Tag: ಸಿಡಿ ಲೇಡಿ

  • 1 ತಿಂಗಳು ಆದ್ಮೇಲೆ ಆ ತಾಯಿ ಇನ್ನೇನು ಬಿಡುಗಡೆ ಮಾಡ್ತಾಳೋ..?: ಸುಧಾಕರ್

    1 ತಿಂಗಳು ಆದ್ಮೇಲೆ ಆ ತಾಯಿ ಇನ್ನೇನು ಬಿಡುಗಡೆ ಮಾಡ್ತಾಳೋ..?: ಸುಧಾಕರ್

    ಬೆಂಗಳೂರು: ಇನ್ನೂ ಒಂದು ತಿಂಗಳು ಆದ ಬಳಿಕ ಆ ತಾಯಿ ಇನ್ನೇನು ಬಿಡುಗಡೆ ಮಾಡುತ್ತಾಳೋ ನೋಡೋಣ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಡಿ ಲೇಡಿಯ 3ನೇ ವೀಡಿಯೋ ಹೇಳಿಕೆ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಕರಣ ಆಗಿ ಎಷ್ಟು ದಿನ ಆಯ್ತು. ಒಂದು ತಿಂಗಳು ಆದ ಮೇಲೆ ಬಿಡುಗಡೆಯಾಗಿದೆ. ಇನ್ನೂ ಒಂದು ತಿಂಗಳು ಆದ ಮೇಲೆ ಆ ತಾಯಿ ಇನ್ನೇನು ಬಿಡುಗಡೆ ಮಾಡ್ತಾಳೆ ನೋಡೋಣ ಎಂದು ಹೇಳಿದ್ದಾರೆ.

    ಈಗ ಎಸ್‍ಐಟಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಮಾತನಾಡೋದು ಸರಿಯಲ್ಲ. ಈ ಬಗ್ಗೆ ಮಾತಾಡಿದ್ರೆ ಹಿಂಟ್ ಬಿಟ್ಟು ಕೊಟ್ಟ ಹಾಗೆ ಆಗುತ್ತೆ. ತನಿಖೆ ಮುಗಿಯೋವರೆಗೂ ಈ ಬಗ್ಗೆ ಮಾತನಾಡದೇ ಇರೋದು ಉತ್ತಮ ಎಂದರು.

    ಮಾಜಿ ಸಚಿವ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ ಇಂದು ತನ್ನ ಮೂರನೇ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿ, ಕರ್ನಾಟಕದ ಜನತೆ, ತಂದೆ-ತಾಯಿಯರ ಆಶೀರ್ವಾದ, ಎಲ್ಲಾ ಪಕ್ಷದ ನಾಯಕರು ಹಾಗೂ ಎಲ್ಲಾ ಸಂಘಟನೆಯವರಿಂದ ನನಗೆ ತುಂಬಾನೇ ಬೆಂಬಲ ಸಿಗುತ್ತಿದೆ ಎಂದು ತಿಳಿಸಿದ್ದಾರೆ.

    24 ದಿನದಿಂದ ನಾನು ಜೀವ ಭಯದಲ್ಲಿ ಬೆದರಿಕೆಗಳಿಂದ ಭಯ ಭಯದಲ್ಲಿ ಬದುಕ್ತಾ ಇದ್ದೇನೆ. ಆದರೆ ಇಂದು ಎಲ್ಲೋ ಕಡೆಯಿಂದ ಒಂದು ಧೈರ್ಯ ಬಂದಿದೆ. ಆ ಧೈರ್ಯ ಬಂದಿರೋದಕ್ಕೆ ಹಾಗೂ ನನ್ನನ್ನು ಎಲ್ಲರೂ ಬೆಂಬಲಿಸುತ್ತಾ ಇದ್ದೀರಾ ಅನ್ನೋ ಕಾರಣಕ್ಕೆ ಇಂದು ನಾನು ನನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ಈ ಬೆನ್ನಲ್ಲೇ ಯುವತಿ ಪರ ವಕೀಲ ಜಗದೀಶ್ ಮಾತಾಡಿ, ಇಂದು ಮಧ್ಯಾಹ್ನ 2.30ಕ್ಕೆ ಪೊಲೀಸ್ ಸಮಿಷನರ್ ಅವರಿಗೆ ಯುವತಿಯ ಲಿಖಿತ ದೂರನ್ನು ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಮಧ್ಯಾಹ್ನ 2.30ಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು -ಸಿಡಿ ಲೇಡಿ ಪರ ವಕೀಲ

    ಮಧ್ಯಾಹ್ನ 2.30ಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು -ಸಿಡಿ ಲೇಡಿ ಪರ ವಕೀಲ

    ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ 2.30ಕ್ಕೆ ಪೊಲೀಸ್ ಕಮಿಷನರ್ ಗೆ ದೂರು ನೀಡುವುದಾಗಿ ಸಿಡಿ ಲೇಡಿ ಪರ ವಕೀಲ ಜಗದೀಶ್ ಹೇಳಿದ್ದಾರೆ.

