Tag: ಸಿಡಿ ಕೇಸ್

  • ಯುವತಿಯನ್ನ ಪತ್ತೆ ಹಚ್ಚದಿರೋದು ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ

    ಯುವತಿಯನ್ನ ಪತ್ತೆ ಹಚ್ಚದಿರೋದು ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ

    – ರಾಜ್ಯ ಸರ್ಕಾರ, ಪೊಲೀಸರ ವೈಫಲ್ಯವೇ ಕಾರಣ

    ಬೆಂಗಳೂರು: ಸಿಡಿ ಪ್ರಕರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ. ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು 26 ದಿನಗಳು ಕಳೆದರೂ ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದಿನಕ್ಕೊಂದು ತಿರುವು ಪಡೆದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವ ಸಿಡಿ ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಬೇಕಾದರೆ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ಹೊರಬಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು. ಕಾನೂನುಬದ್ಧವಾದ ಅವಳ ಹಕ್ಕನ್ನು ಚಲಾಯಿಸದಂತೆ ತಡೆಯುತ್ತಿರುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

    ಸಿಡಿಯಲ್ಲಿರುವ ಯುವತಿ ಅಜ್ಞಾತ ಸ್ಥಳದಿಂದ ನಿರಂತರವಾಗಿ ತನ್ನ ಹೇಳಿಕೆಗಳ ಸಿಡಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾಳೆ. ತನ್ನ ವಕೀಲನ ಮೂಲಕ ಪೊಲೀಸರಿಗೆ ದೂರು ಕಳುಹಿಸಿಕೊಡುತ್ತಿದ್ದಾಳೆ, ತಂದೆ-ತಾಯಿ ಜೊತೆ ಮಾತನಾಡುತ್ತಿದ್ದಾಳೆ. ಹೀಗಿದ್ದರೂ ಪೊಲೀಸರ ಕೈಗೆ ಮಾತ್ರ ಸಿಗುತ್ತಿಲ್ಲ ಎಂದರೆ ಏನು ಅರ್ಥ?

    ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಯುವತಿಯದ್ದೆನ್ನಲಾದ ಹೇಳಿಕೆಗಳನ್ನು ಗಮನಿಸಿದರೆ ಆಕೆಗೆ ರಾಜ್ಯ ಸರ್ಕಾರದ ಮೇಲಾಗಲಿ, ಪೊಲೀಸರ ಮೇಲಾಗಲಿ ನಂಬಿಕೆ ಇಲ್ಲ. ಪೊಲೀಸರು ತನ್ನ ವಿರುದ್ಧವೇ ಸಂಚು ಮಾಡುತ್ತಿದ್ದಾರೆಂಬ ಅರ್ಥದಲ್ಲಿ ಯುವತಿ ಮಾತನಾಡುತ್ತಿದ್ದಾಳೆ. ಗೃಹಸಚಿವ ಬಸವರಾಜ್ ಬೊಮ್ಮಾಯಿ ಈ ಬಗ್ಗೆ ಗಮನಹರಿಸಬೇಕು.

    ರಾಜ್ಯದ ಪೊಲೀಸ್ ಇಲಾಖೆಯೂ ಸೇರಿದಂತೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಕ್ಕೆ ಈ ಸಿಡಿ ಹಗರಣ ಸಾಕ್ಷಿ. ಸಾಮಾನ್ಯ ಕುಟುಂಬದಿಂದ ಬಂದಿರುವ ಯುವತಿಯನ್ನು ಇಷ್ಟು ದಿನಗಳ ನಂತರವೂ ಪತ್ತೆ ಹಚ್ಚಲಾಗಿಲ್ಲವೆಂದರೆ ಏನು ಅರ್ಥ? ಆಕೆಯೇನು ವಿಜಯಮಲ್ಯನೋ ಇಲ್ಲವೇ ನೀರವ್ ಮೋದಿಯೋ ಎಂದು ಸಿದ್ದರಾಮಯ್ಯನವರು ವಾಗ್ದಾಳಿ ನಡೆಸಿದ್ದಾರೆ.

  • ಟ್ರ್ಯಾಕ್ ಮಾಡಿದ್ದೇನೆ, ಟ್ರ್ಯಾಪ್ ಮಾಡಿಲ್ಲ- ಸಿಡಿ ಕೇಸ್ ಬಗ್ಗೆ ಹೈಕಮಾಂಡ್ ಪ್ರಶ್ನೆಗೆ ಡಿಕೆಶಿ ಉತ್ತರ

    ಟ್ರ್ಯಾಕ್ ಮಾಡಿದ್ದೇನೆ, ಟ್ರ್ಯಾಪ್ ಮಾಡಿಲ್ಲ- ಸಿಡಿ ಕೇಸ್ ಬಗ್ಗೆ ಹೈಕಮಾಂಡ್ ಪ್ರಶ್ನೆಗೆ ಡಿಕೆಶಿ ಉತ್ತರ

    ಬೆಂಗಳೂರು: ಸಿಡಿ ಪ್ರಕರಣದ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಹೇಳಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಡಿಕೆಶಿಯವರಿಗೆ ಕರೆ ಮಾಡಿ ವಿಚಾರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಡಿ.ಕೆ.ಶಿವಕುಮಾರ್ ಗೆ ಕರೆ ಮಾಡಿ ಸಿಡಿ ಪ್ರಕರಣದಲ್ಲಿ ನಿಮ್ಮ ಪಾತ್ರ ಇದೆಯೇ ಎಂದು ವಿಚಾರಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಡಿಕೆಶಿ, ಪಕ್ಷ ಉಳಿಸುವ ನಿಟ್ಟಿನಲ್ಲಿ ರಮೇಶ್ ಜಾರಕಿಹೊಳಿಯವರನ್ನು ಟ್ರ್ಯಾಕ್ ಮಾಡುತ್ತಿದ್ದೆ. ಆದರೆ ಟ್ರ್ಯಾಪ್ ಮಾಡಿದ್ದು ನಾನಲ್ಲ. ಸಿಡಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಕೆ.ಸಿ.ವೇಣುಗೋಪಾಲ್ ಅವರಿಗೆ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

    ಕಾಂಗ್ರೆಸ್‍ನ 5 ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಪಕ್ಷ, ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಅದು ಅನಿವಾರ್ಯವಾಗಿತ್ತು. ಹೀಗಾಗಿ ಟ್ರ್ಯಾಕ್ ಮಾಡಿದ್ದೆ ಎಂದು ಕರೆ ಮಾಡಿ ಸ್ಪಷ್ಟನೆ ಕೇಳಿದ ವೇಣುಗೋಪಾಲ್ ಅವರಿಗೆ ಡಿಕೆಶಿ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.

    ರಮೇಶ್ ಜಾರಕಿಹೊಳಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡಿ.ಕೆ.ಶಿವಕುಮಾರ್, ಆ ಯುವತಿ ನನ್ನ ಭೇಟಿಗೆ ಪ್ರಯತ್ನ ಮಾಡಿರಬಹುದು. ಆದರೆ ನಾನು ಯುವತಿಯನ್ನು ಭೇಟಿ ಮಾಡಿಲ್ಲ. ಯಾರಾದರೂ ರಕ್ಷಣೆ ಕೋರಿ ಬಂದರೆ ಅವರಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ನೆರವು ಕೇಳಿದರೆ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ಐವರು ಶಾಸಕರನ್ನು ಆಪರೇಷನ್ ಮಾಡೋದಾಗಿ ಹೇಳಿದ್ದರಿಂದ ಅವರನ್ನು ಟ್ರ್ಯಾಕ್ ಮಾಡಿದ್ದು ನಿಜ ಎಂಬುದನ್ನು ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಇದೇ ವೇಳೆ ನರೇಶ್ ಗೌಡ ಮಾಧ್ಯಮರಂಗದಲ್ಲಿರುವ ಕಾರಣ ನನಗೆ ಪರಿಚಯ ಇದ್ದಾನೆ. ನನಗೆ ಬೇಕಾದ ಹುಡುಗ, ನಾನು ನರೇಶ್ ಮನೆಗೆ, ಅವರ ಮನೆಯ ಕಾರ್ಯಕ್ರಮಗಳಿಗೂ ಹೋಗಿ ಬಂದಿದ್ದೇನೆ. ರಮೇಶ್ ಜಾರಕಿಹೊಳಿಗೆ ನನ್ನ ಬಗ್ಗೆ ಇಷ್ಟು ಅನುಕಂಪ ಇರುವುದು ಒಳ್ಳೆಯದೆ ಎಂದಿದ್ದಾರೆ.

    ರಾಜೀನಾಮೆ ಕೊಡುವ ವಿಚಾರ ಪ್ರಸ್ತಾಪಿಸಿದಾಗ, ಹೌದಾ, ಅದರ ಅರ್ಥ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ರಾಜೀನಾಮೆ ನೀಡಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

  • ಪ್ರಭಾವ ಬೀರಿ ನಮ್ಮ ತಂದೆ, ತಾಯಿಯಿಂದ ಹೇಳಿಕೆ ಕೊಡಿಸಿದ್ದಾರೆ: ಸಿಡಿ ಲೇಡಿ 5ನೇ ವೀಡಿಯೋ ಹೇಳಿಕೆ

    ಪ್ರಭಾವ ಬೀರಿ ನಮ್ಮ ತಂದೆ, ತಾಯಿಯಿಂದ ಹೇಳಿಕೆ ಕೊಡಿಸಿದ್ದಾರೆ: ಸಿಡಿ ಲೇಡಿ 5ನೇ ವೀಡಿಯೋ ಹೇಳಿಕೆ

    – ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಸಿಎಂ ಸಹಾಯ ಮಾಡಬೇಕು
    – ಭದ್ರತೆ ನೀಡಿದರೆ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ
    – ಈಗ ಬಂದು ಹೇಳಿಕೆ ನೀಡಲು ಭಯವಾಗುತ್ತಿದೆ

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಯುವತಿ 5ನೇ ವೀಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಭಾವ ಬೀರಿ ನಮ್ಮ ತಂದೆ, ತಾಯಿಯಿಂದ ಹೇಳಿಕೆ ಕೊಡಿಸಿದ್ದಾರೆ ಎಂದು ಸಿಡಿ ಲೇಡಿ ಆರೋಪಿಸಿದ್ದಾರೆ.

    ವೀಡಿಯೋ ಹೇಳಿಕೆಯಲ್ಲಿ ಮಾತನಾಡಿರುವ ಸಿಡಿ ಲೇಡಿ, ಇಂದು ಆಗಿರುವ ಬೆಳವಣಿಗೆ ಕಂಡು ನನಗೆ ಭಯವಾಗುತ್ತಿದೆ. ನಮ್ಮ ಅಪ್ಪ, ಅಮ್ಮನಿಗೆ ಏನೂ ಗೊತ್ತೇ ಇಲ್ಲ. ಅವರ ಮೇಲೆ ಪ್ರಭಾವ ಬೀರಿ, ಬೆದರಿಕೆ ಹಾಕಿ, ಅವರನ್ನು ಎಲ್ಲೋ ಇರಿಸಿ, ಇಂದು ಹೊರಗಡೆ ಕರೆದುಕೊಂಡು ಬಂದು ಅವರ ಬಾಯಿಂದ ಏನೇನೋ ಹೇಳಿಸುತ್ತಿದ್ದಾರೆ. ಈ ಕೇಸಲ್ಲಿ ಅನ್ಯಾಯವಾಗಿರುವುದು ನನಗೆ, ಅನ್ಯಾಯ ಮಾಡಿರುವುದು ಅವರು. ಆದರೆ ಅವರ ಮನೆಯವರನ್ನು ಯಾಕೆ ಕರೆದುಕೊಂಡು ಬಂದು ವಿಚಾರಣೆ ಮಾಡುತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೆ ಸಿಡಿ ಲೇಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಮ್ಮ ತಂದೆ, ತಾಯಿ ಬಾಯಿಂದ ಏನೇನೋ ಹೇಳಿಸಿ, ಪ್ರಕರಣವನ್ನೇ ಬೇರೆ ರೀತಿ ತಿರುಗಿಸುತ್ತಿದ್ದಾರೆ. ಇಲ್ಲಿ ನ್ಯಾಯ ಸಿಗಬೇಕಿರುವುದು ನನಗೆ, ಮೊದಲು ನನ್ನ ಬಗ್ಗೆ ಮಾತನಾಡಬೇಕು. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನನಗೆ ಬೇಕಿಲ್ಲ ಅವೆಲ್ಲ ಅವರ ವೈಯಕ್ತಿಕ ವಿಚಾರ. ಈಗ ನಾನು ಬಂದು ಹೇಳಿಕೆ ನೀಡಬೇಕೆಂದರೂ ನನಗೆ ಭಯವಾಗುತ್ತಿದೆ ಎಂದು ಹೇಳಿದ್ದಾರೆ.

    ಪ್ರಭಾವ ಬೀರಿ ನಮ್ಮ ಅಪ್ಪ, ಅಮ್ಮನ ಕಡೆಯಿಂದಲೇ ಏನೇನೋ ಹೇಳಿಸಿ, ಪ್ರಕರಣವನ್ನೇ ಬದಲಾಯಿಸಲು ನೋಡುತ್ತಿದ್ದಾರೆ. ಹೀಗಿರುವಾಗ ನಾನು ಅಲ್ಲಿಗೆ ಬಂದು ಹೇಳಿಕೆ ನೀಡಿದರೆ ಏನಾಗುತ್ತೋ ನನಗೆ ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಅವರ ಬಳಿ ಕೇಳಿಕೊಳ್ಳುವುದು ಇಷ್ಟೇ, ನನಗೆ ಸಹಾಯ ಮಾಡಿ. ಏನೇನು ಅನ್ಯಾಯ ಮಾಡಿದ್ದಾರೋ ಎಲ್ಲವನ್ನೂ ಎಳೆ ಎಳೆಯಾಗಿ ಎಲ್ಲರ ಮುಂದೆ ಬಿಚ್ಚಿಡುತ್ತೇನೆ ಎಂದು ತಿಳಿಸಿದ್ದಾರೆ.

    ನಾನು ನ್ಯಾಯಾಧೀಶರ ಮುಂದೆಯೇ ಬಂದು ಹೇಳಿಕೆ ನೀಡುತ್ತೇನೆ. ದಯವಿಟ್ಟು ನನಗೆ ಎಲ್ಲರೂ ಸಹಾಯ ಮಾಡಿ, ಎಲ್ಲ ಮುಖಂಡರಲ್ಲೂ ನಾನು ಕೇಳಿಕೊಳ್ಳುವುದು ಇಷ್ಟೇ ಎಂದು ಸಿಡಿ ಯುವತಿ ತಮ್ಮ 5ನೇ ವೀಡಿಯೋ ಹೇಳಿಕೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಆ ಶಬ್ದ ಮಾತಾಡಬಾರದಿತ್ತು, ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ರಮೇಶ್ ಜಾರಕಿಹೊಳಿ

    ಆ ಶಬ್ದ ಮಾತಾಡಬಾರದಿತ್ತು, ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ರಮೇಶ್ ಜಾರಕಿಹೊಳಿ

    – ಆ ಪದ ಹಿಂದಕ್ಕೆ ಪಡೆಯುತ್ತೇನೆ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡಿರುವ ಕುರಿತು ಈಗಲೂ ನಾನು ಬದ್ಧನಾಗಿದ್ದೇನೆ. ಆದರೆ ಗಾಂ…ಪದವನ್ನು ಬಳಸಬಾರದಿತ್ತು ಹೀಗಾಗಿ ಅವರ ಮನಸ್ಸಿಗೆ ಬೇಸರವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಮೇಶ್ ಜಾರಿಕೊಳಿ ಹೇಳಿದ್ದಾರೆ.

    ಸದಾಶಿವನಗರದ ತಮ್ಮ ನಿವಾಸದ ಬಳಿ ಸಚಿವ ಸುಧಾಕರ್ ನಿವಾಸಕ್ಕೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆಡಿದ ಆ ಪದವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ಆ ಶಬ್ದ ಬಳಕೆ ಮಾಡಬಾರದಿತ್ತು, ನಾನೂ ಮನುಷ್ಯ, ಭಾವುಕನಾಗಿ ಮಾತಾಡಿದೆ. ಅಲ್ಲದೆ ಕಳೆದ 24 ದಿನಗಳಿಂದ ತೇಜೋವಧೆ ಮಾಡಲಾಗಿದೆ. ಹೀಗಾಗಿ ಆ ಪದ ಬಳಸಿದೆ ಎಂದು ತಿಳಿಸಿದರು. ಇದನ್ನೂ ಓದಿ:

    ಇಂದು ತಡವಾಗಿದೆ, ನಾಳೆ ಎಸ್‍ಐಟಿಗೆ ದೂರು ಕೊಡುತ್ತೇನೆ. ರಾಜಕೀಯ ಹೇಳಿಕೆಗೆ ರಾಜಕೀಯವಾಗೇ ಉತ್ತರ ಕೊಡುತ್ತೇನೆ. ಸತತವಾಗಿ ಟಿವಿ ನೋಡಿದೆ, ಹಾಗೆ ಮಾತನಾಡಬಾರದಿತ್ತು ಎನಿಸಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:

    ಡಿ.ಕೆ.ಶಿವಕುಮಾರ್ ವಿರುದ್ಧ ಆ ಪದ ಬಳಿಸಿದ್ದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ. ರಮೇಶ್ ಜಾರಕಿಹೊಳಿಯವರ ದೃಶ್ಯವಷ್ಟೇ ಅಶ್ಲೀಲವಲ್ಲ, ಮಾತೂ ಅಶ್ಲೀಲ. ಬಿಜೆಪಿ ಸಂಸ್ಕೃತಿ ಬಿಂಬಿಸುವ ‘ದೊಡ್ಡ ದೊಡ್ಡ’ ಮಾತುಗಳನ್ನಾಡಿದ್ದಾರೆ, ಇದು ಹೊಲಸುತನದ ಪರಮಾವಧಿ. ಅಂತಹ ಪದಗಳು ಬಿಜೆಪಿಗರ ಬಾಯಲ್ಲಿ ಮಾತ್ರ ಬರಲು ಸಾಧ್ಯ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೇ ಕೇಸ್ ದಾಖಲಾಗಿದ್ದರೂ, ಬಂಧಿಸದೆ ಇಂಥ ಕೀಳು ನಾಟಕ ಆಡಲು ಬಿಟ್ಟಿದ್ದೀರಾ ಎಂದು ಕಾಂಗ್ರೆಸ್ ಕಿಡಿಕಾರಿದೆ.

  • ರಮೇಶ್ ಜಾರಕಿಹೊಳಿ ಹತಾಶೆಯಲ್ಲಿದ್ದಾರೆ, ಏನೋ ಸಮಸ್ಯೆ ಇರಬೇಕು: ಡಿಕೆಶಿ ತಿರುಗೇಟು

    ರಮೇಶ್ ಜಾರಕಿಹೊಳಿ ಹತಾಶೆಯಲ್ಲಿದ್ದಾರೆ, ಏನೋ ಸಮಸ್ಯೆ ಇರಬೇಕು: ಡಿಕೆಶಿ ತಿರುಗೇಟು

    ಬೆಂಗಳೂರು: ಸಿಡಿ ಪ್ರಕರಣದ ಮಹಾನಾಯಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದ ಬೆನ್ನಲ್ಲೇ ಡಿಕೆಶಿ ಪ್ರತಿಕ್ರಿಯಿಸಿದ್ದು, ಪಾಪ ರಮೇಶ್ ಜಾರಕಿಹೊಳಿ ಹತಾಶೆಯಲ್ಲಿದ್ದಾರೆ. ಅವರಿಗೆ ಏನೋ ಸಮಸ್ಯೆ ಇರಬೇಕು. ಅವರು ಮಾತನಾಡಿದ್ದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರು.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಇದಕ್ಕೂ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಸಮಸ್ಯೆ, ಅವರೇ ಸರಿಪಡಿಸಿಕೊಳ್ಳಬೇಕು. ನಿನ್ನೆ ಒಂದು ಮಾತನಾಡುತ್ತಾರೆ, ಇಂದು ಒಂದು ಮಾತನಾಡುತ್ತಾರೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ, ಅವರದೇ ಸರ್ಕಾರ ಇದೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

    ಪೋಷಕರು ಸಹ ನಿಮ್ಮ ಹೆಸರು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಅದರ ಅವಶ್ಯಕತೆ ಇಲ್ಲ, ಆ ಯುವತಿ ನನ್ನನ್ನು ಭೇಟಿ ಮಾಡಿಲ್ಲ. ಈ ಕುರಿತು ಬೆಳಗ್ಗೆಯೇ ಸ್ಪಷ್ಟಪಡಿಸಿದ್ದೇನೆ. ಯಾರೂ ನನ್ನನ್ನು ಭೇಟಿ ಮಾಡಿಲ್ಲ. ಬಿಜೆಪಿಗರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಈ ಬಗ್ಗೆ ತನಿಖೆ ಮಾಡಲಿ. ರಮೇಶ್ ಜಾರಕಿಹೊಳಿ ನಾನೇ ಆ ಮಹಾನಾಯಕ ಎಂದು ಹೇಳಿರುವುದು ನನಗೆ ಗೊತ್ತಿಲ್ಲ ಎಂದರು.

    ರಮೇಶ್ ಜಾರಕಿಹೊಳಿ ಹೇಳಿದ್ದೇನು?
    ನಿನ್ನೆ ಹೇಳಿದಂತೆಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ದೊಡ್ಡ ಬಾಂಬ್ ಸಿಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ನೇರವಾಗಿ ಆರೋಪ ಮಾಡುವ ಮೂಲಕ ಆ ಮಹಾನಾಯಕ ಯಾರೆಂದು ಖಚಿತಪಡಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ತಮ್ಮ ಸಿಡಿ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ನಾನು ನಿನ್ನೆ ಹೇಳಿದಂತೆ 4-6 ಗಂಟೆ ಒಳಗೆ ಕೆಲವು ಮಾಹಿತಿ ನೀಡುತ್ತೇನೆ. ಮಹಾನಾಯಕ ಯಾರು ಎಂಬುದನ್ನು ಅವರೇ ಹೇಳಿದ್ದಾರೆ. ಕಿಂಗ್‍ಪಿನ್ ನರೇಶ್ ಗೌಡ ಜೊತೆ ಸಂಪರ್ಕ ಇದೆ ಎಂದು ಒಪ್ಪಿಕೊಂಡಿದ್ದಾರೆ. ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್, ಇಂಥ ಷಡ್ಯಂತ್ರವನ್ನು ಆ ನಾಯಕ ಮಾಡಬಾರದಿತ್ತು. ಆ ನಾಯಕ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಹಾನಾಯಕ ಗಾಂ…ಡಿಕೆಶಿಯಂಥ ಗಾಂ….ಇಲ್ಲ. ನಾನು ಗಂಡಸು, ಡಿಕೆಶಿ ವಿರುದ್ಧ ದೂರು ಕೊಡುತ್ತೇನೆ. ಅವನಿಗೆ ಯಾಕೆ ಹೆದರಬೇಕು? ಮುಂದಿನ ಚುನಾವಣೆಯಲ್ಲಿ ಕನಕಪುರದಲ್ಲಿ ನಾನು ಡಿಕೆಶಿ ಸೋಲಿಸುತ್ತೇನೆ. ಕನಕಪುರದಲ್ಲಿ ಡಿಕೆಶಿ ಸೋಲಿಸಲು ಎಲ್ಲ ತಂತ್ರ ಮಾಡುತ್ತೇನೆ. ಡಿಕೆಶಿ ವಿರುದ್ಧ ಇವತ್ತೇ ದೂರು ಕೊಡ್ತೇನೆ, ಡಿಕೆಶಿ ವಿರುದ್ಧ ಎಸ್‍ಐಟಿಗೆ ನೇರವಾಗಿ ದೂರು ಕೊಡುತ್ತೇನೆ. ಕೇಸ್ ನಲ್ಲಿ ಯಾರೆಲ್ಲ ಇದ್ದಾರೆಂದು ತನಿಖೆಯಲ್ಲಿ ಗೊತ್ತಾಗುತ್ತದೆ. ಡಿಕೆಶಿ ವಿರುದ್ಧ ಇನ್ನೂ 11 ದಾಖಲೆ ಇದೆ, ಡಿಕೆಶಿ ರಾಜೀನಾಮೆ ನೀಡಲೇಬೇಕು ಎಂದು ರಮೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

  • ಮಹಾನಾಯಕ ಗಾಂ…ನಾನು ಗಂಡಸು, ಡಿಕೆಶಿ ವಿರುದ್ಧ ದೂರು ಕೊಡ್ತೇನೆ- ರಮೇಶ್ ಜಾರಕಿಹೊಳಿ ಆಕ್ರೋಶ

    ಮಹಾನಾಯಕ ಗಾಂ…ನಾನು ಗಂಡಸು, ಡಿಕೆಶಿ ವಿರುದ್ಧ ದೂರು ಕೊಡ್ತೇನೆ- ರಮೇಶ್ ಜಾರಕಿಹೊಳಿ ಆಕ್ರೋಶ

    – ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್, ಡಿಕೆಶಿ ರಾಜೀನಾಮೆ ನೀಡಬೇಕು
    – ಮುಂದಿನ ಚುನಾವಣೆಯಲ್ಲಿ ಕನಕಪುರದಲ್ಲೇ ಡಿಕೆಶಿ ಸೋಲಿಸುತ್ತೇನೆ

    ಬೆಂಗಳೂರು: ನಿನ್ನೆ ಹೇಳಿದಂತೆಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ದೊಡ್ಡ ಬಾಂಬ್ ಸಿಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ನೇರವಾಗಿ ಆರೋಪ ಮಾಡುವ ಮೂಲಕ ಆ ಮಹಾನಾಯಕ ಯಾರೆಂದು ಖಚಿತಪಡಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ತಮ್ಮ ಸಿಡಿ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ನಾನು ನಿನ್ನೆ ಹೇಳಿದಂತೆ 4-6 ಗಂಟೆ ಒಳಗೆ ಕೆಲವು ಮಾಹಿತಿ ನೀಡುತ್ತೇನೆ. ಮಹಾನಾಯಕ ಯಾರು ಎಂಬುದನ್ನು ಅವರೇ ಹೇಳಿದ್ದಾರೆ. ಕಿಂಗ್‍ಪಿನ್ ನರೇಶ್ ಗೌಡ ಜೊತೆ ಸಂಪರ್ಕ ಇದೆ ಎಂದು ಒಪ್ಪಿಕೊಂಡಿದ್ದಾರೆ. ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್, ಇಂಥ ಷಡ್ಯಂತ್ರವನ್ನು ಆ ನಾಯಕ ಮಾಡಬಾರದಿತ್ತು. ಆ ನಾಯಕ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಹಾನಾಯಕ ಗಾಂ…ಡಿಕೆಶಿಯಂಥ ಗಾಂ….ಇಲ್ಲ. ನಾನು ಗಂಡಸು, ಡಿಕೆಶಿ ವಿರುದ್ಧ ದೂರು ಕೊಡುತ್ತೇನೆ. ಅವನಿಗೆ ಯಾಕೆ ಹೆದರಬೇಕು? ಮುಂದಿನ ಚುನಾವಣೆಯಲ್ಲಿ ಕನಕಪುರದಲ್ಲಿ ನಾನು ಡಿಕೆಶಿ ಸೋಲಿಸುತ್ತೇನೆ. ಕನಕಪುರದಲ್ಲಿ ಡಿಕೆಶಿ ಸೋಲಿಸಲು ಎಲ್ಲ ತಂತ್ರ ಮಾಡುತ್ತೇನೆ. ಡಿಕೆಶಿ ವಿರುದ್ಧ ಇವತ್ತೇ ದೂರು ಕೊಡ್ತೇನೆ, ಡಿಕೆಶಿ ವಿರುದ್ಧ ಎಸ್‍ಐಟಿಗೆ ನೇರವಾಗಿ ದೂರು ಕೊಡುತ್ತೇನೆ. ಕೇಸ್ ನಲ್ಲಿ ಯಾರೆಲ್ಲ ಇದ್ದಾರೆಂದು ತನಿಖೆಯಲ್ಲಿ ಗೊತ್ತಾಗುತ್ತದೆ. ಡಿಕೆಶಿ ವಿರುದ್ಧ ಇನ್ನೂ 11 ದಾಖಲೆ ಇದೆ, ಡಿಕೆಶಿ ರಾಜೀನಾಮೆ ನೀಡಲೇಬೇಕು ಎಂದು ರಮೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

  • ಡಿಕೆ ಶಿವಕುಮಾರ್ ಹಾಗೇ ಮಾಡಿರಲಾರರು ಅಂದುಕೊಂಡಿದ್ದೇನೆ – ಮಾಧುಸ್ವಾಮಿ ಸಾಫ್ಟ್ ಮಾತು

    ಡಿಕೆ ಶಿವಕುಮಾರ್ ಹಾಗೇ ಮಾಡಿರಲಾರರು ಅಂದುಕೊಂಡಿದ್ದೇನೆ – ಮಾಧುಸ್ವಾಮಿ ಸಾಫ್ಟ್ ಮಾತು

    ಮೈಸೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತ ಯುವತಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಆದರೆ ನಾನು ಡಿಕೆಶಿ ಅವರು ಹಾಗೇ ಮಾಡಿರಲಾರರು ಅಂದುಕೊಂಡಿದ್ದೇನೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಡಿಕೆಶಿ ಪರ ಸಾಫ್ಟ್ ಕಾರ್ನರ್ ತೋರಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಧುಸ್ವಾಮಿ, ನಾನು ಡಿ.ಕೆ ಶಿವಕುಮಾರ್ ಅವರನ್ನು ಹಲವು ವರ್ಷದಿಂದ ನೋಡಿದ್ದೇನೆ. ಅವರು ಈ ರೀತಿ ಮಾಡಿರಲಾರರು ಎಂದು ಅಂದುಕೊಂಡಿದ್ದೇನೆ. ಆ ಯುವತಿ ಅವರ ಹೆಸರು ಹೇಳಿದ್ದಾಳೆ ನಿಜ. ಆದರೆ ಅದನ್ನು ಹೊರತುಪಡಿಸಿ ಮತ್ಯಾವ ಗಂಭೀರ ಸಾಕ್ಷ್ಯವನ್ನು ಆಕೆ ನೀಡಿಲ್ಲ. ಹಾಗಾಗಿ ಏನಾಗುತ್ತೆ ಎಂದು ಕಾದು ನೋಡೋಣ ಎಂದಿದ್ದಾರೆ.

    ಘಟನೆಯಲ್ಲಿ ಏನೋ ಇದೆ ಅಂತ ತನಿಖೆಗೆ ಆದೇಶ ಮಾಡಲಾಗಿದೆ. ಈ ಘಟನೆಯಲ್ಲಿ ನರೇಶ್ ಗೊತ್ತಿಲ್ಲ ಅಂತ ಹೇಳೋಕಾಗೋಲ್ಲ. ಆಕೆ ಮಾತನಾಡಿರುವುದನ್ನು ಮತ್ತು ಡಿಕೆಶಿ ಹೇಳಿರೋದನ್ನು ಕೇಳಿದ್ದೇವೆ. ಆದರೆ ನರೇಶ್ ಬೇರೆ ಕಥೆ ಹೇಳುತ್ತಿದ್ದಾರೆ. ಸಿಡಿ ಕೇಸ್‍ನಲ್ಲಿ ಜಾರಕಿಹೊಳಿ ಅವರನ್ನು ಬಂಧಿಸಲುಬಹುದು, ಬಂಧನ ಮಾಡದೇಯೂ ಇರಬಹುದು. ಕೇಸ್‍ನ ಪ್ರಾಥಮಿಕ ತನಿಖೆಯಲ್ಲಿ ದೂರಿನ ಪೂರಕ ಅಂಶ ಇದ್ದರೆ ಬಂಧಿಸಬಹುದು. ಇಲ್ಲವಾದಲ್ಲಿ ಅವರನ್ನು ಕೇವಲ ವಿಚಾರಣೆ ಮಾಡಿ ಬಿಡಬಹುದು ಎಂದು ಪ್ರತಿಕ್ರಿಯಿಸಿದರು.

    ಈ ಘಟನೆಯಲ್ಲಿ ಬಹಳ ಗೊಂದಲ ಇದೆ. ಈ ಕೇಸ್ ಪೊಲೀಸರಿಗೂ ಕಷ್ಟ ಇದೆ. ಆಕೆ ದೃಢವಾಗಿ ಹೇಳಿಕೆಯನ್ನು ಎಲ್ಲಿಯೂ ನೀಡಿಲ್ಲ. ಕೆಲವರು ಆಡಿಯೋ ಡಬ್ ಅಂತಾರೆ, ವಿಡಿಯೋ ಎಡಿಟ್ ಅಂತಾರೆ. ಈ ಕುರಿತು ತನಿಖೆ ನಡೆದ ಮೇಲಷ್ಟೆ ನಾವು ಮಾತನಾಡಬೇಕಿದೆ. ಇಂತಹ ಘಟನೆಗಳು ರಾಜ್ಯಕ್ಕೆ ಮುಜುಗರ ಆಗುತ್ತೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

    ನಾವು ಪ್ರಬುದ್ಧರಾಗಿದ್ದರೆ ವೈಯುಕ್ತಿಕ ಬದುಕನ್ನು ಚರ್ಚೆ ಮಾಡುತ್ತಲೇ ಇರಲಿಲ್ಲ. ಅದು ಅವರ ವೈಯುಕ್ತಿಕ ಅಂತ ಸುಮ್ಮನಾಗಬಹುದಿತ್ತು. ಆದರೆ ನಾವು ಎಲ್ಲರು ಎಷ್ಟು ತೇಜೋವಧೆ ಮಾಡಿದ್ದೀವಿ. ರಾಜ್ಯದಲ್ಲಿ ಬೇರೆ ಸುದ್ದಿ ಇಲ್ಲವೆಂಬಂತೆ ಬಿಂಬಿಸುತ್ತಿದ್ದೇವೆ. ಮೇಟಿ ಕೇಸ್‍ನಲ್ಲೂ ಕೂಡ ಮರ್ಯಾದೆ ಹೋಯ್ತು ಆದರೆ ಕೇಸ್ ಏನು ಆಗಲೇ ಇಲ್ಲ. ನನಗೆ ಆಂಜಿಯೋಪ್ಲ್ಯಾಸ್ಟಿ ಆಗಿದೆ. ನಾನು ಸ್ಟಂಟ್ ಹಾಕಿಸಿಕೊಂಡಿದ್ದೇನೆ. ಹಾಗಾಗಿ ನಾನು ಸದನಕ್ಕೆ ಹೋಗಿಲ್ಲ ಎಂದು ತಿಳಿಸಿದರು.

  • ಕಾಂಗ್ರೆಸ್‍ನ ಮಹಾನಾಯಕ, ಬಿಜೆಪಿಯ ಯುವರಾಜರದ್ದು ಎರಡು ಸಿಡಿ ಫ್ಯಾಕ್ಟರಿಗಳಿವೆ: ಯತ್ನಾಳ್

    ಕಾಂಗ್ರೆಸ್‍ನ ಮಹಾನಾಯಕ, ಬಿಜೆಪಿಯ ಯುವರಾಜರದ್ದು ಎರಡು ಸಿಡಿ ಫ್ಯಾಕ್ಟರಿಗಳಿವೆ: ಯತ್ನಾಳ್

    – ಕೆಲವೇ ದಿನಗಳಲ್ಲಿ ಯುವರಾಜನದ್ದೂ ಹೊರ ಬರಲಿದೆ

    ಹಾವೇರಿ: ಕಾಂಗ್ರೆಸ್ ನ ಮಹಾನಾಯಕ ಮತ್ತು ಬಿಜೆಪಿಯ ಯುವರಾಜರದ್ದು ಸಿಡಿ ಉತ್ಪನ್ನ ಮಾಡುವ ಎರಡು ಫ್ಯಾಕ್ಟರಿಗಳಿವೆ. ಇದೀಗ ಹೆಸರು ಬಂದಿರುವ ಕಾಂಗ್ರೆಸ್ ನಾಯಕ ಇಂತಹ ಸಿಡಿಗಳನ್ನು ಖರೀದಿ ಮಾಡುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

    ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಮಾತನಾಡಿದ ಅವರು, ಕೆಲ ಹೆಣ್ಣು ಮಕ್ಕಳನ್ನು ಬಿಟ್ಟು ಬ್ಲ್ಯಾಕ್ ಮೇಲ್ ಮಾಡಿ, ಸಿಡಿ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಸಪೋರ್ಟ್ ಮಾಡದಿದ್ದರೆ, ತೊಂದರೆ ಕೊಟ್ಟರೆ ಸಿಡಿ ಬಿಡುತ್ತೇವೆಂದು ಭಯಪಡಿಸುತ್ತಾರೆ. ಎಷ್ಟೋ ಜನ ಶಾಸಕರು ಈ ಭಯದ ವಾತಾವರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿದ್ದಾರೆ. ನಿನ್ನೆ ಸಿಡಿ ಯುವತಿ ಹೆಸರು ಹೇಳಿದವರ ಡ್ರೈವರ್ ಅವರ ಜೊತೆ ಓಡಾಡಿರೋ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ನಾನು ಮೊದಲೇ ಭವಿಷ್ಯ ನುಡಿದಿದ್ದೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.

    ಬಿಜೆಪಿಯಲ್ಲೊಬ್ಬ ಯುವರಾಜ ಮತ್ತು ಕಾಂಗ್ರೆಸ್ ಮಹಾನಾಯಕ ಇಬ್ಬರೂ ಇದ್ದಾರೆಂದು ಹೇಳಿದ್ದೆ. ಈಗ ಕಾಂಗ್ರೆಸ್ ಮಹಾನಾಯಕನದ್ದು ಹೊರಬಂದಿದೆ. ಕೆಲವೇ ದಿನಗಳಲ್ಲಿ ಬಿಜೆಪಿಯ ಯುವರಾಜನದ್ದೂ ಹೊರಬರಲಿದೆ. ಈ ಸಿಡಿ ಯುವರಾಜನ ರಕ್ಷಣೆ ಮಾಡಲು ಸಿಸಿಬಿಗೆ ಕೊಟ್ಟಿದ್ದು, ಸಿಬಿಐಗೆ ಕೊಟ್ಟರೆ ಎಲ್ಲ ಕಳ್ಳರನ್ನು ಒದ್ದು ಒಳಗೆ ಹಾಕುತ್ತಾರೆ. ಇಂತಹ ಬಹಳ ಮಂದಿಯ ಸಿಡಿ ಮಾಡಿದ್ದಾರೆ. ಐಪಿಎಸ್, ಐಎಎಸ್ ಅಧಿಕಾರಿಗಳು, ವ್ಯಾಪಾರಸ್ಥರು, ಶಾಸಕರು, ಸಂಸದರ ಸಿಡಿಗಳಿವೆ. ಇವರಿಬ್ಬರೂ ಸಿಡಿ ಖರೀದಿದಾರರು. ಮೆಕ್ಕೆಜೋಳ, ಮೆಣಸಿನಕಾಯಿ ಖರೀದಿ ಮಾಡೋರ ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲೊಬ್ಬಬ್ಬರು ಸಿಡಿ ಖರೀದಿ ಮಾಡೋರಿದ್ದಾರೆ. ಬಿಜೆಪಿಯ ಉನ್ನತ ನಾಯಕನ ಸಿಡಿ ಕಾಂಗ್ರೆಸ್ ನ ಮಹಾನಾಯಕನ ಬಳಿ ಇದೆ. ಅವನನ್ನ ನೋಡಿದರೆ ಬಿಜೆಪಿ ನಾಯಕರು ಭಯಪಡ್ತಾರೆ. ಹಿಂದೆ ಆ ಮಹಾನಾಯಕನೇ ಸಿಡಿ ಇರೋ ಬಗ್ಗೆ ಹೇಳಿದ್ದಾನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

    ರಾಜ್ಯದಲ್ಲಿ ಭ್ರಷ್ಟರದ್ದೊಂದು ಗುಂಪು, ಪ್ರಾಮಾಣಿಕ ರಾಜಕಾರಣಿಗಳದ್ದೊಂದು ಗುಂಪಿದೆ. ಎಲ್ಲ ಪಕ್ಷಗಳಲ್ಲೂ ಈ ಗುಂಪು ಇವೆ. ಸಿಎಂ ಬದಲಾವಣೆ ಆಗಲೇಬೇಕು, ಇದರ ಬಗ್ಗೆ ಬೇರೆ ಅಭಿಪ್ರಾಯವಿಲ್ಲ. ಮೇ 2 ನಂತರ ಪ್ರಧಾನಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ರಾಜ್ಯದಲ್ಲಿನ ಎಲ್ಲ ಬೆಳವಣಿಗೆಗಳನ್ನು ಪ್ರಧಾನಿ ನರೇಂದ್ರ ಮೋದಿ ಗಮನಿಸುತ್ತಿದ್ದಾರೆ. ಎಲ್ಲ ಮಾಹಿತಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಇದೆ. ದೇಶಕ್ಕೆ, ಧರ್ಮಕ್ಕೆ ಕಷ್ಟ ಬಂದಾಗ ಭಗವಂತ ಹುಟ್ಟಿ ಬಂದಂತೆ ಮೇ 2ರ ನಂತರ ನರೇಂದ್ರ ಮೋದಿಯವರು ಕರ್ನಾಟಕದ ಬೆಳವಣಿಗೆ ನೋಡಿ ಗಟ್ಟಿಯಾದ ನಿರ್ಧಾರ ತಗೋತಾರೆ ಎಂದರು.

    ಸಿಎಂ ಯಡಿಯೂರಪ್ಪ ಬಿಜೆಪಿ ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ, ಜಮೀರ ಅಹ್ಮದ್ ಅವರಿಗೆ ಅನುದಾನ ಕೊಡುತ್ತಾರೆ. ನಾವು ಅನುದಾನ ಕೇಳಿದರೆ ನಮಗೆ ವಿಷ ಕುಡಿಯೋಕೆ ಹಣ ಇಲ್ಲ ಅಂತಾರೆ. ಜಮೀರ್ ಅಹ್ಮದ್ ಹಿಂದೂಗಳನ್ನ ಬೈಯ್ಯುತ್ತಾ ಓಡಾಡ್ತಾರೆ, ಅವರಿಗೆ ಅನುದಾನ ಕೊಡ್ತಾರೆ. ಯಡಿಯೂರಪ್ಪ ಅವರ ಬೀಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರೀಸ್ವಾಮಿಗೆ ಅನುದಾನ ಕೊಡುತ್ತಾರೆ ಎಂದು ಆರೋಪಿಸಿದರು.

    ಬಿಜೆಪಿಯ ಕೆಲವು ಶಾಸಕರಿಗೆ ಮಾತ್ರ ಅನುದಾನ ಕೊಡುತ್ತಾರೆ. ಬಿಜೆಪಿಯ ಒಂದೇ ಒಂದು ಶಾಸಕಾಂಗ ಪಕ್ಷದ ಸಭೆ ನಡೆದಿಲ್ಲ. ಸಿದ್ದರಾಮಯ್ಯ ಆಗಾಗ ಶಾಸಕಾಂಗ ಪಕ್ಷದ ಸಭೆ ಮಾಡುತ್ತಿದ್ದರು. ನಾವೆಲ್ಲ ಕೈ ಎತ್ತಿದ್ದಕ್ಕೆ ನೀವು ಸಿಎಂ ಆಗಿದ್ದೀರಿ, ಕಾಂಗ್ರೆಸ್, ಜೆಡಿಎಸ್ ನವರು ಕೈ ಎತ್ತಿದ್ದಕ್ಕಲ್ಲ. ಅವರ ಜೊತೆ ಇವರದು ಹೊಂದಾಣಿಕೆ ರಾಜಕಾರಣ ಇದೆ. ಶಾಸಕರು ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ಒಬ್ಬ ಶಾಸಕರೂ ನನ್ನ ವಿರುದ್ಧ ಸಹಿ ಮಾಡಿಲ್ಲ. ಸಭೆಗೆ ತೆರಳಿದ ಒಬ್ಬ ಶಾಸಕರು ನನಗೆ ಹೇಳಿದ್ದಾರೆ. ಯತ್ನಾಳರು ನಮ್ಮ ಪರವಾಗಿದ್ದಾರೆ, ಅವರ ವಿರುದ್ಧ ಸಹಿ ಮಾಡೋದಿಲ್ಲ ಎಂದಿದ್ದಾರೆ. 31ರ ವರೆಗೆ ಅಧಿವೇಶವಿತ್ತು. ಸಿಡಿ ನೆಪದಲ್ಲಿ ಅಧಿವೇಶನ ಮೊಟಕು ಮಾಡಿದರು. ಇದೇನು ಒಂದು ಕುಟುಂಬದ ಸರ್ಕಾರವೇ? ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಮತ್ತು ಅವರ ಹೆಣ್ಣು ಮಕ್ಕಳ ಸರ್ಕಾರವೇ? ಹೀಗಾದರೆ ಪಕ್ಷ ಹೇಗೆ ಉಳಿಯಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

     

  • ಇದೊಂದು ಹನಿಟ್ರ್ಯಾಪ್, ಸಂತ್ರಸ್ತೆಯನ್ನು ಇಟ್ಟುಕೊಂಡು ಆಟವಾಡುತ್ತಿದ್ದಾರೆ- ಜೆಡಿಎಸ್ ಕಿಡಿ

    ಇದೊಂದು ಹನಿಟ್ರ್ಯಾಪ್, ಸಂತ್ರಸ್ತೆಯನ್ನು ಇಟ್ಟುಕೊಂಡು ಆಟವಾಡುತ್ತಿದ್ದಾರೆ- ಜೆಡಿಎಸ್ ಕಿಡಿ

    – ಬಿಜೆಪಿ, ಜೆಡಿಎಸ್ ಟ್ವೀಟ್ ವಾರ್ ಗೆ ಜೆಡಿಎಸ್ ಎಂಟ್ರಿ

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್ ಟ್ವೀಟ್ ಗುದ್ದಾಟದ ನಡುವೆ ಜೆಡಿಎಸ್ ಎಂಟ್ರಿಯಾಗಿದ್ದು, ಇದೊಂದು ಹನಿಟ್ರ್ಯಾಪ್ ಪ್ರಕರಣ, ಇದರ ಹಿಂದೆ ದೊಡ್ಡ ಕೂಟವೇ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.

    ಶುಕ್ರವಾರ ಸಂಜೆ ಸಿಡಿ ಲೇಡಿ ಬಿಡುಗಡೆ ಮಾಡಿದ ವೀಡಿಯೋ ಹೇಳಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪವಾದಾಗಿನಿಂದ ಬಿಜೆಪಿ, ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಜೋರಾಗಿದ್ದು, ಇದೀಗ ಜೆಡಿಎಸ್ ಸಹ ಎಂಟ್ರಿ ಕೊಟ್ಟಿದೆ. ಸರಣಿ ಟ್ವೀಟ್ ಮಾಡುವ ಮೂಲಕ ಇದೊಂದು ಹನಿಟ್ರ್ಯಾಪ್ ಪ್ರಕರಣ ಎಂದಿದೆ. ಇದನ್ನೂ ಓದಿ: #DKShiMustResign – ಸಿಡಿ ನಿರ್ದೇಶಿಸುವುದಕ್ಕಿಂತ ಚಹಾ, ಪಕೋಡಾ ಮಾರುವುದು ವಾಸಿ

    ಆರಂಭದಲ್ಲಿ ಲೈಂಗಿಕ ಹಗರಣ, ಲೈಂಗಿಕ ಶೋಷಣೆಯಂತೆ ಕಾಣುತ್ತಿದ್ದ ಸಿಡಿ ಹಗರಣ ಈಗ ಷಡ್ಯಂತ್ರದಂತೆ ಕಾಣುತ್ತಿದೆ. ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೆಸರು ಕೇಳಿಬರುವ ಮೂಲಕ ಪ್ರಕರಣ ಈಗ ‘ಹನಿಟ್ರ್ಯಾಪ್’ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೆಲ್ಲದರ ನಡುವೆ ರಾಷ್ಟ್ರದ ಎದುರು ನಾಚಿಕೆ ಪಡುವ ಸ್ಥಿತಿಯಲ್ಲಿ ರಾಜ್ಯ ನಿಂತಿದೆ. ರಾತ್ರಿ ಒಂದು ಆಡಿಯೋ ಬಿಡುಗಡೆಯಾಗುವುದು, ಬೆಳಗ್ಗೆ ಅದಕ್ಕೊಂದು ಸ್ಪಷ್ಟನೆಯ ವೀಡಿಯೋ ಬಿಡುಗಡೆಯಾಗುವುದು. ಇವೆಲ್ಲವನ್ನೂ ಗಮನಿಸುತ್ತಿದ್ದರೆ ಇದರ ಹಿಂದೆ ದೊಡ್ಡ ಕೂಟವೇ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಜೆಡಿಎಸ್ ಟ್ವೀಟ್ ಮೂಲಕ ಕಿಡಿಕಾರಿದೆ.

    ಸಂತ್ರಸ್ತೆಗೆ ನ್ಯಾಯ ಕೊಡಿಸುವ ನೆಪದಲ್ಲಿ, ಆಕೆಯನ್ನು ಮುಂದಿಟ್ಟುಕೊಂಡು ಯಾರೋ ಆಟವಾಡುತ್ತಿರುವುದು ಸ್ಪಷ್ಟವಾಗುತ್ತಲಿದೆ. ಪ್ರಕರಣವನ್ನು ಅದರಪಾಡಿಗೆ ಬಿಟ್ಟು, ಆಗುವ ಬೆಳವಣಿಗೆಯನ್ನು ರಾಷ್ಟ್ರ ನೋಡಿ ಮನರಂಜನೆ ಪಡೆಯುವಂತೆ ಮಾಡುವುದು ರಾಜ್ಯಕ್ಕೆ, ನಮ್ಮ ಪೊಲೀಸರಿಗೆ ಮಾಡುವ ಅತಿ ದೊಡ್ಡ ಅಪಮಾನವಾಗುತ್ತದೆ.

    ಈ ಸಂದರ್ಭದಲ್ಲಿ ಪೊಲೀಸರು ದಿಟ್ಟತನ ಮೆರೆಯುವುದು ಅತ್ಯಗತ್ಯ. ಯಾವುದೇ ರಾಜಕೀಯ ಒತ್ತಡಗಳನ್ನೂ ಲೆಕ್ಕಿಸದೇ ತನಿಖೆ ನಡೆಸಿ ಅಸಲಿ ಸತ್ಯ ಬಯಲಿಗೆಳೆಯಬೇಕು. ಲೈಂಗಿಕ ಶೋಷಣೆಯೋ, ಷಡ್ಯಂತ್ರವೋ, ಹನಿಟ್ರ್ಯಾಪ್ ಆಗಿದೆಯೋ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಆಡಳಿತ ಪಕ್ಷ, ವಿರೋಧ ಪಕ್ಷ ಎಂಬುದನ್ನು ಲೆಕ್ಕಿಸದೇ ಅಸಲಿ ಸಂಗತಿಯನ್ನು ಪೊಲೀಸರು ಹೊರ ತರಬೇಕು. ರಾಜ್ಯದ ಪೊಲೀಸರ ಕರ್ತವ್ಯ ನಿಷ್ಠೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರಿದೆ. ಅದರ ಪ್ರದರ್ಶನಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎಂದು ಹೇಳಿದೆ.

    ಲೈಂಗಿಕ ಪ್ರಕರಣವೊಂದರ ವರದಿಗಳು ನಿತ್ಯ ಪ್ರಕಟವಾಗುತ್ತಿದ್ದರೆ ಅದರಿಂದ ಕುಟುಂಬಗಳು ಮತ್ತು ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ನಾವು ಚಿಂತಿಸಬೇಕಿದೆ. ಇದಕ್ಕೆ ಅಂತ್ಯ ಹಾಡಬೇಕಿದ್ದರೆ ಸೂಕ್ತ ತನಿಖೆಯೊಂದೇ ದಾರಿ. ಇಲ್ಲವಾದರೆ ಈ ಪ್ರಕರಣದ ಬೆಳವಣಿಗೆಗಳು ಮತ್ತಷ್ಟು ವಿಸ್ತಾರವಾಗುತ್ತ ನಾಗರಿಕ ಸಮಾಜ ನಾಚಿಕೆಯಲ್ಲಿ ದಿನ ಕಳೆಯಬೇಕಾಗುತ್ತದೆ ಎಂದು ಜೆಡಿಎಸ್ ಕಿಡಿಕಾರಿದೆ.

  • #DKShiMustResign – ಸಿಡಿ ನಿರ್ದೇಶಿಸುವುದಕ್ಕಿಂತ ಚಹಾ, ಪಕೋಡಾ ಮಾರುವುದು ವಾಸಿ

    #DKShiMustResign – ಸಿಡಿ ನಿರ್ದೇಶಿಸುವುದಕ್ಕಿಂತ ಚಹಾ, ಪಕೋಡಾ ಮಾರುವುದು ವಾಸಿ

    – ಕಾಂಗ್ರೆಸ್ ಸಿಡಿ ತಯಾರಿಸುವ ಕಾರ್ಖಾನೆಯಾಗಿದೆ
    – ರಕ್ಷಣಾತ್ಮಕ ಆಟ ಸಾಕು, ಕೂಡಲೇ ಜಾರಕಿಹೊಳಿ ಬಂಧಿಸಿ ಎಂದ ಕಾಂಗ್ರೆಸ್

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಜೋರಾಗಿ ನಡೆದಿದ್ದು, ಡಿಕೆಶಿ ಮಸ್ಟ್ ರಿಸೈನ್ ಎಂದು ಟ್ವಿಟ್ಟರ್ ನಲ್ಲಿ ಬಿಜೆಪಿ ಅಭಿಯಾನ ಆರಂಭಿಸಿದೆ.

    ಡಿಕೆಶಿ ಮಸ್ಟ್ ರಿಸೈನ್ ಹ್ಯಾಶ್ ಟ್ಯಾಗ್ ನೊಂದಿಗೆ ಬಿಜೆಪಿ ಸರಣಿ ಟ್ವೀಟ್ ಮಾಡಿ ಟಾಂಗ್ ಕೊಡುತ್ತಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಹ ತಿರುಗೇಟು ನೀಡುತ್ತಿದೆ. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎನ್ನುವ ಆಡು ಮಾತನ್ನು ಕಾಂಗ್ರೆಸ್ ನಾಯಕರನ್ನು ನೋಡಿಯೇ ಮಾಡಿರಬೇಕು. ಅಧಿಕಾರಕ್ಕಾಗಿ ಯಾವ ನೀಚ ಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎಂದು ಮಹಾನಾಯಕ ತೋರಿಸಿಕೊಟ್ಟಿದ್ದಾರೆ. ಮಹಾನಾಯಕನಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಉಳಿದಿದ್ದರೆ, ಇದ್ದರೆ ತಕ್ಷಣ ರಾಜೀನಾಮೆ ನೀಡಲಿ ಎಂದು ಬಿಜೆಪಿ ಒತ್ತಾಯಿಸಿದೆ.

    ಬಿಜೆಪಿ ಟ್ವೀಟ್‍ನಲ್ಲಿ ಏನಿದೆ?
    ಭ್ರಷ್ಟಾಚಾರ ಪ್ರಕರಣದಲ್ಲಿ ಇಡಿ ಮೂಲಕ ತಿಹಾರ್ ಜೈಲಿನಲ್ಲಿ ಮುದ್ದೆ ಮುರಿದಿದ್ದ ಡಿಕೆಶಿ ಅವರನ್ನು ಸಿಡಿ ಪ್ರಕರಣದಲ್ಲೂ ತಿಹಾರ್ ಜೈಲಿಗೆ ಕಳುಹಿಸಬೇಕಿದೆ. ದ್ವೇಷ ಸಾಧಿಸಲು ರಾಜಕಾರಣದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ನಿರ್ಮಾಪಕ ಮಹಾನಾಯಕನ ಕುತಂತ್ರಕ್ಕೆ ಅಂತ್ಯ ಹಾಡಬೇಕಿದೆ. ಸಿಡಿ ಮೂವೀಸ್ ನಿರ್ದೇಶಿಸುವುದಕ್ಕಿಂತ ಚಹಾ ಅಥವಾ ಪಕೋಡಾ ಮಾರುವುದು ಉತ್ತಮ.

    ಸದನದ ಸದಸ್ಯನ ಹೆಸರು ಬಂದಿದೆ ಎಂಬ ನೆಪ ಹೇಳಿ ಸದನದಲ್ಲಿ ಕಲಾಪ ನಡೆಯಲೂ ಬಿಡದ ಕಾಂಗ್ರೆಸ್ ಸದಸ್ಯರೇ ಈಗೇನು ಹೇಳುವಿರಿ. ಮಹಾನಾಯಕನ ಹೆಸರು ಪ್ರಸ್ತಾಪವಾಗಿದೆ. ವಿಶೇಷ ಅಧಿವೇಶನ ಕರೆದು ಚರ್ಚಿಸುವಷ್ಟು ವಿಚಾರಗಳಿವೆ. ಮಹಾನಾಯಕನ ರಾಜೀನಾಮೆ ಪಡೆದು ಸದನದಲ್ಲಿ ಈ ಬಗ್ಗೆ ಎಂದು ಚರ್ಚಿಸುತ್ತೀರಿ?

    ಮಹಾನಾಯಕ ನಿಯಂತ್ರಿತ ಕಾಂಗ್ರೆಸ್ ಈಗ ಸಿಡಿ ತಯಾರಿಸುವ ಕಾರ್ಖಾನೆಯಂತಾಗಿದೆ. ಪ್ರಕರಣದ ಆರಂಭದಲ್ಲೇ ಮಹಾನಾಯಕ ಹಾಗೂ ಮಹಾನಾಯಕಿ ಇಬ್ಬರೂ ಹೆಗಲು ಮುಟ್ಟಿ ನೋಡಿಕೊಂಡಿದ್ದರು. ಮಹಾನಾಯಕನ ಆಟ ಬಯಲಾಗಿದೆ, ಮಹಾನಾಯಕಿಯ ಕುತಂತ್ರವೂ ಬಯಲಾಗಲಿ.

    ಈ ಬಗ್ಗೆ ಶಾಸಕ ರೇಣುಕಾಚಾರ್ಯ ಸಹ ಟ್ವೀಟ್ ಮಾಡಿದ್ದು, ಲೇಡಿ + ಸಿಡಿ = ಮತ್ತೊಮ್ಮೆ ಬೇಡಿ ಎಂದು ಬರೆದಿದ್ದಾರೆ. ಒಟ್ನಲ್ಲಿ ಸಿಡಿ ವಿಚಾರದ ಕುರಿತು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಕಾಲೆಳೆಯುತ್ತಿದೆ.

    ಕಾಂಗ್ರೆಸ್ ಟ್ವೀಟ್‍ನಲ್ಲಿ ಏನಿದೆ?
    ದೂರು ದಾಖಲಾಗಿದೆ, ಎಫ್‍ಐಆರ್ ಹಾಕಲಾಗಿದೆ, ಇನ್ನೂ ಏಕೆ ಅತ್ಯಾಚಾರವೆಸಗಿದ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿಲ್ಲ? ಸರ್ಕಾರಕ್ಕೆ ಭಯವೇ? ಮಾಜಿ ಸಚಿವರೆಂದ ಮಾತ್ರಕ್ಕೆ ಕಾನೂನಿಗೆ ಅತೀತರೇ? ಬೊಮ್ಮಾಯಿ ಅವರೇ ಈ ರಕ್ಷಣಾತ್ಮಕ ಆಟ ಸಾಕು, ಕೂಡಲೇ ಬಂಧಿಸಿ, ರಾಜ್ಯದ ಮಾನ ಉಳಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

    ಲಂಚ, ಮಂಚದ ಸರ್ಕಾರದಿಂದ ಈಗಾಗಲೇ ಕರ್ನಾಟಕದ ಮರ್ಯಾದೆ ದೇಶದೆದುರು ಹರಾಜಾಗಿದೆ. ದೂರು ದಾಖಲಾದರೂ, ಎಫ್‍ಐಆರ್ ಹಾಕಿದ್ದರೂ ಅತ್ಯಾಚಾರ ಮಾಡಿದ ಪ್ರಭಾವಿ ವ್ಯಕ್ತಿಯನ್ನು ರಕ್ಷಿಸಲಾಗುತ್ತಿದೆ ಎಂಬ ಕಳಂಕ ಕರ್ನಾಟಕಕ್ಕೆ ಬೇಡ, ಅದೇನಿದ್ದರೂ ಯುಪಿಯ ಯೋಗಿ ಆಡಳಿತಕ್ಕಿರಲಿ. ಸರ್ಕಾರ ಕೂಡಲೇ ಅತ್ಯಾಚಾರಿಯನ್ನು ಬಂಧಿಸಬೇಕು ಎಂದಿದೆ.