Tag: ಸಿತಾರಾ

  • ಶಬರಿಮಲೆಯಲ್ಲಿ ಕಾಣಿಸಿಕೊಂಡ ಪ್ರಸಿದ್ಧ ನಟಿ ಸಿತಾರಾ

    ಶಬರಿಮಲೆಯಲ್ಲಿ ಕಾಣಿಸಿಕೊಂಡ ಪ್ರಸಿದ್ಧ ನಟಿ ಸಿತಾರಾ

    ಹಾಲುಂಡ ತವರು ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಸಿತಾರಾ (Sitara), ಹಲವು ವರ್ಷಗಳಿಂದ ಚಿತ್ರೋದ್ಯಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರು ದೇಶದಲ್ಲಿ ಇದ್ದರಾ ಅಥವಾ ವಿದೇಶದಲ್ಲಿ ನೆಲೆಯೂರಿದ್ದರಾ ಎನ್ನುವ ಕುರಿತೂ ಮಾಹಿತಿ ಇರಲಿಲ್ಲ. ಇದೀಗ ಏಕಾಏಕಿ ಶಬರಿಮಲೆಯಲ್ಲಿ (Sabarimala) ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

    ಚಿರಂಜೀವಿ ಸರ್ಜಾ ನಟನೆಯ ‘ಅಮ್ಮ ಐ ಲವ್ ಯೂ’ ಚಿತ್ರದ ನಂತರ ಬಹುತೇಕ ಚಿತ್ರರಂಗದಿಂದಲೇ ದೂರವಿದ್ದ ಸಿತಾರಾಗೆ ಶಬರಿಮಲೆಗೆ ಹೋಗಬೇಕು ಎನ್ನುವ ಸಂಕಲ್ಪವಿತ್ತು ಎಂದು ಹೇಳಲಾಗುತ್ತಿದೆ. ಅದನ್ನು ಈಗ ಪೂರೈಸಿದ್ದಾರೆ. ಹಲವು ಮಹಿಳೆಯರ ಜೊತೆ ಶಬರಿಮಲೆಗೆ ಬಂದಿದ್ದ ಸಿತಾರಾ ಅಯ್ಯಪ್ಪನ ದರ್ಶನ (Darshana) ಪಡೆದಿದ್ದಾರೆ. ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ

    ಕಾರ್ತಿಕ ಮಾಸದ ಆರಂಭದ ದಿನಗಳಲ್ಲಿ ಶಬರಿಮಲೆ ಬಾಗಿಲು ತೆರೆದಿರುತ್ತದೆ. ಹಾಗಾಗಿ ಇದೇ ಸಂದರ್ಭದಲ್ಲಿ ಸಿತಾರಾ ಅಯ್ಯಪ್ಪನ (Ayyappa) ದರ್ಶನಕ್ಕೆ ಆಗಮಿಸಿದ್ದಾರೆ. ಕುಟುಂಬದ ಸದಸ್ಯರು ಮತ್ತು ಆಪ್ತರೊಂದಿಗೆ ಶಬರಿಮಲೆಗೆ ಬಂದಿದ್ದ ಅವರು, ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಆ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

     

    ಕಣ್ಣೀರಿನ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದರು ಸಿತಾರಾ. ಅದರಲ್ಲೂ ಹಾಲುಂಡ ತವರು ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಕನ್ನಡದಲ್ಲೇ ಅವರು ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ವಿಷ್ಣುವರ್ಧನ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡ ಹೆಗ್ಗಳಿಕೆ ಅವರದ್ದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊದಲ ಸಂಭಾವನೆಯನ್ನ ಚಾರಿಟಿಗೆ ನೀಡಿದ ಮಹೇಶ್ ಬಾಬು ಪುತ್ರಿ

    ಮೊದಲ ಸಂಭಾವನೆಯನ್ನ ಚಾರಿಟಿಗೆ ನೀಡಿದ ಮಹೇಶ್ ಬಾಬು ಪುತ್ರಿ

    ಟಾಲಿವುಡ್ (Tollywood)  ಸ್ಟಾರ್ ನಟ ಮಹೇಶ್ ಬಾಬು (Mahesh Babu) ಪುತ್ರಿ ಸಿತಾರಾ (Sitara) ಅಮೆರಿಕಾದ ಪ್ರತಿಷ್ಠಿತ ಟೈಮ್ಸ್ ಸ್ವೇರ್‌ನಲ್ಲಿ ಸಿತಾರಾ ರಾಯಭಾರಿ ಆಗಿ ಮಿಂಚಿದ್ದರು. ಅದಕ್ಕೆ ಮೊದಲ ಆ್ಯಡ್‌ಶೂಟ್‌ನಲ್ಲೇ ಸಿತಾರಾ ಕೋಟಿ ಕೋಟಿ ಸಂಭಾವನೆ ಪಡೆದರು. ಇದೀಗ ತಮ್ಮ ಬಂದ ಸಂಭಾವನೆಯನ್ನ ಚಾರಿಟಿಗೆ ದೇಣಿಗೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

