ಬೆಂಗಳೂರು/ ಮೈಸೂರು: ಮಾಜಿ ಮಂತ್ರಿ ಸಿಡಿ ಪ್ರಕರಣದ ಮೊದಲ ಬಾರಿಗೆ ಬಿಜೆಪಿ ಹೈಕಮಾಂಡ್ ಪ್ರತಿಕ್ರಿಯಿಸಿದೆ. ಆರೋಪ ಕೇಳಿಬಂದ ಕೂಡಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಲಾಯ್ತ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಆರೋಪ ಬಂದ ತಕ್ಷಣ ರಾಜೀನಾಮೆ ಪಡೆಯುವುದು ಬಿಜೆಪಿ ಮಾತ್ರ. ಆದ್ರೆ, ಈ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ತಿದೆ ಎಂದು ಆರೋಪಿಸಿದರು.
ಆರು ಸಚಿವರು ಕೋರ್ಟ್‍ಗೆ ಹೋದರೆ ಕಾಂಗ್ರೆಸ್‍ಗೆ ಏನು ಸಮಸ್ಯೆ ಎಂದು ಅರುಣ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್‍ನ ದೊಡ್ಡ ದೊಡ್ಡ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ದೂಷಿಸಿದ್ದಾರೆ.
ಸಿಡಿ ಕೇಸ್ ಬೆನ್ನಲ್ಲೇ ಮಾನಹಾನಿಕಾರಕ ಸುದ್ದಿಗೆ ತಡೆ ನೀಡಲು ಕೋರಿ ಕೋರ್ಟ್ ಮೊರೆ ಹೋಗಿದ್ದನ್ನು ಸಚಿವರಾದ ಸುಧಾಕರ್, ಎಸ್‍ಟಿ ಸೋಮಶೇಖರ್ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಸಚಿವ ಸುಧಾಕರ್ ಮಾತನಾಡಿ, ಕಾಂಗ್ರೆಸ್ ಈ ಬಗ್ಗೆ ಸದನದಲ್ಲಿ ಮಾತನಾಡಲಿ. ಆಗ ತಕ್ಕ ಉತ್ತರ ಕೊಡ್ತೇನೆ ಅಂತಾ ಸವಾಲು ಹಾಕಿದರು.
ಮೈಸೂರಲ್ಲಿ ಮಾತಾಡಿದ ಸಚಿವ ಎಸ್‍ಟಿ ಸೋಮಶೇಖರ್, ಸಿಡಿ ವಿಚಾರಕ್ಕಾಗಿ ನಾವು ಕೋರ್ಟ್ ಮೊರೆ ಹೋಗಲಿಲ್ಲ. ನಾವು ಒಂದು ಸರ್ಕಾರ ಬೀಳಿಸಿ ಮತ್ತೊಂದು ಸರ್ಕಾರ ತಂದ ಕಾರಣ ನಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಖಚಿತ ಮಾಹಿತಿ ಇತ್ತು. ಹೀಗಾಗಿ ನಮ್ಮ ವೈಯಕ್ತಿಕ ತೇಜೋವಧೆ ತಪ್ಪಿಸಲು ಕೋರ್ಟ್ ಮೊರೆ ಹೋದೆವು. ಸದನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಆಗದೇ, ಸಿಡಿ ಬಗ್ಗೆ ಚರ್ಚೆ ಆಗ್ತಿದೆ. ಹೀಗಾಗಿ ನನಗೆ ಸದನಕ್ಕೆ ಹೋಗಲು ಬೇಜಾರಾಗುತ್ತಿದೆ ಎಂದರು.
ಸಿಡಿ ವಿಚಾರವಾಗಿ ಸೋಮವಾರ ಉಭಯ ಸದನಗಳಲ್ಲಿ ನಿಲುವಳಿ ಮಂಡಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಸಿಡಿ ಪ್ರಕರಣಕ್ಕೊಂದು ಕ್ಷಣಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಭವಿತ್ ಅಜ್ಞಾತ ಸ್ಥಳದಿಂದ ವೀಡಿಯೋ ಹೇಳಿಕೆ ನೀಡಿದ್ದು, ನನ್ನ ಹೆಸರು ಪ್ರಸ್ತಾಪ ಆಗಿದ್ದಕ್ಕೆ ಆಘಾತ ಆಗಿದೆ. ನಾನು ಪ್ರಕರಣದ ಸೂತ್ರಧಾರನೂ ಅಲ್ಲ, ಭಾಗಿಯೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಹೋಗುತ್ತಿದ್ದೇನೆ. ಪೊಲೀಸ್ ತನಿಖೆಯಲ್ಲಿ ಸತ್ಯ ಹೊರ ಬರಲಿದೆ. ಪ್ರಕರಣದಲ್ಲಿ ನನ್ನ ಹೆಸರು ಕೇಳಿ ಬಂದಿದ್ದರಿಂದ ತೇಜೋವಧೆ ಆಗುತ್ತಿರೋದರಿಂದ ಮನಸ್ಸಿಗೆ ನೋವು ಆಗುತ್ತಿದೆ.
