Tag: ಸಿದ್ದರಾಮಯ್ಯ ಬಜೆಟ್‌

  • Karnataka Budget 2024: ಪುತ್ತೂರಿನಲ್ಲಿ ಪಶುವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಕ್ರಮ

    Karnataka Budget 2024: ಪುತ್ತೂರಿನಲ್ಲಿ ಪಶುವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಕ್ರಮ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ತಮ್ಮ 15 ನೇ ಬಜೆಟ್‌ (Karnataka Budget 2024) ಮಂಡನೆ ಮಾಡಿದ್ದು, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪಶುವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ರಾಜ್ಯದ ಆಯ್ದ 20 ತಾಲೂಕುಗಳ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್‌ಗಳನ್ನಾಗಿ ಮೇಲ್ದರ್ಜೆಗೇರಿಸಲು 10 ಕೋಟಿ ರೂ. ಅನುದಾನ ನೀಡಲಾಗುವುದು. ಇನ್ನು ದುಸ್ಥಿತಿಯಲ್ಲಿರುವ 200 ಪಶುವೈದ್ಯ ಸಂಸ್ಥೆಗಳಿಗೆ 100 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡುವ ಗುರಿ ಇದೆ ಎಂದು ಸಿಎಂ ತಿಳಿಸಿದರು.

    ಕರ್ನಾಟಕ ರೈತ ಸಮೃದ್ಧಿ ಯೋಜನೆಯೊಂದಿಗೆ ಸಂಯೋಜಿಸಿ ಕುರಿ ಸಾಕಾಣಿಕೆ, ಹೈನುಗಾರಿಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: Karnataka Budget 2024 – ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್‍ಗಳನ್ನು ಐಐಟಿಯಂತೆ ಅಭಿವೃದ್ಧಿ

    ವಲಸೆ ಕುರಿಗಾರರ ಅಭ್ಯುದಯಕ್ಕೆ ಕ್ರಮ ಹಾಗೂ ಅವರ ಮೇಲಿನ ಶೋಷಣೆ ಮತ್ತು ದೌರ್ಜನ್ಯ ತಡೆಯಲು ‘ಕುರಿಗಾಹಿಗಳ ಮತ್ತು ಸ್ವತ್ತುಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ’ ಜಾರಿಗೊಳಿಸುವ ಯೋಜನೆಯಿಂದೆ ಎಂದರು.

  • ಅಂಜನಾದ್ರಿ ಬೆಟ್ಟ, ಸುತ್ತಮುತ್ತಲ ಪ್ರದೇಶ ಅಭಿವೃದ್ಧಿಗೆ 100 ಕೋಟಿ- 10 ತಾಣಗಳಲ್ಲಿ ರೋಪ್‌ ವೇ

    ಅಂಜನಾದ್ರಿ ಬೆಟ್ಟ, ಸುತ್ತಮುತ್ತಲ ಪ್ರದೇಶ ಅಭಿವೃದ್ಧಿಗೆ 100 ಕೋಟಿ- 10 ತಾಣಗಳಲ್ಲಿ ರೋಪ್‌ ವೇ

    ಬೆಂಗಳೂರು: ರಾಜ್ಯದಲ್ಲಿ ಪರಿಷ್ಕೃತ ಪ್ರವಾಸೋದ್ಯಮ ನೀತಿ 2024-29 ಅನ್ನು ಜಾರಿಗೆ ತರಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ತಮ್ಮ ಬಜೆಟ್ (Karnataka Budget 2024) ಮಂಡನೆಯ ವೇಳೆ ಹೇಳಿದ್ದಾರೆ.

    ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು 100 ಕೋಟಿ ರೂ. ಅನುದಾನ ನೀಡಲಾಗುವುದು. ರಾಜ್ಯದ 10 ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೇಬಲ್ ಕಾರ್/ರೋಪ್ ವೇ ಸೌಲಭ್ಯ ಒದಗಿಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಮಂಗಳೂರಿಗೆ ವಾಟರ್‌ ಮೆಟ್ರೋ?

    ಕಲಬುರಗಿಯಲ್ಲಿ ವಚನ ಮಂಟಪ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಗೋಕಾಕ್ ಜಲಪಾತ ಪ್ರೇಕ್ಷಣಿಯ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುವುದು. ರಾಜ್ಯದ 530 ಸಂರಕ್ಷಿತ ಸ್ಮಾರಕಗಳನ್ನ 3ಡಿ ಲೇಸರ್ ಸ್ಕ್ಯಾನಿಂಗ್ ಮೂಲಕ ಡಿಜಿಟಲ್ ದಾಖಲೀಕರಣ, ಕೆಎಸ್‍ಟಿಡಿಸಿ ವತಿಯಿಂದ ಬಾಗಲಕೋಟೆ ಜಿಲ್ಲೆ ಐಹೊಳೆಯಲ್ಲಿ ಸುಸಜ್ಜಿತ ಹೋಟೆಲ್ ನಿರ್ಮಾಣ ಮಾಡುವ ಗುರಿ ಇದೆ ಎಂದು ತಿಳಿಸಿದರು.

    ಬೀದರ್ ಮತ್ತು ವಿಜಯಪುರಲ್ಲಿ ಪುರಾತನ ನೀಡು ಸರಬರಾಜು ವ್ಯವಸ್ಥೆ ಪುನಶ್ಚೇತನಕ್ಕೆ 15 ಕೋಟಿ ಅನುದಾನ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಜೊತೆಗೆ ಬಂಡೀಪುರ, ದಾಂಡೇಲಿ, ಕಬಿನಿಯಲ್ಲಿ 25 ಕೋಟಿ ವೆಚ್ಚದಲ್ಲಿ ಇಂಟರ್‍ಪ್ರಿಟೇಷನ್ ಸೆಂಟರ್ ಹಾಗೂ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವರದ್ಧಿ ಮಂಡಳಿ ರಚನೆಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಿಎಂ ಹೇಳಿದರು.

