Tag: ಸಿಡಿ ಲೇಡಿ

  • ಸಿಡಿ ಲೇಡಿಗೆ ಮೆಂಟಲ್ ಮೆಡಿಕಲ್ ಟೆಸ್ಟ್ ಆಗಬೇಕು: ನಾರಾಯಣ ಗೌಡ

    ಸಿಡಿ ಲೇಡಿಗೆ ಮೆಂಟಲ್ ಮೆಡಿಕಲ್ ಟೆಸ್ಟ್ ಆಗಬೇಕು: ನಾರಾಯಣ ಗೌಡ

    – ಸತ್ಯಾಂಶ ಇದ್ರೆ ನಮ್ಮ ಸಿಡಿನೂ ಬಿಡುಗಡೆ ಮಾಡ್ಲಿ

    ಚಿಕ್ಕಬಳ್ಳಾಪುರ: ಸಿಡಿ ಲೇಡಿಗೆ ಮೆಂಟಲ್ ಮೆಡಿಕಲ್ ಟೆಸ್ಟ್ ಆಗಬೇಕು ಎಂದು ಸಚಿವ ನಾರಾಯಾಣಗೌಡ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸಿದ್ದ ಸಚಿವರು ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ನ್ಯಾಯಾಧೀಶರ ಮುಂದೆ ಹಾಜರಾದ ಸಿಡಿ ಲೇಡಿ ಹೇಳಿಕೆ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಹೆಣ್ಣು ಮಗಳ ಹೇಳಿಕೆ ಹೊರಗೆ ಬಂದಿಲ್ಲ. ಆ ಹೆಣ್ಣು ಮಗಳು ಕನ್ಫ್ಯೂಸ್ ನಲ್ಲಿದ್ದಾಳೆ. ಒಂದೊಂದು ದಿನ ಒಂದೊಂದು ತರ ಹೇಳಿಕೆ ಕೊಡ್ತಿದ್ದಾಳೆ. ಹಾಗಾಗಿ ಆಕೆಗೆ ಕೂಲ್ ಅಗಿ ಮೆಂಟಲ್ ಚೆಕ್ ಅಪ್ ಮಾಡಿಸಬೇಕಿದೆ ಎಂದು ಹೇಳಿದ್ದಾರೆ.

    ಮೆಡಿಕಲ್ ಚೆಕ್ ಅಪ್ ಅದ ಮೇಲೆ ಸತ್ಯಾಂಶ ಗೊತ್ತಾಗಲಿದೆ. ಈಗಾಗಲೇ ಎಫ್‍ಐಆರ್ ದಾಖಲಾಗಿದ್ರೂ ನಾಳೆ ಹೇಳಿಕೆ ಬದಲಾಗಬಹುದು. ಆಕೆ ಮೊದಲು ಮೆಂಟಲಿ ಫಿಟ್ ಇದ್ದಾಳಾ ಇಲ್ವಾ ಅನ್ನೋದು ಸಹ ಮುಖ್ಯ ತಾನೆ ಅಂತ ಹೇಳಿದರು.

    ಇದಕ್ಕೂ ಮುನ್ನ ಮಾತನಾಡಿದ್ದ ಸಚಿವರು, ಸಿ.ಡಿ ವಿಚಾರದಲ್ಲಿ ಯಾರ್ಯಾರು ಏನೇನು ಮಾಡಿದ್ದಾರೋ ಅದರಷ್ಟೇ ಊಟ ಮಾಡ್ತಾರೆ. ಉಪಚುನಾವಣೆ ಮೇಲೆ ಸಿಡಿ ಪ್ರಕರಣದ ಪ್ರಭಾವ ಬೀರೋಲ್ಲ. ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

    ಇದೇ ವೇಳೆ ಆರು ಜನ ಸಚಿವರ ಕೋರ್ಟ್ ಮೆಟ್ಟೇಲೇರಿ ತಂದ ತಡೆಯಾಜ್ಞೆ ಇಂದಿಗೆ ಅಂತ್ಯ ಹಿನ್ನೆಲೆ ಅದಕ್ಕೆ ಪ್ರತಿಕ್ರಿಯಸಿ, ಅದರ ಬಗ್ಗೆ ನಮಗೇನು ತೊಂದರೆ ಇಲ್ಲ. ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದರೆ ಚರಂಡಿ ಗಲೀಜು ಬೀಳುತ್ತೆ ಅಂತ ಹೈಕೋರ್ಟಿಗೆ ಹೋಗಿದ್ವಿ. ಈಗಲೂ ಸತ್ಯಾಂಶ ಇದ್ರೆ ನಮ್ಮ ಸಿಡಿನೂ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.

    ರಮೇಶ್ ಜಾರಕಿಹೊಳಿ ಅವಿತುಕೊಂಡಿಲ್ಲ. ಕೆಲಸ ಕಾರ್ಯಕ್ಕೆ ಅಂತ ಮಹಾರಾಷ್ಟ್ರಕ್ಕೆ ಹೋಗಿ ಬರ್ತಾರೆ. ಅವರಿಗೆ ಬಂಧನದ ಭೀತಿ ಇಲ್ಲ, ಅವಿತುಕೊಳ್ಳುವ ಪ್ರಶ್ನೆ ಯೇ ಇಲ್ಲ ಎಂದರು.

  • ನಲಪಾಡ್‌ ಆಪ್ತನ ಕಾರಿನಲ್ಲಿ ಸಿಡಿ ಲೇಡಿ ಸಂಚಾರ

    ನಲಪಾಡ್‌ ಆಪ್ತನ ಕಾರಿನಲ್ಲಿ ಸಿಡಿ ಲೇಡಿ ಸಂಚಾರ

    ಬೆಂಗಳೂರು: ಅಜ್ಞಾತ ಸ್ಥಳದಲ್ಲಿದ್ದುಕೊಂಡು ವಿಡಿಯೋ ಹೇಳಿಕೆ ಬಿಡುಗಡೆ ಮಾಡುತ್ತಿದ್ದ ಸಿಡಿ ಲೇಡಿ ಮಂಗಳವಾರ ಕಾಂಗ್ರೆಸ್‌ ಯುವ ಮುಖಂಡ ಮೊಹಮ್ಮದ್‌ ನಲಪಾಡ್‌ ಸ್ನೇಹಿತರೊಬ್ಬರು ರಕ್ಷಣೆ ನೀಡಿದ್ದಾರೆ.

    ನಲಪಾಡ್‌ ಪ್ರಕರಣದಲ್ಲಿ ಆರೋಪಿಯಾಗಿರುವ ನಫಿ ಮಾಲೀಕತ್ವದ ಕಾರಿನಲ್ಲಿ ಸಿಡಿ ಲೇಡಿ ಸಂಚರಿಸಿದ್ದಾರೆ. ಆಡುಗೋಡಿಯ ಟೆಕ್ನಿಕಲ್‌ ಕೇಂದ್ರದಿಂದ ರಾತ್ರಿ ಅಜ್ಞಾತ ಸ್ಥಳಕ್ಕೆ ಸಿಡಿ ಲೇಡಿ ಸಂಚರಿಸಿದ್ದರು. ಈ ವೇಳೆ ನಫಿ ಮಾಲೀಕತ್ವದ ಟೊಯೊಟಾ ಫಾರ್ಚೂನರ್‌ ಕಾರಿನಲ್ಲಿ ತೆರಳಿದ್ದಾರೆ. ಕೆಎ 04 ಎಂಯು 9232 ಸಂಖ್ಯೆಯ ಫಾರ್ಚೂನರ್‌ ಕಾರು ನಫಿ ಮೊಹಮ್ಮದ್‌ ನಾಸೀರ್‌ ಹೆಸರಿನಲ್ಲಿದೆ. 2018ರ ಜೂನ್‌ 12 ರಂದು ಈ ಕಾರು ನೋಂದಣಿಯಾಗಿದೆ.

    ಈಗಾಗಲೇ ಈ ಪ್ರಕರಣದಲ್ಲಿ ಕಾಂಗ್ರೆಸ್‌ ಕೈವಾಡವಿದೆ ಎಂದು ಬಿಜೆಪಿ ಆರೋಪಿಸುತ್ತಿದ್ದು, ಈಗ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ನಿನ್ನೆ ಟ್ವೀಟ್‌ ಮಾಡಿದ್ದ ಬಿಜೆಪಿ ಕರ್ನಾಟಕ ಸಿಡಿ ಪ್ರಕರಣ ಕೆಪಿಸಿಸಿ ಪ್ರಾಯೋಜಿತ ಎಂದು ಸಾಬೀತಾಗುತ್ತಿದೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಅವರು ಯುವತಿ ಹೇಳಿಕೆ ದಾಖಲು ಮಾಡುವ ಸಂದರ್ಭದಲ್ಲಿ ಹಾಜರಿದ್ದು ಸಹಾಯ ಮಾಡುತ್ತಾರೆ ಎಂದರೆ ಏನರ್ಥ?ಕೆಪಿಸಿಸಿ ಕಚೇರಿಯಿಂದಲೇ ಈ ಪ್ರಕರಣ ನಿರ್ವಹಣೆಯಾಗುತ್ತಿದೆ ಎಂಬುದು ನಿಜವೇ ಎಂದು ಪ್ರಶ್ನಿಸಿತ್ತು.

    ಇನ್ನೊಂದು ಟ್ವೀಟ್‌ ನಲ್ಲಿ ಮಹಾನಾಯಕ, ಮಹಾನಾಯಕಿ, ಮಾಸ್ಟರ್ ಮೈಂಡ್, ಕೆಪಿಸಿಸಿ ಕಾನೂನು ಘಟಕದ ಸದಸ್ಯ. ಜಾಯಿನ್ ದ ಡಾಟ್ಸ್. ಕರ್ನಾಟಕ ಕಾಂಗ್ರೆಸ್‌ ಪಕ್ಷದ ಪ್ರಾಯೋಜಿತವೇ ಎಂದು ಪ್ರಶ್ನಿಸಿತ್ತು.

    https://twitter.com/BJP4Karnataka/status/1376930981110640644

    ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಮಸ್ಯೆ ಕೇಳಿಕೊಂಡು ಬಂದವರಿಗೆ ನೆರವಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ವಿಡಿಯೋ ಮಾಡಿ ಕಷ್ಟವನ್ನು ತೋಡಿಕೊಂಡಿದ್ದರು ಎಂದು ಹೇಳಿದ್ದರು.

  • ಸಿಡಿ ಯುವತಿ ಹಾಜರ್‌, ಜಾರಕಿಹೊಳಿಗೆ ಸಂಕಷ್ಟ – ಎಫ್‌ಐಆರ್‌ ರದ್ದತಿಗೆ ಸಲ್ಲಿಸುತ್ತಾರಾ ಅರ್ಜಿ?

    ಸಿಡಿ ಯುವತಿ ಹಾಜರ್‌, ಜಾರಕಿಹೊಳಿಗೆ ಸಂಕಷ್ಟ – ಎಫ್‌ಐಆರ್‌ ರದ್ದತಿಗೆ ಸಲ್ಲಿಸುತ್ತಾರಾ ಅರ್ಜಿ?

    ಬೆಂಗಳೂರು: ಇಲ್ಲಿಯವರೆಗೆ ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡುತ್ತಿದ್ದ ಸಿಡಿ ಲೇಡಿ ನ್ಯಾಯಾಧೀಶರು ಮತ್ತು ಎಸ್‌ಐಟಿ ಮುಂದೆ ಹೇಳಿಕೆ ನೀಡಿದ ಬಳಿಕ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಿದೆ.

    ಸಾಧಾರಣವಾಗಿ ಯಾವುದೇ ದೊಡ್ಡ ವ್ಯಕ್ತಿಗಳು ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಆ ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸುತ್ತಾರೆ. ಹೈಕೋರ್ಟ್‌ನಲ್ಲೂ ತಮ್ಮ ಪರವಾಗಿ ಆದೇಶ ಬಾರದೇ ಇದರೆ ಸುಪ್ರೀಂ ಮೊರೆ ಹೋಗುತ್ತಾರೆ. ಈ ಅರ್ಜಿಯ ವಿಚಾರಣೆ ಸಮಯದಲ್ಲೇ ಸ್ವಲ್ಪ ಸಮಯ ಹೋಗುತ್ತದೆ. ಆದರೆ ಈ ಪ್ರಕರಣದಲ್ಲಿ ಜಾರಕಿಹೊಳಿ ಎಫ್‌ಐಆರ್‌ ರದ್ಧತಿಗೆ ಇನ್ನೂ  ಅರ್ಜಿ ಸಲ್ಲಿಸಿಲ್ಲ.

