Tag: ಸಿಡಿ ಕೇಸ್

  • ಸಿಡಿ ಕೇಸ್ – ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ ಯುವತಿ

    ಸಿಡಿ ಕೇಸ್ – ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ ಯುವತಿ

    ಬೆಂಗಳೂರು: ಇನ್ನೇನೂ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ಸಿಗಲಿದೆ. ಎಸ್‍ಐಟಿ ಅತ್ಯಾಚಾರ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಗೆ ಮುಂದಾಗಿದೆ ಎಂಬ ಸುದ್ದಿ ಬರುತ್ತಿದ್ದಂತೆ ಅತ್ಯಾಚಾರ ಪ್ರಕರಣದ ಸಂತ್ರಸ್ತ ಯುವತಿ ಮತ್ತೆ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

    ಎಸ್‍ಐಟಿ ಈಗ ನಡೆಸುತ್ತಿರುವ ತನಿಖೆಯ ಮೇಲೆ ನಂಬಿಕೆ ಇಲ್ಲ. ಈಗ ಇರುವ ಅಧಿಕಾರಿಗಳು ಪೂರ್ವಾಗ್ರಹ ಪೀಡಿತರಾಗಿ ತನಿಖೆ ನಡೆಸುತ್ತಿದ್ದಾರೆ ಎಂಬ ಅನುಮಾನ ಇದೆ. ಅಲ್ಲದೇ ಆರೋಪಿ ಪ್ರಭಾವಿ ಆಗಿರೋದರಿಂದ ಸರಿಯಾಗಿ ವಿಚಾರಣೆಯೂ ನಡೆಯುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ ಮತ್ತು ಎಸ್‍ಐಟಿ ಮುಖ್ಯಸ್ಥರಿಗೆ ಉತ್ತರಿಸಲು ನೋಟಿಸ್ ನೀಡಿದೆ.

    ಪೋಷಕರ ಭೇಟಿಗೆ ಒಪ್ಪದ ಯುವತಿ:
    ಮೇ 27 ರಂದು ಸಿಡಿಯಲ್ಲಿದ್ದ ಯುವತಿ ತಂದೆ ಧಾರವಾಡ ಹೈಕೋರ್ಟ್ ನಲ್ಲಿ ನನ್ನ ಮಗಳನ್ನ ಹುಡುಕಿಕೊಡಿ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯನ್ನ ಸಲ್ಲಿಸಿದ್ದರು. ವೀಡಿಯೋ ವಿಚಾರಣೆ ವೇಳೆ, ನಾನು ಸುರಕ್ಷಿತವಾಗಿದ್ದೇನೆಂದು ಯುವತಿ ಹೇಳಿಕೆ ನೀಡಿದ್ದಾಳೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಬೆಂಗಳೂರು ವಿಳಾಸದಲ್ಲಿ ಪ್ರಸ್ತುತ ವಾಸವಾಗಿರುತ್ತೇನೆ. ನಾನು ಸ್ವಂತ ಇಚ್ಛೆ ಇಂದ ವಾಸವಾಗಿದ್ದು, ನನಗೆ ಇಲ್ಲಿ ಇರುವುದಕ್ಕೆ ಯಾರದೇ ಒತ್ತಡ ಇರುವುದಿಲ್ಲ ಮತ್ತು ನನ್ನ ರಕ್ಷಣೆಗಾಗಿ ಬೆಂಗಳೂರು ನಗರದ ಪೋಲೀಸರು ಭದ್ರತೆಯನ್ನು ಒದಗಿಸುತ್ತಾರೆ ಹಾಗೂ ನಾನು ಸುರಕ್ಷಿತವಾಗಿ ಇರುತ್ತೇನೆ. ನಾನು ಪ್ರಾಪ್ತ ವಯಸ್ಕಳಿದ್ದು ನಾನು ಸದ್ಯ ನಮ್ಮ ತಂದೆ ತಾಯಿ ಬಳಿ ಹೋಗಲು ಇಚ್ಛಿಸುವುದಿಲ್ಲ. ಈ ಪ್ರಕರಣಗಳು ಮುಗಿದ ನಂತರ ನಾನು ಅವರನ್ನು ಭೇಟಿ ಆಗುತ್ತೇನೆ ಎಂದು ಹೇಳಿದ್ದರು.

    ಒಪ್ಪಿತ ಲೈಂಗಿಕ ಕ್ರಿಯೆನಾ?: ಪ್ರಕರಣದ ಆರಂಭದಲ್ಲಿ ಯುವತಿ ನನಗೆ ಗೊತ್ತೆ ಇಲ್ಲ ಎಂದು ಹೇಳುತ್ತಿದ್ದ ರಮೇಶ್ ಜಾರಕಿಹೊಳಿ ಆ ಯುವತಿ ನನಗೆ ಗೊತ್ತು ಅಂತ ಹೇಳಿದ್ದಾರೆ ಎನ್ನಲಾಗುತ್ತಿದೆ. ಆ ಯುವತಿ ಪ್ರಾಜೆಕ್ಟ್ ವಿಚಾರದಲ್ಲಿ ನನಗೆ ಪರಿಚಯ ಆಗಿದ್ದು ನಿಜ. ಅವಾಗಾವಾಗ ನಾನು ವಾಸವಾಗಿದ್ದ ಅಪಾರ್ಟ್ ಮೆಂಟ್ ಗೆ ಬರುತ್ತಿದ್ದಳು. ಅವಾಗ ಇಬ್ಬರು ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದೀವಿ. ಅದು ಕೂಡ ಆಕೆಯ ಸಮ್ಮತಿಯ ಮೇರೆಗೆ ಎಂದು ಎಸ್‍ಐಟಿ ಮುಂದೆ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಹಾನ್‌ ನಾಯಕ ಸೇರಿದಂತೆ 9 ಮಂದಿ ವಿರುದ್ಧ ಶೀಘ್ರವೇ ಕೇಸ್‌ – ಬಾಲಚಂದ್ರ ಜಾರಕಿಹೊಳಿ

    ನರೇಶ್ ಗೌಡ, ಶ್ರವಣ್‍ಗೆ ಜಾಮೀನು: ರಮೇಶ್ ಜಾರಕಿಹೊಳಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುವ ಮುನ್ನ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್‍ಮೇಲ್ ಕೇಸ್ ದಾಖಲು ಮಾಡಿದ್ರು. ಈ ಪ್ರಕರಣದ ಇಬ್ಬರು ಆರೋಪಿಗಳಾದ ನರೇಶ್ ಗೌಡ ಮತ್ತು ಶ್ರವಣ್ ಗೆ ಸಿಟಿ ಸಿವಿಲ್ ಕೋರ್ಟ್ ಇಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ವೀಡಿಯೋಗಾಗಿ 15 ಕೋಟಿ ವೆಚ್ಚ, ಇದು ಹನಿಟ್ರ್ಯಾಪ್: ಬಾಲಚಂದ್ರ ಜಾರಕಿಹೊಳಿ

    ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‍ಐಟಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡದಂತೆ ಆಕ್ಷೇಪಣೆ ಸಲ್ಲಿಸಿತ್ತು. ಆರೋಪಿಗಳು ಇದುವರೆಗೂ ವಿಚಾರಣೆಗೆ ಹಾಜರಾಗಿಲ್ಲ ಎಂದು ವಾದ ಮಾಡಿದ್ದ ಎಸ್‍ಐಟಿಗೆ ಈ ಆದೇಶದಿಂದ ಹಿನ್ನಡೆಯಾಗಿದೆ. ಅಲ್ಲದೇ ಆದೇಶ ನೀಡಿದ ನ್ಯಾಯಾಲಯ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ. ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

    ಏನಿದು ಪ್ರಕರಣ?
    ಮಾರ್ಚ್ 2ರಂದು ರಮೇಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಬಳಿಕ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು.  ಇದನ್ನೂ ಓದಿ: ಮಹಾನಾಯಕ ಗಾಂ…ನಾನು ಗಂಡಸು, ಡಿಕೆಶಿ ವಿರುದ್ಧ ದೂರು ಕೊಡ್ತೇನೆ- ರಮೇಶ್ ಜಾರಕಿಹೊಳಿ ಆಕ್ರೋಶ

    ಇತ್ತ ವೀಡಿಯೋ ಸಂಚಲನ ಸೃಷ್ಟಿಸಿ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದರು. ಆ ಬಳಿಕದಿಂದ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಸ್ವತಃ ಸುದ್ದಿಗೋಷ್ಠಿ ಕರೆದು ಮಾಧ್ಯಮಗಳ ಮುಂದೆ ಭಾವುಕರಾಗಿದ್ದರು. ಇಷ್ಟೆಲ್ಲಾ ಆದ ನಂತರ ಮಾಜಿ ಸಚಿವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು ಗೋಕಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಪಿಪಿಇ ಕಿಟ್ ಧರಿಸಿ ಉಪಚುನಾವಣೆಗೆ ಮತದಾನ ಮಾಡಿದ್ದರು. ಇದನ್ನೂ ಓದಿ:  ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

  • ರಮೇಶ್ ಜಾರಕಿಹೊಳಿ ಕೇಸಲ್ಲಿ ಕೋರ್ಟಿಗೆ 3 ಪ್ರತ್ಯೇಕ ವರದಿ – ಜೂ.18ಕ್ಕೆ ಸಿಬಿಐ ವಿಚಾರಣೆ ಬಗ್ಗೆ ನಿರ್ಧಾರ

    ರಮೇಶ್ ಜಾರಕಿಹೊಳಿ ಕೇಸಲ್ಲಿ ಕೋರ್ಟಿಗೆ 3 ಪ್ರತ್ಯೇಕ ವರದಿ – ಜೂ.18ಕ್ಕೆ ಸಿಬಿಐ ವಿಚಾರಣೆ ಬಗ್ಗೆ ನಿರ್ಧಾರ

    – ಪೋಷಕರ ಭೇಟಿಗೆ ಒಪ್ಪದ ಸಂತ್ರಸ್ತೆ

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಆರೋಪದ ಕೇಸ್ ಅನ್ನು ಸಿಬಿಐಗೆ ಒಪ್ಪಿಸಬೇಕೆಂಬ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಜೂನ್ 18ಕ್ಕೆ ಮುಂದೂಡಿದೆ. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಬೆನ್ನಲ್ಲೇ ಎಸ್‍ಐಟಿ ತಂಡ, ಸಿಡಿ ಪ್ರಕರಣ, ಯುವತಿ ಪೋಷಕರು ದಾಖಲಿಸಿದ್ದ ಕಿಡ್ನಾಪ್ ಕೇಸ್, ಹೈಕೋರ್ಟ್ ಸಿಜೆಗೆ ಯುವತಿ ಪತ್ರ ಬರೆದಿದ್ದ ಬಗ್ಗೆ ಸೇರಿದಂತೆ 3 ತನಿಖಾ ವರದಿಗಳನ್ನು ಸಲ್ಲಿಸಿತು.

    ಎಸ್‍ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆಯಲ್ಲಿರುವ ಕಾರಣ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ವರದಿ ಸಲ್ಲಿಸಿದ್ದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪ ಸಲ್ಲಿಸಿದ್ರು. ಈ ಬಗ್ಗೆ ಸಿಜೆ ಓಕಾ ಪ್ರತಿಕ್ರಿಯಿಸಿ, ಎಸ್‍ಐಟಿ ಮುಖ್ಯಸ್ಥರ ಸಹಿ ಇಲ್ಲದೆ ವರದಿ ಸಲ್ಲಿಸುವ ಅಗತ್ಯವೇನಿತ್ತು? ಎಸ್‍ಐಟಿ ಮುಖ್ಯಸ್ಥರು ದೃಢೀಕರಿಸಿ ಸಹಿ ಮಾಡಿದ ಬಳಿಕವೇ ವರದಿ ಸಲ್ಲಿಸಬೇಕು. ಜೂನ್ 17ಕ್ಕೆ ಮತ್ತೆ ವರದಿ ಸಲ್ಲಿಸಿ ಅಂತ ಸೂಚಿಸಿದರು.

    ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಜಾರಕಿಹೊಳಿ ಪರ ವಕೀಲ ಸಿ.ವಿ.ನಾಗೇಶ್ ಆಕ್ಷೇಪಣೆ ಸಲ್ಲಿಸಿದ್ರು. 3ನೇ ವ್ಯಕ್ತಿಗಳು ತನಿಖೆಯನ್ನು ನಿರ್ಧರಿಸಬಾರದು ಎಂದು ವಾದಿಸಿದ್ರು. ಇದಕ್ಕೆ ಸಿಜೆ ಓಕಾ ಅವರು, ನಿಮಗೆ ನ್ಯಾಯಸಮ್ಮತ ತನಿಖೆ ಇಷ್ಟವಿಲ್ಲವೇ. ನೀವು ಆಕ್ಷೇಪ ಎತ್ತಿದರೆ ನಾವು ಹಾಗೆ ಭಾವಿಸಬೇಕಾಗುತ್ತದೆ ಎಂದು ಹೇಳಿದ್ರು. ಇನ್ನು, ಆರೋಪಿಗಳಾದ ನರೇಶ್, ಶ್ರವಣ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯ್ತು. ಈ ಮಧ್ಯೆ ಸದ್ಯಕ್ಕೆ ನಾನು ಪೋಷಕರನ್ನು ಭೇಟಿಯಾಗಲ್ಲ. ಎಲ್ಲವೂ ಸರಿ ಹೋದ ಮೇಲೆ ಮಾತನಾಡ್ತೇನೆ ಅಂತ ಸಂತ್ರಸ್ತೆ ಹೇಳಿದ್ದಾರೆ. ಧಾರವಾಡ ಪೀಠದಲ್ಲಿ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಯುವತಿ ಹೇಳಿಕೆ ನೀಡಿದ್ದಾರೆ.

    ಮಾರ್ಚ್ 2ರಂದು ರಮೇಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಬಳಿಕ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇದನ್ನೂ ಓದಿ:  ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

    ಇತ್ತ ವೀಡಿಯೋ ಸಂಚಲನ ಸೃಷ್ಟಿಸಿ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದರು. ಆ ಬಳಿಕದಿಂದ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಸ್ವತಃ ಸುದ್ದಿಗೋಷ್ಠಿ ಕರೆದು ಮಾಧ್ಯಮಗಳ ಮುಂದೆ ಭಾವುಕರಾಗಿದ್ದರು. ಇಷ್ಟೆಲ್ಲಾ ಆದ ನಂತರ ಮಾಜಿ ಸಚಿವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು ಗೋಕಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಪಿಪಿಇ ಕಿಟ್ ಧರಿಸಿ ಉಪಚುನಾವಣೆಗೆ ಮತದಾನ ಮಾಡಿದ್ದರು. ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

    ಕಳೆದ 6 ದಿನಗಳ ಹಿಂದೆಯಷ್ಟೇ ಎಸ್‍ಐಟಿ ಮುಂದೆ ಹಾಜರಾಗಿದ್ದ ರಮೇಶ್ ಜಾರಕಿಹೊಳಿ, ಯುವತಿ ಸಮ್ಮತಿಯ ಮೇರೆಗೆ ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದು, ಬಳಿಕ ಆಕೆಯೇ ವಿಡಿಯೋ ಮಾಡಿಕೊಂಡು ಈ ರೀತಿ ನಡೆದುಕೊಳ್ಳುತ್ತಾ ಇದ್ದಾಳೆ ಎಂದು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ ಈ ಮಾಹಿತಿಯನ್ನು ಎಸ್‍ಐಟಿ ಅಧಿಕಾರಿಗಳು ಅಲ್ಲಗೆಳೆದಿದ್ದು, ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಯಾವುದೇ ಬೆಳವಣಿಗೆಯೂ ನಡೆದಿಲ್ಲ. ತನಿಖೆಯ ಬಳಿಕ ಸಂಪೂರ್ಣ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಅಂತ ಈ ಸುದ್ದಿಗೆ ಎಸ್‍ಐಟಿ ಮೂಲಗಳು ಸ್ಪಷ್ಟಪಡಿಸಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿತ್ತು. ಇದನ್ನೂ ಓದಿ: ಮಹಾನಾಯಕ ಗಾಂ…ನಾನು ಗಂಡಸು, ಡಿಕೆಶಿ ವಿರುದ್ಧ ದೂರು ಕೊಡ್ತೇನೆ- ರಮೇಶ್ ಜಾರಕಿಹೊಳಿ ಆಕ್ರೋಶ

  • ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

    ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

    ಧಾರವಾಡ: ಮಾಜಿ ಸಚಿವರ ವಿರುದ್ಧ ಸಿಡಿ ಕೇಸ್ ವಿಚಾರವಾಗಿ ಯುವತಿ ತಂದೆ ದಾಖಲಿಸಿದ್ದ ಹೆಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥಗೊಳಿಸಿ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.

    ಮೇ 27 ರಂದು ಸಿಡಿಯಲ್ಲಿದ್ದ ಯುವತಿ ತಂದೆ ಧಾರವಾಡ ಹೈಕೋರ್ಟ್ ನಲ್ಲಿ ನನ್ನ ಮಗಳನ್ನ ಹುಡುಕಿಕೊಡಿ ಎಂದು ಹೆಬಿಯಸ್ ಕಾರ್ಪಸ್ ಅರ್ಜಿಯನ್ನ ಸಲ್ಲಿಸಿದ್ದರು. ಇಂದು ನಡೆದ ವೀಡಿಯೋ ವಿಚಾರಣೆ ವೇಳೆ, ನಾನು ಸುರಕ್ಷಿತವಾಗಿದ್ದೇನೆಂದು ಯುವತಿ ಹೇಳಿಕೆ ನೀಡಿದ್ದಾಳೆ.

    “ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಬೆಂಗಳೂರು ವಿಳಾಸದಲ್ಲಿ ಪ್ರಸ್ತುತ ವಾಸವಾಗಿರುತ್ತೇನೆ. ನಾನು ಸ್ವಂತ ಇಚ್ಛೆ ಇಂದ ವಾಸವಾಗಿದ್ದು, ನನಗೆ ಇಲ್ಲಿ ಇರುವುದಕ್ಕೆ ಯಾರದೇ ಒತ್ತಡ ಇರುವುದಿಲ್ಲ ಮತ್ತು ನನ್ನ ರಕ್ಷಣೆಗಾಗಿ ಬೆಂಗಳೂರು ನಗರದ ಪೋಲೀಸರು ಭದ್ರತೆಯನ್ನು ಒದಗಿಸುತ್ತಾರೆ ಹಾಗೂ ನಾನು ಸುರಕ್ಷಿತವಾಗಿ ಇರುತ್ತೇನೆ. ನಾನು ಪ್ರಾಪ್ತ ವಯಸ್ಕಳಿದ್ದು ನಾನು ಸದ್ಯ ನಮ್ಮ ತಂದೆ ತಾಯಿ ಬಳಿ ಹೋಗಲು ಇಚ್ಛಿಸುವುದಿಲ್ಲ. ಈ ಪ್ರಕರಣಗಳು ಮುಗಿದ ನಂತರ ನಾನು ಅವರನ್ನು ಭೇಟಿ ಆಗುತ್ತೇನೆ.”

    ಎಂದು ಯುವತಿ ಹೈಕೋರ್ಟ್ ನ್ಯಾಯಮೂರ್ತಿಗಳ ಎದುರು ವಿಡಿಯೋ ಸಂವಾದದಲ್ಲಿ ಹೇಳಿದ್ದಾಳೆ. ಯುವತಿಯ ಹೇಳಿಕೆ ಆಧಾರದ ಮೇಲೆ ತಂದೆ ಹಾಕಿದ ಅರ್ಜಿಯನ್ನ ಇತ್ಯರ್ಥ ಮಾಡಿ ಹೈಕೋರ್ಟ್ ಆದೇಶ ಮಾಡಿದೆ.

  • ಸಿಡಿ ಕೇಸ್- ಜಾರಕಿಹೊಳಿ ಆಪ್ತ ಎಂ.ವಿ.ನಾಗರಾಜು ಹೊಸ ಬಾಂಬ್

    ಸಿಡಿ ಕೇಸ್- ಜಾರಕಿಹೊಳಿ ಆಪ್ತ ಎಂ.ವಿ.ನಾಗರಾಜು ಹೊಸ ಬಾಂಬ್

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ, ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಆಪ್ತ ಮಾಜಿ ಶಾಸಕ ನಾಗರಾಜು ಪ್ರತಿಕ್ರಿಯೆ ನೀಡಿದ್ದಾರೆ.

    ಸಿಡಿಯಲ್ಲಿ ರಮೇಶ್ ಜಾರಕಿಹೊಳೆ ನಾನೇ ಎಂದು ಒಪ್ಪಿಕೊಂಡ ಎನ್ನಲಾದ ವಿಚಾರದ ಹಿನ್ನೆಲೆ, ಅದರ ಬಗ್ಗೆ ನನಗೆ ಗೊತ್ತಿಲ್ಲ ಅಂತಿದ್ರು ಕೂಲಂಕಷವಾಗಿ ತಿಳಿದು ತಿಳಿಸುವೆ. ಇವತ್ತು ಅವರು ಅಲ್ಲ ಅಂತ ಹೇಳುವೆ, ಅವರು ಏನು ಪರ್ಸನಲ್ ಆಗಿ ಮಾಡಿಕೊಂಡಿದ್ದಾರೊ ಗೊತ್ತಿಲ್ಲ. ರಾಜಕೀಯವಾಗಿ ನಾನು ಹತ್ತಿರವಿದ್ದೆ ಈ ವಿಚಾರದಲ್ಲಿ ನನಗೆ ಗೊತ್ತಿಲ್ಲ. ಅವರನ್ನು
    ಬಿಜೆಪಿಗೆ ಕರೆತಂದಿದ್ದು ನಾನೇ. ಆದ್ರೆ ವೈಯಕ್ತಿಕ ವಿಚಾರ ನನಗೆ ಗೊತ್ತಿಲ್ಲ. ರಾಜಕೀಯವಾಗಿ ಇರಬೇಕಾದ್ರೆ ವಾಸ್ತವಾಂಶ ಒಪ್ಪಿಕೊಂಡಿರಬೇಕು ಎಂದು ಹೇಳಿದರು.

    ಅವರ ಪರ್ಸನಲ್ ವಿಚಾರದಲ್ಲಿ ನನಗೆ ಏನೂ ಗೊತ್ತಿಲ್ಲ, ನಾಲ್ಕೂವರೆ ತಿಂಗಳ ಹಿಂದೆ ಸಿಡಿ ಬಗ್ಗೆ ಗೊತ್ತಿತ್ತು. ಅಂದು ಕೇಳಿದ್ರೆ ಇಲ್ಲ ಅಂದ್ರು. ಆ ರೀತಿಯ ಕೆಟ್ಟ ಕೆಲಸ ಮಾಡಿಲ್ಲ. ಉದ್ದೇಶಪೂರ್ವಕವಾಗಿ ರಾಜಕೀಯ ಷಡ್ಯಂತ್ರದಿಂದ ಮಾಡಿದ್ದಾರೆ. ಅವರು ಸೇಫ್ ಆಗಲು ಆ ರೀತಿಯಲ್ಲಿ ಹೇಳಿರಬಹುದು ಎಂದು ತಿಳಿಸಿದರು.

    ಯುವತಿ ನನಗೆ ಗೊತ್ತೆ ಇಲ್ಲ ಎಂದು ಹೇಳುತ್ತಿದ್ದ ರಮೇಶ್ ಜಾರಕಿಹೊಳಿ ಆ ಯುವತಿ ನನಗೆ ಗೊತ್ತು ಅಂತ ಹೇಳಿದ್ದಾರೆ ಎನ್ನಲಾಗುತ್ತಿದೆ. ಆ ಯುವತಿ ಪ್ರಾಜೆಕ್ಟ್ ವಿಚಾರದಲ್ಲಿ ನನಗೆ ಪರಿಚಯ ಆಗಿದ್ದು ನಿಜ. ಅವಾಗಾವಾಗ ನಾನು ವಾಸವಾಗಿದ್ದ ಅಪಾರ್ಟ್ ಮೆಂಟ್ ಗೆ ಬರುತ್ತಿದ್ದಳು. ಅವಾಗ ಇಬ್ಬರು ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದೀವಿ. ಅದು ಕೂಡ ಆಕೆಯ ಸಮ್ಮತಿಯ ಮೇರೆಗೆ ಎಂದು ಎಸ್‍ಐಟಿ ಮುಂದೆ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಯುವತಿ ಸಮ್ಮತಿಯ ಮೇರೆಗೆ ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದು, ಬಳಿಕ ಆಕೆಯೇ ವಿಡಿಯೋ ಮಾಡಿಕೊಂಡು ಈ ರೀತಿ ನಡೆದುಕೊಳ್ಳುತ್ತಾ ಇದ್ದಾಳೆ ಅನ್ನೋ ಮಾಹಿತಿ ಬೆಳಕಿಗೆ ಬಂದಿದೆ.

    ಈ ಮಾಹಿತಿಯನ್ನು ಎಸ್‍ಐಟಿ ಅಧಿಕಾರಿಗಳು ಅಲ್ಲಗೆಳೆದಿದ್ದು, ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಯಾವುದೇ ಬೆಳವಣಿಗೆಯೂ ನಡೆದಿಲ್ಲ. ತನಿಖೆಯ ಬಳಿಕ ಸಂಪೂರ್ಣ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಅಂತ ಈ ಸುದ್ದಿಗೆ ಎಸ್‍ಐಟಿ ಮೂಲಗಳು ಸ್ಪಷ್ಟಪಡಿಸಿವೆ.

  • ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

    ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೂವರೆಗೂ ಯುವತಿ ನನಗೆ ಗೊತ್ತೆ ಇಲ್ಲ ಎಂದು ಹೇಳುತ್ತಿದ್ದ ರಮೇಶ್ ಜಾರಕಿ ಹೊಳಿ ಆ ಯುವತಿ ನನಗೆ ಗೊತ್ತು ಅಂತ ಹೇಳಿದ್ದಾರೆ ಎನ್ನಲಾಗುತ್ತಿದೆ.

    ಆ ಯುವತಿ ಪ್ರಾಜೆಕ್ಟ್ ವಿಚಾರದಲ್ಲಿ ನನಗೆ ಪರಿಚಯ ಆಗಿದ್ದು ನಿಜ. ಅವಾಗಾವಾಗ ನಾನು ವಾಸವಾಗಿದ್ದ ಅಪಾರ್ಟ್ ಮೆಂಟ್ ಗೆ ಬರುತ್ತಿದ್ದಳು. ಅವಾಗ ಇಬ್ಬರು ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದೀವಿ. ಅದು ಕೂಡ ಆಕೆಯ ಸಮ್ಮತಿಯ ಮೇರೆಗೆ ಎಂದು ಎಸ್‍ಐಟಿ ಮುಂದೆ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಯುವತಿ ಸಮ್ಮತಿಯ ಮೇರೆಗೆ ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದು, ಬಳಿಕ ಆಕೆಯೇ ವಿಡಿಯೋ ಮಾಡಿಕೊಂಡು ಈ ರೀತಿ ನಡೆದುಕೊಳ್ಳುತ್ತಾ ಇದ್ದಾಳೆ ಅನ್ನೋ ಮಾಹಿತಿ ಬೆಳಕಿಗೆ ಬಂದಿದೆ.

    ಈ ಮಾಹಿತಿಯನ್ನು ಎಸ್‍ಐಟಿ ಅಧಿಕಾರಿಗಳು ಅಲ್ಲಗೆಳೆದಿದ್ದು, ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಯಾವುದೇ ಬೆಳವಣಿಗೆಯೂ ನಡೆದಿಲ್ಲ. ತನಿಖೆಯ ಬಳಿಕ ಸಂಪೂರ್ಣ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಅಂತ ಈ ಸುದ್ದಿಗೆ ಎಸ್‍ಐಟಿ ಮೂಲಗಳು ಸ್ಪಷ್ಟಪಡಿಸಿವೆ.

  • ಸಂತ್ರಸ್ತೆ ತನ್ನ ಹೇಳಿಕೆ ಬದಲಿಸಿಲ್ಲ- ಯುವತಿ ಪರ ವಕೀಲರ ಸ್ಪಷ್ಟನೆ

    ಸಂತ್ರಸ್ತೆ ತನ್ನ ಹೇಳಿಕೆ ಬದಲಿಸಿಲ್ಲ- ಯುವತಿ ಪರ ವಕೀಲರ ಸ್ಪಷ್ಟನೆ

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದ ಸಂತ್ರಸ್ತೆ ತಮ್ಮ ಹೇಳಿಕೆ ಬದಲಿಸಿಲ್ಲ. ಎಸ್‍ಟಿಟಿ ನೋಟಿಸ್ ನೀಡಿದ್ದರಿಂದ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಯುವತಿ ಪರ ವಕೀಲರಾದ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.

    ಇಂದು ನೋಟಿಸ್ ನೀಡದಿದ್ದರೂ ಯುವತಿ ಎಸ್‍ಐಟಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ಬದಲಿಸೋದಾಗಿ ಹೇಳಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಸೆಕ್ಷನ್ 164ರ ಅಡಿ ಮತ್ತೊಮ್ಮೆ ಮರು ಹೇಳಿಕೆ ದಾಖಲಿಸಲು ವಕೀಲರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

    ಎಸ್‍ಐಟಿ ಮುಂದೆ ಯುವತಿ ಹೇಳಿದ್ದೇನು?: ನಾನು ಮಾಡದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಿದ್ದು, ಒತ್ತಾಯ ಪೂರಕ ಹೇಳಿಕೆ ಕೊಡಿಸಿದರು. ನಂಬಿದವರಿಂದಲೇ ನಾನು ಮೋಸ ಹೋಗಿದ್ದೇನೆ. ನನ್ನ ಮರ್ಯಾದೆ ಹಾಳಾಗಿದ್ದು, ಪ್ರಕರಣ ಇಷ್ಟರ ಮಟ್ಟಿಗೆ ಆಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ನ್ಯಾಯ ಸಿಗುವ ನಿರೀಕ್ಷೆ ಇತ್ತು, ಆದ್ರೆ ನನಗೆ ಗೊತ್ತಿಲ್ಲದೆ ಕೆಲವೊಂದು ವಿಚಾರಗಳು ನಡೆಯಿತು. ನನ್ನ ಬೆನ್ನ ಹಿಂದೆ ನಡೆದ ವಿಚಾರ ತಿಳಿದುಕೊಳ್ಳೋದಕ್ಕೆ ಸಾಕಷ್ಟು ದಿನಗಳೇ ಆಯಿತು. ನನ್ನ ಸ್ನೇಹಿತ ಆಕಾಶ್ ಗೆ ಕೂಡ ಕೆಲವೊಂದು ವಿಚಾರ ಮುಚ್ಚು ಮರೆ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾರೆ ಎನ್ನಲಾಗಿದೆ.

    ಅಪ್ಪ ಅಮ್ಮನಿಗೂ ಕೂಡ ನಾನು ನೋವು ನೀಡಿದ್ದೇನು. ಒಳ್ಳೆಯ ಮಗಳಾಗಬೇಕು ಅಂತ ನನ್ನ ಅಪ್ಪ ನಿರೀಕ್ಷೆ ಮಾಡಿದ್ದರು. ನನ್ನನ್ನು ಕೂಡ ಕೆಲವೊಮ್ಮೆ ದೂರ ಇಟ್ಟು ಮಾತಕತೆ ಮಾಡಿರುವ ಬಗ್ಗೆ ಅನುಮಾನ ಇದೆ. ಆದರೆ ನಿಜವಾಗಲೂ ಅನ್ಯಾಯಕ್ಕೆ ಒಳಗಾದವಳು ನಾನು ಮಾತ್ರ. ನಾನು ಸತ್ಯವನ್ನು ಮಾತ್ರ ಹೇಳಬೇಕದು ಬಯಸಿದ್ದೀನಿ. ನನ್ನ ಈ ಹೇಳಿಕೆಗೆ ನಾನು ಬದ್ಧವಾಗಿರ್ತೀನಿ ಎಂದು ಯುವತಿ ಎಸ್‍ಐಟಿ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಹಿನ್ನೆಲೆಯಲ್ಲಿ ಸೆಕ್ಷನ್ 164 ಅಡಿಯಲ್ಲಿ ಯುವತಿ ಮರು ಹೇಳಿಕೆ ಪಡೆಯುವ ಸಾಧ್ಯತೆಗಳಿವೆ. 164ರ ಅಡಿಯಲ್ಲಿ ಮರು ಹೇಳಿಕೆ ದಾಖಲಿಸಲು ನ್ಯಾಯಾಲಕ್ಕೆ ಮನವಿ ಸಲ್ಲಿಸಲು ಯುವತಿ ಮುಂದಾಗಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ನ್ಯಾಯಾಧೀಶರ ಮುಂದೆ ಯುವತಿ ಹಾಜರಾಗಿ ಹೇಳಿಕೆ ದಾಖಲಿಸು ಸಾಧ್ಯತೆಗಳು ದಟ್ಟವಾಗಿವೆ.

  • ರಮೇಶ್ ಜಾರಕಿಹೊಳಿ ಅತ್ಯಾಚಾರ ಪ್ರಕರಣ- ಸಿಡಿ ಲೇಡಿ ಯೂ ಟರ್ನ್

    ರಮೇಶ್ ಜಾರಕಿಹೊಳಿ ಅತ್ಯಾಚಾರ ಪ್ರಕರಣ- ಸಿಡಿ ಲೇಡಿ ಯೂ ಟರ್ನ್

    – ಎಸ್‍ಐಟಿ ಎದುರು ಯುವತಿ ಮರು ಹೇಳಿಕೆ

    ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇದೀಗ ಉಲ್ಟಾ ಹೊಡೆದಿದ್ದಾರೆ.

    ನೋಟಿಸ್ ನೀಡದೇ ಇದ್ದರೂ ಇದ್ದಕ್ಕಿದ್ದಂತೆ ಯುವತಿ ಇಂದು ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ಮೂಲಕ ಯುವತಿ ತೀವ್ರ ಕುತೂಹಲ ಹುಟ್ಟಿಸಿದರು. ಪ್ರಕರಣದಲ್ಲಿ ನನಗೆ ಅನ್ಯಾಯ ಆಗಿದೆ. ಹೀಗಾಗಿ ಮತ್ತೆ ಹೇಳಿಕೆ ನೀಡಲು ಅವಕಾಶ ಕೊಡುವಂತೆ ಯುವತಿ ಮುಂದಾಗಿದ್ದಾರೆ.

    ನನ್ನಿಂದ ಬಲವಂತದ ಹೇಳಿಕೆ ಕೊಡಿಸಿದ್ರು. ಈ ಕೇಸ್ ಈ ಮಟ್ಟಿಗೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ನನ್ನ ಮರ್ಯಾದೆ ಹಾಳಾಗಿದೆ. ಇಷ್ಟರ ಮಟ್ಟಿಗೆ ಹಾಳಾಗುತ್ತೆ ಅಂದುಕೊಂಡಿರಲಿಲ್ಲ. ನಾನು ನಂಬಿದವರೇ ನನಗೆ ಮೋಸ ಮಾಡಿದ್ದಾರೆ ಎಂದು ಹೇಳುವ ಮೂಲಕ ಸಿಡಿ ಕಿಂಗ್ ಪಿನ್ ಗಳ ವಿರುದ್ಧವೇ ಯುವತಿ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ನನಗೆ ಅನ್ಯಾಯ ಆಗಿದೆ. ಹೀಗಾಗಿ ಮರು ಹೇಳಿಕೆಗೆ ಅವಕಾಶ ನೀಡಿ ಎಂದು ಯುವತಿ, ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದಾಳೆ.

    ಈ ಹಿನ್ನೆಲೆಯಲ್ಲಿ ಸೆಕ್ಷನ್ 164 ಅಡಿಯಲ್ಲಿ ಯುವತಿ ಮರು ಹೇಳಿಕೆ ಪಡೆಯುವ ಸಾಧ್ಯತೆಗಳಿವೆ. 164ರ ಅಡಿಯಲ್ಲಿ ಮರು ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಯುವತಿ ಮುಂದಾಗಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ನ್ಯಾಯಾಧೀಶರ ಮುಂದೆ ಯುವತಿ ಹಾಜರಾಗಿ ಹೇಳಿಕೆ ದಾಖಲಿಸುವ ಸಾಧ್ಯತೆಗಳು ದಟ್ಟವಾಗಿವೆ.

  • ಮಾಜಿ ಸಚಿವ ಜಾರಕಿಹೊಳಿ ಕೇಸಿಗೆ ಕೋವಿಡ್ ಟ್ವಿಸ್ಟ್ – ರೇಪ್ ಕೇಸ್ ತನಿಖೆಗೆ ಅಡ್ಡಿಯಾಗುತ್ತಾ?

    ಮಾಜಿ ಸಚಿವ ಜಾರಕಿಹೊಳಿ ಕೇಸಿಗೆ ಕೋವಿಡ್ ಟ್ವಿಸ್ಟ್ – ರೇಪ್ ಕೇಸ್ ತನಿಖೆಗೆ ಅಡ್ಡಿಯಾಗುತ್ತಾ?

    – ಮುಂದೇನಾಗುತ್ತೆ ಸಿಡಿ ಕೇಸ್? ಜಾರಕಿಹೊಳಿ ಪ್ಲಾನ್ ಏನು?

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಕೋವಿಡ್ ಟ್ವಿಸ್ಟ್ ಸಿಕ್ಕಿದೆ. ಇಂದು ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದ್ದ ರೇಪ್ ಆರೋಪಿ ರಮೇಶ್ ಜಾರಕಿಹೊಳಿ ಕೊರೊನಾ ಸೋಂಕಿನಿಂದ ವಿಚಾರಣೆಗೆ ಗೈರಾಗಿದ್ದಾರೆ. ಹೀಗಾಗಿ ಎಸ್‍ಐಟಿ ತನಿಖೆ ಇನ್ನಷ್ಟು ದಿನ ವಿಳಂಬವಾಗುವ ಸಾಧ್ಯತೆಗಳಿವೆ. ಜಾರಕಿಹೊಳಿ ಜೊತೆ ಅವರ ಕಾರಿನ ಚಾಲಕರು ಹಾಗೂ ಅಡುಗೆ ಭಟ್ಟನಿಗೂ ಸೋಂಕು ತಗುಲಿದೆ ಅಂತ ತಿಳಿದುಬಂದಿದೆ.

    ಕಳೆದ ವಾರ ನೆರೆಯ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದ ನಂತ್ರ ನಾಪತ್ತೆಯಾಗಿದ್ದ ರಮೇಶ್ ಜಾರಕಿಹೊಳಿ, ನಿನ್ನೆ ರಾತ್ರಿ ಗೋಕಾಕ್‍ನ ಸರ್ಕಾರಿ ಆಸ್ಪತ್ರೆಗೆ ತೆರಳಿ, ಅಡ್ಮಿಟ್ ಆಗಿದ್ದಾರೆ. ರಮೇಶ್ ಜಾರಕಿಹೊಳಿಯವರಿಗೆ ಕೋವಿಡ್ ಸೇರಿ ಹಲವು ರೋಗಗಳು ಬಾಧಿಸುತ್ತಿವೆ. ಹೀಗಾಗಿ ಅವರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಆಂಟೀನ್ ಮಾಹಿತಿ ನೀಡಿದ್ದಾರೆ. ಸದ್ಯದ ಪರಿಸ್ಥಿತಿ ಗಮನಿಸಿದ್ರೇ ರಮೇಶ್ ಜಾರಕಿಹೊಳಿ ಕನಿಷ್ಠ ಮೂರ್ನಾಲ್ಕು ದಿನವಾದರೂ ಐಸಿಯೂನಲ್ಲಿ ಇರಬೇಕಾಗಲಿದೆ ಅಂತ ವೈದ್ಯರು ತಿಳಿಸಿದ್ದಾರೆ.

    ಇದಕ್ಕೂ ಮುನ್ನವೇ ಸಚಿವ ಬೈರತಿ ಬಸವರಾಜ್, ಜಾರಕಿಹೊಳಿಗೆ ಕೊರೋನಾ ಬಂದಿದೆ ಅಂತಾ ಹೇಳಿದ್ರು. ಯುವತಿಯ ವಕೀಲರು ಮಾತ್ರ ಜಾರಕಿಹೊಳಿಗೆ ಕೊರೊನಾ ಬಂದಿರೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಇದರ ಸತ್ಯಾಸತ್ಯತೆ ಅರಿಯಲು ಸಂತ್ರಸ್ತೆ ಪರ ವಕೀಲ ಜಗದೀಶ್, ತಮ್ಮ ಆಪ್ತ ವಕೀಲ ಚಂದನ್‍ರನ್ನು ಗೋಕಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಜಾರಕಿಹೊಳಿ ಬೆಂಬಲಿಗರು ವಕೀಲ ಚಂದನ್ ಅವರನ್ನು ಆಸ್ಪತ್ರೆ ಹೊರಗೆ ತಡೆದು ಗಲಾಟೆ ಮಾಡಿದ್ದಾರೆ. ಈ ಬೆನ್ನಲ್ಲೇ ಜಾರಕಿಹೊಳಿ ಐಸಿಯುನಲ್ಲಿರುವ ವಿಡಿಯೋ ರಿಲೀಸ್ ಆಗಿದೆ. ಜಾರಕಿಹೊಳಿ ಐಸಿಯುನಲ್ಲೇ ಇದ್ದಾರೆ ಎಂದು ಟಿಹೆಚ್‍ಓ ರವೀಂದ್ರ ಸ್ಪಷ್ಪಪಡಿಸಿದ್ದಾರೆ.

    ವೈದ್ಯರ ಪ್ರಕಾರ ರಮೇಶ್ ಜಾರಕಿಹೊಳಿ ಆರೋಗ್ಯ ಸಮಸ್ಯೆಗಳು:
    * ಉಸಿರಾಟದ ಸಮಸ್ಯೆ ತೀವ್ರ, ಕೃತಕ ಉಸಿರಾಟ ವ್ಯವಸ್ಥೆ
    * ಮಧುಮೇಹದ ಪ್ರಮಾಣದಲ್ಲಿ ತೀವ್ರ ಏರಿಳಿತ
    * ರಕ್ತದೊತ್ತಡದ ಪ್ರಮಾಣದಲ್ಲಿ ತೀವ್ರ ಏರಿಳಿತ
    * ತೀವ್ರ ಜ್ವರ, ಕೆಮ್ಮು, ಮೈಕೈ ನೋವು
    * ಕೋವಿಡ್ 19 ವೈರಸ್

    ರಮೇಶ್ ಜಾರಕಿಹೊಳಿ ಟ್ರಾವೆಲ್ ಹಿಸ್ಟರಿ
    * ಮಾ.29ರ ತಡರಾತ್ರಿ ಬೆಂಗಳೂರಿಂದ ಬೆಳಗಾವಿಗೆ ಆಗಮನ
    * ರಸ್ತೆ ಮಾರ್ಗವಾಗಿ ಬೆಳಗಾವಿಯಿಂದ ಗೋಕಾಕ್‍ಗೆ ಪ್ರಯಾಣ
    * ಮಾ.30ರಂದು ಗೋಕಾಕ್‍ನಿಂದ ಕೊಲ್ಹಾಪುರಕ್ಕೆ ಪ್ರಯಾಣ
    (ರಸ್ತೆ ಮಾರ್ಗವಾಗಿ ಮಹಾಲಕ್ಷ್ಮಿದೇವಿ ದೇಗುಲಕ್ಕೆ ಆಗಮನ)
    * ಮಾ.30 ಮತ್ತು 31ರಂದು ರಹಸ್ಯ ಸ್ಥಳದಲ್ಲಿ ವಾಸ್ತವ್ಯ
    * ಏಪ್ರಿಲ್ 1ರಂದು ಗೋಕಾಕ್‍ಗೆ ವಾಪಸ್, ಜ್ವರ, ಕೆಮ್ಮು ಬಾಧೆ
    * ಗೋಕಾಕ್ ತಾಲೂಕು ಆಸ್ಪತ್ರೆಯಲ್ಲಿ ಜಾರಕಿಹೊಳಿಗೆ ಕೋವಿಡ್ ಟೆಸ್ಟ್
    * ಏಪ್ರಿಲ್ 2ರಂದು ಕೋವಿಡ್ ಪಾಸಿಟಿವ್ ರಿಪೋರ್ಟ್, ಹೋಂ ಐಸೋಲೇಷನ್
    * ಏಪ್ರಿಲ್ 4ರಂದು ರಾತ್ರಿ 10:30ಕ್ಕೆ ಉಸಿರಾಟ ಸಮಸ್ಯೆ ತೀವ್ರ
    * ಗೋಕಾಕ್ ಸರ್ಕಾರಿ ಆಸ್ಪತ್ರೆಯ ಐಸಿಯುಗೆ ದಾಖಲು

    ಜಾರಕಿಹೊಳಿ ಪ್ಲಾನ್ ಏನು?: ಕೊರೊನಾ ಸೋಂಕು ತಗುಲಿದ ಪರಿಣಾಮ ರಮೇಶ್ ಜಾರಕಿಹೊಳಿ ಕಡ್ಡಾಯವಾಗಿ ಕ್ವಾರಂಟೈನ್ ಪೂರ್ಣಗೊಳಿಸಬೇಕು. ಆರೋಪಿ ಸಿಗದ ಹಿನ್ನೆಲೆ ಸಿಡಿ ಪ್ರಕರಣದ ತನಿಖೆಗೆ ತಾತ್ಕಾಲಿಕ ಬ್ರೇಕ್ ಬೀಳುವ ಸಾಧ್ಯತೆಗಳಿವೆ. ಕೋವಿಡ್ ಕಾರಣದಿಂದ ರಮೇಶ್ ಜಾರಕಿಹೊಳಿ ಸುಮಾರು 24 ದಿನ ವಿಚಾರಣೆಯಿಂದ ವಿನಾಯಿತಿ ಪಡೆದು, ಸೇಫ್ ಆಗುವ ಬಗ್ಗೆ ಪ್ಲಾನ್ ಮಾಡಿಕೊಳ್ಳಬಹುದು ಅಥವಾ ಪ್ರಕರಣಕ್ಕೆ ಹೊಸ ತಿರುವು ಸಹ ಸಿಗಬಹುದು.

    ಈ 24 ದಿನದಲ್ಲಿ ತನಿಖೆಯಲ್ಲಿ ಮಹತ್ವದ ಪ್ರಗತಿ ಆಗಬಹುದು. ಅಂದ್ರೆ ಬ್ಲಾಕ್‍ಮೇಲ್ ಪ್ರಕರಣದಲ್ಲಿ ಕಿಂಗ್‍ಪಿನ್‍ಗಳು ಬಂಧನವಾಗಬಹುದು. ಕಿಂಗ್‍ಪಿನ್‍ಗಳ ಬಂಧನದಿಂದ ಸಂತ್ರಸ್ತೆಗೆ ಸಂಕಷ್ಟ ಎದುರಾಗಬಹುದು.

  • ಸಿಡಿ ಕೇಸ್ – ಸರ್ಕಾರ, ಎಸ್‍ಐಟಿಗೆ ಹೈಕೋರ್ಟ್ ನೋಟಿಸ್ ಜಾರಿ

    ಸಿಡಿ ಕೇಸ್ – ಸರ್ಕಾರ, ಎಸ್‍ಐಟಿಗೆ ಹೈಕೋರ್ಟ್ ನೋಟಿಸ್ ಜಾರಿ

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ(ಎಸ್‍ಐಟಿ) ಮತ್ತು ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

    ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಕೋರಿ ವಕೀಲ ಉಮೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ವಿಭಾಗೀಯ ಪೀಠದಲ್ಲಿ ನಡೆಯಿತು.

    ವಿಚಾರಣೆ ನಡೆಸಿದ ಕೋರ್ಟ್, ಮುಚ್ಚಿದ ಲಕೋಟೆಯಲ್ಲಿ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಎಸ್‍ಐಟಿಗೆ  ಸೂಚನೆ ನೀಡಿದೆ. ಈ ಅರ್ಜಿಯ ವಿಚಾರಣೆಯನ್ನು ಏ.17ಕ್ಕೆ ಹೈಕೋರ್ಟ್ ಮುಂದೂಡಿದೆ.

     

     

  • ಇಂದು ವಿಚಾರಣೆಗೆ ಹಾಜರಾಗ್ತಾರಾ ರೇಪ್ ಆರೋಪಿ ರಮೇಶ್ ಜಾರಕಿಹೊಳಿ..?

    ಇಂದು ವಿಚಾರಣೆಗೆ ಹಾಜರಾಗ್ತಾರಾ ರೇಪ್ ಆರೋಪಿ ರಮೇಶ್ ಜಾರಕಿಹೊಳಿ..?

    ಬೆಂಗಳೂರು: ಅತ್ಯಾಚಾರ ಕೇಸ್ ಆರೋಪಿ ರಮೇಶ್ ಜಾರಕಿಹೊಳಿಗೆ ಇಂದು ನಿರ್ಣಾಯಕ ದಿನ. ಅತ್ಯಾಚಾರ ಕೇಸ್‍ನಲ್ಲಿ ಇಂದು ಬಂಧನವೋ ಅಥವಾ ವಿಚಾರಣೆ ನಡೆಸಿ ಪೊಲೀಸರು ಬಿಟ್ಟು ಕಳಿಸ್ತಾರಾ ಎಂಬ ಕುತೂಹಲ ಹಾಗೇ ಇದೆ.

    ಇಂದು ಬೆಳಗ್ಗೆ ಪೊಲೀಸರ ಎದುರು ಆರೋಪಿ ಜಾರಕಿಹೊಳಿ ವಿಚಾರಣೆಗೆ ಹಾಜರಾಗಬೇಕಿದೆ. ಯುವತಿಯೇ ಖುದ್ದು ಪ್ರತ್ಯಕ್ಷ ಆದ ದಿನದಿಂದ ರಮೇಶ್ ಜಾರಕಿಹೊಳಿ ಇದುವರೆಗೂ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಜಾರಕಿಹೊಳಿಯೇ ನೀಡಿದ್ದ ಬ್ಲ್ಯಾಕ್‍ಮೇಲ್ ಕೇಸ್‍ನಲ್ಲಿ ಏಪ್ರಿಲ್ 2ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಜ್ವರದ ಕಾರಣದಿಂದ ವಿಚಾರಣೆಗೆ ಬರಲು ಸಾಧ್ಯವಾಗಿಲ್ಲ ಎಂದು ಜಾರಕಿಹೊಳಿ ಪರ ವಕೀಲರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇವತ್ತು ಬರುವಂತೆ ಪೊಲೀಸರು ಹೇಳಿದ್ದರು.

    ಈಗಾಗಲೇ ಯುವತಿ ನ್ಯಾಯಾಧೀಶರ ಎದುರು, ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಕೂಡಾ ಮುಗಿದಿದೆ. ಆದರೆ ಇದುವರೆಗೆ ಅತ್ಯಾಚಾರ ಕೇಸ್‍ನಲ್ಲಿ ಜಾರಕಿಹೊಳಿ ವಿಚಾರಣೆಯೇ ನಡೆದಿಲ್ಲ.

    ಇತ್ತ ಪೊಲೀಸರ ತನಿಖೆ ಬಗ್ಗೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಹೀಗಾಗಿ ಬಂಧನ ಭೀತಿಯಲ್ಲಿರುವ ಜಾರಕಿಹೊಳಿ ವಿಚಾರಣೆಗೆ ಬರ್ತಾರಾ? ವಿಚಾರಣೆಗೆ ಬಂದ್ರೆ ಪೊಲೀಸರು ಅರೆಸ್ಟ್ ಮಾಡ್ತಾರಾ? ಅಥವಾ ಆರೋಪಿಯ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಕೂಡಾ ಅನಿವಾರ್ಯ ಆಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿ ಬಿಟ್ಟು ಕಳಿಸ್ತಾರಾ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.