ನನಗೊಂದು ಕುಟುಂಬ ಇದೆ. ತಾಯಿ ಹಾರ್ಟ್ ಪೇಶೆಂಟ್. ನನ್ನ ಮನೆಗೆ ಹೋಗಿ ನೋಡಿ, ನನ್ನ ಪರಿಸ್ಥಿತಿ ನಿಮಗೆ ಅರ್ಥವಾಗುತ್ತದೆ. ಕುಟುಂಬದ ಗೌರವ ಹಾಳು ಮಾಡೋದು ಎಷ್ಟು ಸರಿ? ಪ್ರಕರಣದಲ್ಲಿ ನನ್ನ ಪಾತ್ರ ಇದ್ದಿದ್ರೆ ಒಪ್ಪಿಕೊಳ್ಳುತ್ತಿದ್ದೆ. ತಪ್ಪು ಮಾಡದೇ ಇರೋದರಿಂದ ಸುಳ್ಳು ಆರೋಪಗಳನ್ನ ಹೇಗೆ ಒಪ್ಪಿಕೊಳ್ಳಲು ಸಾಧ್ಯ. ತಪ್ಪಿತಸ್ಥ ಆಗಿದ್ರೆ ನಾಪತ್ತೆ ಆಗ್ತಿದ್ದೆ, ಆದ್ರೆ ನಾನೂ ಎಲ್ಲಿಯೂ ಹೋಗಿಲ್ಲ. ಮೊಬೈಲ್ ಸಹ ಆಫ್ ಮಾಡಿಲ್ಲ. ಎಸ್‍ಐಟಿ ಕರೆದಾಗ ತಡಮಾಡದೇ ಬಂದು ನನ್ನ ಹೇಳಿಕೆ ದಾಖಲಿಸಿದ್ದೇನೆ ಎಂದು ಭವಿತ್ ಹೇಳಿದ್ದಾರೆ. ಇದನ್ನೂ ಓದಿ:ಸಿಡಿ ಗ್ಯಾಂಗ್‌ಗೆ ಲಕ್ಷ ಲಕ್ಷ ಹಣ – ಶಿವಕುಮಾರ್ ಬೆನ್ನು ಬಿದ್ದ ಎಸ್‍ಐಟಿ
ಇದಕ್ಕೂ ಮೊದಲು ಸಿಡಿ ಪ್ರಕರಣದ ಕಿಂಗ್‍ಪಿನ್ ಎನ್ನಲಾಗುತ್ತಿರುವ ಶಿರಾ ಮೂಲದ ಮಾಜಿ ಪತ್ರಕರ್ತ ನರೇಶ್ ಗೌಡ ಸಹ ತಮ್ಮ ಹೇಳಿಕೆ ಬಿಡುಗಡೆಗೊಳಿಸಿದ್ದರು. ನಾನು ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಬಂದರೆ ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕಿಸಲು ಎಲ್ಲ ಪ್ರಯತ್ನಗಳು ನಡೆದಿರುವುದು ತಿಳಿದಿದೆ. ಈ ಕಾರಣಕ್ಕೆ ನಾನು ಈಗ ಬಂದಿಲ್ಲ. ಐದು ಅಥವಾ ಎಂಟು ದಿನಗಳ ಒಳಗಡೆ ನಾನೇ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಮಕರಣಕ್ಕೆ ಮೂರು ಪಕ್ಷದ ನಾಯಕರು ಬಂದಿದ್ರು, ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ಯಾವುದೇ ದುಡ್ಡು ತೆಗೆದುಕೊಂಡಿಲ್ಲ – ನರೇಶ್ ಗೌಡ
– ನಾನು ಯಾವುದೇ ತಪ್ಪು ಮಾಡಿಲ್ಲ – ನಾಮಕರಣಕ್ಕೆ ಮೂರು ಪಕ್ಷದ ನಾಯಕರು ಬಂದಿದ್ರು
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಯಾವುದೇ ದುಡ್ಡು ತೆಗೆದುಕೊಂಡಿಲ್ಲ ಎಂದು ಮಾಜಿ ಪತ್ರಕರ್ತ ನರೇಶ್ ಗೌಡ ಹೇಳಿದ್ದಾರೆ.
ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಅವರು, ನಾನು ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಬಂದರೆ ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕಿಸಲು ಎಲ್ಲ ಪ್ರಯತ್ನಗಳು ನಡೆದಿರುವುದು ತಿಳಿದಿದೆ. ಈ ಕಾರಣಕ್ಕೆ ನಾನು ಈಗ ಬಂದಿಲ್ಲ. ಐದು ಅಥವಾ ಎಂಟು ದಿನಗಳ ಒಳಗಡೆ ನಾನೇ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಹೇಳಿದ್ದು ಏನು?
ನನಗೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ನಾನು ಯಾಕೆ ತನಿಖಾಧಿಕಾರಿ ಮುಂದೆ ಬಂದಿಲ್ಲ ಅಂದ್ರೆ ಪೊಲೀಸರು ಏನ್ ಮಾಡ್ತಾರೆ ಅನ್ನೋದು ನನಗೆ ಗೊತ್ತು. ಈ ಕೇಸ್‍ಗೂ ನನಗೂ ಸಂಬಂಧ ಇಲ್ಲ
ಚಾನೆಲಿನಲ್ಲಿ ಉದ್ಯೋಗದಲ್ಲಿದ್ದಾಗ ನಾನು ಈ ಹಿಂದೆ ಸಾಕಷ್ಟು ಸ್ಟಿಂಗ್ ಆಪರೇಷನ್ ಮಾಡಿದ್ದೇನೆ. ನನ್ನ ಬಗ್ಗೆ ಯಾವುದೇ ಆರೋಪ ಬಂದಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಯಾಕೆ ಬಂದಿದೆ ಎನ್ನುವುದು ಗೊತ್ತಾಗುತ್ತಿಲ್ಲ.