    ನಿರೀಕ್ಷಣಾ ಜಾಮೀನು ಬೇಡ ಎನ್ನುತ್ತಿರುವ ರಮೇಶ್‌ ಜಾರಕಿಹೊಳಿ ಯುವತಿ ಹೇಳಿಕೆ ನೀಡಿಲ್ಲ ಎಂದು ಸುಮ್ಮನಿದ್ದರು. ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರ ಜೊತೆ `ಸರ್ಕಾರವನ್ನೇ ಬೀಳಿಸಿದ್ದೇನೆ ಇದು ಯಾವ ಮಹಾ’ ಎಂಬ ಮಾತಿನಿಂದ ಮತ್ತೊಂದು ಸಂಕಷ್ಟ ಬಂದಿದೆ.

    ಈ ಹಿಂದೆ ತಮ್ಮ ಹೇಳಿಕೆಯಲ್ಲಿ ನಾವೇ ಖಾಸಗಿ ಸಂಸ್ಥೆಗಳ ಮೂಲಕ ಮಾಹಿತಿ ಸಂಗ್ರಹಿಸುತ್ತೇವೆ ಎಂದು ಹೇಳಿದ್ದರು. ಆದರೆ ಸಂಸ್ಥೆ ಕೊನೆಯವರೆಗೂ ಯುವತಿ ಎಲ್ಲಿದ್ದಾರೆ ಮತ್ತು ಈಕೆಯ ಜೊತೆ ಇದ್ದವರು ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಪತ್ತೆ ಹಚ್ಚಲು ವಿಫಲವಾಗಿತ್ತು.

    ಯುವತಿ ಕಾನೂನು ಹೋರಾಟ ಮಾಡುತ್ತಿದ್ದರೂ ಜಾರಕಿಹೊಳಿ ತಂಡ ಅದಕ್ಕೆ ಪ್ರತಿಯಾಗಿ ಯಾವುದೇ ಕಾನೂನು ಮಾಡದೇ ಸುಮ್ಮನಿದ್ದರು. ಈ ಬಗ್ಗೆ ಪ್ರಶ್ನೆ ಕೇಳಿದಾಗ ನನ್ನ ಬಳಿ 11 ಪ್ರಮುಖ ಸಾಕ್ಷ್ಯಗಳು ಇವೆ. ಅದನ್ನು ಎಸ್‌ಐಟಿಗೆ ನೀಡುತ್ತೇನೆ ಎಂದು ಹೇಳಿದ್ದರು.

    ರಮೇಶ್‌ ಜಾರಕಿಹೊಳಿ ಪರವಾಗಿ ಈಗಾಗಲೇ ಸಹೋದರ ಬಾಲಚಂದ್ರ ಜಾರಕಿಹೊಳಿ ಹಿರಿಯ ವಕೀಲರನ್ನು ಸಂಪರ್ಕಿಸಿದ್ದಾರೆ. ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟರೆ ರಮೇಶ್‌ ಜಾರಕಿಹೊಳಿಗೆ ಸಂಕಷ್ಟ ಗ್ಯಾರಂಟಿ. ಆಕೆಯ ಹೇಳಿಕೆ ವಿಡಿಯೋ ಹೇಳಿಕೆಗೆ ತದ್ವಿರುದ್ಧವಾಗಿ ಇದ್ದರೆ ಮಾತ್ರ ಈ ಪ್ರಕರಣದಲ್ಲಿ ಪಾರು. ಇಲ್ಲದಿದ್ದರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಆಗಲಿದೆ ಎಂದು ಹಿರಿಯ ವಕೀಲರು ಹೇಳಿದ್ದಾರೆ.

    ಮುಂದಿನ ನಡೆ ಏನು?
    ಈಗಾಗಲೇ ಜಾರಕಿಹೊಳಿ ಬಹಿರಂಗವಾಗಿಯೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಯುವತಿಯ ಹೇಳಿಕೆ ಆಧಾರದ ಮೇಲೆ ಜಾರಕಿಹೊಳಿಯನ್ನು ಬಂಧನ ಮಾಡುವ ಸಾಧ್ಯತೆಯಿದೆ. ಆದರೆ ಈಗ ಯುವತಿ ಹೇಳಿಕೆ ನೀಡಿದ ಬಳಿಕ ಮುಂದೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಬಳಿಕ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದು ಮಾಡುವ ಬಗ್ಗೆಯೂ ಅರ್ಜಿ ಸಲ್ಲಿಸಬಹುದು.

  • ವಿಚಾರಣೆಗೆ ಬರುವಂತೆ ಸಿಡಿ ಲೇಡಿಗೆ 8ನೇ ಬಾರಿ ನೋಟಿಸ್

    ವಿಚಾರಣೆಗೆ ಬರುವಂತೆ ಸಿಡಿ ಲೇಡಿಗೆ 8ನೇ ಬಾರಿ ನೋಟಿಸ್

    ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಞಾತ ವಾಸದಲ್ಲಿರುವ ಯುವತಿಗೆ ಪೊಲೀಸರು 8ನೇ ಬಾರಿ ನೋಟಿಸ್ ನೀಡಿದ್ದಾರೆ.

    ಇಂದು ಸಿಡಿ ಲೇಡಿ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟಿಗೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ ಸಂಜೆ ಹೊತ್ತಿಗೆ ಇಂದು ಕೋರ್ಟ್ ಮುಂದೆ ಯುವತಿ ಹಾಜರಾಗುವುದಿಲ್ಲ ಎನ್ನುವುದು ಖಚಿತವಾಯ್ತು.

    ವಕೀಲ ಜಗದೀಶ್ ನೇತೃತ್ವದ ತಂಡವೊಂದು, ನ್ಯಾಯಾಧೀಶರ ಮುಂದೆ ಸಿಆರ್‍ಪಿಸಿ ಸೆಕ್ಷನ್ 164ರ ಅಡಿ ಯುವತಿ ಹೇಳಿಕೆ ದಾಖಲಿಸಲು ಅವಕಾಶ ಕೋರಿ ಡೆಪ್ಯೂಟಿ ರಿಜಿಸ್ಟ್ರಾರ್‍ಗೆ ಅರ್ಜಿ ಸಲ್ಲಿಸಿತು. ವಕೀಲರು ಸಲ್ಲಿಸಿದ ಅರ್ಜಿ ಮತ್ತು ಪ್ರಕರಣದ ಪೂರ್ವಪರದ ಬಗ್ಗೆ ಮಾಹಿತಿ ಪಡೆದುಕೊಂಡರು.

    ಸಂಜೆ 4 ಗಂಟೆ ನಂತರ, ಯುವತಿಯನ್ನು ಹಾಜರುಪಡಿಸಲು ಡೆಪ್ಯೂಟಿ ರಿಜಿಸ್ಟ್ರಾರ್ ಅನುಮತಿ ನೀಡಿದ್ರು. ಆದ್ರೆ ಅಷ್ಟೊತ್ತಿಗೆ ಕೋರ್ಟ್ ಕಲಾಪ ಮುಗಿಯುವ ಸಮಯ ಬಂದಿದ್ದ ಕಾರಣ, ನಾಳೆ ಬೆಳಗ್ಗೆ ಯುವತಿಯನ್ನು ಕೋರ್ಟ್ ಮುಂದೆ ಹಾಜರುಪಡಿಸುವ ಚಿಂತನೆ ನಡೆಸಿದ್ದೇವೆ ಎಂದು ವಕೀಲ ಜಗದೀಶ್ ತಿಳಿಸಿದ್ರು.

    ಇದಕ್ಕೂ ಮುನ್ನ ಎಸ್‍ಐಟಿಯ ತನಿಖಾ ವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿಡಿ ಯುವತಿ, ರಕ್ಷಣೆ ಕೋರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ರು. ನನಗೆ ಸರ್ಕಾರ ಮತ್ತು ಜಾರಕಿಹೊಳಿಯಿಂದ ಜೀವಕ್ಕೆ ಬೆದರಿಕೆ ಇದೆ. ಎಸ್‍ಐಟಿ ಮೇಲೆ ನಂಬಿಕೆ ಇಲ್ಲ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನಿಗಾದಲ್ಲಿ ಎಸ್‍ಐಟಿ ತನಿಖೆ ನಡೆಸಬೇಕು ಎಂದು ಈ ಪತ್ರದ ಮೂಲಕ ಮನವಿ ಮಾಡಿಕೊಂಡರು.

  • ಕೋರ್ಟ್ ಅವಧಿಯೊಳಗೆ ಸಿಡಿ ಲೇಡಿ ಹಾಜರ್? 8 ಪೊಲೀಸರ ತಂಡದಿಂದ ಯುವತಿಗೆ ಭದ್ರತೆ

    ಕೋರ್ಟ್ ಅವಧಿಯೊಳಗೆ ಸಿಡಿ ಲೇಡಿ ಹಾಜರ್? 8 ಪೊಲೀಸರ ತಂಡದಿಂದ ಯುವತಿಗೆ ಭದ್ರತೆ

    ಬೆಂಗಳೂರು: ಸಿಡಿ ಲೇಡಿ ಕೋರ್ಟ್‍ಗೆ ಇವತ್ತೇ ಹಾಜರಾಗುತ್ತಾರೆ ಎನ್ನಲಾಗಿದ್ದು, ಯುವತಿಯ ಭದ್ರತೆಗಾಗಿ ಮಹಿಳಾ ಪೊಲೀಸರು ಸೇರಿ 8 ಜನರನ್ನೊಳಗೊಂಡ ಭದ್ರತಾ ತಂಡವನ್ನು ನೀಡಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಇಂದು ಸಿಡಿ ಲೇಡಿ ಹಾಜರಾಗುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೋರ್ಟ್ ಅನುಮತಿ ನೀಡಿದಲ್ಲಿ ಅರ್ಧ ಗಂಟೆಯಲ್ಲಿ ಯುವತಿಯನ್ನು ಕರೆ ತರುತ್ತೇವೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಇದೀಗ 8 ಜನರ ತಂಡವನ್ನು ಸಹ ಭದ್ರತೆಗಾಗಿ ನಿಯೋಜಿಸಲಾಗಿದೆ.

    ನ್ಯಾಯಾಲಯ ಹೇಗೆ ಹೇಳುತ್ತದೆ ಮತ್ತು ಯಾವ ಸಮಯವನ್ನು ಸೂಚಿಸುತ್ತದೆ ಎಂದು ನೋಡಿ ಸಂತ್ರಸ್ತೆ ಯುವತಿ ಕೋರ್ಟ್ ಮುಂದೆ ಬರುತ್ತಾರೆ. ಸುಪ್ರೀಂ ಕೋರ್ಟ್‍ನಲ್ಲಿ ಈ ಪ್ರಕರಣವನ್ನು ಬೇರೆ ರಾಜ್ಯದಲ್ಲಿ ಕೇಸ್ ನಡೆಸಲು ಸಾಧ್ಯವಾಗುತ್ತಾ ಎಂದು ನಮ್ಮ ತಂಡ ಯೋಚಿಸುತ್ತಿದೆ ಎಂದು ವಕೀಲ ಜಗದೀಶ್ ಹೇಳಿದ್ದರು.

    ಭಾನುವಾರವೇ ಮುಖ್ಯನ್ಯಾಯಾಧೀಶರಿಗೆ ಪತ್ರ ಬರೆದಿದ್ದ ಯುವತಿ, ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಪ್ರಕರಣದಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್‍ಐಟಿ ತನಿಖೆ ನಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇತ್ತ ಆರೋಪಿ ರಮೇಶ್ ಜಾರಕಿಹೊಳಿ ಆಡುಗೋಡಿಯಲ್ಲಿ ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

  • ಸಾಕ್ಷ್ಯಗಳಿದ್ರೆ ಪೊಲೀಸರಿಗೆ ನೀಡಲಿ: ಯುವತಿ ಪೋಷಕರ ಹೇಳಿಕೆಗೆ ಡಿಕೆಶಿ ತಿರುಗೇಟು

    ಸಾಕ್ಷ್ಯಗಳಿದ್ರೆ ಪೊಲೀಸರಿಗೆ ನೀಡಲಿ: ಯುವತಿ ಪೋಷಕರ ಹೇಳಿಕೆಗೆ ಡಿಕೆಶಿ ತಿರುಗೇಟು

    ರಾಯಚೂರು: ಸಾಕ್ಷ್ಯಗಳಿದ್ರೆ ಪೊಲೀಸರಿಗೆ ನೀಡಲಿ ಯುವತಿ ಪೋಷಕರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇಂದು ದಿಢೀರ್ ಮಾಧ್ಯಮಗಳ ಮುಂದೆ ಬಂದ ಯುವತಿ ಪೋಷಕರು, ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದರು.

    ರಾಯಚೂರಿನ ಮುದಗಲ್ ನಲ್ಲಿ ಪೋಷಕರ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನನಗೂ ಸಿಡಿ ಲೇಡಿಗೂ ಸಂಬಂಧವಿಲ್ಲ. ಯಾರಬೇಕಾದರೂ ಏನು ಮಾಡಲಿ. ಒತ್ತಡದಲ್ಲಿರೋರು ಹೇಳಿಕೆಗೆ ಮತ್ತು ನನಗೂ ಸಂಬಂಧವಿಲ್ಲ. ಅವರ ಬಳಿ ದಾಖಲೆಗಳಿದ್ರೆ ಪೊಲೀಸರಿಗೆ ನೀಡಿ ತನಿಖೆ ಸಹಕರಿಸಲಿ ಎಂದು ಆರೋಪಗಳನ್ನ ತಳ್ಳಿ ಹಾಕಿದರು.

    ಇಂದು ಬೆಳಗಾವಿಯಲ್ಲಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ. ರಮೇಶ್ ಜಾರಕಿಹೊಳಿ ಅವರು ದಿನಕ್ಕೊಂದು ಮಾತನಾಡುತ್ತಾರೆ. ಏನ್ ಏನೋ ಮಾತನಾಡುತ್ತಾರೆ ಅವರ ಸುದ್ದಿಯನ್ನು ಬಿಟ್ಟು ಬಿಡಿ. ಎಲ್ಲರಿಗೂ ಒಳ್ಳೆಯದಾಗಲಿ. ಪಾಪ ಜಾರಕಿಹೊಳಿ ಬಗ್ಗೆ ನಾನು ಏನ್ ಮಾತನಾಡಲಿ. ಸಿಡಿ ಬಗ್ಗೆ ಮಾತಾಡಲ್ಲ ಎಲೆಕ್ಷನ್ ಮಾಡೋಣ ಎಂದು ಹೇಳಿದ್ದರು.

    ಯುವತಿ ಪೋಷಕರು ಹೇಳಿದ್ದೇನು?: ಡಿ.ಕೆ.ಶಿವಕುಮಾರ್ ಅಣತಿಯಂತೆ ಆಕೆ ಕೆಲಸ ಮಾಡುತ್ತಿದ್ದಾಳೆ. ಆಕೆಯನ್ನ ರಾಜಕಾರಣದಲ್ಲಿ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಲೀಕ್ ಆಗಿರುವ ಆಡಿಯೋ ಕ್ಲಿಪ್ ನಿಜ. ಆದ್ರೆ ಅದು ಹೇಗೆ ಹೊರ ಬಂತು ಎಂಬುವುದರ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಸುರಕ್ಷತೆಯಲ್ಲಿದ್ದು, ಪೊಲೀಸರು ಭಧ್ರತೆ ನೀಡಿದ್ದಾರೆ. ಇದಕ್ಕೆಲ್ಲಾ ಡಿ.ಕೆ.ಶಿವಕುಮಾರ್ ನೇರ ಕಾರಣ. ಅವರು ನೀಡಿದ ಹಣದಿಂದಲೇ ಸೋದರಿ ಗೋವಾದತ್ತ ಹೋಗುತ್ತಿರೋದಾಗಿ ಹೇಳಿದ್ದಳು. ಬೇಕಾದ್ರೆ ಆಡಿಯೋ ಕ್ಲಿಪ್ ನಿಮಗೆಲ್ಲರಿಗೂ ಕೇಳಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

  • ಡಿಕೆಶಿ, ಸಿಡಿ ಗ್ಯಾಂಗ್‍ನಿಂದಲೇ ಮಗಳಿಂದ ಒತ್ತಾಯ ಪೂರ್ವಕ ಹೇಳಿಕೆ: ಯುವತಿಯ ಪೋಷಕರು

    ಡಿಕೆಶಿ, ಸಿಡಿ ಗ್ಯಾಂಗ್‍ನಿಂದಲೇ ಮಗಳಿಂದ ಒತ್ತಾಯ ಪೂರ್ವಕ ಹೇಳಿಕೆ: ಯುವತಿಯ ಪೋಷಕರು

    – ನಮ್ಮ ಮಗಳನ್ನ ಮುಂದಿಟ್ಟು ರಾಜಕಾರಣ
    – ಒತ್ತಡದಲ್ಲಿರೋ ಮಗಳಿಗೆ ಕೌನ್ಸಲಿಂಗ್ ನೀಡಬೇಕಿದೆ
    – ಇದಕ್ಕೆಲ್ಲಾ ಡಿಕೆಶಿ ನೇರ ಕಾರಣ: ಯುವತಿ ಸೋದರನಿಂದ ಗಂಭೀರ ಆರೋಪ

    ಬೆಳಗಾವಿ: ಸಿಡಿ ಯುವತಿ ಪ್ರತ್ಯಕ್ಷ ಆಗುತ್ತಿರುವ ಬೆನ್ನಲ್ಲೇ ಸಂತ್ರಸ್ತೆಯ ಪೋಷಕರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಮಗಳು ಒತ್ತಡದಲ್ಲಿದ್ದು, ಈ ಸಂದರ್ಭದಲ್ಲಿ ಆಕೆಯ ಹೇಳಿಕೆಗಳನ್ನ ಪರಿಗಣಿಸಬಾರದು. ಮಗಳಿಗೆ ಕೌನ್ಸಲಿಂಗ್ ಅಗತ್ಯವಿದೆ. ಕೌನ್ಸಲಿಂಗ್ ನಂತರವೇ ಆಕೆಯ ಹೇಳಿಕೆಯನ್ನ ಪೊಲೀಸರು ಮತ್ತು ನ್ಯಾಯಾಧೀಶರು ದಾಖಲಿಸಿಕೊಳ್ಳಬೇಕು ಎಂದು ಯುವತಿ ತಂದೆ ಮನವಿ ಮಾಡಿಕೊಂಡಿದ್ದಾರೆ.

    ನಮ್ಮ ಮೇಲೆ ಒತ್ತಡವಿಲ್ಲ: ನಮಗೆ ಕಾನೂನು ಗೊತ್ತಿಲ್ಲ. ಆದ್ರೆ ದೇಶದ ಪ್ರಜೆಯಾಗಿ, ಮಗಳಿಗೆ ತೊಂದರೆ ಆಗಿದ್ದಕ್ಕೆ ದೂರು ಸಲ್ಲಿಸುವ ಹಕ್ಕು ನನಗಿದೆ. ನಾವು ಯಾವುದೇ ಒತ್ತಡದಲ್ಲಿಲ್ಲ. ಅವಳು ಯಾವ ಪರಿಸ್ಥಿತಿಯಲ್ಲಿದ್ದಾಳೆ ಎಂಬುವುದು ನಮಗೆ ಗೊತ್ತಾಗುತ್ತಿಲ್ಲ. ಹಾಗಾಗಿ ಮಗಳನ್ನ ನಮ್ಮ ವಶಕ್ಕೆ ನೀಡಬೇಕೆಂದು ಕೇಳಿಕೊಂಡರು. ಇದೇ ವೇಳೆ ಡಿವೈಎಸ್‍ಪಿ ಕಟ್ಟಮನಿ ನಮಗೆ ಒತ್ತಡ ಹಾಕಿಲ್ಲ. ಎಸ್‍ಐಟಿ ಮುಂದೆ ಹೇಳಿಕೆ ದಾಖಲಿಸಿ, ಅವರ ಭದ್ರತೆಯಲ್ಲಿಯೇ ಬಂದಿದ್ದೇವೆ ಎಂದು ಹೇಳಿದರು.

    ಆಕೆ ನನ್ನ ಮಗಳು, ಮನೆಗೆ ಬರಲಿ: ನಮ್ಮ ಮಗಳನ್ನ ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಬಳಿಯಲ್ಲಿರಲು ಇಷ್ಟವಿದ್ರೆ ನಾವು ನಿನ್ನನ್ನು ಕರೆದುಕೊಳ್ಳುತ್ತೇವೆ. ಏನೇ ಆದ್ರೂ ಆಕೆ ನನ್ನ ಮಗಳು. ಆಕೆ ಯಾವುದೇ ಹೇಳಿಕೆ ನೀಡುತ್ತಿಲ್ಲ. ಆಕೆ ಕಡೆಯಿಂದ ಒತ್ತಾಯಪೂರ್ವಕವಾಗಿ ಹೇಳಿಕೆ ನೀಡಲಾಗಿಸುತ್ತಿದೆ. ಈ ಪ್ರಕರಣದಿಂದ ನಮ್ಮ ಮನಸ್ಸಿಗೂ ನೋವಾಗಿದೆ ಎಂದು ಯುವತಿ ತಂದೆ ಭಾವುಕರಾದರು.

    ಡಿಕೆಶಿ ನೇರ ಕಾರಣ: ಇದೇ ವೇಳೆ ಮಾತನಾಡಿದ ಯುವತಿ ಸೋದರ, ಡಿ.ಕೆ.ಶಿವಕುಮಾರ್ ಅಣತಿಯಂತೆ ಆಕೆ ಕೆಲಸ ಮಾಡುತ್ತಿದ್ದಾಳೆ. ಆಕೆಯನ್ನ ರಾಜಕಾರಣದಲ್ಲಿ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಲೀಕ್ ಆಗಿರುವ ಆಡಿಯೋ ಕ್ಲಿಪ್ ನಿಜ. ಆದ್ರೆ ಅದು ಹೇಗೆ ಹೊರ ಬಂತು ಎಂಬುವುದರ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಸುರಕ್ಷತೆಯಲ್ಲಿದ್ದು, ಪೊಲೀಸರು ಭಧ್ರತೆ ನೀಡಿದ್ದಾರೆ. ಇದಕ್ಕೆಲ್ಲಾ ಡಿ.ಕೆ.ಶಿವಕುಮಾರ್ ನೇರ ಕಾರಣ. ಅವರು ನೀಡಿದ ಹಣದಿಂದಲೇ ಸೋದರಿ ಗೋವಾದತ್ತು ಹೋಗುತ್ತಿರೋದಾಗಿ ಹೇಳಿದ್ದಳು. ಬೇಕಾದ್ರೆ ಆಡಿಯೋ ಕ್ಲಿಪ್ ನಿಮಗೆಲ್ಲರಿಗೂ ಕೇಳಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದರು.

  • ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದ ಸಿಡಿ ಯುವತಿ

    ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದ ಸಿಡಿ ಯುವತಿ

    ಬೆಂಗಳೂರು: ಸಿಡಿ ಪ್ರಕರಣ ಕ್ಷಣದಿಂದ ಕ್ಷಣಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಸದ್ಯ ಯುವತಿ ರಕ್ಷಣೆ ಕೋರಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ಯುವತಿ ಬರೆದಿರುವ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಪ್ರಕರಣದಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್‍ಐಟಿ ತನಿಖೆ ನಡೆಯಬೇಕು ಎಂದು ಬರೆದಿರುವ ಪತ್ರವನ್ನ ಭಾನುವಾರವೇ ಮೇಲ್ ಮೂಲಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ರವಾನಿಸಲಾಗಿದೆ.

    ಇಂದು ಸಂತ್ರಸ್ತ ಯುವತಿ ವಿಚಾರಣೆ ಹಾಜರೋಗುದು ಬಹುತೇಕ ಫಿಕ್ಸ್ ಎನ್ನಲಾಗಿದೆ. ನ್ಯಾಯಧೀಶರ ಸಮಯ ನೋಡಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 20ಕ್ಕೂ ಹೆಚ್ಚು ಹಿರಿಯ ವಕೀಲರ ಟೀಂ ಸಿದ್ಧತೆ ಮಾಡಿಕೊಂಡಿದೆ. ಸಂತ್ರಸ್ತ ಯುವತಿಗೆ ಆತ್ಮಸ್ಥೈರ್ಯ ತುಂಬಲು ಈ ವಕೀಲರ ತಂಡ ತಯಾರಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ರಮೇಶ್ ಜಾರಕಿಹೊಳಿ ನಿವಾಸಕ್ಕೆ ಕಬ್ಬನ್ ಪಾರ್ಕ್ ಕ್ರೈಂ ಪೊಲೀಸರು ನೋಟಿಸ್ ನೀಡಿದ್ದು, ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಆಡುಗೋಡಿ ಟೆಕ್ನಿಕಲ್ ಸೆಂಟರ್ ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ.

  • ನಾಳೆ ಸಿಡಿ ಲೇಡಿ ವಿಚಾರಣೆಗೆ ಹಾಜರಾಗೋದು ಬಹುತೇಕ ಫಿಕ್ಸ್- ಜಾರಕಿಹೊಳಿಗೂ ಎಸ್‍ಐಟಿ ನೋಟಿಸ್

    ನಾಳೆ ಸಿಡಿ ಲೇಡಿ ವಿಚಾರಣೆಗೆ ಹಾಜರಾಗೋದು ಬಹುತೇಕ ಫಿಕ್ಸ್- ಜಾರಕಿಹೊಳಿಗೂ ಎಸ್‍ಐಟಿ ನೋಟಿಸ್

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರೀ ಬೆಳವಣಿಗೆ ನಡೆಯುತ್ತಿದ್ದು, ಸಿಡಿ ಲೇಡಿ ನಾಳೆ ವಿಚಾರಣೆಗೆ ಹಾಜರಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇದರ ಮಧ್ಯೆಯೇ ಇದೀಗ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೂ ಎಸ್‍ಐಟಿ ನೋಟಿಸ್ ನೀಡಿದ್ದು, ನಾಳೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

    ನಾಳೆ ಸಂತ್ರಸ್ತ ಯುವತಿ ವಿಚಾರಣೆ ಹಾಜರೋಗುದು ಬಹುತೇಕ ಫಿಕ್ಸ್ ಎನ್ನಲಾಗಿದೆ. ನ್ಯಾಯಧೀಶರ ಸಮಯ ನೋಡಿಕೊಂಡು ನ್ಯಾಯಾಲಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 20ಕ್ಕೂ ಹೆಚ್ಚು ಹಿರಿಯ ವಕೀಲರ ಟೀಂ ಸಿದ್ಧತೆ ಮಾಡಿಕೊಂಡಿದೆ. ಸಂತ್ರಸ್ತ ಯುವತಿಗೆ ಆತ್ಮಸ್ಥೈರ್ಯ ತುಂಬಲು ಈ ವಕೀಲರ ತಂಡ ತಯಾರಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇದೆಲ್ಲದರ ಮಧ್ಯೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಕಬ್ಬನ್ ಪಾರ್ಕ್ ಕ್ರೈಂ ಪೊಲೀಸರು ಆಗಮಿಸಿ ನೋಟಿಸ್ ನೀಡಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಆಡುಗೋಡಿ ಟೆಕ್ನಿಕಲ್ ಸೆಂಟರ್‍ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ.

    ನೋಟಿಸ್ ನೀಡುತ್ತಿದ್ದಂತೆ ರಮೇಶ್ ಜಾರಕಿಹೊಳಿ ಸಚಿವ ಸುಧಾಕರ್ ನಿವಾಸಕ್ಕೆ ತೆರಳಿದ್ದು, ಮನೆಯಿಂದ ಹೊರ ಬರುತ್ತಿದ್ದಂತೆ ಗರಂ ಆಗಿದ್ದಾರೆ. ಎಸ್‍ಐಟಿ ನೋಟಿಸ್ ನೀಡಿದ ಕುರಿತು ನಾನು ಮಾತನಾಡುವುದಿಲ್ಲ, ಏನೂ ಹೇಳುವುದಿಲ್ಲ, ನಾನು ಈಗ ಹೇಳಲು ಬರುವುದಿಲ್ಲ ಎಂದು ಹೇಳಿ ಸುಧಾಕರ್ ನಿವಾಸಕ್ಕೆ ತೆರಳಿದರು. ಬೆಳಗ್ಗೆಯಿಂದ ನಿವಾಸದಲ್ಲೇ ಇದ್ದ ರಮೇಶ್ ಜಾರಕಿಹೊಳಿ, ಈಗ ಸುಧಾಕರ್ ಮನೆಗೆ ತೆರಳಿದ್ದಾರೆ. ಇನ್ನೊಂದೆಡೆ ಜಾರಕಿಹೊಳಿ ಅವರಿಗೆ ಎಸ್ ಐಟಿಯಿಂದ ನೋಟಿಸ್ ನೀಡಿದ ಬೆನ್ನಲ್ಲೆ ಮಹೇಶ್ ಕುಮಟ್ಟಹಳ್ಳಿ ಜಾರಕಿಹೊಳಿ ಭೇಟಿಗೆ ಆಗಮಿಸಿದ್ದಾರೆ.

    ಎಸ್‍ಐಟಿ ಅಧಿಕಾರಿಗಳು ಸಿಡಿ ಲೇಡಿ, ರಮೇಶ್ ಜಾರಕಿಹೊಳಿ ಮಾತ್ರವಲ್ಲ, ಆರೋಪಿಗಳಾದ ನರೇಶ್ ಗೌಡ ಪತ್ನಿ ಹಾಗೂ ಶ್ರವಣ್ ಸಹೋದರ ಚೇತನ್‍ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

  • ಎಸ್‌ಐಟಿ ವಿಚಾರಣೆಗೆ ಗೈರು – ಸಿಡಿ ಲೇಡಿ ಮುಂದಿದೆ ಮೂರು ಆಯ್ಕೆ

    ಎಸ್‌ಐಟಿ ವಿಚಾರಣೆಗೆ ಗೈರು – ಸಿಡಿ ಲೇಡಿ ಮುಂದಿದೆ ಮೂರು ಆಯ್ಕೆ

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಪ್ರಕರಣ ದಾಖಲಾದರೂ ಇತ್ತ ವಿಶೇಷ ತನಿಖಾ ತಂಡ(ಎಸ್‌ಐಟಿ) ಯುವತಿಗೆ ನೋಟಿಸ್‌ ಮೇಲೆ ನೋಟಿಸ್‌ ಜಾರಿ ಮಾಡುತ್ತಿದ್ದು ಇಲ್ಲಿಯವರೆಗೆ ವಿಚಾರಣೆಗೆ ಹಾಜರಾಗಿಲ್ಲ.

    ಹೌದು. ಆರಂಭದಲ್ಲಿ ದಿನೇಶ್‌ ಕಲ್ಲಹಳ್ಳಿ ನೀಡಿದ ದೂರಿನ ಆಧಾರದಲ್ಲಿ ಯುವತಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆಕೆಯ ಮನೆಯ ಬಾಗಿಲಿಗೆ ಅಂಟಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅಷ್ಟೇ ಅಲ್ಲದೇ ದಿನೇಶ್‌ ಕಲ್ಲಹಳ್ಳಿ ಮೂಲಕವೂ ನೋಟಿಸ್‌ ನೀಡಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗಿರಲಿಲ್ಲ.

    ಇದಾದ ಬಳಿಕ ಆಕೆಯ ವಾಟ್ಸಪ್‌ ನಂಬರ್‌, ಇಮೇಲ್‌ಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಈ ಪ್ರಕ್ರಿಯೆ ನಡುವೆ ಯುವತಿ ವಿಡಿಯೋ ರಿಲೀಸ್‌ ಮಾಡಿ ನಾನು ಎಸ್‌ಐಟಿ ಮುಂದೆ ಕೆಲ ದಿನದ ಒಳಗಡೆ ಹಾಜರಾಗುತ್ತೇನೆ. ನನಗೆ ರಕ್ಷಣೆ ನೀಡಬೇಕು ಎಂದು ಕೇಳಿ ಮನವಿ ಮಾಡಿದ್ದಳು. ಈ ವಿಡಿಯೋದ ಬಳಿಕ ಮತ್ತೊಂದು ವಿಡಿಯೋ ಮಾಡಿ ನಾನು ಎಸ್‌ಐಟಿ ಮುಂದೆ ಹಾಜರಾಗುತ್ತೇನೆ. ನಾನು ಹೇಳಿಕೆ ನೀಡುವ ಸಂದರ್ಭದಲ್ಲಿ ನನ್ನ ತಂದೆ, ತಾಯಿ ಇರಬೇಕು. ಅನ್ಯಾಯ ಆಗಿರುವುದು ನನಗೆ. ಆದರೆ ಎಸ್‌ಐಟಿ ರಮೇಶ್‌ ಜಾರಕಿಹೊಳಿ ಪರವಾಗಿ ಕೆಲಸ ಮಾಡುವಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಳು.

    ಶುಕ್ರವಾರ ಸಿಡಿ ಲೇಡಿ ಮತ್ತು ಕುಟುಂಬಸ್ಥರ ಜೊತೆಗಿನ ಆಡಿಯೋ ಲೀಕ್‌ ಆಗಿತ್ತು. ಶನಿವಾರ ಸಿಡಿ ಯುವತಿಯ ಪೋಷಕರು ಸುದ್ದಿಗೋಷ್ಠಿ ನಡೆಸಿ, ನಮ್ಮ ಮಗಳನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್‌ ಹೊಲಸು ರಾಜಕಾರಣ ಮಾಡುತ್ತಿದ್ದಾರೆ. ಮಗಳೇ ಎಲ್ಲಿದ್ದರೂ ಬಾ ಎಂದು ಮನವಿ ಮಾಡಿಕೊಂಡಿದ್ದರು.

    ಪೋಷಕರು ಮಾಧ್ಯಮಗಳ ಜೊತೆ ಹೇಳಿಕೆ ನೀಡಿದ ಬೆನ್ನಲ್ಲೇ ಸಿಡಿ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, ಪೋಷಕರ ಮೇಲೆ ಬಲವಂತವಾಗಿ ಒತ್ತಡ ಹಾಕಿ ಹೇಳಿಕೆಗಳನ್ನು ನೀಡಿಸಲಾಗುತ್ತಿದೆ. ಎಸ್‌ಐಟಿ ಪೊಲೀಸರ ತನಿಖೆಯ ಬಗ್ಗೆ ನನಗೆ ಅನುಮಾನವಿದೆ.ಹೀಗಾಗಿ ನಾನು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಹೇಳಿ ವಿಡಿಯೋ ರಿಲೀಸ್‌ ಮಾಡಿದ್ದಳು.

    ದೂರು ದಾಖಲಾದ ಬಳಿಕ ಯುವತಿ ವಿಚಾರಣೆಗೆ ಹಾಜರಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಯುವತಿ ವಿಡಿಯೋ ಮಾಡಿ ಹೇಳಿಕೆಗಳನ್ನು ನೀಡುತ್ತಿದ್ದಾಳೆ ವಿನಾ: ವಿಚಾರಣೆಗೆ ಹಾಜರಾಗುತ್ತಿಲ್ಲ. ಹೀಗಾಗಿ ಯುವತಿಯ ಮುಂದಿನ ನಡೆ ಏನು ಎಂಬುದರ ಬಗ್ಗೆ ಕುತೂಹಲ ಮೂಡಿದೆ.

    ಯುವತಿಯ ಮುಂದಿದೆ 3 ಆಯ್ಕೆಗಳಿವೆ:
    1. ನೇರವಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಬಹುದು
    2. ತಮ್ಮ ಪರ ವಕೀಲರ ಜೊತೆಗೆ ನ್ಯಾಯಾಧೀಶರ ಮುಂದೆ ಹಾಜರಾಗಬಹುದು.
    3. ಎಸ್ ಐಟಿ ಪೊಲೀಸರ ಮುಂದೆ ಹಾಜರಾಗಿ, ನಿಮಗೆ ಹೇಳಿಕೆ ನೀಡಲ್ಲ ನ್ಯಾಯಾಧೀಶರ ಬಳಿ ಕರೆದುಕೊಂಡು ಹೋಗಿ ಎಂದು ಮನವಿ ಮಾಡಬಹುದು.

    ಈಗ ಕೊನೆಯದಾಗಿ ವಕೀಲ ಜಗದೀಶ್‌ ಮೂಲಕ ಯುವತಿಗೆ ನೋಟಿಸ್‌ ನೀಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯುವತಿ ಎಸ್‌ಐಟಿ ಪೊಲೀಸರ ಮುಂದೆ ಹಾಜರಾಗುವುದು ಅನುಮಾನ. ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕೋರ್ಟ್ ಆದೇಶ ನೋಡಿಕೊಂಡು ಎಸ್‌ಐಟಿ ಪೊಲೀಸರ ಮುಂದೆ ಹಾಜರಾಗಬೇಕೋ? ಬೇಡವೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.