    ಪ್ರಕರಣ ಸಂಬಂಧ ಸಿಡಿ ಲೇಡಿ ಇಂದು ತನ್ನ ಮೂರನೇ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಇಂದು ದೂರು ನೀಡುವುದಾಗಿ ತಿಳಿಸಿದ್ದಾರೆ. ಈ ಬೆನ್ನಲ್ಲೇ ವಕೀಲ ಜಗದೀಶ್ ಮಾತನಾಡಿ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಎಸ್‍ಐಟಿಯನ್ನು ಸೆಟಪ್ ಮಾಡಿದೆ ಎಂದರು.

    ಸಿಡಿಯಲ್ಲಿರುವ ಯುವತಿಯ ಕಾನೂನಿನ ರಕ್ಷಣೆಗೆ ನಾವು ಓಪನ್ ಅನೌನ್ಸ್ ಮೆಂಟ್ ಮಾಡಿದ್ದೀವಿ. ಆಕೆ ಕೂಡ ನನಗೆ ರಕ್ಷಣೆ ಬೇಕೆಂದು ಬಹಿರಂಗವಾಗಿಯೇ ಒಂದು ವೀಡಿಯೋ ಬಿಡುಗಡೆ ಮಾಡಿದ್ದಳು. ಇಂದು ಆಕೆಯೇ ಒಂದು ಲಿಖಿತ ದೂರು ಬರೆದು ಕಳುಹಿಸಿದ್ದಾಳೆ. ಅದನ್ನು ನಾವು ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಅವರಿಗೆ ಇಂದು ಮಧ್ಯಾಹ್ನ 2.30ಕ್ಕೆ ತಲುಪಿಸುತ್ತೇವೆ. ಅಲ್ಲದೆ ಅದರ ಮೇಲೆ ಕ್ರಮ ಜರುಗಿಸಲು ಒತ್ತಾಯಿಸುತ್ತೇವೆ ಅಂದ್ರು.

    ಮುಂದೆ ಕಮಿಷನರ್ ಆಫೀಸ್ ನಲ್ಲಿ ಏನೇನು ಬೆಳವಣಿಗೆಗಗಳು ಆಗುತ್ತವೆ ಎಂಬುದನ್ನು ನಿಮಗೆ ತಿಳಿಸುತ್ತೇವೆ. ಆಕೆಯ ಪೋಷಕರಿಗೂ ರಕ್ಷಣೆ ನೀಡಬೇಕು ಎಂದು ಕೇಳಿಕೊಂಡಿದ್ದಾಳೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಪೊಲೀಸರು, ಎಸ್‍ಐಟಿ ಹಾಗೂ ಯಡಿಯೂರಪ್ಪ ಸರ್ಕಾರ ಆಕೆಗೆ ನ್ಯಾಯ ಕೊಡುತ್ತೆ ಅಂತ ಭಾವಿಸುತ್ತೇವೆ. ಅಲ್ಲದೆ ಆಕೆಗೆ ರಕ್ಷಣೆ ಕೊಟ್ಟರೆ ಆಕೆಯೇ ಪೊಲೀಸರ ಮುಂದೆ ಬಂದು ಹೇಳಿಕೆ ದಾಖಲಿಸುತ್ತಾಳೆ ಎಂದು ವಕೀಲ ಜಗದೀಶ್ ತಿಳಿಸಿದ್ದಾರೆ.

    ಸಿಡಿ ಲೇಡಿ ಇಂದು ಹೇಳಿದ್ದೇನು..?
    ಕರ್ನಾಟಕದ ಜನತೆ, ತಂದೆ-ತಾಯಿಯರ ಆಶೀರ್ವಾದ, ಎಲ್ಲಾ ಪಕ್ಷದ ನಾಯಕರು ಹಾಗೂ ಎಲ್ಲಾ ಸಂಘಟನೆಯವರಿಂದ ನನಗೆ ತುಂಬಾನೇ ಬೆಂಬಲ ಸಿಗುತ್ತಿದೆ. 24 ದಿನದಿಂದ ನಾನು ಜೀವ ಭಯದಲ್ಲಿ ಬೆದರಿಕೆಗಳಿಂದ ಭಯ ಭಯದಲ್ಲಿ ಬದುಕ್ತಾ ಇದ್ದೇನೆ. ಆದರೆ ಇಂದು ಎಲ್ಲೋ ಕಡೆಯಿಂದ ಒಂದು ಧೈರ್ಯ ಬಂದಿದೆ. ಆ ಧೈರ್ಯ ಬಂದಿರೋದಕ್ಕೆ ಹಾಗೂ ನನ್ನನ್ನು ಎಲ್ಲರೂ ಬೆಂಬಲಿಸುತ್ತಾ ಇದ್ದೀರಾ ಅನ್ನೋ ಕಾರಣಕ್ಕೆ ಇಂದು ನಾನು ನನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುತ್ತಿದೇನೆ ಎಂದು ಸಿಡಿ ಲೇಡಿ ಹೇಳಿದ್ದಾರೆ.

