Tag: ಸಿಡಿಮದ್ದು

  • ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ- ಮೂವರಿಗೆ ಗಾಯ

    ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ- ಮೂವರಿಗೆ ಗಾಯ

    ಉಡುಪಿ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ನಡೆದ ಸ್ಫೋಟದಲ್ಲಿ ಮೂವರಿಗೆ  ಗಾಯವಾದ ಘಟನೆ ಉಡುಪಿ (Udupi) ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.

    ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಿಮ್ಮುಂಜೆಯಲ್ಲಿ ಘಟನೆ ನಡೆದಿದ್ದು, ದಶಕಗಳಿಂದ ಈ ಸಿಡಿಮದ್ದು ತಯಾರಿಕಾ ಘಟಕ ಕಾರ್ಯಾಚರಿಸುತ್ತಿದೆ. ಬೆಳಗ್ಗೆ ನಡೆದ ಸ್ಫೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂವರಿಗೆ ಗಾಯವಾಗಿದೆ. ಇದನ್ನೂ ಓದಿ: ಹಿಂದೆ ಡಿಕೆಶಿ ಟೆಂಟ್‌ನಲ್ಲಿ ಸಿನಿಮಾ ತೋರಿಸುತ್ತಿದ್ದ ಪ್ರವೃತ್ತಿ ಮುಂದುವರಿಸಿದ್ದಾರೆ: ಸಿಪಿವೈ ವಾಗ್ದಾಳಿ

    ಮೂರು ಪ್ರತ್ಯೇಕ ಕಟ್ಟಡಗಳಲ್ಲಿ ತಯಾರು ಮಾಡಲಾಗುತ್ತಿದ್ದು, ಸಿಡಿಮದ್ದು ಸ್ಫೋಟದ ತೀವ್ರತೆಗೆ ಕಟ್ಟಡದ ಮೇಲ್ಛಾವಣಿ ಹೊತ್ತಿ ಉರಿದು ಸಂಪೂರ್ಣ ಹಾನಿಯಾಗಿದೆ. ಗಾಯಗೊಂಡವರನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರ್ಕಳ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಕಾರ್ಕಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.

  • ಸಿಡಿಮದ್ದು ಸ್ಫೋಟಗೊಂಡು ಸಾಕುನಾಯಿ ಮುಖ ಛಿದ್ರ

    ಸಿಡಿಮದ್ದು ಸ್ಫೋಟಗೊಂಡು ಸಾಕುನಾಯಿ ಮುಖ ಛಿದ್ರ

    ಮೈಸೂರು: ಸಿಡಿಮದ್ದು ಸ್ಫೋಟಗೊಂಡು ಸಾಕುನಾಯಿ ಛಿದ್ರ ಛಿದ್ರಗೊಂಡಿರುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.

    ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಕಾಡು ಪ್ರಾಣಿಗಳ ಬೇಟೆಗೆ ಅಕ್ರಮವಾಗಿ ಇರಿಸಿದ್ದ ಸಿಡಿಮದ್ದು ಸ್ಫೋಟವಾಗಿದೆ ಎಂದು ಹೇಳಲಾಗಿದೆ.

    ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ಕಪ್ಪಸೋಗೆ ಗ್ರಾಮದ ಮಹೇಶ್ ಎಂಬವರಿಗೆ ಸೇರಿದ್ದ ಸಾಕುನಾಯಿಯ ಮುಖ ಛಿಧ್ರವಾಗಿದೆ. ಅಲ್ಲದೆ ಸ್ಫೋಟದ ಶಬ್ದಕ್ಕೆ ಜಾನುವಾರುಗಳು ಚೆಲ್ಲಾಪಿಲ್ಲಿಯಾಗಿ ಓಡಿವೆ. ಆತಂಕದಲ್ಲೇ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಛಿದ್ರವಾದ ನಾಯಿಯ ಮೃತ ದೇಹ ಕಂಡುಬಂದಿದೆ. ಇದನ್ನೂ ಓದಿ: ಬೃಂದಾವನದಲ್ಲಿ ಅನುಮತಿ ಇಲ್ಲದೇ ರಾತ್ರಿ ಶೂಟಿಂಗ್ – ಯೂಟ್ಯೂಬ್ ಅಡ್ಮಿನ್ ಅರೆಸ್ಟ್