  • ಕೆಲವೇ ಕ್ಷಣಗಳಲ್ಲಿ ಬಜೆಟ್‌ ಮಂಡನೆ – ಕೈ ಶಾಸಕರು ಕಾಂಗ್ರೆಸ್‌ ಪಕ್ಷದ ಶಾಲು ಧರಿಸಲು ಸೂಚನೆ!

    ಕೆಲವೇ ಕ್ಷಣಗಳಲ್ಲಿ ಬಜೆಟ್‌ ಮಂಡನೆ – ಕೈ ಶಾಸಕರು ಕಾಂಗ್ರೆಸ್‌ ಪಕ್ಷದ ಶಾಲು ಧರಿಸಲು ಸೂಚನೆ!

    ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲೇ 15ನೇ ಬಾರಿ ಬಜೆಟ್‌ ಮಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ) ದಾಖಲೆ ಬರೆಯಲಿದ್ದಾರೆ. ಬೆಳಗ್ಗೆ 10.15ಕ್ಕೆ ಬಜೆಟ್‌ ಮಂಡನೆ ಶುರು ಮಾಡಲಿದ್ದಾರೆ.

    ಬಜೆಟ್‌ ಮಂಡನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದು, ಸಚಿವರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಲಾಗಿದೆ. ಬಜೆಟ್‌ ಮಂಡನೆಗೂ ಮುನ್ನವೇ ಸಂಪುಟ ಸಹೋದ್ಯೋಗಿಗಳ ಜೊತೆ ಕ್ಯಾಬಿನೆಟ್‌ ಮೀಟಿಂಗ್‌ ನಡೆಸುತ್ತಿರುವ ಸಿಎಂ ಕ್ಯಾಬಿನೆಟ್‌ನಲ್ಲಿ ಬಜೆಟ್‌ಗೆ ಒಪ್ಪಿಗೆ ಪಡೆಯಲಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಜೆಟ್‌ 2024 – Karnataka Budget 2024 LIVE UPDATES

    ಕಾಂಗ್ರೆಸ್‌ ಶಾಲು ಧರಿಸಲು ಸೂಚನೆ:
    ಸಿಎಂ ಸಿದ್ದರಾಮಯ್ಯ ಬಜೆಟ್‌ ಓದುವ ವೇಳೆ ಕಾಂಗ್ರೆಸ್‌ ಶಾಲು ಹಾಕಿಕೊಳ್ಳಲು ಕಾಂಗ್ರೆಸ್‌ ಶಾಸಕರಿಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ಮುಖ್ಯಸಚೇತಕ ಅಶೋಕ್‌ ಪಟ್ಟಣ ವಿಧಾನಸಭೆ ಸಭಾಂಗಣ ಪ್ರವೇಶಿಸುವ ಕಾಂಗ್ರೆಸ್‌ ಶಾಸಕರಿಗೆ ಕಾಂಗ್ರೆಸ್‌ ಶಾಲು ಹಾಕಿ ಕಳುಹಿಸುತ್ತಿದ್ದಾರೆ. ಇದನ್ನೂ ಓದಿ: Karnataka Budget: ರಾಜ್ಯದ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್‌ನಲ್ಲಿ ಸಿಗುತ್ತಾ ಅನುದಾನ?

    ಈಗಾಗಲೇ ವಿಧಾನಸೌಧಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಬಜೆಟ್‌ ಪುಸ್ತಕ ತರಲಾಗಿದೆ. ಬೆಳಗ್ಗೆ 10:15 ರಿಂದ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರ 3.75 ಲಕ್ಷ ಕೋಟಿ ರೂ.ನಿಂದ 3.80 ಲಕ್ಷ ಕೋಟಿ ರೂ.ಗಳ ವರೆಗೆ ಇರಲಿದೆ ಎನ್ನಲಾಗಿದೆ.

  • ಕರ್ನಾಟಕ ಬಜೆಟ್‌ 2024 – Karnataka Budget 2024 LIVE UPDATES

    ಕರ್ನಾಟಕ ಬಜೆಟ್‌ 2024 – Karnataka Budget 2024 LIVE UPDATES

    2 years agoFebruary 16, 2024 1:49 pm

    ಸಿಎಂ ಸುದೀರ್ಘ ಬಜೆಟ್ ಓದು ಮುಕ್ತಾಯ

    3.14 ಗಂಟೆ ಕಾಲ 181 ಪುಟಗಳ ಬಜೆಟ್ ಪುಸ್ತಕ ಓದಿ ಮುಗಿಸಿದ ಸಿದ್ದರಾಮಯ್ಯ

    2 years agoFebruary 16, 2024 1:37 pm

    ಒಟ್ಟು ಸ್ವೀಕೃತಿ: 3,68,674 ಕೋಟಿ
    ರಾಜಸ್ವ ಸ್ವೀಕೃತಿ: 2,63,178 ಕೋಟಿ
    ಒಟ್ಟು ವೆಚ್ಚ: 3,71,383 ಕೋಟಿ

    2 years agoFebruary 16, 2024 1:27 pm

    ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲೆಗೊಂದು ಡೇ-ಕೇರ್‌ ಕಿಮೋಥೆರಪಿ ಕೇಂದ್ರ ಸ್ಥಾಪನೆ

    20 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ

    2 years agoFebruary 16, 2024 1:20 pm

    ಐಐಟಿ ಮಾದರಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಕಾಲೇಜು ವಿವಿ ಅಭಿವೃದ್ಧಿ