    ಚಿಕ್ಕವಯಸ್ಸಿನಲ್ಲೇ ಸಿತಾರಾ ಅವರು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. 11ನೇ ವಯಸ್ಸಿಗೆ ಜಾಹೀರಾತು ಪ್ರಪಂಚದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿರೋದು ಅಭಿಮಾನಿಗಳ ಗಮನ ಸೆಳೆದಿದೆ. ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿನ ಟೈಮ್ಸ್ ಸ್ವೈರ್‌ನಲ್ಲಿ ಜ್ಯುವೆಲ್ಲರಿ ಬ್ರ್ಯಾಂಡ್‌ಗೆ ರಾಯಭಾರಿಯಾಗಿ ಕಾಣಿಸಿಕೊಳ್ಳಲು 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಂಭಾವನೆಯನ್ನ ಪಡೆದಿದ್ದರು.

    ಈ ಸಂಭಾವೆಯನ್ನ ಚಾರಿಟಿ (Charity) ಒಂದಕ್ಕೆ ದೇಣಿಗೆಯಾಗಿ ಮಹೇಶ್ ಬಾಬು ಪುತ್ರಿ ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಸಿತಾರಾ ಈ ರೀತಿಯ ಹೆಜ್ಜೆ ಇಟ್ಟಿರೋದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಸಿತಾರಾ ನಡೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಇದನ್ನೂ ಓದಿ:‘ಹರಿಕಥೆ ಅಲ್ಲ ಗಿರಿ ಕಥೆ’ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಚ ಮದುವೆ ಫೋಟೋಸ್

    ಜಾಹೀರಾತಿನಲ್ಲಿ ಮಿಂಚಿದ್ದು ಆಯ್ತು. ನಟನೆಗೆ ಬರುತ್ತಾರಾ ಸಿತಾರಾ ಎಂಬ ಪ್ರಶ್ನೆಗೆ ಇದೀಗ ನಟಿ ನಮ್ರತಾ ಅವರು ಉತ್ತರಿಸಿದ್ದಾರೆ. ಸದ್ಯಕ್ಕೆ ಅವಳಿಗೆ ಉತ್ತಮ ಎನಿಸುವಂತಹ ಪಾತ್ರ ಸಿಕ್ಕರೆ ಮಾಡುತ್ತಾರೆ ಎಂದಿದ್ದಾರೆ. ಆದರೆ ಮೂಲಗಳ ಪ್ರಕಾರ ಸಿತಾರಾ, ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಸೂಕ್ತ ತಯಾರಿ ಮಾಡ್ತಿದ್ದಾರಂತೆ. ಮುಂದಿನ ದಿನಗಳಲ್ಲಿ ಉತ್ತಮ ಸಿನಿಮಾಗಳು ಅರಸಿ ಬಂದರೆ ಸಿನಿಮಾದಲ್ಲಿ ಸಿತಾರಾ ನಟಿಸುತ್ತಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೈಮ್ಸ್‌ ಸ್ಕ್ವೇರ್‌ನಲ್ಲಿ ಮಿಂಚಿದ ಸಿತಾರಾ- ಮಗಳನ್ನು ನೋಡಿ ಮಹೇಶ್ ಬಾಬು ಭಾವುಕ

    ಟೈಮ್ಸ್‌ ಸ್ಕ್ವೇರ್‌ನಲ್ಲಿ ಮಿಂಚಿದ ಸಿತಾರಾ- ಮಗಳನ್ನು ನೋಡಿ ಮಹೇಶ್ ಬಾಬು ಭಾವುಕ

    ಟಾಲಿವುಡ್‌ನ (Tollywood) ಭವಿಷ್ಯದ ನಾಯಕಿ ಎಂದೇ ಬಿಂಬಿತವಾಗುತ್ತಿರುವ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಪುತ್ರಿ ಸಿತಾರಾ ಅವರು ಸುದ್ದಿಯಲ್ಲಿದ್ದಾರೆ. ಅಂತರಾಷ್ಟಿçಯ ಮಟ್ಟದಲ್ಲಿ ಸಿತಾರಾ (Sitara) ಸದ್ದು ಮಾಡ್ತಿದ್ದಾರೆ. ಅಮೆರಿಕದ ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾಯಭಾರಿಯಾಗಿ ಸಿತಾರಾ ಗಮನ ಸೆಳೆಯುತ್ತಿದ್ದಾರೆ. ಮಗಳ ಸಾಧನೆ ನೋಡಿ ಮಹೇಶ್ ಬಾಬು ಭಾವುಕರಾಗಿದ್ದಾರೆ.