    ಈ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕೇರಳದಲ್ಲಿ ಕೂಡ ಆನೆಯೊಂದು ಸಿಡಿಮದ್ದಿನ ಸ್ಫೋಟಕ್ಕೆ ಮೃತಪಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

  • ಹಂದಿ ಹಿಡಿಯಲು ಬಳಸುವ ಸಿಡಿಮದ್ದು ಸ್ಫೋಟ: ಬಾಲಕನ ಎರಡು ಬೆರಳು ಕಟ್

    ಹಂದಿ ಹಿಡಿಯಲು ಬಳಸುವ ಸಿಡಿಮದ್ದು ಸ್ಫೋಟ: ಬಾಲಕನ ಎರಡು ಬೆರಳು ಕಟ್

    ಬಾಗಲಕೋಟೆ: ಹಂದಿ ಹಿಡಿಯಲು ಬಳಸುವ ಸಿಡಿಮದ್ದು ಸ್ಫೋಟಗೊಂಡು ಬಾಲಕನೊಬ್ಬನ ಎಡಗೈನ ಎರಡು ಕೈ ಬೆರಳು ಕಟ್ ಆಗಿರುವ ಘಟನೆ ಬಾಗಲಕೋಟೆ ತಾಲೂಕಿನ ದೇವನಾಳ ಗ್ರಾಮದಲ್ಲಿ ನಡೆದಿದೆ.

    9ನೇ ತರಗತಿ ವಿದ್ಯಾರ್ಥಿಯಾಗಿರುವ ಮೋಹನದಾಸ್ ಸಾಬಣ್ಣ ಹಳಮನಿಯ ಎರಡು ಕೈ ಬೆರಳು ತುಂಡಾಗಿದೆ. ಮೂಲತಃ ಬೀಳಗಿ ತಾಲೂಕಿನ ಸೊಕನಾದಗಿ ಗ್ರಾಮದವನಾದ ಮೋಹನ್ ದಾಸ್, ಕುರಿ ಮೇಯಿಸಲು ದೇವನಾಳ ಗ್ರಾಮದ ಕಡೆಗೆ ತೆರಳಿದ್ದನು. ಈ ವೇಳೆ ಹಂದಿ ಉಪಟಳ ತಗ್ಗಿಸಲು ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಹೊಲದಲ್ಲಿ ಸಿಡಿಮದ್ದನ್ನ ತಂದು ಇಟ್ಟಿದ್ದರು.

    ಕುರಿ ಮೇಯಿಸಲು ಹೋದ ಬಾಲಕ ಸಿಡಿಮದ್ದನ್ನು ಹಿಡಿದಾಗ ಸ್ಫೋಟಗೊಂಡು ಎಡಗೈನ ಎರಡು ಬೆರಳು ಕಟ್ ಆಗಿವೆ. ವಿಷಯ ತಿಳಿದ ಗ್ರಾಮಸ್ಥರು, ಗಾಯಗೊಂಡ ಬಾಲಕನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯಕ್ಕೆ ಚಿಕಿತ್ಸೆಗೆ ಸ್ಪಂದಿಸಿರುವ ಬಾಲಕ ಮೋಹನ ದಾಸ್ ಚೇತರಿಸಿಕೊಳ್ಳುತ್ತಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರು ದಸರಾ: ಏನಿದು ಸಿಡಿಮದ್ದು ಕಾರ್ಯಕ್ರಮ? ಹೇಗೆ ಮಾಡಲಾಗುತ್ತದೆ?

    ಮೈಸೂರು ದಸರಾ: ಏನಿದು ಸಿಡಿಮದ್ದು ಕಾರ್ಯಕ್ರಮ? ಹೇಗೆ ಮಾಡಲಾಗುತ್ತದೆ?

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಸಿಡಿಮದ್ದಿನ ಸದ್ದು ಜೋರಾಗಿತ್ತು. ಜನರು ಮಾತ್ರವಲ್ಲದೆ ಅರಮನೆ ಆವರಣದಲ್ಲಿ ನಿಂತಿದ್ದ ಗಜಪಡೆ, ಅಶ್ವರೋಹಿದಳದ ಕುದುರೆಗಳು ಸಹ ನಿಂತಿದ್ದ ಜಾಗದಿಂದ ಚದುರಿದವು. ದಸರೆಯ ವಿಜಯದ ಸಂಕೇತವಾದ ಸಿಡಿಮದ್ದು ಕಾರ್ಯಕ್ರಮದ ಪೂರ್ವ ತಯಾರಿ ನಡೆಸಲಾಯಿತು.

    ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಗಜಪಡೆಗೆ ಭಾರ ಹೊರುವ ತಾಲೀಮು ನಡೆಯುತ್ತಿದೆ. ಈ ಮಧ್ಯೆ ಇಂದು ದಸರಾ ಗಜಪಡೆಗೆ ಅರಮನೆ ಕೋಟೆ ಮಾರಮ್ಮ ದೇವಸ್ಥಾನ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಫಿರಂಗಿಗಳ ಸಿಡಿಮದ್ದು ತಾಲೀಮು ನಡೆಯಿತು. ಈ ತಾಲೀಮಿನಲ್ಲಿ ಕ್ಯಾಪ್ಟನ್ ಅರ್ಜುನ ನೇತೃತ್ವದ 12 ಆನೆಗಳು, 12 ಅಶ್ವಗಳು ಭಾಗಿಯಾಗಿತ್ತು.

    ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್ ನೇತೃತ್ವದಲ್ಲಿ 30 ಮಂದಿ ಸಿಎಆರ್ ಸಿಬ್ಬಂದಿಗಳು, ಮೂರು ಫಿರಂಗಿ ಗಾಡಿಗಳಲ್ಲಿ ಸಿಡಿಮದ್ದು ತಾಲೀಮು ನಡೆಸಿದರು. ಅಲ್ಲದೆ ಇನ್ನೂ 2 ಬಾರಿ ಈ ತಾಲೀಮು ನಡೆಯಲಿದ್ದು, ಕಳೆದ ಬಾರಿಗಿಂತ ಈ ಬಾರಿ ತಾಲೀಮು ಚೆನ್ನಾಗಿ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತರು ತಮ್ಮ ಅಭಿಪ್ರಯಾವನ್ನು ಹಂಚಿಕೊಂಡರು.

    ಜಂಬೂ ಸವಾರಿ ದಿನ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆಯಲ್ಲಿ 21 ಕುಶಾಲತೋಪು ಸಿಡಿಸಲಿದ್ದು ಆ ವೇಳೆಯಲ್ಲಿ ಶಬ್ದಕ್ಕೆ ಬೆದರದಂತೆ ಆನೆಗಳು ಹಾಗೂ ಕುದುರೆಗಳಿಗೆ ಈ ತರಬೇತಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಈ ತರಬೇತಿ ನೀಡಲಾಗಿದ್ದು, ಇಂದು ನಡೆದ ಸಿಡಿಮದ್ದು ತಾಲೀಮಿನಲ್ಲಿ ದ್ರೋಣ, ಚೈತ್ರ, ಧನಂಜಯ ಹಾಗೂ ಹರ್ಷ ಆನೆಗಳು ಸ್ವಲ್ಪ ಬೆದರಿವೆ.

    ಇಂದು ಮೊದಲ ಹಂತದಲ್ಲಿ 6 ಸುತ್ತುಗಳಲ್ಲಿ ಸಿಡಿಮದ್ದು ಸಿಡಿಸಿದ್ದು, ಪ್ರತಿ ಸಿಡಿತದ ಶಬ್ಧದಲ್ಲೂ ನಾಲ್ಕು ಆನೆಗಳು ಬೆದರಿದವು. ಈ ವೇಳೆಯಲ್ಲಿ ಮಾವುತರು ಬೆದರಿದ ನಾಲ್ಕು ಆನೆಗಳನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ತಾಲೀಮಿನ ವೇಳೆ ಆ ಆನೆಗಳು ಹತೋಟಿಗೆ ಬರಲಿದೆ ಎಂದು ಆನೆ ವೈದ್ಯರು ಮಾಹಿತಿ ನೀಡಿದರು.

    ನಾಡ ಹಬ್ಬದ ಯಶಸ್ವಿಗಾಗಿ ಅರಮನೆ ನಗರಿಯಲ್ಲಿ ಸಕಲ ಸಿದ್ದತೆ ನಡೆಯುತ್ತಿದ್ದು, ವಿಜಯದ ಸಂಕೇತವಾಗಿ ಸಿಡಿಸುವ ಸಿಡಿಮದ್ದಿನ ತಾಲೀಮು ಕೂಡ ಇಂದು ಯಶಸ್ವಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕೋಳಿ ಮಾಂಸದಲ್ಲಿ ಸಿಡಿಮದ್ದು- ತಿನ್ನಲು ಹೋದ ಸಾಕು ನಾಯಿ ಸಾವು

    ಕೋಳಿ ಮಾಂಸದಲ್ಲಿ ಸಿಡಿಮದ್ದು- ತಿನ್ನಲು ಹೋದ ಸಾಕು ನಾಯಿ ಸಾವು

    ಬೆಂಗಳೂರು: ಬಂಡೆ ಸಿಡಿಸುವ ಸಿಡಿಮದ್ದು ಸ್ಪೋಟಗೊಂಡು ಸಾಕು ನಾಯಿಯೊಂದು ಸಾವನಪ್ಪಿರುವ ಘಟನೆ ಸಂಭವಿಸಿದೆ.

    ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಚಿಕ್ಕಮಾರಹಳ್ಳಿಯಲ್ಲಿ ಶನಿವಾರ ತಡ ರಾತ್ರಿ ನಡೆದಿದೆ. ಸಿಡಿಮದ್ದಿನ ಸ್ಫೋಟಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಇನ್ನೂ ಗ್ರಾಮದ ಆಂಜನಮೂರ್ತಿ ಎಂಬವರಿಗೆ ಸೇರಿದ್ದ ನಾಯಿ ಮೃತಪಟ್ಟಿದೆ. ದುಷ್ಕರ್ಮಿಗಳು ಕೋಳಿ ಮಾಂಸದಲ್ಲಿ ಸ್ಪೋಟಕವನ್ನ ಇಟ್ಟಿದ್ದಾರೆ ಎನ್ನಲಾಗಿದೆ.

    ಹೀಗೆ ಇಟ್ಟ ಕೋಳಿ ಮಾಂಸವನ್ನು ತಿನ್ನಲು ಹೋದಾಗ ಅದು ಸ್ಫೋಟಗೊಂಡು ನಾಯಿ ಸ್ಥಳದಲ್ಲೇ ಮೃತಪಟ್ಟಿದೆ. ಈ ಪ್ರಕರಣ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

     

  • ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟ: ತಂದೆ-ಮಗ ಸೇರಿ ಮೂವರ  ದುರ್ಮರಣ

    ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟ: ತಂದೆ-ಮಗ ಸೇರಿ ಮೂವರ ದುರ್ಮರಣ

    ಹಾಸನ: ಕಳೆದ ರಾತ್ರಿ ಬಂದ ಭಾರೀ ಮಳೆಗೆ ಕಲ್ಲು ಕ್ವಾರೆಯಲ್ಲಿ ಬಂಡೆ ಸಿಡಿಸಲು ಅಳವಡಿಸಿದ್ದ ಸಿಡಿಮದ್ದಿಗೆ ಸಿಡಿಲು ಬಡಿದು ಮೂವರು ಮೃತಪಟ್ಟ ಘಟನೆ ಹಾಸನ ತಾಲೂಕಿನ ಕಟ್ಟಾಯದ ಬಳಿ ನಡೆದಿದೆ.

    ಯದು ಎಂಬವರಿಗೆ ಸೇರಿದ ಕಲ್ಲಿನ ಕ್ವಾರಿಯಲ್ಲಿ ಗುಡುಗು, ಸಿಡಿಲಿನ ಅಬ್ಬರಕ್ಕೆ ಸ್ಫೋಟಗೊಂಡ ಸಿಡಿಮದ್ದಿಗೆ ಜಗದೀಶ(50), ಮಗ ಪುನೀತ್ (23), ನಾಗ (40) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗ ಮುಡಲೂಕೊಪ್ಪ ಗ್ರಾಮದ ನಿವಾಸಿ.

    ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.