    2 years agoFebruary 16, 2024 1:07 pm

    ತಿರುಮಲ, ಶ್ರೀಶೈಲ, ವಾರಣಾಸಿಯಲ್ಲಿ ವಸತಿ ನಿಲಯ

    2 years agoFebruary 16, 2024 1:05 pm

    320 ಕಿಮೀ ಉದ್ದದ ಕರಾವಳಿ ತೀರದ ಅಭಿವೃದ್ಧಿ

    2 years agoFebruary 16, 2024 1:01 pm

    ಬೆಂಗಳೂರಿನಲ್ಲಿ ಸುರಂಗ ಮಾರ್ಗಕ್ಕೆ ಅಸ್ತು

    2 years agoFebruary 16, 2024 12:53 pm

    ನಮ್ಮ ಮೆಟ್ರೋ ಹೆಚ್ಚುವರಿ 44 ಕಿಮೀ ವಿಸ್ತರಣೆ

    2 years agoFebruary 16, 2024 12:50 pm

    1,134 ಹೊಸ ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ನಿರ್ಧಾರ

    2 years agoFebruary 16, 2024 12:46 pm

    ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯುವುದು

    2 years agoFebruary 16, 2024 12:44 pm

    ಸಿರಿಧಾನ್ಯ ಉತ್ಪನ್ನ ಪ್ರೋತ್ಸಾಹಕ್ಕೆ ‘ನಮ್ಮ ಮಿಲ್ಲೆಟ್‌’ ಕಾರ್ಯಕ್ರಮ

    2 years agoFebruary 16, 2024 12:30 pm

    ಕನ್ನಡ ಕಸ್ತೂರಿ ಎಂಬ ಯಂತ್ರಾನುವಾದ ತಂತ್ರಾಂಶದ ಅಭಿವೃದ್ಧಿಗೆ ಕ್ರಮ

    2 years agoFebruary 16, 2024 12:28 pm

    ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌

    ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್‌ ಪಾಸ್‌ ಸೌಲಭ್ಯ.

    2 years agoFebruary 16, 2024 12:18 pm

    ಶಿವಮೊಗ್ಗ ಜಿಲ್ಲೆಯಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಹೈ-ಸೆಕ್ಯೂರಿಟಿ ಕಾರಾಗೃಹ ನಿರ್ಮಾಣ

    2 years agoFebruary 16, 2024 12:14 pm

    ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸ್ಮಾರಕ ನಿರ್ಮಾಣಕ್ಕೆ ಕ್ರಮ

    2 years agoFebruary 16, 2024 12:08 pm

    2 years agoFebruary 16, 2024 12:06 pm

    ಮಂಗಳೂರಿನ ಹಜ್‌ ಭವನದ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ

    2 years agoFebruary 16, 2024 11:55 am

    ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಕ್ರೀಡಾಪಟುಗೆ 6 ಕೋಟಿ

    2 years agoFebruary 16, 2024 11:52 am

    ಕಲಬುರಗಿಯಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ

    2 years agoFebruary 16, 2024 11:51 am

    ನಮ್ಮ ಮೆಟ್ರೋ ಹಂತ 3 ಕ್ಕೆ 15611 ಕೋಟಿಗೆ ಅನುಮೋದನೆ

    2 years agoFebruary 16, 2024 11:49 am

    ಬೆಂಗಳೂರು-ಮಂಡ್ಯ-ಮೈಸೂರು ವಾಹನ ಸಂಚಾರ ದಟ್ಟಣೆ ತಡೆಗಟ್ಟಲು ಪ್ಲೈಓವರ್‌ಗಳ ನಿರ್ಮಾಣ

    2 years agoFebruary 16, 2024 11:44 am

    ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ

    2 years agoFebruary 16, 2024 11:42 am

    ಬೆಂಗಳೂರಲ್ಲಿ ಮಧ್ಯರಾತ್ರಿ 1 ಗಂಟೆ ವರೆಗೂ ನೈಟ್‌ಲೈಫ್‌

    2 years agoFebruary 16, 2024 11:40 am

    5 ಸಾವಿರ ST ಯುವಕ-ಯುವತಿಯರಿಗೆ ಡ್ರೋನ್ ತರಬೇತಿ

    ವಿವಿ ಗಳಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮಾಡುತ್ತಿರುವ 100 ವಿದ್ಯಾರ್ಥಿಗಳಿಗೆ 25 ಸಾವಿರ ಶಿಷ್ಯ ವೇತನ.

    2 years agoFebruary 16, 2024 11:35 am

    ಪ್ರವಾದೋದ್ಯಮ ಉತ್ತೇಜನಕ್ಕಾಗಿ 10 ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರ್ ಯೋಜನೆ ಅಥವಾ ರೋಫ್ ವೇ ನಿರ್ಮಾಣ.

    2 years agoFebruary 16, 2024 11:33 am

    2024-25ನೇ ಸಾಲಿನಲ್ಲಿ ತೆರಿಗೆ ಸಂಗ್ರಹದ ಅಂದಾಜು

    ಮೋಟಾರು ವಾಹನ- 13,000 ಕೋಟಿ.

    ನೋಂದಣಿ-ಮುದ್ರಣ-26,000 ಕೋಟಿ

    ಅಬಕಾರಿ- 38525 ಕೋಟಿ.

    ವಾಣಿಜ್ಯ ತೆರಿಗೆ- 1,10,000 ಕೋಟಿ.

    ಇತರೆ ತೆರಿಗೆ- 2368 ಕೋಟಿ.

    2 years agoFebruary 16, 2024 11:31 am

    ದೇವದಾಸಿಯರ ಮಾಸಾಶನ 2,000 ರೂ.ಗೆ ಹೆಚ್ಚಳ

    2 years agoFebruary 16, 2024 11:29 am

    2 years agoFebruary 16, 2024 11:27 am

    ಅಂಗನವಾಡಿ‌ ಸಹಾಯಕಿಯರಿಗೆ ಗ್ರಾಚ್ಯುಟಿ‌ ನೀಡಲು ನಿರ್ಧಾರ

    2 years agoFebruary 16, 2024 11:26 am

    2 years agoFebruary 16, 2024 11:24 am

    2 years agoFebruary 16, 2024 11:19 am

    6% ರಷ್ಟು ಬಡ್ಡಿ ದರದಲ್ಲಿ ಪ್ರೋತ್ಸಾಹ

    2 years agoFebruary 16, 2024 11:17 am

    2 years agoFebruary 16, 2024 11:14 am

    ಸಾಲ ತೀರಿಕೆ-18 ಪೈಸೆ

    ನೀರು ಪೂರೈಕೆ ಮತ್ತು ನೈರ್ಮಲ್ಯ – 3 ಪೈಸೆ

    ಶಿಕ್ಷಣ-11ಪೈಸೆ

    ಆರೋಗ್ಯ-4 ಪೈಸೆ

    ಇತರೆ ಸಾಮಾಜಿಕ ಸೇವೆಗಳು- 3 ಪೈಸೆ.

    ಕೃಷಿ ನೀರಾವರಿ, ಮತ್ತು ಗ್ರಾಮೀಣಾಭಿವೃದ್ಧಿ- 14ಪೈಸೆ

    ಇತರೆ ಆರ್ಥಿಕ ಸೇವೆಗಳು- 15ಪೈಸೆ

    ಸಮಾಜ ಕಲ್ಯಾಣ-15 ಪೈಸೆ

    ಇತರೆ ಸಾಮಾನ್ಯ ಸೇವೆಗಳು- 17 ಪೈಸೆ.

    2 years agoFebruary 16, 2024 11:11 am

    ಮೇಕೆದಾಟು, ಎತ್ತಿನ ಹೊಳೆ, ಕೃಷ್ಣಾ ಮೇಲ್ದಂಡೆ ಹಂತ-3, ಭದ್ರಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಹಣ ಮೀಸಲಿಡದ ಸರ್ಕಾರ

    ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ ಯೋಜನೆಗಳಿಗೆ ಕೇಂದ್ರದಿಂದ ಸಿಗಬೇಕಾದ ಅಗತ್ಯ ಅನುಮತಿಗಳು ಹಾಗೂ ಘೊಷಣೆಯಾಗಿರುವ ಅನುದಾನಕ್ಕಾಗಿ ಎದುರು ನೋಡುವ ಬಗ್ಗೆ ಪ್ರಸ್ತಾಪ

    2 years agoFebruary 16, 2024 11:05 am

    ರೈತರನ್ನ ಸ್ವಾವಲಂಬಿ ಮಾಡಲು 1174 ಕೋಟಿ ವೆಚ್ಚದಲ್ಲಿ 40 ಸಾವಿರ ಜಾಲಮುಕ್ತ ಸೋಲರ್ ಪಂಪ್ ಸೆಟ್ ಯೋಜನೆ

    2 years agoFebruary 16, 2024 11:04 am

    ಬೆಂಗಳೂರಿನ ಬಿಐಇಸಿ ಯಿಂದ ತುಮಕೂರುವರೆಗೆ, ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ಯೋಜನೆ ಪ್ರಾರಂಭಕ್ಕೆ ನಿರ್ಧಾರ

    2 years agoFebruary 16, 2024 11:00 am

    ರಾಜ್ಯದಲ್ಲಿನ ಪ್ರಮುಖ ಧಾರ್ಮಿಕ ಸ್ಥಳಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಲು 20 ಕೋಟಿ ರೂ.

    ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ 10 ಕೋಟಿ.

    ಜೈನರ ಪ್ರಮುಖ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ 50 ಕೋಟಿ.

    ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ 200 ಕೋಟಿ.

    ಬೌದ್ದರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳ‌ನ್ನ ಪಾಲಿ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದ.

    ಸಿಖ್ಖ್ ಲಿಗಾರ್ ಸಮುದಾಯದ ಆರ್ಥಿಕ ಸಬಲೀಕರಣಕ್ಕೆ 2 ಕೋಟಿ.

    ಬೀದರ್‌ನಲ್ಲಿರೋ ಶ್ರೀ ನಾನನ್ ಝೀರಾ ಸಾಹೇಬ್ ಗುರುದ್ವಾರದ ಅಭಿವೃದ್ಧಿಗೆ 1 ಕೋಟಿ

    2 years agoFebruary 16, 2024 10:51 am

    ಬಜೆಟ್ ವಿರೋಧಿಸಿ ವಿಪಕ್ಷ ಬಿಜೆಪಿ ಬಹಿಷ್ಕಾರ

    ಧಿಕ್ಕಾರ ಕೂಗುತ್ತಾ ಸದನದಿಂದ ಹೊರಬಂದ ಬಿಜೆಪಿ ಶಾಸಕರು

    ಏನಿಲ್ಲಾ ಏನಿಲ್ಲಾ.. ಬುರುಡೆ ಬುರುಡೆ ಎಂದು ಕೂಗುತ್ತಾ ಬಿಜೆಪಿ ಶಾಸಕರ ಸಭಾತ್ಯಾಗ

    ವಿಧಾನಸೌಧದಲ್ಲಿ ವಿಪಕ್ಷ ಬಿಜೆಪಿ ಬಜೆಟ್ ವಿರೋಧಿಸಿ ಪ್ರತಿಭಟನೆ ಸಾಧ್ಯತೆ

    ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಪೋಸ್ಟರ್ ಅಂಟಿಸಿದ ಬಿಜೆಪಿ ಶಾಸಕರು

    2 years agoFebruary 16, 2024 10:49 am

    7ನೇ ವೇತನ ಆಯೋಗ ಜಾರಿ ಮುನ್ಸೂಚನೆ

    ಸಮಿತಿ ವರದಿ ಆಧರಿಸಿ ಕ್ರಮ

    2 years agoFebruary 16, 2024 10:47 am

    90 ಕೋಟಿ ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ವಿತರಣೆ

    2 years agoFebruary 16, 2024 10:43 am

    ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ

    ತೆರಿಗೆ ಸಂಗ್ರಹ ವಿಚಾರವಾಗಿ ಆರೋಪ

    ಜಿಎಸ್‌ಟಿ ಹಣ ಕಡಿಮೆ ಕೊಟ್ಟಿದ್ದಕ್ಕೆ ಬಜೆಟ್‌ನಲ್ಲಿ ಆರೋಪ

    ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದ ಹಾಗೆ ಬಿಜೆಪಿ ಕೆಂಡಾಮಂಡಲ.