    ಮಹೇಶ್ ಬಾಬು- ನಟಿ ನಮೃತಾ ದಂಪತಿ ಕುಟುಂಬವೇ ಕಲಾವಿದರ ಕುಟುಂಬವಾಗಿದ್ದು, ಸಿತಾರಾಗೆ ಈಗಲೇ ಬಣ್ಣದ ಲೋಕದ ಗಾಳಿ ಬೀಸಿದೆ. ಸಿನಿಮಾ ನಟ- ನಟಿಯರ ಸಂದರ್ಶನ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮುದ್ದು ಮೊಗದ ಸುಂದರಿ ಸಿತಾರಾಗೆ ಒಂದು ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಹಾಗಾಗಿ ಯುವ ಪ್ರತಿಭೆ ಸಿತಾರಾ ಬಿಗ್ ಆಫರ್ ಸಿಕ್ಕಿದೆ. ಇದನ್ನೂ ಓದಿ:ಕೆಜಿಎಫ್ ತಾತ ಕೊನೆ ಸಿನಿಮಾ: ಜುಲೈ 07ಕ್ಕೆ ನ್ಯಾನೋ ನಾರಾಯಣಪ್ಪ ತೆರೆಗೆ

    ಅಮೆರಿಕದ ಪ್ರತಿಷ್ಟಿತ ಟೈಮ್ಸ್‌ ಸ್ಕ್ವೇರ್‌ನಲ್ಲಿ ಬ್ರ್ಯಾಂಡ್ ಒಂದರ ರಾಯಭಾರಿಯಾಗಿ ಸಿತಾರಾ ಮಿಂಚ್ತಿದ್ದಾರೆ. ಈ ಕುರಿತ ಫೋಟೋಗಳು ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾರಾಜಿಸುತ್ತಿದೆ. ಸೀರೆ ಮತ್ತು ಲೆಹೆಂಗಾದಲ್ಲಿ ಯುವರಾಣಿಯಂತೆ ಸಿತಾರಾ ಕಂಗೊಳಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಿತಾರಾ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ಒಟ್ನಲ್ಲಿ ಸಿತಾರಾ ಲುಕ್, ನಡೆ-ನುಡಿ ನೋಡಿ ಸಿನಿಪಂಡಿತರು ಪ್ಯೂಚರ್ ಟಾಲಿವುಡ್‌ನ ಸ್ಟಾರ್ ಎಂದೇ ಕರೆಯುತ್ತಿದ್ದಾರೆ.

    ಸಿತಾರಾಗೆ ಇನ್ನೂ 11 ವರ್ಷ ದೊಡ್ಡ ದೊಡ್ಡ ಬ್ರ್ಯಾಂಡ್‌ಗೆ ಮಹೇಶ್ ಬಾಬು ಪುತ್ರಿ ರಾಯಭಾರಿಯಾಗುತ್ತಿದ್ದಾರೆ. ಈಗಲೇ ನಟನೆ ಮತ್ತು ಬ್ರ್ಯಾಂಡ್‌ಗಳಿಗೆ ಬಿಗ್ ಆಫರ್ಸ್‌ ಅರಸಿ ಬರುತ್ತಿದೆ. ಬಾಲ್ಯದಲ್ಲೇ ಮಗಳ ಸಾಧನೆ ನೋಡಿ ಮಹೇಶ್ ಬಾಬು ಭಾವುಕರಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ‘ಪಾರು’ ಸೀರಿಯಲ್ ನಟಿ

    ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ‘ಪಾರು’ ಸೀರಿಯಲ್ ನಟಿ

    ಕಿರುತೆರೆಯ ‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್ ಸಿತಾರಾ ಇದೀಗ ‘ಪಾರು’ (Paaru) ಸೀರಿಯಲ್‌ನಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ನಟಿಯ ಬೋಲ್ಡ್ & ಹಾಟ್ ಅವತಾರ ಅಭಿಮಾನಿಗಳ ನಿದ್ದೆಗೆಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

    ಪ್ರಸ್ತುತ ‘ಪಾರು’ ಧಾರಾವಾಹಿಯಲ್ಲಿ ವಿಲನ್ ಆಗಿರೋ ಸಿತಾರಾ ಪಾತ್ರಕ್ಕೆ ಭಾರೀ ಮೆಚ್ಚುಗೆಯಿದೆ. ಪಾರುಗೆ ಕಾಟ ಕೊಡುವ ಮೂಲಕ ಅದೆಷ್ಟು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದುಯಿದೆ. ಸೀರಿಯಲ್ ಜೊತೆ ಕೆಲ ಸಿನಿಮಾಗಳಲ್ಲೂ ಸಿತಾರಾ ತಾರಾ (Sitara Tara) ನಟಿಸಿದ್ದಾರೆ.

    ಸದ್ಯ ನಟಿ ಸಿತಾರಾ, ನೇರಳೆ ಬಣ್ಣದ ವೆಸ್ಟರ್ನ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಸದಾ ಸೀರೆಯಲ್ಲಿ ಮಿಂಚುತ್ತಿದ್ದ ನಟಿಯ ಹೊಸ ಲುಕ್ ನೋಡ್ತಿದ್ದಂತೆ ಎಜ್ ಈಸ್ ಎ ಜಸ್ಟ್ ನಂಬರ್ ಅಂತಾ ಫ್ಯಾನ್ಸ್ ಬಣ್ಣಿಸುತ್ತಿದ್ದಾರೆ. ಇನ್ನೂ ಕೆಲವರು ಇದು ಕೆಡಿ ದಾಮಿನಿನಾ, ಅಬ್ಬಬ್ಬಾ ಎಷ್ಟು ಹಾಟ್ ಎಂದಿದ್ದಾರೆ.

    ‘ಪಾರು’ ಧಾರಾವಾಹಿ ಕೂಡ ಅದ್ಭುತವಾಗಿ ಮೂಡಿ ಬರುತ್ತಿದೆ. ಟಿಆರ್‌ಪಿ ರೇಸ್‌ನಲ್ಲೂ ಮುಂದಿದೆ. ನಾಯಕಿಯಾಗಿ ಮೋಕ್ಷಿತಾ ಪೈ ನಟಿಸಿದ್ದರೆ, ನಾಯಕನಾಗಿ ಶರತ್ ಅಭಿನಯಿಸುತ್ತಿದ್ದಾರೆ. ವಿನಯಾ ಪ್ರಸಾದ್ ಸೀರಿಯಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ಸೂಪರ್‌ ಕ್ವೀನ್‌ ಶೋನಲ್ಲಿ ಸ್ಪರ್ಧಿಯಾಗಿದ್ದ ದಾಮಿನಿ ಅಲಿಯಾಸ್‌ ಸಿತಾರಾ ಅವರು ಚಿಕ್ಕವಯಸ್ಸಿನಲ್ಲೇ ಪೋಷಕರನ್ನ ಕಳೆದುಕೊಂಡಿದ್ದರು. ಆಶ್ರಮದಲ್ಲಿ ಬೆಳೆದಿರೋದಾಗಿ ನಟಿ ಕಾರ್ಯಕ್ರಮದಲ್ಲಿ ಭಾವುಕರಾಗಿದ್ದರು. ಕೆಲ ವರ್ಷಗಳ ಹಿಂದೆ ಸಿತಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಸೀರಿಯಲ್- ವೈಯಕ್ತಿಕ ಜೀವನ ಬ್ಯಾಲೆನ್ಸ್‌ ಮಾಡುತ್ತಿರೋದಾಗಿ ನಟಿ ಹೇಳಿಕೊಂಡಿದ್ದರು.

  • ಮಹೇಶ್ ಬಾಬು ಪುತ್ರಿಗೆ ಆಲಿಯಾ ಭಟ್ ಸರ್ಪ್ರೈಸ್ ಗಿಫ್ಟ್

    ಮಹೇಶ್ ಬಾಬು ಪುತ್ರಿಗೆ ಆಲಿಯಾ ಭಟ್ ಸರ್ಪ್ರೈಸ್ ಗಿಫ್ಟ್

    ಟಾಲಿವುಡ್ (Tollywood) ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಪುತ್ರಿ ಸಿತಾರಾಗೆ (Sitara) ಇದೀಗ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಸೂಪರ್ ಸರ್ಪ್ರೈಸ್ ಗಿಫ್ಟ್‌ವೊಂದನ್ನ ಕೊಟ್ಟಿದ್ದಾರೆ. ಸಿತಾರಾಗೆ ಚೆಂದದ ಬಟ್ಟೆಯನ್ನ ಉಡುಗೊರೆಯಾಗಿ (Gift) ನೀಡಿದ್ದಾರೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ಸ್ಟಾರ್ ಕಿಡ್ ಸಿತಾರಾ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮದೇ ಯೂಟ್ಯೂಬ್ ಮೂಲಕ ಒಂದಲ್ಲಾ ಒಂದು ಸಂದರ್ಶನ ಅಥವಾ ಟ್ರಾವೆಲಿಂಗ್ ಸ್ಟೋರಿಯನ್ನ ಹಂಚಿಕೊಳ್ಳುತ್ತಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಸಿತಾರಾಗೆ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್ನೂ ಮಹೇಶ್ ಬಾಬು ಪುತ್ರಿ ತಂದೆಯಷ್ಟೇ ಗೌರವವನ್ನು ಪಡೆಯುತ್ತಿದ್ದಾರೆ. ಅಲ್ಲದೆ, ನೆಟ್ಟಿಗರು ಈ ಟ್ಯಾಲೆಂಟ್ ಬೇಬಿಯ ಪೋಸ್ಟ್‌ಗಳಿಗೆ ಪ್ರೀತಿಯಿಂದ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸಹ ವ್ಯಕ್ತಪಡಿಸುತ್ತಾರೆ.

     

    View this post on Instagram

     

    A post shared by sitara ???? (@sitaraghattamaneni)

    ಈಗ ಸಿತಾರಾ, ಆಲಿಯಾ ಭಟ್ ಕಳುಹಿಸಿರುವ ಬಟ್ಟೆ ಬಾಡಿಕಾನ್ ಡ್ರೇಸ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿತಾರಾ ಅಂದಕ್ಕೆ ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಂದೆಯಂತೆ ಬಣ್ಣ, ಅಮ್ಮನಂತೆ ಕ್ಯೂಟ್ ಅಂತ ಕಾಮೆಂಟ್ ಮೂಲಕ ಹೊಗಳುತ್ತಿದ್ದಾರೆ.

    ಮಹೇಶ್ ಬಾಬು ಪುತ್ರಿ ಸಿತಾರಾ, ಆಲಿಯಾ ಕಳುಹಿಸಿದ ಡ್ರೆಸ್ ಧರಿಸಿರುವ ಫೋಟೋ ಶೇರ್ ಮಾಡಿ, ನಟಿಗೆ ಧನ್ಯವಾದ ತಿಳಿಸಿದ್ದಾರೆ. ನಟನೆಯ ಜೊತೆ ಮಕ್ಕಳ ಬಟ್ಟೆ ಕಲೆಕ್ಷನ್ ಉದ್ಯಮ ಹೊಂದಿರುವ ಆಲಿಯಾರ ಡ್ರೆಸ್ ಕಲೆಕ್ಷನ್‌ಗೆ ಸಿತಾರಾ ಮೆಚ್ಚುಗೆ ಸೂಚಿಸಿದ್ದಾರೆ.

  • ಬಿರುಕಿನ ಸಂಬಂಧಕ್ಕೆ ‘ಮಾವು-ಬೇವು’ ಸಿನಿಮಾ ಅಮೃತ ದಾರ

    ಬಿರುಕಿನ ಸಂಬಂಧಕ್ಕೆ ‘ಮಾವು-ಬೇವು’ ಸಿನಿಮಾ ಅಮೃತ ದಾರ

    ವತ್ತಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆನೇ ಇಲ್ಲ. ಸಣ್ಣಪುಟ್ಟ ಜಗಳಕ್ಕೆ, ಕೋಪಕ್ಕೆ, ಮನಸ್ತಾಪಕ್ಕೆ ಸಂಬಂಧಗಳನ್ನೇ ಕಡಿದುಕೊಳ್ತಾರೆ. ನಾವು ತುಂಬಾ ಸ್ಪೀಡ್ ಇದ್ದೀವಿ, ನಾವು  ಅಲ್ಲಿದ್ದರೆ ಸುಖವಾಗಿರ್ತೀವಿ, ಇಲ್ಲಿದ್ದರೆ ಸುಖವಾಗಿರ್ತೀವಿ ಅಂತ ಏನೇನೋ ಕಲ್ಪನೆಯಲ್ಲಿ ಬದುಕುತ್ತಿದ್ದೇವೆ. ಆದರೆ, ಜೀವನ ಅಂದರೆ ಏನು? ಹೆಂಗ್ ಬದುಕಬೇಕು, ಯಾಕೆ ಬದುಕಬೇಕು ಅನ್ನುವುದು ತುಂಬಾ ಇಂಪಾರ್ಟೆಂಟ್ ಆಗುತ್ತೆ. ಹೀಗಾಗಿ, ಜೀವನದ ಬಗ್ಗೆ ಅರಿವು ಮೂಡಿಸೋಕೆ ಪ್ಲಸ್ ಬಿರುಕುಬಿಟ್ಟಿರುವ ಸಂಬಂಧಗಳಿಗೆ ಅಮೃತದಾರದಿಂದ ಹೊಲಿಗೆ ಹಾಕೋದಕ್ಕೆ ‘ಮಾವು-ಬೇವು’ (Mavu Bevu) ಎಂಬ ಸಿನಿಮಾ ಬರುತ್ತಿದೆ. ಈಗಿನ ಜನರೇಷನ್ ಗೆ ಇಂತಹ ಸಿನಿಮಾದ ಅಗತ್ಯವಿತ್ತು ಅಂತಾರೇ ನಟಿ ಸಿತಾರಾ.