ಪತ್ರಕರ್ತನಾಗಿರುವ ಕಾರಣ ಯುವತಿ ಈ 4-5 ತಿಂಗಳ ಹಿಂದೆ ನನ್ನನ್ನು ಸಂಪರ್ಕಿಸಿ ರಮೇಶ್ ಜಾರಕಿಹೊಳಿಯಿಂದ ನನಗೆ ಅನ್ಯಾಯ ಆಗಿದೆ. ನ್ಯಾಯಕೊಡಿಸಬೇಕೆಂದು ಕೇಳಿದ್ದರು. ನಾನು ಸಾಕ್ಷ್ಯಗಳು ಇಲ್ಲದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ದಾಖಲೆ, ಫೋಟೋ, ಕ್ಲಿಪ್ಪಿಂಗ್ ಏನಾದ್ರೂ ಇದೆಯಾ ಅಂತಾ ಕೇಳಿದ್ದೆ. ಈ ನಡುವೆ ನನ್ನ ತಾಯಿಗೆ ತಾಯಿಗೆ ಹುಷಾರಿರಲಿಲ್ಲ, ನನ್ನ ಮಗಳ ನಾಮಕರಣ ಇತ್ತು. ಹೀಗಾಗಿ ಆಕೆಗೆ ನ್ಯಾಯ ಕೊಡಿಸಲು ಆಗಲಿಲ್ಲ
15-20 ಬಾರಿ ಆ ಹುಡುಗಿ ಜೊತೆ ಮಾತನಾಡಿದ್ದೇನೆ. ನನ್ನ ಮಗಳ ನಾಮಕರಣ ಕೂಡ ಇತ್ತು. ನನ್ನನ್ನು ಕರೆಯಲ್ವಾ ಅಂದ್ರು, ಆ ಹುಡುಗಿ ಕೂಡ ನಾಮಕರಣಕ್ಕೆ ಬಂದ್ರು ಹೋದ್ರು. ಈ ಪ್ರಕರಣದಲ್ಲಿ ನಾನೇ ದೊಡ್ಡ ಸೂತ್ರಧಾರಿ ಅನ್ನೋ ರೀತಿ ಬಿಂಬಿಸೋಕೆ ಆರಂಭ ಮಾಡಿದ್ದಾರೆ. ಇದ್ರಲ್ಲಿ ನನ್ನ ಸಣ್ಣ ಪಾತ್ರವೂ ಇಲ್ಲ. 5 ಕೋಟಿ, 100 ಕೋಟಿ ಆರೋಪಗಳಿಗೆ ಸ್ಪಷ್ಟನೆ ಕೊಡಬೇಕಲ್ಲ ಎಂದು ವಿಡಿಯೋ ಮಾಡಿದ್ದೇನೆ.
ನಾನು ಮಾಡಿರೋ 3 ಲಕ್ಷ ಸಾಲ ತೀರಿಸೋಕೆ ಆಗುತ್ತಿಲ್ಲ, ಎರಡೆರಡು ಬಾರಿ ಚೆಕ್ ಬೌನ್ಸ್ ಕೂಡ ಆಗಿದೆ. ಕ್ರೆಡಿಟ್ ಕಾರ್ಡ್ ಇಎಂಐ ಕಟ್ಟಲು ಆಗದೇ ಇಂಟ್ರೆಸ್ಟ್ ಕಟ್ಟುತ್ತಿದ್ದೇನೆ. ಶಿರಾ ತಾಲೂಕು ಭುವನಹಳ್ಳಿ ನನ್ನ ಹುಟ್ಟೂರು. ವರ್ಷಕ್ಕೊಂದು ಸರಿ ಮಳೆ ಬಂದ್ರೆ ಸೋರುತ್ತೆ ನನ್ನ ಮನೆ. 100 ಕೋಟಿ ಆರೋಪ ಮಾಡ್ತಿರಲ್ಲ, ತಂದು ಕೊಡಿ, ನಾನೇ ಆರೋಪಿ ಎಂದು ಒಪ್ಪಿಕೊಳ್ಳುತ್ತೇನೆ.
ಕಳೆದ 3-4 ತಿಂಗಳ ಹಿಂದೆ ಕೋರಮಂಗಲದಲ್ಲೂ 14 ವರ್ಷದ ಬಾಲಕಿಯ ಮೇಲೆ ನಡೆದಿದ್ದ ಕಿರುಕುಳ ಆರೋಪದ ಸ್ಟೋರಿ ಮಾಡಿದ್ದೆ. 5 ರೂಪಾಯಿ ನಾನು ತೆಗೆದುಕೊಂಡಿದ್ದು, ತೋರಿಸಿದ್ರೆ ಶಿಕ್ಷೆ ಅನುಭವಿಸೋಕೆ ಸಿದ್ಧ. ಮಗಳ ನಾಮಕರಣಕ್ಕೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅವರು ಎಲ್ಲರೂ ಬಂದಿದ್ದರು.
ನಾನು ಯಾಕೆ ತನಿಖಾಧಿಕಾರಿ ಮುಂದೆ ಬಂದಿಲ್ಲ ಅಂದ್ರೆ, ಏನ್ ಪ್ಲಾನ್ ನಡೆದಿದೆ ಅನ್ನೋದು ನನಗೆ ಗೊತ್ತು. ಅದಕ್ಕೆ ನಾನು ಬಂದಿಲ್ಲ 8 ದಿನ ಅಥವಾ 5 ದಿನದಲ್ಲಿ ನಾನು ಪೊಲೀಸರ ಮುಂದೆ ಬರ್ತಿನಿ. ರಮೇಶ್ ಜಾರಕಿಹೊಳಿ ನಿರಪರಾಧಿ ಅಂತಾ ಬಿಂಬಿಸಲಾಗ್ತಿದೆ.
ಹೆಣ್ಣು ಮಗಳನ್ನು ಅಪರಾಧಿ ಥರ ಬಿಂಬಿಸಲಾಗ್ತಿದೆ . ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ನಾಡ ದ್ರೋಹಿ ರಮೇಶ್ ಜಾರಕಿಹೊಳಿ. ಆ ಹುಡುಗಿ ಪರ ನಿಲ್ಲೋದು ನಮ್ಮ ಧರ್ಮ. ರಮೇಶ್ ಜಾರಕಿಹೊಳಿ ಪ್ರಭಾವ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ನಡೆಯುತ್ತಿದೆ.
ಸಿಡಿ ಹೇಗಾಯ್ತು, ಸಿಡಿ ಹೇಗೆ ಆಚೆ ಬಂತು ಅದು ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ಎಳ್ಳಷ್ಟು ಪಾತ್ರವಿಲ್ಲ. ನಾನು ಸದ್ಯದಲ್ಲೇ ಬರ್ತಿನಿ. ನನಗೆ ಏನು ಮಾಹಿತಿ ಇದೆ ಕೊಡ್ತಿನಿ. ನಾನು ನಿರ್ದೋಷಿ ಅನ್ನೋದು ತನಿಖೆಯಿಂದ ಗೊತ್ತಾಗುತ್ತೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ಚುರುಕುಗೊಂಡಿದ್ದು ಮಾಜಿ ಪತ್ರಕರ್ತ ನರೇಶ್ ಗೌಡ ಮನೆಯಲ್ಲಿ 18 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿ ರಶೀದಿ ಪತ್ತೆಯಾಗಿದೆ.
ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿರುವ ಮಾಜಿ ಪತ್ರಕರ್ತ ನರೇಶ್ ಗೌಡನ ಮನೆಯ ಮೇಲೆ ಬುಧವಾರ ಎಸ್‌ಐಟಿ ದಾಳಿ ನಡೆಸಿತ್ತು. ಈ ವೇಳೆ ಲ್ಯಾಪ್‍ಟಾಪ್ ಮತ್ತು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿ ಸ್ಲಿಪ್‍ಗಳು ಪತ್ತೆಯಾಗಿದೆ.
ಯುವತಿ ತಂಗಿದ್ದ ಆರ್‌ಟಿ ನಗರದ ಮನೆಯಲ್ಲೂ 23 ಲಕ್ಷ ರೂ. ಹಣ ಸಿಕ್ಕಿದೆ. ಈಗ ಎಸ್‌ಐಟಿ ಪೊಲೀಸರು ಯುವತಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು? ಇದರ ಮೂಲ ಯಾವುದು ಎಂಬುದರ ಬಗ್ಗೆ ತನಿಖೆಗೆ ಇಳಿದಿದೆ.
ಬುಧವಾರ ನರೇಶ್ ಗೌಡ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಟ್ಟಿಗೆ ಇರುವ ಫೋಟೋವನ್ನು ಬಿಜೆಪಿ ಟ್ವೀಟ್ ಮಾಡಿತ್ತು. ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ʼಮಾಸ್ಟರ್ ಮೈಂಡ್ʼ ಮತ್ತು ʼರಿಂಗ್ ಮಾಸ್ಟರ್ʼ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ ʼನನ್ನನ್ನು ಸಿಲುಕಿಸುವ ಕುತಂತ್ರʼ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿತ್ತು.
ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ?
ʼಮಾಸ್ಟರ್ ಮೈಂಡ್ʼ ಮತ್ತು ʼರಿಂಗ್ ಮಾಸ್ಟರ್ʼ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ ʼನನ್ನನ್ನು ಸಿಲುಕಿಸುವ ಕುತಂತ್ರʼ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ? pic.twitter.com/bzuIiya4Ww
ಬಿಜೆಪಿ ಕರ್ನಾಟಕ ಸರಣಿ ಟ್ವೀಟ್ ಮಾಡುವ ಮೂಲಕ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡುತ್ತಿದೆ. ಆ ಘಟನೆಯ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರಿ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾನಾಯಕ ಕೂಡಾ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ ಎಂದು ಹೇಳಿದೆ.
ಆ ಪ್ರಕರಣದ ʼಮಾಸ್ಟರ್ ಮೈಂಡ್ಗಳೆಲ್ಲರೂʼ ಮಹಾ ನಾಯಕನೊಂದಿಗೆ ಏಕೆ ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನ ರಾಜ್ಯದ ಜನತೆಯನ್ನು ಕಾಡುತ್ತಿದೆ.
ಈ ಸಂಬಂಧ ಏಕೆ, ಹೇಗೆ ಮತ್ತು ಯಾಕಾಗಿ ಇತ್ತು ಎಂಬುದನ್ನು ʼರಿಂಗ್ ಮಾಸ್ಟರ್ʼ ಬಗೆಹರಿಸುವರೇ!?
ಬೆಂಗಳೂರು: ಸಿಡಿ ಪ್ರಕರಣದಲ್ಲಿ ಕೇಳಿ ಬಂದಿರುವ ಯುವತಿಯ ಮನೆ ಮೇಲೆ ನಿನ್ನೆ ವಿಶೇಷ ತನಿಖಾ ತಂಡ(ಎಸ್‌ಐಟಿ) ದಾಳಿ ನಡೆಸಿದ್ದು ಈ ವೇಳೆ 23 ಲಕ್ಷ ರೂ. ಹಣ ಪತ್ತೆಯಾಗಿದೆ.
ಆರ್‌ಟಿ ನಗರದಲ್ಲಿ ನೆಲೆಸಿದ್ದ ಯುವತಿಯ ಮನೆಯ ಮೇಲೆ ನಿನ್ನೆ ದಾಳಿ ನಡೆದಿತ್ತು. ದಾಳಿಯ ವೇಳೆ ಒಟ್ಟು 23 ಲಕ್ಷ ರೂ. ಹಣ ಮತ್ತು ಮಹತ್ವದ ದಾಖಲೆಗಳು ಪತ್ತೆಯಾಗಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
ಎಸ್‌ಐಟಿ ಕಳೆದ ವಾರವೇ ಯುವತಿಯ ಮನೆಗೆ ನೋಟಿಸ್ ಅಂಟಿಸಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ. ಆದರೆ ವಿಚಾರಣೆ ಗೈರು ಹಾಜರಿಯಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ.
ಸಿಡಿಯಲ್ಲಿ ಇರುವ ಯುವತಿ ಈಗ ಎಲ್ಲಿದ್ದಾಳೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಈಕೆ ಮಾರ್ಚ್ 2ರ ರಾತ್ರಿ 9:30ಕ್ಕೆ ಮನೆಯಿಂದ ಹೊರಕ್ಕೆ ಹೋಗಿದ್ದಳು.
ಮಾರ್ಚ್ 2ರ ಸಂಜೆ ಸ್ಫೋಟಕ ಸಿಡಿ ರಿಲೀಸ್ ಆಗಿತ್ತು. ಸಿಡಿ ರಿಲೀಸ್ ಆಗಿ 4 ಗಂಟೆ ಬಳಿಕ ಸಂತ್ರಸ್ತೆ ಮನೆಯಿಂದ ಹೊರಗಡೆ ಬಂದಿದ್ದಾಳೆ. ಬ್ಯಾಗ್ ಇಟ್ಟುಕೊಂಡು ಮನೆಯಿಂದ ಏಕಾಂಗಿಯಾಗಿ ಹೊರಗೆ ಬಂದ ಯುವತಿ ನಡೆದುಕೊಂಡೇ ಮುಖ್ಯ ರಸ್ತೆಗೆ ತಲುಪಿದ್ದಳು.
