Tag: ಸಿಡಿಲು

  • ಬಿಹಾರದಲ್ಲಿ ಸಿಡಿಲಿಗೆ 11 ಮಂದಿ ಬಲಿ – ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಣೆ

    ಬಿಹಾರದಲ್ಲಿ ಸಿಡಿಲಿಗೆ 11 ಮಂದಿ ಬಲಿ – ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಣೆ

    ಪಾಟ್ನಾ: ಬಿಹಾರದ ಹಲವೆಡೆ ಸಿಡಿಲು ಬಡಿದು 10 ಮಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.

    ಈ ಕುರಿತಂತೆ ಸೋಮವಾರ ನಿತೀಶ್ ಕುಮಾರ್ ಅವರು, ಗುಡುಗು ಮತ್ತು ಸಿಡಿಲಿನಿಂದಾಗಿ ಪುರ್ನಿಯಾ ಹಾಗೂ ಅರಾರಿಯಾದಲ್ಲಿ ನಾಲ್ಕು ಮಂದಿ ಮತ್ತು ಸುಪೌಲ್‍ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು ಮತ್ತು ಮೃತರ ಕುಟುಂಬಸ್ಥರಿಗೆ 4 ಲಕ್ಷ ಪರಿಹಾರ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಸುಮ್ಮನಹಳ್ಳಿ ಬ್ರಿಡ್ಜ್‌ ಮತ್ತೆ ಕುಸಿತದ ಭೀತಿ – ನೆಲ ಕಾಣುವ ಮಟ್ಟಕ್ಕೆ ಕಿತ್ತು ಹೋದ ಕಾಂಕ್ರಿಟ್ ಸ್ಲ್ಯಾಬ್

    ಇಂತಹ ವಾತಾವಾರಣವಿದ್ದಾಗ ಜನರು ಜಾಗರೂಕರಾಗಿರಬೇಕು ಮತ್ತು ಘಟನೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುವುದರ ಬಗ್ಗೆ ವಿಪತ್ತು ನಿರ್ವಹಣಾ ಇಲಾಖೆ ನೀಡಿರುವ ಸಲಹೆಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡಿ, ಮನೆಯಲ್ಲಿಯೇ ಇರಿ ಮತ್ತು ಕೆಟ್ಟ ವಾತಾವರಣದಲ್ಲಿ ಸುರಕ್ಷಿತವಾಗಿರಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಸಂಪ್ರದಾಯದಂತೆ ಮರುಮದುವೆಯಾದ್ರು 9 ಮಕ್ಕಳ ತಂದೆ-ತಾಯಿಯಾಗಿರುವ ಮುಸ್ಲಿಂ ದಂಪತಿ

    Live Tv
    [brid partner=56869869 player=32851 video=960834 autoplay=true]

  • ಪಿಕ್ನಿಕ್‌ಗೆ ಹೋಗುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವು – MPಯಲ್ಲಿ ಒಂದೇ ದಿನ 11 ಬಲಿ

    ಪಿಕ್ನಿಕ್‌ಗೆ ಹೋಗುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವು – MPಯಲ್ಲಿ ಒಂದೇ ದಿನ 11 ಬಲಿ

    ಭೋಪಾಲ್: ಸಿಡಿಲು ಬಡಿದು ಬುಧವಾರ ಒಂದೇ ದಿನ ಹಲವೆಡೆ 11 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ರಾಜ್ಯದಲ್ಲಿ ಮುಂಗಾರಿನ ಅಬ್ಬರ ಜೋರಾಗಿದೆ. ಪ್ರಕೃತಿ ವಿಕೋಪದಿಂದಾಗಿ ಮಧ್ಯಪ್ರದೇಶದಲ್ಲಿ ಮೃತಪಟ್ಟವರ ಸಂಖ್ಯೆ ಈವರೆಗೆ 45ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲಂಚ್‌ ಬಾಕ್ಸ್ ಎಂದು ತೆರೆದಾಗ ಸ್ಫೋಟ- ಇಬ್ಬರು ವಲಸೆ ಕಾರ್ಮಿಕರು ಸಾವು

    ಶಿಯೋಪುರದ ಅಜ್ನೋಯಿ ಅರಣ್ಯದಲ್ಲಿ ವಿಹಾರಕ್ಕೆ (ಪಿಕ್ನಿಕ್) ತೆರಳಿದ್ದ ಆರು ಸ್ನೇಹಿತರಿಗೆ ಸಿಡಿಲು ಬಡಿದಿದೆ. ಇವರಲ್ಲಿ 20ರ ಹರೆಯದ ರಾಮಭಾರತ್ ಆದಿವಾಸಿ, ದಿಲೀಪ್ ಆದಿವಾಸಿ ಮತ್ತು ಮುಖೇಶ್ ಆದಿವಾಸಿ ಸ್ಥಳದಲ್ಲೇ ಮೃತಪಟ್ಟರೆ, ದಯಾರಾಮ್ ಆದಿವಾಸಿ, ಸತೀಶ್ ಆದಿವಾಸಿ ಮತ್ತು ಸೋಮದೇವ್ ಆದಿವಾಸಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಭಿಂದ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಸುಕಂದ್ ಗ್ರಾಮದಲ್ಲಿ ರಾಮ್‌ಕಾಲಿ (70) ಮತ್ತು ಜ್ಞಾನೋದೇವಿ (40) ಎಂದು ಗುರುತಿಸಲಾದ ಇಬ್ಬರು ಮಹಿಳೆಯರು ಮನೆಗೆ ಹಿಂದಿರುಗುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಮತ್ತೊಂದು ಉಪತಳಿ ಪತ್ತೆ- ರೋಗನಿರೋಧಕ ಶಕ್ತಿ ಮೀರಿಸಿ ವೈರಸ್ ಹರಡುತ್ತಾ ಈ ತಳಿ – WHO ಹೇಳಿದ್ದೇನು?

    ಛತ್ತರ್‌ಪುರ, ಮಹಾರಾಜ್‌ಗಂಜ್ ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಮತ್ತು ಅವರ ಮಗ ಸಿಡಿಲು ಬಡಿತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಮರವಾನ್ ಗ್ರಾಮದಲ್ಲಿ ರಾಧಾ ಅಹಿರ್ವಾರ್ (50) ಎಂಬ ಮತ್ತೊಬ್ಬ ರೈತ ಇದೇ ರೀತಿ ಮೃತಪಟ್ಟಿದ್ದಾರೆ.

    ಶಿವಪುರಿಯ 35 ವರ್ಷದ ವ್ಯಕ್ತಿ ಮತ್ತು ಗ್ವಾಲಿಯರ್‌ನಲ್ಲಿ 30 ಮತ್ತು 40 ರ ಹರೆಯದ ವಯಸ್ಕರು ಸಹ ಸಿಡಿಲು ಬಡಿತಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮೈದಾ, ರವೆ ಸೇರಿದಂತೆ ಹಿಟ್ಟಿನ ರಫ್ತಿಗೆ ನಿಷೇಧ ಹೇರಿದ ಭಾರತ

    ಭಾರತೀಯ ಹವಾಮಾನ ಇಲಾಖೆ (IMD) ಮಧ್ಯಪ್ರದೇಶದ ಎಂಟು ಜಿಲ್ಲೆಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಸಿಡಿಲು ಬಡಿದು 14 ಕುರಿಗಳು ಸಾವು

    ಸಿಡಿಲು ಬಡಿದು 14 ಕುರಿಗಳು ಸಾವು

    ವಿಜಯಪುರ: ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಇದೇ ವೇಳೆ ಸಿಡಿಲು ಬಡಿದು 14 ಕುರಿಗಳು ಮೃತಪಟ್ಟಿವೆ.

    ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದ ಹೊರ ಭಾಗದಲ್ಲಿ ಕುರಿಗಳನ್ನು ಮೇಯಿಸುವಾಗ ಈ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ: ಬೊಮ್ಮಾಯಿ

    Rain
    ಸಾಂದರ್ಭಿಕ ಚಿತ್ರ

    ಇವು ವಿಜಯಪುರ ತಾಲೂಕಿನ ಅಲಿಯಾ ಬಾದ ಗ್ರಾಮದ ದೊಂಡಿಬಾ ಸಂಡಗೆ ಎಂಬವರಿಗೆ ಸೇರಿದ ಕುರಿಗಳು. ಕುರಿ ಮೇಯಿಸಲು ಮಸೂತಿ ಗ್ರಾಮದ ಬಳಿ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ಸಕಾಲಿಕ ಅನುಷ್ಠಾನಕ್ಕೆ ಸೂಚನೆ: ಬೊಮ್ಮಾಯಿ

    ಕುರಿಗಾಹಿ ದೊಂಡಿಬಾಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಅಕಾಲಿಕ ಮಳೆ : ಕುರಿಗಳ ಜೊತೆ ಕುರಿಗಾಯಿ ಸಾವು – ಎಲ್ಲೆಲ್ಲಿ ಏನಾಗಿದೆ?

    ಅಕಾಲಿಕ ಮಳೆ : ಕುರಿಗಳ ಜೊತೆ ಕುರಿಗಾಯಿ ಸಾವು – ಎಲ್ಲೆಲ್ಲಿ ಏನಾಗಿದೆ?

    ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆ ಅವಾಂತರ ಮುಂದುವರೆದಿದೆ. ರಾಯಚೂರಿನ ಲಿಂಗಸಗೂರಿನ ಬನ್ನಿಗೋಳದಲ್ಲಿ ಸಿಡಿಲು ಹೊಡೆದು ಗುರಿಗಾಯಿ ರಾಮಣ್ಣ ಪೂಜಾರಿ ಸಾವನ್ನಪ್ಪಿದ್ದಾರೆ. ಹಲವು ಕುರಿ ಮೇಕೆಗಳು ಸಾವನ್ನಪ್ಪಿವೆ.

    ಲಿಂಗಸಗೂರು, ಹಟ್ಟಿ, ಮುದಗಲ್ ಸೇರಿ ರಾಯಚೂರು ಜಿಲ್ಲೆಯ ವಿವಿಧಡೆ ಆಲಿಕಲ್ಲು ಸಹಿತ ಭಾರೀ ಮಳೆ ಆಗಿದೆ. ಬೃಹತ್ ಮರವೊಂದು ಹೆದ್ದಾರಿಗೆ ಉರುಳಿ, ಸಂಚಾರ ಅಸ್ತವ್ಯಸ್ತವಾಗಿದೆ. ಭತ್ತ ಕಟಾವು ಮಾಡಿದ್ದ ರೈತರು ಕಂಗಾಲಾಗಿದ್ದಾರೆ.

    ದಾವಣಗೆರೆಯ ಚನ್ನಗಿರಿ ತಾಲೂಕಿನ ಟಿ ಗೊಲ್ಲರಹಳ್ಳಿ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ 35 ಕುರಿಗಳು ಸಾವನ್ನಪ್ಪಿವೆ. ಚಿತ್ತಪ್ಪ, ವೀರೇಶ್, ಕಾಟಪ್ಪ ಎನ್ನುವರಿಗೆ ಸೇರಿದ ಕುರಿಗಳಾಗಿದ್ದು, ಕುರಿಗಾಯಿಗೂ ಕೂಡ ಸಿಡಿಲು ಬಡಿದಿದ್ದು, ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ ನೀಡಿದ್ದಾರೆ. ಕುರಿ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ವಿರೂಪಾಕ್ಷಪ್ಪ ಭರವಸೆ ನೀಡಿದರು. ಇದನ್ನೂ ಓದಿ: ಪಶು ವಿವಿ ಘಟಿಕೋತ್ಸವ – ಸೈನಿಕನ ಮಗಳಿಗೆ 13, ರೈತನ ಮಗನಿಗೆ 9 ಚಿನ್ನದ ಪದಕ

    ಅವಿಭಜಿತ ಬಳ್ಳಾರಿಯ ಸಂಡೂರು, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ ತಾಲೂಕುಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಬೆಳಗಾವಿಯ ಸದಲಗಾ ಮತ್ತು ಕೊಪ್ಪಳದ ಕುಷ್ಟಗಿಯಲ್ಲಿ ಸಿಡಿಲು ಹೊಡೆದು ತೆಂಗಿನಮರ ಧಗಧಗಿಸಿದೆ. ಹಾವೇರಿಯಲ್ಲಿ ಗುಡುಗು ಸಿಡಿಲು ಸಹಿ ಭಾರೀ ಮಳೆ ಆಗಿದೆ. ಕೊಡಗು, ಶಿವಮೊಗ್ಗ ಸೇರಿ ಹಲವೆಡೆ ಉತ್ತಮ ಮಳೆ ಆಗಿದೆ.

  • ಹಾನಗಲ್‍ನಲ್ಲಿ ಸಿಡಿಲು ಬಡಿದು ಓರ್ವ ಸಾವು – ಇಬ್ಬರಿಗೆ ಗಂಭೀರ ಗಾಯ

    ಹಾನಗಲ್‍ನಲ್ಲಿ ಸಿಡಿಲು ಬಡಿದು ಓರ್ವ ಸಾವು – ಇಬ್ಬರಿಗೆ ಗಂಭೀರ ಗಾಯ

    ಹಾವೇರಿ: ಸಿಡಿಲು ಬಡಿದು ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಮೃತರನ್ನ ವಿರೇಶ ಹೊಸಮನಿ(25) ಗುರುತಿಸಲಾಗಿದೆ. ಗಾಯಗೊಂಡವರನ್ನ ಶಶಾಂಕ ಮತ್ತು ದೇವರಾಜ ಎಂದು ಗುರುತಿಸಲಾಗಿದೆ. ಹಾನಗಲ್ ಪಟ್ಟಣದಲ್ಲಿ ಯುವಕರು ಟೈಲ್ಸ್ ಕೆಲಸ ಮಾಡುತ್ತಿದ್ದರು.

    ಕೆಲಸ ಮುಗಿಸಿಕೊಂಡು ಬೈಕ್ ಮೇಲೆ ಸ್ವಗ್ರಾಮ ಹಸನಾಬಾದಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಸಿಡಿಲು ಗುಡುಗಿನೊಂದಿಗೆ ಮಳೆ ಬರುತ್ತಿದ್ದರಿಂದ ಮರದ ಕೆಳಗೆ ನಿಂತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳುಗಳಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆಸ್ಪತ್ರೆಗೆ ಭೇಟಿ ನೀಡಿ ಮೃತನ ಕುಟುಂಬದವರಿಗೆ ಶಾಸಕ ಶ್ರೀನಿವಾಸ ಮಾನೆ ಸಾಂತ್ವನ ಹೇಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಸಿಡಿಲು ಬಡಿದು ಶಾರ್ಟ್ ಸರ್ಕ್ಯೂಟ್ –  20 ಲಕ್ಷ ಮೌಲ್ಯದ ವಸ್ತುಗಳು ನಾಶ

    ಸಿಡಿಲು ಬಡಿದು ಶಾರ್ಟ್ ಸರ್ಕ್ಯೂಟ್ – 20 ಲಕ್ಷ ಮೌಲ್ಯದ ವಸ್ತುಗಳು ನಾಶ

    ಚಿಕ್ಕಮಗಳೂರು: ಭಾರೀ ಗಾಳಿ-ಮಳೆಯ ವೇಳೆ ಅಡಿಕೆ ಶೆಡ್‍ಗೆ ಸಿಡಿಲು ಬಡಿದು ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ನಾಶವಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ವಿಟ್ಲಾಪುರ ಗ್ರಾಮದಲ್ಲಿ ನಡೆದಿದೆ.

    ಭಾನುವಾರ ಮಧ್ಯಾಹ್ನದಿಂದ ಸಂಜೆವರೆಗೂ ಭಾರೀ ಮಳೆ ಸುರಿದಿದ್ದು, ರಾತ್ರಿ 9 ಗಂಟೆ ವೇಳೆಗೆ ಧಾರಾಕಾರ ಮಳೆ ವೇಳೆ ಬಡಿದ ಸಿಡಿಲು ಅಡಿಕೆ ಗೋಡೌನ್‍ಗೆ ಬಡಿದಿದೆ. ಈ ವೇಳೆ ಗೋಡಾನ್‍ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಟ್ರ್ಯಾಕ್ಟರ್-ಟ್ರಿಲ್ಲರ್, 15 ಕ್ವಿಂಟಾಲ್ ಒಣ ಅಡಿಕೆ, ಒಂದು ಅಡಿಕೆ ಸುಲಿಯುವ ಮೆಷಿನ್, ಒಂದು ಗೊರಗಲು ಮೆಷಿನ್ ಸೇರಿದಂತೆ ವಿವಿಧ ವಸ್ತುಗಳು ಸಂಪೂರ್ಣ ಬೆಂಕಿಗಾವುತಿಯಾಗಿದೆ.  ಇದನ್ನೂ ಓದಿ: ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?

    ಗೋಡೌನ್ ಮುಂಭಾಗದಲ್ಲಿದ್ದ ಗೊಬ್ಬರಿಗಳನ್ನು ಸ್ಥಳಿಯರು ಬೇರೆ ಕಡೆ ಶಿಫ್ಟ್ ಮಾಡಿದ್ದಾರೆ. ಅಡಿಕೆ ಗೋಡೌ ನ್‍ನಲ್ಲಿದ್ದವರು ಮಳೆ ಕಡಿಮೆಯಾಗಿದೆ ಎಂದು ಮನೆಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಅವರು ಗೋಡೌನ್‍ನಲ್ಲಿಯೇ ಇದ್ದಿದ್ದರೆ ಬಹುಶಃ ದೊಡ್ಡ ಮಟ್ಟದ ಸಾವು-ನೋವುಗಳು ಸಂಭವಿಸುವ ಸಾಧ್ಯತೆ ಇತ್ತು. ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

    ಗೋಡೌನ್‍ಗೆ ಬೆಂಕಿ ಬಿದ್ದ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಆದರೆ, ಅವರು ಬೇರೆ ಕಡೆ ಹೋಗಿದ್ದರಿಂದ ಬರುವುದು ತಡವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಸ್ಥಳೀಯರೇ ಬೆಂಕಿಯನ್ನು ನಾಂದಿಸಿದ್ದರು. ಆದರೆ, ಇಡೀ ರಾತ್ರಿ ಹೊತ್ತಿ ಉರಿದ ಟ್ರ್ಯಾಕ್ಟರ್ ಬೆಳಗ್ಗೆ 10 ಗಂಟೆಯಾದರೂ ಉರಿಯುತ್ತಲೇ ಇದೆ. ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಕಳೆದುಕೊಂಡು ಕುಟುಂಬ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದೆ. ಸರ್ಕಾರ ನಮಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ? : ಕ್ಷಮೆ ಕೇಳಿದ ಹಂಸಲೇಖ

  • ದಕ್ಷಿಣ ಕನ್ನಡದಲ್ಲಿ  ಧಾರಾಕಾರ ಮಳೆ – ಸಿಡಿಲು ಬಡಿದು ಇಬ್ಬರು ದುರ್ಮರಣ

    ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ – ಸಿಡಿಲು ಬಡಿದು ಇಬ್ಬರು ದುರ್ಮರಣ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಮೂಡಬಿದ್ರೆ ತಾಲೂಕಿನ ಕಂಚಿಬೈಲು ಎಂಬಲ್ಲಿ ಸಿಡಿದು ಬಡಿದು ಇಬ್ಬರು ಕಾರ್ಮಿಕರು ಧಾರುಣವಾಗಿ ಸಾವನ್ನಪ್ಪಿದ್ದಾರೆ.

    ಯಶವಂತ್ (25), ಮಣಿಪ್ರಸಾದ್ (25) ಮೃತ ಕಾರ್ಮಿಕರು. ಮೂಡಬಿದ್ರೆ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಇದರಿಂದ ರಸ್ತೆಗಳು ನದಿಗಳಂತಾಗಿವೆ. ವಾಣಿಜ್ಯ ಕಟ್ಟಡಗಳ ಎದುರಿನ ವಸ್ತುಗಳು ನೀರು ಪಾಲಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಮಳೆಯಾಗುತ್ತಿದೆ. ಇದನ್ನೂ ಓದಿ: ಸಾಹಸಿ ಯುವತಿಯರಿಗೆ ಉಳ್ಳಾಲ ಕಡಲ ತೀರದಲ್ಲಿ ಅದ್ದೂರಿ ಸ್ವಾಗತ

    ಕಡಬ ಸಮೀಪದ ಆಲಂಗಾರಿನ ಅರ್ಬಿ ಪರಿಸರದಲ್ಲಿ ಶೆಡ್ ಒಂದರಲ್ಲಿದ್ದ ಸ್ಥಳೀಯ ಮೂವರು ಕಾರ್ಮಿಕರಿಗೆ ಸಿಡಿಲು ಬಡಿದು ಗಾಯವಾಗಿದ್ದು ಆಲಂಗಾರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಯ ಅಬ್ಬರಕ್ಕಿಂತಲೂ ಹೆಚ್ಚಾಗಿ ಸಿಡಿಲಿನ ಅಬ್ಬರ ಆತಂಕ ಹುಟ್ಟಿಸಿದೆ. ಮಳೆಯ ಅವಾಂತರಗಳ ನಡುವೆ ಮಳೆ ನೀರಿನಲ್ಲಿ ಖಾಲಿ ಟ್ಯಾಂಕ್ ತೇಲುತ್ತಿರುವ ವೀಡಿಯೋ ಒಂದು ವೈರಲ್ ಆಗ ತೊಡಗಿದೆ. ಇದನ್ನೂ ಓದಿ:  ಪಾಕ್ ಪರ ಘೋಷಣೆ- ದೇಶದ್ರೋಹ ಪ್ರಕರಣ ದಾಖಲಿಸಿ ಯುವಕನ ಬಂಧನ

  • ಸಿಡಿಲು ಬಡಿದು 10 ಕುರಿಗಳು ಸಾವು, 20ಕ್ಕೂ ಹೆಚ್ಚು ಕುರಿಗಳಿಗೆ ಗಾಯ

    ಸಿಡಿಲು ಬಡಿದು 10 ಕುರಿಗಳು ಸಾವು, 20ಕ್ಕೂ ಹೆಚ್ಚು ಕುರಿಗಳಿಗೆ ಗಾಯ

    ಗದಗ: ಸಿಡಿಲು ಬಡಿದು 10ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಕುರಿಗಳಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಬಾರೀ ಮಳೆಯಾಗಿದೆ. ಮಳೆ ಬರುತ್ತಿದ್ದರಿಂದ ಮರದ ಕೆಳಗೆ ಕುರಿಗಳನ್ನು ನಿಲ್ಲಿಸಿದಾಗ ಮರಕ್ಕೆ ಸಿಡಿಲು ಬಡಿದಿದೆ. ರಾಯಪ್ಪ ಪೂಜಾರಿ, ಅಜಿತ್ ಪೂಜಾರಿ ಅವರಿಗೆ ಸೇರಿದ ಕುರಿಗಳು ಹಾನಿಗೊಳಗಾಗಿವೆ. ಕುರಿಗಳ ಸಾವು ಕಂಡು ಕುರಿಗಾಯಿ ಕುಟುಂಬ ಕಣ್ಣೀರಿಡುತ್ತಿದೆ. ಪ್ರಕೃತಿಯ ವಿಕೋಪದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಹೊತ್ತಿ ಉರಿದ ಬೆಂಗಳೂರಿನ ಫ್ಲ್ಯಾಟ್ – ನೋಡನೋಡುತ್ತಲೇ ಮಹಿಳೆ ಸಜೀವ ದಹನ

    ಹಾನಿಯಾದ ಕುರಿಗಳಿಗೆ ಸರ್ಕಾರ ಪರಿಹಾರ ನೀಡುವಂತೆ ಸ್ಥಳಿಯರು ಹಾಗೂ ಕುರಿಗಾಯಿ ಕುಟುಂಬ ಮನವಿ ಮಾಡಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಭೇಟಿ ಪರಿಶೀಲನೆ ನಡೆಸಿದರು. ರೋಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ನೇಪಾಳದಲ್ಲಿ ಪ್ರವಾಹ – 50ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಕೊಚ್ಚಿ ಹೋದ್ರು!

    ನೇಪಾಳದಲ್ಲಿ ಪ್ರವಾಹ – 50ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಕೊಚ್ಚಿ ಹೋದ್ರು!

    ಕಠ್ಮಂಡು: ನೇಪಾಳದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಭೀಕರ ಮಳೆಗೆ 50ಕ್ಕೂ ಹೆಚ್ಚು ಜನ ಕೊಚ್ಚಿ ಹೋಗಿ, ಹಲವು ಮನೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

    ನೇಪಾಳದ 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸುರಿದ 105 ಮಿಲಿ ಮೀಟರ್‍ಗೂ ಹೆಚ್ಚಿನ ಮಳೆಯಿಂದಾಗಿ ಜನ ಭಯಭೀತರಾಗಿದ್ದಾರೆ. ಈಗಾಗಲೇ ನೇಪಾಳದ ರಾಜಾಧಾನಿ ಕಠ್ಮಂಡುವಿನಲ್ಲಿ 350ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, 50ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ವರುಣನ ಅಬ್ಬರ- ಹೊನ್ನಾವರದಲ್ಲಿ ದಾಖಲೆ ಮಳೆ

    ಧಾರಾಕಾರ ಮಳೆಗೆ ನೇಪಾಳದ ನದಿಗಳೆಲ್ಲ ತುಂಬಿ ಹರಿಯುತ್ತಿದ್ದು, ವಸತಿ ಪ್ರದೇಶಗಳತ್ತ ನೀರು ನುಗ್ಗಿ ಹಲವು ಅವಾಂತರಗಳು ನಡೆದು ಹೋಗಿವೆ. ಸಾಕಷ್ಟು ಜನ ಕಣ್ಮರೆಯಾಗಿದ್ದು, ನೇಪಾಳದ ಪೊಲೀಸರು, ರಕ್ಷಣಾ ಪಡೆ ಸೇರಿದಂತೆ ಸೇನೆ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಕಳೆದ ರಾತ್ರಿ ಸಂಕಷ್ಟಕ್ಕೆ ಸಿಲುಕಿದ್ದ 130ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಹಲವು ಕಡೆ ಜನ ಸಂಪರ್ಕಕ್ಕೆ ಸಿಗದೆ ಕಷ್ಟದಲ್ಲಿದ್ದಾರೆ. ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಇದನ್ನೂ ಓದಿ: ಡೆಂಗ್ಯೂ, ವೈರಲ್ ಫಿವರ್‌ನಿಂದ ಮಕ್ಕಳನ್ನು ರಕ್ಷಿಸಿ: ಯುಪಿ ಸರ್ಕಾರದ ವಿರುದ್ಧ ಅಖಿಲೇಶ್ ಕಿಡಿ

    ಮಳೆಯೊಂದಿಗೆ ಸಿಡಿಲಿನ ಅಬ್ಬರ ಕೂಡ ಜೋರಾಗಿದ್ದು, ಈಗಾಗಲೇ ಸಿಡಿಲು ಬಡಿದು 7 ಮಂದಿ ಮೃತರಾಗಿರುವ ಬಗ್ಗೆ ಸ್ಥಳೀಯ ವಾಹಿನಿ ವರದಿ ಮಾಡಿದೆ. ಸಿಡಿಲು ಬಡಿದು ಹಲವು ಮನೆಗಳಿಗೆ ಹಾನಿಯಾಗಿದೆ.

  • ಸಿಡಿಲು ಬಡಿದು ಜೋಡಿ ಎತ್ತುಗಳು ಸಾವು

    ಸಿಡಿಲು ಬಡಿದು ಜೋಡಿ ಎತ್ತುಗಳು ಸಾವು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಐದಬಾವಿ ಗ್ರಾಮದಲ್ಲಿ ಸಿಡಿಲು ಬಡಿದು ಜೋಡಿ ಎತ್ತುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

    ನಿನ್ನೆ ರಾತ್ರಿ ಸಿಡಿಲು ಬಡಿದ ಹಿನ್ನೆಲೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳು ಸಾವಿಗೀಡಾಗಿವೆ. ಗ್ರಾಮದ ರೈತ ನಿಂಗಪ್ಪ ಎಂಬವವರಿಗೆ ಸೇರಿದ ಎತ್ತುಗಳು ಸಿಡಿಲಿಗೆ ಬಲಿಯಾಗಿವೆ.

    ಜಮೀನಿನಲ್ಲೇ ಗುಡಿಸಲು ಹಾಕಿಕೊಂಡಿದ್ದ ರೈತ ಕುಟುಂಬ, ಎತ್ತುಗಳಿಗೆ ಹೊಲದಲ್ಲಿ ಕೊಟ್ಟಿಗೆ ನಿರ್ಮಿಸಿದ್ದರು. ರಾತ್ರಿ ವೇಳೆ ಸಿಡಿಲು ಬಡಿದು ಎತ್ತುಗಳು ಸಾವನ್ನಪ್ಪಿದ್ದು, ರೈತ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರ Connecting People ಆಗಿದೆ: ಹೆಚ್. ವಿಶ್ವನಾಥ್

    ತಲಾ ಒಂದು ಲಕ್ಷ ಬೆಲೆ ಬಾಳುವ ಎರಡು ಎತ್ತುಗಳನ್ನ ಕಳೆದುಕೊಂಡು ರೈತ ನಿಂಗಪ್ಪ ಕಂಗಾಲಾಗಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದ ಎತ್ತುಗಳು ಸಾವನ್ನಪ್ಪಿದ್ದರಿಂದ ಇಡೀ ಕುಟುಂಬ ಕಣ್ಣೀರಿಟ್ಟಿದೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.