    ಮಾವು-ಬೇವು ಪ್ರಸಿದ್ದ ನಟ ಕಮ್ ನಿರ್ದೇಶಕ ಸುಚೇಂದ್ರ ಪ್ರಸಾದ್ (Suchendra Prasad) ನಿರ್ದೇಶನ ಮಾಡಿರುವಂತಹ ಚಿತ್ರ. ಈ ಚಿತ್ರದಲ್ಲಿ ಸಿತಾರಾ ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ. ಜೊತೆಗೆ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಭಾರಿಗೆ ಸುಚೇಂದ್ರ ಪ್ರಸಾದ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಂಡ ಸಿತಾರಾ, ಸುಚೇಂದ್ರ ಪ್ರಸಾದ್ ಅವರನ್ನು ಜ್ಞಾನಭಂಡಾರ ಎಂದು ಹೊಗಳಿದರು. ನುರಿತ ತಂಡದ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೆಂತಲೂ ಹೇಳಿಕೊಂಡರು. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಹಾಗೇ ಮಾತು ಮುಂದುವರೆಸಿ ತಮ್ಮ ಜರ್ನಿಯನ್ನು ಮೆಲುಕು ಹಾಕಿದ ನಟಿ ಸಿತಾರಾ (Sitara), ದಾವಣಗೆರೆಯ ದೊಡ್ಡಮಾಗಡಿ ನನ್ನ ಮೂಲ. 2005 -2006 ರಲ್ಲಿ ನೀನಾಸಂ ಮುಗಿಸಿಕೊಂಡೆ. ಅದು ರಂಗಭೂಮಿ ಆಗಿದ್ದರಿಂದ ಎಲ್ಲರೂ ಎಲ್ಲಾ ಕೆಲಸ ಕಲೀಬೇಕು. ಹೀಗಾಗಿ, ಸೆಟ್, ಲೈಟ್, ಪ್ರಾಪರ್ಟಿ, ಮೇಕಪ್, ಕಾಸ್ಟ್ಯೂಮ್ ಸೇರಿದಂತೆ ಎಲ್ಲವನ್ನೂ ಅಭ್ಯಾಸ ಮಾಡಿದೆ. ನಾಲ್ಕೈದು ವರ್ಷ ಅಲ್ಲೇ ಕೆಲಸ ಮಾಡಿ, 2014ರಲ್ಲಿ ಬೆಂಗಳೂರಿಗೆ ಬಂದೆ. ಅಗ್ನಿಸಾಕ್ಷಿ ನನ್ನ ಮೊದಲ ಸೀರಿಯಲ್ಲು. ರಂಗಿತರಂಗ ನನ್ನ ಮೊದಲ ಚಿತ್ರ. ನಾನು ಆ್ಯಕ್ಟ್ ಮಾಡಿದ ಎಲ್ಲಾ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಾನೇ ನನ್ನ ಪಾತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಂಡಿದ್ದೇನೆ. ನಾಗಕನ್ನಿಕೆ, ಸುಬ್ಬಲಕ್ಷ್ಮಿ ಸಂಸಾರ, ಗಂಗಾ, ಇವಳೇ ವೀಣಾ ಪಾಣಿ ಸೇರಿದಂತೆ ಹಲವು ಧಾರಾವಾಹಿಗಳಿಗೆ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದೇನೆ. ಕ್ಯಾಮೆರಾ ಹಿಂದೆ ನಿತ್ಯನಿರಂತರವಾಗಿ ದುಡಿಯುತ್ತಿದ್ದು, ಆಗಾಗ ಕ್ಯಾಮೆರಾ ಮುಂದೆಯೂ ಕಾಣಿಸಿಕೊಳ್ಳುವುದಕ್ಕೆ ಅವಕಾಶಗಳು ಸಿಗ್ತಿವೆ. ಸದ್ಯ ಮಾವು-ಬೇವು ಸಿನಿಮಾ ರಿಲೀಸ್‍ಗಾಗಿ ಎದುರು ನೋಡ್ತಿದ್ದೇನೆ. ಸಿನಿಮಾ ಸಾಕಷ್ಟು ಶೋ ಆಗಿದ್ದು, ನಾನು ನಾಲ್ಕೈದು ಭಾರಿ ಚಿತ್ರ ನೋಡಿದ್ದೇನೆ. ತುಂಬಾ ಅದ್ಭುತವಾಗಿ ಮೂಡಿ ಬಂದಿದ್ದು, ಕನ್ನಡ ಕಲಾಭಿಮಾನಿಗಳೆಲ್ಲರೂ ಫಸ್ಟ್ ಡೇ ಫಸ್ಟ್ ಶೋ ಥಿಯೇಟರ್ ಗೆ ಬಂದು ಸಿನಿಮಾ ನೋಡಲಿ ಅಂತ ಕೇಳಿಕೊಳ್ಳುತ್ತೇನೆ’ ಎಂದರು.

  • ನೀವು ನನ್ನ ನಿಜವಾದ ಹೀರೋ, ಅಗಲಿದ ತಾತನ ನೆನೆದು ಮಹೇಶ್ ಬಾಬು ಪುತ್ರಿ ಭಾವುಕ

    ನೀವು ನನ್ನ ನಿಜವಾದ ಹೀರೋ, ಅಗಲಿದ ತಾತನ ನೆನೆದು ಮಹೇಶ್ ಬಾಬು ಪುತ್ರಿ ಭಾವುಕ

    ತೆಲುಗು ನಟ(Telagu Actor) ಮಹೇಶ್ ಬಾಬು(Mahesh Babu) ಅವರ ಕುಟುಂಬಕ್ಕೆ ಒಂದಾದ ಮೇಲೊಂದು ಆಘಾತ ಎದುರಾಗುತ್ತಿದೆ. ಮಹೇಶ್ ಬಾಬು ತಂದೆ ಕೃಷ್ಣ ಅವರ ಸಾವಿಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಇದೀಗ ಮಹೇಶ್ ಬಾಬು ಇಬ್ಬರು ಮಕ್ಕಳು ಸಿತಾರಾ ಮತ್ತು ಗೌತಮ್ ಕೂಡ ಅಗಲಿದ ತಾತನ ನೆನೆದು ಕಣ್ಣೀರಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪತ್ರದ ಮೂಲಕ ದುಃಖ ತೊಡಿಕೊಂಡಿದ್ದಾರೆ.

    ಮಹೇಶ್ ಬಾಬು ಅವರ ಕುಟುಂಬಕ್ಕೆ ದೊಡ್ಡ ಪೆಟ್ಟೆ ಬಿದ್ದಿದೆ. ಈ ವರ್ಷ ಶುರುವಿನಲ್ಲಿ ಮಹೇಶ್ ಬಾಬು ಅವರ ಸಹೋದರ ರಮೇಶ್ ಬಾಬು ನಿಧನರಾಗಿದ್ದರು. ಇತ್ತೀಚೆಗೆ ನಟನ ತಾಯಿ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದರು. ಈಗಾಗಲೇ ಶೋಕ ಸಾಗರದಲ್ಲಿ ಮುಳುಗಿರುವ ಈ ಕುಟುಂಬಕ್ಕೆ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ ಅವರ ಕೂಡ ಶಾಕ್ ಕೊಟ್ಟಿದೆ. ಹೀಗಿರುವಾಗ ಅಗಲಿದ ತಾತನನ್ನು ನೆನೆದು ಮಹೇಶ್ ಬಾಬು ಮಕ್ಕಳು ಪತ್ರವೊಂದನ್ನ ಬರೆದಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: 50 ದಿನ ಪೂರೈಸುವುದಕ್ಕೂ ಮೊದಲೇ `ಕಾಂತಾರ’ ಎತ್ತಂಗಡಿ ಆಗುತ್ತಾ? 

    ಪುತ್ರಿ ಸಿತಾರಾ ತನ್ನ ತಾತನ ಜೊತೆಯಿರುವ ಫೋಟೋ ಶೇರ್ ಮಾಡಿ, ಇನ್ನು ನಾವು ಒಟ್ಟಿಗೆ ಕೂತು ಊಟ ಮಾಡುವುದಕ್ಕೆ ಆಗಲ್ಲ. ನೀವು ನನಗೆ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದೀರಿ. ಪ್ರತಿನಿತ್ಯ ನಾನು ನಗುವಂತೆ ನೋಡಿಕೊಂಡಿದ್ದೀರಿ. ಇನ್ನು ಅವೆಲ್ಲಾ ನೆನಪು ಮಾತ್ರ. ನೀವು ನನ್ನ ನಿಜವಾದ ಹೀರೋ. ಒಂದು ದಿನ ನೀವು ಹೆಮ್ಮೆ ಪಡುವಂತೆ ಮಾಡುತ್ತೇನೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ತಾತ ಎಂದು ಸಿತಾರಾ ತನ್ನ ತಾತನೊಂದಿಗಿನ ಬಾಂಧವ್ಯವನ್ನು ಹಂಚಿಕೊಂಡಿದ್ದಾಳೆ.

    ಅದೇ ರೀತಿಯಾಗಿ ಮಹೇಶ್ ಬಾಬು ಪುತ್ರ ಗೌತಮ್ ಕೂಡ ಭಾವನಾತ್ಮಕ ಪತ್ರ ಹಂಚಿಕೊAಡಿದ್ದು, ನೀವು ಎಲ್ಲೇ ಇರಿ, ಹೇಗೆ ಇರಿ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನೀವು ಕೂಡ ನನ್ನನ್ನು ಪ್ರೀತಿಸುತ್ತೀರಾ ಎಂದು ಗೊತ್ತು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ತಾತ ಎಂದು ಗೌತಮ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ.

    ಇನ್ನೂ ಪದ್ಮಾಲಯ ಸ್ಟುಡಿಯೋದಲ್ಲಿ ನಟ ಕೃಷ್ಣ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಯಿತು. ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಒಂದೇ ಫೋಟೋದಲ್ಲಿ ಕಾಣಿಸಿಕೊಂಡ 90ರ ದಶಕದ ನಟಿ ಮಣಿಯರು

    ಒಂದೇ ಫೋಟೋದಲ್ಲಿ ಕಾಣಿಸಿಕೊಂಡ 90ರ ದಶಕದ ನಟಿ ಮಣಿಯರು

    ಬೆಂಗಳೂರು: ಸ್ಯಾಂಡಲ್‍ವುಡ್ ಸುಂದರಿಯರು ಒಂದೇ ಫ್ರೇಮ್‍ನಲ್ಲಿರುವ ವಿಶೇಷವಾದ ಫೋಟೋವನ್ನು ಮಾಲಾಶ್ರೀ ಮತ್ತು ಶೃತಿ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಹಳೆಯ ದಿನಗಳನ್ನು ಸ್ಯಾಂಡಲ್‍ವುಡ್ ಸ್ಟಾರ್‍ಗಳು ಮೆಲಕು ಹಾಕುತ್ತಲೇ ಇರುತ್ತಾರೆ. ಅವರ ಅನುಭವಸಿ ಸಿಹಿ, ಕಹಿ ನೆನಪು, ಅಂದಿನ ದಿನಗಳಲ್ಲಿ ಕಲಿತಿರುವ ಪಾಠವನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಶ್ರುತಿ, ಮತ್ತು ಮಾಲಾಶ್ರೀ ಹಂಚಿಕೊಂಡಿರುವ ಫೋಟೋ ಕೊಂಚ ವಿಭಿನ್ನ ಮತ್ತು ವಿಶೇಷವಾಗಿದೆ.

    ಒಂದು ಕಾಲದಲ್ಲಿ ಚಂದನವನ್ನು ಆಳಿದ ನಟಿ ಮಣಿಯರು ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಜಯಂತಿ, ಸಿತಾರಾ, ಶ್ರುತಿ, ಮಾಲಾಶ್ರೀ ಮತ್ತು ಅವರ ಸಹೋದರಿ ಶುಭಶ್ರೀ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಫೋಟೋದಲ್ಲಿ ಜಯಂತಿ ಅವರಿಗೆ ಹೂ ಗುಚ್ಚ ನೀಡಿ ಉಳಿದವರು ಸ್ವಾಗತಿಸುತ್ತಿರುವಂತೆ ಕಾಣುತ್ತದೆ. ಫೋಟೋವನ್ನು ಕಳುಹಿಸಿದ ಸಿನಿಮಾ ಛಾಯಾಗ್ರಾಹಕ ಡಿಸಿ ನಾಗೇಶ್ ಅವರಿಗೆ ಧನ್ಯವಾದಗಳು ಎಂದು ಬರೆದುಕೊಂಡು ಫೋಟೋವನ್ನು ಶ್ರುತಿ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ. ಮಾಲಾಶ್ರೀ ಇದೇ ಫೋಟೋವನ್ನು ಶೇರ್ ಮಾಡಿಕೊಂಡು ಸುಂದರ ನೆನಪುಗಳು ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Shruthi (@shruthi__krishnaa)

    90ರ ದಶಕದಲ್ಲಿ ಸಿನಿಪ್ರಿಯರ ಮನಗೆದ್ದ ನಟಿಮಣಿಯರು ಒಂದೆ ಕಡೆ ಇರುವ ಫೋಟೋವನ್ನು ನೋಡಿ ಅಭೀಮಾನಿಗಳು ಮೆಚ್ಚಿಗೆ ಮತ್ತು ಉತ್ತಮ ಪ್ರಶಂಸೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ.