ಸಿಡ್ನಿ: ಧಾರಾಕಾರ ಮಳೆಯಿಂದ ಆಸ್ಟ್ರೇಲಿಯಾದ ಪೂರ್ವ ಕರಾವಳಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಅಲ್ಲಿ ನೆಲೆಸಿರುವ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ನ್ಯೂ ಸೌತ್ ವೇಲ್ಸ್ ರಾಜ್ಯವಾದ ಸಿಡ್ನಿಯ ಉತ್ತರ ಪ್ರದೇಶಕ್ಕೆ ನೂರಾರು ಜನರನ್ನು ಸ್ಥಳಾಂತರಿಸಲಾಗಿದ್ದು, ದಕ್ಷಿಣ ಕರಾವಳಿಯತ್ತ ಮಳೆ ಸಾಗುತ್ತಿರುವುದರಿಂದ ಇನ್ನೂ ಹಲವರಿಗೆ ಆಶ್ರಯ ಕಲ್ಪಿಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
2013ರಲ್ಲಿ ಕಾಣಿಸಿಕೊಂಡಿದ್ದ ಪ್ರವಾಹದ ಮಟ್ಟಕ್ಕಿಂತ, ಇದೀಗ ಸಿಡ್ನಿ ಉತ್ತರದ 400 ಕಿಮೀ(240) ಮೈಲಿ ದೂರದಲ್ಲಿರುವ ಪೋರ್ಟ್ ಮ್ಯಾಕ್ಟರಿಯ ಬಳಿಯ ಹೇಸ್ಟಿಂಗ್ಸ್ ನದಿಯಲ್ಲಿ ಪ್ರವಾಹ ಮಟ್ಟ ಹೆಚ್ಚಾಗಿದೆ. ಅಲ್ಲದೆ ಭಾರೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಈ ಮಳೆಯು ಇಂದು ಕೂಡ ಮುಂದುವರಿಯಲಿದ್ದು, ಸಿಡ್ನಿ ದಕ್ಷಿಣದ ಪೋರ್ಟ್ ಮ್ಯಾಕ್ಟರಿಯ 500ಕಿ.ಮೀ(300 ಮೈಲಿ)ವರೆಗೂ ಮಳೆ ಆಗಲಿದ್ದು, ಪ್ರವಾಹದ ತೀವ್ರತೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಜನರು ಹೊರಗೆ ಬರದೇ ಮನೆಯೊಳಗೆ ಇರುವಂತೆ ಎಚ್ಚರಿಕೆ ನೀಡಲಾಗಿದೆ.
ಇಲ್ಲಿಯವರೆಗೂ ತುರ್ತು ಸೇವೆಯ ಸಹಾಯಕ್ಕಾಗಿ 500 ಕರೆ ಬಂದಿದ್ದು, ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 180 ಮಂದಿಯನ್ನು ರಕ್ಷಿಸಲಾಗಿದೆ.
ಸಿಡ್ನಿ: ಕ್ರಿಕೆಟ್‍ನಲ್ಲಿ ಸ್ಲೆಡ್ಜಿಂಗ್‍ನಿಂದಲೇ ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾ ಆಟಗಾರರು ಇದೀಗ ಕಳ್ಳಾಟದ ಮೂಲಕ ಕ್ಯಾಮೆರಾ ಕಣ್ಣಿಗೆ ಸಿಕ್ಕಿಹಾಕಿಕೊಂಡಿದ್ದು ಭಾರೀ ಟೀಕೆಗೆ ಗುರಿಯಾಗಿದೆ.
ಆಸ್ಟ್ರೇಲಿಯಾ ತಂಡದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ರಿಷಬ್ ಪಂತ್ ಅವರು ಮಾರ್ಕ್ ಮಾಡಿದ್ದ ಗಾರ್ಡ್ ಅನ್ನು ಕಾಲಿನಿಂದ ಒರೆಸಿದ್ದಾರೆ. ಒರೆಸುತ್ತಿರುವ ದೃಶ್ಯ ಸ್ಟಂಪ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ಸಿಡ್ನಿಯಲ್ಲಿ ನಡೆಯುತ್ತಿದ್ದ ಬಾರ್ಡರ್ ಗಾವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯಾಟದ ಐದನೇ ದಿನದ ಮೊದಲ ಸೆಷನ್‍ಲ್ಲಿ ಘಟನೆ ನಡೆದಿದೆ. 407 ರನ್‍ಗಳ ಟಾರ್ಗೆಟ್ ಚೇಸ್ ಮಾಡುತ್ತಿದ್ದ ಭಾರತಕ್ಕೆ ರಿಷಬ್ ಪಂತ್ ಆಸರೆಯಾಗಿ ಗೆಲುವಿನ ದಡಸೇರಿಸಲು ಹೋರಾಟ ನಡೆಸುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಎದುರಾಳಿ ಆಟಗಾರರೂ ಪಂತ್ ಅವರ ವಿಕೆಟ್ ಪಡೆಯಲು ಹೊಂಚು ಹಾಕಿ ಕಾಯುತ್ತಿದ್ದರು. ಪಂತ್ ಅರ್ಧಶತಕ ಹೊಡೆಯಲು 64 ಎಸೆತ ತೆಗದುಕೊಂಡರೆ ನಂತರ ತನ್ನ ಲಯವನ್ನು ಬದಲಾಯಿಸಿ ಆಕ್ರಮಣಕಾರಿ ಆಟ ಆಡುತ್ತಿದ್ದರು.
