಕಂದಾಯ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಶ್ರವಣಬೆಳಗೋಳದ ಮಹಾಮಸ್ತಾಕಾಭೀಷೆಕ ಉತ್ಸವಕ್ಕೆ 175 ಕೋಟಿ ರೂ.: ಕಂದಾಯ ಇಲಾಖೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ 5ನೇ ಬಜೆಟ್ ಇಂದು ಮಂಡನೆಯಾಗಿದೆ. ಬಜೆಟ್‍ನಲ್ಲಿ ಕಂದಾಯ ಇಲಾಖೆಗೆ ಸಿಕ್ಕಿದ್ದೇನು? ಇಲ್ಲಿದೆ ವಿವರ

    ಒಟ್ಟು ಅನುದಾನ- 5900 ಕೋಟಿ ರೂ.

    – ಬನವಾಸಿ ಅಭಿವೃದ್ಧಿ ಪ್ರಾಧಿಕಾರ, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಗಳಿಗೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನ ಕೈಗೊಳ್ಳಲು- 5 ಕೋಟಿ
    – ಶಬರಿಮಲೆಗೆ ಭೇಟಿ ಕೊಡುವ ಕರ್ನಾಟಕದ 50 ಲಕ್ಷಕ್ಕೂ ಹೆಚ್ಚು ಭಕ್ತರ ಅನುಕೂಲಕ್ಕಾಗಿ ವೈದ್ಯಕೀಯ ಸೌಲಭ್ಯ, ಸಹಾಯವಾಣಿ, ರಕ್ಷಣೆಗಾಗಿ ಉಪಕಚೇರಿ ಸ್ಥಾಪನೆ
    – ಶ್ರವಣಬೆಳಗೋಳದಲ್ಲಿ 12 ವರ್ಷಕ್ಕೆ ನಡೆಯುವ ಮಹಾಮಸ್ತಾಕಾಭೀಷೆಕ ಉತ್ಸವಕ್ಕೆ 175 ಕೋಟಿ ರೂ. ಅನುದಾನ.
    – ಮೈಲಾರಲಿಂಗೇಶ್ವರ, ದೇವರಗುಡ್ಡದ ಅಭಿವೃದ್ಧಿ ಪ್ರಾಧಿಕಾರ ರಚನೆ- 5 ಕೋಟಿ ರೂ. ವೆಚ್ಚ.
    – 10 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾವಾರು ಕಾರ್ಯಪಡೆಗಳನ್ನು ರಚಿಸಿ ರಾಜ್ಯದ ಎಲ್ಲಾ ಕೆರೆಗಳನ್ನು ಅಳತೆ ಮಾಡಲು ಕ್ರಮ.
    – 2018 ಮಾರ್ಚ್ ಅಂತ್ಯಕ್ಕೆ ಸುಮಾರು 1100 ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ.
    – 60 ರಿಂದ 64ರ ವಯೋಮಾನದವರಿಗೆ ನೀಡಲಾಗುತ್ತಿರುವ ವೃದ್ಧಾಪ್ಯ ವೇತನ 200 ರೂ. ನಿಂದ 500 ರೂ.ಗೆ ಹೆಚ್ಚಳ.
    – ಡಿಜಿಟಲ್ ಭೂ ದಾಖಲೆಗಳ ನಿರ್ವಹಣಾ ಯೋಜನೆಯಡಿ ಎಲ್ಲಾ ತಾಲೂಕುಗಳ ಹಳೆ ಕಂದಾಯ ದಾಖಲೆಗಳ ಕೊಠಡಿಯ ಆಧುನೀಕರಣ.
    – ರಾಜ್ಯದ ಎಲ್ಲಾ ತಾಲೂಕುಗಳ ಟಿಪ್ಪಣಿ(ಪಾರ್ಸೆಲ್ ಮ್ಯಾಪ್ಸ್)ಗಳನ್ನ ಭೂನಕ್ಷೆ ಅಥವಾ ಕೊಲ್ಯಾಬ್ ಲ್ಯಂಡ್ ಸಾಫ್ಟ್‍ವೇರ್ ಬಳಸಿ ಡಿಜಿಟಲೀಕರಣ ಮಾಡುವುದು.
    – ಪ್ರಮುಖ ದಖಲೆಯಾದ ಆಕಾರ್ ಬಂದ್ ಡಿಜಿಟಲೀಕರಣ ಮಾಡುವುದು.

     

  • ಇಂಧನ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಇಂಧನ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ 5ನೆ ಬಜೆಟ್ ಮಂಡನೆಯಾಗಿದ್ದು, ಇಂಧನ ಇಲಾಖೆಗೆ ಸಿಕ್ಕ ಅನುದಾನ ಮತ್ತು ಘೋಷಣೆಗಳ ಮಾಹಿತಿ ಇಲ್ಲಿದೆ.

    ಒಟ್ಟು ಅನುದಾನ – 14,094 ಕೋಟಿ 

    – ಭಾಗ್ಯಜ್ಯೋತಿ ಯೋಜನೆಯಡಿ ಉಚಿತವಾಗಿ ನೀಡುತ್ತಿರುವ ವಿದ್ಯುತ್ ಮಿತಿಯನ್ನ 18 ಯುನಿಟ್‍ನಿಂದ 40 ಯುನಿಟ್‍ಗಳಿಗೆ ಹೆಚ್ಚಳ.
    – ವಿಧಾನಸಭಾ ಸದಸ್ಯರ ಮತಕ್ಷೇತ್ರ ವ್ಯಾಪ್ತಿಯ 5 ಗ್ರಾಮಗಳನ್ನ ಮಾದರಿ ವಿದ್ಯುತ್ ಗ್ರಾಮಗಳಾಗಿ ಪರಿವರ್ತಿಸಲು ಉದ್ದೇಶ.
    – ಪ್ರಸರಣ ಜಾಲವನ್ನ ಬಲಪಡಿಸುವ ನಿಟ್ಟಿನಲ್ಲಿ 40 ಹೊಸ ಉಪಕೇಂದ್ರಗಳ ಸ್ಥಾಪನೆ.
    – ಯರಮರಸ್ ಯೋಜನೆಯಿಂದ 1600 ಮೆಗಾ ವ್ಯಾಟ್, ಪಾವಗಡದ ಸೌರಶಕ್ತಿ ಇಂಧನ ಪಾರ್ಕ್‍ನಿಂದ 1000 ಮೆ.ವ್ಯಾ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಂದ 1375 ಮೆ. ವ್ಯಾ ಸೇರಿದಂತೆ 2017-18ನೇ ಸಾಲಿನ್ಲಲಿ ಒಟ್ಟು 3975 ಮೆ. ವ್ಯಾ ಸಾಮಥ್ರ್ಯ ಸೇರ್ಪಡೆ ಮಾಡಲು ಉದ್ದೇಶ