Tag: ಸಿದ್ದಗಂಗಾ ಸ್ವಾಮೀಜಿ

  • ಕೆಎನ್ ರಾಜಣ್ಣರನ್ನು ವಜಾಗೊಳಿಸಿದಕ್ಕೆ ಸಿದ್ದಗಂಗಾ ಶ್ರೀ ಬೇಸರ

    ಕೆಎನ್ ರಾಜಣ್ಣರನ್ನು ವಜಾಗೊಳಿಸಿದಕ್ಕೆ ಸಿದ್ದಗಂಗಾ ಶ್ರೀ ಬೇಸರ

    – ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಾಯ

    ತುಮಕೂರು: ಮಾಜಿ ಸಚಿವ ಕೆಎನ್ ರಾಜಣ್ಣರನ್ನು (KN Rajanna) ವಜಾಗೊಳಿಸಿರೋದಕ್ಕೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮಿಜಿಗಳು (Siddalinga Swamiji)  ಬೇಸರ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮದವರ ಜೊತೆ ಮಾತನಾಡಿದ ಶ್ರೀಗಳು, ರಾಜಣ್ಣರ ಅವರು ಸಹಕಾರಿ ಧುರೀಣರು, ಸಹಕಾರಿ ಕ್ಷೇತ್ರಕ್ಕೆ ಅವರದ್ದೇ ಕೊಡುಗೆ ಇದೆ. ಸಹಕಾರಿ ಮಹಾಮಂಡಲದ ಅಧ್ಯಕ್ಷರಾಗಿದ್ದ ಅವರು, ಬಡವರಿಗೆ, ರೈತರಿಗೆ ಸಹಾಯ ಮಾಡಲೆಂದೇ ಸಹಕಾರಿ ಖಾತೆ ಪಡೆದಿದ್ದರು. ಅದರಿಂದ ಜನರಿಗೆ ಅನುಕೂಲ ಕೂಡ ಮಾಡುತಿದ್ದರು. ಈಗ ಇದ್ದಕ್ಕಿದ್ದ ಹಾಗೆ ಸಂಪುಟದಿಂದ ಕೈಬಿಟ್ಟಿದ್ದಾರೆ ಅನ್ನೋ ಸುದ್ದಿ ಕೇಳಿ ಆಘಾತವಾಗಿದೆ ಎಂದು ಬೇಸರಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಸಿಎಂ ರಾಜೀನಾಮೆ ಕೊಡಬೇಕು: ಛಲವಾದಿ ನಾರಾಯಣಸ್ವಾಮಿ

    ಯಾವಾಗಲೂ ರಾಜಣ್ಣ ನೇರ ನಿಷ್ಠುರವಾಗಿ ಮಾತನಾಡುವ ವ್ಯಕ್ತಿ. ಅವರ ಮನಸ್ಸಿನಲ್ಲಿ ಕೆಡುಕಿಲ್ಲ. ಅಂಥಹ ವ್ಯಕ್ತಿಯನ್ನು ಸಂಪುಟದಿಂದ ಕೈ ಬಿಟ್ಟಿರೋದು ನಿಜಕ್ಕೂ ಯೋಚಿಸಬೇಕಾದ ವಿಚಾರ ಎಂದು ಬೇಸರಿಸಿದರು. ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ ಎಂಬ ಭರವಸೆಯನ್ನು ಶ್ರೀಗಳು ವ್ಯಕ್ತಪಡಿಸಿದ್ದಾರೆ. ಅವರಿಗೆ ಮತ್ತೊಂದು ಅವಕಾಶ ಕೊಟ್ಟರೆ ಪಕ್ಷಕ್ಕೆ ಹಾಗೂ ಜನರಿಗೆ ಒಳ್ಳೆದಾಗುತ್ತದೆ. ಸಿಎಂ ಈ ವಿಚಾರದಲ್ಲಿ ಗಮನಹರಿಸಿ ಹೈಕಮಾಂಡ್‌ಗೆ ಮನವೊಲಿಸಿ ಮತ್ತೆ ರಾಜಣ್ಣರನ್ನು ಸಂಪುಟ ಸೇರಿಸಿಕೊಳ್ಳಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ – ತುರ್ತು ಭೂಸ್ಪರ್ಶ; ತಪ್ಪಿದ ದುರಂತ

  • ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿದ್ದು ಸತ್ಯ: ಸಿದ್ದಗಂಗಾ ಶ್ರೀ

    ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿದ್ದು ಸತ್ಯ: ಸಿದ್ದಗಂಗಾ ಶ್ರೀ

    ದಾವಣಗೆರೆ: ಇತ್ತೀಚಿಗೆ ಪಠ್ಯಪುಸ್ತಕ ವಿವಾದ ಬಹಳಷ್ಟು ತಿರುವು ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣದಿಂದ ಇಂತಹ ವಾತಾವರಣ ಉಂಟಾಗಬಾರದು ಎಂದು ದಾವಣಗೆರೆಯಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು.

    ಪಠ್ಯ ಪುಸ್ತಕ ವಿಚಾರವಾಗಿ ಈಗ ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ಇದರಲ್ಲಿ ಯಾವುದೇ ಶಿಕ್ಷಣ ಇದ್ದರು ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಆದರೆ ಇವತ್ತಿನ ಪಠ್ಯದಲ್ಲಿ ನೈತಿಕ ಶಿಕ್ಷಣದ ಕೊರತೆ ಜಾಸ್ತಿ ಕಾಣುತ್ತಿದೆ. ಅದರ ಜೊತೆ ಮೂಲ ವಿಚಾರಗಳನ್ನು ತಿದ್ದದೇ ವಾಸ್ತವ ವಿಚಾರಗಳನ್ನು ಪಠ್ಯದಲ್ಲಿ ನೀಡಬೇಕು. ಈಗಾಗಲೇ ಪಠ್ಯ ಪುಸ್ತಕ ರಚನಾ ಸಮಿತಿ, ತಜ್ಞರ ಸಮಿತಿ ಅದಕ್ಕೆ ಮಾರ್ಗದರ್ಶನ ನೀಡುತ್ತಿದೆ. ಈ ವಿವಾದ ಬಗೆಹರಿದು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು ಜೊತೆಗೆ ನೈತಿಕ ಪ್ರಜ್ಞೆ ಜಾಗೃತಿಗೊಳಿಸುವ, ನೈತಿಕ ಮೌಲ್ಯಗಳನ್ನು ಪಠ್ಯ ಹೊಂದಿರಬೇಕು ಎಂದರು. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ ಫೈಟ್: ಗುರು, ಶಿಷ್ಯರ ಕಾಳಗದಲ್ಲಿ ಗೆದ್ದು ಬೀಗಿದ ಸಿದ್ದರಾಮಯ್ಯ – ಹೆಚ್‍ಡಿಡಿಗೆ ಹಿನ್ನಡೆ

    ಬಸವಣ್ಣನವರ ವಚನಗಳನ್ನು ತಿದ್ದುವುದಕ್ಕೆ ಯಾರಿಂದಲು ಸಾಧ್ಯವಿಲ್ಲ. ಅದನ್ನು ಏನಾದರು ತಿದ್ದಿದರೆ ಅವರಿಗೆ ಅಪಚಾರ ಮಾಡಿದಂತಾಗುತ್ತದೆ. ಬಸವಣ್ಣನವರು ಏನು ಹೇಳಿದ್ದಾರೋ ವಾಸ್ತವ ವಿಚಾರ ಪ್ರಕಟವಾಗಬೇಕು. ಈ ಸಮಾಜಕ್ಕೆ ಬಸವಣ್ಣನವರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಮಾಜಿಕವಾಗಿ ಆರ್ಥಿಕವಾಗಿ ಬಹುದೊಡ್ಡ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಲೇ ಬಂದಿದ್ದಾರೆ. ಒಬ್ಬರಿಗೆ ಇಬ್ಬರಿಗೆ ಅಲ್ಲ, ಬದಲಿಗೆ ಎಲ್ಲರಿಗೂ ಬೇಕಾದ ವಿಚಾರಗಳನ್ನು ಬಸವಣ್ಣ ನೀಡಿದ್ದಾರೆ. ಅವರ ವಚನಗಳೇ ನಮಗೆ ಆಧಾರ. ಅವುಗಳನ್ನು ತಿದ್ದದೇ ಹೇಗಿದೆಯೋ ಹಾಗೆ ಕೊಡಬೇಕು ಎಂದರು. ಇದನ್ನೂ ಓದಿ: ಹೆಲಿಕಾಪ್ಟರ್‌ನಲ್ಲಿ ಸುತ್ತಿದ ರೈತರು, ಕುರಿಗಾಹಿಗಳು

    ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿ, ಹೊರಗೆ ಬಂದಿದ್ದು ಸತ್ಯ. ಆ ವಾಸ್ತವ ವಿಚಾರವನ್ನು ಇಂದಿನ ಮಕ್ಕಳಿಗೆ ತಿಳಿಸುವ ದೃಷ್ಠಿಯಿಂದ ಪ್ರಕಟಗೊಳಿಸುವುದು ಒಳ್ಳೆಯದು. ಮುಖ್ಯಮಂತ್ರಿಗಳು ಹೇಳಿದ್ದಾರೆ, ಶಿಕ್ಷಣ ಸಚಿವರು ವರದಿ ಕೊಟ್ಟ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವೀರಶೈವ ಪಂಥ ಸ್ಥಾಪನೆ ಬಸವ ಧರ್ಮ ವಿಚಾರವಾಗಿ ಗೊಂದಲ ಇದೆ. ಬಸವಣ್ಣ ಒಬ್ಬ ಮಾನವತವಾದಿ. ಮಾನವ ಬದುಕಿಗೆ ಕೊಟ್ಟಿರುವುದು ಬಹಳ ಮುಖ್ಯ ಎಂದರು.

  • ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವಂತೆ ಶಿಕ್ಷಣ ಸಚಿವರಿಗೆ ಸಿದ್ದಗಂಗಾ ಶ್ರೀ ಸಲಹೆ

    ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವಂತೆ ಶಿಕ್ಷಣ ಸಚಿವರಿಗೆ ಸಿದ್ದಗಂಗಾ ಶ್ರೀ ಸಲಹೆ

    ತುಮಕೂರು: ರೈತರಿಗೆ, ಕಾರ್ಮಿಕರಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಹಾಗೆಯೇ ಖಾಸಗಿ ಶಾಲೆಯ ಸಿಬ್ಬಂದಿಗೂ ಪರಿಹಾರ ಕೊಡಬೇಕು ಎಂದು ಶಿಕ್ಷಣ ಸಚಿವರಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕೇಳಿಕೊಂಡಿದ್ದಾರೆ.

    ನಗರದಲ್ಲಿ ಮಾತನಾಡುತ್ತಾ ಖಾಸಗಿ ಸಂಸ್ಥೆಗಳ ಮೇಲೆ ಹೇರಿರುವ ನಿಯಮ ಸಡಿಲಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ರಾಜ್ಯ ಸರ್ಕಾರದ ಜೊತೆಯಲ್ಲಿ ಕೆಲಸ ಮಾಡುತ್ತಿವೆ. ನಾಡಿನ ಶೈಕ್ಷಣಿಕ ಪ್ರಗತಿಗೆ ಖಾಸಗಿ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದರು.

    ಕೊರೊನಾ ಬಂದ ಬಳಿಕ ಎಲ್ಲಾ ಕ್ಷೇತ್ರಗಳು ಸ್ಥಗಿತಗೊಂಡಿವೆ. ಶಿಕ್ಷಣ ಕ್ಷೇತ್ರ ಕೂಡ ಸ್ಥಗಿತಗೊಂಡಿದೆ. ಖಾಸಗಿ ಸಂಸ್ಥೆಗಳ ಸಿಬ್ಬಂದಿಗೆ ವೇತನ ಕೊಡುವುದು ಕಷ್ಟವಾಗಿದೆ. ರೈತರಿಗೆ ಕಾರ್ಮಿಕರಿಗೆ ಪರಿಹಾರ ನೀಡಲಾಗಿದೆ. ಖಾಸಗಿ ಶಾಲೆಯ ಸಿಬ್ಬಂದಿಗೂ ಪರಿಹಾರ ಕೊಡಬೇಕು. ಸರ್ಕಾರ ಈ ಬಗ್ಗೆ ಗಮನಹರಿಸುತ್ತೆ ಅನಿಸುತ್ತೆ ಅಂತ ಭಾವಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಖಾಸಗಿ ಸಂಸ್ಥೆಗಳ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಲಾಗಿದೆ. ಈ ನಿಯಮ ಅಳವಡಿಕೆ ಕಷ್ಟಸಾಧ್ಯವಾಗಿದೆ. ಎಲ್ಲೋ ಒಂದು ಕಡೆ ನಡೆದ ಸಣ್ಣಪುಟ್ಟ ಘಟನೆಗಳನ್ನು ಎಲ್ಲಾ ಕಡೆ ಅನ್ವಯಿಸುವುದು ಸರಿಯಲ್ಲ. ಈ ನಿಯಮವನ್ನು ಸಡಿಲಗೊಳಿಸಬೇಕು. ಖಾಸಗಿ ಸಂಸ್ಥೆಗಳು ಸಾಲ ಮಾಡಿಕೊಂಡಿವೆ. ಬ್ಯಾಂಕ್ ಸಾಲ ಕಟ್ಟಲು ಕಾಲಾವಕಾಶ ನೀಡಬೇಕು. ಖಾಸಗಿ ಸಂಸ್ಥೆಗಳು ಹಲವು ಬೇಡಿಕೆನ್ನಿಟ್ಟುಕೊಂಡು ಹೋರಾಟ ಮಾಡುತ್ತಿವೆ ಎಂದು ಹೇಳಿದರು.

    ನಿಯಮಗಳನ್ನು ಸಡಿಲಗೊಳಿಸಿ ಮಾನ್ಯತೆ ನವೀಕರಣ ಮಾಡಬೇಕು. ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಶಿಕ್ಷಣ ಸಚಿವರು ಈ ವಿಚಾರದ ಬಗ್ಗೆ ಗಮನ ಹರಿಸಬೇಕು. ಒಟ್ಟಿನಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ವಾಮೀಜಿಗಳು ಸುರೇಶ್ ಕುಮಾರ್ ಅವರಿಗೆ ಸಲಹೆ ನಿಡಿದರು.

  • ಸಿದ್ದಗಂಗಾ ಶ್ರೀ ಅಂತಿಮ ದರ್ಶನ ಪಡೆದು ಮರಳುವಾಗ ಅಪಘಾತ – ಓರ್ವ ಸಾವು

    ಸಿದ್ದಗಂಗಾ ಶ್ರೀ ಅಂತಿಮ ದರ್ಶನ ಪಡೆದು ಮರಳುವಾಗ ಅಪಘಾತ – ಓರ್ವ ಸಾವು

    ಚಿಕ್ಕಮಗಳೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದು ಹಿಂದಿರುಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗೆದ್ಲೆಹಳ್ಳಿ ಬಳಿ ನಡೆದಿದೆ.

    ಪರಮೇಶ್ವರಪ್ಪ(40) ಸ್ಥಳದಲ್ಲೇ ಮೃತ ವ್ಯಕ್ತಿ. ಕಡೂರಿನ ಮಲ್ಲೇಶ್ವರ ಗ್ರಾಮದ ಏಳು ಮಂದಿ ಬೊಲೆರೋ ಮಾಡಿಕೊಂಡು ಶ್ರೀಗಳ ಅಂತಿಮ ದರ್ಶನಕ್ಕೆಂದು ಸೋಮವಾರ ಮಧ್ಯಾಹ್ನ ತೆರಳಿದ್ದರು. ಸೋಮವಾರ ರಾತ್ರಿಯೇ ದರ್ಶನ ಮಾಡಿಕೊಂಡು ವಾಪಸ್ ಮರಳುವಾಗ ಈ ಅಪಘಾತ ಸಂಭವಿಸಿದೆ.

    ಈ ಘಟನೆಯಲ್ಲಿ ಪರಮೇಶ್ವರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಡ್ರೈವರ್ ಸೇರಿ ಆರು ಮಂದಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಕಡೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವರು ಇದ್ದಾನೆ ಅನ್ನೋದಕ್ಕೆ ನಡೆದಾಡುವ ದೇವರೇ ಸಾಕ್ಷಿ: ವಿ ಸೋಮಣ್ಣ

    ದೇವರು ಇದ್ದಾನೆ ಅನ್ನೋದಕ್ಕೆ ನಡೆದಾಡುವ ದೇವರೇ ಸಾಕ್ಷಿ: ವಿ ಸೋಮಣ್ಣ

    ಬೆಂಗಳೂರು: ಭಗವಂತನ ಕೃಪೆಯಿಂದಾಗಿ ನಡೆದಾಡುವ ದೇವರು ಆರೋಗ್ಯವಾಗಿದ್ದಾರೆ. ಗುರುಗಳ ಆರೋಗ್ಯದ ಬಗ್ಗೆ ನಿಗಾವಹಿಸಿ ರಾಜ್ಯ ಹಾಗೂ ದೇಶದ ಜನ ನೋಡಲು ಕಾರಣವಾದ ಆಸ್ಪತ್ರೆಯ ವೈದ್ಯರಿಗೆ ಮಾಜಿ ಸಚಿವ, ಶಾಸಕ ವಿ ಸೋಮಣ್ಣ ಧನ್ಯವಾದ ತಿಳಿಸಿದ್ದಾರೆ.

    ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ಹಾಗೂ ವೈದ್ಯರ ತಂಡ ಯಶಸ್ವಿ ತಪಾಸಣೆ ನಡೆಸಿದ್ದಾರೆ. ಎರಡು ಸ್ಟಂಟ್ ಗಳನ್ನು ಅಳವಡಿಸಿದ್ದಾರೆ. ಸದ್ಯ ಗುರುಗಳು ಲವಲವಿಕೆಯಿಂದ ಇದ್ದಾರೆ ಅಂದ್ರು.

    ದೇವರು ಇದ್ದಾನೆ ಅನ್ನೋದಕ್ಕೆ ಶಿವಕುಮಾರ ಸ್ವಾಮೀಜಿಗಳು ಒಂದು ದೊಡ್ಡ ಉದಾಹರಣೆಯಾಗಿದ್ದಾರೆ. ಸದ್ಯ ಶ್ರೀಗಳ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಈ ಮೂಲಕ ಭಕ್ತರ ಕಳವಳ ಬಗೆಹರಿದಿದೆ. ಗುರುಗಳು ಮತ್ತೆ ಯಥಾಸ್ಥಿತಿಯಲ್ಲಿ ಪೂಜಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕಾರಣರಾದ ಎಲ್ಲಾ ವೈದ್ಯರಿಗೆ ಇದೇ ಸಂದರ್ಭದಲ್ಲಿ ಧನ್ಯವಾದ ಸಮರ್ಪಿಸಿದ್ರು.

    ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ಮಾತನಾಡಿ, ಪಿತ್ತಕೋಶ ಮತ್ತು ಪಿತ್ತನಾಳದಲ್ಲಿ ಸೋಂಕು ಉಂಟಾಗಿತ್ತು. ಎಂಡೋಸ್ಕೋಪಿ ಮೂಲಕ ಹೊಸ ಎರಡು ಸ್ಟಂಟ್ ಹಾಕಿದ್ದೇವೆ. ಈಗ ಸೋಂಕು ಕಡಿಮೆಯಾಗಿದೆ. ಒಂದೂವರೆ ಗಂಟೆಯ ಈ ಕಾರ್ಯದ ವೇಳೆ ಅನಸ್ತೇಶಿಯಾದಲ್ಲಿ ಸ್ವಾಮೀಜಿ ಇದ್ರು. ಸಾಮಾನ್ಯವಾಗಿ ಇಂಥಾ ಸಂದರ್ಭಗಳಲ್ಲಿ ಪ್ರೊಸೀಜರ್ ಆದ್ಮೇಲೆ ಐಸಿಯುಗೆ ಶಿಫ್ಟ್ ಮಾಡ್ತೀವಿ. ಆದ್ರೆ ಸ್ವಾಮೀಜಿ ಆರಾಮಾಗಿದ್ದಾರೆ. ಸದ್ಯ ವಾರ್ಡಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಗಾಲ್ ಬ್ಲಾಡರ್ ಇನ್‍ಫೆಕ್ಷನ್ ಇದ್ದಾಗ ಕೆಲವೊಮ್ಮೆ ಮತ್ತೆ ಜ್ವರ ಬರುವ ಸಾಧ್ಯತೆ ಇರುತ್ತೆ. ಹಾಗಾಗಿ ಸ್ವಾಮೀಜಿಯನ್ನು ಆಸ್ಪತ್ರೆಯಲ್ಲೇ ಅಬ್ಸರ್ವಶೇನ್ ಇರಿಸಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದೇವೆ ಅಂತ ತಿಳಿಸಿದ್ರು.

    ಶ್ರೀಗಳು ಆರಾಮಾಗಿ, ಆರೋಗ್ಯವಾಗಿದ್ದಾರೆ. ಏನೂ ಸಮಸ್ಯೆಯಿಲ್ಲ. ವಿಶ್ರಾಂತಿ ಪಡೆಯುತ್ತಿದ್ದು, ಆದಷ್ಟು ಬೇಗ ಗುಣಮುಖರಾಗಲಿ. ಇಂದು ಸಂಜೆ ಇಲ್ಲ ನಾಳೆ ಡಿಸ್ಚಾರ್ಜ್ ಆಗ್ತಾರೆ ಅಂತ ಬಿಬಿಎಂಪಿ ಮೇಯರ್ ಗಂಗಾಬಿಕೆ ಹೇಳಿದ್ರು.

    ಇದೇ ಸಂದರ್ಭದಲ್ಲಿ ಬಿಜಿಎಸ್ ಆಸ್ಪತ್ರೆಗೆ ಆದಿ ಚುಂಚನಗಿರಿ ಮಠದ ನಿರ್ಮಾಲಾನಂದ ಸ್ವಾಮೀಜಿ ಆಗಮಿಸಿ, ಶ್ರೀಗಳ ಆರೋಗ್ಯ ವಿಚಾರಿಸಿದ್ರು. ಶನಿವಾರ ರಾತ್ರಿ ಡಾ. ರವೀಂದ್ರ ಅವರಿಂದ ಶ್ರೀ ಗಳಿಗೆ ಮೂರು ಭಾರಿ ಜನರಲ್ ಚೆಕ್ ಅಪ್ ನಡೆಸಲಾಗಿತ್ತು. ವೈದ್ಯರು ನಿನ್ನೆಯಿಂದ ರಕ್ತಪರೀಕ್ಷೆ, ಅಲ್ಟ್ರಾಸೌಂಡ್, ಶ್ವಾಸಕೋಶ ಸಂಬಂಧಿ ಕೆಲ ಪರೀಕ್ಷೆ ನಡೆಸಿದ್ದಾರೆ. ಇಂದು ಬೆಳಗ್ಗೆ 5.30ಕ್ಕೆ ಎದ್ದಿರುವ ಶ್ರೀಗಳು, ಎಂದಿನಂತೆ ಲವಲವಿಕೆಯಿಂದ ಪೂಜೆ ಮುಗಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಜ್ಞಾಪಕ ಶಕ್ತಿ ಕೆಲವರಿಂದ ದುರುಪಯೋಗ: ಮಾತೆ ಮಹಾದೇವಿ

    ಸಿದ್ದಗಂಗಾ ಶ್ರೀಗಳ ಜ್ಞಾಪಕ ಶಕ್ತಿ ಕೆಲವರಿಂದ ದುರುಪಯೋಗ: ಮಾತೆ ಮಹಾದೇವಿ

    ಬಾಗಲಕೋಟೆ: ಸಿದ್ದಗಂಗಾ ಶ್ರೀಗಳಿಗೆ ವಯೋಮಾನದ ದೃಷ್ಟಿಯಿಂದ ನೆನಪಿನ ಶಕ್ತಿ ಉಳಿದಿಲ್ಲ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿಕೆ ನೀಡಿದ್ದಾರೆ.

    ಸ್ವಾಮೀಜಿಗಳ ಜ್ಞಾಪಕ ಶಕ್ತಿಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಿದ್ದಗಂಗಾ ಶ್ರೀಗಳ ಪಕ್ಕ ಇರುವ ವೀರಶೈವ ಮಹಾಸಭಾದವರು ಒತ್ತಡ ತಂದಿದ್ದಾರೆ. ಪೂಜ್ಯ ಶ್ರೀಗಳ ಸಹಿಮಾತ್ರ ಪಡೆದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಹಾಗೊಂದು ವೇಳೆ ಶ್ರೀಗಳೇ ಈ ರೀತಿ ಹೇಳಿಕೆ ನೀಡಿದ್ದರೆ ಅದನ್ನು ನಾವು ಒಪ್ಪುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸುತ್ತೇವೆ. ಹೀಗಾಗಿ ವೀರಶೈವ ಮಹಾಸಭಾದಂತೆ ನಡೆಯಿರಿ ಎಂದು ಯಡಿಯೂರಪ್ಪ ಮತ್ತು ಸೋಮಣ್ಣ ಮಠದ ಕಡೆಯವರಿಗೆ ಒತ್ತಡ ಹಾಕಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ ಎಂದು ಆರೋಪಿಸಿದರು.

    ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರ ಏಳಿಗೆಯನ್ನ ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ ವಿಚಾರವಾಗಿ ಕಲಬುರಗಿ ಹಾಗೂ ಹೈದರಾಬಾದ್ ನಲ್ಲಿಯೂ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಿದ್ದೇವೆ ಎಂದು ಮಾತೆ ಮಹಾದೇವಿ ಹೇಳಿದರು.