ಮನೆಯಿಂದ ಹೊರಬಂದ ಬಳಿಕ ಮೊಬೈಲ್ ಸ್ವಿಚ್‍ಆಫ್ ಮಾಡಿ ಸಿಮ್ ಡಿಆಕ್ಟಿವೇಟ್ ಮಾಡಿದ್ದಾಳೆ. ಮೊಬೈಲ್ ಸ್ವಿಚ್ ಆಫ್ ಮಾಡಿರುವ ವಿಚಾರ ತಾಂತ್ರಿಕ ದಾಖಲೆಗಳಿಂದ ಲಭ್ಯವಾಗಿದೆ.
ಆರಂಭದಲ್ಲಿ ಯುವತಿ ಆರ್‌ಟಿ ನಗರದ ಪಿಜಿಯಲ್ಲಿ ವಾಸವಾಗಿದ್ದಳು ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಈಗ ಆಕೆ ಪಿಜಿಯಲ್ಲಿ ಇರಲಿಲ್ಲ. ಆರ್‌ಟಿ ನಗರದ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದ ವಿಚಾರ ಲಭ್ಯವಾಗಿತ್ತು.
ಯುವತಿಯ ಬಗ್ಗೆ ಪಬ್ಲಿಕ್ ಟಿವಿ ಮನೆ ಮಾಲೀಕರನ್ನು ಮಾತನಾಡಿಸಿದೆ. ಈ ವೇಳೆ ಅವರು, ಇದು ಪಿಜಿಯಲ್ಲ. ಅವರಿಗೆ ಬಾಡಿಗೆ ನೀಡಿದ್ದೆ. ಬಾಡಿಗೆಯಲ್ಲಿ ನಾಲ್ಕು ಜನ ಸೇರಿ ಮನೆ ತೆಗೆದುಕೊಂಡಿದ್ದಾರೆ. 2018ರಿಂದ ಅವರು ಇಲ್ಲಿ ನೆಲೆಸಿದ್ದರು. ರೂಮಿನಲ್ಲ ಆಕೆ ಒಬ್ಬಳೇ ಇದ್ದಳು. ಸೋಮವಾರ ಇಲ್ಲಿಂದ ತೆರಳಿದ್ದಾಳೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಮಾಸ್ಟರ್ ಮೈಂಡ್ ಮತ್ತು ರಿಂಗ್ ಮಾಸ್ಟರ್ ಒಂದೇ ಫ್ರೇಮ್‌ನಲ್ಲಿ ಎಂದು ಹೇಳಿ ಬಿಜೆಪಿ ಸಿಡಿ ಪ್ರಕರಣ ಮುಖ್ಯ ಸೂತ್ರಧಾರ, ಮಾಜಿ ಪತ್ರಕರ್ತ ನರೇಶ್ ಗೌಡ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಟ್ಟಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದೆ.
ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ʼಮಾಸ್ಟರ್ ಮೈಂಡ್ʼ ಮತ್ತು ʼರಿಂಗ್ ಮಾಸ್ಟರ್ʼ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ ʼನನ್ನನ್ನು ಸಿಲುಕಿಸುವ ಕುತಂತ್ರʼ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದೆ.
ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ?
ʼಮಾಸ್ಟರ್ ಮೈಂಡ್ʼ ಮತ್ತು ʼರಿಂಗ್ ಮಾಸ್ಟರ್ʼ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ ʼನನ್ನನ್ನು ಸಿಲುಕಿಸುವ ಕುತಂತ್ರʼ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ? pic.twitter.com/bzuIiya4Ww
ಬಿಜೆಪಿ ಕರ್ನಾಟಕ ಸರಣಿ ಟ್ವೀಟ್ ಮಾಡುವ ಮೂಲಕ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡುತ್ತಿದೆ. ಆ ಘಟನೆಯ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರಿ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾನಾಯಕ ಕೂಡಾ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ ಎಂದು ನಿನ್ನೆ ಟ್ವೀಟ್ ಮಾಡಿತ್ತು.
ಆ ಘಟನೆಯ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರಿ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ.
ಆ ಮಹಾನಾಯಕ ಕೂಡಾ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ.
ಕುಂಬಳಕಾಯಿ ಕಳ್ಳ ಅಂದಕೂಡಲೇ ನೀವೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ? ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಾಗಲೂ ನನ್ನ ವಿರುದ್ಧ ಸಂಚು ನಡೆಯುತ್ತಿದೆ ಎಂದು ಹೇಳಿದ್ದೀರಿ. ಈಗಲೂ ಅದೇ ಮಾತು ಹೇಳುತ್ತಿದ್ದೀರಿ. ಯಾರೂ ಕೂಡಾ ನಿಮ್ಮ ಪಾತ್ರದ ಕುರಿತು ಏನೂ ಹೇಳಿಲ್ಲ, ನಿಮಗೆ ಈ ಸಂಶಯ ಬರಲು ಕಾರಣವೇನು ಎಂದು ಡಿಕೆಶಿಯನ್ನು ಪ್ರಶ್ನಿಸಿತ್ತು.
ಬೆಳಗಾವಿ: ಮಗಳನ್ನ ಹುಡುಕಿಕೊಡಿ, ಆಕೆಯ ಮೊಬೈಲ್ ಸಹ ಸ್ವಿಚ್ಛ್ ಆಫ್ ಆಗಿದೆ. ಆಕೆ ಜೀವ ಆಪಾಯದಲ್ಲಿದೆ ಎಂದು ಸಿಡಿ ಪ್ರಕರಣದಲ್ಲಿ ಕೇಳಿ ಬಂದಿರುವ ಯುವತಿಯ ತಾಯಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ವೀಡಿಯೋ ಮೂಲಕ ಯುವತಿಯ ತಾಯಿ, ತಂದೆ ಮತ್ತು ಸೋದರರು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ವೀಡಿಯೋದಲ್ಲಿ ಮಾತನಾಡಿರುವ ಯುವತಿ ತಾಯಿ, ಮೊಬೈಲ್ ನಲ್ಲಿ ಮಗಳದ್ದು ಎನ್ನಲಾದ ವೀಡಿಯೋ ನೋಡಿ ಕರೆ ಮಾಡಿದೆ. ನಿನ್ನ ಹಾಗೆ ಕಾಣುವ ಫೋಟೋ ಟಿವಿಯಲ್ಲಿ ಬರುತ್ತಿರುವ ವಿಷಯ ಹೇಳಿದೆ. ಆಕೆಗೆ ವೀಡಿಯೋ ಕಳಿಸಿ ಊರಿಗೆ ಬರುವಂತೆ ಹೇಳಿದೆ. ನನ್ನ ಜೀವಕ್ಕೆ ಅಪಾಯವಿದ್ದು, ಸುರಕ್ಷಿತ ಸ್ಥಳದಲ್ಲಿದ್ದೇನೆ ಎಂದು ಹೇಳಿ ಊರಿಗೆ ಬರಲು ಒಪ್ಪಲಿಲ್ಲ ಎಂದರು.
ಕಳೆದ ಮೂರು ವರ್ಷಗಳಿಂದ ಬೆಳಗಾವಿಯಲ್ಲಿ ವಾಸವಾಗಿದ್ದೇವೆ. ಹಾಗಾಗಿ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿ, ಮಗಳನ್ನ ಹುಡುಕಿ ಕೊಡುವಂತೆ ಮನವಿ ಮಾಡಿಕೊಂಡಿದ್ದೇವೆ. ಮೆಸೇಜ್ ಮಾಡಿ ಅಂತ ಹೇಳಿದಳ ಮೊಬೈಲ್ ಆಫ್ ಆಗಿದ್ದರಿಂದ ಆತಂಕ ಮನೆ ಮಾಡಿದೆ. ದಯವಿಟ್ಟು ವೀಡಿಯೋ ಹಿಂದಿರುವವರನ್ನ ಪತ್ತೆ ಮಾಡಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಯುವತಿ ಕುಟುಂಬ ಒತ್ತಾಯಿಸಿದೆ. ಇದನ್ನೂ ಓದಿ: ಸಿಡಿ ಗ್ಯಾಂಗ್ – ವಿಚಾರಣೆಗೆ ಒಳಪಟ್ಟವರು ಯಾರು? ಆರೋಪ ಏನು?
ಮಾರ್ಚ್ 2ರಿಂದ ಮಗಳು ಕಾಣೆಯಾಗಿದ್ದು, ನಕಲಿ ಸಿಡಿ ಮಾಡಿ ತೇಜೋವಧೆ ಮಾಡಲಾಗುತ್ತಿದೆ. ಮಗಳನ್ನ ಬೆಂಗಳೂರಿನಲ್ಲಿ ಅಪಹರಣ ಮಾಡಲಾಗಿದ್ದು, ಕಿರುಕುಳ ನೀಡುತ್ತಿದ್ದಾರೆ ಎಂದು ಯುವತಿಯ ತಂದೆ-ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೋಷಕರ ದೂರಿನ ಅನ್ವಯ ಐಪಿಸಿ 363, 368, 343, 346,354, 506 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ಡಿಸಿಪಿ ವಿಕ್ರಂ ಹೇಳಿದ್ದಾರೆ. ಇದನ್ನೂ ಓದಿ: ಸಿಡಿ ಕೇಸ್ – ಮಹಾನಾಯಕ ಆಯ್ತು, ಈಗ ಮಹಾನಾಯಕಿಯನ್ನು ಎಳೆದು ತಂದ ಬಿಜೆಪಿ
ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಇನ್ನೊಂದು ಟ್ವಿಸ್ಟ್ ಕೂಡ ಸಿಕ್ಕಿದೆ. ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆಯಂತೆ ಮಹಾನಾಯಕ ಯಾರು ಎನ್ನುವ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಶುರುವಾಗಿದೆ.
ಜಾರಕಿಹೊಳಿ ಬ್ರದರ್ಸ್ ಹಲವು ಕಾರಣಗಳಿಂದ ಸಿಡಿ ಹಿಂದಿನ ಆ ಮಹಾನಾಯಕರ ಹೆಸರನ್ನು ಬಹಿರಂಗಪಡಿಸಲು ಹಿಂದೇಟು ಹಾಕಿದ್ದರೂ ಬಿಜೆಪಿ ಮಾತ್ರ ಪರೋಕ್ಷವಾಗಿ ಮಹಾನಾಯಕನ ಜೊತೆ ಮಹಾನಾಯಕಿಯ ಸುಳಿವನ್ನು ಬಿಟ್ಟುಕೊಟ್ಟಿದೆ. ಡಿಕೆ ಶಿವಕುಮಾರ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ ಹೇಳಿಕೆಗಳ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದೆ. ಇವರೇ ಮಹಾನ್ ನಾಯಕ, ನಾಯಕಿ ಎಂಬ ಸುದ್ದಿ ಹಬ್ಬಿದೆ ಎಂದು ಟ್ವೀಟಿಸಿದೆ.
ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಕೂಡ ತಾನೇನು ಕಮ್ಮಿ ಇಲ್ಲ ಎಂಬಂತೆ ಯತ್ನಾಳ್ ಹೇಳಿಕೆ ಆಧಾರದ ಮೇಲೆ ಬಿಎಸ್‍ವೈ ಮತ್ತು ವಿಜಯೇಂದ್ರರನ್ನು ಗುರಿಯಾಗಿಸಿಕೊಂಡು ಟ್ವೀಟೇಟು ನೀಡಿದೆ. ಇದ್ರಿಂದ ಎಸ್‍ಐಟಿ ತನಿಖೆಗೆ ಎಷ್ಟು ಅನುಕೂಲವಾಗುತ್ತೋ ಗೊತ್ತಿಲ್ಲ. ಆದರೆ ರಾಜ್ಯದ ಜನರಿಗಂತೂ ಪುಕ್ಕಟ್ಟೆ ಮನರಂಜನೆ ನೀಡಿದೆ.
ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಮಹಾನಾಯಕರು ಬಿಜೆಪಿಯಲ್ಲಿ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ. ಇದರಲ್ಲಿ ನಾನು ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವೇಳೆ, ಸುಮ್‍ಸುಮ್ನೆ ಯಾರನ್ನೋ ಸಿಲುಕಿಸೋ ತಂತ್ರ ಬೇಡ. ಇವರೇ ಮಹಾನಾಯಕ.. ಮಹಾನಾಯಕಿ ಎಂದು ಹೇಳುವುದು ಸರಿಯಲ್ಲ ಸರಿಯಲ್ಲ ಎಂದು ಎಂಎಲ್‍ಸಿ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದೆ. ಮಹಾನಾಯಕ ಯಾರು ಎನ್ನುವುದು ತನಿಖೆ ಮೂಲಕ ಹೊರಬೀಳಲಿ ಎಂದು ವಿಶ್ವನಾಥ್ ಹೇಳಿದ್ದಾರೆ.
ಬಿಜೆಪಿ ಟ್ವೀಟ್ ನಂ.1 – ಸಿಡಿ ಘಟನೆಯ ಹಿಂದೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವ ಭ್ರಷ್ಟಾಚಾರ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾ ನಾಯಕ ಕೂಡ ತನ್ನನ್ನು ಸಿಲುಕಿಸಲು ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ.
ನನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಮಹಾನಾಯಕರೊಬ್ಬರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ, ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ.
ಬಿಜೆಪಿ ಟ್ವೀಟ್ ನಂ.2 – ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ. ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ. ಏನಿದೆಲ್ಲಾ..? ಬೆಂಕಿ ಇಲ್ಲದೇ ಹೊಗೆಯಾಡುವುದೇ..? ಪಕ್ಷ ತೊರೆದವರ ವಿರುದ್ಧ ಕಾಂಗ್ರೆಸ್ ಹಗೆತನ ಸಾಧಿಸುತ್ತಿದೆ.
ಕಾಂಗ್ರೆಸ್ ಟ್ವೀಟ್ ನಂ.1 – ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಭ್ರಷ್ಟಾಚಾರ ಆರೋಪಿ ಮಹಾನಾಯಕ ಎನ್ನುತ್ತಾ ಬಿಎಸ್‍ವೈ ಅವರತ್ತ ಏಕೆ ಪರೋಕ್ಷವಾಗಿ ಗುರಿ ಇಡ್ತಿದ್ದೀರಿ? ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ವಿಜಯೇಂದ್ರ ಸಿಡಿ ಫ್ಯಾಕ್ಟರಿ ಮೂಲಕ ಬ್ಲಾಕ್‍ಮೇಲ್ ಮಾಡಲಾಗುತ್ತಿದೆ ಎಂಬ ಮಾತನ್ನು ನೀವೂ ಪರೋಕ್ಷವಾಗಿ ಹೇಳುತ್ತಾ ಬಿಎಸ್‍ವೈ ಮುಕ್ತ ಬಿಜೆಪಿ ಅಭಿಯಾನ ಮುಂದುವರೆಸುತ್ತಿದ್ದೀರಾ?
"ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಭ್ರಷ್ಟಾಚಾರ ಆರೋಪಿ ಮಹಾ ನಾಯಕ" ಎನ್ನುತ್ತ @BSYBJP ಅವರತ್ತ ಏಕೆ ಪರೋಕ್ಷವಾಗಿ ಗುರಿ ಇಡುತ್ತಿದ್ದೀರಿ?!@BasanagoudaBJP ವಿಜಯೇಂದ್ರ ಸಿಡಿ ಫ್ಯಾಕ್ಟರಿ ಮೂಲಕ ಬ್ಲಾಕ್‍ಮೇಲ್ ಮಾಡಲಾಗುತ್ತದೆ ಎಂಬ ಮಾತನ್ನ ನೀವೂ ಪರೋಕ್ಷವಾಗಿ ಹೇಳುತ್ತಾ #BSYmuktaBJP ಅಭಿಯಾನ ಮುಂದುವರೆಸುತ್ತಿರುವಿರಾ! https://t.co/vXF0LgLQFa
ಕಾಂಗ್ರೆಸ್ ಟ್ವೀಟ್ ನಂ.2 – ನಿಮ್ಮ ಶ್ರೀನಿವಾಸ್ ಪ್ರಸಾದ್ ಹೇಳಿದಂತೆ ಇದು ವಾಮಮಾರ್ಗದ ಸರ್ಕಾರ. ನಿಮ್ಮವರೇ ಹೇಳಿದಂತೆ ಇದು ಬ್ಲಾಕ್‍ಮೇಲ್ ಸಂಪುಟ. ಹನಿಟ್ರ್ಯಾಪ್ ಮೂಲಕ ಆಪರೇಷನ್ ಕಮಲ. ಯತ್ನಾಳ್ ಹೇಳಿದಂತೆ ಬಿಎಸ್‍ವೈ ಫ್ಯಾಮಿಲಿ ಸರ್ಕಾರ. ಬಿಜೆಪಿಯವರೇ `ದಂಡ’ದ ಸರ್ಕಾರಕ್ಕೆ `ಮಾನ’ ಎಲ್ಲಿದೆ? ತಾಕತ್ತಿದ್ದರೇ ಆಪರೇಷನ್ ಕಮಲದ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ.
– ಎಸ್ಐಟಿ ವಶದಲ್ಲಿದ್ದನಾ ಯುವಕ? – ಪುತ್ರನ ಮಾಹಿತಿ ತಿಳಿಯದೇ ಆತಂಕದಲ್ಲಿ ಕುಟುಂಬಸ್ಥರು
ಬೀದರ್: ಮಾಜಿ ಸಚಿವರ ಸಿಡಿ ಕೇಸ್ ಸಂಬಂಧ ಬೀದರ್ ಜಿಲ್ಲೆಯ ಮೂವರು ಯುವಕರನ್ನ ಎಸ್‍ಐಟಿ ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ. ಮೂವರಲ್ಲಿ ಓರ್ವನನ್ನು ವಾಪಸ್ ಕಳುಹಿಸಿದ್ದು, ಗುರುವಾರದಿಂದ ಕಾಣೆಯಾಗಿರುವ ಬಾಲ್ಕಿಯ ಯುವಕನನ್ನ ಎಸ್‍ಐಟಿ ವಶಕ್ಕೆ ಪಡೆದಿದೆ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯುವಕನ ಸಾಕು ತಾಯಿ, ಗುರುವಾರ ಬೆಳಗ್ಗೆ 11 ಗಂಟೆಗೆ ಮನೆಯಿಂದ ಹೊರ ಹೋದ ಮಗ ವಾಪಸ್ ಬಂದಿಲ್ಲ. ಪತಿಯನ್ನ ಕಳೆದುಕೊಂಡ ನಾನು ಸೋದರಿಯ ಮಗನನ್ನು ತುಂಬಾ ಕಷ್ಟದಿಂದ ಸಾಕಿದ್ದೇನೆ. ಮಧ್ಯಾಹ್ನ 1 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದ ಮಗ ಬರಲಿಲ್ಲ. ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಸುದ್ದಿ ನೋಡಿ ಗ್ರಾಮಸ್ಥರು ಮನೆ ಬಳಿ ಬಂದು ವಿಚಾರಿಸುತ್ತಿದ್ದಾರೆ. ಗುರುವಾರ ಹೋದವನು ಒಂದು ಫೋನ್ ಸಹ ಮಾಡಿಲ್ಲ. ದಯವಿಟ್ಟು ನನ್ನ ಮಗನನ್ನ ತಂದುಕೊಡಿ ಎಂದು ಕೈ ಮುಗಿದು ಕಣ್ಣೀರು ಹಾಕಿದರು. ಇದನ್ನೂ ಓದಿ: ಸಿಡಿ ಹಿಂದೆ ಬಿಜೆಪಿ ಪದಾಧಿಕಾರಿಯ ಕೈವಾಡ – ಯತ್ನಾಳ್
ಲಾಕ್‍ಡೌನ್ ನಿಂದ ಕೆಲಸ ಹೋಗಿತ್ತು. ಕಳೆದ ಕೆಲ ದಿನಗಳಿಂದ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡಿಕೊಂಡಿದ್ದನು. ಗುರುವಾರ ಎಟಿಎಂ ಕಾರ್ಡ್ ತರೋದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ. ಇಲ್ಲಿಯವರೆಗೆ ಮಗ ಎಲ್ಲಿದ್ದಾನೆ ಅನ್ನೋ ಮಾಹಿತಿಯೇ ಗೊತ್ತಾಗುತ್ತಿಲ್ಲ. ನನ್ನ ಜೀವನಕ್ಕೆ ಅವನೇ ದಾರಿ ದೀಪ ಎಂದು ಮಗನ ಫೋಟೋ ಹಿಡಿದು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಬಂದವರೇ ಮಗನನ್ನ ಕರ್ಕೊಂಡು ಹೋದ್ರು: ಸಿಡಿ ಲೇಡಿ ಗೆಳೆಯನ ತಾಯಿಯ ಕಣ್ಣೀರು
ಬೆಂಗಳೂರು: ಸಿಡಿ ಬಿಡುಗಡೆಯಲ್ಲಿ ಕಾಂಗ್ರೆಸ್‍ನವರು ಮಾತ್ರ ಅಲ್ಲ.ಬಿಜೆಪಿಯವರೂ ಇದ್ದಾರೆ. ಇಬ್ಬರೂ ಒಟ್ಟಾಗಿ ಸೇರಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಿಂಗ್ ಪಿನ್ ವ್ಯಕ್ತಿಯ ಮಗಳ ನಾಮಕರಣಕ್ಕೆ ಕಾಂಗ್ರೆಸ್ ಅಲ್ಲದೇ ಬಿಜೆಪಿಯವರ ಪೈಕಿ ಯಾರು ಹೋಗಿದ್ದಾರೆ ಎನ್ನುವುದು ಬಯಲಾಗಿದೆ. ಬಿಜೆಪಿಯ ಮೂರು, ನಾಲ್ಕು ಮಂದಿ ಇದ್ದಾರೆ. ಸಿಡಿ ಹಿಂದೆ ಬಿಜೆಪಿ ಪದಾಧಿಕಾರಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಪೋಲೀಸರಿಂದ ಈ ಪ್ರಕರಣದಲ್ಲಿ ನ್ಯಾಯ ಸಿಗುವುದಿಲ್ಲ. ಈ ಪ್ರಕರಣದಲ್ಲಿ ತುಂಬಾ ಜನರ ಕೈವಾಡವಿದ್ದು ವಿಸ್ತ್ರತ ತನಿಖೆಯಾಗಬೇಕು. ಹೀಗಾಗಿ ಸಿಬಿಐಗೆ ಪ್ರಕರಣವನ್ನು ಕೊಡಬೇಕು ಎಂದು ಆಗ್ರಹಿಸಿದರು.
ನಾನು ಯಾರ ಏಜೆಂಟ್ ಅಲ್ಲ. ಕುಟುಂಬ ರಾಜಕಾರಣ, ಭ್ರಷ್ಟಾಚಾರದ ವಿರುದ್ಧ ಹೋರಾಟ ಪ್ರತ್ಯೇಕವಾಗಿ ಮುಂದುವರಿಯುತ್ತದೆ. ನಾನು ಪಕ್ಷ ನಿಷ್ಟ, ಮೋದಿ ಅಭಿಮಾನಿ ಎಂದು ಯತ್ನಾಳ್ ಹೇಳಿದರು.