Tag: ಸಿದ್ದರಾಮಯಯ್ಯ

  • ಇಂದು ಇಡೀ ದಿನ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಸಿಎಂ

    ಇಂದು ಇಡೀ ದಿನ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಸಿಎಂ

    ಬೆಂಗಳೂರು: ಇಂದು ಇಡೀ ದಿನ ಸಿಎಂ ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

    ಸೋಮವಾರ ತಲೆಸುತ್ತು ಕಾಣಿಸಿಕೊಂಡಿದ್ದ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಶೇಷಾದ್ರಿಪುರಂನಲ್ಲಿರುವ ಅಪೋಲೊ ಆಸ್ಪತ್ರೆಗೆ (Apollo Hospitals) ಹೋಗಿದ್ದರು.  ಇದನ್ನೂ ಓದಿ: ನಾನು ಆಗಲೇ ಹೋಗಿಲ್ಲ, ಈಗ ಯಾಕೆ ಹೋಗಲಿ? ಆಪ್ತರ ಬಳಿ ಸಿಎಂ ಮನದ ಮಾತು

     
    ಆರೋಗ್ಯ ತಪಾಸಣೆ, ಎಂಆರ್‌ಐ ಸ್ಕ್ಯಾನ್ ಮಾಡಲಾಗಿತ್ತು. ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರ ಮಾಹಿತಿ ನೀಡಿದ್ದರು.

    ಇಂದು ಯಾವುದೇ ಸಭೆ, ಕಾರ್ಯಕ್ರಮಗಳು ನಿಗದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ವಿಶ್ರಾಂತಿಯಲ್ಲಿದ್ದು ಬುಧವಾರ ದೆಹಲಿಗೆ ಪ್ರಯಾಣಿಸಲಿದ್ದಾರೆ.

  • ಮಾಜಿ ಸಿಎಂಗೆ ಕೊರೊನಾ – ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಮಾಜಿ ಸಿಎಂಗೆ ಕೊರೊನಾ – ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿದೆ.

    ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಟೆಸ್ಟ್‌ ಮಾಡಿಸಿದ್ದು ಪಾಸಿಟಿವ್‌ ಬಂದಿದೆ.

    ಈ ಬಗ್ಗೆ ಟ್ವೀಟ್‌ ಮಾಡಿರುವ ಪುತ್ರ ಯತೀಂದ್ರ, ನಿನ್ನೆ ಬೆಳಿಗ್ಗೆಯಿಂದ ತಂದೆಯವರಿಗೆ ಜ್ವರ ಬಂದಿದ್ದು ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಆಂಟಿಜೆನ್‌ ಟೆಸ್ಟ್‌ ಮಾಡಲಾಗಿದ್ದು ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿದೆ. ಇತ್ತೀಚೆಗೆ ಅವರ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್‌ ಆಗಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

    ರಾತ್ರಿ 11:30ಕ್ಕೆ ಮಣಿಪಾಲ್ ಆಸ್ಪತ್ರೆಗೆ ಸಿದ್ದರಾಮಯ್ಯ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮಗ ಡಾ.ಯತೀಂದ್ರ ಅವರು ಸಿದ್ದರಾಮಯ್ಯನವರನ್ನು ಈಗ ನೋಡಿಕೊಳ್ಳುತ್ತಿದ್ದಾರೆ.

    ಕೊರೊನಾ ಬಂದಿರುವ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ನನ್ನ ಕೊರೊನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ

    ಯಡಿಯೂರಪ್ಪ ಕೂಡ ಇದೇ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಆರಂಭದಲ್ಲಿ ಸಿಎಂ ಆರೋಗ್ಯ ವಿಚಾರಿಸಲೆಂದೇ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿತ್ತು. ನಂತರ ತಮ್ಮ ಆರೋಗ್ಯ ಆರೋಗ್ಯ ತಪಾಸಣೆಗೆ ಬಂದಿರುವ ವಿಚಾರ ತಿಳಿದಿದೆ.

    ಆಸ್ಪತ್ರೆಗೆ ದಾಖಲಾಗುವ ಮುನ್ನ ಸಿಎಂ ಸಿದ್ದರಾಮಯ್ಯ ಸಿಎಂ ಆರೋಗ್ಯ ವಿಚಾರಿಸಿದರು. ಸದ್ಯ ಹಾಲಿ, ಮಾಜಿ ಸಿಎಂಗಳು ಸ್ಪೆಷಲ್‌ ವಾರ್ಡ್‌ನಲ್ಲಿದ್ದು ಆರೋಗ್ಯವಾಗಿದ್ದಾರೆ.

  • ಯಾವುದೇ ಕಾರಣಕ್ಕೂ ಮೊರಾರ್ಜಿ ದೇಸಾಯಿ ಹೆಸರು ಬದಲಾಯಿಸ್ಬಾರ್ದು: ಬಿಎಸ್‍ವೈ ಎಚ್ಚರಿಕೆ

    ಯಾವುದೇ ಕಾರಣಕ್ಕೂ ಮೊರಾರ್ಜಿ ದೇಸಾಯಿ ಹೆಸರು ಬದಲಾಯಿಸ್ಬಾರ್ದು: ಬಿಎಸ್‍ವೈ ಎಚ್ಚರಿಕೆ

    ಬೆಂಗಳೂರು: ಮೊರಾರ್ಜಿ ದೇಸಾಯಿ ಹೆಸರು ಬದಲಿಗೆ ಇಂದಿರಾಗಾಂಧಿ ಹೆಸರು ಇಡುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವ್ರು ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ಅವ್ರ ಹೆಸರು ಬದಲಾವಣೆ ಮಾಡಿದ್ರೆ ಇದು ಅವರಿಗೆ ಮಾಡಿದ ಅಪಮಾನ ಅಂತ ಕಿಡಿಕಾರಿದ್ರು.

    ಬೇರೆ ಕಾರ್ಯಕ್ರಮಕ್ಕೆ ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯಾವ ಹೆಸರಾದ್ರು ಇಟ್ಟುಕೊಳ್ಳಿ. ಆದ್ರೆ ಯಾವುದೇ ಕಾರಣಕ್ಕೂ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ಹೆಸ್ರು ಬದಲಾಯಿಸಬಾರದು ಅಂತ ಆಗ್ರಹಿಸಿದ್ರು.

    ಒಂದು ವೇಳೆ ಇಂದಿರಾಗಾಂಧಿ ಹೆಸರು ಇಟ್ರೆ ಸರ್ಕಾರದ ವಿರುದ್ದ ಉಗ್ರ ಹೋರಾಟ ಮಾಡ್ತೀವಿ ಬಿಎಸ್‍ವೈ ಎಚ್ಚರಿಕೆ ನೀಡಿದ್ರು.

    ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಡಿಸಿಎಂ ಆರ್ ಅಶೋಕ್, ಕಿತ್ತೂರು ಚೆನ್ನಮ್ಮ ದೇಶಕ್ಕೆ ಪ್ರೇರಣೆ, ಸ್ವಾತಂತ್ರ ಹೋರಾಟಗಾರ್ತಿ. ಅಂತಹವರ ಹೆಸರು ತೆಗೆದು ನಿಮ್ಮ ಪಾರ್ಟಿ ಅಧ್ಯಕ್ಷರ ಹೆಸರು ಇಡೋದು ನಾಚಿಕೆ ಗೇಡಿನ ಕ್ರಮ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವ್ರು ರಾಷ್ಟ್ರೀಯ ಹೆದ್ದಾರಿಗಳ ಮಾಡಿದ್ರು. 140 ಕೋಟಿ ವೆಚ್ಚ ಮಾಡಿ ನೀವು ಅವ್ರ ಬೋರ್ಡ್ ತೆಗೆದ್ರಿ, ಜನ ನಿಮ್ಮನ್ನೆ ತೆಗೆದ್ರು. ಈಗ ಚೆನ್ನಮ್ಮ, ಮೋರಾರ್ಜಿ ದೇಸಾಯಿ ಹೆಸ್ರು ತೆಗೆದ್ರೆ ಜನ ಇಲ್ಲಿಂದ ನಿಮ್ಮನ್ನ ತೆಗೆಯುತ್ತಾರೆ ಅಂತ ವಾಗ್ದಾಳಿ ನಡೆಸಿದ್ರು.