    2 years agoFebruary 16, 2024 10:37 am

    ‘ಅನ್ನ ಸುವಿಧಾ’ ಎಂಬ ಹೊಸ ಯೋಜನೆಯಡಿಯಲ್ಲಿ ಹೋಮ್ ಡೆಲವರಿ ಆಪ್

    80 ವರ್ಷ ದಾಟಿದ ಹಿರಿಯ ನಾಗರಿಕರು ಇರುವ ಮನೆಗೆ ಈ ಯೋಜನೆ

    2 years agoFebruary 16, 2024 10:30 am

    ಶಿಕ್ಷಣ – 44,422 ಕೋಟಿ

    ಮಹಿಳಾ ಮತ್ತು ಮಕ್ಕಳ ಇಲಾಖೆ – 34,406 ಕೋಟಿ

    ಇಂಧನ – 23,159 ಕೋಟಿ

    ಗ್ರಾಮೀಣಾಭಿವೃದ್ಧಿ – 21,160 ಕೋಟಿ

    ಒಳಾಡಳಿತ/ಸಾರಿಗೆ – 19,777 ಕೋಟಿ

    ನೀರಾವರಿ – 19,179 ಕೋಟಿ

    ನಗರಾಭಿವೃದ್ಧಿ- 18,155 ಕೋಟಿ

    ಕಂದಾಯ – 16,170 ಕೋಟಿ

    ಆರೋಗ್ಯ – 15,145 ಕೋಟಿ

    ಸಮಾಜಕಲ್ಯಾಣ – 13,334 ಕೋಟಿ

    ಲೋಕೋಪಯೋಗಿ – 10,424 ಕೋಟಿ

    ಆಹಾರ ಇಲಾಖೆ – 9963 ಕೋಟಿ

    ಕೃಷಿ , ತೋಟಗಾರಿಕೆ – 6,688 ಕೋಟಿ

    ಪಶು ಸಂಗೋಪನೆ, ಮೀನುಗಾರಿಕೆ- 3,307 ಕೋಟಿ

    ಇತರೆ – 1,24,593 ಕೋಟಿ

    2 years agoFebruary 16, 2024 10:27 am

    ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IMl ಬಿಯರ್ ಸ್ಲಾಬ್ ಪರಿಷ್ಕರಣೆ

    2 years agoFebruary 16, 2024 10:25 am

    181 ಪುಟಗಳ ಬಜೆಟ್‌ ಪುಸ್ತಕ

    ತೆರಿಗೆ ಅನ್ಯಾಯದ ಬಗ್ಗೆ ಪ್ರಸ್ತಾಪ

    2 years agoFebruary 16, 2024 10:19 am

    ತಮ್ಮ 15ನೇ ಬಜೆಟ್‌ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ.

    2 years agoFebruary 16, 2024 10:17 am

    2 years agoFebruary 16, 2024 9:59 am

    ಈ ಬಜೆಟ್‌ ಅಧಿವೇಶನದಲ್ಲೇ ರಾಜ್ಯದ ಕಳೆದ 5 ವರ್ಷಗಳ ಹಣಕಾಸು ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಸಚಿವರಿಗೆ ತಿಳಿಸಿದ ಸಿಎಂ ಸಿದ್ದರಾಮಯ್ಯ. ಮುಂದಿನ ವಾರ ಶ್ವೇತಪತ್ರ ಹೊರಡಿಸುವ ಸಾಧ್ಯತೆ.

    Video: ಬಜೆಟ್‌ ಬ್ಯಾಗ್‌ನೊಂದಿಗೆ ವಿಧಾನಸೌಧ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ
    2 years agoFebruary 16, 2024 9:46 am

    ಜನರ ಗ್ಯಾರಂಟಿ + ಅಭಿವೃದ್ಧಿ ಗ್ಯಾರಂಟಿ ಬಜೆಟ್‌ ಎಂದು ಕ್ಯಾಬಿನೆಟ್‌ನಲ್ಲಿದ್ದ ಸಚಿವರಿಗೆ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

    2 years agoFebruary 16, 2024 9:39 am

    ಕಾಂಗ್ರೆಸ್‌ ಶಾಲು ಹಾಕಲು ಕೈ ಶಾಸಕರಿಗೆ ಸೂಚನೆ

    ಸಿಎಂ ಸಿದ್ದರಾಮಯ್ಯ ಬಜೆಟ್‌ ಓದುವ ವೇಳೆ ಕಾಂಗ್ರೆಸ್‌ ಶಾಲು ಹಾಕಿಕೊಳ್ಳಲು ಕಾಂಗ್ರೆಸ್‌ ಶಾಸಕರಿಗೆ ಸೂಚನೆ – ವಿಧಾನಸಭೆ ಸಭಾಂಗಣ ಪ್ರವೇಶಿಸುವ ಕಾಂಗ್ರೆಸ್‌ ಶಾಸಕರಿಗೆ ಕಾಂಗ್ರೆಸ್‌ ಶಾಲು ಹಾಕಿ ಕಳುಹಿಸುತ್ತಿರುವ ಮುಖ್ಯಸಚೇತಕ ಅಶೋಕ್‌ ಪಟ್ಟಣ

    2 years agoFebruary 16, 2024 9:37 am

    ಕ್ಯಾಬಿನೆಟ್‌ ಮೀಟಿಂಗ್

    ಸಂಪುಟ ಸಹೋದ್ಯೋಗಿಗಳ ಜೊತೆ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್‌ ಮೀಟಿಂಗ್‌ – ಕ್ಯಾಬಿನೆಟ್‌ನಲ್ಲಿ ಬಜೆಟ್‌ಗೆ ಒಪ್ಪಿಗೆ ಪಡೆಯಲಿರುವ ಸಿಎಂ

    2 years agoFebruary 16, 2024 9:31 am

    ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

    ಬಜೆಟ್‌ ಮಂಡನೆಗೆ ಸಿಎಂ ಸಿದ್ದರಾಮಯ್ಯ ಆಗಮನ, ಸಚಿವರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಾಗತ.

    2 years agoFebruary 16, 2024 9:24 am

    ಬೆಳಗ್ಗೆ 10.15ಕ್ಕೆ ಬಜೆಟ್‌ ಮಂಡನೆ ಶುರು ಮಾಡಲಿರುವ ಸಿದ್ದರಾಮಯ್ಯ

    2 years agoFebruary 16, 2024 9:16 am

    ಕರ್ನಾಟಕದ ಇತಿಹಾಸದಲ್ಲಿ 15ನೇ ಬಾರಿ ಬಜೆಟ್‌ ಮಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆ ಬರೆಯಲಿದ್ದಾರೆ.

    2 years agoFebruary 16, 2024 10:07 am

    ಹೊಸ ಜಿಲ್ಲೆ ಘೋಷಣೆಗಳು ಸದ್ಯಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಕ್ಯಾಬಿನೆಟ್‌ನಲ್ಲಿ ಸಂಪುಟ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ.

  • Karnataka Budget: ರಾಜ್ಯದ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್‌ನಲ್ಲಿ ಸಿಗುತ್ತಾ ಅನುದಾನ?

    Karnataka Budget: ರಾಜ್ಯದ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್‌ನಲ್ಲಿ ಸಿಗುತ್ತಾ ಅನುದಾನ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು ದಾಖಲೆಯ 15ನೇ ಬಜೆಟ್‌ ಮಂಡಿಸುತ್ತಿದ್ದು, ರಾಜ್ಯದಲ್ಲಿರುವ ಪುರಾತನ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್ ನಲ್ಲಿ ಹಣ ಬಿಡುಗಡೆ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

    ಇಂದು (ಶುಕ್ರವಾರ) ಬೆಳಗ್ಗೆ 10:15 ರಿಂದ ಬಜೆಟ್‌ (Siddaramaiah Budget) ಮಂಡಿಸಲಿದ್ದಾರೆ. ಬಜೆಟ್‌ ಗಾತ್ರ 3.75 ಲಕ್ಷ ಕೋಟಿ ರೂ.ನಿಂದ 3.80 ಲಕ್ಷ ಕೋಟಿ ರೂ.ಗಳ ವರೆಗೆ ಇರಲಿದೆ ಎನ್ನಲಾಗಿದೆ. ಬಜೆಟ್‌ ಮಂಡನೆಗೂ ಮುನ್ನ ಬೆಳಗ್ಗೆ 9:30ಕ್ಕೆ ಸಚಿವ ಸಂಪುಟ ಸಭೆಯನ್ನೂ ಸಿಎಂ ಕರೆದಿದ್ದಾರೆ.

    ಈ ಬಾರಿ ರಾಜ್ಯದಲ್ಲಿ ತೆರಿಗೆ ಬರೆ ಇಲ್ಲದೇ ಬಜೆಟ್‌ ಮಂಡನೆ ಮಾಡುತ್ತಾರಾ? ಜನಪ್ರಿಯ ಯೋಜನೆ ಘೋಷಣೆ ಮಾಡದೇ ಕೇಂದ್ರ ಸರ್ಕಾರದ ಹಾದಿ ತುಳಿಯುತ್ತಾರಾ? ಅನ್ನೋ ಪ್ರಶ್ನೆಗಳ ನಡುವೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಈ ಬಾರಿ ರಾಮ ನಾಮ ಜಪ ಮಾಡ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: ಬೆಂಗ್ಳೂರು ಟ್ರಾಫಿಕ್ ದಟ್ಟಣೆಗೆ ಮುಕ್ತಿ ಸಿಗುತ್ತಾ? – ಸಿಎಂ ಬಜೆಟ್‌ನಲ್ಲಿ ಬೆಂಗಳೂರಿನ ನಿರೀಕ್ಷೆಗಳೇನು?

    ರಾಜ್ಯದ ಪುರಾತನ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್ ನಲ್ಲಿ ಹಣ ಬಿಡುಗಡೆ ಆಗುತ್ತಾ? ಅಯೋಧ್ಯೆಯಲ್ಲಿ ರಾಜ್ಯದ ವಸತಿ ಸಮುಚ್ಚಯ ನಿರ್ಮಾಣ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗುತ್ತಾ? ಕರ್ನಾಟಕದಲ್ಲಿ ಪುರಾತನ ರಾಮ ಮಂದಿರ ಪುನರು ಜ್ಜೀವನಕ್ಕೆ 100 ಕೋಟಿ ಮೀಸಲಿಡ್ತಾರಾ? ಅನ್ನೋದರ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇದನ್ನೂ ಓದಿ: ಇಂದು ಸಿದ್ದರಾಮಯ್ಯರಿಂದ ದಾಖಲೆಯ 15ನೇ ಬಜೆಟ್ ಮಂಡನೆ – ಗ್ಯಾರಂಟಿ ಮಧ್ಯೆ ಬೆಟ್ಟದಷ್ಟು ನಿರೀಕ್ಷೆ

