Tag: ಸಿದ್ದರಾಜು

  • ಹಲವು ಪಾತ್ರಗಳಿದ್ದರೂ ತೆರೆ ಮೇಲೆ ಕಾಣುವುದು ಒಂದೇ ಪಾತ್ರ: ಬೊಂಬೆ ಹೇಳುತೈತೆ ಸಿನಿಮಾದಲ್ಲಿ ಪ್ರಯೋಗ

    ಹಲವು ಪಾತ್ರಗಳಿದ್ದರೂ ತೆರೆ ಮೇಲೆ ಕಾಣುವುದು ಒಂದೇ ಪಾತ್ರ: ಬೊಂಬೆ ಹೇಳುತೈತೆ ಸಿನಿಮಾದಲ್ಲಿ ಪ್ರಯೋಗ

    ತ್ರಕರ್ತ, ಕಲಾವಿದರಾಗಿ ಪರಿಚಿತರಾಗಿದ್ದ ಯತಿರಾಜ್ (Yathiraj) ಈಗ ನಿರ್ದೇಶಕರಾಗಿಯೂ ಪ್ರಸಿದ್ಧಿ. ಒಂದೇ ವರ್ಷದಲ್ಲಿ ಅವರ ಮೂರು ಸಿನಿಮಾಗಳು ಸೆಟ್ಟೇರಿದೆ.  ಆ ಪೈಕಿ “ಸೀತಮ್ಮನ ಮಗ” ಚಿತ್ರ ಬಿಡುಗಡೆಯಾಗಿದ್ದು, “ಮಾಯಾಮೃಗ” ಬಿಡುಗಡೆ ಹಂತದಲ್ಲಿದೆ. ಇದೀಗ ಅವರ ಮೂರನೇ ಚಿತ್ರ “ಬೊಂಬೆ ಹೇಳುತೈತೆ” (Bombe Helutaite) ಸದ್ಯದಲ್ಲೇ ಆರಂಭವಾಗಲಿದೆ. ಇದನ್ನೂ ಓದಿ:ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು ಅಬ್ಬರಿಸಲಿದ್ದಾರೆ ಸಂಜಯ್ ದತ್

    “ಬೊಂಬೆ ಹೇಳುತೈತೆ” ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಇದೇ ವರ್ಷ ನಾನು ನಿರ್ದೇಶಿಸುತ್ತಿರುವ ಮೂರನೇ ಚಿತ್ರವೂ ಹೌದು.  ನನ್ನ ಮಗ ಪೃಥ್ವಿರಾಜ್ ನೀಡಿದ ಎಳೆಯನ್ನಿಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಕೇವಲ ಹದಿನೈದು ದಿನಗಳಲ್ಲಿ ಈ ಚಿತ್ರಕ್ಕೆ ಚಾಲನೆ ದೊರಕಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಚನ್ನಪಟ್ಟಣದಲ್ಲಿ ನಡೆಯಲಿದೆ. ಅದರಲ್ಲೂ ವಿಶೇಷವಾಗಿ ಕಾವೇರಿ ಆರ್ಟ್ಸ್ ಅಂಡ್ ಕ್ರಾಫ್ಟ್ ಎಂಪೋರಿಯಮ್ ನಲ್ಲಿ ಚಿತ್ರೀಕರಣ ನಡೆಸಲು ಅನುಮತಿ ದೊರೆತಿರುವುದರಿಂದ ಚಿತ್ರಕ್ಕೆ ಬಲ ಬಂದಂತಾಗಿದೆ.  ಇನ್ನೂ “ಬೊಂಬೆ ಹೇಳುತೈತೆ” ಚಿತ್ರದ ಬಗ್ಗೆ ಹೇಳ ಬೇಕೆಂದರೆ, ಇಲ್ಲಿ ನಂಬಿಕೆಯ ಪ್ರಶ್ನೆಯಿದೆ. ಸರಿ-ತಪ್ಪುಗಳ ಜಿಜ್ಞಾಸೆಯಿದೆ. ಮಮತೆ – ವಾತ್ಸಲ್ಯಗಳ ವೈರುಧ್ಯವಿದೆ. ಆಸೆ – ದುರಾಸೆಗಳ ಆಳ ಅಗಲವಿದೆ. ವಾಸ್ತವ ಲೋಕದ ಪರಿಚಯಯವಿದೆ. ಅಳುವಿದೆ.. ನಗುವಿದೆ. ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಹೇಗೆ ಏಕಾಂಗಿಯಾಗುತ್ತಾನೆ? ಎಂಬುದೆ ಚಿತ್ರದ ಕೇಂದ್ರ ವಸ್ತು. ಚಿತ್ರದಲ್ಲಿ ಹಲವು ಪಾತ್ರಗಳಿದ್ದರೂ ತೆರೆಯ ಮೇಲೆ ಕಾಣುವುದು ಸಿದ್ದರಾಜು (Siddaraj) ಪಾತ್ರ ಮಾತ್ರ. ಆ ಪಾತ್ರದಲ್ಲಿ ನಾನೇ ಅಭಿನಯಿಸುತ್ತಿದ್ದೇನೆ. ಈ ಹಿಂದೆ ಒಂದೇ ಪಾತ್ರದ ಕೆಲವು ಚಿತ್ರಗಳು ಬಂದಿದೆಯಾದರೂ ನಮ್ಮ ಚಿತ್ರದ ಕಥೆ ಸಾಗುವ ರೀತಿ ಸ್ವಲ್ಪ ಭಿನ್ನ ಎನ್ನುವ ಯತಿರಾಜ್, ಚಿತ್ರತಂಡದ ಪರಿಚಯ ಮಾಡಿಸಿ, ಸಹಕಾರ  ನೀಡುತ್ತಿರುವವರಿಗೆ ಧನ್ಯವಾದ ತಿಳಿಸಿದರು. ಪುನೀತ್ ರಾಜ್‍ಕುಮಾರ್ (Puneeth Rajkumar) ಅವರ ಬೊಂಬೆಯ ಮೂಲಕ ಸಮಾಜಕ್ಕೆ  ಸಂದೇಶ ಸಾರುವ ಅಂಶ ನಮ್ಮ ಚಿತ್ರದಲ್ಲಿದ್ದು, ಅದಕ್ಕಾಗಿ ಅವರ ಪುಟ್ಟ ಪುತ್ಥಳಿ ಬೇಕಾಗಿತ್ತು. ಅದನ್ನು ಒದಗಿಸಿದ ಇಂಜಿನಿಯರ್ ಸಚಿನ್ ಅವರನ್ನು ವೇದಿಕೆಯಲ್ಲಿ ಪರಿಚಯಿಸಲಾಯಿತು.

    ಚಿತ್ರಕಥೆ, ಸಂಭಾಷಣೆ  ಬರೆಯುತ್ತಿರುವ ಶ್ರೀಕಾಂತ್, ಛಾಯಾಗ್ರಾಹಕ ವಿದ್ಯಾನಾಗೇಶ್ , ಸಹ ನಿರ್ದೇಶಕ ಅರುಣ್ ಕುಮಾರ್, ಗಾಯಕ ಸಚಿನ್ ಚಿತ್ರದ ಕುರಿತು ಮಾತನಾಡಿದರು. ಎಂ.ಡಿ.ಕೌಶಿಕ್,  ವಿ ಶಶಿ ಗೌಡ, ವಿ ಆರ್ ರೆಸಿಡೆನ್ಸಿ ಹೋಟೆಲ್ ನ ಮಾಲೀಕ ಕುಮಾರ್ ಗೌಡ , ಕಾವೇರಿ ಎಂಪೋರಿಯಂ ನ ಅಶ್ವಿನ್ ಗೌಡ ಮುಂತಾದ ಗಣ್ಯರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಮಾರುತಿ ಪ್ರೊಡಕ್ಷನ್ಸ್ ಮೂಲಕ ಮಾರುತಿ ಪ್ರಸಾದ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಎರಡೆರಡು ದೂರು ದಾಖಲು

    ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಎರಡೆರಡು ದೂರು ದಾಖಲು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎರಡೆರಡು ದೂರು ದಾಖಲಾಗಿದೆ.

    ಸಾಮಾಜಿಕ ಹೋರಾಟಗಾರ ಹನುಮೇಗೌಡ ಮತ್ತು ಜೆಡಿಎಸ್ ಕಾರ್ಯಕರ್ತ ಸಿದ್ದರಾಜು ಎಂಬವರು ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ವಿಗ್ರಹ ದಳ (ಎಸಿಬಿ)ಗೆ ದೂರು ಸಲ್ಲಿಸಿದ್ದಾರೆ. ಆಪರೇಷನ್ ಕಮಲ ಡೀಲ್ ಆಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ಯಡಿಯೂರಪ್ಪ ಜನ ಪ್ರತಿನಿಧಿಯಾಗಿದ್ದು, ಮತ್ತೊಬ್ಬನಿಗೆ ಹಣದ ಆಮಿಷವೊಡ್ಡಿದ್ದು ಭ್ರಷ್ಟಾಚಾರವಾಗಿದೆ. ಆದ್ದರಿಂದ ಅವರು ಭ್ರಷ್ಟಾಚಾರ ಮಾಡಿದಕ್ಕೆ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಶಾಸಕನ ಮಗನನ್ನು ಕಳಿಸಿಕೊಟ್ಟು ಕುತಂತ್ರ- ತಪ್ಪೊಪ್ಪಿಕೊಂಡ್ರು ಬಿಎಸ್‍ವೈ

    ಇತ್ತ ಆಪರೇಷನ್ ಕಮಲದ ವಿರುದ್ಧ ಎಸಿಬಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಶಿವನಗೌಡನಾಯಕ್, ನಾಗನಗೌಡ ಮತ್ತು ಶರಣಗೌಡ ವಿರುದ್ಧ ದೂರು ನೀಡಿದ್ದಾರೆ. ಆಪರೇಷನ್ ಕಮಲದಲ್ಲಿ ಇವರೆಲ್ಲರೂ ಭಾಗಿಯಾಗಿದ್ದಾರೆ. ಹೀಗಾಗಿ ಎಲ್ಲರ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

    ಫೆಬ್ರವರಿ 8 ರಂದು ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಲಾಗಿತ್ತು. ಅಂದಿನ ದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪನವರು ಶಾಸಕ ನಾಗನಗೌಡ ಪ್ರುತ್ರ ಶರಣಗೌಡರಿಗೆ ಹಣದ ಆಮಿಷ ಒಡ್ಡಿದ್ದ ಆಡಿಯೋವನ್ನು ಬಿಡುಗಡೆ ಮಾಡಿದ್ದರು. ಮೊದಲಿಗೆ ಅದು ಸತ್ಯಕ್ಕೆ ದೂರವಾದ ಮಾತು, ಮಿಮಿಕ್ರಿ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಆದರೆ ತದನಂತರ ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕೆಲ ಸತ್ಯಗಳನ್ನು ಮರೆ ಮಾಚಿದ್ದಾರೆ. ಕುಮಾರಸ್ವಾಮಿ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡ್ತಿದ್ದಾರೆ ಎಂದು ಹೇಳುವ ಮೂಲಕ ಬಿಎಸ್ ವೈ ಆಪರೇಷನ್ ಕಮಲ ನಡೆಸುತ್ತಿರುವ ಸತ್ಯವನ್ನು ಒಪ್ಪಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv