Tag: ಸಿಡಿ ಕೇಸ್

  • ಸಂತ್ರಸ್ತೆಯ ‘ದಶ’ ಪ್ರಶ್ನೆ, ಸಿಗುತ್ತಾ ಉತ್ತರ? -ಸೋಮವಾರ ಮುಖಾಮುಖಿ ಆಗ್ತಾರಾ ಜಾರಕಿಹೊಳಿ, ಸಂತ್ರಸ್ತೆ?

    ಸಂತ್ರಸ್ತೆಯ ‘ದಶ’ ಪ್ರಶ್ನೆ, ಸಿಗುತ್ತಾ ಉತ್ತರ? -ಸೋಮವಾರ ಮುಖಾಮುಖಿ ಆಗ್ತಾರಾ ಜಾರಕಿಹೊಳಿ, ಸಂತ್ರಸ್ತೆ?

    ಬೆಂಗಳೂರು: ಸಿಡಿ ಪ್ರಕರಣ ಇಂದು ಮತ್ತೊಂದು ತಿರುವು ಪಡೆದುಕೊಂಡಿದೆ. ಇಂದು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಸಂತ್ರಸ್ತೆ, ಎಸ್‍ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಸಂತ್ರಸ್ತೆ ಪ್ರಶ್ನೆಗಳನ್ನ ಕೇಳಿದ್ದಾರೆ.

    ಪ್ರಶ್ನೆ 1– ನಾನು ಸಂತ್ರಸ್ತೆಯೋ..? ಪ್ರಕರಣದ ಆರೋಪಿಯೋ..? (ತನಿಖಾ ಪ್ರಕ್ರಿಯೆ ನೋಡಿ ಸಂತ್ರಸ್ತೆಗೆ ಬಂದಿರುವ ಅನುಮಾನ)
    ಪ್ರಶ್ನೆ 2– ಇದುವರೆಗೂ ರಮೇಶ್ ಜಾರಕಿಹೊಳಿಯನ್ನು ಏಕೆ ಬಂಧಿಸಿಲ್ಲ?
    ಪ್ರಶ್ನೆ 3– ಆರೋಪಿಯನ್ನು ಹೊರಗೆ ಓಡಾಡಲು ಮುಕ್ತವಾಗಿ ಬಿಟ್ಟಿರುವುದು ಎಷ್ಟು ಸರಿ?
    ಪ್ರಶ್ನೆ 4– ಸಂತ್ರಸ್ತೆಯಾದ ನನ್ನನ್ನು ಸತತ 5 ದಿನ ವಿರಾಮ ನೀಡದೇ ವಿಚಾರಣೆ ನಡೆಸಿರುವುದು ಸರೀನಾ?
    ಪ್ರಶ್ನೆ 5– ಜಾರಕಿಹೊಳಿ ದೂರಿನಲ್ಲಿ ನನ್ನ ಹೆಸರಿಲ್ಲ.. ಆದರೂ ಪಿಜಿ ಮೇಲೆ ರೇಡ್.. ಸರೀನಾ?

    ಪ್ರಶ್ನೆ 5– ಪಿಜಿಯಲ್ಲಿನ ಸಾಕ್ಷ್ಯ ನಾಶ ಮಾಡಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಯತ್ನ, ಸರಿನಾ..?
    ಪ್ರಶ್ನೆ 6– ಜಾರಕಿಹೊಳಿ ಮತ್ತು ರಾಜ್ಯ ಸರ್ಕಾರದ ಒತ್ತಡಕ್ಕೆ ಎಸ್‍ಐಟಿ ಮಣಿದಿದೆ.. ಇದೆಷ್ಟು ಸರಿ..?
    ಪ್ರಶ್ನೆ 7- ಸಂತ್ರಸ್ತೆಯಾದ ನನ್ನ ಚಾರಿತ್ರ್ಯವಧೆಗೆ ಷಡ್ಯಂತ್ರ್ಯ, ಕಲ್ಪಿತ ಸುದ್ದಿ ಸೃಷ್ಟಿ.. ಎಷ್ಟು ಸರಿ..?
    ಪ್ರಶ್ನೆ 8– ನನ್ನ ಸಹಮತ ಇಲ್ಲದೇ ಗೃಹ ಇಲಾಖೆ ಎಸ್‍ಪಿಪಿ ನೇಮಕ ಮಾಡಿರುವುದು ಎಷ್ಟು ಸರಿ?
    ಪ್ರಶ್ನೆ 9– ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಬರುತ್ತಾರೆ ಎಂಬ ಸಿಎಂ ಮಾತು ಎಷ್ಟು ಸರಿ?
    ಪ್ರಶ್ನೆ 10– ಎಸ್‍ಐಟಿ ನ್ಯಾಯ ಸಮ್ಮತ, ನಿಸ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ.. ಏಕೆ..?

    ಸಂತ್ರಸ್ತೆಯ ಪರ ವಕೀಲ ಜಗದೀಶ್ ಸಹ ಎಸ್‍ಐಟಿ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ನೀಡಿದ ದೂರಿನಲ್ಲಿ ಸಂತ್ರಸ್ತೆಯ ಹೆಸರು ಉಲ್ಲೇಖ ಆಗಿರಲಿಲ್ಲ. ಆದರೂ ಸಂತ್ರಸ್ತೆಯಿದ್ದ ಪಿಜಿ ಮೇಲೆ ಎಸ್‍ಐಟಿ ರೇಡ್ ಮಾಡಿದ್ದೇಗೆ? ಯಾವ ಸಾಕ್ಷ್ಯದೊಂದಿಗೆ, ಯಾರ ಅನುಮತಿ ಪಡೆದು ರೇಡ್ ಮಾಡಿತು. ಪಿಜಿಯನ್ನು ಸೀಜ್ ಮಾಡಿ, ಕೋರ್ಟ್ ಸಮ್ಮತಿ ಪಡೆದು ರೇಡ್ ಏಕೆ ಮಾಡಲಿಲ್ಲ. ಪಿಜಿಯಲ್ಲಿ ಲಕ್ಷ ಲಕ್ಷ ಹಣ ಸಿಕ್ತು ಅಂತಾರೆ. ಸಂತ್ರಸ್ತೆಯನ್ನು ಪ್ರಕರಣದಲ್ಲಿ ಸಿಲುಕಿಸಲು ಇವರೇ ಏಕೆ ಆ ಹಣ ಇಟ್ಟಿರಬಾರದು ಎಂದು ಜಗದೀಶ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಎಸ್‍ಐಟಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಬಿಗ್ ಲೀಗಲ್ ಬ್ಯಾಟಲ್: ನಾಳೆಯಿಂದ ಬಿಗ್ ಲೀಗಲ್ ಬ್ಯಾಟಲ್ ನಡೆಸಲಾಗುವುದು ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ. ಸಂತ್ರಸ್ತೆಯ ಪತ್ರದ ಕುರಿತು ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಯುವತಿಗೆ ಎಸ್‍ಐಟಿಗೆ ನಂಬಿಕೆ ಇಲ್ಲ ಅಂದ್ರೇ ಬೇರೆ ತನಿಖೆ ನಡೆಸಿ. ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ ಎಂದು ನಾನು ಸದನದಲ್ಲೂ ಪ್ರಸ್ತಾಪ ಮಾಡಿದ್ದೆ. ಸಿಜೆ ತನಿಖೆಯಿಂದ ಸರ್ಕಾರಕ್ಕೆ ಏನು ಕಷ್ಟ ಎಂದು ಪ್ರಶ್ನೆ ಮಾಡಿದ್ರು. ಇದಕ್ಕೆ ಸಚಿವ ಬಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಮೇಟಿ ಕೇಸಲ್ಲಿ ಸಿದ್ದರಾಮಯ್ಯ ಹೇಗೆ ನಡೆದುಕೊಂಡಿದ್ರು ಎನ್ನುವುದು ಗೊತ್ತಿದೆ. ತನಿಖೆಯಲ್ಲಿ ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದ್ರೆ ಪೊಲೀಸ್ರು ಖಂಡಿತ ಅರೆಸ್ಟ್ ಮಾಡ್ತಾರೆ ಎಂದು ಹೇಳಿದ್ದಾರೆ.

    ಮುಖಾಮುಖಿ ಆಗ್ತಾರಾ?:
    ಮಾಜಿ ಸಚಿವ, ರೇಪ್ ಆರೋಪಿ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ. ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬನ್ನಿ ಎಂದು ರಮೇಶ್ ಜಾರಕಿಹೊಳಿಗೆ ಎಸ್‍ಐಟಿ ನಿನ್ನೆಯೇ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಸಿಡಿ ಸಂತ್ರಸ್ತೆಗೂ ಮತ್ತೆ ನೋಟಿಸ್ ಜಾರಿ ಮಾಡಿರುವ ಎಸ್‍ಐಟಿ, ಸೋಮವಾರ ಬೆಳಗ್ಗೆ 10 ಗಂಟೆಗೆ ಆಡುಗೋಡಿಯ ಟೆಕ್ನಿಕಲ್ ಸೆಲ್‍ಗೆ ಬರುವಂತೆ ಸೂಚಿಸಿದೆ. ಒಂದೇ ದಿನ ಆರೋಪಿ ಮತ್ತು ಸಂತ್ರಸ್ತೆಗೆಯನ್ನು ವಿಚಾರಣೆಗೆ ಕರೆದಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಅಸಲಿಗೆ ರಮೇಶ್ ಜಾರಕಿಹೊಳಿ ವಿಚಾರಣೆಗೆ ಬರ್ತಾರಾ? ಅಥ್ವಾ ಮತ್ತೆ ಅನಾರೋಗ್ಯದ ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಳ್ತಾರಾ. ಅಥ್ವಾ ವಿಚಾರಣೆಗೆ ಬಂದ್ರೆ ಸಂತ್ರಸ್ತೆಯ ಮುಂದೆ ಮುಖಾಮುಖಿ ಕೂರಿಸಿ ಎಸ್‍ಐಟಿ ವಿಚಾರಣೆಗೆ ಒಳಪಡಿಸುತ್ತಾ? ಅಥ್ವಾ ಪ್ರತ್ಯೇಕ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಾ? ರೇಪ್ ಆರೋಪಿ ರಮೇಶ್ ಜಾರಕಿಹೊಳಿ ಅರೆಸ್ಟ್ ಆಗ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ.

  • ಯಡಿಯೂರಪ್ಪ ಸರ್ಕಾರ ಹುಚ್ಚಾಸ್ಪತ್ರೆ, ಹುಚ್ಚರ ಸಂತೆ: ವಾಟಾಳ್ ನಾಗರಾಜ್

    ಯಡಿಯೂರಪ್ಪ ಸರ್ಕಾರ ಹುಚ್ಚಾಸ್ಪತ್ರೆ, ಹುಚ್ಚರ ಸಂತೆ: ವಾಟಾಳ್ ನಾಗರಾಜ್

    – ಡ್ರಗ್ಸ್ ಕೇಸ್‍ನಂತೆ ಸಿಡಿ ಕೇಸ್ ಸತ್ತು ಹೋಗುತ್ತೆ

    ಚಿಕ್ಕಬಳ್ಳಾಪುರ: ಕೊರೊನಾ ಜೊತೆ ರಾಜ್ಯ ಸರ್ಕಾರ ಮಕ್ಕಳ ತರ ಆಡ ಆಡುತ್ತಿದೆ. ಯಡಿಯೂರಪ್ಪನವರಿಗೆ ಯಾವ ರೀತಿ ಆಡಳಿತ ಮಾಡಬೇಕು ಎಂಬುದು ಗೊತ್ತಿಲ್ಲ. ಪರಿಣಾಮಕಾರಿ ಕ್ರಮಗಳನ್ನ ಕೈಗೊಳ್ಳಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯಡಿಯೂರಪ್ಪ ಸರ್ಕಾರ ಹುಚ್ಚಾಸ್ಪತ್ರೆ ಹುಚ್ಚರ ಸಂತೆ ಆಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಚಿಕ್ಕಬಳ್ಳಾಪುರ ರೈಲ್ವೈ ನಿಲ್ದಾಣದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಯಡಿಯೂರಪ್ಪ ಅವರಿಗೆ ಚಿಂತನೆ ಜವಾಬ್ದಾರಿ ಇಲ್ಲ. ಈ ಹಿಂದೆ ಖರೀದಿಸಿದ ಹಾಸಿಗೆ ಮಂಚ ವೆಂಟಿಲೇಟರ್ ಎಲ್ಲಿ?ಒಂದೇ ದಿನ 10,000 ಮಂಚ ರೆಡಿ ಮಾಡಿದ್ರಿ? ಅವು ಎಲ್ಲಾ ಎಲ್ಲಿ ಹೋದವು ಅಂತ ಪ್ರಶ್ನೆ ಮಾಡಿದ್ರು. ಈ ಕೊರೊನಾ ಭಯಂಕರ ಪರಿಸ್ಥಿತಿಯಲ್ಲಿ ಸರ್ಕಾರ ನಾಟಕ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ಕೂಡ ಡ್ರಗ್ಸ್ ಪ್ರಕರಣದಂತೆ ಸತ್ತು ಹೋಗುತ್ತೆ. ಒಂದೇ ಸ್ಪೀಡಲ್ಲಿ ಡ್ರಗ್ಸ್ ಪ್ರಕರಣ ನಡೆದು, ಮೂಲೆಗುಂಪು ಆಯ್ತು. ಅದೇ ರೀತಿ ಸಿಡಿ ಪ್ರಕರಣ ಸಹ ತಣ್ಣಗಾಗುತ್ತಿದೆ. ಸಿಡಿ ಮಾಡಿದ್ದು ಯಾರು? ಹೇಗೆ? ಯಾಕೆ? ಮಾಡಿದ್ರು? ಕಾರಣ ಏನು ಎಂಬುದರ ಬಗ್ಗೆ ಸಮಗ್ರವಾದ ಉನ್ನತ ಮಟ್ಟದ ತನಿಖೆ ಆಗಬೇಕು ಅಂತ ಆಗ್ರಹಿಸಿದರು.

  • ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದ್ರೆ ಖಂಡಿತ ಅರೆಸ್ಟ್ ಮಾಡ್ತಾರೆ: ಬಿ.ಸಿ.ಪಾಟೀಲ್

    ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದ್ರೆ ಖಂಡಿತ ಅರೆಸ್ಟ್ ಮಾಡ್ತಾರೆ: ಬಿ.ಸಿ.ಪಾಟೀಲ್

    ಹಾವೇರಿ: ಸಿದ್ದರಾಮಯ್ಯ ಹೇಳಿದ ತಕ್ಷಣ ವೇದಾಂತ ಏನಲ್ಲ. ಹಿಂದೆ ಮೇಟಿಯವರ ಕೇಸ್ ನಲ್ಲಿ ಮಹಿಳೆ ಬಂದು ಹೇಳಿಕೆ ಕೊಟ್ಟರೂ ಎಫ್‍ಐಆರ್ ಆಗಿರಲಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ಜಿಲ್ಲೆಯ ಹಿರೇಕೆರೂರು ಪಟ್ಟಣದ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಎಸ್‍ಐಟಿ ತನಿಖೆಗೆ ಸೂಚನೆ ಕೊಟ್ಟಿದೆ. ಸಂತ್ರಸ್ತೆ ಸಹ ಪ್ರಕರಣ ದಾಖಲಿಸಿದ್ದಾರೆ. ಅವಶ್ಯಕತೆ ಕಂಡುಬಂದರೆ, ತನಿಖೆಯಲ್ಲಿ ರಮೇಶ್ ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದರೆ ಖಂಡಿತ ಬಂಧಿಸುತ್ತಾರೆ ಎಂದರು.

    ಚಿತ್ರರಂಗಕ್ಕೆ ಕೊರೊನಾ ನಿಯಮದಲ್ಲಿ ಸಡಿಲಿಕೆ ಕೊಟ್ಟಿರುವುದನ್ನು ಸಮರ್ಥಿಸಿಕೊಂಡ ಸಚಿವರು, ಚಿತ್ರರಂಗಕ್ಕೆ ಸಡಿಲಿಕೆ ಅವಶ್ಯ ಇದೆ. ಎಲ್ಲರೂ ಮಾಸ್ಕ್ ಧರಿಸಬೇಕೆಂದು ಸೂಚನೆ ಕೊಟ್ಟಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಜನ ಕೊರೊನಾ ನಿಯಮಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಜನರ ಜವಾಬ್ದಾರಿ ಬಹಳಷ್ಟಿದೆ. ಈಗ ಒಂದು ವಾರದ ಮಟ್ಟಿಗೆ ಸಿನಿಮಾ ಮಂದಿರಗಳಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಆದರೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಜನರೂ ಈ ಬಗ್ಗೆ ಜಾಗೃತರಾಗಿರಬೇಕು ಎಂದರು.

    ಉಪಚುನಾವಣೆ ವೇಳೆ ಬಿಜೆಪಿ ನಾಯಕರ ಮನಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮನೆಯೊಳಗೆ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ವರಿಷ್ಠರು ಇದನ್ನು ಸರಿಪಡಿಸುವ ಕೆಲಸ ಮಾಡುತ್ತಾರೆ. ಎಲ್ಲ ಪಕ್ಷದಲ್ಲೂ ಸಣ್ಣ, ಪುಟ್ಟ ಭಿನ್ನಾಭಿಪ್ರಾಯ ಇರುತ್ತವೆ ಎಂದರು.

    ವಿಜಯೇಂದ್ರ ದೇವ ಲೋಕದಿಂದ ಬಂದಿದ್ದಾರಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕುರಿತು ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರು. ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲ ಹಳದಿ ಕಾಣುತ್ತದೆ. ಹಾಗೇ ಕಾಂಗ್ರೆಸ್ ನವರಿಗೆ ವಿಜಯೇಂದ್ರ ನೋಡಿದಾಕ್ಷಣ ಬೇರೆ ರೀತಿ ಕಾಣುತ್ತಿದೆ. ವಿಜಯೇಂದ್ರ ಯುವನಾಯಕರು, ಚಾಣಾಕ್ಷರಿದ್ದಾರೆ. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಚುನಾವಣೆಯಲ್ಲೂ ಅವರು ಪ್ರಭಾವವನ್ನು ತೋರಿಸುತ್ತಾರೆ. ಕ್ಷುಲ್ಲಕ ವಿಚಾರಗಳಿಗೆ ವಿಜಯೇಂದ್ರರನ್ನು ಟೀಕೆ ಮಾಡುವುದು ಸರಿಯಲ್ಲ ಎಂದರು.

  • ಮತ್ತೊಮ್ಮೆ ಸಂತ್ರಸ್ತೆಯ CrPC 164 ಹೇಳಿಕೆ ದಾಖಲಾಗುತ್ತಾ?

    ಮತ್ತೊಮ್ಮೆ ಸಂತ್ರಸ್ತೆಯ CrPC 164 ಹೇಳಿಕೆ ದಾಖಲಾಗುತ್ತಾ?

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಮತ್ತೊಮ್ಮೆ ಸಿಆರ್ ಪಿಸಿ 164 ಹೇಳಿಕೆ ದಾಖಲಿಸುತ್ತಾರಾ ಅನ್ನೋ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಇತ್ತ ಯುವತಿಯ ಪೋಷಕರು ಮತ್ತೊಮ್ಮೆ ಮಗಳ ಹೇಳಿಕೆಯನ್ನ ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಯುವತಿ ಹೇಳಿಕೆ ದಾಖಲಿಸುವಾಗ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಜೊತೆಯಲ್ಲಿದ್ರು ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದ್ದಾರೆ. ಆರೋಪದ ಬೆನ್ನಲ್ಲೇ 164 ಸ್ಟೇಟ್ ಮೆಂಟ್ ಮಾಡುವಾಗ ನ್ಯಾಯಾಧೀಶರು, ಸಂತ್ರಸ್ತೆ ಮತ್ತು ತನಿಖಾಧಿಕಾರಿ ಮಾತ್ರ ಇರ್ತಾರೆ. ನ್ಯಾಯಾಧೀಶರು 164 ಅಡಿ ಹೇಳಿಕೆ ದಾಖಲಿಸುವಾಗ ಯಾರೂ ಒಳಗೆ ಹೋಗಲು ಸಾಧ್ಯವಿಲ್ಲ. ಪೋಷಕರು ಏನೇ ಆರೋಪ ಮಾಡಿದ್ರು, ನ್ಯಾಯಾಲಯವೇ ಅಂತಿಮ ಎಂದು ಸ್ಪಷ್ಟನೆ ನೀಡಿದ್ದರು.

    ಈ ಹಿನ್ನೆಲೆ ಪೋಷಕರು ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಬೇಕೆಂದು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಗಳಿವೆ. ಇತ್ತ ಕೌನ್ಸಲಿಂಗ್ ನಲ್ಲಿ ಯುವತಿ ಸೂಕ್ತ ಉತ್ತರ ನೀಡಿಲ್ಲ ಎಂದು ಹೇಳಲಾಗುತ್ತಿದ್ದು, ಇಂದು ಬೌರಿಂಗ್ ಆಸ್ಪತ್ರೆಗೆ ಕರೆ ತರುವ ಸಾಧ್ಯತೆಗಳಿವೆ. ಕೌನ್ಸಲಿಂಗ್ ಬಳಿಕವೇ ಎಸ್‍ಐಟಿ ತಂಡ ಯುವತಿಯಿಂದ ಸಿಆರ್ ಪಿಸಿ 161 ಹೇಳಿಕೆ ಪಡೆದುಕೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಕಿಡ್ನಾಪ್, ಬ್ಲಾಕ್‍ಮೇಲ್ ಕೇಸ್ ಸಂಬಂಧ ಇಂದೂ ನಡೀತು ಸಿಡಿ ಯುವತಿಯ ವಿಚಾರಣೆ

    ಕಿಡ್ನಾಪ್, ಬ್ಲಾಕ್‍ಮೇಲ್ ಕೇಸ್ ಸಂಬಂಧ ಇಂದೂ ನಡೀತು ಸಿಡಿ ಯುವತಿಯ ವಿಚಾರಣೆ

    – ಯುವತಿ ಪರ ವಕೀಲ ಹೇಳಿದ್ದೇನು..?

    ಬೆಂಗಳೂರು: ಸಿಡಿ ಸಂತ್ರಸ್ತೆಯನ್ನು ಇಂದು ಕೂಡ ಎಸ್‍ಐಟಿ ವಿಚಾರಣೆಗೆ ಒಳಪಡಿಸಿದೆ.

    ನಿನ್ನೆಯೇ ಎಲ್ಲಾ ವಿಚಾರಣೆ ಮುಗಿದಿದೆ ಅಂದ್ಕೊಂಡಿದ್ರು. ಆದರೆ ಪೋಷಕರು ನೀಡಿದ ಕಿಡ್ನಾಪ್ ಕೇಸ್ ಮತ್ತು ಬ್ಲಾಕ್‍ಮೇಲ್ ಕೇಸ್ ಸಂಬಂಧ ಆಡುಗೋಡಿಯ ಟೆಕ್ನಿಕಲ್ ಸೆಲ್‍ನಲ್ಲಿ ಸಂತ್ರಸ್ತೆಯನ್ನು ಎಸ್‍ಐಟಿ ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆ 6ರವರೆಗೆ ವಿಚಾರಣೆಗೆ ಒಳಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ವಕೀಲ ಜಗದೀಶ್, ಮುಂದುವರಿದ ತನಿಖೆಯ ಭಾಗವಾಗಿ ಯುವತಿ ವಿಚಾರಣೆಗೆ ಬಂದಿದ್ದಾರೆ. ಆದರೆ ಆರೋಪಿ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಟೀಕೆ, ಆತಂಕಗಳಿಗೆ ಪೊಲೀಸ್ ಇಲಾಖೆ ತಲೆ ಕೆಡಿಸಿಕೊಂಡಂತೆ ಇಲ್ಲ. ಮುಂದೇನು ಮಾಡಬೇಕೆಂಬ ಬಗ್ಗೆ ಎಸ್‍ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ತನಿಖಾ ತಂಡ ಸಭೆ ನಡೆಸಿತು.

    ಎಸ್‍ಐಟಿ ಕಾನೂನು ಪ್ರಕಾರವೇ ಕೆಲಸ ಮಾಡ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಮರ್ಥನೆ ಮಾಡಿಕೊಂಡರು.

  • ಜಾರಕಿಹೊಳಿಗೆ ಅನಾರೋಗ್ಯ- ಎಸ್‍ಐಟಿ ವಿಚಾರಣೆಗೆ ಗೈರು

    ಜಾರಕಿಹೊಳಿಗೆ ಅನಾರೋಗ್ಯ- ಎಸ್‍ಐಟಿ ವಿಚಾರಣೆಗೆ ಗೈರು

    ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿ ಅನಾರೋಗ್ಯಕ್ಕೆ ತುತ್ತಾದ ಕಾರಣ ಇಂದಿನ ಎಸ್‍ಐಟಿ ವಿಚಾರಣೆಗೆ ಗೈರಾಗಿದ್ದಾರೆ.

    ಸಿಡಿ ಪ್ರಕರಣದ ಸಂಬಂಧ ಇಂದು ಜಾರಕಿಹೊಳಿ ಎಸ್‍ಐಟಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಎಲ್ಲಿ ಹೋಗಿದ್ದಾರೆ ಎಂಬ ಪ್ರಶ್ನೆ ಎದ್ದಿತ್ತು.

    ಈ ಪ್ರಶ್ನೆಗೆ ಉತ್ತರ ನೀಡಿದ ಜಾರಕಿಹೊಳಿ ಪರ ವಕೀಲ ಶ್ಯಾಮಸುಂದರ್, ಇಂದು ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅನಾರೋಗ್ಯ ಹಿನ್ನಲೆಯಲ್ಲಿ ಬರಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಾವು ಬಂದು ಎರಡು ದಿನಗಳ ಕಾಲಾವಕಾಶ ಕೇಳಿದ್ದೇವೆ. ಸೋಮವಾರ ವಿಚಾರಣೆಗೆ ಹಾಜರಾಗುತ್ತಾರೆ. ಅವರು ಈಗಾಗಲೇ ವಿಚಾರಣೆಗೆ ಹಾಜರಾಗಿದ್ದಾರೆ ಮತ್ತು ತನಿಖೆಗೆ ಸಹಕಾರ ನೀಡುತ್ತಾರೆ ಎಂದು ತಿಳಿಸಿದರು.

  • ನಾಳೆ ವಿಚಾರಣೆಗೆ ಹಾಜರಾಗ್ತಾರಾ ರಮೇಶ್ ಜಾರಕಿಹೊಳಿ..?

    ನಾಳೆ ವಿಚಾರಣೆಗೆ ಹಾಜರಾಗ್ತಾರಾ ರಮೇಶ್ ಜಾರಕಿಹೊಳಿ..?

    – ಬೆಂಗಳೂರಿನಲ್ಲೇ ಇದ್ದಾರೆ ಅಂತ ಸಹೋದರ ಸ್ಪಷ್ಟನೆ

    ಬೆಂಗಳೂರು: ಸಿಡಿ ಸಂತ್ರಸ್ತೆಗೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಪ್ರಾಥಮಿಕ ತನಿಖೆ ಮುಗಿಸಿದ್ದಾರೆ. ಸ್ಥಳ ಪಂಚನಾಮೆಯನ್ನು ಮಾಡಿದ್ದಾರೆ. ಕೆಲವೊಂದಿಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

    ಇತ್ತ ರೇಪ್ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಬೇಕಿದೆ. ಯುವತಿ ಕೊಟ್ಟ ಹೇಳಿಕೆ ಆಧರಿಸಿ ಎಸ್‍ಐಟಿ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಲಿದೆ. ನಾಳೆಯೇ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ.

    ಮೊನ್ನೆ ಸಂಜೆ ಕೊಲ್ಲಾಪುರದ ಮಹಾಲಕ್ಷ್ಮಿ ಸನ್ನಿಧಾನಕ್ಕೆ ಹೋಗಿದ್ದ ರಮೇಶ್ ಜಾರಕಿಹೊಳಿ ನಂತ್ರ ಎಲ್ಲಿ ಹೋದ್ರು ಎಂಬುದು ಗೊತ್ತಾಗಿಲ್ಲ. ಆದರೆ ರಮೇಶ್ ಜಾರಕಿಹೊಳಿ ಎಲ್ಲಿಯೂ ಹೋಗಿಲ್ಲ. ಬೆಂಗಳೂರಿನಲ್ಲೇ ಇದ್ದಾರೆ. ನಿನ್ನೆಯಷ್ಟೇ ನಾನು ಭೇಟಿ ಆಗಿದ್ದೇ ಅಂತ ಸಹೋದರ ಲಖನ್ ಜಾರಕಿಹೊಳಿ ಸ್ಪಷ್ಪಪಡಿಸಿದ್ದಾರೆ.

    ರಮೇಶ್ ಜಾರಕಿಹೊಳಿಗೆ ಜಾಮೀನು ಕೋರಿ ಕೋರ್ಟ್‍ಗೆ ಹೋಗಬೇಕೋ ಬೇಡವೋ ಎನ್ನುವ ಬಗ್ಗೆ ಬಾಲಚಂದ್ರ ಜಾರಕಿಹೊಳಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ. ರೇಪ್ ಆರೋಪಿ ಜಾರಕಿಹೊಳಿಯನ್ನು ಇದುವರೆಗೂ ಬಂಧಿಸದೇ ಇರುವ ಬಗ್ಗೆ ಸಂತ್ರಸ್ತೆ ಪರ ವಕೀಲ ಜಗದೀಶ್ ಆಕ್ರೋಶ ಹೊರಹಾಕಿದ್ದಾರೆ.

    ಇತ್ತ ಮಾಜಿ ಸಂಸದ ಶಿವರಾಮೇಗೌಡ ಪ್ರತಿಕ್ರಿಯಿಸಿ, ಡ್ರಗ್ ಕೇಸ್ ಯಾವ ರೀತಿ ಹಳ್ಳ ಹಿಡಿಯಿತೋ ಅದೇ ರೀತಿ ಇದು ಕೂಡ ಹಳ್ಳ ಹಿಡಿಯುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.

  • ಸದ್ಯಕ್ಕೆ ಯಾರನ್ನೂ ಭೇಟಿಯಾಗಲ್ಲ- ವಕೀಲರ ಮೂಲಕ ಪೋಷಕರಿಗೆ ಯುವತಿ ಮಾಹಿತಿ

    ಸದ್ಯಕ್ಕೆ ಯಾರನ್ನೂ ಭೇಟಿಯಾಗಲ್ಲ- ವಕೀಲರ ಮೂಲಕ ಪೋಷಕರಿಗೆ ಯುವತಿ ಮಾಹಿತಿ

    – ಪೋಷಕರಿಗೆ ಫೋನ್ ಮಾಡುವಂತೆ ಯುವತಿಗೆ ಪೊಲೀಸರಿಂದ ಒತ್ತಡ

    ಬೆಂಗಳೂರು: ಸಿಡಿ ಪ್ರಕರಣ ಒಂದು ಹಂತಕ್ಕೆ ಬಂದ ನಂತರವೇ ಯುವತಿ ಪೋಷಕರ ಬಳಿ ಹೋಗುವದಾಗಿ ಹೇಳಿದ್ದಾರೆ. ಸಂತ್ರಸ್ತೆ ಪೋಷಕರು ಆರೋಪಿಗಳ ಪರ ಇರೋದರಿಂದ ಯುವತಿ ಹೋಗುತ್ತಿಲ್ಲ ಎಂದು ವಕೀಲ ಜಗದೀಶ್ ಹೇಳಿದ್ದಾರೆ.

    ಸಂತ್ರಸ್ತೆ ಪೋಷಕರ ಬಳಿ ಹೋಗಲು ಒಪ್ಪುತ್ತಿಲ್ಲ. ಅಲ್ಲಿಗೆ ಹೋದ್ರೆ ನಾನು ಎಮೋಷನಲ್ ಆಗುತ್ತೆ ಅಂತ ಹೇಳುತ್ತಿದ್ದಾರೆ. ಅದು ಅವರ ಕೂಸು. ನಮ್ಮ ಆಶ್ರಯ ಕೇಳಿದಷ್ಟು ದಿನ ನಾವು ನೀಡುತ್ತೇವೆ. ಯಾಕೆ ಸ್ವಾವಲಂಬಿಯಾಗಿದ್ದು, ತನ್ನ ನಿರ್ಧಾರ ತೆಗೆದುಕೊಳ್ಳಲು ಶಕ್ತಳಿದ್ದಾಳೆ. ಪೋಷಕರು ಬಳಿ ಹೋಗುವುದು ಸಂತ್ರಸ್ತೆಯ ಇಚ್ಛೆ. ಆ ವಿಷಯದಲ್ಲಿ ನಾವು ತಲೆ ಹಾಕಲ್ಲ ಎಂದು ತಿಳಿಸಿದರು.

    ಸದ್ಯ ಯುವತಿ ಎಸ್‍ಐಟಿ ತನಿಖೆ ಎದುರಿಸುತ್ತಿದ್ದಾರೆ. ವಿಚಾರಣೆ ವೇಳೆ ಅಲ್ಲಿಯ ಕೆಲ ಪೊಲೀಸರು ಪೋಷಕರಿಗೆ ಫೋನ್ ಮಾಡುವಂತೆ ಒತ್ತಡ ಹಾಕುತ್ತಿರುವ ವಿಷಯವನ್ನ ಸಂತ್ರಸ್ತೆ ನಮ್ಮ ಬಳಿ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪೋಷಕರ ಜೊತೆ ಮಾತನಾಡಲು ಮತ್ತು ಭೇಟಿಯಾಗಲು ಇಷ್ಟವಿಲ್ಲ ಎಂದು ಯುವತಿ ನಮ್ಮ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ನೀಡಿದರು.

  • ಡ್ರಗ್ ಕೇಸ್ ರೀತಿ ಸಿಡಿ ಕೇಸ್ ಹಳ್ಳ ಹಿಡಿಯುತ್ತದೆ – ಶಿವರಾಮೇಗೌಡ

    ಡ್ರಗ್ ಕೇಸ್ ರೀತಿ ಸಿಡಿ ಕೇಸ್ ಹಳ್ಳ ಹಿಡಿಯುತ್ತದೆ – ಶಿವರಾಮೇಗೌಡ

    – ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಮೇಲೆ ಸಿಬಿಐಗೆ ನೀಡುತ್ತೇವೆ

    ಮಂಡ್ಯ: ರಾಜ್ಯದಲ್ಲಿ ಡ್ರಗ್ ಕೇಸ್ ಯಾವ ರೀತಿ ಹಳ್ಳ ಹಿಡಿದಿದೆ ಎಂದು ನಾವೆಲ್ಲ ನೋಡಿದ್ದೇವೆ. ಅದೇ ರೀತಿ ಸಿಡಿ ಕೇಸ್ ಸಹ ಹಳ್ಳ ಹಿಡಿಯುತ್ತದೆ ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಗುಡುಗಿದ್ದಾರೆ.

    ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಮೇಗೌಡ, ಡ್ರಗ್ ಕೇಸ್‍ನಲ್ಲಿ ಬಿಲ ಅಗೆದು ಹಿಡಿಯುವ ಹಾಗೆ ಬೇಕಾದವರನ್ನು ಬಿಟ್ಟು ಬೇಡವಾದವರನ್ನು ಹಿಡಿದರು. ಅದೇ ರೀತಿಯಲ್ಲಿ ಈ ಸಿಡಿ ಕೇಸ್ ಕೂಡ ಹಳ್ಳ ಹಿಡಿಯುತ್ತದೆ. ಪೊಲೀಸರು ಸರ್ಕಾರದ ಅನ್ನ ತಿನ್ನುತ್ತಿದ್ದೇವೆ ಎಂದು ಅಂದುಕೊಂಡಿದ್ದರೆ ಇಷ್ಟೊತ್ತಿಗೆ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕಿತ್ತು. ಆದರೆ ಇಲ್ಲಿಯವರಗೆ ಬಂಧಿಸುವ ಕೆಲಸ ಮಾತ್ರ ಆಗಿಲ್ಲ. ಮುಖ್ಯಮಂತ್ರಿಗಳು ಅತ್ಯಾಚಾರ ಆರೋಪಿಯನ್ನು ಉಪಚುನಾವಣೆಯ ಪ್ರಚಾರಕ್ಕೆ ಆಹ್ವಾನ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಈ ಕೇಸ್‍ಗೆ ನ್ಯಾಯವಾದರೂ ಹೇಗೆ ಸಿಗುತ್ತದೆ ಎಂದು ಸಿಎಂ ವಿರುದ್ಧ ಕಿಡಿಕಾರಿದರು.

    ಒಂದು ವೇಳೆ ಎಸ್‍ಐಟಿ ಅಧಿಕಾರಿಗಳು ಈ ಕೇಸ್‍ನ್ನು ಹಳ್ಳ ಹಿಡಿಸಿದರೆ, ನಾವು ಕೋರ್ಟ್‍ನಲ್ಲಿ ಈ ಬಗ್ಗೆ ದೂರು ದಾಖಲು ಮಾಡಿ ಸಿಬಿಐ ತನಿಖೆ ಆಗುವಂತೆ ಹೋರಾಟ ಮಾಡುತ್ತೇವೆ. ಮುಂದೆ ಕುಮಾರಸ್ವಾಮಿ ಅವರ ಸರ್ಕಾರ ಬಂದಾಗ ಈ ಕೇಸ್‍ನ್ನು ಸಿಬಿಐನಿಂದ ತನಿಖೆ ಮಾಡಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಅತ್ಯಾಚಾರಿ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ತಲೆ ತಗ್ಗಿಸಿ ಇರಬೇಕಾಗಿತ್ತು. ಆದರೆ ಅವರು ಸರ್ಕಾರವನ್ನು ಬೀಳಿಸುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಹೀಗೆ ಇರುವಾಗ ಈ ಕೇಸ್‍ನಲ್ಲಿ ಜಾರಕಿಹೊಳಿಗೆ ಕ್ಲೀನ್ ಚೀಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಯಾಪಟ್ಟರು.

  • ಸಿಡಿ ಕೇಸ್ ಸ್ಥಳ ಮಹಜರು ಆರಂಭ – ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ?

    ಸಿಡಿ ಕೇಸ್ ಸ್ಥಳ ಮಹಜರು ಆರಂಭ – ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ?

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸ್ಥಳ ಮಹಜರು ಆರಂಭಗೊಂಡಿದೆ.

    ಆರಂಭದಲ್ಲಿ ಯುವತಿ ತಂಗಿದ್ದ ಆರ್‌ಟಿ ನಗರ ಪಿಜಿಯಲ್ಲಿ ಸ್ಥಳ ಮಹಜರು ನಡೆಯುತ್ತಿದ್ದು, ಬಳಿಕ ಮಲ್ಲೇಶ್ವರ ಬಳಿ ಇರುವ ಮಂತ್ರಿ ಅಪಾರ್ಟ್‍ಮೆಂಟ್‍ನಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದೆ.

    ವಿಚಾರಣೆ ಸಂದರ್ಭದಲ್ಲಿ ಯಾವುದೇ ಪ್ರಕರಣದಲ್ಲಿ ಸಂತ್ರಸ್ತರ ಬಳಿ ಕೃತ್ಯ ನಡೆದ ಸ್ಥಳ, ಭೇಟಿ ನೀಡಿದ್ದು ಯಾವಾಗ? ಆ ಸ್ಥಳ ಹೇಗಿತ್ತು.. ಇತ್ಯಾದಿ ಪ್ರಶ್ನೆಗಳನ್ನು ಪೊಲೀಸರು ಕೇಳುತ್ತಾರೆ. ಸಂತ್ರಸ್ತರು ಈ ಬಗ್ಗೆ ಪರಿಪೂರ್ಣವಾದ ವಿವರಗಳನ್ನು ನೀಡಬೇಕಾಗುತ್ತದೆ. ನೀಡಿದ ವಿವರಗಳು ಸರಿ ಇದ್ಯಾ? ದಿನಾಂಕ ಸರಿ ಇದ್ಯಾ? ಎಲ್ಲ ವಿವರಗಳು ತಾಳೆ ಆಗುತ್ತಾ ಎಂಬುದನ್ನು ಪರಿಶೀಲಿಸಲು ಸ್ಥಳ ಮಹಜರು ನಡೆಸುತ್ತಾರೆ.

    ಯುವತಿ ಸೂಚಿಸುವ ಸ್ಥಳ, ಮಾಹಿತಿ ಮೇರೆಗೆ ಮಹಜರು ನಡೆಯಲಿದೆ. ಮೆಟಿರಿಯಲ್ ಸಾಕ್ಷ್ಯ, ಡಿಜಿಟಲ್ ಸಾಕ್ಷ್ಯ, ಲೈವ್ ಎವಿಡೆನ್ಸ್ ಹೀಗೆ ಒಟ್ಟು ಮೂರು ವಿಭಾಗಗಳಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆಯುತ್ತದೆ.

    ಮೆಟರಿಯಲ್ ಸಾಕ್ಷ್ಯ:
    ಕೃತ್ಯ ನಡೆದ ಸ್ಥಳದಲ್ಲಿನ ಸಾಕ್ಷಗಳನ್ನು ಸಂಗ್ರಹಿಸಲಾಗುತ್ತದೆ. ಘಟನೆ ನಡೆದ ಜಾಗದಲ್ಲಿ ದೈಹಿಕ ಸಂಪರ್ಕ ದ ವೇಳೆ ಬಳಸಿದ ಡಿಎನ್‍ಎ ಸ್ಯಾಂಪಲ್ ಪತ್ತೆ ಮಾಡಲಾಗುತ್ತದೆ. ಅದರಲ್ಲಿ ಕೂದಲು, ದೈಹಿಕ ಸಂಪರ್ಕದ ವೇಳೆ ಬಳಕೆಯಾದ ವಸ್ತುಗಳ ಮೂಲಕ ಸ್ಯಾಂಪಲ್ ಸಂಗ್ರಹಿಸಲಾಗುತ್ತದೆ.

    ಲೈವ್ ಸಾಕ್ಷ್ಯ:
    ಕೃತ್ಯ ನಡೆದಿರುವ ಆ ಜಾಗದಲ್ಲಿ ಪ್ರತ್ಯಕ್ಷ ಸಾಕ್ಷಿಗಳಿದ್ದರೆ ಸಿಬ್ಬಂದಿ ಅಥವಾ ಸೆಕ್ಯೂರಿಟಿ ಅಥವಾ ಯಾವುದೇ ವ್ಯಕ್ತಿಗಳಿದ್ದರೆ ಅವರ ಹೇಳಿಕೆಯನ್ನು ದಾಖಲಿಸಲಾಗುತ್ತದೆ.

    ಡಿಜಿಟಲ್ ಸಾಕ್ಷ್ಯ:
    ಡಿಜಿಟಲ್ ಸಾಕ್ಷ್ಯವಾಗಿ ಆಗಮನ, ನಿರ್ಗಮನದ ಸಿಸಿಟಿವಿ ಫುಟೇಜ್ ಸಂಗ್ರಹಿಸಲಾಗುತ್ತದೆ. ಇಬ್ಬರು ಇಬ್ಬರ ಮೊಬೈಲ್ ಒಂದೇ ಟವರ್ ಲೊಕೇಷನ್‍ನಲ್ಲಿತ್ತಾ  ಎಂಬದನ್ನು ಕಲೆ ಹಾಕಲಾಗುತ್ತದೆ.