    ಅಯೋಧ್ಯೆಯಲ್ಲಿ ರಾಜ್ಯದ ವಸತಿ ಸಂಕೀರ್ಣ ಕಟ್ಟಲು 100 ಕೋಟಿ ರೂ. ಮೀಸಲಿಡುತ್ತಾರೆ. ರಾಮ ರಾಜಕಾರಣದ ನಡುವೆ ಬಜೆಟ್‌ನಲ್ಲೇ ಘೋಷಿಸಿ ರಾಮ ಭಕ್ತಿ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಬಹುದು. ಶ್ರೀರಾಮನ ವಿಚಾರದಲ್ಲಿ ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ಬಜೆಟ್‌ನಲ್ಲಿ ಸಿಎಂ ಉತ್ತರ ಕೊಡುವ ಸಾಧ್ಯತೆ ಇದೆ. ರಾಮ ಎಲ್ಲೆಲ್ಲೂ ಇದ್ದಾನೆ ಎಂದಿದ್ದ ಸಿಎಂ ರಾಜ್ಯದ ರಾಮ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಂದಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಅಯೋಧ್ಯೆಯಲ್ಲಿ ಕರ್ನಾಟಕದ ವಸತಿ ಕಟ್ಟಡಕ್ಕೆ ಈ ಬಾರಿಯ ಬಜೆಟ್‌ನಲ್ಲೇ ಅನುದಾನ ಘೋಷಿಸಲು ಸಹ ಸಿದ್ಧತೆ ನಡೆದಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

  • ಕಾಂಗ್ರೆಸ್ Vs ಹೆಚ್‌ಡಿಕೆ ನಡುವೆ ಪೆನ್‌ಡ್ರೈವ್‌ ಕದನ – ಸೋಮವಾರ ಸ್ಫೋಟವಾಗುತ್ತಾ ರಹಸ್ಯ?

    ಕಾಂಗ್ರೆಸ್ Vs ಹೆಚ್‌ಡಿಕೆ ನಡುವೆ ಪೆನ್‌ಡ್ರೈವ್‌ ಕದನ – ಸೋಮವಾರ ಸ್ಫೋಟವಾಗುತ್ತಾ ರಹಸ್ಯ?

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈಗ ಪೆನ್‌ಡ್ರೈವ್‌ ಪಾಲಿಟಿಕ್ಸ್‌ (Pendrive Politics) ಜೋರಾಗಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರದ ವಿರುದ್ಧ ವಿವಿಧ ಇಲಾಖೆಗಳ ಅಕ್ರಮದ ಬಗ್ಗೆ ಆರೋಪ ಮಾಡ್ತಿದ್ದಾರೆ.

    ಇದರ ನಡುವೆ ಈವರೆಗೆ ಒಂದು ಲೆಕ್ಕ ಸೋಮವಾರದಿಂದ ಅಸಲಿ ಲೆಕ್ಕ ಶುರು ಎಂಬಂತಾಗಿದೆ. ಪೆನ್‌ಡ್ರೈವ್‌ ಮೂಲಕ ನೆಕ್ಸ್ಟ್‌ ಪಾಲಿಟಿಕ್ಸ್‌ ಡ್ರೈವ್‌ ಶುರುವಾದಂತಿದೆ. 4 ಇಲಾಖೆಗಳ ವರ್ಗಾವಣೆ ವಿಚಾರಗಳ ಬಗ್ಗೆ ಹೆಚ್‌ಡಿಕೆ ತಲಾಶ್ ಆರಂಭಿಸಿದ್ದಾರೆ. ಹುಡುಕಲು ಹೋದ ಹೆಚ್‌ಡಿಕೆಗೆ ಸಿಕ್ಕಿದ್ದೇನು..? ಬಿಟ್ಟಿದ್ದೇನು..? ಎಂಬ ಚರ್ಚೆಗಳು ಶುರುವಾಗಿದೆ. ಇದನ್ನೂ ಓದಿ: ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ಗೆ ಹಿನ್ನಡೆ – ಮುಂದಿನ ರಾಜಕೀಯ ಭವಿಷ್ಯ ಏನು?

    ಸದನದಲ್ಲಿ ಬಿಜೆಪಿ (BJP) ಸಹಕಾರದೊಂದಿಗೆ ಸಿದ್ದರಾಮಯ್ಯ (Siddaramaiah) ಟೀಂ ಟಾರ್ಗೆಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಹೆಚ್‌ಡಿಕೆ ನಂಬಿಕಸ್ಥ ಅಧಿಕಾರಿಗಳೇ ಪೆನ್‌ಡ್ರೈವ್‌ ಅಸಲಿಗೆ ಕಾರಣ ಎಂಬ ಚರ್ಚೆ ಶುರುವಾಗಿದೆ. 4 ಇಲಾಖೆಗಳಲ್ಲಿ ಮೂವರು ಪ್ರಭಾವಿಗಳ ಸಂಭಾಷಣೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ಪೆನ್‌ಡ್ರೈವ್‌ ಪ್ರಮುಖ ಅಧಿಕಾರಿಗಳ ವಿಚಾರದಲ್ಲಿ ಸಂಭಾಷಣೆ ನಡೆಸಿರುವ ಆಡಿಯೋ ಇದೆ ಎನ್ನಲಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಹಿನ್ನಡೆ- ಮಾನನಷ್ಟ ಪ್ರಕರಣದಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ

    ಆಡಿಯೋಗಳನ್ನೇ ಮುಂದಿಟ್ಟುಕೊಂಡು ಹೆಚ್‌ಡಿಕೆ ಪೆನ್‌ಡ್ರೈವ್‌ ಬ್ರಹ್ಮಾಸ್ತ್ರ ಹೂಡಲಿದ್ದಾರೆ. ಬಜೆಟ್ ಬಳಿಕ ಅಸಲಿ ಆಟ ಶುರುವಾಗಲಿದೆ ಅಂತಾ ಆಪ್ತರ ಬಳಿ ಕುಮಾರಸ್ವಾಮಿ ಹೇಳಿಕೊಂಡಿದ್ದಾರಂತೆ. ಹಾಗಾಗಿ ಮುಂದಿನವಾರ ರಾಜ್ಯ ರಾಜಕಾರಣದಲ್ಲಿ ರಣರೋಚಕ ಕದನ ಸಾಧ್ಯತೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Karnataka Budget 2023: ಗೃಹಲಕ್ಷ್ಮಿಗೆ 30 ಸಾವಿರ ಕೋಟಿ – ಮಹಿಳೆಯರಿಗೆ ಸಿಕ್ಕಿದ್ದು ಏನು?

    Karnataka Budget 2023: ಗೃಹಲಕ್ಷ್ಮಿಗೆ 30 ಸಾವಿರ ಕೋಟಿ – ಮಹಿಳೆಯರಿಗೆ ಸಿಕ್ಕಿದ್ದು ಏನು?

    – ಆ್ಯಸಿಡ್ ದಾಳಿಗೊಳಗಾದ ಮಹಿಳಾ ಸಂತ್ರಸ್ತರಿಗೆ 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲಕ್ಕೆ ಅಸ್ತು

    ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ (Karnataka Budget 2023) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಜ್ಯದ ಮಹಿಳೆಯರಿಗೆ ಬಂಪರ್‌ ಉಡುಗೊರೆ ನೀಡಿದ್ದಾರೆ.

    ತಮ್ಮ ಬಜೆಟ್‌ ಭಾಷಣದಲ್ಲಿ ರಾಜ್ಯದಲ್ಲಿನ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಅವರಿಗೆ ಸ್ವಯಂ ಉದ್ಯೋಗಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲು 2 ಕೋಟಿ ರೂ. ಅನುದಾನ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯವನ್ನು ಒದಗಿಸಲಾಗುವುದು. ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 70,427 ಕೋಟಿ ರೂ., ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2023-24 ನೇ ಸಾಲಿನಲ್ಲಿ 51,229 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಇದನ್ನೂ ಓದಿ: ಮತ್ತಷ್ಟು ದುಬಾರಿಯಾಗಲಿದೆ ಎಣ್ಣೆ – ಈಗ ಎಷ್ಟು ಸುಂಕವಿದೆ? ಎಷ್ಟು ಏರಿಕೆಯಾಗುತ್ತೆ?

    ಕಾಂಗ್ರೆಸ್‌ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ನಮ್ಮ ರಾಜ್ಯದ ಮಹಿಳೆಯರಿಗೆ ಬದುಕಿನ ನಿರ್ವಹಣೆಯನ್ನು ಇನ್ನಷ್ಟು ಸುಗಮಗೊಳಿಸಲು ಮತ್ತು ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದ್ದು, ಮಹಿಳೆಯರ ಖಾತೆಗೆ ನೇರವಾಗಿ ಮಾಸಿಕ 2,000 ರೂ.ಗಳನ್ನು ವರ್ಗಾಯಿಸಲಾಗುವುದು. ಯೋಜನೆಗಾಗಿ ವಾರ್ಷಿಕ ಸುಮಾರು 30,000 ಕೋಟಿ ರೂ. ವೆಚ್ಚವಾಗಲಿದ್ದು, ಇದು ಇಡೀ ದೇಶದಲ್ಲಿಯೇ ಅತೀ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಲಿದೆ ಎಂದು ಹೇಳಿದ್ದಾರೆ.

    ಇದರೊಂದಿಗೆ ವಿಶೇಷಚೇತನರಿಗೆ ಆರ್ಥಿಕ ಸದೃಢತೆ ಒದಗಿಸಲು ಸಾಮಾಜಿಕವಾಗಿ ಇಲಾಖೆಯಲ್ಲಿ ನೋಂದಣಿಯಾಗಿರುವ ಸುಮಾರು 4,000 ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನ 30 ಕೋಟಿ ರೂ. ವೆಚ್ಚದಲ್ಲಿ ಒದಗಿಸಲಾಗುವುದು. ಅಲ್ಲದೆ, ನೋಂದಣಿಯಾಗದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು. ಇದನ್ನೂ ಓದಿ: Karnataka Budget 2023: ಡಾ.ರಾಜ್ ಸ್ಮಾರಕದ ಬಳಿ ಸಿನಿ ವಸ್ತು ಸಂಗ್ರಹಾಲಯ

    ಮಹಿಳಾ ಉದ್ಯಮಿಗಳು ಆತಿಥ್ಯ, ಆರೈಕೆ ಮತ್ತು ಪ್ರವಾಸೋದ್ಯಮದಂತಹ ಸೇವಾ ವಲಯದಲ್ಲಿ ಮಹಿಳೆಯರು ಹೆಚ್ಚಿನ ಅವಕಾಶ ಪಡೆಯುತ್ತಿದ್ದಾರೆ. ಆದ್ದರಿಂದ ಸೇವಾ ವಲಯದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಶೇ.4ರ ಬಡ್ಡಿ ದರದಲ್ಲಿ ನೀಡಲಾಗುವ ಸಾಲದ ಮಿತಿಯನ್ನ 2 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು. 2023-24ನೇ ಸಾಲಿನಲ್ಲಿ 10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನ 7 ಜಿಲ್ಲೆಗಳಲ್ಲಿ NGOಗಳ ಸಹಯೋಗದೊಂದಿಗೆ 2 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]