Tried all tricks including Steve Smith trying to remove Pant's batting guard marks from the crease. Par kuch kaam na aaya. Khaaya peeya kuch nahi, glass toda barana. But I am so so proud of the effort of the Indian team today. Seena chonda ho gaya yaar. pic.twitter.com/IfttxRXHeM
ಈ ವೇಳೆ ಡ್ರಿಂಕ್ಸ್ ಬ್ರೇಕ್ ಬಂದು ಮುಂದಿನ ಅವಧಿ ಆರಂಭದ ಮೊದಲು ಸ್ಮಿತ್ ಸ್ಟಂಪ್ ಬಳಿ ಬಂದು ಪಂತ್ ಅವರು ಮಾರ್ಕ್ ಮಾಡಿದ್ದ ಗಾರ್ಡ್ ಅನ್ನು ಕಾಲಿನಿಂದ ಒರೆಸಿದ್ದಾರೆ. ಈ ವಿಡಿಯೋ ಸ್ಟಂಪ್‍ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕ್ರೀಸ್‍ನಲ್ಲಿ ಗಾರ್ಡ್ ಇಲ್ಲದನ್ನು ನೋಡಿದ ಪಂತ್ ಮತ್ತೆ ಅಂಪೈರ್ ಬಳಿ ಕೇಳಿ ಗಾರ್ಡ್ ಮಾರ್ಕ್ ಹಾಕಿದ್ದಾರೆ.
ಕ್ಯಾಮೆರಾದಲ್ಲಿ ಸ್ಟಷ್ಟವಾಗಿ ಸ್ಮಿತ್ ಅವರ ನೆರಳು ಕಂಡು ಬಂದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಮಿತ್ ನಡೆಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿದ್ದ ಟೆಸ್ಟ್‌ನಲ್ಲಿ ಬೌಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಹಾಕಿಕೊಂಡಿದ್ದ ಸ್ಮಿತ್ 1 ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿ ಕ್ರಿಕೆಟ್‍ಗೆ ಮರಳಿ ಬಂದಿದ್ದರು.
ಸಿಡ್ನಿ: ರಿಷಬ್ ಪಂತ್ ಅವರ ಭರ್ಜರಿ ಬ್ಯಾಟಿಂಗ್ ಹನುಮ ವಿಹಾರಿಯ ತಾಳ್ಮೆಯುತ ಇನ್ನಿಂಗ್ಸ್ ಆರ್ ಅಶ್ವಿನ್ ಸಾಥ್ ನಿಂದಾಗಿ ಬಾರ್ಡರ್ ಗಾವಸ್ಕಾರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಡ್ರಾ ಮೂಲಕ ಅಂತ್ಯವಾಗಿದೆ.
88.2 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 272 ರನ್‍ಗಳಿಸಿ ಸಂಕಷ್ಟದಲ್ಲಿದ್ದಾಗ ಜೊತೆಯಾದ ಅಶ್ವಿನ್ ಮುರಿಯದ 7ನೇ ವಿಕೆಟ್‍ಗೆ 62 ರನ್‍ಗಳ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. 407 ರನ್‍ಗಳ ಗುರಿಯನ್ನು ಬೆನ್ನೆಟ್ಟಿದ ಭಾರತ 131 ಓವರ್‍ಗಳಲ್ಲಿ 334 ರನ್‍ಗಳಿಗೆ 5 ವಿಕೆಟ್ ಕಳೆದೆÀಕೊಂಡಿದ್ದಾಗ ಡ್ರಾ ತೀರ್ಮಾನಕ್ಕೆ ಬರಲಾಯಿತು.
ಭಾರತಕ್ಕೆ ಐದನೇ ದಿನದಾಟ ಅಕ್ಷರಶಃ ಕಬ್ಬಿಣದ ಕಡಲೆಯಾಗಿತ್ತು. 9 ರನ್ ಹೊಡೆದ ಚೇತೇಶ್ವರ ಪೂಜಾರ ಮತ್ತು 4 ರನ್ ಹೊಡೆದಿದ್ದ ರಹಾನೆ ಐದನೇ ದಿನ ಬ್ಯಾಟಿಂಗ್ ಇಳಿದರು. ಆದರೆ ರಹಾನೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಇತ್ತ ಪೂಜಾರ ಮಾತ್ರ ಮತ್ತೆ ತಾನೂ ಟೆಸ್ಟ್ ಸ್ಪೆಷಲಿಸ್ಟ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ರಹಾನೆ ಔಟ್ ಆದ ಬಳಿಕ ಬ್ಯಾಟಿಂಗ್ ಬಡ್ತಿ ಪಡೆದು ಬಂದ ರಿಷಬ್ ಪಂತ್ ಏಕದಿನ ಪಂದ್ಯಾಟದ ರೀತಿಯಲ್ಲಿ ಬ್ಯಾಟ್ ಬೀಸಿ 97 ರನ್ (118 ಎಸೆತ 12 ಬೌಡಂರಿ 3 ಸಿಕ್ಸರ್) ಸಿಡಿಸಿ ಪೂಜಾರ ಜೊತೆ 4 ನೇ ವಿಕೆಟ್ 148 ರನ್‍ಗಳ ಜೊತೆಯಾಟವಾಡಿದರು. ಪೂಜಾರ 77ರನ್ (205 ಎಸೆತ 12 ಬೌಡಂರಿ,) ಹೊಡೆದು ಭಾರತಕ್ಕೆ ಆಧಾರವಾದರೂ. ಶತಕದ ಹೊಸ್ತಿಲಿನಲ್ಲಿದ್ದ ಪಂತ್ ಪ್ಯಾಟ್ ಕಮಿನ್ಸ್‍ಗೆ ವಿಕೆಟ್ ಒಪ್ಪಿಸಿದರೆ, ಅವರ ಬೆನ್ನಲ್ಲೇ ಪೂಜಾರ ಹ್ಯಾಝಲ್‍ವುಡ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರೂ ನಂತರ ಬಂದ ಅನುಮ ವಿಹಾರಿ 23 ರನ್ (161 ಎಸೆತ 4 ಬೌಂಡರಿ) ಮತ್ತು ರವಿಚಂದ್ರನ್ ಅಶ್ವಿನ್ 39 ರನ್ (128 ಎಸೆತ 7 ಬೌಂಡರಿ) ಹೊಡೆದು ತಾಳ್ಮೆಯುತ ಇನ್ನಿಂಗ್ಸ್ ಕಟ್ಟಿದರು.
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯಾಟದ ನಾಲ್ಕನೇ ದಿನದಾಟದಲ್ಲೂ ಆಸ್ಟ್ರೇಲಿಯಾ ಅಭಿಮಾನಿಯ ಹುಚ್ಚಾಟ ಮುಂದುವರಿದಿದೆ. ಭಾರತೀಯ ಆಟಗಾರರಿಗೆ ಮೂರನೇ ದಿನದಾಟದಲ್ಲಿ ಜನಾಂಗೀಯ ನಿಂದನೆ ಮಾಡಿದ್ದ ಪ್ರೇಕ್ಷಕವರ್ಗ ಇಂದು ಮತ್ತೆ ಸಿರಾಜ್‍ಗೆ ನಿಂದನೆ ಮಾಡಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದೆ.
ಪ್ರೇಕ್ಷಕರಿಂದ ಮತ್ತೆ ನಿಂದನೆ ಕೇಳಿ ಬರುತ್ತಿದ್ದಂತೆ ಭಾರತೀಯ ಆಟಗಾರರೊಂದಿಗೆ ಸಿಡ್ನಿ ಕ್ರಿಕೆಟ್ ಮಂಡಳಿ ಕ್ಷಮೆ ಕೇಳಿದೆ ಮತ್ತು ಪ್ರೇಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಮೂರನೇ ಟೆಸ್ಟ್‍ನ ನಾಲ್ಕನೇ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ ಮಾರ್ನಸ್ ಲಬುಶೇನ್ 73ರನ್ (118 ಎಸೆತ, 4 ಬೌಂಡರಿ) ಸ್ಟೀವನ್ ಸ್ಮಿತ್ 81ರನ್ (167 ಎಸೆತ, 8 ಬೌಂಡರಿ, 1 ಸಿಕ್ಸರ್) ಮತ್ತು ಕ್ಯಾಮರಾನ್ ಗ್ರೀನ್ 84 ರನ್(132 ಎಸೆತ, 8 ಬೌಂಡರಿ, 4 ಸಿಕ್ಸರ್) ರನ್‍ಗಳ ನೆರವಿನಿಂದ ಎರಡನೇ ಇನ್ನಿಂಗ್ಸ್‍ನಲ್ಲಿ ಆಸ್ಟ್ರೇಲಿಯಾ ತಂಡ 406 ರನ್ ಮುನ್ನಡೆ ಸಾಧಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
407 ರನ್‍ಗಳ ಗೆಲುವಿನ ಗುರಿ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ರೋಹಿತ್ ಶರ್ಮಾ ಅವರ 52 ರನ್(98 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ 98 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಗೆಲುವಿಗಾಗಿ ಇನ್ನೂ 309 ರನ್ ಬೇಕಾಗಿದ್ದು ಐದನೇ ದಿನದಾಟಕ್ಕಾಗಿ ಚೇತೇಶ್ವರ್ ಪೂಜಾರ 9 ರನ್ (29 ಎಸೆತ) ಮತ್ತು ಅಜಿಂಕ್ಯ ರಹಾನೆ 4 ರನ್(14 ಎಸೆತ) ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯಾಟದ ಮೂರನೇ ದಿನದಾಟದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಇಬ್ಬರು ಆಟಗಾರರಿಗೆ ಪಂದ್ಯ ವಿಕ್ಷೀಸುತ್ತಿದ್ದ ಪ್ರೇಕ್ಷಕನೋರ್ವ ಹೀಯ್ಯಾಳಿಸಿದ್ದಾನೆ. ಇದನ್ನು ಖಂಡಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಅಂತಾರಾಷ್ಟ್ರೀಯಾ ಕ್ರಿಕೆಟ್ ಮಂಡಳಿಗೆ ದೂರು ನೀಡಿದೆ.
ಬಿಸಿಸಿಐ ಪ್ರಕಾರ ಫೀಲ್ಡಿಂಗ್ ಮಾಡುತ್ತಿದ್ದ ಭಾರತೀಯ ಆಟಗಾರರನ್ನು ಕೆಲ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ದೂರು ದಾಖಲಿಸಿತ್ತು. ಐಸಿಸಿ ಕ್ರಿಕೆಟ್ ಆಸ್ಟ್ರೇಲಿಯಾಗೆ ಎರಡು ವಾರಗಳಲ್ಲಿ ಈ ಪ್ರಕರಣವನ್ನು ಸರಿಪಡಿಸುವಂತೆ ಸೂಚಿಸಿದೆ.
ಮದ್ಯದ ಅಮಲಿನಲ್ಲಿದ್ದ ಆಸ್ಟ್ರೇಲಿಯಾದ ಬೆಂಬಲಿಗನೊಬ್ಬ ಫೈನ್ ಲೆಗ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಬುಮ್ರಾ ಮತ್ತು ಸಿರಾಜ್ ಅವರನ್ನು ಹೀಯ್ಯಾಳಿಸಿದ್ದಾನೆ. ಇದಕ್ಕೆ ಟೀಂ ಇಂಡಿಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ದಿನದಾಟದ ಕೊನೆಯಲ್ಲಿ ಅಂಪೈರ್ ಜೊತೆ ಈ ಕುರಿತು ಮಾತಾನಾಡುತ್ತಿದ್ದಂತೆ ಬಿಸಿಸಿಐ ಮಧ್ಯ ಪ್ರವೇಶಿಸಿ ಪ್ರಕರಣವನ್ನು ಐಸಿಸಿ ಮುಂದಿಟ್ಟಿದೆ.
ಮೊದಲ ಇನ್ನಿಂಗ್ಸ್‍ನಲ್ಲಿ 244 ರನ್‍ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡ ಭಾರತ ತಂಡ ಆಸೀಸ್‍ಗೆ 94 ರನ್‍ಗಳ ಮುನ್ನಡೆ ಬಿಟ್ಟುಕೊಟ್ಟಿತ್ತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 103 ರನ್ ಗಳಿಸಿ 197 ರನ್‍ಗಳ ಮುನ್ನಡೆ ಪಡೆದುಕೊಂಡಿದೆ. 47(69) ರನ್ ಗಳಿಸಿರುವ ಲಬುಶೇನ್ ಮತ್ತು 29(63) ಗಳಿಸಿರುವ ಸ್ಟೀವನ್ ಸ್ಮಿತ್ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನವದೆಹಲಿ: ನ್ಯೂಜಿಲೆಂಡ್ ಮತ್ತು ಆಸ್ಟೇಲಿಯಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಆರಂಭಗೊಂಡಿದ್ದು, ಬಣ್ಣ ಬಣ್ಣದ ಪಟಾಕಿ, ಲೈಟ್ ಗಳಿಂದ 2021ನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಭಾರತದಲ್ಲಿ ಹೊಸ ವರ್ಷದ ಆಗಮನಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ.
ಆಕಾಲೆಂಡ್ ಜನತೆ ಯಾವುದೇ ನಿಬಂಧನೆ, ಷರತ್ತುಗಳಿಲ್ಲದೇ ಹೊಸ ವರ್ಷ ಆಚರಿಸಿದ್ದಾರೆ. ಸಿಡ್ನಿಯ ಹಾರ್ಬರ್ ಬ್ರಿಡ್ಜ್ ಅತ್ಯಂತ ವೈಭೋಗದಿಂದ ಅಲಂಕರಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ 31ರ ಮಧ್ಯಾಹ್ನದಿಂದಲೇ ಹೊಸ ವರ್ಷಕ್ಕೆ ಸಿದ್ಧತೆ ನಡೆಸಿಕೊಂಡಿತ್ತು. ಗಲ್ಲಿ ಗಲ್ಲಿಗಳಲ್ಲಿ ಮ್ಯೂಸಿಕಲ್ ಇವೆಂಟ್ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಮಧ್ಯಾಹ್ನದಿಂದಲೇ ಆರಂಭಗೊಂಡಿವೆ. ಆದ್ರೆ ಕೊರೊನಾದಿಂದಾಗಿ ಜನರು ಒಟ್ಟಾಗಿ ಸೇರುವುದನ್ನ ನಿಷೇಧಿಸಲಾಗಿತ್ತು. ಎಲ್ಲ ಕಾರ್ಯಕ್ರಮಗಳ ನೇರಪ್ರಸಾರ ಮಾಡಲಾಗುತ್ತಿದೆ. ಬ್ರಿಡ್ಜ್ ಬಳಿ ಸೇರಿದ ಕೆಲ ಜನ ಕುಣಿದು ಕುಪ್ಪಳಿಸಿ 2020ಕ್ಕೆ ವಿದಾಯ ಹೇಳಿದರು.
ಭಾರತದಲ್ಲಿ ಸಂಜೆ 4.30 ಆದಾಗ ನ್ಯೂಜಿಲೆಂಡ್ ನಲ್ಲಿ ರಾತ್ರಿ 12ರ ಗಂಟೆ ಬಾರಿಸಿತ್ತು. ಆಕಾಲೆಂಡ್ ನಲ್ಲಿ ಹೊಸ ವರ್ಷದ ಆಚರಣೆಗಾಗಿ ದೊಡ್ಡ ಇವೆಂಟ್ ಆಯೋಜಿಸಲಾಗಿತ್ತು. ಇಲ್ಲಿಯ ಸ್ಕೈ ಟವರ್ ಬಳಿ ಐದು ನಿಮಿಷ ಝಗಮಗಿಸುವ, ಬಣ್ಣದ ಚಿತ್ತಾರಗಳಿಂದ ಹೊಸ ವರ್ಷವನ್ನ ಸ್ವಾಗತಿಸಿಕೊಳ್ಳಲಾಯ್ತು.
ದುಬೈನ ಬುರ್ಜ್ ಖಲೀಫಾದಲ್ಲಿ ಲೈಟ್, ಲೇಸರ್ ಶೋ ಮಾಡಲಾಯ್ತು. ಕೊರೊನಾ ಹಿನ್ನೆಲೆ ಸರ್ಕಾರ ಕಠಿಣ ನಿಯಮಗಳನ್ನ ಹೇರಿದೆ. ಇನ್ನುಳಿದಂತೆ ಸಿಂಗಪುರ, ಪ್ಯಾರೀಸ್ , ಲಂಡನ್, ಮಾಸ್ಕೋ, ಬರ್ಲಿನ್, ಪಟಾಯ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.
ಸಿಡ್ನಿ: ಇಂದು ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಭಾರತ ತಂಡ 6 ವಿಕೆಟ್‍ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯ ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.
ಇಂದು ಸಿಡ್ನಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಾಯಕ ಮ್ಯಾಥ್ಯೂ ವೇಡ್ ಮತ್ತು ಸ್ಟೀವ್ ಸ್ಮಿತ್ ಅವರು ಭರ್ಜರಿ ಬ್ಯಾಟಿಂಗ್‍ನಿಂದ ನಿಗಧಿತ 20 ಓವರಿನಲ್ಲಿ ಭರ್ಜರಿ 194 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ತಂಡ ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್‍ನಿಂದ ಇನ್ನೂ ಎರಡು ಬಾಲ್ ಉಳಿದಂತೆ 195 ರನ್ ಹೊಡೆದು ಜಯ ಸಾಧಿಸಿತು.
ಪಾಂಡ್ಯ ಸ್ಫೋಟಕ
ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸೂಪರ್ ಆಗಿ ಬ್ಯಾಟ್ ಬೀಸಿದರು. ಕೊಹ್ಲಿ ಔಟ್ ಆದ ಬಳಿಕ ಬ್ಯಾಟಿಂಗ್ ಬಂದ ಪಾಂಡ್ಯ, 22 ಬಾಲಿನಲ್ಲಿ 3 ಬೌಂಡರಿ ಮತ್ತು ಎರಡು ಸಿಕ್ಸರ್ ಸಮೇತ 42 ರನ್ ಸಿಡಿಸಿದರು. ಕೊನೆಯ ಓವರಿನಲ್ಲಿ 14 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ಭಾರತಕ್ಕೆ ಗೆಲುವನ್ನು ತಂದಿಟ್ಟರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು.
ಆಸ್ಟ್ರೇಲಿಯಾ ನೀಡಿದ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‍ಗೆ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ಈ ವೇಳೆ ಐದನೇ ಓವರ್ ಎರಡನೇ ಬಾಲಿಗೆ 22 ಬಾಲಿಗೆ 30 ರನ್ ಸಿಡಿಸಿದ್ದ ಕೆಎಲ್ ರಾಹುಲ್ ಅವರು ಆಂಡ್ರ್ಯೂ ಟೈ ಅವರಿಗೆ ಔಟ್ ಅದರು. ಈ ವೇಳೆ 9 ಓವರಿಗೆ ಇಂಡಿಯಾ ಒಂದು ವಿಕೆಟ್ ಕಳೆದುಕೊಂಡು 81 ರನ್ ಗಳಸಿತ್ತು.
ನಂತರ ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ಅರ್ಧಶತಕ ಸಿಡಿಸಿ ಮುನ್ನುಗುತ್ತಿದ್ದ ಶಿಖರ್ ಧವನ್ ಅವರು 36 ಬಾಲಿಗೆ 52 ರನ್ ಸಿಡಿಸಿ ಔಟ್ ಅದರು. ಶಿಖರ್ ಧವನ್ ನಂತರ ಬಂದು ಭರ್ಜರಿಯಾಗಿ ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ 10 ಬಾಲಿಗೆ 15 ರನ್ ಹೊಡೆದು ಔಟ್ ಅದರು. ನಂತರ ವಿರಾಟ್ ಕೊಹ್ಲಿಯವರು ಕೂಡ 24 ಬಾಲಿಗೆ 40 ರನ್ ಸಿಡಿಸಿ ಪೆವಿಲಿಯನ್ ಸೇರಿದರು.
ಆ ನಂತರ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ತಾಳ್ಮೆಯ ಆಟಕ್ಕೆ ಮುಂದಾಗಿ ಭಾರತವನ್ನು ಗೆಲುವಿನ ಹಂತಕ್ಕೆ ತಂದರು. ಕೊನೆಯ ಎರಡು ಓವರಿನಲ್ಲಿ 26 ರನ್‍ಗಳ ಅವಶ್ಯಕತೆ ಇತ್ತು. ಆಗ ಹಾರ್ದಿಕ್ ಪಾಂಡ್ಯ ಎರಡು ಬೌಂಡರಿ ಸಿಡಿಸಿ 19ನೇ ಓವರಿನಲ್ಲಿ 12 ರನ್ ಬಂದಿತ್ತು. ಕೊನೆಯ ಓವರಿನಲ್ಲಿ 14 ರನ್ ಬೇಕಿತ್ತು. ಆ ಓವರಿನಲ್ಲಿ ಎರಡು ಸಿಕ್ಸರ್ ಸಿಡಿಸಿದ ಪಾಂಡ್ಯ ಇನ್ನೂ ಎರಡು ಬಾಲ್ ಉಳಿದಂತೆ ಭಾರತಕ್ಕೆ ಗೆಲುವು ತಂದಿತ್ತರು.
ಸಿಡ್ನಿ: ಇಂದು ನಡೆಯುತ್ತಿರುವ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ನಡುವಿನ ಎರಡನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಇಂಡಿಯಾಗೆ 195ರನ್‍ಗಳ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಮ್ಯಾಥ್ಯೂ ವೇಡ್ ಮತ್ತು ಡಿ ಆರ್ಸಿ ಶಾರ್ಟ್ ಉತ್ತಮ ಆರಂಭ ನೀಡಿದರು. ಆದರೆ 9 ರನ್ ಗಳಸಿದ್ದ ಡಿ ಆರ್ಸಿ ಶಾರ್ಟ್ ಟಿ ನಟರಾಜನ್ ಅವರ ಬೌಲಿಂಗ್‍ನಲ್ಲಿ ಐಯ್ಯರ್ ಗೆ ಕ್ಯಾಚ್ ನೀಡಿ ಹೊರನಡೆದರು. ಇದಾದ ನಂತರ ಭರ್ಜರಿಯಾಗಿ ಬ್ಯಾಟ್ ಬೀಸಿದ ವೇಡ್ 25 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ಕ್ಯಾಚ್ ಬಿಟ್ಟು ಕೊಹ್ಲಿ ಹೊಡೆದ ರನ್ ಔಟ್‍ಗೆ ವೇಡ್ 58 ರನ್ ಗಳಸಿ ಔಟ್ ಆದರು.
ನಂತರ ಜೊತೆಯಾದ ಸ್ಟೀವನ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಅಬ್ಬರ ಆಟಕ್ಕೆ ಮುಂದಾದರು. ಫೋರ್ ಸಿಕ್ಸರ್ ಗಳ ಸುರಿಮಳೆಗೈಯುತ್ತಿದ್ದ ಈ ಜೋಡಿಗೆ 12ನೇ ಓವರ್ ನಾಲ್ಕನೇ ಬಾಲಿನಲ್ಲಿ ಶಾರ್ದೂಲ್ ಠಾಕೂರ್ ಶಾಕ್ ನೀಡಿದರು. 13 ಬಾಲಿಗೆ 22 ರನ್ ಗಳಸಿದ್ದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಮ್ಯಾಕ್ಸ್ ವೆಲ್ ಅವರನ್ನು ಔಟ್ ಮಾಡಿದರು. ಈ ನಂತರ 38 ಬಾಲಿಗೆ 46 ರನ್ ಸಿಡಿಸಿದ್ದ ಸ್ಟೀವನ್ ಸ್ಮಿತ್ ಚಹಲ್ ಅವರ ಬೌಲಿಂಗ್‍ನಲ್ಲಿ ಪಾಂಡ್ಯಗೆ ಕ್ಯಾಚ್ ಕೊಟ್ಟು ಹೊರನಡೆದರು.
18ನೇ ಓವರಿನಲ್ಲಿ ದಾಳಿಗೆ ಬಂದ ನಟರಾಜನ್ ಅವರು ಮೂರನೇ ಬಾಲಿನಲ್ಲಿ 18 ಬಾಲಿಗೆ 26 ರನ್ ಗಳಿಸಿದ್ದ ಮೊಯಿಸಸ್ ಹೆನ್ರಿಕ್ಸ್ ಅವರನ್ನು ಬಲಿ ಪಡೆದುಕೊಂಡರು. ಆ ನಂತರ ಬಂದ ಯಾವುದೇ ಬ್ಯಾಟ್ಸ್ ಮ್ಯಾನ್ ಅಕ್ರಮಣಕಾರಿಯಾಗಿ ಬ್ಯಾಟ್ ಬೀಸಲಿಲ್ಲ. ಹೀಗಾಗಿ ಒಂದು ಹಂತದಲ್ಲಿ 200 ರನ್ ಗಡಿ ದಾಟುವ ಸನಿಹದಲ್ಲಿದ್ದ ಆಸೀಸ್ ಭಾರತ ಬಿಗಿ ಬೌಲಿಂಗ್ ದಾಳಿಯಿಂದ 194 ರನ್ ಗಳಸಿತು.
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಭಾರತದ ಪರ ದಾಖಲೆ ಬರೆದಿದ್ದಾರೆ.
ಹಾರ್ದಿಕ್ ಪಾಂಡ್ಯ 857 ಎಸೆತಗಳಲ್ಲಿ 1 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಕಡಿಮೆ ಎಸೆತದಲ್ಲಿ ಸಾವಿರ ರನ್ ಪೂರ್ಣಗೊಳಿಸಿದ ಆಟಗಾರ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಈ ಪಂದ್ಯಕ್ಕೂ ಮುನ್ನ 54 ಏಕದಿನದ 38 ಇನ್ನಿಂಗ್ಸ್ ಆಡಿದ್ದ ಪಾಂಡ್ಯ 957 ರನ್ ಹೊಡೆದಿದ್ದರು. ಇಂದು 43 ರನ್ ಹೊಡೆಯುವ ಮೂಲಕ ಸಾವಿರ ರನ್‌ಗಳ ಗಡಿಯನ್ನು ದಾಟಿದರು.
ಕಡಿಮೆ ಎಸೆತದಲ್ಲಿ ಸಾವಿರ ರನ್ ಪೂರ್ಣಗೊಳಿಸಿದ ವಿಶ್ವದ ಆಟಗಾರರ ಪೈಕಿ ವೆಸ್ಟ್‌ಇಂಡೀಸ್ ಆಟಗಾರ ಆಂಡ್ರೆ ರಸೆಲ್ ಮೊದಲ ಸ್ಥಾನದಲ್ಲಿದ್ದಾರೆ. ಪಾಂಡ್ಯ 5ನೇ ಸ್ಥಾನದಲ್ಲಿದ್ದಾರೆ. ರಸೆಲ್ 767 ಎಸೆತದಲ್ಲಿ ಸಾವಿರ ರನ್ ಹೊಡೆದಿದ್ದರು.
ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಲ್ಯೂಕ್ ರೊಂಚಿ(807 ಎಸೆತ), ಪಾಕಿಸ್ತಾನ ಶಾಹಿದ್ ಅಫ್ರಿದಿ(834 ಎಸೆತ), ನ್ಯೂಜಿಲೆಂಡಿನ ಕೊರೆ ಆಂಡರ್‌ಸನ್(854 ಎಸೆತ), ಹಾರ್ದಿಕ್ ಪಾಂಡ್ಯ(857), ಇಂಗ್ಲೆಂಡಿನ ಜೋಸ್ ಬಟ್ಲರ್(860 ಎಸೆತ) ಇದ್ದಾರೆ.
ಇಂದಿನ ಪಂದ್ಯದಲ್ಲಿ 31 ಎಸೆತದಲ್ಲಿ ಅರ್ಧಶತಕ ಹೊಡೆದ ಪಾಂಡ್ಯ(3 ಬೌಂಡರಿ, 4 ಸಿಕ್ಸರ್) ಅಂತಿಮವಾಗಿ 90 ರನ್(76 ಎಸೆತ, 7 ಬೌಂಡರಿ, 4 ಸಿಕ್ಸರ್) ಹೊಡೆದು ಔಟಾದರು.
ಸಿಡ್ನಿ: ಶತಾಯ ಗತಾಯ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯನ್ನು ನಡೆಸಲೇಬೇಕು ಎಂದು ಬಿಸಿಸಿಐ ಹಾಗೂ ಫ್ರಾಂಚೈಸಿಗಳು ಪಣತೊಟ್ಟಿದೆ. ಆದರೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಈಗ ಆಸ್ಟ್ರೇಲಿಯಾದ 17 ಆಟಗಾರರು ಐಪಿಎಲ್‍ನಲ್ಲಿ ಭಾಗವಹಿಸದಿರುವ ಸಾಧ್ಯತೆ ಹೆಚ್ಚಾಗಿದೆ.
ಕೊರೊನಾ ವೈರಸ್ ಭೀತಿಯ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡುವುದು ಸರಿಯಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಆಟಗಾರರಿಗೆ ಸ್ಪಷ್ಟಪಡಿಸಿದೆ. ಇದರ ಹೊರತಾಗಿಯೂ ಯಾರಾದರೂ ವಿದೇಶಕ್ಕೆ ಪ್ರಯಾಣಿಸಿದರೆ ಅದು ಸರ್ಕಾರದ ಜವಾಬ್ದಾರಿಯಲ್ಲ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಆಸ್ಟ್ರೇಲಿಯಾದ ನಾಗರಿಕರಿಗೆ ಸೂಚನೆ ನೀಡಿದ್ದಾರೆ. ಮುಂದಿನ ತಿಂಗಳು ಸಹ ಈ ಸೂಚನೆ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ಹೇಳಿದೆ. ಹೀಗಾಗಿ ಐಪಿಎಲ್‍ನಲ್ಲಿ ಭಾಗವಹಿಸುವ ಆಸ್ಟ್ರೇಲಿಯಾದ 17 ಆಟಗಾರರು ಭಾರತಕ್ಕೆ ಬರುವ ಶಂಕೆ ವ್ಯಕ್ತವಾಗಿದೆ.
ಇದಕ್ಕೂ ಮೊದಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಆಟಗಾರರಿಗೆ ಐಪಿಎಲ್‍ಗಾಗಿ ನಿರಾಕ್ಷೇಪಣಾ ಪತ್ರ (ಎನ್‍ಒಸಿ) ನೀಡಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಸರ್ಕಾರದ ಸೂಚನೆ ಪಾಲಿಸುವ ಸಾಧ್ಯತೆಗಳಿದೆ. ಹೀಗಾಗಿ ಆಟಗಾರರು ಐಪಿಎಲ್ ಆಡಲು ಬಯಸಿ ಯಾವುದೇ ಅಹಿತಕರ ಘಟನೆ ನಡೆದರೆ ಸರ್ಕಾರ ಜವಾಬ್ದಾರಿಯಲ್ಲ. ಅಷ್ಟೇ ಅಲ್ಲದೆ ಆಟಗಾರರು ವಿಮೆಯ ಲಾಭ ಸಿಗುವುದಿಲ್ಲ.
ಪ್ಯಾಟ್ ಕಮ್ಮಿನ್ಸ್‌ಗೆ ಅತಿ ಹೆಚ್ಚು ಸಂಭಾವನೆ:
ಐಪಿಎಲ್‍ನ 13ನೇ ಆವೃತ್ತಿಯಲ್ಲಿ 8 ತಂಡಗಳು ಒಟ್ಟು 64 ವಿದೇಶಿ ಆಟಗಾರರನ್ನು ಹೊಂದಿವೆ. ಈ ಪೈಕಿ ಆಸ್ಟ್ರೇಲಿಯಾ ಗರಿಷ್ಠ 17 ಆಟಗಾರರೇ ಇದ್ದಾರೆ. ಐಪಿಎಲ್‍ನ 13ನೇ ಆವೃತ್ತಿಯ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‍ರೌಂಡರ್ ಪ್ಯಾಟ್ ಕಮ್ಮಿನ್ಸ್ ಅವರನ್ನು 15.50 ಕೋಟಿ ರೂ.ಗೆ ಅತ್ಯಂತ ದುಬಾರಿಗೆ ಖರೀದಿಯಾಗಿದ್ದಾರೆ. ಈ ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ವಿದೇಶಿ ಆಟಗಾರ ಎಂಬ ಹೆಗ್ಗಳಿಗೆ ಪ್ಯಾಟ್ ಕಮ್ಮಿನ್ಸ್ ಪಾತ್ರರಾಗಿದ್ದು, ಅವರು ಕೋಲ್ಕತ್ತಾ ಪರ ಆಡಲಿದ್ದಾರೆ.
ಯಾರಿಗೆ ಎಷ್ಟು ಸಂಭಾವನೆ?
ಪ್ಯಾಟ್ ಕಮ್ಮಿನ್ಸ್ – ಕೋಲ್ಕತಾ – 15.50 ಕೋಟಿ ರೂ.
ಸ್ಟೀವ್ ಸ್ಮಿತ್ – ರಾಜಸ್ಥಾನ – 12.50 ಕೋಟಿ ರೂ.
ಗ್ಲೆನ್ ಮ್ಯಾಕ್ಸ್‌ವೆಲ್ – ಪಂಜಾಬ್ – 10.75 ಕೋಟಿ ರೂ.
ನಾಥನ್ ಕಲ್ಪರ್ ನೈಲ್ – ಮುಂಬೈ – 8 ಕೋಟಿ ರೂ.
ಮಾರ್ಕಸ್ ಸ್ಟೋನಿಸ್ – ದೆಹಲಿ – 4.80 ಕೋಟಿ ರೂ.
ಆರನ್ ಫಿಂಚ್ – ಬೆಂಗಳೂರು – 4.40 ಕೋಟಿ ರೂ.
ಕೆನ್ ರಿಚಡ್ರ್ಸನ್ – ಬೆಂಗಳೂರು – 4 ಕೋಟಿ ರೂ.
ಅಲೆಕ್ಸ್ ಕ್ಯಾರಿ – ದೆಹಲಿ – 2.40 ಕೋಟಿ ರೂ.
ಕ್ರಿಸ್ ಲಿನ್ – ಮುಂಬೈ – 2 ಕೋಟಿ ರೂ.
ಮಿಚೆಲ್ ಮಾರ್ಷ್ – ಹೈದರಾಬಾದ್ – 2 ಕೋಟಿ ರೂ.
ಜೋಶ್ ಹೇಜಲ್‍ವುಡ್ – ಚೆನ್ನೈ – 2 ಕೋಟಿ ರೂ.
ಆಂಡ್ರ್ಯೂ ಟೈ – ರಾಜಸ್ಥಾನ – 1 ಕೋಟಿ ರೂ.
ಕ್ರಿಸ್ ಗ್ರೀನ್ – ಕೋಲ್ಕತಾ – 20 ಲಕ್ಷ ರೂ.
ಜೋಶುವಾ ಫಿಲಿಪ್ – ಬೆಂಗಳೂರು – 20 ಲಕ್ಷ ರೂ.
ಡೇವಿಡ್ ವಾರ್ನರ್ – ಹೈದರಾಬಾದ್ – 12.50 ಕೋಟಿ ರೂ.
ಬಿಲ್ಲಿ ಸ್ಟಾನ್ಲೇಕ್ – ಹೈದರಾಬಾದ್ – 50 ಲಕ್ಷ ರೂ.
ಶೇನ್ ವ್ಯಾಟ್ಸನ್ – ಚೆನ್ನೈ – 4 ಕೋಟಿ ರೂ.
ವೀಸಾ ಮೇಲೆ ನಿರ್ಬಂಧ:
ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚಾಗುತ್ತಿದ್ದಂತೆ ಕೇಂದ್ರ ಸರ್ಕಾರವು ಕಳೆದ ವಾರ ವೀಸಾಗಳ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು. ಈ ಮೂಲಕ ಭಾರತಕ್ಕೆ ಬರುವ ವಿದೇಶಿ ಪ್ರಜೆಗಳ ವೀಸಾವನ್ನು ಮಾರ್ಚ್ 13ರಿಂದ ಏಪ್ರಿಲ್ 15ರವರೆಗೆ ರದ್ದುಗೊಳಿಸಲಾಗಿದೆ. ರಾಜತಾಂತ್ರಿಕ, ಅಧಿಕೃತ, ಯುಎನ್ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು, ಯೋಜನೆ ಮತ್ತು ಉದ್ಯೋಗ ವೀಸಾಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಐಪಿಎಲ್‍ಗೆ ಬರುವ ವಿದೇಶಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಬಿಸಿನೆಸ್ ವೀಸಾ ನೀಡಲಾಗುತ್ತದೆ. ಹೀಗಾಗಿ ಅವರಿಗೆ ಏಪ್ರಿಲ್ 15ರವರೆಗೂ ಭಾರತಕ್ಕೆ ಬರಲು ಅವಕಾಶವಿಲ್ಲ.