Tag: ಸಿಡ್ನಿ

  • ವಾಸನೆ ಪತ್ತೆಹಚ್ಚುವುದರಲ್ಲಿ ನಾಯಿ, ಇಲಿಯನ್ನೇ ಮೀರಿಸುವ ರೋಬೊಟ್ ಸೃಷ್ಟಿ

    ವಾಸನೆ ಪತ್ತೆಹಚ್ಚುವುದರಲ್ಲಿ ನಾಯಿ, ಇಲಿಯನ್ನೇ ಮೀರಿಸುವ ರೋಬೊಟ್ ಸೃಷ್ಟಿ

    ಸಿಡ್ನಿ: ವಾಸನೆ ಪತ್ತೆ ಹಚ್ಚುವುದರಲ್ಲಿ ನಾಯಿ ಮತ್ತು ಇಲಿಯನ್ನೇ ಮೀರಿಸುವ ವೊಂದನ್ನು ಪಶ್ಚಿಮ ಸಿಡ್ನಿ (Sydney) ವಿವಿಯ ವಿಜ್ಞಾನಿಗಳು ಸೃಷ್ಟಿಯಾಗಿದೆ.

    ಪಶ್ಚಿಮ ಸಿಡ್ನಿ ವಿವಿಯ ವಿಜ್ಞಾನಿಗಳು ಈ ರೋಬೊಟ್ (Robot) ಅಭಿವೃದ್ಧಿ ಪಡಿಸಿದ್ದು, ವಾಸನೆಯನ್ನು ಪತ್ತೆ ಹಚ್ಚುವ ಪ್ರಾಣಿಗಳ ಉಳಿವಿಗೆ ಕಾರಣವಾಗಿದೆ. ಹಲವು ಸಮಸ್ಯೆಗಳಲ್ಲಿ ಪ್ರಾಣಿಗಳನ್ನು ಬಳಸಿ ಮನುಷ್ಯ ಪರಿಹಾರ ಕಂಡಿಕೊಳ್ಳುತ್ತಿದ್ದಾನೆ. ಪ್ರಾಣಿಗಳಿಗಿಂತಲೂ ವೇಗವಾಗಿ ಮತ್ತು ಸರಿಯಾಗಿ ಗುರುತಿಸುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮಖಂಡಿ ಓಲೆಮಠದ ಅಭಿನವ ಕುಮಾರ ಚೆನ್ನಬಸವ ಸ್ವಾಮೀಜಿ ಲಿಂಗೈಕ್ಯ

    ಪ್ರಾಣಿಗಳಿಗೂ ಗುರುತಿಸಲು ಸಾಧ್ಯವಾಗದ ವಾಸನೆಯ ಮಾರ್ಗವನ್ನು ಈ ಯಂತ್ರ ಪತ್ತೆ ಹಚ್ಚುತ್ತದೆ. ಇದರಿಂದಾಗಿ ದಟ್ಟ ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾದರೆ, ಭೂಕುಸಿತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಹಾಗೂ ಕಳ್ಳರ ಮಾರ್ಗವನ್ನು ಕಂಡುಹಿಡಿಯಲು ಇದು ಬಹಳಷ್ಟು ಪ್ರಯೋಜನಕಾರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಿಡ್ನ್ಯಾಪ್ ಆಗಿದ್ದ ಮಗು ಪತ್ತೆ

  • ಸಿಡ್ನಿಯ ಅನಿವಾಸಿ ಭಾರತೀಯರ ಸಮ್ಮೇಳನದಲ್ಲಿ ಮಂಗಳೂರು ಬೆಡಗಿಯ ನೃತ್ಯ

    ಸಿಡ್ನಿಯ ಅನಿವಾಸಿ ಭಾರತೀಯರ ಸಮ್ಮೇಳನದಲ್ಲಿ ಮಂಗಳೂರು ಬೆಡಗಿಯ ನೃತ್ಯ

    ಕ್ಯಾನ್ಬೆರಾ: ಮಂಗಳವಾರ ಆಸ್ಟ್ರೇಲಿಯಾದಲ್ಲಿ (Australia) ನಡೆದ ಅನಿವಾಸಿ ಭಾರತೀಯರ ಸಮ್ಮೇಳನದಲ್ಲಿ ಮೋದಿಯ ಭಾಷಣ ಎಲ್ಲರನ್ನೂ ಮೋಡಿ ಮಾಡಿತ್ತು. ಅದರಲ್ಲೂ ಅಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದಿತ್ತು. ಅಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ತುಳುನಾಡಿಗೂ ಅವಿನಾಭಾವ ಸಂಬಂಧವಿದೆ. ಅದೇನೆಂದರೆ ಕಾರ್ಯಕ್ರಮದಲ್ಲಿ ಮಂಗಳೂರು (Mangaluru) ಮೂಲದ ಯುವತಿ ಹಾಗೂ ಆಕೆಯ ತಂಡ ಕಾಂತಾರ (Kantara) ಸಿನಿಮಾದ ‘ವರಾಹ ರೂಪಂ’ ಹಾಗೂ ತುಳುವಿನ ‘ವಾ ಪೊರ್ಲುಯಾ’ ಹಾಡಿಗೆ ಹೆಜ್ಜೆ ಹಾಕಿದ್ದು ಎಲ್ಲರ ಮೆಚ್ಚುಗೆ ಗಳಿಸಿದೆ.

    ಸಿಡ್ನಿಯ (Sydney) ಫುಟ್ಬಾಲ್ ಆಟದ ಮೈದಾನದಲ್ಲಿ ನಡೆದ ಅನಿವಾಸಿ ಭಾರತೀಯರ ಸಮ್ಮೇಳನಕ್ಕೆ ಪ್ರಧಾನಿ ಮೋದಿಯವರನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಅಲ್ಲದೇ ಸಭೆಗೂ ಮೊದಲು ವಿವಿಧ ಭಾರತೀಯ ಶೈಲಿಗಳಲ್ಲಿ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಮಂಗಳೂರು ಮೂಲದ ಯುವತಿಯೋರ್ವಳು ತನ್ನ ತಂಡದೊಂದಿಗೆ ಕಾಂತಾರ ಸಿನಿಮಾದ ‘ವರಾಹ ರೂಪಂ’ ಹಾಗೂ ತುಳುನಾಡಿನ ‘ವಾ ಪೊರ್ಲುಯಾ’ ಹಾಡಿಗೆ ಹೆಜ್ಜೆ ಹಾಕಿ ಕರ್ನಾಟಕ ಹಾಗೂ ತುಳುನಾಡಿನ ಗರಿಮೆಯನ್ನು ಎತ್ತಿ ಹಿಡಿದಿದ್ದಾಳೆ. ಇದನ್ನೂ ಓದಿ: ಸಾಂಪ್ರದಾಯಿಕ ಸ್ವಾಗತ ಕೊಟ್ಟು ಮೋದಿಯನ್ನು ʻಬಾಸ್‌ʼ ಎಂದು ಕರೆದ ಆಸ್ಟ್ರೇಲಿಯಾ ಪ್ರಧಾನಿ

    ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದ ಆ ಕಾರ್ಯಕ್ರಮದಲ್ಲಿ, ಮಂಗಳೂರಿನ ಬಿಜೈ ಕಾಪಿಕಾಡ್ ಮೂಲದ ಅನಿಷಾ ಪೂಜಾರಿ (Anisha Poojari) ಹಾಗೂ ಆಕೆಯ ತಂಡ ಹೆಜ್ಜೆ ಹಾಕಿದ್ದಾರೆ. ಉಡುಪಿ ಕುಂದಾಪುರ ಮೂಲದ ನಾಟ್ಯ ವಿದುಷಿ ಪಲ್ಲವಿ ಭಾಗವತ್ ಈಕೆಯ ಗುರುವಾಗಿದ್ದು, ತಮ್ಮ ನೃತ್ಯ ಸಂಸ್ಥೆಯ ನಾಟ್ಯೋಕ್ತಿ ಶಿಷ್ಯ ವೃಂದದೊಂದಿಗೆ ಕರ್ನಾಟಕದ ಹಳ್ಳಿ ಸೊಬಗನ್ನು ತೋರಿಸುವ ಜಾನಪದ ಹಾಗೂ ಯಕ್ಷಗಾನ ಶೈಲಿಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಇದನ್ನೂ ಓದಿ: ಶಿಷ್ಟಾಚಾರಕ್ಕೆ ಗುಡ್‌ಬೈ – ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತ ಕೋರಿದ ಪಪುವಾ ನ್ಯೂ ಗಿನಿಯಾ ಪ್ರಧಾನಿ

    ಅನಿಷಾ ತಮ್ಮ ನಾಲ್ಕನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಕೆಯನ್ನು ಆರಂಭಿಸಿದ್ದು, ವಿದ್ವಾನ್ ಪ್ರೇಮನಾಥ ಮಾಸ್ಟರ್ ಬಳಿ ಹೆಚ್ಚಿನ ಶಿಕ್ಷಣವನ್ನು ಪಡೆದುಕೊಂಡರು. ಅಲ್ಲದೇ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ವಿವಾಹದ ಬಳಿಕ ಪತಿ ಹಾಗೂ ಮಗುವಿನೊಂದಿಗೆ ಸಿಡ್ನಿಯಲ್ಲಿ ನೆಲೆಸಿದ್ದ ಅವರು ಅಲ್ಲಿಯೂ ಸಹ ಭರತನಾಟ್ಯ ಕಲಿಕೆಯನ್ನು ಮುಂದುವರಿಸಿದ್ದಾರೆ. ನಾಟ್ಯ ವಿದುಷಿ ಪಲ್ಲವಿ ಭಾಗವತ್ ಅವರ ಬಳಿ ಕಲಿಕೆ ಮುಂದುವರಿಸಿದ ಅವರು ಇಂದು ಪ್ರಧಾನಿ ಮೋದಿಯ (Narendra Modi) ಮುಂದೆ ಹೆಜ್ಜೆ ಹಾಕಿದ್ದು ಸಂತೋಷದ ವಿಷಯವೇ ಸರಿ. ಇದನ್ನೂ ಓದಿ: ರಷ್ಯಾ ಯುದ್ಧ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್‌ ಅಧ್ಯಕ್ಷ ಭೇಟಿಯಾದ ಮೋದಿ

    ಈ ಕುರಿತು ಅನಿಷಾ ತಂದೆ ಮಾತನಾಡಿ, ಅನಿಷಾ 6 ವರ್ಷಗಳಿಂದ ಕುಟುಂಬ ಸಮೇತ ಸಿಡ್ನಿಯಲ್ಲಿ ನೆಲೆಸುತ್ತಿದ್ದಾಳೆ. ಚಿಕ್ಕಂದಿನಿಂದಲೂ ಡ್ಯಾನ್ಸ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಈಕೆ, ಮೋದಿ ಮುಂದೆ ಹೆಜ್ಜೆ ಹಾಕಿರುವುದು ಸಂತಸ ತಂದಿದೆ ಎಂದರು. ಇದನ್ನೂ ಓದಿ: ಭಾರತ ಪಾಕ್‌ನೊಂದಿಗೆ ಸಾಮಾನ್ಯ ಬಾಂಧವ್ಯ ಬಯಸುತ್ತದೆ, ಆದರೆ… – ಮೋದಿ ಹೇಳಿದ್ದೇನು?

  • ಆಸ್ಟ್ರೇಲಿಯಾದಲ್ಲಿ ನಿಗದಿಪಡಿಸಲಾಗಿದ್ದ ಕ್ವಾಡ್ ಶೃಂಗಸಭೆ ರದ್ದು

    ಆಸ್ಟ್ರೇಲಿಯಾದಲ್ಲಿ ನಿಗದಿಪಡಿಸಲಾಗಿದ್ದ ಕ್ವಾಡ್ ಶೃಂಗಸಭೆ ರದ್ದು

    ಕ್ಯಾನ್‌ಬೆರಾ: ಮುಂದಿನ ವಾರ ಸಿಡ್ನಿಯಲ್ಲಿ (Sydney) ನಡೆಯಬೇಕಿದ್ದ ಕ್ವಾಡ್ ಶೃಂಗಭೆಯನ್ನು (Quad Summit) ಆಸ್ಟ್ರೇಲಿಯಾ (Australia) ಬುಧವಾರ ರದ್ದುಗೊಳಿಸಿದೆ.

    ಸ್ವದೇಶದ ಆರ್ಥಿಕ ಸಮಸ್ಯೆಯ ಹಿನ್ನೆಲೆ ಅಮೆರಿಕದ (America) ಅಧ್ಯಕ್ಷ ಜೋ ಬೈಡನ್ (Joe Biden) ಆಸ್ಟ್ರೇಲಿಯಾ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ.

    ಅಮೆರಿಕದಲ್ಲಿ ಸಾಲದ ಮಿತಿಯನ್ನು ತೆರವುಗೊಳಿಸುವ ಕುರಿತು ನಡೆಯುತ್ತಿರುವ ಚರ್ಚೆಯ ಹಿನ್ನೆಲೆ ಬೈಡನ್ ಆಸ್ಟ್ರೇಲಿಯಾ ಹಾಗೂ ಪಪುವಾ ನ್ಯೂಗಿನಿಯಾ ಭೇಟಿಗಳನ್ನು ರದ್ದುಗೊಳಿಸಿದ್ದಾರೆ. ಆದರೂ ಈ ವಾರಾಂತ್ಯ ಅವರು ಜಿ7 ಶೃಂಗಸಭೆಯಲ್ಲಿ (G7 Summit) ಪಾಲ್ಗೊಳ್ಳುವ ನಿರೀಕ್ಷೆಯಿದೆ.

    ಕ್ವಾಡ್ ಶೃಂಗಸಭೆಯ ರದ್ದು ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಮುಂದಿನ ವಾರ ಸಿಡ್ನಿಯಲ್ಲಿ ಕ್ವಾಡ್ ನಾಯಕರ ಸಭೆ ನಡೆಯುವುದಿಲ್ಲ. ಬದಲಿಗೆ ನಾವು ಜಪಾನ್‌ನಲ್ಲಿ (Japan) ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಕ್ವಾಡ್ ನಾಯಕರೊಂದಿಗೆ ಆ ಚರ್ಚೆಯನ್ನು ನಡೆಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ

    ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿದ್ದ ಚೀನಾದ ಪ್ರಭಾವದ ಹಿನ್ನೆಲೆ 2017ರಲ್ಲಿ ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾ ಕ್ವಾಡ್ ಒಕ್ಕೂಟವನ್ನು ರಚಿಸಲಾಯಿತು. ಭಾರತ ಹಾಗೂ ಆಸ್ಟ್ರೇಲಿಯಾ 7 ದೇಶಗಳ ಜಿ7 ನ ಸದಸ್ಯತ್ವ ಹೊಂದಿಲ್ಲ. ಆದರೂ ಮೇ 19 ರಿಂದ ಮೇ 21 ರವರೆಗೆ ಜಪಾನ್‌ನ ಹಿರೋಶಿಮಾದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸಲು ಇವೆರಡು ದೇಶಗಳನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: ಅಮೆರಿಕಕ್ಕೆ ಹಾರಲಿದ್ದಾರೆ ರಾಹುಲ್ – 10 ದಿನ ಪ್ರವಾಸ

  • ತಮಿಳುನಾಡಿನ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಆಸ್ಟ್ರೇಲಿಯಾ ಪೊಲೀಸರು

    ತಮಿಳುನಾಡಿನ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಆಸ್ಟ್ರೇಲಿಯಾ ಪೊಲೀಸರು

    ಕ್ಯಾನ್ಬೆರಾ: ಸಿಡ್ನಿ (Sydney) ರೈಲ್ವೆ ನಿಲ್ದಾಣದಲ್ಲಿ ಕ್ಲೀನರ್‌ಗೆ ಚಾಕುವಿನಿಂದ ಇರಿದ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಆಸ್ಟ್ರೇಲಿಯಾ ಪೊಲೀಸರು (Australian police) ಭಾರತೀಯನನ್ನು (Indian) ಗುಂಡಿಕ್ಕಿ ಕೊಂದಿದ್ದಾರೆ.

    ಮೃತನನ್ನು ತಮಿಳುನಾಡು (Tamil Nadu) ಮೂಲದ ಮೊಹಮ್ಮದ್ ರಹಮತುಲ್ಲಾ ಸೈಯದ್ ಅಹ್ಮದ್ (32) ಎಂದು ಗುರುತಿಸಲಾಗಿದೆ. ಈತ ಬ್ರಿಡ್ಜಿಂಗ್ ವೀಸಾದಲ್ಲಿ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದ.

    ಅಹ್ಮದ್ ಆಬರ್ನ್ ಪೊಲೀಸ್ ಠಾಣೆಯನ್ನು ತಲುಪುವ ಮೊದಲು ಸಿಡ್ನಿಯ ಆಬರ್ನ್ ಠಾಣೆಯಲ್ಲಿ 28 ವರ್ಷದ ಕ್ಲೀನರ್ ಮೇಲೆ ಹಲ್ಲೆ ನಡೆಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ರೈಲುಗಳ ನಡುವೆ ಭೀಕರ ಅಪಘಾತ- 16 ಮಂದಿ ದುರ್ಮರಣ

    ಈ ವೇಳೆ ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಅಹ್ಮದ್‍ಗೆ ಎದುರಾದರು. ಅವರ ಮೇಲೂ ಅಹ್ಮದ್ ದಾಳಿ ಮಾಡಲು ಪ್ರಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ದಾಳಿಯಿಂದ ತಪ್ಪಿಸಿಕೊಳ್ಳಲು 3 ಬಾರಿ ಗುಂಡು ಹಾರಿಸಿದ್ದಾರೆ. ಈ ವೇಳೆ 2 ಗುಂಡು ಅಹ್ಮದ್ ಎದೆಗೆ ತಗುಲಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅಂಬಾನಿ, ಕುಟುಂಬಕ್ಕೆ z+ ಭದ್ರತೆ ನೀಡಿ: ಸುಪ್ರೀಂ

  • ಮಾ.19ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ‘ವಿರಾಟಪುರ ವಿರಾಗಿ’ ಚಿತ್ರ ಪ್ರದರ್ಶನ

    ಮಾ.19ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ‘ವಿರಾಟಪುರ ವಿರಾಗಿ’ ಚಿತ್ರ ಪ್ರದರ್ಶನ

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು (BS Lingadevaru) ನಿರ್ದೇಶನದಲ್ಲಿ ಮೂಡಿ ಬಂದಿರುವ ‘ವಿರಾಟಪುರ ವಿರಾಗಿ’ (Viratpur Viragi) ಸಿನಿಮಾ ಮಾರ್ಚ್ 19ರಂದು ಆಸ್ಟ್ರೇಲಿಯಾದ (Australia) ಸಿಡ್ನಿಯಲ್ಲಿ(Sydney) ಪ್ರದರ್ಶನ ಕಾಣುತ್ತಿದೆ. ಅಂದು ಮಧ್ಯಾಹ್ನ 3.30ಕ್ಕೆ ಇವೆಂಟ್ ಸಿನಿಮಾಸ್ ಲೈವರ್ ಪೋಲ್ ಆಸ್ಟ್ರೇಲಿಯಾದಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿರುವುದಾಗಿ ಬಿ.ಎಸ್.ಲಿಂಗದೇವರು ತಿಳಿಸಿದ್ದಾರೆ.

    ಹಾನಗಲ್ಲ (Hanagalla) ಕುಮಾರಸ್ವಾಮಿಗಳ (Kumaraswamy) ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಭಾರೀ ಬಜೆಟ್ ಸಿನಿಮಾಗಳೇ ಸೋಲಿನ ಹಾದಿ ಹಿಡಿದಿರುವ ಸಂದರ್ಭದಲ್ಲಿ ವಿರಾಟಪುರ ವಿರಾಗಿ ಸಿನಿಮಾ ಭಾರೀ ಯಶಸ್ಸು ಕಂಡಿದೆ. ಸತತ ಮೂವತ್ತೈದು ದಿನಗಳಿಂದ ಹಲವು ಕಡೆ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಕಲಬುರಗಿ ನಗರವೊಂದರಲ್ಲೇ ನೂರು ಪ್ರದರ್ಶನಗಳನ್ನು ಕಂಡು ದಾಖಲೆ ಬರೆದಿದೆ. ಕರ್ನಾಟಕದಾದ್ಯಂತ ಈವರೆಗೂ ಮೂರು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಇದನ್ನೂ ಓದಿ: 800 ವರ್ಷದ ಹಳೆಯ ಮನೆಯಲ್ಲಿ ಶುಭಾ ಪೂಂಜಾ ದಿಢೀರ್ ಮದುವೆ

    ಸಿನಿಮಾ ಬಿಡುಗಡೆಗೆ ಮುನ್ನವೇ 75 ಸಾವಿರಕ್ಕೂ ಅಧಿಕ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ಬರೆದಿದ್ದ  ಈ ಸಿನಿಮಾ ಈವರೆಗೂ 750ಕ್ಕೂ ಹೆಚ್ಚು ಶೋಗಳು ಹೌಸ್ ಫುಲ್ ಆಗಿವೆ. 62ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕಲಬುರಗಿಯಲ್ಲೇ 82 ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿದೆ. ಈ ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರ ಕೂಡ ಕಾಣಿಸಿಕೊಂಡಿದೆ.

    ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಕೂಡ ಕೇಳುಗರ ಗಮನ ಸೆಳೆದಿದ್ದು, ಈ ಸಿನಿಮಾವನ್ನು ಜನರಿಗೆ ತಲುಪಿಸುವುದಕ್ಕಾಗಿಯೇ ಹಾನಗಲ್ಲ ಕುಮಾರಸ್ವಾಮಿಗಳ ಭಕ್ತರು ರಥಯಾತ್ರೆ ಮತ್ತು ಗದಗ ಸೇರಿದಂತೆ ಹಲವು ಕಡೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದರು. ರಾಜ್ಯಾದ್ಯಂತ ರಥೆಯಾತ್ರೆ ಪ್ರವಾಸ ಮಾಡಿ, ಸಿನಿಮಾ ಮುಟ್ಟಿಸುವಲ್ಲಿ ಗೆದ್ದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅತ್ಯಾಚಾರ ಆರೋಪಿ ದನುಷ್ಕಗೆ ಜಾಮೀನು – 1 ಕೋಟಿ ರೂ. ಠೇವಣಿ ಇಟ್ಟು ಸಿಡ್ನಿ ಜೈಲಿನಿಂದ ಬಿಡುಗಡೆ

    ಅತ್ಯಾಚಾರ ಆರೋಪಿ ದನುಷ್ಕಗೆ ಜಾಮೀನು – 1 ಕೋಟಿ ರೂ. ಠೇವಣಿ ಇಟ್ಟು ಸಿಡ್ನಿ ಜೈಲಿನಿಂದ ಬಿಡುಗಡೆ

    ಸಿಡ್ನಿ: ಅತ್ಯಾಚಾರ ಆರೋಪದಿಂದಾಗಿ ಸಿಡ್ನಿ ಜೈಲು ಸೇರಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ (Danushka Gunathilaka)  ಅವರಿಗೆ 11 ದಿನಗಳ ಬಳಿಕ ಸಿಡ್ನಿ (Sydney)  ನ್ಯಾಯಾಲಯ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ.

    ಶ್ರೀಲಂಕಾದ ಟಿ20 ವಿಶ್ವಕಪ್ ತಂಡದಲ್ಲಿದ್ದ (T20 World Cup)  ಗುಣತಿಲಕ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ಅವರ ಬದಲಿಗೆ ಬೇರೆ ಆಟಗಾರನನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ನಂತರ ಟೀಮ್ ಮ್ಯಾನೇಜ್ ಮೆಂಟ್ ಸಲಹೆ ಮೇರೆಗೆ ಗುಣತಿಲಕ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದರು. ಈ ವೇಳೆ ದನುಷ್ಕ ಗುಣತಿಲಕ ಅವರನ್ನು ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾದ 29 ವರ್ಷದ ಮಹಿಳೆ, ಅತ್ಯಾಚಾರದ ಆರೋಪ ಹೊರಿಸಿದ್ದರು. ನಂತರ ನವೆಂಬರ್ 6 ರಂದು ಸಿಡ್ನಿಯ ಸಸೆಕ್ಸ್ ಸ್ಟ್ರೀಟ್ ಹೋಟೆಲ್‍ನಿಂದ ಪೊಲೀಸರು ಗುಣತಿಲಕರನ್ನು ಬಂಧಿಸಿದ್ದರು. ಇದನ್ನೂ ಓದಿ: ಇಂಡಿಯಾ, ನ್ಯೂಜಿಲೆಂಡ್ ಕ್ರಿಕೆಟ್ ಸರಣಿ – ಡಿ.ಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ನೇರ ಪ್ರಸಾರ

    ಬಂಧನದ ನಂತರ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಸಿಡ್ನಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಜಾಮೀನು ನಿರಾಕರಿಸಿತ್ತು. ಇದರಿಂದ ದನುಷ್ಕ ಗುಣತಿಲಕ 11 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಇಂದು ಸಿಡ್ನಿಯ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಹಕಾರದೊಂದಿಗೆ ಜಾಮೀನು ಮಂಜೂರಾಗಿದ್ದು ಸಿಡ್ನಿ ನ್ಯಾಯಾಲಯ 1 ಕೋಟಿ ರೂ. ಠೇವಣಿ ಇಟ್ಟು ಜಾಮೀನು ನೀಡಿದ್ದು, ಜೊತೆಗೆ ಟಿಂಡರ್ ಸೇರಿದಂತೆ ಯಾವುದೇ ಇತರ ಡೇಟಿಂಗ್ ಅಪ್ಲಿಕೇಶನ್‍ಗಳನ್ನು ಬಳಸದಿರುವಂತೆ ಷರತ್ತು ವಿಧಿಸಿದೆ. ಪ್ರತಿದಿನ 2 ಬಾರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಸ್‍ಪೋರ್ಟ್‍ನೊಂದಿಗೆ ಸಿಡ್ನಿ ಪೊಲೀಸ್ ಠಾಣೆಗೆ ಗುಣತಿಲಕ ಹಾಜರಾಗಬೇಕು. ಮತ್ತು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಮನೆಯಿಂದ ಹೊರ ಹೋಗದಂತೆ ನಿಷೇಧ ಹೇರಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪ – ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದನುಷ್ಕ ಅಮಾನತು

    ಜೀವಾವಧಿ ಶಿಕ್ಷೆಯ ತೂಗುಗತ್ತಿ:
    ಗುಣತಿಲಕ ಮೇಲೆ ಮಹಿಳೆ ಮಾಡಿದ್ದ ಆರೋಪವೇನಾದರೂ ಸಾಭೀತಾಗಿದ್ದರೆ, ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆ ಖಚಿತವಾಗುತ್ತಿತ್ತು. ಆದರೆ ಇದೀಗ ನ್ಯಾಯಾಲಯ ಜಾಮೀನು ನೀಡಿದೆ. ಆರೋಪ ಸಾಭೀತಾದರೆ ಮುಂದಿನ ಕ್ರಮದ ಬಗ್ಗೆ ಸಾಕಷ್ಟು ಕುತೂಹಲವಿದೆ. ಗುಣತಿಲಕರನ್ನು ಈಗಾಗಲೇ ಶ್ರೀಲಂಕಾ ಕ್ರಿಕೆಟ್‌ ಬೋರ್ಡ್‌ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ಅಮಾನತುಗೊಳಿಸಿದೆ. ಇದನ್ನೂ ಓದಿ: ರಿಟೈನ್ ಪಟ್ಟಿಯಲ್ಲಿ RCB ಗೇಮ್ ಪ್ಲಾನ್ – 10 ತಂಡಗಳ ರಿಟೈನ್-ರಿಲೀಸ್‌ ಲಿಸ್ಟ್

    Live Tv
    [brid partner=56869869 player=32851 video=960834 autoplay=true]

  • ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮಂಡ್ಸ್‌ ರಸ್ತೆ ಅಪಘಾತದಲ್ಲಿ ಸಾವು

    ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮಂಡ್ಸ್‌ ರಸ್ತೆ ಅಪಘಾತದಲ್ಲಿ ಸಾವು

    ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಆಲ್‌ ರೌಂಡರ್‌, ಸ್ಫೋಟಕ ಬ್ಯಾಟ್ಸ್‌ಮನ್‌ ಆಂಡ್ರ್ಯೂ ಸೈಮಂಡ್ಸ್‌(46) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಆಲಿಸ್ ನದಿ ಸೇತುವೆ ಬಳಿ ಇರುವ ಹರ್ವೆ ರೇಂಜ್ ರಸ್ತೆಯಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.

    ಮಾರ್ಚ್‌ನಲ್ಲಿ ಶೇನ್ ವಾರ್ನ್ ಮತ್ತು ರಾಡ್ ಮಾರ್ಷ್ ಅವರ ದುರಂತ ಸಾವಿನ ನಂತರ ಈ ವರ್ಷ ಹಠಾತ್‌ ನಿಧನರಾದ ಮೂರನೇ ಆಸ್ಟ್ರೇಲಿಯಾದ ಕ್ರಿಕೆಟರ್‌ ಆಗಿದ್ದಾರೆ. ಇದನ್ನೂ ಓದಿ: IPLಗೆ ಗುಡ್ ಬೈ ಹೇಳಿದ CSK ಸ್ಟಾರ್ ಅಂಬಾಟಿ ರಾಯುಡು?

    ಶನಿವಾರ ರಾತ್ರಿ 11 ಗಂಟೆಯ ವೇಳೆ ಸೇತುವೆ ಬಳಿ ಸಂಚರಿಸುತ್ತಿದ್ದಾಗ ಸೈಮಂಡ್ಸ್‌ ಕಾರು ರಸ್ತೆಯಿಂದ ಉರುಳಿದೆ ಎಂದು ಕ್ವೀನ್ಸ್‌ಲ್ಯಾಂಡ್‌ ಪೊಲೀಸರು ತಿಳಿಸಿದ್ದಾರೆ. ದುರಂತ ಸಂಭವಿಸುವ ಸಮಯದಲ್ಲಿ ಸೈಮಂಡ್ಸ್‌ ಒಬ್ಬರೇ ಕಾರಿನಲ್ಲಿ ಸಂಚರಿಸುತ್ತಿದ್ದರು.

    1999 ಮತ್ತು 2007 ರ ಅವಧಿಯಲ್ಲಿ ಸೈಮಂಡ್ಸ್‌ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. 198 ಏಕದಿನ, 26 ಟೆಸ್ಟ್‌, 14 ಟಿ 20 ಪಂದ್ಯಗಳನ್ನು ಸೈಮಂಡ್ಸ್‌ ಆಡಿದ್ದರು. ಐಪಿಎಲ್‌ನಲ್ಲಿ ಡೆಕ್ಕನ್‌ ಚಾರ್ಜರ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡದ ಪರ ಆಡಿದ್ದರು.

  • ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video

    ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video

    ಸಿಡ್ನಿ: ಟಾಲಿವುಡ್ ನಟ ಅಲ್ಲು ಅರ್ಜನ್ ನಟನೆಯ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸೌಂಡ್ ಮಾಡಿತ್ತು. ಎಲ್ಲಾ ಭಾಷೆಯ ಅಭಿಮಾನಿಗಳನ್ನು ಸಳೆಯುವಲ್ಲಿ ಈ ಸಿನಿಮಾ ಸಾಕಷ್ಟು ಹೆಸರನ್ನು ಮಾಡಿದೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಅವರು ತಮ್ಮ ಮಗಳ ಜೊತೆಗೆ ಈ ಸಿನಿಮಾದ ಡೈಲ್ ಹೇಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಡೇವಿಡ್ ವಾರ್ನರ್ ತಮ್ಮ ಮಗಳ ಜೊತೆಗೆ ಪುಷ್ಪ ಅಂದ್ರೆ ಫ್ಲವರ್ ಅಲ್ಲ, ಫೈರ್ ಎಂದು ಮಾಸ್ ಡೈಲಾಗ್ ಹೇಳಿದ್ದಾರೆ. ಅಲ್ಲದೇ ಅಲ್ಲು ಅರ್ಜುನ್ ಶೈಲಿಯಲ್ಲಿ ಗಡ್ಡ ಸವರಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಸೃಷ್ಟಿಸಿರುವ ಈ ವೀಡಿಯೋಗೆ ಅಲ್ಲು ಅರ್ಜುನ್ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

     

    View this post on Instagram

     

    A post shared by David Warner (@davidwarner31)

    ಪುಷ್ಪ ಸಿನಿಮಾದ ಮಾಸ್ ಡೈಲಾಗ್‍ನ್ನು ಡೇವಿಡ್ ವಾರ್ನರ್ ತಮ್ಮ ಮಗಳ ಜೊತೆಗೆ ಹೇಳಿದ್ದಾರೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಮಜವಾದ ಕ್ಯಾಪ್ಶನ್ ಕೂಡ ಬರೆದಿದ್ದಾರೆ. ಪುಷ್ಪ ಅಂದ್ರೆ ಫ್ಲವರ್ ಅಂತ ತಿಳ್ಕೊಂಡಿದೀರಾ? ಎಂದು ಬರೆದಿರುವ ವಾರ್ನರ್, ಉಳಿದದ್ದನ್ನು ದಯವಿಟ್ಟು ಪೂರ್ತಿ ಮಾಡಿ. ಈ ಡೈಲಾಗ್ ನನ್ನ ಜೊತೆ ಹೇಳಲು ಇಡೀ ಭಾರತವೇ ಕಾಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by David Warner (@davidwarner31)

    ಕೆಲವು ದಿನಗಳ ಹಿಂದೆ ವಾರ್ನರ್, ಅಲ್ಲು ಅರ್ಜುನ್ ಅವರ ಪಾತ್ರಕ್ಕೆ ತಂತ್ರಜ್ಞಾನದ ಮೂಲಕ ತಮ್ಮ ಮುಖವನ್ನು ಅಂಟಿಸಿ, ವೀಡಿಯೋ ಹಂಚಿಕೊಂಡಿದ್ದರು. ಇದು ವೈರಲ್ ಆಗಿತ್ತು. ಇದೇ ಸಿನಿಮಾದ ಮಾಸ್ ಡೈಲಾಗ್‍ನ್ನು ಮಗಳ ಜೊತೆಗೆ ಹೇಳುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

  • ಮಕ್ಕಳಿಗಾಗಿ ಸೂಪರ್ ‘ಡ್ಯಾಡಿ’ ಆದ ಡೇವಿಡ್ ವಾರ್ನರ್

    ಮಕ್ಕಳಿಗಾಗಿ ಸೂಪರ್ ‘ಡ್ಯಾಡಿ’ ಆದ ಡೇವಿಡ್ ವಾರ್ನರ್

    ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತನ್ನ ಮುದ್ದಾದ ಮಕ್ಕಳಿಗಾಗಿ ಸೂಪರ್ ಡ್ಯಾಡಿ ಆಗುವ ಮೂಲಕ ವಿಶೇಷ ತಿಂಡಿಯನ್ನು ತಯಾರಿಸಿ ಕೊಟ್ಟು ಗಮನಸೆಳೆದಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿರುವ ವಾರ್ನರ್ ಅವರ ಪತ್ನಿ ಕ್ಯಾಂಡಿಸ್ ವಾರ್ನರ್, ಪತಿ ಮನೆಗೆ ಬಂದಾಗಿದೆ ಇನ್ನು ಮಕ್ಕಳ ಸೂಪರ್ ಡ್ಯಾಡಿ ಆಗಿ ಅಡುಗೆ ಮನೆಯಲ್ಲಿ ವಿವಿಧ ತಿಂಡಿ ತಿನಿಸುಗಳನ್ನು ಮಕ್ಕಳಿಗಾಗಿ ತಯಾರಿ ಮಾಡಿ ಕೊಡಲು ವಾರ್ನರ್ ರೆಡಿ ಎಂದು ಬರೆದುಕೊಂಡಿದ್ದಾರೆ.

    ಇಷ್ಟುದಿನ ಮನೆಯಲ್ಲಿ ವಾರಾಂತ್ಯದಲ್ಲಿ ಮಕ್ಕಳು ವಾರ್ನರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ವಾರ್ನರ್ ಮರಳಿ ಮನೆಗೆ ಬಂದಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮನೆಯಲ್ಲಿ ಏನೆಲ್ಲಾ ನಡೆಯಲಿದೆಯೋ ಎಂದು ಬರೆದುಕೊಂಡಿದ್ದಾರೆ.

    ವಾರ್ನರ್ ಕಳೆದ ಒಂದು ತಿಂಗಳ ಹಿಂದೆ ಐಪಿಎಲ್‍ಗಾಗಿ ಭಾರತಕ್ಕೆ ಬಂದಿದ್ದರು. ಬಳಿಕ ಐಪಿಎಲ್ ಕೊರೊನಾದಿಂದಾಗಿ ರದ್ದುಗೊಂಡ ಬಳಿಕ ಆಸ್ಟ್ರೇಲಿಯಾದ ಆಟಗಾರರು ಮಾಲ್ಡೀಸ್ ತೆರಳಿ ಅಲ್ಲಿ ಕ್ವಾರಂಟೈನ್ ಆಗಿ ನಂತರ ಇದೀಗ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.

     

    View this post on Instagram

     

    A post shared by Mrs Candice Warner (@candywarner1)

    ಐಪಿಎಲ್‍ನಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದ ವಾರ್ನರ್ ಅವರನ್ನು ಟೂರ್ನಿಯ ಮಧ್ಯದಲ್ಲಿ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿ, ಕೇನ್ ವಿಲಿಯಮ್ಸ್ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿತ್ತು.

    ಇದೀಗ ವಾರ್ನರ್ ಮನೆಗೆ ತಲುಪಿದ್ದು ಕೆಲದಿನಗಳನ್ನು ಮನೆಯಲ್ಲಿ ಕಳೆದ ಬಳಿಕ ಜುಲೈನಲ್ಲಿ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಹಾಗಾಗಿ ವಾರ್ನರ್ ತನ್ನ ಮುಂದಿನ ಗುರಿಯನ್ನು ವೆಸ್ಟ್ ಇಂಡೀಸ್ ಪ್ರವಾಸದ ಮೇಲೆ ನೆಟ್ಟಿದ್ದಾರೆ.

  • ಆಕ್ಸಿಜನ್ ಪೂರೈಕೆಗೆ 41 ಲಕ್ಷ ರೂ. ಭಾರತಕ್ಕೆ ದೇಣಿಗೆ ನೀಡಿದ ಬ್ರೆಟ್ ಲೀ

    ಆಕ್ಸಿಜನ್ ಪೂರೈಕೆಗೆ 41 ಲಕ್ಷ ರೂ. ಭಾರತಕ್ಕೆ ದೇಣಿಗೆ ನೀಡಿದ ಬ್ರೆಟ್ ಲೀ

    ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ವೇಗಿ, ಐಪಿಎಲ್ ವೀಕ್ಷಕ ವಿವರಣೆಗಾರ ಬ್ರೆಟ್ ಲೀ ಭಾರತದಲ್ಲಿ ಆಕ್ಸಿಜನ್ ಪೂರೈಕೆಗೆ 1 ಬಿಟ್ ಕಾಯಿನ್(ಅಂದಾಜು 40 ಲಕ್ಷ) ರೂಪಾಯಿ ದೇಣಿಗೆ ನೀಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಭಾರತ ನನ್ನ 2ನೇ ಮನೆಯಿದ್ದಂತೆ. ಸದ್ಯ ಎದುರಾಗಿರುವ ಪರಿಸ್ಥಿತಿ ನೋಡಿ ಬಹಳ ಸಂಕಟವಾಗುತ್ತಿದೆ ಎಂದು ಲೀ ಹೇಳಿದ್ದಾರೆ. ಕ್ರಿಫ್ಟೋ ರಿಲೀಫ್ ಮೂಲಕ ದೇಣಿಗೆ ಹಣ ಭಾರತಕ್ಕೆ ತಲುಪುವಂತೆ ಮಾಡಲು ನಿರ್ಧರಿಸಿದ್ದಾರೆ. ಕೊರೊನಾದಿಂದ ಬಳಲುತ್ತಿರುವ ಭಾರತಕ್ಕೆ ಮಿಡಿದ ಬ್ರೆಟ್ ಲೀ ಅವರು ಹಣದ ಸಹಾಯವನ್ನು ಮಾಡಿದ್ದಾರೆ.

    ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ ಸಹಾಯ ನಿಧಿಗೆ 50,000 ಅಮೆರಿಕನ್ ಡಾಲರ್ ದೇಣಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್‍ರಿಂದ ಸ್ಫೂರ್ತಿ ಪಡೆದು ಲೀ ಹಣ ಸಹಾಯ ಮಾಡಿದ್ದಾರೆ. ಬ್ರೆಟ್ ಲೀ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.