  • ಸಿಡಿ ಲೇಡಿಯ ಮತ್ತೊಂದು ವೀಡಿಯೋ ಹೇಳಿಕೆ ಔಟ್- ಜಾರಕಿಹೊಳಿ ವಿರುದ್ಧ ಇಂದು ದೂರು

    ಸಿಡಿ ಲೇಡಿಯ ಮತ್ತೊಂದು ವೀಡಿಯೋ ಹೇಳಿಕೆ ಔಟ್- ಜಾರಕಿಹೊಳಿ ವಿರುದ್ಧ ಇಂದು ದೂರು

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಞಾತ ವಾಸದಲ್ಲಿರುವ ಸಿಡಿ ಲೇಡಿ ಇದೀಗ ಇಂದು ಮತ್ತೊಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

    ವೀಡಿಯೋದಲ್ಲಿ ಕರ್ನಾಟಕದ ಜನತೆ, ತಂದೆ-ತಾಯಿಯರ ಆಶೀರ್ವಾದ, ಎಲ್ಲಾ ಪಕ್ಷದ ನಾಯಕರು ಹಾಗೂ ಎಲ್ಲಾ ಸಂಘಟನೆಯವರಿಂದ ನನಗೆ ತುಂಬಾನೇ ಬೆಂಬಲ ಸಿಗುತ್ತಿದೆ ಎಂದು ತಿಳಿಸಿದ್ದಾರೆ.

    24 ದಿನದಿಂದ ನಾನು ಜೀವ ಭಯದಲ್ಲಿ ಬೆದರಿಕೆಗಳಿಂದ ಭಯ ಭಯದಲ್ಲಿ ಬದುಕ್ತಾ ಇದ್ದೇನೆ. ಆದರೆ ಇಂದು ಎಲ್ಲೋ ಕಡೆಯಿಂದ ಒಂದು ಧೈರ್ಯ ಬಂದಿದೆ. ಆ ಧೈರ್ಯ ಬಂದಿರೋದಕ್ಕೆ ಹಾಗೂ ನನ್ನನ್ನು ಎಲ್ಲರೂ ಬೆಂಬಲಿಸುತ್ತಾ ಇದ್ದೀರಾ ಅನ್ನೋ ಕಾರಣಕ್ಕೆ ಇಂದು ನಾನು ನನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುತ್ತಿದೇನೆ ಎಂದು ಸಿಡಿ ಲೇಡಿ ಹೇಳಿದ್ದಾರೆ.

    ನಿನ್ನೆಯಷ್ಟೇ ವೀಡಿಯೋ ಬಿಡುಗಡೆ ಮಾಡಿರುವ ಈಕೆ, ನಮ್ಮ ಅಪ್ಪ, ಅಮ್ಮ ಸ್ವ-ಇಚ್ಛೆಯಿಂದ ದೂರು ನೀಡಿಲ್ಲ ಅನ್ನೋದು ನನಗೆ ನೂರಕ್ಕೆ ನೂರರಷ್ಟು ಗೊತ್ತು. ಮಗಳು ತಪ್ಪು ಮಾಡಿಲ್ಲ ಅನ್ನೋದು ಪೋಷಕರಿಗೆ ಗೊತ್ತಿದೆ. ನನಗೆ ಅಪ್ಪ, ಅಮ್ಮನ ಸುರಕ್ಷತೆ ಮುಖ್ಯ. ಅವರು ಸೇಫ್ ಆಗಿದ್ದರೆ ಅನ್ನೋದು ಖಾತ್ರಿಯಾದಾಗ ಎಸ್‍ಐಟಿ ಮುಂದೆ ಬಂದು ಹೇಳಿಕೆ ದಾಖಲಿಸುತ್ತೇನೆ ಎಂದಿದ್ದರು.

    ಎಸ್‍ಐಟಿ ಯಾರ ಪರ?:
    ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಮತ್ತು ಮಹಿಳಾ ಸಂಘಟನೆಗಳು ನಮ್ಮ ತಂದೆ-ತಾಯಿಗೆ ರಕ್ಷಣೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ನನಗೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇದೆ. ನಾನು ಮಾರ್ಚ್ 12 ರಂದು ವೀಡಿಯೋ ಹೇಳಿಕೆಯನ್ನ ಎಸ್‍ಐಟಿಗೆ ನೀಡಿದ್ದೆ. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ಅವರು ದೂರು ದಾಖಲಿಸಿದ ಅರ್ಧ ಗಂಟೆಯಲ್ಲಿ ನನ್ನ ವೀಡಿಯೋ ಹೊರಗೆ ಬಿಡುತ್ತಾರೆ. ಎಸ್‍ಐಟಿ ಯಾರ ಪರ ಕೆಲಸ ಮಾಡುತ್ತಿದ್ದಾರೆ ಅನ್ನೋದು ಅರ್ಥ ಆಗ್ತಿಲ್ಲ. ಅಧಿಕಾರಿಗಳು ಯಾರನ್ನ ಸೇಫ್ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಎಸ್‍ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

  • ಸಿಡಿ ಲೇಡಿ ಪರ ನಾವಿದ್ದೇವೆ, ಧೈರ್ಯದಿಂದ ಬಂದು ಹಾಜರಾಗ್ಲಿ: ರಮೇಶ್ ಕುಮಾರ್

    ಸಿಡಿ ಲೇಡಿ ಪರ ನಾವಿದ್ದೇವೆ, ಧೈರ್ಯದಿಂದ ಬಂದು ಹಾಜರಾಗ್ಲಿ: ರಮೇಶ್ ಕುಮಾರ್

    ಕೋಲಾರ: ಸಿಡಿ ಸಂತ್ರಸ್ತೆ ಅಜ್ಞಾತ ಸ್ಥಳದಿಂದ ರಕ್ಷಣೆ ಕೋರಿದ್ದು, ಸಂತ್ರಸ್ತೆ ನೆರವಿಗೆ ನಾವಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

    ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀನಿವಾಸಪುರ ತಾಲೂಕಿನ ಅಧಿಕಾರಿಗಳ ಜೊತೆ ಕರೆದಿದ್ದ ಸಭೆಗೂ ಮುನ್ನ ರಮೇಶ್ ಕುಮಾರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಅಜ್ಞಾತ ಸ್ಥಳದಿಂದ ರಕ್ಷಣೆ ಕೋರಿ ಪಾಪ ಆಕೆ ಮನವಿ ಮಾಡಿದ್ದಾಳೆ. ಸಾರ್ವಜನಿಕ ಜೀವನದಲ್ಲಿರುವ ನಾವು, ಆಕೆ ಹಾಗೂ ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವುದು ಕರ್ತವ್ಯ ಎಂದರು.

    ಈಗಾಗಲೇ ಅಸೆಂಬ್ಲಿಯಲ್ಲಿ ಸಂತ್ರಸ್ತೆಯ ರಕ್ಷಣೆ ಕುರಿತು ಮಾತನಾಡಿದ್ದು, ಖಂಡಿತಾ ಆಕೆಗೆ ರಕ್ಷಣೆ ಒದಗಿಸುತ್ತೇವೆ. ಆಕೆ ಹೆದರಬೇಕಾಗಿಲ್ಲ, ನಮ್ಮದೇನು ಅನಾಗರಿಕ ಸಮಾಜವೇನಲ್ಲ. ಒಂದು ಹೆಣ್ಣು ಮಗಳು ಸಂಕಷ್ಟದಲ್ಲಿದ್ದು ಸಹಾಯ ಕೇಳಿದ್ದಾಳೆ ಅಂದರೆ ಆಕೆಯ ನೆರವಿಗೆ ನಾವು ನಿಲ್ಲುತ್ತೇವೆ. ಸದಾ ಸಾರ್ವಜನಿಕ ಜೀವನದಲ್ಲಿರುವ ನಾವು ಯಾರೇ ಸಹಾಯ ಕೇಳಿದರೂ ಅವರ ಸಹಾಯಕ್ಕೆ ನಿಲ್ಲುತ್ತೇವೆ. ಎಸ್‍ಐಟಿ ಮುಂದೆ ಹೇಳಿಕೆ ನೀಡಲು ಒತ್ತಡ ಇದ್ದರೆ, ನ್ಯಾಯಾಧೀಶರ ಎದುರು ಹೇಳಿಕೆ ನೀಡಲಿ. ಆಗ ಅದು ಅಧಿಕೃತವಾಗುತ್ತದೆ ಎಂದು ಸಲಹೆ ನೀಡಿದರು.

    ಸದ್ಯ ಆಕೆ ಅಜ್ಞಾತ ಸ್ಥಳದಲ್ಲಿದ್ದಾಳೆ. ಧೈರ್ಯವಾಗಿ ಬಂದು ಹೇಳಿಕೆ ನೀಡಲಿ ಎಂದ ಅವರು, ನನಗೂ ಒಂದು ಹೆಣ್ಣು ಮಗಳಿದ್ದಾಳೆ. ಆಕೆಗೆ ಸಂಕಷ್ಟ ಎದುರಾದಾಗ ನೆರವಿಗೆ ನಿಲ್ಲಬೇಕಲ್ಲವೇ. ಸಿಡಿ ಯುವತಿಗೆ ವಿಶೇಷ ರಕ್ಷಣೆ ನೀಡುವುದಕ್ಕೆ ನಾನು ಗೃಹಮಂತ್ರಿ ಅಲ್ಲ. ನಮ್ಮ ಕೆಲಸವನ್ನ ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡುತ್ತೇವೆ. ಗೌರವಯುತವಾಗಿ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    ಇದೇ ವೇಳೆ ಕಾಂಗ್ರೆಸ್ಸಿನಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತಿದೆಯಲ್ಲಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ 71 ವರ್ಷ ವಯಸ್ಸಾಗಿದೆ. ಡಿಕೆಶಿ ನನ್ನ ತಮ್ಮ ಇದ್ದ ಹಾಗೆ, ಸಿದ್ದರಾಮಯ್ಯ ನನ್ನ ನಾಯಕರು ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ರು.

  • ಕೈಗೊಂಬೆಯಾಗಿ ಕೆಲಸ, 10 ವೀಡಿಯೋ ಬರಲಿ ಹೆದರಲ್ಲ: ರಮೇಶ್ ಜಾರಕಿಹೊಳಿ

    ಕೈಗೊಂಬೆಯಾಗಿ ಕೆಲಸ, 10 ವೀಡಿಯೋ ಬರಲಿ ಹೆದರಲ್ಲ: ರಮೇಶ್ ಜಾರಕಿಹೊಳಿ

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಎರಡನೇ ವೀಡಿಯೋ ಹೇಳಿಕೆ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಯುವತಿ ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ಇಂತಹ 10 ವೀಡಿಯೋ ಬರಲಿ ನಾನು ಹೆದರಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ಇದೊಂದು ದೊಡ್ಡ ಷಡ್ಯಂತ್ರವಾಗಿದ್ದು, ರಾಜಕೀಯವಾಗಿ ಎದುರಿಸಲು ಸಿದ್ಧನಿದ್ದೇನೆ. ನಾನು ದೂರು ನೀಡಿದ ಅರ್ಧ ಗಂಟೆ ನಂತ್ರ ವೀಡಿಯೋ ಬಂದಿರೋದು ಎಲ್ಲರಿಗೂ ಗೊತ್ತು. ಈ ರೀತಿಯ 10 ವೀಡಿಯೋಗಳು ಬಂದ್ರೂ ಎದುರಿಸುವ ಶಕ್ತಿ ನನ್ನಲಿದೆ ಎಂದರು.

    ಒತ್ತಡದಲ್ಲಿ ಯುವತಿ: ಯುವತಿ ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾಳೆ ಎಂಬುದರ ಬಗ್ಗೆ ನಾವು ಖಾಸಗಿಯಾಗಿ ತನಿಖೆ ಮಾಡುತ್ತಿದ್ದು, ನಮ್ಮ ವಕೀಲರು ಮಾಹಿತಿ ಜೊತೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳನ್ನ ಸಂಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಹೇಳಿಕೆ ನೀಡಬಾರದು ಎಂದು ವಕೀಲರು ಸೂಚನೆ ನೀಡಿದ್ದಾರೆ. ಆದ್ರೆ ಇಂದು ಸ್ಪಷ್ಟನೆ ನೀಡೋದು ಅನಿವಾರ್ಯ. ಆ ಯುವತಿ ಎಷ್ಟು ಒತ್ತಡದಲ್ಲಿದ್ದಾಳೆ ಅನ್ನೋದು ವೀಡಿಯೋದಲ್ಲಿ ಕಾಣುತ್ತಿದೆ.

    ನಿರ್ದೋಷಿ ಆಗಿ ಬರುತ್ತೇನೆ: ನಾನು ಮಾತ್ರ ಯಾವುದೇ ತಪ್ಪು ಮಾಡಿಲ್ಲ. ಅವರನ್ನ ಜೈಲಿಗೆ ಕಳುಹಿಸದೇ ಬಿಡಲ್ಲ. ವೀಡಿಯೋದಲ್ಲಿ ಹೇಳುವ ಯುವತಿ ಪೊಲೀಸರ ಮುಂದೆ ಬಂದು ಹೇಳಲಿ. ಕಾಂಗ್ರೆಸ್ ನಾಯಕರ ಸಹಕಾರ ಕೇಳ್ತಾರೆ ಅಂದ್ರೆ ಇದರಲ್ಲಿರುವ ಷಡ್ಯಂತ್ರ ಅರ್ಥವಾಗಬೇಕಿದೆ. ನಾವು ಸಹ ಹಲವು ದಾಖಲೆ ಸಂಗ್ರಹಿಸಿದ್ದು, ಸದ್ಯ ನನ್ನ ಜೇಬಿನಲ್ಲಿರೋ ದಾಖಲೆ ತೋರಿಸಿದ್ರೆ ಎಲ್ಲರೂ ಶಾಕ್ ಆಗ್ತಾರೆ. ಮಹಾ ನಾಯಕನ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಆದ್ರೆ ನಾನು ಕಾನೂನು ಹೋರಾಟ ನಡೆಸಿ ನಿರ್ದೋಷಿ ಆಗಿ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಧ್ವನಿ ಬದಲಾವಣೆ ಗಮನಿಸಿ: ಸಿಡಿ ಯುವತಿ ಮೊದಲ ಮತ್ತು ಎರಡನೇ ವೀಡಿಯೋದಲ್ಲಿ ಧ್ವನಿ ಹೇಗಿತ್ತು ಅನ್ನೋದನ್ನ ಗಮನಿಸಿ. ಸಮಯ ಬಂದಾಗ ನಾನು ನನ್ನ ಬಳಿ ಇರೋ ದಾಖಲಾತಿ ಬಿಡುಗಡೆ ಮಾಡ್ತೀನಿ. ಮೊನ್ನೆವರೆಗೂ ವಿಪಕ್ಷಗಳು ಹಾಗೂ ಸಿದ್ದರಾಮಯ್ಯ ಬಗ್ಗೆ ನನಗೆ ಅಪಾರಗೌರವ ಇತ್ತು. ರೇಪ್ ಕೇಸ್ ಹಾಕಿ ಅಂತ ಹೇಳಿದಾಗ ನನಗೂ ಒಂದು ಕ್ಷಣ ಶಾಕ್ ಆಯ್ತು. ಯಾಕೆ ಅವರು ಹಾಗೆ ಹೇಳಿದ್ರೂ ಅನ್ನೋದು ಗೊತ್ತಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಸದನದಲ್ಲಿ ಕಾಂಗ್ರೆಸ್ ಧರಣಿಗೆ ಅಸಮಾಧಾನ ಹೊರ ಹಾಕಿದರು.

    ಯುವತಿ ಹೇಳಿದ್ದೇನು?: ನಮ್ಮ ಅಪ್ಪ, ಅಮ್ಮ ಸ್ವಇಚ್ಛೆಯಿಂದ ದೂರು ನೀಡಿಲ್ಲ ಅನ್ನೋದು ನನಗೆ ನೂರಕ್ಕೆ ನೂರರಷ್ಟು ಗೊತ್ತು. ಮಗಳು ತಪ್ಪು ಮಾಡಿಲ್ಲ ಅನ್ನೋದು ಪೋಷಕರಿಗೆ ಗೊತ್ತಿದೆ. ನನಗೆ ಅಪ್ಪ, ಅಮ್ಮನ ಸುರಕ್ಷತೆ ಮುಖ್ಯ. ಅವರು ಸೇಫ್ ಆಗಿದ್ದರೆ ಅನ್ನೋದು ಖಾತ್ರಿಯಾದಾಗ ಎಸ್‍ಐಟಿ ಮುಂದೆ ಬಂದು ಹೇಳಿಕೆ ದಾಖಲಿಸುತ್ತೇನೆ.

    ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಮತ್ತು ಮಹಿಳಾ ಸಂಘಟನೆಗಳು ನಮ್ಮ ತಂದೆ-ತಾಯಿಗೆ ರಕ್ಷಣೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ನನಗೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇದೆ. ನಾನು ಮಾರ್ಚ್ 12 ರಂದು ವೀಡಿಯೋ ಹೇಳಿಕೆಯನ್ನ ಎಸ್‍ಐಟಿಗೆ ನೀಡಿದ್ದೆ. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ಅವರು ದೂರು ದಾಖಲಿಸಿದ ಅರ್ಧ ಗಂಟೆಯಲ್ಲಿ ನನ್ನ ವೀಡಿಯೋ ಹೊರಗೆ ಬಿಡುತ್ತಾರೆ. ಎಸ್‍ಐಟಿ ಯಾರ ಪರ ಕೆಲಸ ಮಾಡುತ್ತಿದ್ದಾರೆ ಅನ್ನೋದು ಅರ್ಥ ಆಗ್ತಿಲ್ಲ. ಅಧಿಕಾರಿಗಳು ಯಾರನ್ನ ಸೇಫ್ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಎಸ್‍ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

  • ಜಾರಕಿಹೊಳಿ ವಿರುದ್ಧ ಇಡಿಗೆ ಕಾಂಗ್ರೆಸ್ ದೂರು- ಸಿಡಿ ಲೇಡಿಗೆ 5ನೇ ಬಾರಿ ನೋಟಿಸ್

    ಜಾರಕಿಹೊಳಿ ವಿರುದ್ಧ ಇಡಿಗೆ ಕಾಂಗ್ರೆಸ್ ದೂರು- ಸಿಡಿ ಲೇಡಿಗೆ 5ನೇ ಬಾರಿ ನೋಟಿಸ್

    – ಪಂಚತಾರಾ ಹೋಟೆಲ್‍ಗಳಲ್ಲಿ ಸಿಡಿ ಗ್ಯಾಂಗ್ ಓಡಾಟ

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಣದ ವಹಿವಾಟಿನ ಬಗ್ಗೆ ತನಿಖೆ ನಡೆಸಿ ಎಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳಿಗೆ ಕಾಂಗ್ರೆಸ್ ದೂರು ನೀಡಿದೆ.

    ಕಾಂಗ್ರೆಸ್ ಮುಖಂಡ ಮನೋಹರ್ ಅವರು ಶಾಂತಿ ನಗರದಲ್ಲಿರುವ ಇಡಿ ಕಚೇರಿಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆದಿರೋ ಬಗ್ಗೆ ತನಿಖೆ ನಡೆಸಬೇಕು. ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಒಟ್ಟಿನಲ್ಲಿ ಸಿಡಿ ಪ್ರಕರಣದ ತನಿಖೆ ಮುಂದುವರಿದಿದೆ. ಸೋಮವಾರ ಸಂಜೆ ಬೆಳಗಾವಿಯ ಗೌಪ್ಯ ಸ್ಥಳದಲ್ಲಿ ಸಿಡಿ ಲೇಡಿ ಪೋಷಕರನ್ನು ಎಸ್‍ಐಟಿ ವಿಚಾರಣೆಗೆ ಒಳಪಡಿಸಿದೆ. ಆದರೆ ಅವರಿಂದ ಹೆಚ್ಚಿನ ಮಾಹಿತಿಯನ್ನು ಎಸ್‍ಐಟಿಗೆ ಪಡೆಯಲು ಆಗಿಲ್ಲ. ಕಳೆದ ವಾರ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ನೀಡಿದ ದೂರಿನ ಅಂಶಗಳನ್ನು ಬಿಟ್ಟು ಬೇರೇನನ್ನು ಪೋಷಕರು ಹೇಳಿಲ್ಲ. ಆದರೆ ಮಾರ್ಚ್ 5ರ ನಂತರ ಮಗಳು ನಮ್ಮ ಸಂಪರ್ಕಕ್ಕೆ ಬಂದಿಲ್ಲ. ಮಗಳು ಅಪಾಯದಲ್ಲಿದ್ದಾಳೆ. ಅವರನ್ನು ಆದಷ್ಟು ಬೇಗ ಕಾಪಾಡಿ ಎಂಬ ಮಾತನ್ನು ಮಾತ್ರ ಪೋಷಕರು ಹೇಳಿದ್ದಾರೆ ಎನ್ನಲಾಗಿದೆ.

    ಇಂದು ಕೂಡ ಸಿಡಿ ಲೇಡಿ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಎಸ್‍ಐಟಿ ಐದನೇ ಬಾರಿಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಗೆ ಬನ್ನಿ ಎಂದು ಆಕೆಯ ವಾಟ್ಸಪ್ ನಂಬರ್, ಇ-ಮೇಲ್ ಖಾತೆಗೆ ನೋಟಿಸ್ ಕಳಿಸಿದ್ದಾರೆ. ಶಂಕಿತ ಸಿಡಿಕೋರರ ಸುಳಿವು ಪೊಲೀಸರಿಗೆ ಇನ್ನೂ ಕೂಡ ಸಿಕ್ಕಿಲ್ಲ. ದಿನಕ್ಕೊಂದು ಜಾಗ ಬದಲಿಸ್ತಿದ್ದಾರೆ. ಮೊನ್ನೆ ದೆಹಲಿ, ನಿನ್ನೆ ಲಖನೌನ ಪಂಚತಾರಾ ಹೋಟೆಲ್‍ನಲ್ಲಿ ಉಳಿದುಕೊಂಡಿದ್ರು. ಎಸ್‍ಐಟಿ ಸ್ಥಳಕ್ಕೆ ಹೋಗೋದ್ರೊಳಗೆ ಅವರು ಜಾಗ ಬದಲಿಸ್ತಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದ್ಕಡೆ ಸಿಡಿ ತನಿಖೆಯ ಪ್ರಗತಿಯ ಬಗ್ಗೆ ಗೃಹ ಸಚಿವರಿಗೆ ಎಸ್‍ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಮತ್ತು ಜಂಟಿ ಆಯುಕ್ತ ಸಂದೀಪ್ ಪಾಟೀಲ್ ವರದಿ ಒಪ್ಪಿಸಿದ್ದಾರೆ.

  • ಸಿಡಿ ಲೇಡಿ ಹೆಸರಿನಲ್ಲಿ ಸಿನಿಮಾ – ರಿಜಿಸ್ಟರ್ ಆಯ್ತು ಟೈಟಲ್

    ಸಿಡಿ ಲೇಡಿ ಹೆಸರಿನಲ್ಲಿ ಸಿನಿಮಾ – ರಿಜಿಸ್ಟರ್ ಆಯ್ತು ಟೈಟಲ್

    ಮೈಸೂರು: ಸದ್ಯ ಪ್ರಚಲಿತದಲ್ಲಿರುವ ವಿಚಾರವೆಂದರೆ ಮಾಜಿ ಸಚಿವರ ಸಿಡಿ ಪ್ರಕರಣ. ಇದೀಗ ಈ ಸಂಬಂಧ ಸಿನಿಮಾ ಕೂಡ ಆಗಲಿದ್ದು, ಈಗಾಗಲೇ ಟೈಟಲ್ ಕೂಡ ರಿಜಿಸ್ಟರ್ ಆಗಿದೆ.

    ಹೌದು. ‘ಸಿಡಿ ಲೇಡಿ’ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿರುವುದಾಗಿ ನಿರ್ಮಾಪಕ ಸಂದೇಶ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಒಂದು ಸಿನಿಮಾ ಆಗಿ ಹೊರಹೊಮ್ಮಲಿದೆ.

    ಈ ಸಂಬಂಧ ಪ್ರತಿಕ್ರಿಯಿಸಿರುವ ಸಂದೇಶ್, ಸಿಡಿ ಲೇಡಿ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇನೆ. ಕಥೆ ಚಿತ್ರಕಥೆ ಇನ್ನೂ ಸಿದ್ಧವಾಗಿಲ್ಲ. ಯಾವಾಗ ಸೆಟ್ಟೇರುತ್ತದೆ ಅನ್ನೋ ಬಗ್ಗೆಯೂ ನಿರ್ಧರಿಸಿಲ್ಲ. ಮುಂದೆ ಈ ಎಲ್ಲಾ ವಿಚಾರಗಳು ಫೈನಲ್ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

    ನಿನ್ನೆಯಷ್ಟೇ ಸಂದೇಶ್ ಫಿಲಂಸ್ ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ಸಿಡಿ ಲೇಡಿ ಶೀರ್ಷಿಕೆ ನೀಡಬೇಕೆಂದು ಮನವಿ ಮಾಡಿಕೊಂಡಿತ್ತು. ಯಾವುದೇ ಟೈಟಲ್ ರಿಜಿಸ್ಟರ್ ಆಗಬೇಕಾದರೆ ಫಿಲ್ಮ್ ಚೇಂಬರ್ ನಲ್ಲಿ ಸಭೆ ಕರೆದು ಪರ ವಿರೋಧ ಒಳಿತು ತೀರ್ಮಾನಿಸಿ ಒಕ್ಕೊರಲಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

    ಸಂದೇಶ್ ನಾಗರಾಜ್ ಸಿನಿಮಾ ನಿರ್ಮಾಣಗಳ ಜೊತೆಯಲ್ಲಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆಯೂ ಇದೇ ರೀತಿಯ ಪ್ರಕರಣಗಳು ವರದಿಯಾದಾಗ ಮಾಧ್ಯಮಗಳಲ್ಲಿ ಹೆಚ್ಚು ಬಳಕೆಯಾದ ಪದಗಳನ್ನ ಶೀರ್ಷಿಕೆ ನೀಡುವಂತೆ ಹಲವರು ಅರ್ಜಿ ಸಲ್ಲಿಸಿದ್ದರು.

  • ‘ಸಿಡಿ ಲೇಡಿ’ ಟೈಟಲ್‍ಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅರ್ಜಿ

    ‘ಸಿಡಿ ಲೇಡಿ’ ಟೈಟಲ್‍ಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅರ್ಜಿ

    ಬೆಂಗಳೂರು: ಮಾಜಿ ಸಚಿವರ ಸಿಡಿ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಕೆಲ ಪದಗಳು ಹೆಚ್ಚು ಬಳಕೆಯಾಗಿವೆ. ಈಗ ಈ ಪ್ರಕರಣಕ್ಕೆ ಬಳಕೆಯಾದ ಸಿಡಿ ಲೇಡಿ ಟೈಟಲ್ ಪಡೆಯಲು ಒಡೆಯ ಸಿನಿಮಾ ನಿರ್ಮಾಪಕ ಸಂದೇಶ್ ನಾಗರಾಜ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ.

    ಸಂದೇಶ್ ಫಿಲಂಸ್ ಅರ್ಜಿ ಸಲ್ಲಿಸಿದ್ದು ಸಿಡಿ ಲೇಡಿ ಶೀರ್ಷಿಕೆ ನೀಡಬೇಕೆಂದು ಮನವಿ ಮಾಡಿಕೊಂಡಿದೆ. ಯಾವುದೇ ಟೈಟಲ್ ರಿಜಿಸ್ಟರ್ ಆಗಬೇಕಾದರೆ ಫಿಲ್ಮ್ ಚೇಂಬರ್ ನಲ್ಲಿ ಸಭೆ ಕರೆದು ಪರ ವಿರೋಧ ಒಳಿತು ತೀರ್ಮಾನಿಸಿ ಒಕ್ಕೊರಲಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸಂದೇಶ್ ನಾಗರಾಜ್ ಸಿನಿಮಾ ನಿರ್ಮಾಣಗಳ ಜೊತೆಯಲ್ಲಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ.

    ಈ ಹಿಂದೆಯೂ ಇದೇ ರೀತಿಯ ಪ್ರಕರಣಗಳು ವರದಿಯಾದಾಗ ಮಾಧ್ಯಮಗಳಲ್ಲಿ ಹೆಚ್ಚು ಬಳಕೆಯಾದ ಪದಗಳನ್ನ ಶೀರ್ಷಿಕೆ ನೀಡುವಂತೆ ಹಲವರು ಅರ್ಜಿ ಸಲ್ಲಿಸಿದ್ದರು. ಅದೇ ರೀತಿ ಕೆಲವರು ಫನ್ನಿ ಟೈಟಲ್ ಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ.